Sunday, 15th December 2024

ಮಧ್ಯಮ ವರ್ಗದ ಜನರ ಧ್ವನಿ ಕೇಳಿಸಿಕೊಳ್ಳಲು ಕಿವಿಗಳೇ ಇಲ್ಲ!

ಪ್ರಸ್ತುತ 

ಸಮರ್ಥ್‌ ಐತಾಳ್

ಸ್ವಲ್ಪ ದಿನಗಳ ಹಿಂದೆ ರಾಜ್ಯ ಹಾಗೂ ಕೇಂದ್ರ ಸರಕಾರದ ನಡುವೆ ತೆರಿಗೆ ಹಂಚಿಕೆಯ ವಿಚಾರವಾಗಿ ಜಟಾಪಟಿ ನಡೆದವು. ರಾಜ್ಯ
ದಿಂದ ಸಂಗ್ರಹ ಮಾಡಿ ಪಾವತಿಸಿದಷ್ಟು ತೆರಿಗೆಯ ಮೊತ್ತಕ್ಕೆ ಅನುಗುಣವಾಗಿ ಕೇಂದ್ರದಿಂದ ಅನುದಾನ ಸಿಗಲಿಲ್ಲವೆಂಬುದು ರಾಜ್ಯ ಸರಕಾರದ ವಾದ.

ನಮ್ಮ ದೇಶದಲ್ಲಿ ಆದಾಯ ತೆರಿಗೆ ಕಟ್ಟುವ ಮಧ್ಯಮ ವರ್ಗದ ಖಾಸಗಿ ಕಂಪನಿಗಳ ನೌಕರರ ಪಾಡು ಕೂಡ ಹೀಗೆ ಎಂದು ಅನಿಸು ತಿದೆ. ವಾರ್ಷಿಕವಾಗಿ ೧೦ ಲಕ್ಷಕ್ಕಿಂತ ಅಧಿಕ ಆದಾಯ ಬರುವ ಉದ್ಯೋಗಿಗಳು ಅಂದಾಜು ತಮ್ಮ ಒಂದು ತಿಂಗಳ ಸಂಬಳದಷ್ಟು ಮೊತ್ತವನ್ನು ತೆರಿಗೆಯ ರೂಪದಲ್ಲಿ ಪಾವತಿಸುತ್ತಾರೆ. ಹಾಗಾಗಿ ಇವರು ವರ್ಷದಲ್ಲಿ ಒಂದು ತಿಂಗಳು ಸರಕಾರಕ್ಕಾಗಿಯೇ ದುಡಿಯುತ್ತಾರೆ ಎಂದು ಹೇಳಬಹುದು.

ಹಗಲು ರಾತ್ರಿಯೆನ್ನದೆ ದುಡಿದು, ಆಫೀಸ್ ಹಾಗೂ ಮನೆಯ ನಡುವೆ ೨-೩ ಗಂಟೆಗಳ ಪಯಣ, ಹೊತ್ತಲ್ಲದ ಹೊತ್ತಲ್ಲಿ ಮೀಟಿಂಗ್‌ ನಂತಹ ಅನೇಕ ಕಷ್ಟಗಳನ್ನ ತಮ್ಮ ಮೇಲೆ ಎಳೆದುಕೊಂಡು ದುಡಿದು ಪಾವತಿಸುವ ತೆರಿಗೆಗೆ ತಕ್ಕಂತೆ ಅವರಿಗೆ ಸೌಲಭ್ಯಗಳು
ಹಾಗೂ ಸೇವೆಗಳು ಇಲ್ಲವೆಂದು ಅನಿಸುತ್ತದೆ. ಹಾಗಂತ ಬೇರೆ ದೇಶಗಳಲ್ಲಿ ಇಷ್ಟು ತೆರಿಗೆ ಇಲ್ಲವೇ ಎಂದು ನಿಮ್ಮ ಮನಸ್ಸಿನ್ನಲ್ಲಿ ಪ್ರಶ್ನೆ ಮೂಡಬಹುದು.

ಜರ್ಮನಿ, ಸ್ವೀಡೆನ್, ಚೀನಾದಂತಹ ದೇಶಗಳಲ್ಲಿ ನಮ್ಮ ದೇಶಕ್ಕಿಂತ ಅಧಿಕ ಪ್ರಮಾಣದಲ್ಲಿ ಇದೆ. ಆದರೆ ಅದಕ್ಕೆ ತಕ್ಕಂತೆ ಒಳ್ಳೆಯ ಗುಣಮಟ್ಟದ ಉಚಿತ ಶಿಕ್ಷಣ, ವೈದ್ಯಕೀಯ ಸೇವೆಗಳು ಲಭ್ಯವಾಗುತ್ತದೆ. ಅಂತಹ ದೇಶಳಗಳಲ್ಲಿ ಆರ್ಥಿಕ ಭದ್ರತೆ ಇರುತ್ತದೆ. ಹಾಗಾಗಿ ಅಂತಹ ದೇಶಗಳಲ್ಲಿ ಕೈಯಲ್ಲಿ ಉದ್ಯೋಗವಿಲ್ಲದ ಸಮಯದಲ್ಲೂ ಕೂಡ ಜೀವನವನ್ನು ನೆಡೆಸಲು ಅಷ್ಟು ಕಷ್ಟವಾ ಗದು. ಇನ್ನು ನಮ್ಮ ದೇಶದ ಸರಕಾರಿ ಆಸ್ಪತ್ರೆಗಳೂ ಹಾಗೂ ಶಾಲೆಗಳ ಪರಿಸ್ಥಿಯ ಬಗ್ಗೆ ನಿಮಗೇ ತಿಳಿದಿದೆ. ಇನ್ನು ಖಾಸಗಿ ಆಸ್ಪತ್ರೆ ಗಳ ಶುಲ್ಕವು ಜನಸಾಮನ್ಯರಿಗೆ ಎಟುಕದಂತಾಗಿದೆ. ಹಾಗೆಯೇ ಖಾಸಗಿ ಶಾಲೆಗಳ ಹಾಗು ವೃತ್ತಿಪರ ಕೋರ್ಸುಗಳ ಶುಲ್ಕವು ಗಗನ ಕುಸುಮವಾಗಿದೆ.

ಇಷ್ಟೆಲ್ಲ ಆದಾಯ ತೆರಿಗೆಯನ್ನು ಪಾವತಿಸಿಯೂ ಕೂಡ ತಾವು ಪಡೆಯುವ ಪ್ರತಿಯೊಂದು ಸೇವೆ ಹಾಗು ವಸ್ತುಗಳ ಮೇಲೆ ಪರೋಕ್ಷವಾಗಿ ತೆರಿಗೆಯನ್ನು ಪಾವತಿಸುತ್ತಾರೆ. ಒಂದು ಕಾರ್ ಖರೀದಿ ಮಾಡಿದರೆ ೧೩-೧೭% ರಷ್ಟು ರಸ್ತೆ ತೆರಿಗೆ, ಅಂದಾಜು ೨೮% ರಷ್ಟು GST, ಮನೆಯನ್ನು ಖರೀದಿಸಿದರೆ ನೋಂದಣಿ ಶುಲ್ಕ, ತದನಂತರ ವಾರ್ಷಿಕವಾಗಿ ಅಂದಾಜು ೨೦% ಆಸ್ತಿ ತೆರಿಗೆ, ವಿದ್ಯುತ್ ಶುಲ್ಕದ ಮೇಲೆ ತೆರಿಗೆ, ಆಹಾರ ಪದಾರ್ಥಗಳ ಮೇಲೆ ತೆರಿಗೆ, ತಮ್ಮ ಸಂಬಳದಲ್ಲಿ ಉಳಿತಾಯವನ್ನು ಮಾಡಿ FD ಮಾಡಿದರೆ ಅದರ ಮೇಲೆ ತೆರಿಗೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆದರೆ ಆದರೆ ಮೇಲೆ ತೆರಿಗೆ ಹೀಗೆ ಎಲ್ಲದೂಕ್ಕೂ ತೆರಿಗೆಯನ್ನು ಪಾವತಿಸುತ್ತಾ ಯಾವುದೇ ಸೇವೆ – ಸೌಲಭ್ಯವನ್ನು ಉಚಿತವಾಗಿ ಪಡೆಯದೆ ಇರುವ ಖಾಸಗಿ ಕಂಪನಿಯ ಮಧ್ಯಮ ವರ್ಗದ ನೌಕರರು.

ಬೇರೆ ದೇಶಗಳ ಹಾಗೆ ಸೇವೆಗಳನ್ನು ಕೊಡಲು ನಮ್ಮ ದೇಶದ ಜನಸಂಖ್ಯೆಯ ಕಾರಣದಿಂದ ಸಾಧ್ಯವಾಗದೇ ಇರಬಹುದು. ಆದರೆ ತಮ್ಮ ಒಂದು ತಿಂಗಳ ಸಂಬಳವನ್ನು ತೆರಿಗೆಯಾಗಿ ನೀಡಿ ಒಂದು ತಿಂಗಳು ದೇಶಕ್ಕೆ ದುಡಿಯುವ ಮಧ್ಯಮ ವರ್ಗದ ಜನ ಸರಕಾರ ದಿಂದ ಒಂದಷ್ಟು ಸಣ್ಣ ಪುಟ್ಟ ಸೇವೆಗಳನ್ನು ಅಪೇಕ್ಷಿಸುತ್ತಾರೆ. ಯಾವುದಾದರೂ ತಮಗೆ ಸಂಬಂಧ ಪಟ್ಟ ಸರಕಾರಿ ಸೇವೆಗಳು ಉದಾಹರಣೆಗೆ ಬ್ಯಾಂಕ್ ಗಳಿಗೆ, RTO ಗಳಿಗೆ, ನಗರ ಪಾಲಿಕೆಗಳಿಗೆ, ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಗಳು ಸೌಜನ್ಯಯುತವಾಗಿ ವರ್ತಿಸಿ ಕೆಲಸವನ್ನು ಸರಾಗವಾಗಿ ಮಾಡಿಕೊಡಬೇಕೆಂದು, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ದಿನ ನಿತ್ಯದ ಜೀವನದಲ್ಲಿ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಹಳ್ಳ – ಗುಂಡಿರಹಿತವಾದ ಸುಗಮವಾಗಿ ಸಾಗಲು ರಸ್ತೆ ಬೇಕೆಂದು, ಟ್ರಾಫಿಕ್ ಅನ್ನು ನಿಯಂತ್ರಿಸಿ ಒಳ್ಳೆಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡೊವುದು, ಶಿಕ್ಷಣ, ಆರೋಗ್ಯ ದಂತಹ ಕ್ಷೇತ್ರಗಳ ದುಬಾರಿ ಬೆಲೆ ನಿಯಂತ್ರಣ, ಶಿಕ್ಷಣ ಕ್ಷೇತ್ರಗಳಲ್ಲಿ ಕೌಶಲ್ಯಯುತವಾದ ಪಠ್ಯಕ್ರಮಗಳನ್ನು ನಿರ್ಮಿಸಿ ಒಳ್ಳೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸ ಬೇಕೆಂದು ಮುಂತಾದವು ಮಾಧ್ಯಮ ವರ್ಗದ ಅಪೇಕ್ಷೆ ಅಥವಾ ಬಯಕೆಯಾಗಿರುತ್ತದೆ.

ಆದರೆ ಇಂತಹ ಮಾಧ್ಯಮ ವರ್ಗದ ಜನರ ಧ್ವನಿಯನ್ನು ಯಾರು ಕೇಳುತ್ತಿಲ್ಲವೋ ಎಂದೆನಿಸುತ್ತದೆ. ಆದಾಯ ತೆರಿಗೆ ಕಟ್ಟುವರಿಗೆ ಈ ಯೋಜನೆಗಳಿಲ್ಲ, ಅವರ ಮಕ್ಕಳಿಗೆ ವಿದ್ಯಾರ್ಥಿವೇತನ ಇಲ್ಲ. ಇವರಿಗೆ ಈ ಯೋಜನೆಗಳು ಯಾಕೆ ಬೇಕು ಮುಂತಾದ ಮಾತು ಗಳನ್ನು ನಮ್ಮಲೇ ಕೆಲವರು ಆಡಿದಾಗ ಒಂದು ತಿಂಗಳು ದೇಶಕ್ಕೆ ದುಡಿಯುವ ಮಧ್ಯಮ ವರ್ಗದ ಜನರ ಮನಸ್ಸಿಗೆ ತೀವ್ರವಾದ ಬೇಸರವನ್ನುಂಟು ಮಾಡುತ್ತದೆ.