ಅಭಿವ್ಯಕ್ತಿ
ಡಾ.ಜಗದೀಶ ಮಾನೆ
ಪ್ರತಿಭಟನೆ ಅನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ಸಾಂವಿಧಾನಿಕವಾಗಿ ಇರುವಂತಹ ಹಕ್ಕು. ಅನ್ಯಾಯಗಳಾದಾಗ ಅದನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ.
ಹೋರಾಟಗಳಿಗೆ ಅದರದ್ದೆ ಆದಂತಹ ರೀತಿ, ನೀತಿ, ಪದ್ಧತಿಗಳೂ ಇರುತ್ತವೆ. ಆದರೆ ಹಿಂಸಾತ್ಮಕ ಮಾರ್ಗದ ಮೂಲಕ ದೇಶಕ್ಕೆ ಧಕ್ಕೆ ತರುವಂತಹ ಕೃತ್ಯಗಳನ್ನ ಎಸಗುವುದು ಅತ್ಯಂತ ಖಂಡನೀಯ. ಭಾರತದ ಇತಿಹಾಸದಲ್ಲೇ ಮೊದಲ ಬಾರಿ ಗಣರಾಜ್ಯೋತ್ಸವ ದಿನ ಸಂಭ್ರಮದ ಜತೆಗೆ ತ್ರಿವರ್ಣ ಧ್ವಜದ ಘನತೆಗೆ ಅಪಚಾರ ಎಸಗಿದ ಘಟನೆಗೆ ಸಾಕ್ಷಿಯಾಗಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸರಳ ಸಮಾರಂಭ ಭಾರತದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದರೆ, ಅದೇ ಕೆಂಪುಕೋಟೆ ಯಲ್ಲಿ ವಿವಿಧ ಸಂಘಟನೆಗಳ ಧ್ವಜಾರೋಹಣ ಮಾಡಿದ ಅಪಚಾರವೂ ನಡೆದಿದೆ. ರೈತರ ಟ್ರ್ಯಾಕ್ಟರ್ ಚಳುವಳಿಯನ್ನು ಹೈಜಾಕ್ ಮಾಡಿದ ಸಮಾಜ ಘಾತುಕರು ದೆಹಲಿಯಲ್ಲಿ ಇಡೀ ದಿನ ಅಟ್ಟಹಾಸ ಮೆರೆದಿದ್ದಾರೆ.
ಯಾರೋ ಮಾಡಿದ ತಪ್ಪಿಗೆ ಇಡೀ ರೈತಕುಲ ತಲೆ ತಗ್ಗಿಸುವಂತಾಗಿದೆ. ವಿರೋಧ ಗಳಾದರೂ ಯಾವುದಕ್ಕೆ? ವಿನೂತನ ಕೃಷಿ ಕಾಯಿದೆಯಲ್ಲಿ ವಿರೋಧಿಸುವಂತಹದ್ದಾದರೂ ಏನಿದೆ? ಈ ಕಾಯಿದೆಯಿಂದ ರೈತರಿಗೆ ಅನ್ಯಾಯವಾಗುತ್ತಾ? ವಾಸ್ತವದ ಸತ್ಯಾ ಸತ್ಯತೆಗಳನ್ನು ಅರಿಯಬೇಕಿದೆ. ದೇಹಕ್ಕೆ ಹೇಗೆ ಹೃದಯ ಮುಖ್ಯವೋ ಹಾಗೆ ರೈತ ಕೂಡಾ ಈ ದೇಶಕ್ಕೆ ಬೆನ್ನೆಲುಬು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಸಾರಿದ ಈ ದೇಶದಲ್ಲಿನ ಕೃಷಿಕನ ಸ್ಥಿತಿ ಚಿಂತಾಜನಕವಾಗಿದೆ.
ಭಾರತ ಸ್ವತಂತ್ರಗೊಂಡು ಏಳು ದಶಕಗಳು ಕಳೆದಿವೆ, ಕೃಷಿ ಕ್ಷೇತ್ರ ಒಂದನ್ನು ಹೊರತುಪಡಿಸಿ, ಬಹುತೇಕ ಕ್ಷೇತ್ರಗಳು ಬಲಿಷ್ಠ ವಾಗುತ್ತಿವೆ, ತಂತ್ರಜ್ಞಾನ ಬಲಗೊಳ್ಳುತ್ತಿದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹದಗೆಡು ತ್ತಲೇ ಹೋಗುತ್ತಿದೆ. ಸಾಲದ ಬಾಧೆಯಿಂದ ಆತ್ಮಹತ್ಯಾ ಪ್ರಕರಣ ಗಳು ಹೆಚ್ಚುತ್ತಲೇ ಇವೆ. ಈ ಸ್ಥಿತಿಗೆ ಬ್ರೇಕ್ ಹಾಕುವುದು ಮತ್ತು ಆರ್ಥಿಕವಾಗಿ ದೈನ್ಯಸ್ಥಿತಿ ಯಲ್ಲಿರುವಂತಹ ರೈತರ ಸಬಲೀಕರಣವಾಗಬೇಕು ಹಾಗೂ 2022ರ ವೇಳೆಗೆ ಭಾರತದ ರೈತರ ಆದಾಯ ವನ್ನು ಇಮ್ಮಡಿಗೊಳಿಸುವುದು.
ಕೃಷಿ ಕ್ಷೇತ್ರವನ್ನು ಲಾಭದಾಯಕ ಮಾಡುವ ಮಹೋನ್ನತ ಉದ್ದೇಶವನ್ನಿಟ್ಟುಕೊಂಡ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ರೈತಪರವಾದ ಮೂರು ನೂತನ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿದೆ. ಮೊದಿ ಸರಕಾರದ ಮೊದಲ ಅವಽಯಲ್ಲಿ ಹಲವಾರು ಉಪಕ್ರಮಗಳನ್ನು ಆರಂಭಿಸಿತ್ತು. ಬೇವು ಲೇಪಿತ ಯುರಿಯಾ, ಬಿತ್ಸ್‌ಸೆ ಬಾಜಾರ್ ತಕೊ, ಕಿಸಾನ್ ಕ್ರೇಡಿಟ್ ಕಾರ್ಡ್, ಕೃಷಿ ಸಮ್ಮಾನ ಯೋಜನೆಯಡಿ ವರ್ಷಕ್ಕೆ ರೈತರಿಗೆ 6 ಸಾವಿರ ರು. ಮತ್ತು ಮುಂದಿನ ದಿನಗಳಲ್ಲಿ 60 ವರ್ಷ ದಾಟಿದ ರೈತರಿಗೆ ಪೆನ್ ಷನ್ ಯೋಜನೆ, ಈ ರೀತಿಯ ರೈತ ಪರವಾದ ಯೋಜನೆ ಗಳನ್ನು ಜಾರಿಗೊಳಿಸಲಾಗಿತ್ತು.
ಆದರೀಗ ಕೇಂದ್ರ ಸರಕಾರ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದೆ. ನೂರಾರು ವರ್ಷಗಳಿಂದ ಗುಲಾಮಗಿರಿಯಲ್ಲಿದ್ದಂಥ ಭಾರತದ ಕೃಷಿ ಕ್ಷೇತ್ರಕ್ಕೆ ಒಂದು ಹಂತದಲ್ಲಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ. ಈ ನೂತನ ಕೃಷಿ ಕಾಯಿದೆಯಡಿ ರೈತನು ತಾನು ಬೆಳೆದ ಬೆಳೆಗಳನ್ನು ಹೊರಗಡೆ ಹೆಚ್ಚಿನ ಬೆಲೆಗಳಿಗೆ, ತನಗಿಚ್ಛೆ ಬಂದವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ ರೈತನಿಗಿದೆ.
ಕೃಷಿಯಲ್ಲಿ ಖಾಸಗಿ ಬಂಡವಾಳವನ್ನು ಆಕರ್ಷಿಸಿ ಉತ್ಪಾದಕತೆ ಹೆಚ್ಚಿಸುವುದು ಮತ್ತು ಉತ್ಪನ್ನಗಳಿಗೆ ನ್ಯಾಯ ಬೆಲೆ ಸಿಗುವಂತೆ ಮಾಡುವುದು ಈ ಮೂರು ನೂತನ ಕಾಯಿದೆಗಳ ಪ್ರಮುಖ ಉದ್ದೇಶವಾಗಿದೆ.
ಎ.ಪಿ.ಎಂ.ಸಿ. ಕಾಯಿದೆಯ ಇತಿಹಾಸ: ಬ್ರಿಟೀಷರು ಅಂದು 1855ರ ಸುಮಾರಿನಲ್ಲಿ ತಮ್ಮ ಲಾಭಕ್ಕೋಸ್ಕರ ಈ ಕಾಯಿದೆ ಯನ್ನು ಜಾರಿಗೆ ತಂದಿದ್ದರು. ಅವರ ಮೂಲ ಉದ್ದೇಶ ಎ.ಪಿ.ಎಂ.ಸಿ.ಗಳ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಭಾರತದ ಹತ್ತಿಯನ್ನು ಖರೀದಿಸುವುದು, ಇಂಗ್ಲೆಂಡ್‌ನಲ್ಲಿ ಅದರಿಂದ ಕಾಟನ್ ಬಟ್ಟೆಗಳನ್ನು ತಯಾರಿಸಿ ಅದನ್ನು ಪುನಃ ಭಾರತಕ್ಕೆ ತಂದು ಸರಿಸುಮಾರು ಎಂಟರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು. ಹಾಗಾಗಿ ಅವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅದಕ್ಕೆ ಬೇಕಾದ ಬೇಸಿಕ್ ರಾ ಮಟಿರಿಯಲ್ ಪಡೆದುಕೊಳ್ಳುವ ಒಂದೇ ಒಂದು ಉದ್ದೇದಿಂದ ಈ ಎ.ಪಿ.ಎಂ.ಸಿ. ಕಾಯಿದೆಯನ್ನು ಅಂದು ಜಾರಿಗೆ ತಂದಿದ್ದರು.
ಭಾರತ ಸ್ವತಂತ್ರ್ಯಗೊಂಡ ನಂತರ ಮೊಟ್ಟ ಮೊದಲನೆಯದಾಗಿ ನಮ್ಮ ಸರಕಾರಗಳು ಈ ರೀತಿಯ ವಸಾಹತುಶಾಹಿ ಹಿತಾಸಕ್ತಿ ಗಳು, ಬ್ರಿಟೀಷರ ಹಿತಾಸಕ್ತಿಗಳನ್ನು ಕಾಪಾಡುವಂಥ ಯಾವೆಲ್ಲ ಕಾನೂನುಗಳಿತ್ತೊ, ಅವೆಲ್ಲವುಗಳನ್ನು ರದ್ದುಗೊಳಿಸಿ ಭಾರತೀಯ ಕೃಷಿಕರಿಗೆ ಸಹಕಾರಿಯಾಗಬಲ್ಲಂತಹ ಯೋಗ್ಯ ಕಾಯಿದೆಗಳನ್ನು ಜಾರಿಗೆ ತರಬೇಕಿತ್ತು.
ಬದಲಾಗಿ ದಲ್ಲಾಳಿಗಳ ಕೈಯಲ್ಲಿ ರೈತನನ್ನು ಬಡವ ನ್ನಾಗಿಸುತ್ತ ಬಂದಂತಹ ಸರಕಾರಗಳ ಈ ಕೃತ್ಯ ನಿಜಕ್ಕೂ ನಾಚಿಗೇಡಿನ ಸಂಗತಿ. ವಿಪರ್ಯಾಸ ನೋಡಿ ಹೇಗಿದೆ! ರೈತ ತನ್ನ ಸ್ವಂತ ಹಣ ಖರ್ಚು ಮಾಡಿ, ತನ್ನ ಶ್ರಮ ಹಾಕಿ, ಬೆಳೆಗಳನ್ನು ಬೆಳೆಯುವುದು, ಅಲ್ಲದೇ ಅದನ್ನು ಮಾರಲು ಎ.ಪಿ.ಎಂ.ಸಿ.ಗಳಿಗೆ ತೆಗೆದುಕೊಂಡು ಹೋಗುವ ಟ್ರಾನ್ಸ್ ಪೋರ್ಟ್ ಚಾರ್ಜ್ ಕೂಡಾ ರೈತನದ್ದೇ ಆಗಿರುತ್ತದೆ. ಆದರೆ ಅದನ್ನು ಯಾರಿಗೆ ಮತ್ತು ಎಷ್ಟು ಬೆಲೆಗೆ ಮಾರಾಟ ಮಾಡಬೇಕೆಂಬುದನ್ನು ಮಾತ್ರ ದಲ್ಲಾಳಿಗಳು
ನಿರ್ಧರಿಸುತ್ತಿದ್ದರು! ಇದು ರೈತನ ಸ್ವಾತಂತ್ರ್ಯ ಹರಣ ಅಲ್ಲದೆ ಮತ್ತಿನ್ನೇನು?
ನೂತನ ಕೃಷಿ ಕಾಯಿದೆಗಳು: ಒಟ್ಟು ಮೂರು ಹೊಸ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಲಾಗಿದೆ. ಮೊದಲ ಕಾಯಿದೆ, ‘ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ. ಎರಡನೆಯ ಕಾಯಿದೆ, ‘ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ’. ಇನ್ನೂ ಕೊನೆಯದ್ದು, ‘ಅಗತ್ಯ ಸರಕುಗಳ ಮಸೂದೆ’. ಈ ಮೂರು ಕಾಯಿದೆಗಳು ಜಾರಿಗೊಂಡ ನಂತರ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಕೃಷಿ ಉತ್ಪನ್ನಗಳ ಬೆಂಬಲಿತ ಬೆಲೆಗಳನ್ನೂ ಕೂಡಾ ಕೇಂದ್ರ ಸರಕಾರ ಹೆಚ್ಚಿಸಿದೆ.
ಹಿಂದಿನ ಯು.ಪಿ.ಎ. ಸರಕಾರದ ಅವಧಿಯಲ್ಲಿ 3.74 ಲಕ್ಷ ಕೋಟಿ ರು. ಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆಗಳಿಗೆ ನಿಗದಿ ಪಡಿಸಿತ್ತು. ಇದೀಗ ಮೋದಿ ಸರಕಾರದ ಅವಧಿಯಲ್ಲಿ 8 ಲಕ್ಷ ಕೋಟಿ ರುಪಾಯಿಗಳನ್ನು ಕನಿಷ್ಠ ಬೆಂಬಲ ಬೆಲೆಗಳಿಗೆ ಹೆಚ್ಚಿಸಿದೆ. ಹಿಂದಿನ ಯು.ಪಿ.ಎ. ಸರಕಾರದ ಅವಧಿಯಲ್ಲಿ ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 365 ರು. ಮತ್ತು ಗೋಧಿಯ ಕನಿಷ್ಠ ಬೆಂಬಲ ಬೆಲೆ 270 ರು.ಗಳಷ್ಟು ಏರಿಸಿತ್ತು. ಈ ಸರಕಾರದಲ್ಲಿ ಅಕ್ಕಿಯ ಬೆಲೆ 568 ರು. ಹಾಗೂ ಗೋಽಯ ಮೇಲೆ 575 ರು. ಗಳಷ್ಟು ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ.
ನೂತನ ಕೃಷಿ ಕಾಯಿದೆಯ ಅಂಶಗಳು: ಮೊದಲ ಕಾಯಿದೆಯ ಅಡಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮುಂಚಿತ ಯಾವುದೇ ಕಂಪನಿ, ಸಂಸ್ಥೆಗಳಿಗೆ ತಮಗಿಚ್ಛೆ ಬಂದ ದರದಲ್ಲಿ ಮಾರಾಟ ಮಾಡಬಹುದು. ಎ.ಪಿ.ಎಂ.ಸಿ. ಕಾನೂನುಗಳೂ ಇರುತ್ತವೆ. ಆದರೂ ಅದನ್ನು ಹೊರತುಪಡಿಸಿ ಹೊರಗಡೆ ಮುಕ್ತವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಕೃಷಿ ಉತ್ಪನ್ನದ ಪೂರೈಕೆ, ಗುಣಮಟ್ಟ ದರ್ಜೆ, ಬೆಲೆ ಮತ್ತು ಪ್ರಾಯೋಜಕರು ಪೂರೈಸುವ ಸೇವೆಗಳ ಕುರಿತಾಗಿ ಒಪ್ಪಂದಗಳನ್ನು ಮೊದಲೇ ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ತಕರಾರು ತಂಟೆಗಳು ಉಂಟಾಗುವುದಿಲ್ಲ.
ಇನ್ನೂ ಎರಡನೇಯ ಕಾನೂನಿನಲ್ಲಿ ಒಂದಿಷ್ಟು ಷರತ್ತುಗಳಿವೆ. ರೈತ ಯಾವ ಸಂಘ – ಸಂಸ್ಥೆ, ಕಂಪನಿಗಳ ಜತೆಗೆ ಕರಾರು ಒಪ್ಪಂದಗಳನ್ನು ಮಾಡಿಕೊಂಡರೂ ಆ ಅಗ್ರಿಮೆಂಟ್ ಕೇವಲ ರೈತರು ಬೆಳೆದ ಉತ್ಪನ್ನಗಳಿಗೆ ಮಾತ್ರ ಸಂಬಂಧಿಸಿರುತ್ತದೆ ಹೊರತು ರೈತರ ಜಮೀನಿನ ಬಗ್ಗೆ ಯಾವುದೇ ಕಾರಣಕ್ಕೂ ಯಾವುದೇ ಅಗ್ರಿಮೆಂಟ್‌ಗಳನ್ನು ಮಾಡಿಕೊಳ್ಳುವಂತಿಲ್ಲ ಎಂಬ ಅತ್ಯಂತ ಕಠಿಣವಾದ ಕಂಡೀಷನ್‌ನ್ನು ಹಾಕಲಾಗಿದೆ.
ಮತ್ತೊಂದು ಅಂಶ ಕೇವಲ ಲಿಜ್ ಮತ್ತು ವ್ಯಾಪಾರದ ಮಾತಲ್ಲಿ ಖಾಯಂ ಆಗಿ ಬಂದು ರೈತರ ಜಾಗಗಳಲ್ಲಿ ಕಟ್ಟಡಗಳನ್ನು ಕಟ್ಟಲಿಕ್ಕೆ ಅವಕಾಶವಿಲ್ಲ. ರೈತರು ಯಾವ ದಿನ ಪದಾರ್ಥಗಳನ್ನು ಕೊಡುತ್ತಾರೋ ಅದೇ ದಿನ ಹಣ ಪಾವತಿಸಬೇಕು ಅಥವಾ
ಮೂರು ದಿನಗಳ ಒಳಗಡೆ ರೈತರಿಗೆ ಹಣ ಭರಿಸಬೇಕು. ಆ ವಽಯಲ್ಲಿ ಹಣ ಭರಿಸದೇ ಹೋದರೆ ರೈತರು ಅವರ ಮೇಲೆ ಕೇಸ್ ಹಾಕಬಹುದು, ಪರಿಣಾಮವಾಗಿ ಅದರ ಒಂದೂವರೆ ಪ್ರತಿಶತ ದಂಡವನ್ನು ಆ ಕಂಪನಿಗಳು ರೈತನಿಗೆ ನೀಡಬೇಕಾಗುತ್ತದೆ ಮತ್ತು ಈ ಕೇಸ್ ಕೇವಲ 30 ದಿನಗಳ ಒಳಗೆ ಮುಗಿಯುತ್ತದೆ.
ಇನ್ನೂ ಮೂರನೇ ಕಾಯಿದೆಯಲ್ಲಿ: Could Storage food Prossing Inspostructureಗಳು ಇಲ್ಲದೇ ಇರುವುದರಿಂದಾಗಿ
ಯಾರೂ ಕೂಡಾ ಅದನ್ನು ಒಂದು ಮಟ್ಟದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಇರಲು ಸಾಧ್ಯವಾಗದೇ ಇರುವಂತಹ ಕಾಯಿದೆ ಗಳು ಇದ್ದಿದ್ದರಿಂದಾಗಿ ಹೂಡಿಕೆಗಳು ಬಂದಿರಲಿಲ್ಲ. ಹಾಗಾಗಿ ಅದನ್ನು ತೆಗೆದುಹಾಕಿ Essential Comondityಗೆ ಬದಲಾವಣೆ ಯನ್ನು ತರಲಾಗಿದೆ.
ವಿರೋಧ ಆಗುತ್ತಿರುವುದು ಎಲ್ಲಿ ಮತ್ತು ಯಾಕೆ?: 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ
ತನ್ನ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ನಾವು ಮೊಟ್ಟ ಮೊದಲು ಮಾಡುವ ಕೆಲಸ ರೈತರಿಗೆ ಮಾರಕವಾದಂತಹ ಈ ಎ.ಪಿ.ಎಂ.ಸಿ. ಕಾಯಿದೆಯನ್ನು ಕಿತ್ತೊಗೆಯುತ್ತೇವೆ ಎಂಬ ಭರವಸೆಯನ್ನ ನೀಡಿತ್ತು!
ವಿಪರ್ಯಾಸದ ಸಂಗತಿ ಎಂದರೆ 2010ರ ಸಂದರ್ಭದಲ್ಲಿ ಕೇಂದ್ರದ ಕೃಷಿ ಮಂತ್ರಿಯಾಗಿದ್ದಂತಹ ಶರದ್ ಪವಾರ್ ರವರು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ಅದರಲ್ಲಿ ‘ರೈತರಿಗೆ ಬಹಳ ಅನ್ಯಾಯವಾಗುತ್ತಿದೆ, ಹಾಗಾಗಿ ಹೊಸ ಕೃಷಿ ಕಾಯಿದೆಗಳನ್ನು ತರಬೇಕೆಂಬ ಅಂಶಗಳನ್ನು ಆ ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ದುರ್ದೈವ ವಶಾತ್ ಈಗ ಅವರೆ ಈ ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ. ಅದು ರಾಜಕೀಯ ಲಾಭಕ್ಕಾಗಿ. ಇದು ಕಾಂಗ್ರೆಸ್ ಪಕ್ಷದ ಆತ್ಮವಂಚನೆ ಅಲ್ಲದೇ ಮತ್ತಿನ್ನೇನು ಹೇಳಿ? ಬಿಹಾರ ಮತ್ತು ಕೇರಳ ರಾಜ್ಯಗಳಲ್ಲಿ ಎಪಿಎಂಸಿ ಕಾಯಿದೆಗಳೇ ಇಲ್ಲ.
ಇದೀಗ ಮೋದಿ ಸರಕಾರದ ಕೃಷಿ ಕಾಯಿದೆಯಲ್ಲಿನ ತಿದ್ದುಪಡಿಗಳನ್ನು ಬೆಂಬಲಿಸುವ ಬದಲಾಗಿ ಅವರೂ ವಿರೋಧಿಸುತ್ತಿದ್ದಾರೆ. ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇದು ಕಮ್ಯುನಿಷ್ಟರ ಕುತಂತ್ರ ವಾಗಿದೆ. ಇವರ ಮೂಲ ಉದ್ದೇಶ, ನಶಿಸಿ ಹೋಗುತ್ತಿರುವ
ತಮ್ಮ ಚಳುವಳಿಗಳಿಗೆ ಪುಷ್ಠಿ ನೀಡುವುದಕ್ಕಾಗಿ ಈ ರೈತರ ಚಳುವಳಿಗಳನ್ನು ಒಂದು ರೀತಿ ಲಾಂಚಿಂಗ್ ಪ್ಯಾಡುಗಳನ್ನಾಗಿ ಬಳಸಿ ಕೊಳ್ಳುತ್ತಿದ್ದಾರೆ.
ಇನ್ನೂ ದೇಶದಲ್ಲಿ ಅತೀ ಹೆಚ್ಚು ಆಹಾರ ಉತ್ಪಾದನೆ ಆಗುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಾರ್ಷಿಕ 55 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆ ಯಾಗುತ್ತದೆ. ಎರಡನೆಯದಾಗಿ ಮಧ್ಯಪ್ರದೇಶದಲ್ಲಿ 33 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯಾಗುತ್ತದೆ. ತದನಂತರದ ಸ್ಥಾನದಲ್ಲಿ ಪಂಜಾಬ್ 29, ಹರಿಯಾಣದಲ್ಲಿ 17 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತದೆ.
2017-18ರ ಸಂದರ್ಭದಲ್ಲಿ Food Corporation of India ಒಟ್ಟು ಆಹಾರ ಧಾನ್ಯಗಳ ಖರೀದಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಈ ಎರಡೇ ರಾಜ್ಯಗಳಿಂದ ಶೇ.43.24ರಷ್ಟು ಖರೀದಿಸಿದ್ದರೆ ಅತೀ ಹೆಚ್ಚು ಆಹಾರ ಉತ್ಪಾದಿಸುವ ಉತ್ತರ ಪ್ರದೇಶ ದಿಂದ ಕೇವಲ ಶೇ.2ರಷ್ಟು ಅಕ್ಕಿ, ಗೋಧಿಯನ್ನು ಖರೀದಿಸಿದ್ದಾರೆ. ಆದರೆ ಗಲಾಟೆ ಹೋರಾಟಗಳು ಉತ್ತರಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಆಗುತ್ತಿಲ್ಲ. ಬದಲಾಗಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಮಾತ್ರ ನಡೆಯುತ್ತಿವೆ ಎಂದರೆ ಇದೊಂದು ರೀತಿಯ ಕುತಂತ್ರ ಅಲ್ಲವೇ!
ಹೋರಾಟದ ನೆಪಗಳಲ್ಲಿ ರೈತರನ್ನು ಮೋಸಗೊಳಿಸುತ್ತಿದ್ದಾರೆ. ಸಮಸ್ಯೆಗಳಾಗುತ್ತಿರುವುದು ಯಾರು ಎ.ಪಿ.ಎಂ.ಸಿ.ಗಳನ್ನು ಕಂಟ್ರೋಲ್ ಮಾಡುತ್ತಿದ್ದಾರೊ, ಯಾರು ರೈತನಿಗೆ ಪಾರದರ್ಶಕತೆ ಇಲ್ಲದೆ ಬೆಲೆಯಲ್ಲಿ ಮೋಸ ಮಾಡುತ್ತಿದ್ದಾರೊ, ಯಾರು ವಿರೋಧ ಪಕ್ಷಗಳಲ್ಲಿದ್ದಾರೋ ಅಂಥವರಿಗೆ ಮಾತ್ರ ಈ ನೂತನ ಕೃಷಿ ಕಾನೂನಿನಿಂದ ಸಮಸ್ಯೆಯಾಗುತ್ತಿದೆ ಹೊರತು
ರೈತನಿಗಲ್ಲ.
ಆಶಾದಾಯಕ ಘಟನೆಗಳು: ಈ ಕಾಯಿದೆ ಜಾರಿಯಾದ ನಂತರ ದೇಶದ ಹಲವಾರು ರಾಜ್ಯಗಳಲ್ಲಿ ಕೆಲವೊಂದಿಷ್ಟು ಆಶಾದಾ ಯಕ ಘಟನೆಗಳು ನಡೆಯುತ್ತಿವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಆಯಿಲ್ ಮಿಲ್ಲುಗಳ ಮಾಲೀಕರು ರೈತರನ್ನು ನೇರವಾಗಿ ಸಂಪರ್ಕ ಮಾಡಿದ್ದಾರೆ. ಆ ಮೂಲಕ ರೈತರ ಸಾಸಿವೆಯನ್ನು ಕನಿಷ್ಠ ಶೇ.25ರಷ್ಟು ಹೆಚ್ಚಿನ ಬೆಲೆಗೆ ಕೊಂಡುಕೊಂಡಿದ್ದಾರೆ.
ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಒಂದಿಷ್ಟು ಕಂಪನಿಗಳು ಆಲೂಗಡ್ಡೆ ಬೆಳೆಯುವ ರೈತರನ್ನು ನೇರವಾಗಿ ಸಂಪರ್ಕ ಮಾಡಿ ಶೇ.20ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಣ ಕೊಟ್ಟು ಖರೀದಿ ಮಾಡಿವೆ.
ಉತ್ತರಪ್ರದೇಶದ ಆಲಿಘರ್ ನಲ್ಲಿ 1300 ರೈತರು ಒಟ್ಟುಗೂಡಿ Fortune Rice ಎನ್ನುವ ಕಂಪನಿ ಯೊಂದಿಗೆ ಎಕ್ಸ್‌ಪೋರ್ಟ್
ಮಾಡಬಲ್ಲಂತಹ ಅತ್ಯುತ್ತಮ ಗುಣಮಟ್ಟದ ಭತ್ತ ಬೆಳೆಯುವ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಮೂಲಕ ರೈತರಿಗೆ ಇದರಲ್ಲಿ ಶೇ.22ರಷ್ಟು ಹೆಚ್ಚಿನ ಹಣ ಸಿಗುತ್ತದೆ. ಹೀಗೆ ಇನ್ನೂ ಹಲವಾರು ರಾಜ್ಯಗಳಲ್ಲಿ ಈ ರೀತಿಯ ರೈತ ಆಶಾದಾಯಕ ಘಟನೆ ಗಳು ನಡೆಯುತ್ತಿವೆ.
ಹಾಗಾಗಿ ಈ ನೂತನ ಕೃಷಿ ಕಾಯಿದೆಯ ಅನ್ವಯ ರೈತರ ಬದುಕು ಬಂಗಾರವಾಗುವು ದರಲ್ಲಿ ಯಾವುದೇ ಸಂದೇಹವಿಲ್ಲ.