Sunday, 15th December 2024

ಸ್ಟಾರ್‌ ಹೋಟೆಲ್ ಮತ್ತು ದರ್ಶಿನಿಗಳ ನಡುವೆ

ಸಂತರ್ಪಣೆ

ಅನೀಶ್ ಬಿ.ಕೊಪ್ಪ

‘ಊಟಕ್ಕೆ ಬಡಿಸುವವರು ನಮ್ಮವರಾಗಿದ್ದರೆ ನೆಲ್ಲಿಕಾಯಿ ಗಿಡದ ಎಲೆಯಲ್ಲೂ ಊಟ ಮಾಡಬಹುದು’ ಎಂಬುದು ಹಿರಿಯ ಮಾತು. ಊಟಕ್ಕೆ ಐಷಾರಾಮಿ ಭವನವೇ ಬೇಕೆಂದಿಲ್ಲ. ನಗುಮೊಗ ಇಟ್ಟುಕೊಂಡು ಪ್ರೀತಿಯಿಂದ, ಶುಚಿ-ರುಚಿಯಾಗಿ ಬಡಿಸುವವರಿದ್ದರೆ ಎಲ್ಲಿಯೂ ಊಟ ಮಾಡಬಹುದು. ನಾವು ತಿನ್ನುವ ಪ್ರತಿ ಅಗುಳಿನ ಹಿಂದೆಯೂ ರೈತರ ಬೆವರ ಹನಿಯು ಇದ್ದೇ ಇರುತ್ತದೆ.

ಮೊನ್ನೆ ಸ್ನೇಹಿತರೊಡನೆ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದೆ.ಊಟದ ಸಮಯ ಬಂದಿತು. ‘ಬನ್ನಿ, ಬಾಳೆ ಎಲೆಯ ಪಂಕ್ತಿಯ ಊಟಕ್ಕೆ ಹೋಗೋಣ’ ಎಂದರು. ನನಗೋ, ಕಣ್ಮುಂದೇ ಇರುವ ಬಫೆ ಊಟಕ್ಕೆ ಹೋಗುತ್ತಿರು ವವರನ್ನು ನೋಡಿ, ಪಂಕ್ತಿಗೆ ಹೋಗಿ ಕಾದು ಊಟ ಮಾಡೋದ ಕ್ಕಿಂತ ಆರಾಮಾಗಿ ಬಫೆ ಊಟ ಮಾಡೋಣ ಎಂದೆನಿಸಿತ್ತು. ಅವರಿಗೆ ನನ್ನ ಮಾತು ಏನನ್ನಿಸಿತೋ ಏನೋ, ‘ಸರಿ, ನೀವು ಬ-ಗೆ ಹೋಗಿ. ನಾವು ಪಂಕ್ತಿಗೆ ಹೋಗ್ತೇವೆ’ ಎಂದರು. ಸಾರ್ವಜನಿಕ ಕಾರ್ಯಕ್ರಮ/ ಸಹಭಾಗಿತ್ವದ ಸಂದರ್ಭಗಳಲ್ಲಿ ನಮಗೆ ಊಟ ಮಾಡಲು ಕೂಡ ಪ್ರತಿಷ್ಠಿತ ತಾಣಗಳೇ ಬೇಕು ಎನ್ನುವವರೂ ನಮ್ಮ ನಡುವೆಯೇ ಇದ್ದಾರೆ ಎಂದೆನಿಸಿತು.

ಸಾಮಾನ್ಯ ದರ್ಶಿನಿಗಳಂಥ ಸ್ವಸಹಾಯ ಪದ್ಧತಿಯ ಹೋಟೆಲುಗಳಲ್ಲಿ ಊಟ-ಉಪಾಹಾರ ಸವಿಯಲು ಯುವಜನತೆ ಒಗ್ಗಿಕೊಂಡಿದ್ದಾರೆ. ಆದರೆ, ಕೆಲ ಮಧ್ಯ ವಯಸ್ಕರು ‘ನಮಗೆ ಸ್ಟಾರ್ ಹೊಟೇಲುಗಳನ್ನು ಹೋಲುವ ಪ್ರತಿಷ್ಠಿತ ನೆಲೆಗಳೇ ಬೇಕು. ರೋಡ್ ಸೈಡಲ್ಲಿ ಸಿಗೋ ಆಹಾರ ತಿಂದರೆ ಅದು ನಮಗೆ ಒಗ್ಗುವುದಿಲ್ಲ’ ಎಂಬ ಮನಸ್ಥಿತಿಗೆ ಇನ್ನೂ ಅಂಟಿಕೊಂಡಿದ್ದಾರೆ. ಇಂದಿನ ನಾಗಾಲೋಟದ ಬದುಕಿನಲ್ಲಿ ಕಚೇರಿ, ಶಾಲಾ-ಕಾಲೇಜು, ವ್ಯಾಪಾರ, ವ್ಯವಹಾರ ಹೀಗೆ ಪ್ರತಿ ಯೊಂದು ನೆಲೆಗಟ್ಟಿನಲ್ಲಿಯೂ ಸಮಯ ಪಾಲನೆಯ ಧಾವಂತದಲ್ಲಿಯೇ ಇರುತ್ತೇವೆ. ಸಮಯದ ಉಳಿತಾಯದೊಂದಿಗೆ ಉದರದ ಹಸಿವನ್ನು ತಣಿಸಲು ನಮ್ಮ ನೆರವಿಗೆ ರಸ್ತೆ ಬದಿಯ ದರ್ಶಿನಿಗಳು, ಕ್ಯಾಂಟೀನುಗಳೇ ಬರುತ್ತವೆ. ಇನ್ನೊಂದೆಡೆ ‘ತುಂಬಿದ ಹೊಟ್ಟೆಗೆ ಅಮೃತಾನ್ನವೂ ಅರುಚಿಯಾಗುತ್ತದೆ’ ಎಂಬ ಕುವೆಂಪುರವರ ಮಾತಿನಂತೆ, ಹೊಟ್ಟೆ ತುಂಬಿದವರು, ಹಸಿವಿನ ಬವಣೆಯನ್ನು ಅರಿಯದವರು ಮಾತ್ರ ಊಟದ ವಿಚಾರದಲ್ಲಿ ಬಹಳಷ್ಟು ಆಯ್ಕೆಗಳನ್ನು ತಮ್ಮ ಮುಂದಿಟ್ಟುಕೊಳ್ಳುತ್ತಾರೆ.

ಹಸಿದವರು ಮಾತ್ರ ಊಟವಿಟ್ಟವನಿಗೆ ‘ಅನ್ನದಾತೋ ಸುಖೀಭವ’ ಎಂದು ಮನದಲ್ಲೇ ಸದಾ ಹರಸುತ್ತಾ ಎಲ್ಲೇ ಊಟ ಮಾಡಿದರೂ ತೃಪ್ತಿಯನ್ನು ಕಂಡುಕೊಳ್ಳು ತ್ತಾರೆ. ‘ಊಟಕ್ಕೆ ಬಡಿಸುವವರು ನಮ್ಮವರಾಗಿದ್ದರೆ ನೆಲ್ಲಿಕಾಯಿ ಗಿಡದ ಎಲೆಯಲ್ಲೂ ಊಟ ಮಾಡಬಹುದು’ ಎಂಬುದು ಹಿರಿಯ ಮಾತು. ಊಟಕ್ಕೆ ಐಷಾರಾಮಿ ಭವನವೇ ಬೇಕೆಂದಿಲ್ಲ. ನಗುಮೊಗ ಇಟ್ಟುಕೊಂಡು ಪ್ರೀತಿಯಿಂದ, ಶುಚಿ-ರುಚಿಯಾಗಿ ಬಡಿಸುವವರಿದ್ದರೆ ಎಲ್ಲಿಯೂ ಊಟ ಮಾಡಬಹುದು. ನಾವು ತಿನ್ನುವ ಪ್ರತಿ ಅಗುಳಿನ ಹಿಂದೆಯೂ ರೈತರ ಬೆವರ ಹನಿಯು ಇದ್ದೇ ಇರುತ್ತದೆ.

ಪ್ರಕೃತಿಯು ನಮಗೆ ಕೊಟ್ಟಿರುವ ಮಳೆ, ಬೆಳೆಯನ್ನು ಸ್ಮರಿಸಿಕೊಂಡು, ಊಟ ಮಾಡಲು ಕುಳಿತಾಗ ಸೇವಿಸಿದ ಆಹಾರವು ನಮಗೆ ಅತೀವ ತೃಪ್ತಿಯನ್ನು ನೀಡುತ್ತದೆ. ಊಟದ ವಿಚಾರದಲ್ಲಿ ಹಸಿವು ತಣಿದರೆ ಸಾಕೆಂಬ ಮನಸ್ಥಿತಿ ನಮಗಿದ್ದರೂ ಸ್ನೇಹಿತರು ಅಥವಾ ಬಂಧು ಗಳ ಜತೆಗೆ ಒಮ್ಮೊಮ್ಮೆ ಊಟಕ್ಕೆಂದು ಹೋಟೆಲ್‌ಗಳಿಗೆತೆರಳಿದಾಗ ಇಕ್ಕಟ್ಟಿಗೆ ಸಿಲುಕುವ ಸಂದರ್ಭ ಒದಗಿ ಬರುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಮಧ್ಯಾಹ್ನದ ವಿಶೇಷ ಬಾಳೆಲೆ ಊಟ, ರೊಟ್ಟಿ ಊಟ, ನಾರ್ತ್ ಇಂಡಿಯನ್ ಖಾದ್ಯ ಈ ರೀತಿಯ ಊಟಕ್ಕೆ ಹೋಗುವ ಇಂಗಿತವನ್ನು ಸ್ನೇಹಿತರು ವ್ಯಕ್ತಪಡಿಸಿದಾಗ ಒದಗುವ ಇಕ್ಕಟ್ಟಿದು. ಆಗ ಅನಿವಾರ್ಯವಾಗಿ ನಾವೂ ಅವರ ಜತೆಗೆ ಹೋಗಬೇಕಾಗುತ್ತದೆ. ಇಂಥ ಊಟ ಗಳಿಗೆ ಕನಿಷ್ಠ ೩೦೦-೪೦೦ ರುಪಾಯಿ ತೆರಬೇಕಾಗುತ್ತದೆ.

ಅಂದರೆ, ಬಾಯಿಗೆ ರುಚಿ ನೀಡಬೇಕಾದರೆ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಲೇಬೇಕು ಎಂಬ ಅಲಿಖಿತ ನಿಯಮಕ್ಕೆ ನಾವೂ ತಲೆಬಾಗಿದಂತಾಗುತ್ತದೆ! ಈಗಲೂ ಆಹಾರದ ಕೊರತೆಯಿಂದಾಗಿ ಜಗತ್ತಿನಲ್ಲಿ ಸಾಯುತ್ತಿರುವರ ಸಂಖ್ಯೆ ಅಸಂಖ್ಯಾತ. ಆದರೆ ಕೆಲವರು ಇದರ ಪರಿವೆಯೇ ಇಲ್ಲವೆಂಬಂತೆ ಆಹಾರವನ್ನು ವ್ಯರ್ಥ ಮಾಡುತ್ತಲೇ ಇರುತ್ತಾರೆ! ಹಸಿವು ಜಾಗತಿಕ ಸಮಸ್ಯೆಯಾಗಿದೆ. ಆದರೆ ನಾವು ಅದನ್ನು ನಿರ್ಲಕ್ಷಿಸಬಾರದು. ಹಸಿವನ್ನು ತೊಡೆದುಹಾಕಲು ಅನೇಕ ದೇಶಗಳು ತಮ್ಮದೇ ಆದ ನೀತಿಗಳನ್ನು ರೂಪಿಸಿ ಅಭಿವೃದ್ಧಿಪಡಿಸಿವೆ. ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆಯು ೨೦೨೧ರಲ್ಲಿ ೮೨೮ ಮಿಲಿಯನ್‌ಗೆ ಏರಿದೆ ಮತ್ತು ಇದಕ್ಕೆ ಕೋವಿಡ್ ಪಿಡುಗಿನ ಕೊಡುಗೆಯೂ ಸಾಕಷ್ಟಿದೆ ಎಂದು ಹೇಳುತ್ತದೆ ವಿಶ್ವಸಂಸ್ಥೆಯ ವರದಿಯೊಂದು.

‘Seಛ್ಟಿಛಿ Zಛಿ mಛಿಟmಛಿ ಜ್ಞಿ ಠಿeಛಿ ಡಿಟ್ಟ್ಝb oಟ eಜ್ಟqs ಠಿeZಠಿ ಠಿeಛಿ ಎಟb Zಟಠಿ ZmmಛಿZ ಠಿಟ ಠಿeಛಿಞ ಛ್ಡ್ಚಿಛಿmಠಿ ಜ್ಞಿ ಠಿeಛಿ ಟ್ಟಞ ಟ್ಛ ಚ್ಟಿಛಿZb’ ಎಂಬ ಮಹಾತ್ಮ ಗಾಂಽಜಿಯವರ ಮಾತಿನಂತೆ, ಹಸಿದವನು ಆ ಕ್ಷಣದಲ್ಲಿ ತನ್ನ ಹಸಿವನ್ನು ತಣಿಸುವ ಆಹಾರವನ್ನೇ ದೇವರ ರೂಪದಲ್ಲಿ ಕಾಣುತ್ತಾನೆ. ಹಸಿವಿನ ಭೀಕರತೆ ಅರ್ಥವಾಗಬೇಕಾದರೆ, ಹಸಿವಿನಿಂದಾಗಿಯೇ ಜನರು ಸಾಯುತ್ತಿರುವ ದೇಶಗಳತ್ತ ನಾವೊಮ್ಮೆ ಕಣ್ಣು ಹಾಯಿಸಬೇಕಾಗುತ್ತದೆ. ೨೦೨೨ರ ಯುನೈಟೆಡ್ ನೇಷನ್ಸ್ ವರ್ಲ್ಡ್ -ಡ್ ಪ್ರೋಗ್ರಾಂನ (UಊP) ವರದಿಯೊಂದರ ಪ್ರಕಾರ, ೧೨೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರತಿ ವರ್ಷ ೧೦೦ ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ೪ ಮಿಲಿಯನ್ ಟನ್‌ಗಳಷ್ಟು ಆಹಾರವನ್ನು ಅದು ತಲುಪಿಸುತ್ತದೆ.

ಅವುಗಳಲ್ಲಿ ಹೆಚ್ಚಿನವು ಕೆಲವೇ ದೇಶಗಳಲ್ಲಿ ಕೇಂದ್ರೀಕೃತ ವಾಗಿವೆ. ಯಮನ್ ದೇಶದಲ್ಲಿ ೧೭ ಮಿಲಿಯನ್ ಗಿಂತಲೂ ಹೆಚ್ಚು ಜನರು, ಅಂದರೆ ಜನಸಂಖ್ಯೆಯ
ಅರ್ಧಕ್ಕಿಂತ ಹೆಚ್ಚು ಜನ ಪ್ರತಿದಿನ ಹಸಿವಿನಿಂದ ಎಚ್ಚರ ಗೊಳ್ಳುತ್ತಿದ್ದಾರೆ. ೨ ದಶಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ೫,೦೦,೦೦೦ ಜನರು ಚಿಕಿತ್ಸೆ ಇಲ್ಲದೆ ಸಾಯುವ ಅಪಾಯದಲ್ಲಿದ್ದಾರೆ. ದಕ್ಷಿಣ ಸುಡಾನ್ ಕೂಡ ತನ್ನ ಹಸಿವಿನ ವರ್ಷಗಳನ್ನು ಎದುರಿಸುತ್ತಿದೆ. ಸಿರಿಯಾದಲ್ಲಿ ದಶಕವೊಂದರಲ್ಲಿ ೧೨.೪ ದಶಲಕ್ಷಕ್ಕೂ ಹೆಚ್ಚು ಜನರು ಉನ್ನತ ಮಟ್ಟದ ಹಸಿವಿನಿಂದ ಬಳಲುತ್ತಿದ್ದಾರೆ. ಇವು ಕೆಲವೇ ಉದಾಹರಣೆಗಳಷ್ಟೇ.

ಇದೇ ರೀತಿ, ಇನ್ನೂ ಅನೇಕ ದೇಶಗಳ ನಾಗರಿಕರು ಹಸಿವಿನ ಬೇಗುದಿಯಲ್ಲಿ ಬೇಯುತ್ತಿದ್ದಾರೆ ಎಂಬುದು ಹಸಿವಿನ ತೀವ್ರತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥ ದೇಶಗಳನ್ನು ನೋಡಿದಾಗ ಭಾರತ ದಲ್ಲಿ ಹಸಿವಿನ ತೀವ್ರತೆಯು ಅಷ್ಟಾಗಿ ಇಲ್ಲವೆಂದು ನಾವು ಸಮಾಧಾನ ಪಟ್ಟುಕೊಳ್ಳಬೇಕಿದೆ. ಏನೇ ಇರಲಿ, ಹಸಿವು ಎಂಬುದು ಮನುಷ್ಯನಿಗೆ ಒಂದಷ್ಟು ಜೀವನ ಪಾಠವನ್ನೂ ಕಲಿಸುತ್ತದೆ. ಅಂತೆಯೇ ಬದುಕನ್ನು ಸವಾಲಾಗಿ ಸ್ವೀಕರಿಸುವ ಅನಿವಾರ್ಯತೆಯನ್ನೂ ತಂದೊಡ್ಡುತ್ತದೆ. ಹಸಿದಾಗ
ಎಲ್ಲಿ, ಹೇಗೆ ಆಹಾರ ಸೇವಿಸುತ್ತೇವೆ ಎನ್ನುವುದಕ್ಕಿಂತ ಆ ಕ್ಷಣದಲ್ಲಿ ಸಿಗುವ ಆಹಾರವು ನಮಗೆ ಎಷ್ಟು ಸಂತೃಪ್ತಿ ನೀಡುತ್ತದೆ ಎಂಬುದು ಮುಖ್ಯವಾಗುತ್ತದೆ.

ಮರುಭೂಮಿಯಲ್ಲಿ ಬಳಲಿ ಬಾಯಾರಿದವನಿಗೆ ಓಯಸಿಸ್ ಸಿಕ್ಕಾಗ ಉಂಟಾಗುವ ಆನಂದದಂತೆ, ಹಸಿದವನಿಗೆ ಸಿಗುವ ಅನ್ನದ ಪ್ರತಿ ತುತ್ತೂ ತೃಪ್ತಿದಾಯಕವೆನಿಸುತ್ತದೆ. ಸರಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದಲ್ಲಿ ಸಿಗುವಂಥ ಸಂತೋಷ, ಒಬ್ಬ ಸಾಮಾನ್ಯ ನಾಗರಿಕನಿಗೆ ಅತಿ ಕಡಿಮೆ ದರದಲ್ಲಿ ಸಿಗುವ ಸರಕಾರಿ ಕ್ಯಾಂಟೀನ್‌ನ ಊಟೋಪಹಾರ ಇವೆಲ್ಲವೂ ಅದ್ದೂರಿ ಭೋಜನಗಳಿಗೆ ಸರಿಸಮನಾದ ಖುಷಿಯನ್ನೇ ನೀಡುತ್ತವೆ ಎಂಬುದನ್ನು ಅನ್ನದ ಬೆಲೆಯನ್ನರಿತವನಷ್ಟೇ ಬಲ್ಲ, ಅಲ್ಲವೇ?!