ಪ್ರಚಲಿತ
ಚಂದ್ರಶೇಖರ ಬೇರಿಕೆ
chandrashekharaberike@gmail.com
‘ಮಂಡ್ಯ’ ಈ ದೇಶದ ಲೋಕಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವಷ್ಟೇ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರವದು. ಆಗಿನ ಮುಖ್ಯಮಂತ್ರಿಯ ಕರುಳಕುಡಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದರಿಂದ ಆಗ ರಾಜ್ಯದ ಇಡೀ ಆಡಳಿತ ಯಂತ್ರವೇ ಇಲ್ಲಿಗೆ ಶಿಫ್ಟ್ ಆಗಿತ್ತು.
ಅಲ್ಲದೇ ಆ ಅಭ್ಯರ್ಥಿ ಮಾಜಿ ಪ್ರಧಾನಿಯ ಮೊಮ್ಮಗನೂ ಆಗಿದ್ದರಿಂದ ಆ ಇಡೀ ಕುಟುಂಬವೇ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ತನ್ನೆ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡರೂ, ಭಯಂಕರ ಚುನಾವಣಾ ರಣನೀತಿಯನ್ನು ಹೆಣೆದರೂ, ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಬಳಸಿ ಕೊನೆಗೆ ಸುಮಲತಾ’ ಎಂಬ ಎದುರಾಳಿಯ ಹೆಸರಿನಿಂದಲೇ ಯುದ್ಧಾಸ್ತ್ರವನ್ನು ಪ್ರಯೋಗಿಸಿ ಕದನ ಕಣದಲ್ಲಿ ಜೋಡೆತ್ತು ಗಳು ಕಣ್ಣೀರು ಸುರಿಸಿಕೊಂಡು ‘ಯರ್ರಾ-ಬಿರ್ರಿ’ ಓಡಿ ಧೂಳೆಬ್ಬಿಸಿದ್ದರೂ ಕೊನೆಗೆ ರಣರಂಗವನ್ನು ಬೇಧಿಸಿ ಪರಾಕ್ರಮಿಸಿದ್ದು ಸುಮಲತಾ ಅಂಬರೀಶ್ ಎಂಬ ‘ಸ್ವಾಭಿಮಾನಿ ಸ್ವತಂತ್ರ’ ಮಹಿಳೆ.
ದೇಶಾದ್ಯಂತ ಏಕಕಾಲಕ್ಕೆ ಬಿರುಸಿನ ಮತ ಎಣಿಕೆ ನಡೆಯುತ್ತಿದ್ದರೂ ದೇಶದ ಚಿತ್ತ ದೆಹಲಿಯತ್ತ ಎನ್ನುವು ದಕ್ಕಿಂತಲೂ ದೇಶದ ಚಿತ್ತ ಮಂಡ್ಯದತ್ತ ಎನ್ನುವಷ್ಟು ಕುತೂಹಲ ವನ್ನು ಕೆರಳಿಸಿದ್ದ ಕ್ಷೇತ್ರವದು. ಈಗ ಅದೇ ಮಂಡ್ಯ ಮತ್ತೆ ಸುದ್ದಿ ಮಾಡಿದೆ. ಆದರೆ ಈಗಿನ ಕದನ ಕಾರಣ ಮಾತ್ರ ಬೇರೆ. ಮಂಡ್ಯ ಸಾಮ್ರಾಜ್ಯದಲ್ಲಿ ನಾವೇ ಅಽಪತ್ಯವನ್ನು ಸ್ಥಾಪಿಸಬೇಕು, ಅಲ್ಲಿ ನಮ್ಮದೇ ಪ್ರಾಬಲ್ಯವಿರಬೇಕು ಮತ್ತು ರಾಜ್ಯಭಾರವಿರಬೇಕು ಎಂಬುದು 2019ರ ಯುದ್ಧದಲ್ಲಿ ಪರಾಭವಗೊಂಡ ವಂಶ ಪಾರಂಪರ್ಯ ಪಡೆಯ ನಿರಂತರ ಉತ್ಸುಕತೆಯಾದರೆ ಅದಕ್ಕೆ ಸೆಡ್ಡು ಹೊಡೆದು ತನ್ನ ಅಸ್ತಿತ್ವವನ್ನು ಸಾಬೀತು ಮಾಡಬೇಕು ಎಂಬುದು ಸ್ವಾಭಿಮಾನಿ ಪಡೆಯ ಇಂಗಿತ.
‘ಕೆಆರ್ಎಸ್ ಜಲಾಶಯ ಬಿರುಕು ಬಿಟ್ಟಿದೆ’. ಮಂಡ್ಯದ ಹಾಲಿ ಸಂಸದೆಯ ಈ ಒಂದು ಹೇಳಿಕೆ ಜಲಾಶಯದ ಸುತ್ತಮುತ್ತಲಿನ ರೈತರಲ್ಲಿ ತಲ್ಲಣ ಸೃಷ್ಟಿಸಿದರೆ ಕೆಳಭಾಗದ ಜನರಿಗೆ ಜಲಾಶಯದ ನೀರಿನಿಂದ ಮುಳುಗಡೆಯಾಗುವ ಭೀತಿಯನ್ನು ಸೃಷ್ಟಿಸಿದೆ. ದೈನಂದಿನ ಜೀವನಕ್ಕೆ ಈ ಜಲಾಶಯದ ನೀರನ್ನು ಅವಲಂಬಿ ಸಿರುವ ಫಲಾನುಭವಿಗಳ ಬಾಯಿಗೆ ನೀರಿಲ್ಲದಾಗುವ ಆತಂಕ ಒಂದು ಕಡೆಯಾದರೆ ಪ್ರವಾಸಿಗರಿಗೆ ಒಂದು ಪ್ರವಾಸಿ ತಾಣವನ್ನು ಕಳೆದುಕೊಳ್ಳುವ ಸಂಕಟ. ಅದಕ್ಕಿಂತಲೂ ಹೆಚ್ಚಾಗಿ ಕಾವೇರಿ ನೀರಿಗಾಗಿ ನಿರಂತರ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡಿಗರು ತಮ್ಮ ಹೋರಾಟದ ದಿಕ್ಕನ್ನು ಬದಲಿಸಬೇಕಾದ ಪರಿಸ್ಥಿತಿ.
ಸಾಮಾನ್ಯ ಜನರು ಕೆಆರ್ಎಸ್ ಜಲಾಶಯದ ಬಿರುಕಿನ ಬಗ್ಗೆ ತಲೆ ಕೆಡಿಸಿಕೊಂಡರೆ ಈ ಯುದ್ಧ ನಿರತ ಎರಡು ಪಡೆಗಳು ಕೆಆರ್ಎಸ್ ಪಕ್ಕದ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಜಮಾವಣೆಗೊಂಡಿದೆ. ಇದರಲ್ಲಿ ಒಂದು ಪಡೆ ಗಣಿಗಾರಿಕೆಯನ್ನು ಮುಚ್ಚಿಟ್ಟು ಸಂಸದೆಯನ್ನು ಗುರಿಯಾಗಿಸಿಕೊಂಡರೆ ಇನ್ನೊಂದು ಪಡೆ ಗಣಿಗಾರಿಕೆ ಯನ್ನು ಮುಚ್ಚಿಸಿ ಜಲಾಶಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಕೆಆರ್ಎಸ್ ಪಕ್ಕದ ಬೇಬಿಬೆಟ್ಟ ಮತ್ತು ಆಸುಪಾಸಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಮತ್ತು ಇದರಿಂದ ಕೆಆರ್ಎಸ್ ಜಲಾಶಯಕ್ಕೆ ಧಕ್ಕೆ ಇದೆ ಎಂಬ ಬಗ್ಗೆ ಉಖವಿದೆ ಮತ್ತು ಇದರ ವಿರುದ್ಧ ಸ್ಥಳೀಯ ಜನರು ಧ್ವನಿ ಎತ್ತಿರುವ ಬಗ್ಗೆಯೂ ಮಾಹಿತಿಯಿದೆ.
ಕಲ್ಲು ಗಣಿಗಾರಿಕೆಗಾಗಿನ ಬೆಂಚ್ ಬ್ಲಾ ಕಾರಣದಿಂದಾಗಿ ಜಲಾಶಯಕ್ಕೆ ತೊಂದರೆ ಆಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಜಿಯಾಲಾಜಿಕಲ್ ಇಲಾಖೆಯ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ. 2016ರಲ್ಲಿ ಬೇಬಿಬೆಟ್ಟ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿಕೊಂಡು ‘ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ’ಯನ್ನು ರಚಿಸಿ ಕೊಂಡು ಮುಖ್ಯಮಂತ್ರಿ, ರಾಜ್ಯಪಾಲರು, ರಾಜ್ಯ ಮತ್ತು ಕೇಂದ್ರ ಗಣಿ ಸಚಿವರು, ಪ್ರಧಾನ ಮಂತ್ರಿ, ರಾಷ್ಟ್ರಪತಿ ಸೇರಿದಂತೆ ಹಲವರಿಗೆ ಬರೆದ ಪತ್ರಕ್ಕೆ ಉತ್ತರವೇ ಬಂದಿಲ್ಲ ಎಂಬ ವರದಿಯಿದೆ. ಜಿಡಳಿತ, ಸ್ಥಳೀಯಾಡಳಿತಗಳಿಗೆ ಮತ್ತು ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ದೂರು ನೀಡಿದ ಬಗ್ಗೆಯೂ ಉಖವಿದೆ. ಅಲ್ಲದೇ
ಲೋಕಾ ಯುಕ್ತ, ಎಸಿಬಿ, ಸಿಐಡಿಯಿಂದ ತನಿಖೆ ನಡೆದಿರುವ ಬಗ್ಗೆಯೂ ಮಾಹಿತಿಯಿದೆ.
ಗಣಿ ಪ್ರದೇಶದಲ್ಲಿ ಸಂಶಯಾಸ್ಪದ ವಾಗಿ ಸಾಯುತ್ತಿದ್ದ ಕಾರ್ಮಿಕರ ಪರವಾಗಿ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿರುವ ಬಗ್ಗೆ ವರದಿಯಿದೆ.
ಈ ಎಲ್ಲಾ ಪ್ರಯತ್ನಗಳ ಮಧ್ಯೆಯೂ ಈ ಕಲ್ಲು ಗಣಿಗಾರಿಕೆಯ ವಿರುದ್ಧ ಇಲ್ಲಿಯವರೆಗೆ ಸೂಕ್ತ ಕ್ರಮ ಜರುಗಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗಣಿ ಲಾಬಿಯ ಮುಂದೆ ಜಲಾಶಯ, ಪರಿಸರ ಮತ್ತು ಜನರ ಬಗ್ಗೆ ಕಾಳಜಿ ವಹಿಸುವವರೇ ಇಲ್ಲವಾದರು ಎಂಬುದು ಮತ್ತೊಂದು ವಿಚಾರ.
ಕೆಆರ್ಎಸ್ ಪಕ್ಕದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಅಂಕುಶ ಹಾಕಲು ಪ್ರಯತ್ನದ ಮುಂದುವರೆದ ಭಾಗವಾಗಿ ಈಗ ಸಂಸದೆ ಸುಮಲತಾ ಅವರು ಕಾರ್ಯೋನ್ಮು ವಾಗಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಗಮನವನ್ನು ಸೆಳೆದಿದ್ದರು. ಅಲ್ಲದೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಕೆಆರ್ಎಸ್ ಜಲಾಶಯವನ್ನು ಅಕ್ರಮ ಗಣಿಗಾರಿಕೆಯಿಂದ ರಕ್ಷಿಸುವಂತೆ ಮನವಿ ಸಲ್ಲಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ದೂರು ನೀಡಿದ್ದಾರೆ.
ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ವಿಶ್ವವಾಣಿ ಕ್ಲಬ್ ಹೌಸ್, ಜುಲೈ 7, 2021ರಂದು ಆಯೋಜಿಸಿರುವ ‘ಮಂಡ್ಯ ಮಗಳೊಂದಿಗೆ ಮಾತುಕತೆ’ ಕಾರ್ಯಕ್ರಮ
ದಲ್ಲಿ ಪಾಲ್ಗೊಂಡು ಮಾತಾಡಿದ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ರಾಜಕಾರಣದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಬಿಚ್ಚಿಟ್ಟರು.
ಭ್ರಷ್ಟಾಚಾರದ ವಿರುದ್ಧ ಮಾತಾಡಿದರೆ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ಮಹಿಳೆಯರು ಉನ್ನತ ಸ್ಥಾನದಲ್ಲಿದ್ದರೆ ಕೆಲವರಿಗೆ ಜೀರ್ಣಿಸಿಕೊಳ್ಳಲು
ಆಗುವುದಿಲ್ಲ. ಒಂದು ವೇಳೆ ಸಂಸದರನ್ನು ವರ್ಗಾವಣೆ ಮಾಡಲು ಅವಕಾಶವಿದ್ದರೆ ನನ್ನನ್ನೂ ಬದಲಾಯಿಸುತ್ತಿದ್ದರು ಎಂದೂ ಹೇಳಿದ್ದರು.
ಅಕ್ರಮ ಗಣಿಗಾರಿಕೆ ಯನ್ನು ಪ್ರಶ್ನಿಸಿದವರನ್ನೇ ಪ್ರಶ್ನಿಸಿದರೆ ಇದರ ಅರ್ಥವೇನು ಎಂದು ಪ್ರಶ್ನಿಸುತ್ತಾ ಈ ಗಣಿಗಾರಿಕೆಯ ಹಿಂದೆ ಯಾರಿದ್ದಾರೆ ಮತ್ತು ಇದರ ಫಲಾನುಭವಿಗಳು ಯಾರು ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಮುಂದುವರೆದು ಈ ನನ್ನ ಹೋರಾಟಕ್ಕೆ ಕ್ಷೇತ್ರದ ಜನರು ಗೌಪ್ಯವಾಗಿ ಬೆಂಬಲ ಸೂಚಿಸು ತ್ತಾರೆ. ಆದರೆ ಮುಂದೆ ಬಂದು ಬಹಿರಂಗ ವಾಗಿ ಸಹಕಾರ ನೀಡಲು ಹಿಂದೇಟು ಹಾಕುತ್ತಾರೆ ಎನ್ನುತ್ತಾ ತಾವು ಎದುರಿಸುತ್ತಿರುವ ಸಂದಿಗ್ಧ ಸನ್ನಿವೇಶ ಗಳನ್ನು ಮತ್ತು ಏಕಾಂಗಿ ಹೋರಾಟದ ವಿಚಾರವನ್ನು ಮುಂದಿಟ್ಟರು.
ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಪಾತ್ರವೇ ದೊಡ್ಡದು. ರಾಜಕಾರಣಿಗಳಿಗೆ ಸಾಥ್ ನೀಡುವವರು ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿ ವರ್ಗ. ಗಣಿ ಉದ್ಯಮಿಗಳಿಂದ ಲಂಚ ಪಡೆಯುವ ಅಽಕಾರಿಗಳು ಈ ಅಕ್ರಮಗಳಿಗೆ ಪರೋಕ್ಷ ಸಹಕಾರ ನೀಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಮಲತಾ ಅವರಿಗೆ ಬಹಿರಂಗ ಬೆಂಬಲ ಸೂಚಿಸಿ ಅವರ ಪರವಾಗಿ ಪ್ರಚಾರ ಮಾಡಿದ ಮುಖಂಡರು, ಕಾರ್ಯಕರ್ತರು ಈ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸುಮಲತಾ ಅವರಿಗೆ ಬಹಿರಂಗವಾಗಿ ಧ್ವನಿಗೂಡಿಸಿಲ್ಲ.
ಮಂಡ್ಯದ ಗಣಿಗಾರಿಕೆ ವಿಚಾರದಲ್ಲಿ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದು ರಾಜ್ಯ ರೈತ ಸಂಘ ಮಾತ್ರ. ಕೆಆರ್ಎಸ್ ಜಲಾಶಯದ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಪೂರ್ಣ ನಿಷೇಧ ಆಗಬೇಕು. ಕೆಆರ್ಎಸ್ ಉಳಿಸಲು ಗಣಿಗಾರಿಕೆ ನಿಷೇಧಕ್ಕೆ ನಡೆಯುವ ಯಾವುದೇ ಹೋರಾಟಕ್ಕೂ
ಬೆಂಬಲ ಇದೆ ಎಂಬುದನ್ನು ರಾಜ್ಯ ರೈತ ಸಂಘ ಹೇಳಿದೆ. ಇದರ ಹೊರತಾಗಿ ಸುಮಲತಾ ಅವರಿಗೆ ಪ್ರತ್ಯಕ್ಷವಾಗಿ ಯಾರೂ ಬೆಂಬಲ ವ್ಯಕ್ತಪಡಿಸಿಲ್ಲ. ಕರ್ನಾಟಕ ಸರಕಾರವೂ ಸುಮಲತಾ ಅವರ ಹೋರಾಟಕ್ಕೆ ಧೈರ್ಯ ತುಂಬುವ ಪ್ರಯತ್ನವನ್ನು ಮಾಡಿಲ್ಲ. ಯಾಕೆಂದರೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಗಣಿಗಾರಿಕೆಯ ಫಲಾನುಭವಿಗಳು ಇದ್ದು, ಬೇರೆ ಬೇರೆ ರಾಜಕೀಯ ಪಕ್ಷಗಳ ಮುಖಂಡರುಗಳು ಒಟ್ಟಾಗಿ ಪಾಲುದಾರಿಕೆಯಲ್ಲಿ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ.
ಜನವರಿ 21, 2o21ರಂದು ಶಿವಮೊಗ್ಗದ ಅಬ್ಬಿಗೆರೆ ಸಮೀಪದ ಹುಣಸೋಡಿನಲ್ಲಿ ಕಲ್ಲು ಕ್ರಷರ್ ಗಣಿಯಲ್ಲಿ ಮತ್ತು ಫೆಬ್ರವರಿ 23, 2021ರಂದು ಚಿಕ್ಕಬಳ್ಳಾಪುರ ಜಿಯ ಮಂಡಿಕಲ್ ಹೋಬಳಿಯ ಹೀರೆನಾಗವೇಲಿ ಗ್ರಾಮದ ಬಳಿಯ ಕಲ್ಲು ಗಣಿಯಲ್ಲಿ ನಡೆದ ಜಿಲೆಟಿನ್ ಸ್ಪೋಟ ದುರಂತಗಳು ಮಾಧ್ಯಮ ವರದಿಗೆ ಸೀಮಿತ ವಾಯಿತೇ ಹೊರತು ಈ ಘಟನೆಯ ವಿರುದ್ಧ ಮತ್ತು ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡ ಬಗ್ಗೆ ಮಾಹಿತಿಯಿಲ್ಲ.
ರಾಜ್ಯದಲ್ಲಿ ಇಲ್ಲಿವರೆಗೆ 450 ಅಲಂಕಾರಿಕ ಕಲ್ಲು ಕ್ವಾರಿಗಳು ಹಾಗೂ 300 ಸಾಮಾನ್ಯ ಕಲ್ಲು ಕ್ವಾರಿಗಳಿಗೆ ಅನುಮತಿ ನೀಡಲಾಗಿದ್ದು, ರಾಜ್ಯದಲ್ಲಿ ಸುಮಾರು 2000 ಅಕ್ರಮ ಕಲ್ಲು ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವರದಿಯಿದೆ. ಆದರೆ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ವಾಸ್ತವಾಂಶವನ್ನು 2019ರ ಸಿಎಜಿ ವರದಿ ಹೇಳಿದೆ. ಈ ಅಕ್ರಮದಿಂದಾಗಿ ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ನೂರಾರು ಕೋಟಿ ರುಪಾಯಿಗಳ ರಾಯಧನ ಗಣಿ ಮಾಫಿಯಾದ ಪಾಲಾಗುತ್ತಿದೆ.
ಮಂಡ್ಯದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಕಾದಾಟ ಮತ್ತು ವಿದ್ಯಮಾನವು ರಾಜಕೀಯ ಪಕ್ಷಗಳ ಅವಕಾಶವಾದಿ ರಾಜಕಾರಣಕ್ಕಿಂತ ಭಿನ್ನವಾಗಿ
ಸ್ವಾಭಿಮಾನದ ಸ್ವತಂತ್ರ ಹೋರಾಟವಾಗಿ ಕಾಣುತ್ತಿದೆ. ಕೆಆರ್ಎಸ್ ಜಲಾಶಯದಲ್ಲಿ ಬಿರುಕು ಎಂಬುದು ಇಲ್ಲಿ ಒಂದು ಪ್ರಾಸಂಗಿಕ ವಿಚಾರ ಮತ್ತು ಈ ಒಟ್ಟಾರೆ
ವಿವಾದದಲ್ಲಿ ಒಂದು ವಸ್ತು ವಿಷಯ. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ಹೊರಜಗತ್ತಿಗೆ ಕಾಣದ ಒಂದು ದೊಡ್ಡ ಮಾಫಿಯಾವನ್ನು ಬಯಲಿಗೆಳೆಯಲು ಸಂಸದೆ ಪ್ರಯತ್ನಿಸುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ. ಈ ಸಂದರ್ಭದಲ್ಲಿ ನಮ್ಮಲ್ಲಿ ಮೂಡುವ ಒಂದು ಜಿಜ್ಞಾಸೆಯೆಂದರೆ ಒಂದು ವೇಳೆ ಹಾಲಿ ಸಂಸದೆ ಯಾವುದೋ ರಾಜಕೀಯ ಪಕ್ಷದಿಂದ ಮಂಡ್ಯ ಕ್ಷೇತ್ರವನ್ನು ಪ್ರತಿನಿಽಸುತ್ತಿದ್ದರೆ ಕೆಆರ್ಎಸ್ ಸುತ್ತಮತ್ತಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಒಳಹೊಕ್ಕುತ್ತಿ
ದ್ದರೇ ಎಂಬುದು.
ಈಗಿನ ಕಲಬೆರಕೆ ಪಕ್ಷಗಳ ನಡುವಿನ ಹೊಂದಾಣಿಕೆ ರಾಜಕಾರಣದಲ್ಲಿ ಜನಪ್ರತಿನಿಧಿಗಳು ಪ್ರತಿನಿಧಿಸುತ್ತಿರುವ ಯಾವುದೇ ರಾಜಕೀಯ ಪಕ್ಷ ಇಷ್ಟು ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡುತ್ತಿತ್ತೇ? ಅಲ್ಲಿಯ ಪರಿಸರ ವಿರೋಧಿ ಕೃತ್ಯಗಳು ಬಾಹ್ಯ ಜಗತ್ತಿಗೆ ತಿಳಿಯಲು ಸಾಧ್ಯವಾಗುತ್ತಿತ್ತೇ? ಹೀಗಾಗಿ ಅವರು ರಾಜಕೀಯ ಪಕ್ಷದ ಚೌಕಟ್ಟಿನ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ, ಒತ್ತಡ ಎದುರಾಗುತ್ತಿತ್ತು. ಪಕ್ಷದಿಂದ ಜನಪ್ರತಿನಿಧಿಯಾದವರು ಪಕ್ಷದ ಹಿತಾಸಕ್ತಿ’ ಯನ್ನು ಕಾಪಾಡಲು ಬದ್ದರಾಗಿರಬೇಕಾಗುತ್ತದೆ.
ಒಂದು ವೇಳೆ ಪಕ್ಷದಿಂದ ಜನಪ್ರತಿನಿಧಿಯಾದವರು ಇಂತಹ ಮುಕ್ತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಹೊಂದಿರುತ್ತಿದ್ದರೆ ಪೂರ್ತಿ ಮಂಡ್ಯದ ಜನತೆಗೆ ಪೂರ್ಣವಾಗಿ ಅರಿವಿಲ್ಲದ ಕೆಆರ್ಎಸ್ ಬಳಿಯ ರಹಸ್ಯ ಗಣಿಗಾರಿಕೆ ವಿಚಾರಗಳು ಇಡೀ ರಾಜ್ಯಕ್ಕೆ ತಿಳಿಯಲು ಇಷ್ಟು ವರ್ಷಗಳು ಬೇಕಾಯಿತೇ? ಸುಮಲತಾ ಅಂಬರೀಶ್ ಅವರು ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪಽಸುತ್ತಾರೋ ಇಲ್ಲವೋ? ಸ್ಪರ್ಧಿಸಿದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ ಇಲ್ಲವೋ? ಕಾಲವೇ ಉತ್ತರಿಸಲಿದೆ.
ಆದರೆ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿ ಸ್ವಾಭಿಮಾನಿಯಾಗಿಯೇ ಇರಲಿ ಮತ್ತು ಈ ನಿಟ್ಟಿನಲ್ಲಿ ಮಂಡ್ಯದ ಜನತೆ ಅವರಿಗೆ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ.