Sunday, 15th December 2024

ಸ್ಟೀಫನ್‌ ಹಾಕಿಂಗನ ದೈವ ಜಿಜ್ಞಾಸೆ ಮತ್ತು ಭಾರತೀಯ ಪ್ರಜ್ಞೆ

ದಾಸ್ ಕ್ಯಾಪಿಟಲ್ 

ಟಿ.ದೇವಿದಾಸ್, ಬರಹಗಾರ ಶಿಕ್ಷಕ

ನಾನು ನಂಬಿರುವ ಅತ್ಯಂತ ಸರಳ ವಿವರಣೆ ಎಂದರೆ ದೇವರೆಂಬುದಿಲ್ಲ. ಈ ವಿಶ್ವವನ್ನು ಯಾರೂ ಸೃಷ್ಟಿಸಲಿಲ್ಲ. ಹಾಗೂ ನಮ್ಮ ಹಣೆಬರೆಹ ಬರೆಯುವವರೂ ಯಾರೂ ಇಲ್ಲ. ಈ ಜಗದ ಅತ್ಯದ್ಭುತ ವಿನ್ಯಾಸವನ್ನು ಅನುಭವಿಸಿ ಮೆಚ್ಚುಗೆ ಸೂಸಲಿಕ್ಕಾಗಿಯೇ ಈ ಮನುಷ್ಯ ಜೀವನ ಇರುವುದು. ಅದಕ್ಕಾಗಿ ನಾನು ಅತ್ಯಂತ ಆಭಾರಿಯಾಗಿದ್ದೇನೆ.

ಮೊನ್ನೆಯಷ್ಟೇ ನಿಧನನಾದ ಸ್ಟೀಫನ್ನಿನ ಈ ದೈವಜಿಜ್ಞಾಸೆ ಬಹುಕುತೂಹಲಕಾರಿಯಾಗಿದೆ. ಸ್ಟೀಫನ್ನಿನ ಪಾಲಿಗೆ ಸರಿಯೆನಿಸ ಬಹುದು. ಸತ್ಯವೆನಿಸಬಹುದು. ಆದರೆ ಜಗತ್ತು ಇದನ್ನು ಒಪ್ಪಬೇಕೆಂದಿಲ್ಲ. ಸದಾ ಪ್ರಾರ್ಥನೆಯಲ್ಲಿರುತ್ತಿದ್ದ ತನ್ನ ಪತ್ನಿಗೆ ಸ್ಟೀಫನ್ ಹೇಳುವ ಮಾತುಗಳಿವು: ಈ ವಿಶ್ವದಲ್ಲಿರುವ ಲಕ್ಷಾಂತರ ನೀಹಾರಿಕೆಗಳಲ್ಲಿ ಯಾವುದೋ ಒಂದು ನೀಹಾರಿಕೆಯಲ್ಲಿರುವ ಒಂದು ನಕ್ಷತ್ರ ಸುತ್ತ ಬರುವ ಹಲವು ಗ್ರಹಗಳ ಪೈಕಿ ಒಂದಾಗಿರುವ ಕೋಟಿಗಟ್ಟಲೆ ಜನರಲ್ಲಿ ಒಬ್ಬಳಾಗಿರುವ ನಿನ್ನ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ದೇವರಿಗಿದೆಯೇ? ಈ ದೇವರೆಂಬ ನಂಬಿಕೆಯನ್ನು ನಂಬುವುದು ಕಷ್ಟ.

ಪ್ರತಿಯಾಗಿ ಆತನ ಪತ್ನಿ ಜೇನ್ ಆಡುವ ಮಾತುಗಳಿವು: ಅಕಾರಣವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಿಮಗೆ ದೇವರ ಬಗ್ಗೆ ಹೀಗೆ ಅನ್ನಿಸುವುದು ಸಹಜ. ಹೀಗೆ ಸಮಯ ಸಿಕಾಗಲೆಲ್ಲ ಇಬ್ಬರ ಸಂಭಾಷಣೆ ಅಥವಾ ಚರ್ಚೆಯಲ್ಲಿ ದೇವರ ಅಸ್ತಿತ್ವಕ್ಕೆ ಸಂಬಂಧಿಸಿದ ವಿಚಾರಗಳು ಇದ್ದರೂ ಜೇನ್ ಭಾವುಕಳೆಂಬುದು ಸ್ಪಷ್ಟವಾಗುತ್ತದೆ. 1980ರಲ್ಲಿ ತಾನೇ ಬರೆದ Brief History of Time  ಕೃತಿಯಲ್ಲಿ ಭೂಮಿಯ ಅಸ್ತಿತ್ವ, ವಿಶ್ವದ ಸೃಷ್ಟಿಯಲ್ಲಿ ದೇವರ ಪಾತ್ರವನ್ನು ಸ್ಟೀಫನ್ ಒಪ್ಪಿದ್ದ. ಆದರೆ 2010ರಲ್ಲಿ ಬರೆದ The Grand Design (ಅಮೋಘ ವಿನ್ಯಾಸ)- ಕೃತಿಯಲ್ಲಿ ದೇವರ ಅಸ್ತಿತ್ವವನ್ನು ನಿರಾಕರಿಸುತ್ತಾನೆ.

ಹಾಗಂತ ರೋಮನ್ ಕ್ಯಾಥೊಲಿಕ್ ಚರ್ಚ್ ಬಗ್ಗೆ ಅಪಾರ ನಂಬಿಕೆಯಿಟ್ಟುಕೊಂಡಿದ್ದ ಸ್ಟೀಫನ್ ವಿಶ್ವನಿಯಾಮಕನಾಗಿ
ದೇವರೊಬ್ಬನಿzನೆ ಎಂಬುದರ ಬಗ್ಗೆ ದ್ವಂದ್ವ ನಿಲುವನ್ನು ಅಭಿವ್ಯಕ್ತಿಸುತ್ತಿದ್ದ. ನಾವು ಮನುಷ್ಯರು ಹೀಗೆಯೇ ಅಲ್ಲವೆ? ದೇವರು
ಇzನೋ ಇಲ್ಲವೋ ಗೊತ್ತಿಲ್ಲ. ಆದರೆ ಅವನನ್ನು ಒಪ್ಪುತ್ತಾ, ನಿರಾಕರಿಸುತ್ತಾ ಅವನನ್ನು ಕಾಣುವ ಅಥವಾ ಮುಟ್ಟುವ
ಭರವಸೆಯಲ್ಲಿ ನಾವೆಲ್ಲ ಒಂದಿನ ಸಾಯುತ್ತೇವೆ.

ಸಾಯಲೇಬೇಕು. ದೇವನನ್ನು ಕಂಡೆನೆಂದು ಹೇಳಿದವರಿಗೂ ಕಂಡಿರಲು ಸಾಧ್ಯವೇ ಎಂಬ ಗುಮಾನಿಯೊಂದನ್ನು ವ್ಯಕ್ತಪಡಿಸುವ ನಮಗೆ ದೇವರ ಅಸ್ತಿತ್ವವನ್ನು ನಿರಾಕರಿಸುವ ಧೈರ್ಯವಾಗಲೀ ಸ್ಥೈರ್ಯವಾಗಲೀ ಇಲ್ಲ, ಮತ್ತು ಇರಲಾರದು. ಇದ್ದರೂ ತೋರಿಕೆ ಗಷ್ಟೇ. ಇಂದಿಗಲ್ಲ ನಾಳೆಯಾದರೂ ನಾವು ಮೆಚ್ವಿದ ದೇವರು ಬಂದು ನಮ್ಮನ್ನು ಉದ್ಧರಿಸಿಯಾನೆಂಬ ಭರವಸೆಯಲ್ಲಿ, ಪುಣ್ಯಗಳ ನದಿಗಳಲ್ಲಿ ಮೀಯುತ್ತಾ, ಬರಿಗಾಲಲ್ಲಿ ದೇವರ ದರ್ಶನ ಮಾಡುತ್ತಾ, ಹರಕೆ, ಪೂಜೆಗಳನ್ನೀಯುತ್ತಾ ನಿತ್ಯದ ಬದುಕಿನಲ್ಲಿ
ಸಾರ್ಥಕತೆಯನ್ನು ಕಾಣಬಯಸುವ ನಮಗೆ ನಮ್ಮನ್ನು ಮೀರಿದ ಅಗೋಚರ ಶಕ್ತಿಯೊಂದಿರಲೇಬೇಕು, ಮತ್ತು ಅದಕ್ಕೆ ನಾವು ಭಕ್ತಿಯಿಂದ ಅಽನವಾಗೇ ಈ ಬದುಕನ್ನು ದುಡಿಮೆಯಿಂದಲೇ ಸಾಗಿಸಬೇಕೆಂಬ ಪರಂಪರಾಗತವಾದ ಅದಮ್ಯ ನಂಬಿಕೆಯಲ್ಲಿ ಈ ಜೀವನವನ್ನು ನಡೆಸುತ್ತಾ ಬಂದ ನಮಗೆ ಸ್ಟೀಫನ್ ಮಾತುಗಳು ಅತೀ ಗಹನವೆನಿಸುವುದಿಲ್ಲ.

ಅಷ್ಟಕ್ಕೂ ದೇವರಿಲ್ಲವೆಂಬುದನ್ನು ಸಾಧಿಸುವ ಹಠವೇ ಸ್ಟೀಫನ್‌ನಂಥ ಮನಸುಗಳಿಗೆ ನಿತ್ಯದ ಬದುಕನ್ನು ಅದರ ಕೊನೆಯ ವರೆಗೂ ತೊಳಲಾಟದ ಇರುವಂತೆ ಮಾಡಿಬಿಡುತ್ತದೆ. ಅವನಿದ್ದಾನೆ, ಅಷ್ಟೇ ಅಲ್ಲ, ನಮ್ಮ ಕಷ್ಟಕ್ಕೂ ಸುಖಕ್ಕೂ ಅವನೇ ಕಾರಣ ನಿದ್ದಾನೆ. ಈ ಬದುಕು ಅವನ ಕೊಡುಗೆ, ಅವನೇ ಕೊಟ್ಟಿದ್ದನ್ನು ಅವನೇ ನಡೆಸುತ್ತಾನೆ, ನಡೆಯುವವ ಮಾತ್ರ ನಾನು ಎಂಬ ನಂಬಿಕೆಯಲ್ಲಿ ಜೀವನ ಸಾಗಿಸುವ ನಮಗೆ ದೇವರಿಲ್ಲ ಎಂಬ ಪ್ರಜ್ಞೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ.
ಪಾಂಚಭೌತಿಕವಾದ ಈ ಜಗತ್ತಿನಲ್ಲಿ ಅನುಭವದಲ್ಲಿರುವ ಎಲ್ಲವೂ ಇಲ್ಲಿ ಕಾಣಿಸುವುದಿಲ್ಲ ಎಂದ ಮಾತ್ರಕ್ಕೆ ಅದನ್ನು ಅಲ್ಲಗಳೆ ಯುವುದು ಹೇಗೆ ಸಾಧ್ಯ? ದೇವರಿಲ್ಲ ಎಂದು ಹೇಳುವುದು ದೇವರಿದ್ದಾನೆ ಎಂದು ಹೇಳಿದಷ್ಟು ಸುಲಭವಲ್ಲ.

ನ್ಯೂಟನ್ನಿನ ಮೂರು ನಿಯಮಗಳಿಂದಲೇ ಮನುಷ್ಯನ ನಡತೆಯನ್ನು ಸಮರ್ಥಿಸಲು ಹೊರಟು ಹಾಸ್ಯಾಸ್ಪದನಾಗಿದ್ದ ರಸೆಲ. ಶ್ರದ್ಧೆಯನ್ನೇ ಅಳವಡಿಸಿಕೊಂಡ ಈ ಬದುಕಿಗೆ ಯಾವ ಮೌಲ್ಯಗಳನ್ನೂ ಅಲ್ಲಗಳೆಯುವುದು ದುಸ್ಸಾಹಸವಾದೀತು. ಯೂರಿ ಗಗಾರಿನ್ ಎಂಬಾತ ಗಗನಕ್ಕೆ ಹಾರಿ ದೇವರನ್ನೂ ಎಲ್ಲೂ ಕಂಡಿಲ್ಲ ಎಂದು ಹೇಳಿದ್ದನಂತೆ. ಇವತ್ತು ಗಗಾರಿನ್ ಇಲ್ಲ. ಕಾಲಗತಿಯ ನಿಯಮದಲ್ಲಿ ಅವನ ರಷ್ಯಾವೂ ಕುಸಿದಿದ್ದನ್ನು ಕಂಡವರು ನಾವು. ಆದರೆ ದೇವರ ಮನಸ್ಸನ್ನು ಅರಿಯುವುದು ಸಾಧ್ಯ ಎಂದೂ ಹೇಳುವ ಮೂಲಕ ಸ್ಟೀಫನ್ ಕೆಲವೆಡೆ ಆಸ್ತಿಕನಾಗಿಯೂ ನಾಸ್ತಿಕನಾಗಿಯೂ ಅಭಿವ್ಯಕ್ತಿಸಿಕೊಂಡಿದ್ದ.

ಪ್ರಕೃತಿಯ ನಿಲುಕದ ನಿಗೂಢತೆಯಲ್ಲಿನ ವಿಸ್ಮಯವೇ ತನ್ನ ದೇವರು ಎಂದವ ಇನ್ನೋರ್ವ ಮಹಾ  ತವಿಜ್ಞಾನಿ ಐನ್ ಸ್ಟೆ ನ್. ವಿಶ್ವವನ್ನು ನಾಕು ಆಯಾಮಗಳನ್ನು ದೊಡ್ಡ ಮಟ್ಟದಲ್ಲಿ ವಿಶ್ಲೇಷಿಸಿದ ಈತನ ಸಾಪೇಕ್ಷ ಸಿದ್ಧಾಂತ, ಸಣ್ಣಮಟ್ಟದಲ್ಲಿ ವಿಶ್ಲೇಷಿಸಿರುವ ಕ್ವಾಂಟಂ ಸಿದ್ಧಾಂತಗಳ ಏಕೈಕತ್ವವೇ ತಂತು ಸಿದ್ಧಾಂತ. ಈ ತಂತು ಸಿದ್ಧಾಂತದ ಪ್ರಕಾರ ವಿಶ್ವದ ಸರಳವಾದ ವಸ್ತುವೇ ತಂತು. ಇದು ಸದಾ ಕಂಪಿಸುತ್ತಿರುತ್ತದೆ. ಯಾವುದು ಆ ನಾಕು ಆಯಾಮಗಳೆಂದರೆ, ಮೇಲೆ – ಕೆಳಗೆ, ಮುಂದೆ – ಹಿಂದೆ,
ಎಡ – ಬಲ, ಇನ್ನೊಂದು ಕಾಲ. ಅದರೆ ತಂತು ಸಿದ್ಧಾಂತ ಹತ್ತುಆಯಾಮಗಳನ್ನು ಹೇಳುತ್ತದೆ. ಉಳಿದ ಆರು ಆಯಾಮಗಳು ಚಿಕ್ಕಸುರುಳಿಯಾಕಾರzಗಿದ್ದು ನೋಡಲು ಸಾಧ್ಯವಿಲ್ಲದ್ದು ಅನ್ನುತ್ತದೆ. ಈ ಮಧ್ಯೆ 1995ರಲ್ಲಿ ಎಡ್ವರ್ಟ್ ವಿಟನ್ ಎಂಬವ ಎಂ. ಸಿದ್ಧಾಂತವನ್ನು ಮಂಡಿಸುತ್ತಾನೆ.

ಅದು ಸಾಪೇಕ್ಷ ಸಿದ್ದಾಂತ ಮತ್ತು ಕ್ವಾಂಟಂ ಸಿದ್ಧಾಂತಗಳಿಗೆ ತಂತು ಸಿದ್ಧಾಂತದ ಐದು ಬಗೆಗಳನ್ನು ಒಗ್ಗೂಡಿಸಿ ವಿಶ್ವದ ಆಯಾಮ ಹನ್ನೊಂದು ಅನ್ನುತ್ತದೆ. ಇವೆಲ್ಲ ಸಂಗತಿಗಳು ವಿಜ್ಞಾನ ಕ್ಷೇತ್ರದಲ್ಲಿ ಸ್ಪಷ್ಟರೂಪವಿಲ್ಲದೆ ಬಹುಗ್ರಾಸದ ಜಿಜ್ಞಾಸೆಯಾಗಿಯೇ ಮುಂದುವರಿದಿದೆ. ಆದರೆ ಹಾಕಿಂಗ್ ಎಂ. ಸಿದ್ಧಾಂತವನ್ನು ಒಪ್ಪುತ್ತಾನೆ. ವಿಶ್ವದ ಹುಟ್ಟಿನ ಬಗ್ಗೆ ವಿಜ್ಞಾನಿಗಳಲ್ಲಿ ಮೊದಲಿ ನಿಂದಲೂ ಅಧ್ಯಯನ ಪರಾಮರ್ಶೆ, ಚರ್ಚೆ- ವಿಚರ್ಚೆ, ವಾದ – ವಿವಾದಗಳ ಮಂಡನೆ ನಡೆಯುತ್ತಿರುವುದು ಜಾಗತಿಕ ಸತ್ಯ. ವಿಜ್ಞಾನಿಗಳೇನಕರಲ್ಲಿ ದೇವರನ್ನು ನಂಬುವವರಿದ್ದಾರೆ. ಆದರೆ ವಿಜ್ಞಾನಿಯಾಗಿ ದೈವತ್ವ ನಿರಾಕರಣೆಯ ಹಾಕಿಂಗ್ ಆ ದೇವ ರಿಂದ ಐವತ್ತೈದು ವರ್ಷಗಳ ಹೆಚ್ಚಿನ ಕಾಲದ ಬದುಕನ್ನು ಬಾಳಿದನೇನೋ ಎಂದೆನಿಸುವುದು!

ಜೀವ ದೇವರುಗಳ ಸಂಬಂಧದ ಕುರಿತಾದ ದ್ವೆ ತ, ಅದ್ವೆ ತ, ವಿಶಿಷ್ಟಾದ್ವೆ ತಗಳ ಸಿದ್ಧಾಂತವನ್ನು ಸ್ಟೀಫನ್ ಓದಿರಲಿಕ್ಕಿಲ್ಲ. ಅನಿರ್ವಚನೀಯ ಎಂದು ಸಾರಿರುವ ನಮ್ಮ ವೇದೋಪನಿಷತ್ತುಗಳ ಮರ್ಮವನ್ನು ಅವನು ಮಾಡಿರಲಿಕ್ಕಿಲ್ಲ. ಯಾವುದೂ ಇಲ್ಲದ ಕಾಲದಲ್ಲಿ ವೇದೋಪನಿಷತ್ತುಗಳು ಕಂಡ ಜಗತ್ತಿನ ಬಗ್ಗೆ ಯಾವ ಅರಿವು ಹಾಕಿಂಗನಿಗೆ ಇತ್ತು? ಜೆನ್ ನಾಣ್ಣುಡಿಯೊಂದಿದೆ: ‘ಅದು ಗೊತ್ತಿದೆಂಬುವವರಿಗೆ ಗೊತ್ತಿರುವುದಿಲ್ಲ; ಗೊತ್ತಿರುವವರು ಅದರ ಬಗ್ಗೆ ಹೇಳಲಾರರು’ ಎಂದು. ಪ್ರಾರ್ಥನೆಯಿಂದ ಏನು ದೊರಕುತ್ತದೆಂದರೆ ಏನು ಹೇಳುವುದು? ಅದನ್ನು ಅನುಭವಿಸಿದವರಿಗೆ ವಿವರಿಸುವ ಅಗತ್ಯವಿಲ್ಲ.

ಅನುಭವಿಸದವನಿಗೆ ಹೇಳಿ ಪ್ರಯೋಜನವಿಲ್ಲ. ‘ಇದೆಲ್ಲ ಸೃಷ್ಟಿಯ ರಹಸ್ಯವೇನು? ಇದು ಆ ಸೃಷ್ಟಿಕರ್ತನೆಂಬ ಯಾವಾತನಿಗಾ ದರೂ ತಿಳಿದಿದೆಯೋ ಅಥವಾ ಆತನಿಗೂ ತಿಳಿಯದೋ?’- ಈ ಬಗೆಯ ಕೊಂಕುಮಾತಿಗೆ ಏನೂ ಉತ್ತರವಿರಲಾರದು. ದೇವರಲ್ಲಿ ನಂಬಿಕೆಯಿದೆಯೇ ಎಂದು ಕಾರಂತರನ್ನು ಕೇಳಿದರಂತೆ. ‘ನನಗೆ ದೇವರು ಏನೆಂದು ಗೊತ್ತಿಲ್ಲ. ಆದ್ದರಿಂದ ಅದರ ಬಗ್ಗೆ ಏನನ್ನೂ ಹೇಳಲಾರೆ’ ಎಂದರಂತೆ ಅವರು. ಇದೇ ಪ್ರಶ್ನೆಗೆ ಮೂರ್ತಿರಾಯರು’ ದೇವರನ್ನು ನಂಬಬಾರದು ಎಂದು ನಾನೇನೂ ಪಣ
ತೊಟ್ಟಿಲ್ಲ. ಆದರೆ ನಂಬಿಕೆ ಬಾರದು’ ಎಂದರಂತೆ.

ಡಿವಿಜಿಯವರು ಋಷಿಸದೃಶರ ಅನುಭವಗಳನ್ನು ಒಂದೇ ಜರಡಿಯಲ್ಲಿ ಹಿಡಿದು ನಮಗೊದಗಿಸಿದವರು. ‘ಮೊದಲು ನೀನ್ಯಾ ರೆಂಬುದನ್ನು ತಿಳಿದುಕೋ. ಆಗ ನಿನ್ನೆ ಪ್ರಶ್ನೆಗಳೂ ಮಾಯವಾಗುವುವು’ ಎಂದ ರಮಣರ ಮಾತು ಸ್ವಾತ್ಮಪ್ರಜ್ಞೆಯನ್ನು ಎಚ್ಚರಿಸು ವಂತಿದೆ. ಸೃಷ್ಟಿಪ್ರಜ್ಞೆಯ ಅನಂತ ಸಾಧ್ಯತೆಗಳನ್ನು ಮೂರ್ತಿಕರಿಸುತ್ತಾ ಅವೆಲ್ಲವನ್ನೂ ಸಮರಸಕ್ಕೆ ತರುವ ಕೇಂದ್ರಬಿಂದು (ಯೂನಿಫೈಯಿಂಗ್ ಸೆಂಟರ್ ಪಾಯಿಂಟ್) ಯಾವುದೆಂಬುದನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರಾಯಃ ಸಾಧ್ಯ ವಾಗುವುದೂ ಇಲ್ಲವೇನೋ!

ಮೌನವೇ ಇದಕ್ಕೆ ಉತ್ತರವಾದೀತು! ಅಂಥ ಮೌನವು ಹುಟ್ಟಿಸುವ ಬೆರಗಿನ ಹಿಂದಿನ ಶಕ್ತಿಯನ್ನು ದೇವರು ಅಂತ ಕರೆದಿರಬಹುದು ನಮ್ಮ ಹಿರಿಯರು. ಬೆಳಗಿನ ವರ್ಣನೆಯನ್ನು ವರ್ಣಿಸುತ್ತಾ ಬೇಂದ್ರೆಗೆ ಇನ್ನು ವರ್ಣಿಸಲು ಸಾಧ್ಯವಾಗದೇ ಇದ್ದಾಗ ‘ಇದು ಬರಿ ಬೆಳಗ ಅಣ್ಣಾ, ಶಾಂತರಸವೇ ಮೈದುಂಬಿದಂತಿಹುದು’ ಎಂದರು. ಅಂಥ ‘ವಿಚಿತ್ರ’ಕ್ಕೇ ಅಲ್ಲವೆ ನಮಿಸು ಎಂದು ಡಿವಿಜಿ ಹೇಳಿ ದ್ದುದು.

ಜೀವ ಜಡರೂಪ ಪ್ರಪಂಚವನದಾವುದೋ|

ಆವರಿಸಿ ಕೊಂಡು ಮೊಳನೆರೆದುಮಿಹುದಂತೆ||

ಭಾವಕೊಳಪಡದಂತೆ ಅಳತೆಗಳವಡದಂತೆ|

ಆ ವಿಶೇಷಕೆ ಮಣಿಯೊ- ಮಂಕುತಿಮ್ಮ||

ಅದು ರಹಸ್ಯವಾದ ತತ್ತ್ವ. ಅದಕ್ಕೆ ಶರಣಾಗು

ಎಂಬ ಡಿವಿಜಿಯ ಚಿಂತನೆಯಲ್ಲಿ ದೈವಸಾಕ್ಷಾತ್ಕಾರದ ಸ್ಥಾಯಿ ಪ್ರಜ್ಞೆಯಿದೆ. ಭೌತಿಕ ಪ್ರಪಂಚದ ಭೌತಾತೀತವಾದ ಅಸ್ತಿತ್ವವನ್ನು ಭೌತಿಕ ಅಳತೆಗೋಲಿನಿಂದ ಅಳೆಯಲು ಹೊರಡುವುದು, ಯಾವುದೂ ಸಿಗದಿzಗ ಅಂಥ ಮಹತ್ತಾದ ಅಸ್ತಿತ್ವವನ್ನೇ ಅಲ್ಲಗಳೆ ಯುವುದು ವಿಜ್ಞಾನದ ಮೂಲತಪ್ಪೆಂದು ಕಾಣುತ್ತದೆ. ಇದಕ್ಕೇ ಇರಬೇಕು, ಅಧ್ಯಾತ್ಮ ಮತ್ತು ವಿಜ್ಞಾನ ಎರಡರ ಸಂಗಮದ ಚಲಿಸಬೇಕೆಂದು ಐನ್ ಸ್ಟೆ ನ್ ಹೇಳಿದ್ದು. ಜಗನ್ನಿಯಾಮಕನ ಸನ್ನಿಧಿಯಾಗುವ ಅವ್ಯಕ್ತ ಭಾವವನ್ನು, ಭಾರತೀಯ ಋಷಿಮುನಿ ಗಳು ಅಂತರ್ ದೃಷ್ಟಿಯಿಂದ ಕಂಡುಕೊಂಡ ಸತ್ಯ ಮತ್ತು ಸತ್ತ್ವವನ್ನೊಳಗೊಂಡ ಸಾರಸರ್ವಸ್ವ ಆರ್ಷೇಯ ಉದ್ಭೋಧವನ್ನು ಹಾಕಿಂಗನು ಕಂಡುಕೊಂಡ ದೈವ ಜಿಜ್ಞಾಸೆಯಲ್ಲಿ ಅಲ್ಲಗಳೆಯಲು ಭಾರತೀಯ ಪ್ರಜ್ಞೆಗೆ ನಿಸ್ಸಂದೇಹವಾಗಿ ಸಾಧ್ಯವಿಲ್ಲ.

ಹಾಗೆ ನೋಡಿದರೆ ದೈವಜಿಜ್ಞಾಸೆಯಲ್ಲಿ ಭಾರತೀಯ ಪ್ರಜ್ಞೆ ಸ್ವಲ್ಪಮಟ್ಟಿಗೆ ಮುಂದುವರೆದು ವ್ಯಾಪಿಸಿದೆ. ನಾನೇ ದೇವರು ಎಂದವರೆಲ್ಲಿದ್ದಾರೆ. ದೇವರನ್ನು ಕಂಡೆನೆನ್ನುವರೂ ಇಲ್ಲಿ ಸಿಗುತ್ತಾರೆ. ಅವನ ಮೂರ್ತಿಯನ್ನು ಮಾರುವವರಿಲ್ಲಿದ್ದಾರೆ. ದೇವನಿಗೇ ದೇವಸ್ಥಾನ ಕಟ್ಟಿಸಿಕೊಟ್ಟೆ ಯೆಂದು ಬೀಗುವವರಿzರೆ. ದೇವರಿಗೆ ಬೈದೆನೆಂದವರೂ ಇದ್ದಾರೆ. ಬೈಯ್ಯುವವರೂ ಇzರೆ. ಎಲ್ಲವನ್ನೂ ಅವನಿಗೇ ಬಿಟ್ಟಿದ್ದೇನೆನ್ನುವ ಸಮರ್ಪಣಾ ಭಾವದವರಿzರೆ. ನಾನೇ ದೇವರ ಮಗನೆನ್ನುವ ಪುಣ್ಯಾತ್ಮನಿದ್ದಾನೆ. ನಾನೇ ದೇವರ
ದೂತನೆನ್ನುವ ಮಹನೀಯನಿದ್ದಾನೆ. ಇವರನ್ನೆ ನೋಡಿದಾಗ ವಿಶ್ವದ ಸೃಷ್ಟಿಯಲ್ಲಿ ದೇವರಿದ್ದಾನೆ ಅಥವಾ ಇಲ್ಲ ಎಂಬ ಗೊಂದಲದ ಜಿಜ್ಞಾಸೆಯ ಸ್ಟೀಫನ್ ಜೀವನವನ್ನು ಮುಗಿಸಿದಂತೆ ಕಾಣುತ್ತದೆ.

ಸ್ಟೀಫನ್‌ಗಿಂತ ನಮ್ಮ ಪ್ರಜ್ಞೆಯೇ ಹಿರಿದೆಂತೆನಿಸುವುದು ಈ ಹಿನ್ನೆಲೆಯಲ್ಲಿ. ವಿಚಿತ್ರವೆಂದರೆ, ಸಾಪೇಕ್ಷ ಸಿದ್ಧಾಂತವು ಐನ್ ಸ್ಟೆನ್‌ಗಿಂತ ಮೊದಲೇ ವೇದಗಳಲ್ಲಿ ಅದನ್ನು ಪ್ರಸ್ತಾಪಿಸಲಾಗಿತ್ತೆಂದು ಒಪ್ಪುವ ಹಾಕಿಂಗನಿಗೆ ಭಾರತೀಯ ಪ್ರಜ್ಞೆಯಲ್ಲಿ ಆಸಕ್ತಿ ಯಿತ್ತೇನೋ!