ವಿಶ್ಲೇಷಣೆ
ಸ್ವಪನ್ ದಾಸಗುಪ್ತ
ರಿಷಿ ಸುನಕ್‌ರ ಕಾರ್ಯಕೌಶಲ ಅನನ್ಯವಾದದ್ದು. ಜಾನ್ಸನ್ ಆಡಳಿತ ಕೊನೆಗೊಂಡಾಗ ಕನ್ಸರ್ವೇಟಿವ್ ಎಂ.ಪಿ.ಗಳು ಇವರಲ್ಲಿ ನಾಯಕನನ್ನು ಕಂಡಿದ್ದರು. ಅಸಾಧಾರಣ ಅಡಚಣೆಗಳನ್ನು ಎದುರಿಸುವಲ್ಲಿ ಇವರಿಗಿದ್ದ ಚತುರತೆಯನ್ನೂ ಎಲ್ಲರೂ ಗಮನಿಸಿದ್ದರು. ಮಾರ್ಗರೆಟ್ ಥ್ಯಾಚರ್‌ರಂತೆ ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ ಸುನಕ್ ಬಗ್ಗೆ ಜನಪ್ರೀತಿ ಹೆಚ್ಚಿತ್ತು.
ಲಿಜ್ ಟ್ರಸ್ ಆಡಳಿತಾವಧಿಯ 45 ದಿನಗಳಲ್ಲಿ ಬ್ರಿಟನ್‌ನಲ್ಲಿ ಒಂದಷ್ಟು ರಾಜಕೀಯ ಪ್ರಕ್ಷುಬ್ಧತೆ ನಡೆಯಬೇಕೆನ್ನುವುದು ಪೂರ್ವ ನಿರ್ಧರಿತ ಸಂಗತಿಯೇನೋ ಎಂಬಂತೆ ಕೆಲವರು ಮಾತನ್ನಾಡುತ್ತಿದ್ದಾರೆ. ಆದರೆ ಇಲ್ಲಿ ಒಂದು ಮಾತನ್ನು ಹೇಳಲೇಬೇಕಿದೆ. ಲಾಡ್ ಸಾಲಿಸ್ಬರಿ ಮತ್ತು ವಿನ್‌ಸ್ಟನ್ ಚರ್ಚಿಲ್ಲರಿಗೆ ಏಷ್ಯಾ ಮೂಲದ ವ್ಯಕ್ತಿಯೊಬ್ಬ ಅದರಲ್ಲೂ ಭಾರತೀಯ ಮೂಲದ ರಿಷಿ ಸುನಕ್ ಎಂಬಾತ ಅಧಿಕಾರದ ಗದ್ದುಗೆ ಏರುವುದು ಸುತರಾಂ ಒಪ್ಪಿತವಾಗದ ಸಂಗತಿ ಎಂಬುದು ಕೂಡ ಸುಳ್ಳಲ್ಲ.
ಕನ್ಸರ್ವೇಟಿವ್ ಪಕ್ಷದ ಸದಸ್ಯರ ಆಯ್ಕೆಯ ಪರಿಧಿಯನ್ನು ಮೀರಿ, ತನ್ನ ದೂರದರ್ಶಿತ್ವ ಮತ್ತು ಆಡಳಿತ ಚತುರತೆಯಲ್ಲಿ ಲಿಜ್ ಟ್ರಸ್‌ರನ್ನು ಮೀರಿಸಬಲ್ಲ ಚಾತುರ್ಯ ಹೊಂದಿದ್ದ ಈ ಡೇವಿಡ್ ಕ್ಯಾಮರೂನ್ ತರಹದ ಹುಡುಗ ಈ ಮುಂಚೆ ಆಯ್ಕೆಯಾಗದೆ ಇರುವುದಕ್ಕೆ ಬಹುಮುಖ್ಯ ಕಾರಣವೆಂದರೆ ಅವರ ಜನಾಂಗೀಯ ಮೂಲ. ಕೊನೆಗೂ ಆರ್ಥಿಕ ಬಿಕ್ಕಟ್ಟು, ಪ್ರತಿಪಕ್ಷ ಲೇಬರ್ ಪಾರ್ಟಿ ಶೇ.೩೦ರಷ್ಟು ಪಾಯಿಂಟುಗಳನ್ನು ಹೆಚ್ಚಿಗೆ ಪಡೆದ ಸಂದರ್ಭ ಮತ್ತು ಆಡಳಿತಾರೂಢರ ಬಗ್ಗೆ ಹುಟ್ಟಿದ ಜುಗುಪ್ಸೆ ಈ ಬದಲಾವಣೆಗೆ ನಾಂದಿಯಾಯಿತು.
ಕಳೆದ ವಾರ ಟ್ರಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಇತ್ತು 10 ಡೌನಿಂಗ್ ಸ್ಟ್ರೀಟ್‌ನಿಂದ ಹೊರಬಂದ ನಂತರದಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರಿಗೆ ಹೊಸ ಆಯ್ಕೆಯ ಕುರಿತಾಗಿ ಅಷ್ಟಾಗಿ ಆಸಕ್ತಿ ಇದ್ದಂತಿರಲಿಲ್ಲ. ಅಲ್ಲಿ ನಾಯಕತ್ವದ ಮುನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬರು ಪೂರ್ವಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಇನ್ನೊಬ್ಬರು ಪೆನ್ನಿ ಮೋರ್ಡಾಂಟ್. ಚುನಾವಣೆ ನಡೆದರೆ
ಸುನಕ್‌ರನ್ನು ಸೋಲಿಸಬಲ್ಲ ಛಾತಿ ಈತನಲ್ಲಿದೆ ಎಂದು ಹೇಳಲಾಗುತ್ತಿತ್ತು.
ನನ್ನ ಪ್ರಕಾರ ಜಾನ್ಸನ್ ಅಥವಾ ಮಾರ್ಡಂಟ್ ಆಯ್ಕೆಯಾಗುವುದು ಖಚಿತ ಎಂಬಂಥ ವಾತಾವರಣ ಅಲ್ಲಿತ್ತು. ಕನ್ಸರ್ವೇಟಿವ್ ಪಕ್ಷದ ಹಿಂಬದಿ ಸೀಟಿನ ಮಂದಿ ಸುನಕ್‌ರತ್ತ ಹೆಚ್ಚಿನ ಒಲವು ತೋರಿದ್ದು, ಕನಿಷ್ಠ 100 ಎಂ.ಪಿ.ಗಳ ಬೆಂಬಲವನ್ನು ದೊರಕಿಸಿ ಕೊಡುವಲ್ಲಿ ಸಾಕಷ್ಟು ಉತ್ಸಾಹ ತೋರಿದರು. ಅವರಿಗೆ ಬೇಕಿದ್ದುದು ಜನಪ್ರಿಯ ವ್ಯಕ್ತಿಯಲ್ಲ, ಅದಕ್ಕೆ ಹೊರತಾದ ಸದ್ಯದ ಹಣಕಾಸು ಸಂಕಷ್ಟದಲ್ಲಿ ದೇಶವನ್ನು ಮೇಲೆತ್ತಬಲ್ಲ ತಾಂತ್ರಿಕ ಪರಿಣತಿ ಇರುವ ವ್ಯಕ್ತಿ.
ಐತಿಹಾಸಿಕ ಹೋಲಿಕೆಗಳು ಎಂದೂ ನಿಜವಾಗುವುದಿಲ್ಲ. ಮೇ 1940ರ ಬ್ರಿಟಿಷ್ ಕಾರ್ಯನೀತಿಗಳ ಕುರಿತಾಗಿ ಅರಿವಿರುವವರು ಈಗ ಹೆಚ್ಚು ಪ್ರಸ್ತುತರಾಗುತ್ತಾರೆ. ಆ ದಿನಮಾನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಧಾನಮಂತ್ರಿ, ಹಿಟ್ಲರನ ರಂಪಾಟ ಗಳನ್ನು ನಿಗ್ರಹಿಸಬಲ್ಲವನಾಗಿದ್ದರೂ, ವಿಲಕ್ಷಣ ವ್ಯಕ್ತಿಯೆಂದೇ ಸದಾ ಹೆಸರಾಗಿದ್ದ ಚರ್ಚಿಲರನ್ನು ಪ್ರಧಾನಿ ಸ್ಥಾನಕ್ಕೆ ಸಂಸದರು ಆಯ್ಕೆಮಾಡಿದ್ದರು. ಆ ಸ್ಥಾನಕ್ಕೆ ಸ್ಪರ್ಧಿಸಲು ಉತ್ಸುಕನಾಗಿದ್ದ ಭಾರತದ ವೈಸರಾಯ್ ಲಾರ್ಡ್ ಹೆಲಿ-ಕ್ಸ್‌ಗಿಂತ ಈತನೇ ಸೂಕ್ತ ಎಂದು ಸಂಸದರು ಭಾವಿಸಿದ್ದರು. ಯುದ್ಧೋನ್ಮಾದಕ್ಕೆ ಬೇರೆಯದೇ ಆದ ನಾಯಕತ್ವ ಬೇಕು ಎಂಬುದನ್ನು ಜನ ಅರಿತು ಕೊಂಡಿದ್ದರು.
ಕಳೆದ 50 ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲದಿದ್ದಿದ್ದರೆ, ಸುನಕ್ ರನ್ನು ನಾಯಕರನ್ನಾಗಿ ಒಪ್ಪಿ ಕೊಳ್ಳುವುದು ಈಗಿನ ಕನ್ಸರ್ವೇಟಿವ್ ಪಕ್ಷಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆ ನೋಡಿದರೆ ಜಾನ್ಸನ್ ಒಬ್ಬ ಅತ್ಯದ್ಭುತ ಪ್ರಕಾರ ಕರ್ತ. ಆತನ ರಾಜಕೀಯ ಚತುರತೆ ಅನನ್ಯವಾದದ್ದು. ಬ್ರಿಟನ್ನಿನ ಪುನರುತ್ಥಾನಕ್ಕೆ ಆತನಲ್ಲಿ ಸಾಕಷ್ಟು ತಂತ್ರಗಾರಿಕೆ ಗಳಿದ್ದವು.
ವಿಶ್ವದ ಅತ್ಯುನ್ನತ ಶಕ್ತಿಕೇಂದ್ರವಾಗಿ ಬ್ರಿಟನ್ನನ್ನು ಹೊರಹೊಮ್ಮಿಸುವಲ್ಲಿ ಆತನಲ್ಲಿ ಸಾಕಷ್ಟು ಕನಸುಗಳಿದ್ದವು, ಒಳನೋಟಗಳು ಕೂಡ. ಹಾಗಾಗಿಯೇ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗುಳಿಯುವುದು ಸಾಧ್ಯವಾಯಿತು. ಟೋರಿ ಕೂಡ ಇಂಥದೇ ಆಲೋಚನೆಗಳನ್ನು ಹೊಂದಿದ್ದ. ಉತ್ತರ ಇಂಗ್ಲೆಂಡ್‌ನಲ್ಲಿ ಪಾರಮ್ಯವನ್ನು ಹೊಂದಿದ್ದ ಅಜೇಯ ಲೇಬರ್ ಪಕ್ಷವನ್ನು ಮಣಿಸಿ 2019ರಲ್ಲಿ 80 ಸೀಟುಗಳ ಮುನ್ನಡೆಯೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು ಕೂಡ ಇದೇ ಕಾರಣದಿಂದ.
2019ರಲ್ಲಿನ ಟೋರಿಯ ಗೆಲುವು ಮಹತ್ವಾಕಾಂಕ್ಷೆಯ ಪ್ರಚೋದನೆಯಿಂದ ಬಂದುದಲ್ಲ. ಅದಕ್ಕೆ ಬಹುಮುಖ್ಯ ಕಾರಣವಾದದ್ದು ಬ್ರುಸೆಲ್ಸ್ ನಲ್ಲಿ ಎದ್ದಿದ್ದ ಅಸಮಾಧಾನದ ಭುಗಿಲು. ಅಲ್ಲಿನ ವಾಮಪಂಥೀಯರು ಲೇಬರ್ ಪಕ್ಷ ಅಸಮರ್ಥ ಎಂದು ಬಿಂಬಿಸಿ ದ್ದರು. ಜಾನ್ಸನ್ ಚರ್ಚಿಲ್ ಅಲ್ಲದಿರಬಹುದು, ಆದರೆ ಆತ ಚರ್ಚಿಲ್ಲರ ಪ್ರತಿರೂಪವಾಗಿ ಗ್ರೇಟ್ ಬ್ರಿಟನ್‌ನ ಮಹತ್ವಾಕಾಂಕ್ಷೆಯ ರೂವಾರಿಯಾಗಿ ಕೆಲಸ ಮಾಡಿದರು.
ಕೋವಿಡ್ 2019ರ ಕಾಲಘಟ್ಟದಲ್ಲಿ ಇರಬೇಕಾಗಿದ್ದ ಅತಿಸೂಕ್ಷ್ಮತೆಯನ್ನು ಗಮನದಲ್ಲಿಟ್ಟು ಲಾಕ್‌ಡೌನ್ ಸಮಯದಲ್ಲಿ ದೇಶ ಎದುರಿಸಿದ ಆರ್ಥಿಕ ಸಂಕಷ್ಟಗಳನ್ನೂ ಅನುಲಕ್ಷಿಸಿ ಈತ ಪ್ರಧಾನಿ ಹುದ್ದೆಯಲ್ಲಿರುವುದು ತರವಲ್ಲ ಎಂದು ಜನತೆ ತೀರ್ಮಾ ನಿಸಿದ್ದರು. ಇನ್ನು ಸುನಕ್ ವಿಚಾರಕ್ಕೆ ಬರುವುದಾದರೆ ಆತನಲ್ಲಿದ್ದ ಕಾರ್ಯಕೌಶಲ ಅನನ್ಯವಾದದ್ದು. ಜಾನ್ಸನ್ ಆಡಳಿತ ಕೊನೆಗೊಂಡಾಗ ಕನ್ಸರ್ವೇಟಿವ್ ಎಂ.ಪಿ.ಗಳು ಈತನಲ್ಲಿ ನಾಯಕನನ್ನು ಕಂಡಿದ್ದರು.
ಅಸಾಧಾರಣವೆನಿಸುವ ಅಡಚಣೆಗಳನ್ನು ಎದುರಿಸುವಲ್ಲಿ ಈತನಿಗಿದ್ದ ಚತುರತೆಯನ್ನು ಕೂಡ ಎಲ್ಲರೂ ಗಮನಿಸಿದ್ದರು. ಮಾರ್ಗರೆಟ್ ಥ್ಯಾಚರ್ ಯಾವ ರೀತಿಯಲ್ಲಿ ಸವಾಲಿನ ಸಂದರ್ಭಗಳನ್ನು ಎದುರಿಸಿ ಮುನ್ನುಗ್ಗಿದ್ದರೋ ಅಂತೆಯೇ ಸುನಕ್
ಬಗ್ಗೆಯೂ ಜನಪ್ರೀತಿ ಹೆಚ್ಚಿತ್ತು. ಭಾರತೀಯ ಮೂಲದವರಾಗಿದ್ದು, ಬ್ರಿಟಿಷ್ ಸಂಜಾತ ರಾಜಕಾರಣಿಯಾಗಿ, ಕನ್ಸರ್ವೇಟಿವ್ ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದ ಸುನಕ್, ಆಯ್ಕೆಯಾಗಿ ಬಂದಿದ್ದು ಯಾರ್ಕ್‌ಶೈರ್‌ನ
ರಿಚ್ಮಂಡ್ ಎಂಬ ಗ್ರಾಮೀಣ ಕ್ಷೇತ್ರದಿಂದ.
ಅಲ್ಲಿ ಏಷಿಯನ್ ಮೂಲದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಈ ವ್ಯಕ್ತಿ ಹಿಂದುತ್ವದ ಪ್ರತಿಪಾದಕ, ಸಸ್ಯಾಹಾರಿ ಮತ್ತು ದುರಭ್ಯಾಸಗಳಿಂದ ಮುಕ್ತನಾದ ವ್ಯಕ್ತಿ. ಇವರ ಅಪ್ಪ ಒಬ್ಬ ವೈದ್ಯ, ಅಮ್ಮ ಒಂದು ಔಷಧಿ ಅಂಗಡಿಯನ್ನು ಸೌತಾಂಪ್ಟನ್‌ನಲ್ಲಿ ನಡೆಸುತ್ತಿದ್ದರು. ಈತ ಓದಿದ್ದು ವಿಂಚೆಸ್ಟರ್ ಕಾಲೇಜಿನಲ್ಲಿ. ಪಟೌಡಿಯ ನವಾಬ್ ಕೂಡ ಓದಿದ್ದು ಅದೇ ಕಾಲೇಜಿನಲ್ಲಿ. ತದ ನಂತರದಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದುಕೊಂಡರು.
ರಾಜಕೀಯಕ್ಕೆ ಬರುವ ಮುನ್ನ ಇವರು ಗೋಲ್ಸ್‌ಮನ್ ಸಾಚ್ಸ್ ಕಂಪನಿಯಲ್ಲಿ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ
ಉನ್ನತ ಹುದ್ದೆಯಲ್ಲಿದ್ದರು. ವಾಸ್ತವಿಕವಾಗಿ ಸುನಕ್ ಒಬ್ಬ ಯಶಸ್ವಿ ರಾಜಕಾರಣಿ. ಆತನಿಂದ ಕನ್ಸರ್ವೇಟಿವ್ ಪಕ್ಷಕ್ಕೆ ಸಾಕಷ್ಟು ಲಾಭವಾಗಿದೆ, ಆತ ಪಕ್ಷಕ್ಕೆ ಮೌಲ್ಯ ತುಂಬಿದ ವ್ಯಕ್ತಿ ಎಂಬುದು ನಿಜವೇ ಆದರೂ ನಾಯಕನಾಗುವುದು ಅಷ್ಟು ಸುಲಭದ
ಮಾತಾಗಿರಲಿಲ್ಲ.
ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇವರಿಗಿರುವ ಕೌಶಲ ಪಕ್ಷದಲ್ಲಿ ಎತ್ತರಕ್ಕೇರುವಂತೆ ಮಾಡಿತು ಎಂಬುದು ಚರ್ಚೆಯಾಗುತ್ತಿರುವ ವಿಚಾರ. ಮಾರುಕಟ್ಟೆ ಮತ್ತು ಆರ್ಥಿಕ ಸಂಗತಿಗಳ ಕುರಿತಾಗಿ ಸಕ್ಷಮ ವಿಧಾನದಲ್ಲಿ ಕೆಲಸಮಾಡಿ ಯಶ ಗಳಿಸಬಲ್ಲ ವ್ಯಕ್ತಿ ಬೇಕಾ ಗಿತ್ತು. ಆರ್ಥಿಕ ಸಬಲತೆಯನ್ನು ಉಳಿಸಿಕೊಳ್ಳುವ ವ್ಯಕ್ತಿಯ ಅಗತ್ಯವೂ ಇತ್ತು. ಹಾಗಾಗಿ ಸುನಕ್‌ಗಿಂತ ಉತ್ತಮ ಆಯ್ಕೆ ಬೇರಾರೂ ಆಗಿರಲು ಸಾಧ್ಯವಿರಲಿಲ್ಲ.
‘ರೋಡ್ ಟು ಸಮ್‌ವೇರ್’ ಎಂಬ ತನ್ನ ಪುಸ್ತಕದಲ್ಲಿ ಡೇವಿಡ್ ಗುಡ್ ಹಾರ್ಟ್ ಎರಡು ಬಗೆಯ ಸಾರ್ವಜನಿಕ ವ್ಯಕ್ತಿತ್ವಗಳ ಬಗ್ಗೆ ಉಲ್ಲೇಖಿಸಿದ್ದ. 2022ರಲ್ಲಿ ಬ್ರಿಟನ್ ವಿಪಥನದ ಹಾದಿಯಲ್ಲಿತ್ತು. ಅದಕ್ಕೊಬ್ಬ ಸಮರ್ಥ ವ್ಯಕ್ತಿ ನಾಯಕನಾಗಬೇಕಿತ್ತು. ಹಾಗಾಗಿ ಸುನಕ್ ಆಯ್ಕೆ ಸಮಯೋಚಿತವಾಗಿ ಆಗಿದೆ.