ಪ್ರಚಲಿತ
ಎಂ.ವಿನಾಯಕ
m.vinayak2@yahoo.com
ಮಹಾರಾಜರುಗಳು ಸ್ನೇಹ ಮತ್ತು ಬಾಂಧವ್ಯಕ್ಕೆ ವಿನಿಮಯ ಮಾಡಿಕೊಳ್ಳುತ್ತಿದ್ದ ವಸ್ತುಗಳಿಗೆ ಟಾಟಾ ಏರ್ ಲೈನ್ಸ್‌ಯೇ ಕೊಂಡಿ. ಆತಿಥ್ಯ ಕೊಡುವುದರಲ್ಲಿ ಎಲ್ಲಾ ಸಂಸ್ಥೆಗಳಿಗಿಂತ ಮಿಗಿಲಾಗಿದ್ದು. ಬಂದ ಯಾತ್ರಿಗಳನ್ನು ಮಹಾರಾಜರ ತರಹ ವಿಚಾರಿಸುತ್ತಿದ್ದರು. ಯಾತ್ರಿಗಳ ಮೊದಲ ಆಯ್ಕೆ ಏರ್ ಇಂಡಿಯಾ. ಯಾವುದೇ ವಿಚಾರದಲ್ಲೂ ಸ್ವಲ್ಪವೂ ರಾಜಿಯಿಲ್ಲದೆ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿ ಪ್ರತಿಯೊಂದು ವಿಷಯ ದಲ್ಲಿಯೂ ಜೆಆರ್‌ಡಿ ಟಾಟಾ ಅವರು ಮುತುವರ್ಜಿ ವಹಿಸಿ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೇರಿಸಿದ್ದರು. ವೈಭವದ ಗುರುತಾಗಿತ್ತು.
ನಾವು ಬಳಕೆ ಮಾಡುವ ಪೆನ್‌ನಿಂದ ಹಿಡಿದು ಎಲ್ಲ ವಸ್ತುಗಳು ಕಂಡು ಹಿಡಿದ ದಿನ ಇದ್ದ ರೂಪದಲ್ಲಿ ಇರುವುದಿಲ್ಲ. ನಾನಾ ರೀತಿಯ ಬದಲಾವಣೆ, ಅನ್ವೇಷಣೆ, ಸ್ಥಿತ್ಯಂತರಗಳಿಂದ, ಕಂಪನಿಗಳಿಂದ, ಅದರ ಮುಖ್ಯಸ್ಥರಿಂದ ಬದಲಾಗಿ. ಸತತ ಏರಿಳಿತವನ್ನು ಕಂಡು ಒಂದು ರೂಪಕ್ಕೆ ಬಂದಿರುತ್ತದೆ. ಯಾವತ್ತೋ ರೈಟ್ ಬ್ರದರ್ಸ್ ಕಂಡು ಹಿಡಿದ ವಿಮಾನ ಇವತ್ತು ಹಾರಾಡುತ್ತಿರುವ ವಿಮಾನವು ಸಹ. ಎಲ್ಲಾ ವಿಷಯಗಳು, ವಸ್ತುಗಳು ಏರಿಳಿತ ಕಂಡು ಇವತ್ತು ಒಂದು ಸ್ಥಿತಿಯನ್ನು ತಲುಪಿದೆ. ಇವತ್ತಿನ ಹೀರೊ ನಾಳೆಯ ಜೀರೋ, ಇವತ್ತಿನ ಜೀರೋ ನಾಳೆಯ ಹೀರೋ. ಹೀಗೆ, ಬದಲಾವಣೆಯೇ ಜಗದ ನಿಯಮ.
೧೯೩೨ರಲ್ಲಿ ೨೫ ವರ್ಷದ ಕನಸುಗಾರ ರಾಯಲ್ ಏರ್ ಫೋರ್ಸ್‌ನಲ್ಲಿ ಪೈಲೆಟ್ ಆಗಿದ್ದ ಯುವಕನಿಗೆ ತನ್ನದೆ ಸ್ವಂತ ಸಂಸ್ಥೆಯನ್ನು ಕಟ್ಟಬೇಕೆಂಬ ಆಸೆಯಿಂದ ಆ ಕೆಲಸವನ್ನು ಬಿಟ್ಟು ತನ್ನ ಸಂಸ್ಥೆಗೆ ನೀಲಿ ನಕ್ಷೆ ಹಾಕಿ. ಉದ್ಯಮದ ಸಾಹಸಕ್ಕಿಳಿದು ಕರಾಚಿಯಿಂದ ಬಾಂಬೆಗೆ ಕಾರ್ಗೋ ವಿಮಾನ ಹಾದಿಯನ್ನು ಪ್ರಾರಂಭಿಸಿ. ದೇಶದ ಮೊದಲ ಏರ್ ಲೈನ್ಸ್ ಸ್ಥಾಪಿಸಿದ. ಆ ಸಂಸ್ಥೆಯಲ್ಲಿ ಮೊದಲಿಗೆ ೨ ಪೈಲೆಟ್, ೩ ಎಂಜಿನಿಯರ‍್ಸ್, ೪ ಕೂಲಿ ಹಾಗೂ ೨ ಸೆಕ್ಯುರಿಟಿ ಗಾರ್ಡ್‌ಗಳನ್ನು ಸೇರಿಸಿಕೊಂಡು ಗಗನಕ್ಕೆ ಚುಂಬಿಸಿಲು ಹೊರಟ. ಆ ಉದ್ಯಮವು ೬ ವರ್ಷದಲ್ಲಿ ದೇಶದಲ್ಲಿರುವ ಕರಾಚಿ (ಆಗ ಭಾರತದ ಭಾಗವಾಗಿತ್ತು), ದೆಹಲಿ, ಹೈದರಾಬಾದ್, ಗೋವಾ, ಕೊಲಂಬೋ ಹಾಗೆ ಹಲವಾರು ಮಹಾನಗರಗಳ ಕೊಂಡಿಯಾಗಿ ಬೆಳೆಯಿತು.
ಆಗ ಆ ಸಂಸ್ಥೆಯ ಹೆಸರು ಟಾಟಾ ಏರ್ ಮೇಲ್ಸ್ (Tata air mails). ಅದು ಮುಂದೆ ಟಾಟಾ ಏರ್ ಲಿಂಕ್ಸ್‌ಆಗಿ ಪರಿವರ್ತನೆ ಆಗುತ್ತೆ. ಆ ಕನಸುಗಾರ ಸುಂದರ ಯುವಕನೇ ಜೆಆರ್‌ಡಿ ಟಾಟಾ. ಇವರು ಭಾರತದ ಮೊದಲ ಪೈಲೆಟ್ ಸಹ!. ಆ ಉದ್ಯಮ ಟಾಟಾ ಸಮೂಹದ ಒಂದು ಭಾಗ. ಭಾರತೀಯರಿಗೆ ಹಾಗೂ ಟಾಟಾ ಸಂಸ್ಥೆಗೆ ಒಂದು ಅವಿನಾಭಾವ ಸಂಬಂಧ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಹುಟ್ಟಿದ ಸಂಸ್ಥೆ. ಭಾರತೀಯರಿಗೆ ಟಾಟಾ ಸಮೂಹ ಅಂದರೆ ಬರೀ ಒಂದು ಸಂಸ್ಥೆಯಾಗಿರದೆ ದೇಶದ ಸ್ವಾಭಿಮಾನ, ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಮುಕುಟ ಮಣಿ.
ಈ ಸಂಸ್ಥೆಯೂ ಪ್ರಪಂಚಾದ್ಯಂತ ಉಪ್ಪಿನಿಂದ ಹಿಡಿದು ಓಡಾಡುವ ಕಾರುಗಳ ತನಕ ಒಂದೇ ಹೆಸರಿನ ಬ್ರ್ಯಾಂಡ್ ಅದವೇ ಟಾಟಾ ಕಂಪನಿ. ಇಷ್ಟು ದೊಡ್ಡ ಕಂಪನಿ
ಇನ್ನುವರೆಗೂ ಮದ್ಯ ಮತ್ತು ಸಿಗರೆಟ್ ಕಂಪನಿಯನ್ನು ತೆರೆದಿಲ್ಲ . ಅಂತಹ ಟಾಟಾ ಸಂಸ್ಥೆಯವರೇ ಶುರುಮಾಡಿದ Tata Air mails ನ ಸೇವೆ ನಾಗರಿಕನಿಂದ ಹಿಡಿದು ಮಹಾರಾಜರವೆಗೆ ಹೋಗಿ ಆಗಿನ ಕಾಲದಲ್ಲಿ ಮಹಾರಾಜರುಗಳು ಸ್ನೇಹ ಮತ್ತು ಬಾಂಧವ್ಯಕ್ಕೆ ವಿನಿಮಯ ಮಾಡಿಕೊಳ್ಳುತ್ತಿದ್ದ ವಸ್ತುಗಳಿಗೆ ಟಾಟಾ ಏರ್ ಲೈನ್ಸ್‌ಯೇ ಕೊಂಡಿ. ಆಗ ಭಾರೀ ಬೇಡಕೆಯಲ್ಲರುತ್ತಿದ್ದ ಗಲ್ ರಾಷ್ಟ್ರಗಳ ಮುತ್ತು (ಅಲ್ಲಿರುತ್ತಿದ ತೈಲಕ್ಕಿಂತ ಮುತ್ತುಗಳಿಗೆ ಭಾರಿ ಬೇಡಿಕೆ ಇದ್ದ ಸಮಯ). ಉತ್ಕೃಷ್ಟ ಮಾವಿನ ಹಣ್ಣುಗಳನ್ನು ಬರೋಡ ಹಾಗೂ ಕಾಶ್ಮೀರದ ಮಹಾರಾಜರುಗಳಿಂದ ಸರ್ವ ರಾಜರುಗಳಿಗೆ ವಿನಿಮಯವಾಗ ತೊಡಗಿದವು.
ಸಂಸ್ಥೆ ಬೆಳೆದಷ್ಟೇ ಅದರ ಹೆಸರುಗಳು ಬದಲಾಗ ತೊಡಗಿದವು. ಟಾಟಾ ಏರ್ ಲಿಂಕ್ಸ್‌ನಿಂದ ಏರ್ ಇಂಡಿಯಾ ಆಗಿ ಬದಲಾದ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು. ನಾಗರಿಕ ವಿ i ಂi i P ಮುನ್ನುಡಿ ಬರೆದು. 1948ರಲ್ಲಿ ಲಂಡನ್‌ನಿಂದ ತನ್ನ ಅಂತಾರಾಷ್ಟ್ರೀಯ ವಿಮಾನಯಾನವನ್ನು ಶುರು ಮಾಡಿ. ವಿಶ್ವದ ಅತ್ಯಂತ ಪ್ರತಿಷ್ಠಿತ ಹಾಗೂ ಭಾರೀ ಆತಿಥ್ಯ ಕೊಡುವ ವಿಮಾನ ಸಂಸ್ಥೆಯಾಗಿ. ಗ್ರಾಹಕರ ಮೊದಲ ಆಯ್ಕೆಯಾಗುತ್ತಿತ್ತು ಏರ್ ಇಂಡಿಯಾ. ಬೆಳೆಯುತ್ತ ಹೋದಂತೆ ಹೊಸ ಛಾಪನ್ನು ಮೂಡಿಸುವ ಏರ್ ಇಂಡಿಯಾ ರಾಷ್ಟ್ರೀಕೃತವಾಗಿ ಸರಕಾರದ ಒಂದು ಅಂಗವಾಗಿ ಮುನ್ನಡೆಯತ್ತಿರುತ್ತದೆ. ಏರ್ ಇಂಡಿಯಾ ವಿಶ್ವಾದ್ಯಂತ ಸದ್ದು ಮಾಡುವ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಒಂದು ಎಲ್ಲರನ್ನು ಬೆರಗು ಮಾಡುತ್ತೆ. ಅದೇ 1978ರಲ್ಲಿ ಮುರಾರ್ಜಿ ದೇಸಾಯಿಯವರ ಸರಕಾರ ಜೆಆರ್‌ಡಿ ಟಾಟಾರನನ್ನು ಏರ್ ಇಂಡಿಯಾದ ಮಂಡಳಿಯಿಂದ ಹೊರಹಾಕುತ್ತರೆ. ಅದು ಯಾಕೆ ಅಂತ ನಿಖರ ಮಾಹಿತಿ ಇನ್ನುವರೆಗೂ ಯಾರಿಗೂ ತಿಳಿದಿಲ್ಲ.
ಆಗಿನ ಕಾಲಕ್ಕೆ ಒಳ್ಳೆಯ ಆತಿಥ್ಯ, ಪ್ರತಿಷ್ಠೆಗೆ ಹೆಸರಾಗಿದ್ದ ಏರ್ ಇಂಡಿಯಾ. ಆತಿಥ್ಯ ಕೊಡುವುದರಲ್ಲಿ ಎಲ್ಲಾ ಸಂಸ್ಥೆಗಳಿಗಿಂತ ಮಿಗಿಲಾಗಿದ್ದು. ಬಂದ ಯಾತ್ರಿಗಳನ್ನು
ಮಹಾರಾಜರ ತರಹ ವಿಚಾರಿಸುತ್ತಿದ್ದರು. ಮಹಾರಾಜನ ಒಂದು ಕಾರ್ಟೂನ್ ಏರ್ ಇಂಡಿಯಾದ ಗುರುತಾಗಿತ್ತು. ಮಹಾರಾಜ ಯಾಕಂದ್ರೆ ಇಡೀ ವಿಶ್ವವು ಭಾರತೀಯ ರಾಜರುಗಳು ಹಾಗೆ ಅವರ ವೇಷ ಭೂಷಣವನ್ನು ಗುರುತಿಸುತ್ತಿದ್ದರು. ಹಾಗೆ ಅದು ವೈಭವದ ಗುರುತಾಗಿತ್ತು. ಯಾತ್ರಿಗಳ ಮೊದಲ ಆಯ್ಕೆ ಏರ್ ಇಂಡಿಯಾ. ಯಾವುದೇ ವಿಚಾರದಲ್ಲೂ ಸ್ವಲ್ಪವೂ ರಾಜಿಯಿಲ್ಲದೆ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿ ಪ್ರತಿಯೊಂದು ವಿಷಯ ದಲ್ಲಿಯೂ ಜೆಆರ್‌ಡಿ ಟಾಟಾ ಅವರು ಮುತುವರ್ಜಿವಹಿಸಿ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೇರಿಸಿದ್ದರು.
ಆದರೆ ಭಾರತ ಸರಕಾರದ ಅಧೀನಕ್ಕೆ ಬಂದಾಗ ಏರ್ ಇಂಡಿಯಾಕ್ಕೆ ಶನಿ ದೆಸೆ ಶುರುವಾಯಿತು. ಪ್ರತಿ ವಿಷಯದಲ್ಲಿ ಭ್ರಷ್ಟಾಚಾರ ಬಂದು ಯಾತ್ರಿಕರಿಗೆ ನಿರಾಸೆಯನ್ನುಂಟು ಮಾಡಿ. ಒಳ್ಳೆಯ ಲಾಭತರುತ್ತಿದ್ದ ಏರ್ ಇಂಡಿಯಾ. ಅನಾಯಕತ್ವ , ಭ್ರಷ್ಟಾಚಾರಗಳಿಂದ ನಷ್ಟಕ್ಕೆ ಈಡಾಗುತ್ತಾ ಬಂತು. ಈ ನಷ್ಟ
ಟಾಟಾ ಕಂಪನಿಗೆ ಆಗುತ್ತಿರಲಿಲ್ಲ ಇದು ನೇರವಾಗಿ ಸರಕಾರದ ಬೊಕ್ಕಸಕ್ಕೆ ಕುತ್ತು ತಂದೊಡ್ಡಿ, ಪರೋಕ್ಷವಾಗಿ ಸಾರ್ವಜನಿಕರ ಜೇಬಿಗೆ ಕೈಹಾಕಿ. ಕೊನೆಗೆ ಉದ್ಯೋಗಿಗಳ ಸಂಬಳವು ಕೊಡಕ್ಕಾಗದೆ. ಇಲ್ಲಿಯ ವರೆಗೂ 70,820 ಕೋಟಿ ನಷ್ಟವಾಯಿತು. ಇದನ್ನೆಲ್ಲ ನೋಡಿ ಬೇಸತ್ತಿದ್ದ ಸರಕಾರ ಇದನ್ನು 20 ವರ್ಷಗಳಿಂದ ಖಾಸಗೀಕರಣಕ್ಕೆ ನಾಂದಿಯನ್ನು ಮಾಡಲು ಪ್ರಯತ್ನಿಸಿದಾಗ ಸರಕಾರವು ಶೇ.೭೫ರಷ್ಟು ಶೇರುಗಳನ್ನು ಮಾರಲು ಹೊರಟಿತ್ತು ಆದರೆ
ಸರಕಾರಗಳ ಜತೆ ಪಾಲುದಾರಿಕೆಗಳಿಗೆ ಒಪ್ಪದ ಖಾಸಗಿ ಕಂಪನಿಗಳು ಈ ವ್ಯವಹಾರಕ್ಕೆ ಮೂಸಿಸಲು ಹೋಗುವುದಿಲ್ಲ. ಮತ್ತೆ 2019ರಲ್ಲಿ ಸಂಪೂರ್ಣ ಖಾಸಗೀ ಕರಣಕ್ಕೆ ನಾಂದಿ ಹಾಡಿದಾಗ ಅದರಲ್ಲಿ ಆಸಕ್ತಿ ತೋರಿದ ರತನ್ ಟಾಟಾ ಹಾಗೂ ಟಾಟಾ ಸನ್ಸ್ ಸಂಸ್ಥೆ ಅತ್ಯಂತ ಹೆಚ್ಚಿನ ಹಣಕ್ಕೆ ಹರಾಜನ್ನು ಕೂಗಿ ತನ್ನ ಸ್ವಂತ ಸಂಸ್ಥೆಯನ್ನು ತವರುಮನೆಗೆ ಬರಮಾಡಿಕೊಂಡಿದ್ದಾರೆ. ಈ ಹರಾಜು ೧೮ ಸಾವಿರ ಕೋಟಿ ಬೆಳೆಯುಳ್ಳ ಹರಾಜು.
ಹಾಗೆಯೇ ಈ ರೀತಿ ಕಂಪನಿಯನ್ನು ಕೊಳ್ಳುವ ಪ್ರಕ್ರಿಯೆ ಟಾಟಾ ಸಂಸ್ಥೆಗೆ ಹೊಸತೇನಲ್ಲ ಈ ರೀತಿ ದಿವಾಳಿಯದ್ದ ಕಂಪನಿಗಳನ್ನು, ನಷ್ಟದ ಸುಳಿಯಲ್ಲಿ ಸಿಲುಕಿ ಮುಚ್ಚುತ್ತಿದ್ದ, ಇನ್ನು ಹಲವಾರು ಕಂಪನಿಗಳನನ್ನು ಕೊಂಡಿದೆ. ಟಾಟಾ ಸಂಸ್ಥೆಯು ಅಮೆರಿಕದ ಟೆಟ್ಲೆ, ಜಾಗ್ವಾರ್, ಲ್ಯಾಂಡ್ ರೋವರ್‌ನಂತಹ ಹಲವಾರು ಕಂಪನಿಗಳನ್ನು ಕೊಂಡು. ನಷ್ಟದಲ್ಲಿದ್ದವನ್ನು ಪಾರು ಮಾಡಿ ಸೈ ಎನಿಸಿಕೊಂಡು ವಿಶ್ವ ಮಾರುಕಟ್ಟೆಯಲ್ಲಿ ಹೆಗ್ಗುರುತಾಗಿದೆ. ಅವರ ಹಳೆಯ ಹಾಗೂ ಪ್ರತಿಷ್ಠಿತ ಸಂಸ್ಥೆಯಾದಂತಹ ಏರ್ ಇಂಡಯಾವನ್ನು ಮುಗಿಲಿಗೆ ಚುಂಬಿಸುವುದರಲ್ಲಿ ಸಂದೇಹವೇನು ಇಲ್ಲ.