Sunday, 15th December 2024

ನಾವು ತಲೆ ಎತ್ತಿಕೊಂಡು ಬದುಕುವವರು- ತಾಲಿಬಾನ್

ತುಂಟರಗಾಳಿ

ಸಿನಿಗನ್ನಡ

ಮೇಕಿಂಗ್ ಈಸ್ ದಿ ಕಿಂಗ್ ಅಂತ ನಂಬಿ ಬರವಣಿಗೆಗಿಂತ ಮೇಕಿಂಗ್ ಅನ್ನೇ ಮೆರವಣಿಗೆ ಮಾಡಿಸೋ ಇಂದಿನ ದೊಡ್ಡ ಹೀರೋಗಳ ದೊಡ್ಡ ಬಜೆಟ್ ಚಿತ್ರಗಳಿಗೆ ಉತ್ತರ ಕೊಡೋ ಥರ ಒಂದು ಸಿನಿಮಾನ ಕೇವಲ ಬರವಣಿಗೆಯಿಂದಲೇ ಗೆಲ್ಲಿಸಬಹುದು ಅಂತ ತಮ್ಮ ಮೂರನೇ ಕೃಷ್ಣಪ್ಪ ಸಿನಿಮಾ ಮೂಲಕ ತೋರಿಸಿ ಕೊಟ್ಟಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ.

ನಮ್ಮ ರಾಜರುಗಳ ಲೆಕ್ಕದಲ್ಲಿ ಹೇಳೋ ದಾದ್ರೆ ಇಮ್ಮಡಿ ಪುಲಿಕೇಶಿ, ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಥರ ಇದು ಮುಮ್ಮಡಿ ಕೃಷ್ಣಪ್ಪನ ಕತೆ. ಹಳ್ಳಿಯ ಪಂಚಾಯ್ತಿ ಪ್ರೆಸಿಡೆಂಟ್ ಒಬ್ಬ ಎಲೆಕ್ಷನ್ ಹತ್ರ ಬಂತು ಅಂತ ಊರಲ್ಲಿ ದೇವಸ್ಥಾನ ಕಟ್ಟಿಸಿ ಜನರ ಓಟು ಗಿಟ್ಟಿಸಿಕೊಳ್ಳೋಕೆ ಟ್ರೈ ಮಾಡ್ತಾನೆ. ರಾಮಮಂದಿರ ನೆನಪಾಯ್ತಾ?. ಇಲ್ಲ ಬಿಡಿ ಇಲ್ಲಿ ಅದಿಲ್ಲ. ಇಲ್ಲಿರೋದು ಗಣೇಶನ ದೇವಸ್ಥಾನ. ಹಳ್ಳಿಯ ಪಂಚಾಯ್ತಿ ಪ್ರೆಸಿಡೆಂಟ್ ಒಬ್ಬ ಎಲೆಕ್ಷನ್ ಹತ್ರ ಬಂತು ಅಂತ ಊರಲ್ಲಿ ದೇವಸ್ಥಾನ ಕಟ್ಟಿಸಿ ಜನರ ಓಟು ಗಿಟ್ಟಿಸಿಕೊಳ್ಳೋಕೆ ಟ್ರೈ ಮಾಡ್ತಾನೆ. ರಾಮಮಂದಿರ ನೆನಪಾಯ್ತಾ. ಇಲ್ಲ ಬಿಡಿ ಇಲ್ಲಿ ಅದಿಲ್ಲ. ಇಲ್ಲಿರೋದು ಗಣೇಶನ ದೇವಸ್ಥಾನ. ಒಂದು ಒಳ್ಳೆ ಸಿನಿಮಾ ಅಂದ ಕೂಡ್ಲೇ ದೊಡ್ಡ ಬಜೆಟ್ ಇರಬೇಕು.

ಟೆಕ್ನಿಕಲಿ ಸಿನಿಮಾ ಸ್ಟ್ರಾಂಗ್ ಆಗಿರಬೇಕು ಅನ್ನೋ ಮೂಢನಂಬಿಕೆಯನ್ನು ಈ ಸಿನಿಮಾ ಮೂಲಕ ನಿರ್ದೇಶಕ ನವೀನ್ ಹೊಡೆದು ಹಾಕಿದ್ದಾರೆ ಅಂದ್ರೆ ತಪ್ಪಾಗಲ್ಲ. ನಿಜಜೀವನದಲ್ಲಿ ತಮ್ಮ ಸ್ವಂತ ಹಳ್ಳಿಯಲ್ಲಿ ನಿಸ್ವಾರ್ಥವಾಗಿ ತಮ್ಮ ದುಡ್ಡ ದೇವಸ್ಥಾನ ಕಟ್ಟಿಸಿರೋ ರಂಗಾಯಣ ರಘು ಇಲ್ಲಿ ತನ್ನ ಸ್ವಾರ್ಥಕ್ಕಾಗಿ ದೇವಸ್ಥಾನ ಕಟ್ಟೋ ಅವಕಾಶವಾದಿ ರಾಜಕಾರಣಿಯ ಪಾತ್ರದ ಅವಕಾಶವನ್ನು ಒಪ್ಪಿಕೊಂಡು ಪಾತ್ರ ಮಾಡಿರೋದು ಒಬ್ಬ ವ್ಯಕ್ತಿಯಾಗಿ ಕೂಡಾ ಅವರಲ್ಲಿರೋ ದಿಟ್ಟ ನಟನನ್ನು ತೋರಿಸುತ್ತದೆ. ಕಾಮಿಡಿ ಆಗ್ಲಿ, ಮಧ್ಯಂತರ ಮತ್ತು ಕೊನೆಯಲ್ಲಿ ಬರೋ ಗಂಭೀರ ನಟನೆಯಲ್ಲಿ ಆಗ್ಲಿ ನಟನೆಯ ಬಗೆಗಿನ ಅವರ ಭಯ ಭಕ್ತಿ ತೋರಿಸುತ್ತದೆ.

ಇನ್ನು ಮೂರನೇ ಕೃಷ್ಣಪ್ಪನಾಗಿ ಸಂಪತ್ ಅವರದ್ದು ಬರೀ ಕಾಡುವಂಥ ಅಷ್ಟೇ ಅಲ್ಲ, ಅವರ ಮೇಲೆ ಇನ್ನಷ್ಟು ಅಭಿಮಾನ ಮೂಡಿಸುವಂಥ ಅಭಿನಯ. ತಮ್ಮನ್ನು ಕೇವಲ ಸಣ್ಣ ಪುಟ್ಟ ಪಾತ್ರಗಳಿಗೆ ಅಷ್ಟೇ ಅಲ್ಲ, ಇಡೀ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲೂ ಬಳಸಿಕೊಳ್ಳಬಹುದು ಎನ್ನುವಂಥ ಪರಿಪೂರ್ಣ ಅಭಿನಯ ಅವರದ್ದು. ತಮ್ಮ ಸಿನಿಮಾದಲ್ಲಿ ಮೆಸೇಜ್ ಕೋಡೋ ಕೆಲಸಕ್ಕೆ ಕೈ ಹಾಕದೆ ಇದ್ರೂ, ಪರಭಾಷೆಯಲ್ಲಿ ಬರೋ ತಮಿಳು ನಟ ಯೋಗಿ ಬಾಬು ಅವರ ಮಂಡೇಲಾದಂಥ ಸಣ್ಣ ಬಜೆಟ್‌ನ ಸಿನಿಮಾಗಳನ್ನು ದೊಡ್ಡದಾಗಿ ಹೊತ್ತು ಮೆರೆಸುವ ಪ್ರೇಕ್ಷಕರಿಗೆ ಕನ್ನಡದಲ್ಲೂ ಇಂಥ ಸಿನಿಮಾಗಳು ಬರ್ತಾ ಇವೆ, ನೋಡಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ ನಿರ್ದೇಶಕ ನವೀನ್. ಒಟ್ಟಾರೆ ಹೇಳೋದಾದ್ರೆ ಮೂರನೇ ಕೃಷ್ಣಪ್ಪ ಸಿನಿಮಾ ನೋಡಿದ ಮಾರನೇ ದಿನ ಕೂಡಾ ಕಾಡುವಂಥ ಸಿನಿಮಾ.

ಲೂಸ್ ಟಾಕ್ ಖೇಮು

ಖೇಮು- ಅ, ಏನ್ರೀ ಇದು, ದೇಶದಲ್ಲಿ ಮತ್ತೆ ಎಲ್ಲರಿಗೂ ತಲಿಬ್ಯಾನಿ ಬಂದೈತಲ್ಲ ಅ ಅದರ ಬಗ್ಗೆನೇ ಮಾತಾಡ್ತಾ ಇದ್ದಾರೆ, ಏನಿದು ?
-ರೀ, ಖೇಮು, ಅದು ತಲಿಬ್ಯಾನಿ ಅಲ್ಲ, ತಾಲಿಬಾನ್

ಖೇಮು- ಏನೋ ಒಂದು ಆದ್ರೆ ಪ್ರಪಂಚದ ಬೇರೆ ದೇಶಗಳೆಲ್ಲ ಸೇರ್ಕಂಡು, ಈ ಆಫ್ಘಾನಿಸ್ಥಾನದ ಮೇಲೆ ಒಂದ್ ಬಾಂಬ್ ಹಾಕಿದ್ರೆ ಸಾಕಲ್ಲ, ಯಾಕೆ ಮಾಡ್ತಾ ಇಲ್ಲ ?
-ರೀ, ಹಂಗೆ ಮಾಡಕಾಗುತ್ತಾ, ಅಲ್ಲಿ ಬೇರೆ ಜನಗಳೂ ಇರಲ್ವಾ, ಅವ್ರೆಲ್ಲ ಸಾಯಲ್ವಾ?

ಖೇಮು- ಓಹೋ ಅಲ್ಲಿ ಜನಗಳೂ ಇದ್ದಾರಾ, ನಾನೆ ಬರೀ ಟೆರರಿಗಳು ಅಂದ್ಕೊಂಡಿದ್ದೆ.
-ನಿಜ ಬಿಡಿ, ಟೆರರಿಗಳನ್ನೂ ಜನಗಳು ಅಂತ ತಪ್ಪು ತಿಳ್ಕೊಂಡಿರೋ ಜನ ಇರುವಾಗ ನಿಮ್ಮ ಅನಿಸಿಕೆ ಸರಿಯಾಗಿದೆ.

ಆದ್ರೂ, ಪಾಪ, ಅಲ್ಲಿಯ ಜನಕ್ಕೆ ಸ್ವಾತಂತ್ರ್ಯನೇ ಇಲ್ಲವಂತೆ. ಅವರು ತಲೆ ಎತ್ತಿಕೊಂಡು ಬದುಕೋ ಥರ ಏನಾದ್ರೂ ಮಾಡಬೇಕ?
-ಹೆಂಗ್ ಮಾಡೋಕಾಗುತ್ತೆ, ಅಲ್ಲಿರೋರಲ್ಲಿ ಮ್ಯಾಕ್ಸಿಮಮ್ ಜನ, ಬರೀ ತಲೆ ಎತ್ತಿಕೊಂಡೇ ಬದುಕುವವರು.

ನಮ್ಮ ಇಂಡಿಯಾ ಈ ವಿಷಯದಲ್ಲಿ ಏನಾದ್ರೂ ಮಾಡಿ, ಈ ಉಗ್ರರನ್ನ ಮಟ್ಟ ಹಾಕಿ ಅಲ್ಲಿ ಜನ ಗಣ ಮನ ಹಾಡಿಸಬೇಕಲ್ಲ?
-ಅದೆಲ್ಲ ಅಷ್ಟು ಸುಲಭ ಅಲ್ಲ, ಅದಕ್ಕೆ ಅಲ್ಲಿನ ಜನಗಳ ಮನ ಮುಖ್ಯ ಆಗುತ್ತೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಒಂದ್ಸಲ ಸ್ಲೀಪರ್ ಕೋಟ್ ಟ್ರೈನ್‌ನಲ್ಲಿ ಲಾಂಗ್ ಜರ್ನಿ ಹೊರಟ. ಬೆಂಗಳೂರಿನಿಂದ ಡೆಲ್ಲಿಗೆ ಹೊರಟ ಟ್ರೈನಿನಲ್ಲಿ ಅವನಿಗೆ ಸ್ಲೀಪರ್ ಕೋಚ್ ನಲ್ಲಿ ಜಾಗ ಸಿಗೋದೇ ಕಷ್ಟ ಆಯ್ತು. ಕಷ್ಟ ಪಟ್ಟು ಕಾಸು ಕೊಟ್ಟು ಹೇಗೋ ಒಂದು ಸ್ಲೀಪಿಂಗ್ ಸೀಟ್ ಬುಕ್ ಮಾಡಿದ. ಸರಿ ಖೇಮು ಹೊರಡುವ ದಿನ ಬಂತು. ಸ್ಟೇಷನ್‌ಗೆ
ಹೋಗಿ ತನ್ನ ಸೀಟ್ ಎಲ್ಲಿದೆ ಅಂತ ಹುಡುಕಿ ಹೋದ್ರೆ ಅಲ್ಲಿ ಬರೀ ೨ ಸೀಟುಗಳ ಸ್ಲೀಪಿಂಗ್ ಕೋಚ್ ಇತ್ತು. ಅಲ್ಲಿ ಪ್ರಯಾಣ ಮಾಡುತ್ತಿದ್ದು ಇವನದ್ದೇ ವಯಸ್ಸಿನ
ಒಂದು ವಿವಾಹಿತ ಅಟ್ರಾಕ್ಟಿವ್ ಹೆಂಗಸು. ಆಕಯನ್ನು ಮಾತನಾಡಿಸಿ, ಈ ಜರ್ನಿಯಲ್ಲಿ ನಾವು ಜತೆಗೇ ಪ್ರಯಾಣ ಮಾಡುತ್ತಿದ್ದೇವೆ.

ಅಲ್ಲಿಯವರೆಗೂ ಸ್ನೇಹಿತರಾಗಿರೋಣ ಅಂತ ಕೈ ಕುಲುಕಿ ಮಾತನಾಡಿದ ಖೇಮು. ಸರಿ ರಾತ್ರಿ ಊಟ ಆಯ್ತು, ಮಲಗೋ ಟೈಮು. ಇಬ್ಬರೂ ತಮ್ಮ ತಮ್ಮ ಸ್ಲೀಪಿಂಗ್ ಕೋಚ್‌ನಲ್ಲಿ ಮಲಗೋಕೆ ರೆಡಿ ಆದ್ರು. ಖೇಮು ಮೇಲಿನ ಬರ್ತ್‌ನಲ್ಲಿ , ಆಕೆ ಕೆಳಗಿನ ಬರ್ತ್ ನಲ್ಲಿ ಮಲಗಿದರು. ಸ್ವಲ್ಪ ಹೊತ್ತಿನಲ್ಲಿ ಖೇಮುಗೆ ಛಳಿ ಆಗೋಕೆ ಶುರು ಆಯ್ತು. ಮೇಲಿಂದಲೇ, ಕೆಳಗೆ ಮಲಗಿದ್ದ ಆಕೆಯನ್ನು, ನಾವಿಬ್ಬರೂ ಈಗ ಸ್ನೇಹಿತರಲ್ವಾ, ನಂಗೆ ತುಂಬಾ ಛಳಿ ಆಗ್ತಿದೆ.

ಇಫ್ ಯೂ ಡೋಂಟ್ ಮೈಂಡ್, ಅಲ್ಲಿ ಕೆಳಗಿರೋ ಒಂದು ಬೆಡ್ ಶೀಟ್ ತೆಗೆದುಕೊಡ್ತೀರಾ ಅಂತ ಕೇಳಿದ. ಅದಕ್ಕೆ, ಖೇಮು ಕಡೆಗೆ ರೊಮ್ಯಾಂಟಿಕ್ ಆಗಿ ನೋಡುತ್ತಾ, ಆಕೆ ಹೇಳಿದಳು, ನಾವಿಬ್ರೂ ಸ್ನೇಹಿತರು, ತುಂಬಾ ಚಳಿ ಆಗ್ತಿದೆ ಅಂತಿದೀರಾ, ನಿಮಗೆ ಬೆಡ್ ಶೀಟ್ ಬೇಕು, ಆದ್ರೆ, ನಾವಿಬ್ಬರೂ ಯಾಕೆ ಈ ರಾತ್ರಿಯ ಮಟ್ಟಿಗೆ ಗಂಡ ಹೆಂಡತಿಯರ ಥರ ಇರಬಾರದು. ಖೇಮುಗೆ ಇದನ್ನು ಕೇಳಿ ಶಾಕ್ ಮತ್ತು ಒಳಗೊಳಗೆ ಎಕ್ಸೈಟ್ ಮೆಂಟ್ ಆಯ್ತು. ಮೆಲ್ಲಗೆ ಕೆಳಗಿಳಿದು ಬಂದು ಆಕೆಯ ಬೆಡ್ ಶೀಟ್ ನೊಳಗೆ ತೂರಿಕೊಳ್ಳಲು ನೋಡಿದ.

ಆಗ ಆಕೆ ಸಿಟ್ಟಿನಿಂದ ಹೇಳಿದ್ಳು, ಹಲೋ ನಾನು ಗಂಡ ಹೆಂಡತಿಯರ ಥರ ಇರೋಣ ಅಂತ ಹೇಳಿದ್ದು, ನಿನಗೆ ಬೇಕಾಗಿರೋ ಬೆಡ್ ಶೀಟ್ ನ ನೀನೇ ಹೋಗಿ ತಗೋ ಅಂತ ಹೇಳೋಕೆ. ಖೇಮುಗೆ ಈಗ ನಿರಾಸೆ ಮತ್ತು ಶಾಕ್ ಆಯ್ತು. ಸಿಟ್ಟು ಬಂದರೂ ತಡೆದುಕೊಂಡು, ಮೆಲ್ಲಗೆ ಹೋಗಿ ಬೆಡ್ ಶೀಟ್ ತಗೊಂಡು ಮೇಲೆ ಹೋಗಿ ಮಲಗಿಕೊಂಡು ಬೆಡ್ ಶೀಟ್ ಓಪನ್ ಮಾಡಿ, ಪುರ್ ಅಂತ ಹೂಸು ಬಿಟ್ಟು ಹೇಳಿದ, ಸರಿ, ನೀವು ಹೇಳಿದ ಹಾಗೆ, ಇಬ್ರೂ ಇವತ್ತು ರಾತ್ರಿಯ ಮಟ್ಟಿಗೆ ಗಂಡ
ಹೆಂಡತಿ ಥರ ಇರೋಣ.

ಲೈನ್ ಮ್ಯಾನ್

ಭಾರತದ ಎಲ್ಲ ಇಂಪೋರ್ಟ್ ಎಕ್ಸ್ ಪೋರ್ಟ್ ಬಂದ್- ತಾಲಿಬಾನ್
-ನಮ್ಮ ಸರಕಾರ-ಯಾವಾಗ್ಲೂ ಗನ್ ಇಟ್ಕೊಂಡೇ ಓಡಾಡ್ತಾ ಇರ್ತಾರೆ. ಸೋ, PUBG ಥರ ಇವ್ರದ್ದು ಯಾವಾದ್ರೂ ಅmmಇದ್ದೇ ಇರ್ತವೆ ನೋಡ್ರೋ, ಬ್ಯಾನ್ ಮಾಡಣ.

ಮಾಡರ್ನ್ ಮಕ್ಕಳು
‘ಪುಟ್ಟಾ, ಎಲ್ಲಿಗೋಗಿದ್ಯೋ ೨ ದಿನ?’

‘ಅಮ್ಮ ಊರಿಗ್ ಕರ್ಕೊಂಡ್ ಹೋಗಿದ್ರು.’
‘ಯಾಕೆ?’

‘ಅಜ್ಜಿ ದೇವ್ರಾಗಿದ್ದಾರೆ ಅಂತ ಅಮ್ಮ ಕರ್ಕೊಂಡೋಗಿದ್ರು. ಪಪ್ಪಾ, ನಿಮಗ್ಗೊತ್ತಾ, ನಾನೆ ಅಜ್ಜಿ ಸತ್ತೋಗಿದಾರೆ ಅಂದ್ಕೊಂಡಿದ್ದೆ’

ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್

-ಫೋಟೋಗ್ರಾಫರ್ ಫಿನಿಷ್

ತಡವಾದ ಜ್ಞಾನೋದಯ

-ಅಯ್ಯೋ, ನಿನ್ನೆ ವರ್ಲ್ಡ್ ಫೋಟೋಗ್ರಾಫರ್ ಡೇ ಇತ್ತಂತೆ, ನಂಗೆ ಫ್ಲಷ್ ಆಗ್ಲಿಲ್ಲ.

ಕಾಡುಪಾಪಗಳ ಫೋಟೋ ತೆಗೆಯೋನು
-ವೈಲ್ಡ ಲೈಫ್ ಫೋಟೋಗ್ರಾಫರ್

ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು 
-ಚೈಲ್ಡ್ ಲೈಫ್ ಫೋಟೋಗ್ರಾಫರ್

ಸಂಸಾರಗಳ ಗುಟ್ಟು
-ಒಂದ್ ಸಂಸಾರ ಇದ್ರೆ – family.
-೨-೩ ಸಂಸಾರ ಇದ್ರೆ – joint family.

ಅದಕ್ಕೂ ಜಾಸ್ತಿ ಇದ್ರೆ?- Giant family
ಯಾರೋ ಅವರ ಮನೆಗೆ ಆಶ್ಚರ್ಯ ನಿವಾಸ ಅಂತ ಹೆಸರಿಟ್ಟಿದ್ರು ಅದನ್ನ ನೋಡಿ ಡೌಟ್ ಆಯ್ತು, ಇವ್ರೇನ್ ಮನೆ ಕಟ್ಟಿzರೋ, ಇ ವಂಡರ್ ಲಾ ಕಟ್ಟಿದ್ದಾರೋ