Thursday, 19th September 2024

ಹುಚ್ಚು ಹಿಂದೂವಿನ ಹತ್ತು ಮುಖಗಳು

ರಾವ್ – ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಸಿ.ಬಸವೇಗೌಡರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ನಂತರದಲ್ಲಿ ಮಾಧ್ಯಮ ಗೋಷ್ಠಿ ಕರೆದಿದ್ದರು. ಗೋಷ್ಠಿ ಮುಗಿಸಿ ಮೆಟ್ಟಲಿಳಿಯುವಾಗ ಪರಿಚಯದ ರಾಜ್ಯ ರೈತ ಸಂಘದ ಸದಸ್ಯರೊಬ್ಬರು ಸಿಕ್ಕಿ, ಇದೇನು ಇಲ್ಲಿ,
ವಿಚಾರಿಸಿದರು, ಉತ್ತರಿಸಿದೆ. ಏನ್ಸಾರ್, ಮೈಸೂರಲ್ಲಿ ಇಷ್ಟೊಂದು ಜನ ವರದಿಗಾರರಿದ್ದಾರಾ? ಮತ್ತೆ ನಾವುವ ಕರೆದಾಗ ಯಾರೂ ಬರೋದೇ ಇಲ್ಲ? ಎಂದು ಅಳಲು ತೋಡಿಕೊಂಡರು. ನೀವೇನು ಸೈಟ್ ಕೊಡೋದಿಲ್ವಲ್ಲ ಎಂದು ಹಾಸ್ಯ ಮಾಡಿದೆ.

ಬಹಳಷ್ಟು ಮುಖ್ಯ ವಿಚಾರಗಳಿಗೆ ಸಂಬಂಧಪಟ್ಟಂತೆ ನಡೆಯುವ ಮಾಧ್ಯಮ ಗೋಷ್ಠಿ, ವಿಚಾರ ಸಂಕಿರಣ, ಇತ್ಯಾದಿಗಳಿಂದ ಮಾಧ್ಯಮ ಮಂದಿ ದೂರ ಉಳಿಯುವುದು ಹಿಂದಿನಿಂದಲೂ ಬಂದಿದೆ. ಈಗಂತೂ ಕೇಳಲೇ ಬೇಡಿ. ಮೈಸೂರು ವಿಶ್ವವಿದ್ಯಾ ಲಯದ ಇಂಗ್ಲಿಷ್ ವಿಭಾಗಕ್ಕೆ ವಿಶ್ವಾದ್ಯಂತ ಹೆಸರು ಗಳಿಸಿಕೊಟ್ಟವರಲ್ಲಿ ಪ್ರೊ.ಸಿ.ಡಿ.ನರಸಿಂಹಯ್ಯ (ಸಿಡಿಎನ್) ಪ್ರಮುಖರು. ಅವರು ಸಂಸ್ಥಾಪಿಸಿದ ಧ್ವನ್ಯಾಲೋಕ ಸಾಹಿತ್ಯ ಸಂಸ್ಥೆಯು ಅನೇಕ ಅಂತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಿಯೋಜಿಸು
ತ್ತಲೇ ಬಂದಿದೆ. ಅಲ್ಲಿ ಕೂಡ ಪತ್ರಕರ್ತರು ಹಾಜರಾಗುವುದು ವಿರಳ.

ಪ್ರಚಾರ ಬಯಸದ ಉನ್ನತ ವ್ಯಕ್ತಿ ಸಿಡಿಎನ್‌ಗೆ ಅದು ಕೊರತೆಯಾಗಿ ಕಾಣಲಿಲ್ಲ. ಅವರ ಕಾರ್ಯಕ್ರಮಗಳ ಯಶಸ್ಸನ್ನು ಅವರೆಂದೂ ಹಾಜರಾದವರ ಸಂಖ್ಯೆಯಿಂದ ಅಳೆದವರಲ್ಲ. ಆಸ್ಟ್ರೇಲಿಯಾದಿಂದ ಒಮ್ಮೆ ಬಂದಿದ್ದ ಪಂಡಿತೋತ್ತಮರೊಬ್ಬರ ಉಪನ್ಯಾಸಕ್ಕೆ ನಾನೂ ಸೇರಿದಂತೆ ಆರೋ ಎಂಟೋ ಮಂದಿಯಷ್ಟೇ ನೆರೆದಿದ್ದವು. ಅಂತಹದ್ದೇ ಒಂದು ವಿಚಾರ ಸಂಕಿರಣದಲ್ಲಿ ಟಿಪ್ಪು ಸುಲ್ತಾನ್ ಮಂಡ್ಯ ಮತ್ತು ಶ್ರೀರಂಗಪಟ್ಟಣದ ನಡುವೆ ವಾಸವಿದ್ದ ಮಂಡ್ಯಮ್ ಐಯ್ಯಂಗಾರ್ ಕುಟುಂಬಗಳ ಮಾರಣ ಹೋಮ ನಡೆಸಿದ್ದು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬೆಳಕಿಗೆ ಬಂತು. ಎಂದಿನಂತೆ ಅಲ್ಲಿ ಯಾವ ಪತ್ರಕರ್ತರೂ ಸುಳಿದಿರ ಲಿಲ್ಲ. ಜಗನ್ಮೋಹನ ಆರ್ಟ್ ಗ್ಯಾಲರಿಯ ಸೂಪರಿಂಟೆಂಡೆಂಟ್ ಆದ ನರಸಿಂಹ ಮತ್ತು ಸಂಸ್ಕೃತ ಪಾಂಡಿತ್ಯ ಗಳಿಸಿ ಅಪಾರ ಸಾಧನೆ ಮಾಡಿರುವ ಅವರ ಪತ್ನಿ ಎಂ.ಎ. ಜಯಶ್ರೀ ಜಂಟಿಯಾಗಿ ಮಂಡಿಸಿದ ವಿಚಾರದಲ್ಲಿ ಮೈಸೂರು ಇತಿಹಾಸದಿಂದ ಮರೆ ಯಾದ ಒಂದು ಅಂಶ (A forgotten aspect of Mysore history) ಎಂಬ ಟಿಪ್ಪು ನಡೆಸಿದ ನರಹತ್ಯೆಗಳಲ್ಲಿ ಒಂದಾದ ಈ ಪ್ರಕರಣ ವನ್ನು ಉಖಿಸಿದರು.

ಸುಮಾರು ೭೦೦ ಜನರ ಈ ಸಾಮೂಹಿಕ ಹತ್ಯೆಯ ಮಾಹಿತಿಯ ಮೂಲವನ್ನು ಸ್ಥಳೀಯ ಲಾವಣಿಕಾರರಿಂದ ಸಂಗ್ರಹಿಸಿರುವು
ನರಸಿಂಹ ದಂಪತಿಗಳು ವಿವರಿಸಿದರು. ವಿಚಾರ ಮಂಡನೆಗೆ ಮುನ್ನ ಪ್ರಾಸ್ತಾವಿಕ ನುಡಿಯಲ್ಲಿ ಹಾಗೂ ವಿಚಾರ ಮಂಡಿಸಿದ ನಂತರವೂ ಅವರು ಸ್ಪಷ್ಟೀಕರಿಸಿದ್ದು: ಇತಿಹಾಸದ ಪುಟಗಳಿಂದ ಮರೆಮಾಚಿರುವ ಈ ಮುಖ್ಯ ಘಟನೆಯನ್ನು ದಾಖಲಿಸುವು ದಷ್ಟೇ ತಮ್ಮ ಗುರಿ, ಬೇರಾವುದೇ ದುರುದ್ದೇಶವಿಲ್ಲ ಎಂದು.

(ವಿದ್ವತ್ಪೂರ್ಣ ವ್ಯಕ್ತಿಗಳೇ ನೆರೆದಿರುವ ಸಭೆಯಲ್ಲಿ ಕೂಡ ಇಂತಹ ಜಾಗರೂಕತೆ ಅವಶ್ಯಕವಲ್ಲವೇ, ಓದುಗರೇ? ಕಳೆದ ವಾರ ಪ್ಯಾರಿಸ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿವರಿಸಲು ಚಾರ್ಲಿ ಹೆಬ್ಡೊ ಪ್ರಕಟಿಸಿದ ಪ್ರಾಫೆಟ್ ಮೊಹಮದ್ ವ್ಯಂಗ್ಯಚಿತ್ರ ದಂಥದ್ದೇ ವ್ಯಂಗ್ಯಚಿತ್ರಗಳನ್ನು ಬಳಸುವಾಗ ಶಿರಚ್ಛೇದನಗೊಂಡ ಆ ಮಾಸ್ತರರ ಎದುರಿಗಿದ್ದಿದ್ದೂ ಮುಸ್ಲಿಮೇತರ ವಿದ್ಯಾರ್ಥಿ ಗಳೇ!) ಸದರಿ ವಿಚಾರಸಂಕಿರಣಕ್ಕೆ ನಾನು ವರದಿಗಾರನಾಗಿ ಹೋಗಿರಲಿಲ್ಲ ಮತ್ತು ಆ ಸಮಯದಲ್ಲಿ ನಾನು ಯಾವುದೇ
ಪತ್ರಿಕೆಯ ಜತೆ ಸಂಪರ್ಕವಿರಿಸಿಕೊಂಡಿರಲಿಲ್ಲ. ಇಂತಹ ವಿಷಯಗಳನ್ನು ಸಂಬಳಪಡೆಯುವ ನಿತ್ಯದ ವರದಿಗಾರರೇ ವರದಿ ಮಾಡಿದರೂ ಪ್ರಕಟಿಸದ ಅಥವಾ ಪ್ರಕಟಿಸಲು ಹಿಂದೆಮುಂದೆ ನೋಡುವ ಅಥವಾ ಸೂಕ್ತ(!) ಮಾರ್ಪಾಡುಗಳೊಂದಿಗೆ ಪ್ರಕಟಿಸುವ ವ್ಯವಸ್ಥೆಯಲ್ಲಿ ನಾವಿರುವಾಗ ಫ್ರೀಲಾನ್ಸರ್ ಆಗಿ ನಾನು ಅದನ್ನು ಕಳಿಸುವುದಾದರೂ ಎಲ್ಲಿಗೆ? ಇದಾದ ಎರಡು ವರ್ಷಗಳ ನಂತರ ನಾನೊಂದು ಇಂಗ್ಲಿಷ್ ಪತ್ರಿಕೆ ಸೇರಿಕೊಂಡೆ.

ಕೆಲವು ದಿನಗಳಲ್ಲಿ, ಅಂದಿನ ಉನ್ನತ ಶಿಕ್ಷಣ ಸಚಿವರಾದ ಶಂಕರ ಮೂರ್ತಿ ಟಿಪ್ಪು ಕುರಿತು ಹೇಳಿಕೆ ನೀಡಿ (ಮಾಮೂಲಿನಂತೆ) ವಿವಾದ ಸೃಷ್ಟಿಯಾಯಿತು. ಟಿಪ್ಪುವಿನ ಹತ್ಯಾಕಾಂಡವನ್ನು ಪ್ರಕಟಿಸಲು ಕಾರಣ ಸಿಕ್ಕಿತಲ್ಲ ಎಂದು ನನ್ನ ಸಂಪಾದಕರೊಂದಿಗೆ
ಮಾತನಾಡಿದೆ. ಇದು ಖಖ ಸುದ್ದಿ ಎಂದು ನನ್ನ ಪ್ರಸ್ತಾವನೆಯನ್ನು ತಳ್ಳಿಹಾಕಿದರು. ನಾನು ಯಾವುದೇ ಸಂಘ ಸಂಸ್ಥೆಯನ್ನು ಪ್ರತಿನಿಽಸುತ್ತಿಲ್ಲ, ನಾನೊಬ್ಬ ನಿಷ್ಪಕ್ಷಪಾತ ಪತ್ರಕರ್ತನಷ್ಟೇ ಎಂದು ಹೇಳಿದೆ. ಹೇಗಿದ್ದರೂ ನಾನು ಸೇವೆ ಸಲ್ಲಿಸುತ್ತಿದ್ದ ಪತ್ರಿಕೆ ನನ್ನ ವರದಿಯನ್ನು ನಾನು ಬರೆಯುವ ಮುನ್ನವೇ ತಿರಸ್ಕರಿಸಿದ್ದರಿಂದ, ಅದನ್ನು ವಿದೇಶಿ ವೆಬ್ಸೆಟ್ ಒಂದಕ್ಕೆ ಕಳಿಸಿ ಅದು ಅಲ್ಲಿ ಅದು ಪ್ರಕಟವಾಯಿತು, ಅದಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿತು.

ಬರೆಯುವ ಮುನ್ನ, ನನ್ನ ವರದಿಗೆ ಪ್ರಸ್ತುತತೆ ಒದಗಿಸಲು ಜಯಶ್ರೀ ಅವರಿಗೆ ಫೋನ್ ಮಾಡಿ ಹಿಂದೆ ವಿಚಾರ ಸಂಕಿರಣದಲ್ಲಿ ಅವರು ಬಹಿರಂಗಗೊಳಿಸಿದ್ದ ವಿಷಯವನ್ನು ಬರೆಯುತ್ತಿರುವುದಾಗಿ ಹೇಳಿದೆ. ಅವರಿಗೆ ಪುರುಸೊತ್ತಿಲ್ಲದಿರುವುದರಿಂದ ಅವರ ಕುಟುಂಬದ ಮತ್ತೊಬ್ಬ ಹಿರಿಯ ಸದಸ್ಯರಾದ ಮತ್ತೊಬ್ಬ ನರಸಿಂಹ ಅವರ ನಂಬರ್ ಕೊಟ್ಟರು. ಆಗ ನರಸಿಂಹ ಅವರು ಹೇಳಿದ ಮಾತಿನ ಒಕ್ಕಣೆ ಇಷ್ಟು: ಅಂದು ಟಿಪ್ಪು ನಮ್ಮ ವಂಶಜರನ್ನು ಕೊಂದ ಎಂದ ಮಾತ್ರಕ್ಕೆ, ಇಂದು ಅವನ ಪೀಳಿಗೆಯವರ ಮೇಲೆ
ದ್ವೇಷ ಸಾಽಸುವ ಉದ್ದೇಶ ನಮಗಿಲ್ಲ. ಯಾರಿಗೆ ಗೊತ್ತು, ಟಿಪ್ಪು ಅಂದು ನಮ್ಮವರನ್ನು ಕೊಲ್ಲಲು ಸಕಾರಣಗಳಿದ್ದಿರಬಹುದು.

(ಹೈದರ್ ಆಲಿ ಲಪಟಾಯಿಸಿದ್ದ ಮೈಸೂರು ಸಾಮ್ರಾಜ್ಯವನ್ನು ಹಿಂತಿರುಗಿ ಪಡೆಯಲು ಲಕ್ಷಮ್ಮಣ್ಣಿ ಬ್ರಿಟಿಷರ ಸಹಾಯ ಬೇಡು ತ್ತಾರೆ. ಅದಕ್ಕೆ ಮಧ್ಯಸ್ಥಿಕೆ ವಹಿಸಿ ಮದರಾಸ್ ಪ್ರೆಸಿಡೆನ್ಸಿಯನ್ನು ಭೇಟಿ ಮಾಡಿದವರು ತಿರಮಲೈ ಅಯ್ಯಂಗಾರ್. ಅವರ ಹತ್ತಿರದ ಮತ್ತು ದೂರದ ಸಂಬಂಧಿಕರೆಲ್ಲರನ್ನೂ ಅತ್ಯಂತ ಕ್ರೂರವಾಗಿ ಟಿಪ್ಪು ಹತ್ಯೆಗೈಯಲು ಕಾರಣ ಇದೇ. ಕಾರಣವೇನೇ ಇರಲಿ,
ಅಂತಹ ಬರ್ಬರ ಕ್ರೌರ್ಯದ ರೂವಾರಿಯನ್ನೂ ತಮ್ಮ ಔದಾರ್ಯದ ಒಡಲಿನಲ್ಲಿ ನರಸಿಂಹ ಅರಗಿಸಿಕೊಂಡಿದ್ದರು.) ಅದೇ ಔದಾರ್ಯದ ಮತ್ತೊಂದು ಪುರಾವೆ ಅವರಾಡಿದ ಮತ್ತೊಂದು ಮಾತಿನಿಂದ ಚಿಮ್ಮುತ್ತಿತ್ತು.

ಮೊನ್ನೆ-ಮೊನ್ನೆವರೆಗೂ (ಎಪ್ಪತ್ತರ ದಶಕ) ಅವರ (ಮುಸ್ಲಿಮರ) ಮನೆಗಳಲ್ಲಿ ಹೆರಿಗೆಗೆ (ಸೂಲಗಿತ್ತಿಯರಾಗಿ) ನಮ್ಮ ಹೆಂಗಸರೇ ಹೋಗುತ್ತಿದ್ದರು. ಆದರೆ ಅವರ ಮನೆಗಳಲ್ಲಿ ತಿನ್ನುವುದು, ಕುಡಿಯುವುದು ಇರಲಿಲ್ಲ. ಈಗಿನವರು ಎಡೆ ತಿನ್ನುತ್ತಾರೆ, ಕುಡಿಯು ತ್ತಾರೆ, ಆದರೆ ನಮ್ಮ ಹೃದಯಗಳು ಬೇರಾಗಿವೆ. ಅದೆಷ್ಟು ಮಾರ್ಮಿಕ, ನರಸಿಂಹರ ಮಾತು! ಸಾಂಪ್ರದಾಯಿಕ ಬ್ರಾಹ್ಮಣ
ಕುಟುಂಬವೊಂದು ತಮ್ಮ ಪೂರ್ವಜರನ್ನು ಕೊಲೆಗೈದ ವ್ಯಕ್ತಿಯ ಮತ್ತು ಅವನ ಸಮುದಾಯದ ಬಗ್ಗೆ ತಳೆವ ನಿಲುವಿದು. ಎಲ್ಲ ಕಡೆ ತಿನ್ನುತ್ತಾರೆ, ಎಂದರಲ್ಲವೇ. ಹೀಗೊಂದು ಉದಾಹರಣೆ ನೋಡಿ. ಜಗ್ ಸುರಯ್ಯಾ ಒಬ್ಬ ಹಿರಿಯ ಪತ್ರಕರ್ತ ಮತ್ತು ಅಂಕಣ ಕಾರ. ಆಕರ್ಷಕವಾಗಿ ಬರೆಯುತ್ತಾರೆ.

ಎಲ್ಲಕ್ಕೂ ಮಿಗಿಲಾಗಿ ಉದಾರವಾದಿ. ಹಲವು ವರ್ಷಗಳ ಹಿಂದೆ ಟೈಮ್ಸ ಆಫ್‌ ಇಂಡಿಯಾದ ತಮ್ಮ ಅಂಕಣದಲ್ಲಿ ಅವರ ತಾಯಿ ಬಗ್ಗೆ ಬರೆದುಕೊಂಡಿದ್ದರು. ಜಗ್‌ರ ಪತ್ನಿ ಮುಸ್ಲಿಂ. ತಾಯಿ ಅಪ್ಪಟ ಸಸ್ಯಾಹಾರಿ. ಹಾಗಿದ್ದೂ, ಸೊಸೆಯನ್ನು ಸಂತೃಪ್ತಿಗೊಳಿಸಲು
ಮುಂದಾಗಿದ್ದರು. ಮನೆಯಲ್ಲಿ ಮಾಂಸಾಹಾರಕ್ಕೆ ಅನುವು ಮಾಡಿಕೊಡುವುದರ ಜತೆಗೆ ತಾವು ಸೇವಿಸದಿದ್ದರೂ ತಾವೇ
ತಯಾರಿಸಿ ಉಣಬಡಿಸುತ್ತಿದ್ದರೆಂದು ಜಗ್ ಹೇಳಿಕೊಂಡಿದ್ದಾರೆ. ಇಂತಹ ಔದಾರ್ಯ ಬಿರಿಯುವಂಥ ವಾತಾವರಣದಲ್ಲಿ ಅಸಹಜ ತನಿಷ್ಕ್ ಜಾಹೀರಾತು ಬಿತ್ತರಗೊಂಡಿದ್ದು ಆಶ್ಚರ್ಯವಲ್ಲ.

ಆ ಜಾಹೀರಾತಿಗೆ ವ್ಯಕ್ತಗೊಂಡ ವ್ಯಾಪಕ ವಿರೋಧ ಬೆರಗು ಹುಟ್ಟಿಸುವಂಥಾದ್ದು. ಆ ವಿರೋಧದ ಬೆನ್ನ ನಿರೀಕ್ಷೆಯಂತೆ, ಲೇಖನ ವೊಂದು ಪ್ರಕಟವಾಯಿತು. ನಿರೀಕ್ಷೆಯಂತೆ ಆ ಲೇಖನದ ಶೀರ್ಷಿಕೆ ತಾನಿಷ್ಕ್ ಜಾಹೀರಾತು: ನಾವು ಮುಂಚೆಯೂ ಸೆಕ್ಯುಲರ್ ಆಗಿರಲಿಲ್ಲ. ಸೆಕ್ಯುಲರ್ ರೀತಿ ಮುಂದುವರಿಯುತ್ತೇವೆ. ಅದೇಕೆ ಅಷ್ಟು ಚೆನ್ನಾಗಿದ್ದ ಜಾಹೀರಾತನ್ನು ಹಿಂಪಡೆದರೆಂದು ಅಡುಗೆ
ಮಾಡುವುದರಲ್ಲಿ ನಿರತರಾಗಿದ್ದ ಲೇಖಕಿಯ ತಾಯಿ ಲೇಖಕಿಯನ್ನು ಕೇಳುವುದರೊಂದಿಗೆ ಲೇಖನ ಮುಕ್ತಾಯವಾಗುತ್ತದೆ. ಆಕೆ ಮಾಡುತ್ತಿದ್ದ ಅಡುಗೆಸಸ್ಯಾಹಾರವೋ, (ಜಗ್ ಸುರಯ್ಯಾರ ತಾಯಿಯ ಅಡುಗೆಯಂತೆ) ಮಾಂಸಾಹಾರವೋ ಸ್ಪಷ್ಟಪಡಿಸಿಲ್ಲ.
ಅಂದ ಹಾಗೆ, ಎರಡು ವಿಚಾರಗಳನ್ನು ಹೇಳಿ ನನ್ನ ಮಾತು ಮುಗಿಸುತ್ತೇನೆ.

೧. ಆ ಲೇಖನ ಪ್ರಕಟವಾಗಿದ್ದು ಡೆಕ್ಕನ್ ಹೆರಾಲ್ಡ ಪತ್ರಿಕೆಯಲ್ಲಿ. ಯಾವ ಡೆಕ್ಕನ್ ಹೆರಾಲ್ಡ ಗೊತ್ತಾಯಿತಲ್ಲ. ಹಿಂದೊಮ್ಮೆ ಅದಾವುದೋ ಸಣ್ಣ ಕತೆ ಪ್ರಕಟಿಸಿ, ದೊಡ್ಡ ಗಲಾಟೆಯಾಗಿತ್ತಲ್ಲ, ಆ ಡೆಕ್ಕನ್ ಹೆರಾಲ್ಡ. ೨. ಪಾಕಿಸ್ತಾನದಲ್ಲಿ ಒಂದು ಕೋಟಿ ಹಿಂದೂಗಳ ಹತ್ಯೆ ಆಗಿದೆ ಎಂಬ ಮಾಹಿತಿ ಹೊತ್ತ ಪುಸ್ತಕ ಹೊರಬಿದ್ದಿದೆ. ಆತಂಕಕ್ಕೆ ಕಾರಣವಿಲ್ಲ. ಕೇವಲ ಒಂದು ಕೋಟಿ ಅಷ್ಟೇಯಾ.