Thursday, 19th September 2024

ಹೆಂಡ್ತಿ ಊರಿಗೆ ಹೋದ್ರೆ ಗಂಡನಿಗೆ ಸ್ವಿಗ್ಗಿ ಕಾಲ

ತುಂಟರಗಾಳಿ

ಸಿನಿಗನ್ನಡ 

ರಿಶಭ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾ ಸೌಂಡು ಮಾಡುತ್ತಿದೆ. ಈ ಸಿನಿಮಾನಾ ನೋಡಿದವರೆ ಐ ಲೈಕ್ ಇಟ್ ಕಾಂತಾರಾ ಅನ್ನುತ್ತಿದ್ದಾರೆ. ಹಾಗೆ ನೋಡಿದರೆ ಈ ಸಿನಿಮಾ ಇಷ್ಟ ಆಗಿಲ್ಲ ಅನ್ನೋವ್ರು ಯಾರಾದ್ರೂ ಒಬ್ರಾದ್ರೂ
ಕಾಣ್ತಾರಾ ಅನ್ನೋ ಲೆವೆಲ್ಲಿಗೆ ಜನ ಇದನ್ನು ಇಷ್ಟಪಟ್ಟಿದ್ದಾರೆ. ಸಿನಿಮಾದ ಜೊತೆಗೆ ರಿಶಬ್ ಶೆಟ್ಟಿ ಅವರ ಅಭಿನಯಕ್ಕೂ ಜನ ಫುಲ್ ಮಾರ್ಕ್ಸ್ ಕೊಡ್ತಾ ಇದ್ದಾರೆ.

ಇದು ಮಾಮೂಲಿಯಾಗಿ ಶೆಟ್ಟರ ಬಳಗದ ಸಿನಿಮಾ ರಿಲೀಸ್ ಆದಾಗ ಕಂಡು ಬರೋ ಫೇಕ್ ಹೈಪ್ ಅಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ಯಾಕಂದ್ರೆ ಮಾಮೂಲಿಯಾಗಿ ಕರಾವಳಿ ಕಡೆಯವರ ಸಿನಿಮಾ ರಿಲೀಸ್ ಆದಾಗ ಅವರ ಕಡೆಯವರ ಹಾವಳಿ ಜಾಸ್ತಿನೇ ಇರುತ್ತೆ. ಈ ಹಿಂದೆ ಕೂಡಾ ರಿಷಬ್ ಶೆಟ್ಟಿ ಅವರ ಹೀರೋ, ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗಳಿಗೂ ಎಲ್ಲಾ ಕಡೆ ಅಬ್ಬರದ ಮಾತೇ ಕೇಳಿಬಂದಿತ್ತು. ಆದರೆ ಆ ಸಿನಿಮಾಗಳು ಕಚ್ಚಿಕೊಳ್ಳಲಿಲ್ಲ.

ಹಾಗೆಯೇ ಗರುಡಗಮನ ವೃಷಭ ವಾಹನ ಸಿನಿಮಾಕ್ಕೂ ಆಸ್ಕರ್ ಬರುತ್ತೆ ಅನ್ನೋ ಲೆವೆಲ್ಲಿನ ಮಾತುಗಳು ಕೇಳಿಬಂದಿದ್ದವು. ಆದರೆ ಅಂಥದ್ದೇನೂ ಆಗಲಿಲ್ಲ. ಆದರೆ ಕಾಂತಾರ ಬೇರೆಯದ್ದೇ ಲೆವೆಲ್ಲಿನ ಹವಾ ತೋರಿಸುತ್ತಿದೆ. ತನ್ನ ಹಿಂದೆ ಬಿಡುಗಡೆ ಆದ ಮಾನ್ಸೂನ್ ರಾಗ, ಗುರು ಶಿಷ್ಯರು ಚಿತ್ರಗಳ ಹವಾ ಕಡಿಮೆ ಮಾಡುವ ಮಟ್ಟಕ್ಕೆ ಕಾಂತಾರ ಸದ್ದು ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಜಾಕ್ ಪಾಟ್ ಹೊಡೆದಿದೆ. ಕಾಂತಾರದ ಸದ್ದು ಭಾರತದ ತುಂಬ ಕೇಳುವಂತಾಗಲಿ.

ಲೂಸ್ ಟಾಕ್
ರಾಹುಲ್ ಗಾಂಧಿ (ಕಾಲ್ಪನಿಕ ಸಂದರ್ಶನ)
ಏನ್ ರಾಹುಲ್ ಅವ್ರೇ, ರಾಜಕೀಯದಲ್ಲಿ ತುಂಬಾ ಆಕ್ಟಿವ್ ಆಗಿಬಿಟ್ಟಿದ್ದೀರಲ್ಲ?
-ಹೌದು, ರಾಹು ಕಾಲ ಮುಗೀತು, ಇನ್ಮೇಲೆ ಏನಿದ್ರೂ ರಾಹುಲ್ ಕಾಲ ಅಂತ ತೋರಿಸ್ತಾ ಇದ್ದೀನಿ

ಸರಿ, ಈ ಐಕ್ಯತಾ ಯಾತ್ರೆ ಮಾಡೋದ್ರ ಉದ್ದೇಶ ಏನು?

-ಏನಿಲ್ಲ, ನನ್ನ ಐಕ್ಯೂ ಬಗ್ಗೆ ಬಿಜೆಪಿಯವರು ಕಾಮಿಡಿ ಮಾಡ್ತಾ ಇದ್ರು, ಅದಕ್ಕೆ ಅದನ್ನ ಪ್ರೂವ್ ಮಾಡೋಕೆ ಈ ಐಕ್ಯತಾ ಯಾತ್ರೆ

ಸರಿ ಹೋಯ್ತು, ಅದ್ಸರಿ, ಈ ಥರ ಕಾಲ್ನಡಿಗೆ ಮಾಡಿದ್ರೆ, ಅವರು ನಿಮ್ಮನ್ನ ಕೈಲಾಗದವರು ಅಂತ ಆಡಿಕೊಳ್ಳೋದಿಲ್ವೇ?
-ಹಲೋ. ನಮ್ಮ ಪಕ್ಷದ ಸಿಂಬಲ್ ಕೈ ಇರಬಹುದು, ಆದ್ರೆ ನಮ್ಮ ಕಾಲಲ್ಲೂ ಶಕ್ತಿ ಇದೆ ಅಂತ ತೋರಿಸೋದಕ್ಕೇ ಈ ಯಾತ್ರೆ ಮಾಡ್ತಾ ಇರೋದು.

ಬರೀ ಯಾತ್ರೆ ಮಾಡ್ತಾ ಇರ್ತೀರಾ ಅಥ್ವಾ ಕರ್ನಾಟಕದಲ್ಲಿ ಬಿಜೆಪಿ ಮಟ್ಟ ಹಾಕೋಕೆ ಏನಾದ್ರೂ ಮಾಡ್ತೀರಾ?
-ಮಾಡಿದ್ವಲ್ಲ ಮೊನ್ನೆ. ಪೇ ಸಿಎಂ ಪೋ ಹಾಕಿ, ಸ್ಕ್ಯಾನರ್ ಉಪಯೋಗಿಸಿಕೊಂಡು ಸ್ಕ್ಯಾಮರ್‌ಗಳ ಮರ್ಯಾದೆ ತೆಗೆದ್ವಲ್ಲ

ಓ, ಹೌದಲ್ಲಾ, ಸರಿ, ಹೀಗೆ ಪಾದಯಾತ್ರೆ ಮಾಡೋದ್ರಿಂದ ನಿಮಗೆ ಪದವಿ ಸಿಗುತ್ತೆ ಅಂತ ನಂಬಿಕೆ ಇದೆಯಾ?

-ನನ್ನತ್ರ ಪದವಿ ಆಗ್ಲೇ ಇದೆ. ಫೇಕ್ ಡಿಗ್ರಿ ತೋರಿಸ್ಕೊಂಡ್ ಓಡಾಡ್ತಾ ಇದ್ದಾರಲ್ಲ, ಹೋಗಿ, ಅವರನ್ನ ಹೇಳಿ ಇದನ್ನ.

ನೆಟ್ ಪಿಕ್ಸ್
ಖೇಮುಗೆ ಯಾವಾಗ್ಲೂ ಇನ್ನೊಬ್ಬರ ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೆ ‘ಮೈ ಫುಟ್’ ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು
ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ‘ಅಯ್ಯೋ, ಅದೇನ್ ಮಹಾ, ಮೈ ಫುಟ್’ ಅಂತಲೇ ಮಾತು ಶುರು ಮಾಡ್ತಾ ಇದ್ದ. ಹಾಗಾಗಿ ಖೇಮು ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ.

ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಖೇಮು
ಸಹೋದ್ಯೋಗಿಯಾಗಿದ್ದ ಸೋಮು ಬೆಳಗ್ಗೆನೇ ಬಂದವನು ಎಲ್ಲರಿಗೂ ಇಲ್ಲಿ ನೋಡಿ ಅಂತ ಒಂದು ಗಿಳಿ ತೋರಿಸುತ್ತಿದ್ದ. ಎಲ್ಲರೂ ಏನು ಈ ಗಿಳಿ ವಿಶೇಷ? ಅಂತ ಕೇಳಿದ್ರು. ಅದಕ್ಕೆ ಸೋಮು ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ ಅಂತ ಗಿಣಿಯನ್ನ ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ, ‘ಡೆಡ್ಲಿ ಗಿಣಿ, ಟೇಬಲ’ ಅಂದ.

ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್ ಅನ್ನು ಕುಕ್ಕಿ ಕುಕ್ಕಿ ಎರಡೇ ಕ್ಷಣದಲ್ಲಿ ಪುಡಿ ಮಾಡಿಬಿಡ್ತು. ಎಲ್ಲರೂ ದಂಗು ಬಡಿದು ಹೋದರು. ಆಫೀಸಿನ ಜವಾನ ‘ಡೆಡ್ಲಿ ಗಿಣಿ, ವಿಂಡೋ’ ಅಂದ. ಗಿಣಿ ಒಂದೇ ಕ್ಷಣದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿಬಿಡ್ತು. ಅಷ್ಟರಲ್ಲಿ ಖೇಮು ಆಫೀಸಿಗೆ ಬಂದ. ಎಲ್ಲರೂ ಸುತ್ತುವರೆದು ನಿಂತಿರೋದು ನೋಡಿ, ಏನ್ ನಡೀತಾ ಇದೆ ಇಲ್ಲಿ? ಅಂತ ಕೇಳಿದ. ಅದಕ್ಕೆ ಒಬ್ಬ ಎಂಪ್ಲಾಯಿ, ಸಾರ್ ಇದು ‘ಡೆಡ್ಲಿ ಗಿಣಿ’ ಅಂದ.

ಅದನ್ನು ಕೇಳಿದವನೇ ಖೇಮು ಎಂದಿನಂತೆ ಹೇಳಿದ ‘ಡೆಡ್ಲಿ ಗಿಣಿ? ಮೈ ಫುಟ್’.

ಲೈನ್ ಮ್ಯಾನ್

ಗುರು ಶಿಷ್ಯರು ಸಿನಿಮಾನ ಮಾಸ್ ಚಿತ್ರ ಅನ್ನೋಕಾಗಲ್ಲ
-ಯಾಕಂದ್ರೆ ಅದು ‘ಕ್ಲಾಸ್’ ಚಿತ್ರ
ಹೆಂಡ್ತಿ ಊರಿಗೆ ಹೋದಾಗ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋ ಗಂಡನಿಗೆ
ಅದು
-‘ಸ್ವಿಗ್ಗಿ’ ಕಾಲ
ಸರಕಾರ ಪೆಟ್ರೋಲ್ ಡೀಸೆಲ್ ರೇಟ್ ಜಾಸ್ತಿ ಮಾಡಿರೋದು ಪೊಲ್ಯೂಷನ್ ಕಮ್ಮಿ
ಮಾಡೋಕೆ
-ಹಾಗಾದ್ರೆ, ಕರೆಂಟ್ ಬಿಲ್ ಜಾಸ್ತಿ ಮಾಡಿರೋದು ಪಾಪ್ಯುಲೇಷನ್ ಜಾಸ್ತಿ ಮಾಡೋಕಾ?
ಕ್ವೆಶ್ಚನ್ ಪೇಪರ್ ಲೀಕ್ ಮಾಡಿ ಸಿಕ್ಕಿ ಹಾಕಿಕೊಂಡವರ ಕಥೆ
-ಪೊಲೀಸ್ನೋರು ಕೇಳೋ ಪ್ರಶ್ನೆಗಳನ್ನೂ ಯಾರಾದ್ರೂ ಲೀಕ್ ಮಾಡಿದ್ದಿದ್ರೆ ಬಚಾವ್ ಆಗ್ತಾ ಇದ್ವಿ

ಮತ್ತೆ ಮತ್ತೆ ಫಾರಿನ್ನಿಗೆ ಟ್ರಿಪ್ ಹೋಗೋ ಹುಚ್ಚು ಇರುವವರು

-‘ಅಬ್ರಾಡ್’ಮೈಂಡೆಡ್
ವೆಬೆಂಗಾಲ್‌ನಲ್ಲಿ ಕಸ ಹಾಕುವ ಜಾಗ
-‘ವೇ’ ಬೆಂಗಾಲ್
ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಉಪಯೋಗಿಸುವ ದೇಶ
-ಉಜ್ಬೇಕಿಸ್ತಾನ್
ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು
-‘ಬೂ’ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ!
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
-ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಗಾಂಧಾರಿಗೆ ನೂರು ಮಕ್ಕಳಾದಾಗ ಆಗಿದ್ದು
-‘ಬಸಿರು’ ಕ್ರಾಂತಿ