Sunday, 15th December 2024

ಕಿಚ್ಚನತ್ರ ಕಿಚನ್ ರಿಪೇರಿಗೂ ದುಡ್ಡಿರಲಿಲ್ವಾ ?

ತುಂಟರಗಾಳಿ

ಸಿನಿಗನ್ನಡ

ನಿನ್ನೆ ನಿರ್ದೇಶಕ ಕೆವಿ ರಾಜು ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸ ಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರ ಬಗೆಗಿನ ಒಂದು ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ. ರಾಜು ಅಂದ್ರೆ ನೆನಪಾಗೋದು ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು.

ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.೧, ಬೆಳ್ಳಿ ಮೋಡಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ಅದ್ಭುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ಅವರ ಹುಲಿಯಾ ಚಿತ್ರದಿಂದಲೇ. ದೇವರಾಜ, ಅರ್ಚನಾ ಅಭಿನಯದ ಹುಲಿಯಾ. ಆ ಚಿತ್ರದ ಖದರ್ರ‍ೇ ಹಾಗೆ. ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ದೌರ್ಜನ್ಯಕ್ಕೆ ಒಳಗಾದವರ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ.

ಒಂದೇ ವ್ಯತ್ಯಾಸ ಅಂದ್ರೆ ಕೆವಿ ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು. ಅಂದರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆವಿ ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು. ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿಬಂದಿತ್ತು. ಅದರಲ್ಲೂ ನಟ ವಿಷ್ಣುವರ್ಧನ್ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ‘ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ’ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು.

ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆವಿ ರಾಜು ಕೇಳಲಿಲ್ಲ, ಅಂತ ಆರೋಪ ಹೊರಿಸುವ ಚಿತ್ರದ ನಿರ್ಮಾಪಕ ಗೋವಿಂದು ಕೂಡ, ಯಾರಾದ್ರೂ ನಿಮ್ಮ ಹೆಸರೇನು? ಅಂತ ಯಾರಾದ್ರೂ ಕೇಳಿದ್ರೆ ಗೋವಿಂದು, ಹುಲಿಯಾ ಗೋವಿಂದು ಅಂತಲೇ ಹೇಳ್ತಾರೆ. ಅದು ಆ ಚಿತ್ರದ ಮತ್ತು ಕೆವಿ ರಾಜು ಅವರ ತಾಕತ್ತು.

ಕುಮಾರಸ್ವಾಮಿ

ಏನ್ ಸಾರ್, ಪೆನ್ ಡ್ರೈವ್ ಇಟ್ಕೊಂಡು ಎಲ್ಲರನ್ನೂ ಹೆದರಿಸ್ತಾ ಇದ್ದೀರಾ, ಏನ್ ಸಮಾಚಾರ?
-ಎಷ್ಟ್ ದಿನ ಅಂತ ಸಿಡಿ ಇಟ್ಕೊಂಡ್ ಹೆದರಿಸೋದು ಅಂತ ಅಪ್ಡೇಟ್ ಆಗಿದ್ದೀನಿ. ಆದ್ರೆ ಜನನೂ ಅಪ್ಡೇಟ್ ಆಗಿ ನನ್ನ ಪೆನ್ನಿಗರಾಮ ಅನ್ನದೇ ಇದ್ರೆ ಸಾಕು.

ನಿಜ ಬಿಡಿ. ಸರಿ, ಎಲೆಕ್ಷನ್ ಟೈಮಲ್ಲಿ, ಇದು ಕಟ್ಟ ಕಡೆಯ ಆಟ, ಅಧಿಕಾರಕ್ಕೆ ಬರದೇ ಇದ್ರೆ, ನಿವೃತ್ತಿ ಆಗ್ತೀನಿ, ಜೆಡಿಎಸ್ ಬಾಗಲಾಕ್ತೀನಿ ಅಂತಿದ್ದ ನಿಮಗೆ ಮತ್ತೆ ರಾಜಕಾರಣದಲ್ಲಿ ಇಷ್ಟು ಉತ್ಸಾಹ ಎಲ್ಲಿಂದ ಬಂತು?
-ಈಗೇನು? ಅದನ್ನೂ ಸಿದ್ರಾಮಯ್ಯಂಗೆ ಹೇಳಿ ಸಿಬಿಐ ತನಿಖೆ ಮಾಡಿಸ್ಬೇಕು ಅಂತಿದ್ದೀರಾ?

ಅಯ್ಯೋ, ಸುಮ್ನೆ ಕೇಳ್ದೆ ಸರ್, ಆದ್ರೆ, ಅಪರಾಧಕ್ಕೆ ಸಾಕ್ಷಿ ಇಟ್ಕೊಂಡು, ನನ್ನಿಷ್ಟ ಬಂದಾಗ ಹೇಳ್ತೀನಿ ಅನ್ನೋದು ಎಷ್ಟ್ ಸರಿ? ನಮ್ ಪಕ್ಕದ ಮನೆಯಲ್ಲಿ ಕೊಲೆ, ದರೋಡೆ ಆದಾಗ, ಅದನ್ನ ಯಾರ್ ಮಾಡಿದ್ದು ಅಂತ ನಂಗೊತ್ತು, ನನ್ನತ್ರ ಪ್ರೂಫ್ ಇದೆ, ಆದ್ರೆ ಹೇಳಲ್ಲ, ಕಾಲ ಬಂದಾಗ ಹೇಳ್ತೀನಿ ಅಂದ್ರೆ
ಪೊಲೀಸ್ನೋರು ಸುಮ್ನೆ ಬಿಡ್ತಾರಾ?

-ನೀವೇನ್ ಕಾಂಗ್ರೆಸ್ ಏಜೆಂಟ್ ಏನ್ರೀ, ಹಿಂಗೆ ಪ್ರಶ್ನೆ ಕೇಳ್ತೀರಾ? ನೀವ್ ಯಾರ್ ಪರ ಮಾತಾಡ್ತಾ ಇದ್ದೀರ ಅಂತ ಗೊತ್ತು ತಾನೇ?..ಆಹಾ,
ನಿಮ್ಮಂಥವರಿದ್ರೆ, ‘ಉದಯವಾಯಿತು ನಮ್ಮ ಚೆಲುವ’ ಕನ್ನಡ ನಾಡು.

ಅಯ್ಯೋ, ದೊಡ್ಡ ಮಾತು. ಹೋಗ್ಲಿ, ಯಾವಾಗ್ಲೂ ಕಾಂಗ್ರೆಸ್ ನೋರು ಕೈ ಕೊಟ್ರು ಅಂತಿರ್ತೀರಲ್ಲ, ನಿಜ ಹೇಳಬೇಕು ಅಂದ್ರೆ, ಗೌಡರಾಗಿದ್ದುಕೊಂಡು
ಮಾತಿದ ತಪ್ಪಿ, ವಚನ ಭ್ರಷ್ಟರಾಗಿ ಯಡಿಯೂರಪ್ಪನೋರಿಗೆ ಕೈ ಕೊಟ್ಟಿದ್ದು ನೀವು ತಾನೇ?
-ಯಡಿಯೂರಪ್ಪ ಬಿಜೆಪಿ, ನಾನು ಜೆಡಿಎಸ್. ಇದ್ರಲ್ಲಿ ‘ಕೈ’ ಕೊಡೋದು ಎಲ್ಲಿಂದ ಬಂತು?. ಅಂದಂಗೆ, ನಾನು ವಚನ ಭ್ರಷ್ಟ ಆಗಲಿಲ್ಲ, ಆಗ
ಯಡಿಯೂರಪ್ಪನೋರಿಗೆ ಯೋಗ ಇರಲಿಲ್ಲ, ಅದಕ್ಕೆ ಅವರು ಪ್ರಮಾಣವಚನ ಭ್ರಷ್ಟರಾದ್ರು ಅಷ್ಟೇ.

ಸರಿ, ಈಗೇನು, ನಿಮ್ಮ ಪೆನ್ ಡ್ರೈವ್‌ನಲ್ಲಿ ಇರೋ ರಹಸ್ಯ, ಈ ಸಲನಾದ್ರೂ ಹೊರಗೆ ಬರುತ್ತಾ ಇಲ್ವಾ ಅಷ್ಟ್ ಹೇಳಿ
-ಮೊನ್ನೆ ಸಾಧು ಕೋಕಿಲಾ ಅವ್ರೂ ಇದೇ ಪ್ರಶ್ನೆ ಕೇಳಿದ್ರು, ಅದಕ್ಕೆ ಅವ್ರ್ ಸ್ಟೈಲ ಉತ್ರ ಹೇಳಿದೆ… ‘ಬರ್ತಾ ಇದೆ,ಬರ್ತಾ ಇದೆ, ಬರ್ತಾ ಇದೆ ಬರ್ತಾ
ಇಲ್ಲ, ಬರ್ತಾ ಇಲ್ಲ, ಬರ್ತಾ ಇಲ್ಲ.’  (ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಖೇಮು ಮೊದಲ ಬಾರಿಗೆ ಫ್ಲೈಟ್ ಹತ್ತಿದ್ದ. ಅವನಿಗೆ ಫ್ಲೈಟ್ ಪ್ರಯಾಣ ಅಂದ್ರೆ ಸಿಕ್ಕಾಪಟ್ಟೆ ಭಯ ಇತ್ತು. ಮನೆಯಲ್ಲಿ ಖೇಮುಶ್ರೀಗೆ ಎಷ್ಟೋ ಸಲ
ಹೇಳಿದ, ಇ ಕಣೇ ನಂಗೆ ಭಯ ಆಗುತ್ತೆ, ಫ್ಲೈಟ್ ಬೇಡ ತಡ ಆದ್ರೂ ಪರವಾಗಿಲ್ಲ, ಟ್ರೈನ್‌ನ ಹೋಗ್ತೀನಿ ಅಂತ ಹೇಳಿದ. ಆದ್ರೆ ಖೇಮುಶ್ರೀ, ಅ ರೀ, ಹಿಂಗೇ ಭಯ ಪಟ್ಕೊಂಡ್ರೆ ಜೀವನ ಪೂರ್ತಿ ಹೆದರಿಕೊಂಡೇ ಇರ್ತೀರಿ, ಒಂದ್ಸಲ ಹೋಗಿ ಬನ್ನಿ, ಎಲ್ಲಾ ಅಭ್ಯಾಸ ಆಗುತ್ತೆ ಅಂತ ಬಲವಂತ ಮಾಡಿ
ಕಳಿಸಿದಳು. ಅವಳ ಒತ್ತಾಯಕ್ಕೆ ಹೊರಟ ಖೇಮುಗೆ ಫ್ಲೈಟ್‌ನಲ್ಲಿ ಕೂತಾಗಲೇ ಭಯ ಶುರುವಾಯ್ತು.

ಇನ್ನೂ ಫ್ಲೈಟ್ ಜರ್ನಿ ಯಾವಾಗ ಮುಗಿಯುತ್ತೋ ಅನ್ನೋ ಭಯದ ಅಷ್ಟೂ ಹೊತ್ತು ಕೂತಿದ್ದ. ಕೊನೆಗೂ ಲ್ಯಾಂಡಿಂಗ್ ಸಮಯ ಬಂತು. ಆಗ ಪೈಲೆಟ್ ಅನೌಮೆಂಟ್ ಶುರು ಮಾಡಿದ, ಪ್ರಯಾಣಿಕರೇ ನಾವು ನಮ್ಮ ಪ್ರಯಾಣವನ್ನು ಮುಗಿಸುವ ಹಂತಕ್ಕೆ ಬಂದಿದ್ದೇವೆ, ಇನ್ನೇನು ಕೆಲವೇ ಸಮಯದಲ್ಲಿ ನಾನು -ಟ್ ಅನ್ನು ಲ್ಯಾಂಡ್ ಮಾಡುತ್ತೇನೆ, ನಿಮ್ಮ ಸೀಟ್ ಬೆಲ್ಟ್ ಗಳನ್ನು ಬಿಗಿಗೊಳಿಸಿ. ಹಾಗೂ…ಎಂದು ಹೇಳುತ್ತಿದ್ದಂತೆ, ಓ ಮೈ ಗಾಡ್,,,ಓ ಮೈ
ಗಾಡ್ ಎಂಬ ಉದ್ಘಾರ ಬಂದು ಪೈಲೆಟ್ ವಾಯ್ಸ ಕಟ್ ಆಯ್ತು. ಫ್ಲೈಟ್‌ನಲ್ಲಿದ್ದ ಎಲ್ಲರಿಗೂ ಗಾಬರಿ ಆಯ್ತು.

ಇನ್ನು ಖೇಮು ಪರಿಸ್ಥಿತಿ ಕೇಳಬೇಕೆ. ಆದರೆ ಕೆಲವು ಸಮಯದ ನಂತರ ಫ್ಲೈಟ್ ಸೇಫ್ ಆಗಿ ಲ್ಯಾಂಡ್ ಆಯ್ತು. ಆಗ ಕಾಕ್ ಪಿಟ್‌ನಿಂದ ಹೊರಬಂದ ಪೈಲೆಟ್, ಪ್ರಯಾಣಿಕರಲ್ಲಿ ಕ್ಷಮೆ ಕೋರುತ್ತೇನೆ, ನನ್ನ ಮಾತು ಕೇಳಿ ನಿಮಗೆ ಗಾಬರಿ ಆಗಿರಬೇಕು. ಆಕ್ಚುವಲಿ, ನಾನು ಮಾತನಾಡುವಾಗ ಫ್ಲೈಟ್ ಅಟೆಂಡೆಂಟ್ ಒಬ್ಬಳು ನನ್ನ ಪ್ಯಾಂಟ್ ಮೇಲೆ ಬಿಸಿ ಬಿಸಿ ಕಾಫಿ ಚೆಲ್ಲಿಬಿಟ್ಟಳು. ನೀವು ನನ್ನ ಪ್ಯಾಂಟ್‌ನ ಮುಂಭಾಗ ನೋಡಬೇಕಿತ್ತು ಅಂತ ನಕ್ಕ. ಅದಕ್ಕೆ ಖೇಮು ಹೇಳಿದ ನಿನ್ನ ಪ್ಯಾಂಟ್‌ನ ಮುಂಭಾಗದ ವಿಷ್ಯ ಬಿಡು, ನನ್ನ ಪ್ಯಾಂಟ್‌ನ ಹಿಂಭಾಗ ನೋಡಬೇಕಿತ್ತು ನೀನು!

ಲೈನ್ ಮ್ಯಾನ್
ಸುದೀಪ್ ಮನೆಯ ಅಡುಗೆ ಮನೆಯ ರಿಪೇರಿಗೆ ೧೦ ಲಕ್ಷ ಕೊಟ್ಟಿದ್ದು ನಾನು-ನಿರ್ಮಾಪಕ ಎಂ.ಎನ್. ಕುಮಾರ್
-ಕಿಚ್ಚನತ್ರ ಕಿಚನ್ ರಿಪೇರಿಗೂ ದುಡ್ಡಿರಲಿಲ್ವಾ?

ಸಿನಿಮಾ ಶೂಟಿಂಗಿಗೆ ಬೇಕಾಗಿರುವುದನ್ನು ಅರೇಂಜ್ ಮಾಡುವವನು ಪ್ರೊಡಕ್ಷನ್ ಮ್ಯಾನೇಜರ್
-ಸಿನಿಮಾ ರಿಲೀಸ್ ಆದ್ಮೇಲೆ ಹಿಟ್ ಆಗುತ್ತಾ ಇಲ್ವಾ ಅಂತ ಹೇಳೋನು ಪ್ರಿಡಿಕ್ಷನ್ ಮ್ಯಾನೇಜರ್

ಯಶ್ ಅಭಿಮಾನಿ ಆಗಿರೋ ಕಾಂಗ್ರೆಸ್ ಗಿಡ ಏನು ಹೇಳುತ್ತೆ?
-ಮಗಾ ಇಲ್ಲಿ ಯರೂ ಯಾರನ್ನೂ ಬೆಳೆಸಲ್ಲ, ನಮಗ್ ನಾವೇ ಬೆಳಿಬೇಕು
ಬಜೆಟ್ ಮಂಡಿಸುವಾಗ ಸಿದ್ರಾಮಯ್ಯನವರ ತಲೆಯಲ್ಲಿ ಯಾವ ಪ್ರಶ್ನೆ ಇತ್ತು?
-ಬೊಕ್ಕ ತಲೆ ಅಂದ್ರೆ, ಖಾಲಿ ತಲೆ ಬೊಕ್ಕಸ ಅಂದ್ರೆ?

ಮೊಟ್ಟೆ ತಲೆಯ ಗಂಡುಮಕ್ಕಳನ್ನು ಏನೆನ್ನಬಹುದು?
-ಏಉಘೆ ಮಕ್ಳು
ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಸಿದ್ರಾಮಯ್ಯನವರ ಉತ್ಸಾಹ ಮತ್ತು ದೃಷ್ಟಿಕೋನ
-ಎಗ್ ‘ಸೈಟೆಡ್’