Thursday, 12th December 2024

ಅಸ್ಥಿರ ನೆರೆಹೊರೆಯ ನಡುವೆ ಸುಸ್ಥಿರ ಭಾರತ

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ದೇಶವೊಂದು ಸಂತುಲಿತವಾಗಿದೆ ಎನ್ನಲು ಆ ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿ ಸಮರ್ಪಕವಾಗಿರಬೇಕು. ಯಾವುದಾ ದರೊಂದು ಕ್ಷೇತ್ರವು ಸಮಸ್ಯೆಯನ್ನು ಎದುರಿಸಿದರೆ ಅದು ಇನ್ನುಳಿದ ಎರಡು ಕ್ಷೇತ್ರಗಳನ್ನೂ ಬಾಽಸುತ್ತದೆ. ಭಾರತದ ನೆರೆಯ ದೇಶಗಳ ಪರಿಸ್ಥಿತಿ ಗಮನಿಸುವಾಗ ಅವುಗಳಲ್ಲಿ ಹೆಚ್ಚಿನ ದೇಶಗಳ ಪರಿಸ್ಥಿತಿ ಏನೂ ಏನೂ ಚೆನ್ನಾಗಿಲ್ಲ.

ಕೆಲವು ದೇಶಗಳು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿದ್ದರೆ, ಇನ್ನು ಕೆಲವು ದೇಶಗಳು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿವೆ. ಒಂದಿಷ್ಟು ದೇಶಗಳು ಇಸ್ಲಾಮಿಕ್ ಮೂಲಭೂತವಾದಿಗಳ ಕೈಗೆ ಸಿಕ್ಕು ನಲುಗು ತ್ತಿವೆ. ಕೆಲವು ವರ್ಷಗಳ ಹಿಂದೆಯಷ್ಟೇ ಪ್ರಜಾಪ್ರಭುತ್ವಕ್ಕೆ ತೆರೆದುಕೊಂಡಿದ್ದ ದೇಶವೊಂದು ಕಳೆದ ವರ್ಷ ಪುನ: ಮಿಲಿಟರಿ ಆಡಳಿತದ ತೆಕ್ಕೆಗೆ ಹೋಗಿದೆ. ಪಾಕಿಸ್ತಾನದಲ್ಲಿ ಪ್ರಧಾನಿ, ಮಿಲಿಟರಿ ಹಾಗೂ ಇಸ್ಲಾಮಿಕ್ ಮೂಲಭೂತ ವಾದಿ ನಾಯಕರ ನಡುವೆ ನಡೆಯುತ್ತಿರುವ ಗುzಟದಲ್ಲಿ ದೇಶದ ಪರಿಸ್ಥಿತಿ ಅಧೋಗತಿಗೆ ತಲುಪಿದೆ.

2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಇಮ್ರಾನ್ ಖಾನ್ ಸರಕಾರವು ತನ್ನ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಒಳಗಿನ ಭಿನ್ನಮತ ಹಾಗೂ ಸರಕಾರಕ್ಕೆ ಈ ಹಿಂದೆ ಬೆಂಬಲ ಕೊಟ್ಟಿದ್ದ ಮಿತ್ರಪಕ್ಷಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಅಲ್ಪ ಮತಕ್ಕೆ ಕುಸಿದಿತ್ತು. ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೈನ್ಯಾಧಿಪತಿ ಜನರಲ್ ಕ್ವರ್ಮ ಜಾವೇದ್ ಬಾಜ್ವಾ ನಡುವಿನ ಸಂಬಂಧ ತೀರಾ ಹಳಸಿ ಹೋಗಿ ಇಮ್ರಾನ್ ರಾಜೀನಾಮೆ ನೀಡುವಂತೆ ಬಾಜ್ವಾ ಸೂಚಿಸಿದ್ದರು.

ಇನ್ನೇನು ಅವಿಶ್ವಾಸಮತ ಗೊತ್ತುವಳಿಯಲ್ಲಿ ಇಮ್ರಾನ್ ಸರಕಾರವು ಬಿದ್ದುಹೋಗುತ್ತದೆ ಎಂದು ಇರುವಾಗ ಅಮೆರಿಕಾವು ಪಾಕಿಸ್ತಾನದ ಸರಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಮಾಡಿದ ಇಮ್ರಾನ್ ಖಾನ್ ಪಾಕಿಸ್ತಾನ್ ಜನರಲ್ ಅಸೆಂಬ್ಲಿಯನ್ನು ಹಠಾತ್ತಾಗಿ ಬರ್ಖಾಸ್ತುಗೊಳಿಸಿ ಹೊಸದಾಗಿ ಚುನಾವಣೆ ನಡೆಸುವ ಘೋಷಣೆ ಮಾಡಿದರು. ಆದರೆ ಇಮ್ರಾನ್ ಖಾನ್ ಅಸೆಂಬ್ಲಿಯನ್ನು ಬರ್ಖಾಸ್ತುಗೊಳಿಸಿದುದರ ವಿರುದ್ಧ ಪಾಕಿಸ್ತಾನದ ವಿಪಕ್ಷಗಳು ಸುಪ್ರೀಂ ಕೋರ್ಟಿನ ಮೊರೆಹೋದವು.

ಸುಪ್ರೀಂ ಕೋರ್ಟ್ ಅಸೆಂಬ್ಲಿಯನ್ನು ಬರ್ಖಾಸ್ತುಗೊಳಿಸಿರುವುದರ ವಿರುದ್ಧ ತೀರ್ಪು ನೀಡಿ ಅವಿಶ್ವಾಸಮತಕ್ಕೆ ಅವಕಾಶ ನೀಡಿತು. ಅವಿಶ್ವಾಸ ಮತ ಗೊತ್ತುವಳಿಯಲ್ಲಿ ವಿಪಕ್ಷಗಳು ಗೆದ್ದು ಇಮ್ರಾನ್ ಖಾನ್ ಸೋತು ಪದಚ್ಯುತರಾಗಿzರೆ. ಮುಂದೆ ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಿ ಶೆಹಬಾಜ್ ಶೆರೀಫ್
ನೇತೃತ್ವದಲ್ಲಿ ಸರಕಾರವನ್ನು ರಚಿಸಲೂಬಹುದು. ಇದುವರೆಗೆ ಯಾವೊಬ್ಬ ಪಾಕಿಸ್ತಾನಿ ನಾಯಕನೂ 5 ವರ್ಷಗಳ ಪೂರ್ಣಾವಧಿಯನ್ನು ಪೂರೈಸಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯೂ ರಾಜಕೀಯ ಸ್ಥಿತಿಯಿಂದ ಭಿನ್ನವಾಗಿಲ್ಲ. ತೀವ್ರ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದ್ದ ಪಾಕಿಸ್ತಾನಕ್ಕೆ ಸಾಲಕ್ಕಾಗಿ ಇಮ್ರಾನ್ ಖಾನ್ ವಿವಿಧ ದೇಶಗಳು ಹಾಗೂ ಹಣಕಾಸು ಸಂಸ್ಥೆಗಳ ಮುಂದೆ ತಟ್ಟೆ ಹಿಡಿದು ಬೇಡುತ್ತಿದ್ದಾರೆ.

ದೇಶದಲ್ಲಿ ಉಗ್ರವಾದಿ ಸಂಸ್ಥೆಗಳಿಗೆ ಸಂದಾಯವಾಗುತ್ತಿರುವ ಹಣಕಾಸು ನೆರವನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವ ಕಾರಣ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸಂಸ್ಥೆಯು ಪಾಕಿಸ್ತಾನವನ್ನು ಕಂದು ಪಟ್ಟಿಯಲ್ಲಿರಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಥವಾ ವಲ್ಡ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳುವ ಹಾದಿ ದುಸ್ತರವಾಗಿದೆ. ಇತ್ತೀಚೆಗೆ ಐಎಂಎಫ್ ಹೇಗೋ ಪಾಕಿಸ್ತಾನಕ್ಕೆ ಶತಕೋಟಿ ಡಾಲರ್‌ಗಳ ಆರ್ಥಿಕ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದರೂ ಈಗ ಅಲ್ಲಿನ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ನೆರವನ್ನು ಮುಂದೂಡಿದೆ.

ಇನ್ನು ಶ್ರೀಲಂಕಾ ಸರಕಾರವು ತೀವ್ರವಾಗಿ ಎದುರಿಸುತ್ತಿರುವ ಆರ್ಥಿಕ ದುಸ್ಥಿತಿಯು ಆ ದೇಶದಲ್ಲಿ ರಾಜಕೀಯ ಅಸ್ಥಿರತೆಯನ್ನುಂಟುಮಾಡಿದೆ. ಚೀನಾ ದೇಶದಿಂದ ಸಾಲಪಡೆದು ಬಂದರನ್ನು ಕಟ್ಟಿಸಿ ನಂತರ ಸಾಲವನ್ನು ಹಿಂತಿರುಗಿಸಲಾಗದೆ ಸಾಲದ ಒಪ್ಪಂದದ ಪ್ರಕಾರ ೨ ವರ್ಷಗಳ ಹಿಂದೆ ಶ್ರೀಲಂಕಾವು ತನ್ನ ಹಂಬಂತೋಟ ಬಂದರನ್ನು ೯೯ ವರ್ಷಗಳ ಕಾಲ ಚೀನಾಗೆ ಬಿಟ್ಟುಕೊಡಬೇಕಾಗಿ ಬಂತು. ಕರೋನಾ ಕಾರಣದಿಂದ ಶ್ರೀಲಂಕಾಗೆ ಬರುವ
ಪ್ರವಾಸಿಗರ ಸಂಖ್ಯೆ ಇಳಿಮುಖವಾಯಿತು. ಟೂರಿಸಂನ ಆದಾಯಕ್ಕೆ ಇದು ಬಹುದೊಡ್ಡ ಹೊಡೆತವನ್ನು ನೀಡಿತು. ಎಲ್ಲದಕ್ಕೂ ಮಿಗಿಲಾಗಿ ರಾಸಾಯನಿಕ ರಸಗೊಬ್ಬರವನ್ನು ಹಾಗೂ ಕೀಟನಾಶಕಗಳನ್ನು ಬಳಸಿ ಕೃಷಿ ಮಾಡುವುದನ್ನು ರಾಜಪಕ್ಷೆ ಕುಟುಂಬದ ಆದಳಿತದಲ್ಲಿರುವ ಶ್ರೀಲಂಕಾ ಸರಕಾರವು ಒಮ್ಮಿಂದೊಮ್ಮೆಗೇ ನಿಷೇಧಿಸಿ ಕೃಷಿಕರಿಗೆ ಕಡ್ಡಾಯವಾಗಿ ಸಾವಯವ ಕೃಷಿಯನ್ನು ಮಾಡಲು ಸೂಚಿಸಿರುವುದು ಕೃಷಿ ಪ್ರಧಾನ ಆರ್ಥಿಕತೆಯ ರಾಷ್ಟ್ರ ವಾದ ಶ್ರೀಲಂಕಾಗೆ ಆರ್ಥಿಕ ಆಘಾತವನ್ನು ನೀಡಿತು. ಸಾವಯವ ಕೃಷಿಯನ್ನು ಜಾರಿಗೊಳಿಸಲು ಸರಕಾರವು ಯಾವುದೇ ಪೂರ್ವ ತಯಾರಿಯನ್ನು ಮಾಡಿ ಕೊಂಡಿರಲಿಲ್ಲ. ಕೃಷಿಕರ ಬಳಿಯಲ್ಲಿ ಸಾವಯವ ಗೊಬ್ಬರದ ಸಂಗ್ರಹವಿರಲಿಲ್ಲ. ಅಗತ್ಯಕ್ಕೆ ಅನುಗುಣವಾಗುವಷ್ಟು ಸಾವಯವ ಕೀಟನಾಶಕಗಳು ಹಾಗೂ ಕಳೆನಾಶಕಗಳು ಇರಲಿಲ್ಲ.

ಶ್ರೀಲಂಕಾವು ಚೀನಾ ಬಳಿಯಿಂದ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಖರೀದಿಸಿತಾದರೂ, ಆ ಗೊಬ್ಬರದಲ್ಲಿ ಹುಳಹುಪ್ಪಟೆಗಳು ಇದ್ದ ಕಾರಣ ಅದನ್ನು ಶೀಲಂಕಾ ಸರಕಾರವು ಹಿಂತಿರುಗಿಸಿತು. ಈ ಎಲ್ಲ ಕಾರಣದಿಂದಾಗಿ ಶ್ರೀಲಂಕಾದ ಕೃಷಿ ಉತ್ಪಾದನೆ ಬಹಳ ಕುಸಿಯಿತು. ಇನ್ನು ಇತ್ತೀಚೆಗೆ ತಾಲಿಬಾನಿಗಳ ವಶವಾದ ಅಫಘಾನಿಸ್ತಾನದ ಜನರ ದುಸ್ಥಿತಿಯನ್ನು ಕೇಳುವವರೇ ಇಲ್ಲ. ಅಫಘಾನಿಸ್ತಾನದ ಜನರು ಆಹಾರ ಇಲ್ಲದೆ ನರಳುವ ಪರಿಸ್ಥಿತಿ
ಬಂದಿದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಹಾಗೂ ಚಲನವಲನಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ. ಅಲ್ಲಿ ಯಾವಾಗ ಪ್ರಜಾಪ್ರಭುತ್ವ ಮರಳೀತು ಎನ್ನುವುದು ಗೊತ್ತಿಲ್ಲ. ನೆರೆಯ ಮ್ಯಾನ್ಮಾರ್‌ನ ರಾಜಕೀಯ ಪರಿಸ್ಥಿತಿಯೂ ಬಹಳ ಕೆಟ್ಟದಾಗಿದೆ.

೧೯೬೨ ಮಿಲಿಟರಿ ಆಡಳಿತದಲ್ಲಿದ್ದ. ಮ್ಯಾನ್ಮಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಇವರ ಸತತ ಹೋರಾಟದ ಫಲವಾಗಿ ೨೦೧೧ರಲ್ಲಿ ಅಲ್ಲಿ ಮಿಲಿಟರಿ ಆಡಳಿತವು ಕೊನೆಗೊಂಡು ಪ್ರಜಾಪ್ರಭುತ್ವ ರೀತಿಯ ಸರಕಾರವು ಅಸ್ತಿತ್ವಕ್ಕೆ ಬಂತು. ಆದರೆ ೨೦೨೧ರ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರಿನಲ್ಲಿ ಮಿಲಿಟರಿಯು ಪುನ: ಅಂಗ್ ಸಾನ್ ಸೂಕಿಯವರ ಪ್ರಜಾಪ್ರಭುತ್ವ ಸರಕಾರವನ್ನು ರದ್ದುಗೊಳಿಸಿ ತಾನೇ ಆಡಳಿತವನ್ನು ಕೈಗೆತ್ತಿಳ್ಳುವು ದರೊಂದಿಗೆ ಅಲ್ಲಿನ ಪ್ರಜಾಪ್ರಭುತ್ವವು ಪರಿಸಮಾಪ್ತಿಯಾಗಿದೆ.

ಕಳೆದ ವರ್ಷ ನೇಪಾಳ ಕೂಡಾ ಭಾರೀ ರಾಜಕೀಯ ಅಸ್ಥಿರತೆಯನ್ನು ಕಂಡಿತ್ತು. ೨೦೧೮ರ ಚುನಾವಣೆಯಲ್ಲಿ ಕೆ.ಪಿ. ಶರ್ಮಾ ಓಲಿ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಹಾಗೂ ಮಾವೋವಾದೀ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ಕಮ್ಯುನಿಸ್ಟ್ ಪಾರ್ಟಿ ಆ- ನೇಪಾಳ್‌ಗಳು ಜೊತೆಯಾಗಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದು ಕೆ ಪಿ ಶರ್ಮಾ ಓಲಿ ಪ್ರಧಾನಿಯಾದರು.

ಪ್ರಧಾನಿಯಾದ ನಂತರ ಓಲಿ ಭಾರತ ವಿರೋಽ ನೀತಿಯನ್ನು ಅನುಸರಿಸಿ ಚೀನಾಗೆ ಹೆಚ್ಚು ಸಮೀಪವಾದರು. ಆದರೆ ಓಲಿ ಹಾಗೂ ಪ್ರಚಂಡ ನಡುವೆ
ಸಮನ್ವಯತೆಯ ಕೊರತೆಯಾಗಿ ನಡೆದ ರಾಜಕೀಯ ಬೆಳವಣಿಗೆಗೆಳಲ್ಲಿ ಕೆ.ಪಿ. ಶರ್ಮಾ ಓಲಿ ಸದನದಲ್ಲಿ ಬಹುಮತವನ್ನು ಕಳೆದುಕೊಂಡು ೨೦೨೧ರ ಜುಲೈ ತಿಂಗಳಲ್ಲಿ ನೇಪಾಳ ಕಾಂಗ್ರೆಸ್‌ನ ಶೇರ್ ಬಹಾದ್ದೂರ್ ದೇವುಬಾ ಅವರು ಪ್ರಚಂಡ ಅವರ ಕಮ್ಯುನಿಸ್ಟ್ ಪಾರ್ಟಿ ಆ- ನೇಪಾಳ್‌ನ ಬೆಂಬಲದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆ ನಂತರ ನೇಪಾಳವು ರಾಜಕೀಯವಾಗಿ ಒಂದಿಷ್ಟು ಸ್ಥಿರತೆಯನ್ನು ಕಂಡಿದೆ. ದೇವೂಬಾ ಭಾರತದೊಡನೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವ ಇರಾದೆಯನ್ನು ಹೊಂದಿದವರಾಗಿದ್ದಾರೆ.

ಇತ್ತೀಚಿಗೆ ಪತ್ನಿ ಸಮೇತ ಭಾರತಕ್ಕೆ ಭೇಟಿಯನ್ನೂ ಕೊಟ್ಟಿದ್ದರು. ನೆರೆಯ ಚೀನಾವು ಮೇಲ್ನೋಟದಲ್ಲಿ ತಾನು ಬಹಳ ಸ್ಥಿರವಾಗಿ ಇದ್ದಂತೆ ತೋರಿಸಿ ಕೊಳ್ಳುತ್ತಿದೆಯಾದರೂ ಅಲ್ಲಿ ಎಲ್ಲವೂ ಸರಿಯಿಲ್ಲ. ಚೀನಾದ ರಿಯಲ್ ಎಸ್ಟೇಟ್ ಕ್ಷೇತ್ರವು ೧೧೭ ಶತಕೋಟಿ ಡಾಲರ್‌ಗಳ ಸಾಲದ ಸಮಸ್ಯೆಯಲ್ಲಿ
ಸಿಲುಕಿಕೊಂಡಿದೆ. ಚೀನಾದ ಪ್ರಸ್ತುತ ನಿರುದ್ಯೋಗ ಪ್ರಮಾಣ ೫.೫% ಏರಿದೆ. ಕೊರೋನೋತ್ತರ ಕಾಲದಲ್ಲಿ ಬಹಳಷ್ಟು ಹೂಡಿಕೆದಾರರು ಚೀನಾದಿಂದ ಹೊರ ನಡೆಯುತ್ತಿzರೆ. ಚೀನಾದ ಜಿಡಿಪಿ ದರವೂ ಕುಸಿಯುತ್ತಿದೆ. ಪ್ರಜಾಪ್ರಭುತ್ವ ಮೌಲ್ಯಕ್ಕೆ ಒಂದಿಷ್ಟೂ ಬೆಲೆ ಕೊಡದ ಕಮ್ಯುನಿಸ್ಟ್ ಚೀನಾದಲ್ಲಿ
ಮಾನವ ಹಕ್ಕುಗಳ ಕುರಿತು ಮಾತನಾಡುವಂತೆಯೇ ಇಲ್ಲ.

ಇತ್ತೀಚೆಗೆ ಕರೋನಾವನ್ನು ತಡೆಯಲು ಚೀನಾದ ಹಲವು ನಗರಗಳಲ್ಲಿ ಪುನ: ಲಾಕ್ಡೌನ್ ಅನ್ನು ಘೋಷಿಸಲಾಗಿದ್ದು ಚೀನಾದ ಶಾಂಘೈ ನಗರದ ಮನೆ ಗಳಲ್ಲಿ ಅಕ್ಷರಶಃ ಬಂಧಿಗಳಾಗಿರುವ ಜನರು, ಅನ್ನಾಹಾರವಿಲ್ಲದೆ ಕಂಗೆಟ್ಟು ಸರಕಾರದ ವಿರುದ್ಧ ದಂಗೆ ಎದ್ದು ಅಂಗಡಿ ಮುಂಗಟ್ಟುಗಳನ್ನು ಲೂಟಿ
ಮಾಡುತ್ತಿದ್ದಾರೆ. ಇವುಗಳ ನಡುವೆ ಭಾರತ ತನ್ನ ಪ್ರಜಾಪ್ರಭುತ್ವ ಮೌಲ್ಯವನ್ನು ಉಳಿಸಿಕೊಳ್ಳುತ್ತಾ ಬಂದಿದೆ.

ಭಾರತದಲ್ಲಿಂದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿದೆ. ಭಾರತದ ಸರಕಾರದಲ್ಲಿ ಎಂದಿಗೂ ಮಿಲಿಟರಿ ಹಸ್ತಕ್ಷೇಪವಾಗದು. ಭಾರತದ ಸರಕಾರ ವಿಂದು ಭಾರತದ ಹಿತಕ್ಕೆ ಪೂರಕವಾಗುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುಷ್ಟು ಪ್ರಬಲವಾಗಿದೆ. ಇತ್ತೀಚಿಗಿನ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘ ರ್ಷದ ವಿಚಾರದಲ್ಲಿ ಭಾರತವು ಯುರೋಪ್ ಹಾಗೂ ಅಮೇರಿಕಾಗಳ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ತಟಸ್ಥ ನೀತಿಯನ್ನು ತೆಗೆದು ಕೊಂಡಿದೆ. ಅಮೇರಿಕಾವು ಒಡ್ಡಿದ ಆರ್ಥಿಕ ದಿಗ್ಬಂಧನದ ಗೊಡ್ಡು ಬೆದರಿಕೆಗೆ ಜಗ್ಗದ ಭಾರತವಿಂದು ರಷ್ಯಾದಿಂದ ಅಗ್ಗದ ಬೆಲೆಯ ತೈಲವನ್ನು ಖರೀದಿಸುತ್ತಿದೆ.

ಭಾರತವನ್ನು ಟೀಕೆ ಮಾಡುವ ದುಸ್ಸಾಹಸವನ್ನು ಮಾಡುವ ಅಮೇರಿಕಾ ಅಥವಾ ಯುರೋಪಿಯನ್ ಯೂನಿಯನ್ ಪ್ರತಿನಿಧಿಗಳಿಗೆ ಮುಖದ ಮೇಲೆ ಹೊಡೆದಂತೆ ಉತ್ತರಿಸುವ ಛಾತಿ ಇರುವ ವಿದೇಶಾಂಗ ಮಂತ್ರಿ ಭಾರತದಲ್ಲಿzರೆ. ಭಾರತದ ಆರ್ಥಿಕತೆಯು ಬಲಿಷ್ಠವಾಗುತ್ತಿದೆ. ೨೦೧೪ರಲ್ಲಿ ಜಾಗತಿಕವಾಗಿ ಬೃಹತ್ ಆರ್ಥಿಕತೆಯನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ೧೦ನೆಯ ಸ್ಥಾನದಲ್ಲಿದ್ದ ಭಾರತವು ಈಗ ೫ನೆಯ ಸ್ಥಾನಕ್ಕೇರಿದೆ. ಈ ಬಾರಿ ಭಾರತದ ಸರಕು ರಫ್ತಿನ ಪ್ರಮಾಣವು ದಾಖಲೆಯ ೬೬೮ ಬಿಲಿಯನ್ ಡಾಲರ್ ಏರಿದೆ.

ಭಾರತದ ಅಭಿವೃದ್ಧಿ ದರವೂ ೮%ಆಸುಪಾಸಿನಲ್ಲಿರಲಿದೆ. ಭಾರತವು ಕರೋನಾ ರೋಗ ಹಾಗೂ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದೆ. ದೇಶದ ೧೦೦ ಕೋಟಿಗೂ ಹೆಚ್ಚಿನ ಸಂಖ್ಯೆಯ ವಯಸ್ಕ ಜನತೆಗೆ ಎರಡು ಡೋಸ್ ಕರೋನಾ ವ್ಯಾಕ್ಸಿನ್‌ಅನ್ನು ಒದಗಿಸಿರುವ ಭಾರತದ ಸಾಧನೆ ಅಮೋಘ ವಾದದ್ದು. ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರಕಾರವು ದೇಶದ ೮೦ ಕೋಟಿ ಜನರಿಗೆ ಉಚಿತ ಪಡಿತರ ಧಾನ್ಯ ವಿತರಣೆ ಮಾಡಿರುವು ದರಿಂದಾಗಿ ದೇಶದ ಜನರು ಅತೀವ ಬಡತನಕ್ಕೆ ಸಿಲುಕುವುದು ತಪ್ಪಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ತನ್ನ ಇತ್ತೀಚೆಗಿನ ವರದಿ ಯಲ್ಲಿ ಹೇಳಿದೆ.

ಭಾರತವಿಂದು ತನ್ನನ್ನು ತಾನು ಸರಿತೂಗಿಸಿಕೊಂಡಿರುವುದು ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಇತರ ದೇಶಗಳಿಗೂ ಸಹಾಯ ಹಸ್ತ ಚಾಚಿದೆ. ಭಾರತ ಜಗತ್ತಿನ ೯೮ ರಾಷ್ಟ್ರಗಳಿಗೆ ೧೭.೦೪ ಕೋಟಿಯಷ್ಟು ಕರೋನಾ ವ್ಯಾಕ್ಸಿನ್‌ಗಳನ್ನು ಪೂರೈಸಿದೆ. ತಾಲಿಬಾನ್ ಆಡಳಿತದಡಿಯಲ್ಲಿ ಬಡತನಕ್ಕೆ ಸಿಲುಕಿರುವ ಅ-ಘಾನಿಸ್ತಾನಕ್ಕೆ ಭಾರತ ಇತ್ತೀಚೆಗೆ ೧೦೦ಕೋಟಿ ಕಿಲೋಗ್ರಾಂ ಗೋಽಯನ್ನು ಪೂರೈಸಿದೆ ಮತ್ತು ೧೦೦ ಕೋಟಿ ಡಾಲರ್ ಸಾಲವನ್ನು ಘೋಷಿಸಿದೆ. ಇಂಧನ ಕೊರತೆಯಿಂದ ಬಳಲುತ್ತಿರುವ ಶ್ರೀಲಂಕಾಗೆ ಭಾರತ ೫೦ ಕೋಟಿ ಡಾಲರ್ ಇಂಧನ ಸಹಾಯವನ್ನು ಘೋಷಿಸಿದ್ದು ಇದುವರೆಗೆ ೨,೭೦,೦೦೦ ಟನ್‌ಗಳಷ್ಟು ಡೀಸೆಲ್ ಕಳುಹಿಸಿದೆ. ಇದಲ್ಲದೆ ೪೦ ಸಾವಿರ ಟನ್‌ಅಕ್ಕಿಯನ್ನೂ ಭಾರತವು ಲಂಕಾಗೆ ಕಳುಹಿಸಿದೆ.

ಭಾರತ ಅಸ್ಥಿರ ನೆರೆಹೊರೆಯನ್ನು ಹೊಂದಿದ್ದರೂ ತಾನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದೆ.