Saturday, 14th December 2024

ಇವರು ಸತ್ತವರನ್ನೂ ಮಾತನಾಡಿಸುತ್ತಾರೆ ?

ಹಿಂದಿರುಗಿ ನೋಡಿದಾಗ

ಮಾನವನ ಇತಿಹಾಸದಲ್ಲಿ ಮರಣೋತ್ತರ ಪರೀಕ್ಷೆ ಯಾವಾಗ ಶುರುವಾಯಿತು ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಕ್ರಿ.ಪೂ.೩೦೦೦ ವರ್ಷಗಳ ಹಿಂದಿನ ಈಜಿಪ್ಷಿಯನ್ ಸಂಸ್ಕೃತಿಯ ಜನರು, ಮೃತದೇಹದ ಬಗ್ಗೆ ಮೊದಲ ಬಾರಿಗೆ ಕುತೂಹಲ ತಳೆದರು ಎನ್ನಬಹುದು.

ರೋಮ್ ಸಾಮ್ರಾಜ್ಯದ ಮಹಾ ಸೇನಾಧಿಪತಿಯೂ, ರಾಜಕೀಯ ಧುರೀಣನೂ ಆಗಿದ್ದ ಗೌಸ್ ಜೂಲಿಯಸ್ ಸೀಸರ್ ಕ್ರಿ.ಪೂ.೫೦-೫೮ರ ನಡುವೆ ಗಾಲ್ಫ್,
ಗಾಲಿಕ್, ಜರ್ಮೇನಿಕ್ ಮತ್ತು ಬ್ರಿಟೋನಿಕ್ (ಇಂದಿನ ಫ್ರಾನ್ಸ್, ಬೆಲ್ಜಿಯಂ, ಜರ್ಮನಿ ಮತ್ತು ಸ್ವಿಜರ್ಲೆಂಡ್) ಬುಡಕಟ್ಟುಗಳ ಮೇಲೆ ಯುದ್ಧ ಸಾರಿದ. .ಪೂ.೫೨ರಲ್ಲಿ
ನಡೆದ ‘ಅಲೀಸಿಯ ಸಂಗ್ರಾಮ’ದಲ್ಲಿ ಗಾಲ್ ದೇಶಗಳೆಲ್ಲ ಸೋತವು. ಸೀಸರ್ ನೇತೃತ್ವದ ರೋಮ್ ಪ್ರಜಾಪ್ರಭುತ್ವವು ವಿಜಯಿಯಾಯಿತು. ಗಾಲ್ ಸಮರದ ನಂತರ, ಮಹಾ ಸೇನಾಧಿಕಾರಿ ಪಟ್ಟಣದಿಂದ ಕೆಳಗಿಳಿಯುವಂತೆ ರೋಮನ್ ಸೆನೆಟ್ (ಶಾಸನಸಭೆ) ಆಜ್ಞಾಪಿಸಿತು. ಇದನ್ನು ಸೀಸರ್ ತಿರಸ್ಕರಿಸಿದಾಗ ರೋಮ್‌ನಲ್ಲಿ ಅಂತರ್ಯುದ್ಧ ಶುರುವಾಯಿತು.

ಇದರಲ್ಲಿ ಸೀಸರ್ ಗೆದ್ದು ಕ್ರಿ.ಪೂ.೪೫ರವರೆಗೆ ರೋಮ್‌ನ ಸರ್ವಾಧಿಕಾರಿಯಾದ. ಹೀಗಾಗಿ ರೋಮ್‌ನಲ್ಲಿ ಪ್ರಜಾಪ್ರಭುತ್ವ ಮರೆಯಾಗಿ ಸಾಮ್ರಾಜ್ಯಶಾಹಿ ಶುರುವಾಯಿತು. ಕ್ರಿ.ಪೂ.೪೪ರಲ್ಲಿ ಸೀಸರ್ ತಾನು ‘ಜೀವಮಾನಪೂರ್ಣ ಸರ್ವಾಧಿಕಾರಿ’ಯಾಗುವುದಾಗಿ ಘೋಷಿಸಿದಾಗ ಬ್ರೂಟಸ್ ಮತ್ತು ಕೇಸಿಯಸ್ ಎಂಬ ಸೆನೆಟರುಗಳು ಒಳಗೊಳಗೇ ದಂಗೆಯೆದ್ದು ಸೀಸರನ ಹತ್ಯೆಯ ಯೋಜನೆ ರೂಪಿಸಿದರು. ಇವರ ಪೈಕಿ ಬ್ರೂಟಸ್, ಸೀಸರನ ಆಪ್ತಮಿತ್ರ. ಒಮ್ಮೆಲೇ ಮುಗಿಬಿದ್ದ ಸೆನೆಟರುಗಳನ್ನು ಎದುರಿಸಲು ಸೀಸರ್ ಸಿದ್ಧ ನಾದ. ಆದರೆ ಜೀವದ ಗೆಳೆಯ ಬ್ರೂಟಸ್ ಕತ್ತಿ ಹಿರಿದು ತನ್ನೆದೆಗೆ ಇರಿಯಲು ಬರುವುದನ್ನು ಕಂಡು ‘ಬ್ರೂಟಸ್… ನೀನು ಸಹ?’ ಎಂದು ಉದ್ಗಾರವೆತ್ತಿ ಸೀಸರ್ ಆತ್ಮರಕ್ಷಣೆ ಯನ್ನು ಕೈಬಿಟ್ಟ. ಎಲ್ಲರೂ ಸೇರಿ ಆತನನ್ನು ಒಟ್ಟು ೨೩ ಸಲ ತಿವಿದರು. ಬ್ರೂಟಸ್ ಬಲವಾಗಿ ಇರಿದ. ಸ್ಥಳದಲ್ಲೇ ಕುಸಿದು ಜೀವಬಿಟ್ಟ ಸೀಸರನ ದೇಹವನ್ನು ಮೂವರು ಗುಲಾಮರು ಅವನ ಮನೆಗೆ ಹೊತ್ತೊಯ್ದರು. ಆಗ ಆಂಟಿಸ್ಟೀಷಿಯಸ್ ಮೆಡಿಕಸ್ ಎಂಬ ವೈದ್ಯ ಸೀಸರನ ಮರಣೋತ್ತರ ಪರೀಕ್ಷೆ ನಡೆಸಿದ.

ಸೀಸರ್‌ನ ಒಡಲ ಮೇಲಿದ್ದ ೨ನೇ ಗಾಯ, ಎಡ ಭುಜ-ಲಕದ ಕೆಳಗಿಂದ ಆಳವಾಗಿ ಒಳಗಿಳಿದಿದ್ದ ಗಾಯವು ಆತನ ಮಹಾಧಮನಿಯನ್ನು (ಅಯೋಟರ‍್) ಭೇದಿಸಿತ್ತು. ಈ ತೀವ್ರಗಾಯದಿಂದಲೇ ಸೀಸರ್ ಮರಣಿಸಿದ ಎಂದು ಆಂಟಿಸ್ಟೀಷಿಯಸ್ ರೋಮನ್ ಸೆನೆಟ್‌ಗೆ ವರದಿಯಿತ್ತ. ಮಾರಣಾಂತಿಕವಾಗಿದ್ದ ಈ ೨ನೇ ತಿವಿತವಾಗಿದ್ದು ಬ್ರೂಟಸ್ ನಿಂದ! ಸೀಸರನ ಮರಣದ ಕಾರಣ ಪತ್ತೆಹಚ್ಚಲು ಆಂಟಿ ಸ್ಟೀಷಿಯಸ್ ನಡೆಸಿದ ಮೊದಲ ಅಧ್ಯಯನ ಹಾಗೂ ವರದಿಯೇ ‘ಜಗತ್ತಿನ ಮೊಟ್ಟಮೊದಲ ಮರಣೋತ್ತರ ಶವಪರೀಕ್ಷೆ’ಯ ವರದಿ ಎಂದು ದಾಖಲಾಗಿದೆ.

ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಅಸಹಜ ಮೃತ್ಯು ವಾದಾಗ ಅದಕ್ಕೆ ಕಾರಣ ಪತ್ತೆಹಚ್ಚಿ, ಸಾವಿಗೆ ಮತ್ತೊಬ್ಬ ವ್ಯಕ್ತಿ ಪ್ರತ್ಯಕ್ಷ/ಪರೋಕ್ಷವಾಗಿ ಕಾರಣನಾಗಿದ್ದರೆ ಆತನನ್ನು ಬಂಧಿಸಿ ಶಿಕ್ಷಿಸುವ ಉದಾತ್ತ ಆಶಯ ಇದರಲ್ಲಡಗಿದೆ. ಮರಣೋತ್ತರ ಶವಪರೀಕ್ಷೆ ಎಂಬ ಅರ್ಥ ಸೂಚಿಸುವ ‘ಸ್ವಯಂವೀಕ್ಷಣೆ’ (ಅಟಾಪ್ಸಿ), ‘ಶವವೀಕ್ಷಣೆ’ (ನೆಕ್ರಾಪ್ಸಿ), ‘ಮೃತದೇಹಗಳ ಸ್ವಯಂಪರೀಕ್ಷೆ’ (ಅಟಾಪ್ಸಿ ಕೇಡಾವರಮ್), ‘ಶವಪರೀಕ್ಷೆ’
(ಅಬ್ಡಕ್ಷನ್) ಇತ್ಯಾದಿ ಪದಗಳನ್ನು ವೈದ್ಯಕೀಯ ಇತಿಹಾಸ ದಲ್ಲಿ ನಾವು ನೋಡಬಹುದು.

ಕಾನೂನು ಸಂಬಂಧಿತ ವಿಚಾರಗಳ ಅಧ್ಯಯನಕ್ಕೆ ಮತ್ತು ವೈದ್ಯಕೀಯ ಸಂಬಂಧಿತ ಹಲವು ಪ್ರಶ್ನೆಗಳಿಗೆ ಉತ್ತರ ತಿಳಿಯಲು ಹೀಗೆ ಸ್ಥೂಲವಾಗಿ ಎರಡು ಉದ್ದೇಶಗಳಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

ಹೀಗಾಗಿ ಸದರಿ ಮೂಲೋದ್ದೇಶಗಳನ್ನು ಹೀಗೆ ಸಂಗ್ರಹಿಸಬಹುದು:

? ಮೃತರ ಗುರುತನ್ನು ನಿಖರವಾಗಿ ಪತ್ತೆಹಚ್ಚುವುದು.

? ಸಾವು ಸುಮಾರು ಎಷ್ಟು ಗಂಟೆ/ದಿನದ ಹಿಂದೆ ಸಂಭವಿಸಿದೆ ಎಂಬ ಸಾಧ್ಯತೆಯನ್ನು ತಿಳಿಯುವುದು.
? ಸಾವಿಗೆ ಕಾರಣ ಕಂಡುಕೊಳ್ಳುವುದು. ಸಾವಿನ ಹಿಂದಿರುವ ಕಾರಣ ಸಹಜವೇ, ಅಸಹಜವೇ ಎಂಬುದನ್ನು ತಿಳಿಯಲು ನಿಖರ ಪುರಾವೆಗಳನ್ನು ಸಂಗ್ರಹಿಸುವುದು. ಸಾವಿಗೆ ಕಾರಣ ವಾಗಿರಬಹುದಾದ ಅಪಘಾತ, ಆಕ್ರಮಣ, ಹಲ್ಲೆ, ಹೊಡೆತ, ಹಿಂಸೆ, ವಿಷಪ್ರಾಶನ ಇತ್ಯಾದಿಗಳ ತೀವ್ರತೆ ಮತ್ತು ವ್ಯಾಪ್ತಿಯನ್ನು ಅರಿಯುವುದು.

? ನಾಳೆ ನ್ಯಾಯಾಲಯವು ಸಾವಿಗೆ ನಿಖರ ಕಾರಣವನ್ನು ಕೇಳಬಹುದು. ಹೀಗಾಗಿ ಅದಕ್ಕೆ ಅಗತ್ಯವಾದ ಸಾಕ್ಷ್ಯ ಸಂಗ್ರಹಿಸುವುದು. ಮೃತರ ಕೆಲವು ಅಂಗಗಳನ್ನು
ಪ್ರತ್ಯೇಕಿಸಿ, ಸಂಗ್ರಹಿಸಿ, ಪ್ರಯೋಗಾಲಯಕ್ಕೆ ರವಾನಿಸಿ ಸೂಕ್ತ ಸಾಕ್ಷ್ಯವನ್ನು ಸಂಗ್ರಹಿಸುವುದು.

? ಒಂದೊಮ್ಮೆ ಶಿಶುಜನನದ ವೇಳೆ ಮಗುವು ಮೃತ ವಾಗಿದ್ದರೆ, ಅದು ಸತ್ತಿದ್ದು ಹುಟ್ಟುವ ಮೊದಲೋ ಅಥವಾ ನಂತರವೋ ಎಂಬುದನ್ನು ತಿಳಿಯುವುದು. ಹುಟ್ಟಿದ
ಮೇಲೆ ಬದುಕುವ ಎಲ್ಲಾ ಸಾಧ್ಯತೆಗಳಿರುವ ಮಗುವನ್ನು ಪ್ರಜ್ಞಾಪೂರ್ವಕವಾಗಿ ಕೊಂದರೇ? ಎಂಬುದಕ್ಕೂ ಸಾಕ್ಷ್ಯ ಸಂಗ್ರಹಿಸುವುದು.

ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರನ್ನು ‘ನ್ಯಾಯ – ವೈದ್ಯಕೀಯ’ / ‘ವಿಧಿ-ವೈದ್ಯಕೀಯ’ ತಜ್ಞರು (ಫಾರೆನ್ಸಿಕ್ ಡಾಕ್ಟರ್/ಎಕ್ಸ್‌ಪರ್ಟ್) ಎನ್ನುವುದುಂಟು. ಈ
ಜ್ಞಾನಶಾಖೆಗೆ ‘ನ್ಯಾಯ-ವೈದ್ಯಕೀಯ ವಿಜ್ಞಾನ’ (ಫಾರೆನ್ಸಿಕ್ ಮೆಡಿಸಿನ್) ಎಂಬ ಹೆಸರಿದೆ. ಮೃತರ ಶರೀರದಿಂದ ಅಂಗ/ ಅಂಗಭಾಗವನ್ನು ಪ್ರತ್ಯೇಕಿಸಿ, ಅಧ್ಯಯನ ಮಾಡಿ, ಸಾವಿಗೆ ಕಾರಣ ತಿಳಿಸುವ ತಜ್ಞನೇ ನ್ಯಾಯ ವೈದ್ಯಕೀಯ ರೋಗ ವಿಜ್ಞಾನಿ (ಫಾರೆನ್ಸಿಕ್ ಪೆಥಾಲಜಿಸ್ಟ್). ವಿಷವಿಜ್ಞಾನಿ (ಟಾಕ್ಸಿ ಕಾಲಜಿಸ್ಟ್) ಮುಂತಾದ ಹಲವು ತಜ್ಞರ ನೆರವಿನಿಂದ ಮರಣದ ಕಾರಣವನ್ನು ನಿಖರವಾಗಿ ಪತ್ತೆಹಚ್ಚಬಹುದು.

ಮಾನವನ ಇತಿಹಾಸದಲ್ಲಿ ಮರಣೋತ್ತರ ಪರೀಕ್ಷೆ ಯಾವಾಗ ಶುರುವಾಯಿತು ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಕ್ರಿ.ಪೂ.೩೦೦೦ ವರ್ಷಗಳ ಹಿಂದಿನ
ಈಜಿಪ್ಷಿಯನ್ ಸಂಸ್ಕೃತಿಯ ಜನರು, ಮೃತದೇಹದ ಬಗ್ಗೆ ಮೊದಲ ಬಾರಿಗೆ ಕುತೂಹಲ ತಳೆದರು ಎನ್ನಬಹುದು. ‘ಮರಣದ ನಂತರ ಮರುಜನ್ಮವಿದೆ’ ಎಂದು ನಂಬಿದ್ದ ಅವರು, ಮರುಜನ್ಮವೆತ್ತಲು ಅಗತ್ಯವಾಗಿ ಬೇಕಿದ್ದ ಶರೀರ ವನ್ನು ಕೆಡದಂತೆ ರಕ್ಷಿಸುವ ತಂತ್ರಜ್ಞಾನವನ್ನು ರೂಪಿಸಿದರು. ಶರೀರದ ಸಂಪೂರ್ಣ ರಕ್ಷಣೆ ಅಸಾಧ್ಯವಾದದ್ದರಿಂದ, ಮೃತರ ಮಿದುಳು, ಜಠರ, ಕರುಳು ಮುಂತಾದ ಒಳಾಂಗಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಉಳಿದ ದೇಹವನ್ನು ರಾಸಾಯನಿಕ
ವಿಽವಿಧಾನಗಳ ಮೂಲಕ ಸಂಸ್ಕರಿಸಿ, ಸಂರಕ್ಷಿಸುತ್ತಿದ್ದರು.

ಇಂಥ ಮಮ್ಮಿಗಳನ್ನು ನಾವಿಂದು ಅಧ್ಯಯನ ಮಾಡಿದಾಗ, ಅನೇಕ ಪ್ರಕರಣಗಳಲ್ಲಿ ಅಂಥ ವ್ಯಕ್ತಿಯ ಸಾವಿಗೆ ಕಾರಣ ತಿಳಿದುಬಂದಿದೆ. ಮೃತವ್ಯಕ್ತಿಗೆ ಎಷ್ಟು ವಯಸ್ಸಾಗಿರಬಹುದು, ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಯಿತ್ತೇ, ಹಲ್ಲೆ/ಅಪಘಾತ ವಾಗಿತ್ತೇ, ಯಾವೆಲ್ಲ ಕಾಯಿಲೆಗಳು ಅವನ ಒಡಲಿನಲ್ಲಿ ಮನೆ
ಮಾಡಿದ್ದವು ಇತ್ಯಾದಿ ಅನೇಕ ವಿಚಾರಗಳು ಬಯಲಾಗಿವೆ. ಗ್ರೀಕ್ ಸಂಸ್ಕೃತಿಯ ಮಹಾನ್ ವೈದ್ಯನಾಗಿದ್ದ ಹಿಪ್ಪೋ ಕ್ರೇಟ್ಸ್, ಮನುಷ್ಯರಿಗೆ ನಾನಾ ಕಾಯಿಲೆ ಬರಲು ದೈವ ಪ್ರಕೋಪವು ಕಾರಣವಲ್ಲವೆಂದ. ನಮ್ಮ ಶರೀರದಲ್ಲಿ ರಕ್ತ, ಕರ್ಪ್ಯೂ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತಗಳೆಂಬ (ವಾತ, ಪಿತ್ತ, ಕಫದಂಥ ತ್ರಿದೋಷಗಳಂತೆ) ರಸಗಳ ಸ್ವರೂಪದಲ್ಲಾಗುವ ಏರುಪೇರಿನಿಂದಾಗಿ ಕಾಯಿಲೆಗಳು ತಲೆದೋರುತ್ತವೆಯೆಂದ.

ಆದರೆ ಇವನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ಮಾಡಬಹುದಾದ ಸಾಧ್ಯತೆ ಹಿಪ್ಪೋಕ್ರೇಟ್ಸ್‌ಗೆ ಹೊಳೆಯಲಿಲ್ಲ. ಅಲೆಗ್ಸಾಂಡರನ ನಂತರ ಗ್ರೀಕ್ ಸಾಮ್ರಾಜ್ಯವನ್ನು ಸಂಘಟಿಸಿದ ಮಹಾಮೇಧಾವಿ ಟಾಲಮಿ-೧ ಸೋಟರ್, ಈಜಿಪ್ಟನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.
ಈತ ಪ್ರಾಚೀನ ಅಲೆಗ್ಸಾಂಡ್ರಿಯಾದಲ್ಲಿ ಬೃಹತ್ ಗ್ರಂಥಾಲಯವನ್ನು ಸ್ಥಾಪಿಸಿದ (ಇದರಲ್ಲಿ ಕನ್ನಡ ಪುಸ್ತಕಗಳೂ ಇದ್ದವಂತೆ). ಇವನು ಶಿಕ್ಷೆಗೊಳಗಾಗಿದ್ದ ಖೈದಿಗಳ ಶವವಿಚ್ಛೇದನ ಮತ್ತು ಅಧ್ಯಯನಕ್ಕೆ ಅನುಮತಿಸಿದ. ಇದರಿಂದ ಶರೀರಚ ರಚನೆಯ ಬಗೆಗಿನ ಮಾಹಿಯ ಜತೆಗೆ ಸಾವಿಗೆ ಕಾರಣವೂ ತಿಳಿಯುತ್ತಿತ್ತು. ಕೆಲವೊಮ್ಮೆ ಟಾಲಮಿಯೇ ಶವಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಹೆರೋಫಿಲಸ್ ಎಂಬ ಗ್ರೀಕ್ ವೈದ್ಯ ಚಾಲ್ಸಿಡಾನ್ ಎಂಬಲ್ಲಿ ಹುಟ್ಟಿದನಾದರೂ, ಜೀವನದ ಬಹುಭಾಗವನ್ನು ಅಲೆಗ್ಸಾಂಡ್ರಿಯಾದಲ್ಲಿ ಕಳೆದ.

ಇವನು ಮನುಕುಲದ ಇತಿಹಾಸದಲ್ಲಿ ಬಹುಶಃ ಮೊದಲ ಬಾರಿಗೆ ಪ್ರಾಣಿಗಳ ಹಾಗೂ ಮನುಷ್ಯರ ಶವವಿಚ್ಛೇದನ ಮಾಡಿ ಅಂಗರಚನೆ ಯನ್ನು ಅಧ್ಯಯನ ಮಾಡಿದ. ಹಿಪ್ಪೋಕ್ರೇಟ್ಸ್ ಮಂಡಿಸಿದ್ದ ರಸಸಿದ್ಧಾಂತವನ್ನು ತಿರಸ್ಕರಿಸಿ, ಶರೀರದ ಅಂಗಾಂಗಗಳಲ್ಲಿ ತಲೆದೋರುವ ಹಲವು ಬದಲಾವಣೆಗಳೇ ರೋಗಗಳಿಗೆ ಕಾರಣವೆಂದ.
ರೋಮನ್‌ಗ್ರೀಕ್ ವೈದ್ಯನಾಗಿದ್ದ ಕ್ಲಾಡಿಯಸ್ ಗ್ಯಾಲನಸ್, ಪ್ರಾಚೀನ ಜಗತ್ತಿನ ಅಂಗರಚನಾ ವಿಜ್ಞಾನ, ಅಂಗಕ್ರಿಯಾ ವಿಜ್ಞಾನ, ರೋಗವಿಜ್ಞಾನ, ಔಷಧ ವಿಜ್ಞಾನ, ನರವೈದ್ಯಕೀಯ, ತರ್ಕ ಹಾಗೂ ತತ್ತ್ವಶಾಸ ಸಂಬಂಽತ ಜ್ಞಾನವಿದ್ದ ಮಹಾ ಮೇಧಾವಿ. ಇವನ ಕಾಲದಲ್ಲಿ ಮೃತದೇಹದ ವಿಚ್ಛೇದನಕ್ಕೆ ಅವಕಾಶವಿರದ ಕಾರಣ, ಈತ ರೋಗಿಯು ಬದುಕಿದ್ದಾಗ ಅವನ ರೋಗಲಕ್ಷಣಗಳನ್ನು ಅಧ್ಯಯನ ಮಾಡುತ್ತಿದ್ದ.

ಅವನು ಸತ್ತ ನಂತರ ಅವನ ದೇಹದ ವಿವಿಧ ಅಂಗಗಳ ಲಕ್ಷಣವನ್ನು ವಿವರವಾಗಿ ಪರಿಶೀಲಿಸಿ ದಾಖಲಿಸುತ್ತಿದ್ದ. ಕೊನೆಗೆ ‘ಆನ್ ದಿ ಯೂಸ್ ಫುಲ್‌ನೆಸ್ ಆಫ್ ಬಾಡಿ ಪಾರ್ಟ್ಸ್’ ಎಂಬ ಸೊಗಸಾದ ಪುಸ್ತಕವನ್ನು ಬರೆದ. ಗ್ಯಾಲನಸ್ ನಂತರ ವೈದ್ಯಕೀಯ ಜಗತ್ತಿನಲ್ಲಿ ಕಗ್ತತ್ತಲ ಯುಗ ಆರಂಭವಾಯಿತು. ಕೊನೆಗೆ ಅಬು ಮರ್ವಾನ್ ಅಬ್ದ್ ಅಲ್ -ಮಲಿಕ್ ಇಬ್ನ್ ಜುಹ್ರ್ ಎಂಬ ಅರಬ್ ಶಸ್ತ್ರವೈದ್ಯ ಮೊದಲು ಪ್ರಾಣಿಗಳ ಮೇಲೆ ಶಸ್ತ್ರಕ್ರಿಯೆ ನಡೆಸಿ ನಂತರ ಮನುಷ್ಯರ ಮೇಲೆ ನಡೆಸುತ್ತಿದ್ದ. ಇವನು ಮೃತದೇಹಗಳನ್ನು ವಿಚ್ಛೇದಿಸಿ ಸಾವಿನ ಕಾರಣವನ್ನು ಅಧ್ಯಯನ ಮಾಡುತ್ತಿದ್ದ. ಕಜ್ಜಿ ಯುಂಟಾಗಲು ಒಂದು ಸೂಕ್ಷ್ಮಜೀವಿ ಕಾರಣ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿ, ಹಿಪ್ಪೋಕ್ರೇಟ್ಸ್ ಮಂಡಿಸಿದ ರಸ ಸಿದ್ಧಾಂತವನ್ನು ಅಲ್ಲಗಳೆದ.

ಸಿಸಿಲಿ, ಜರ್ಮನಿ, ಇಟಲಿ, ಜೆರುಸಲೇಮ್‌ಗಳನ್ನಾಳಿದ ಪ್ರಖ್ಯಾತ ಅರಸ ಇಮ್ಮಡಿ -ಡ್ರಿಕ್, ಮೊದಲ ಬಾರಿಗೆ ಶವವಿಚ್ಛೇದನಕ್ಕೆ ಅಽಕೃತ ಅನುಮತಿ ನೀಡಿದ; ಪ್ರತಿಯೊಂದು ವೈದ್ಯಕೀಯ ವಿದ್ಯಾಲಯಕ್ಕೆ ವರ್ಷಕ್ಕೆ ಕನಿಷ್ಠ ೨ ದೇಹಗಳನ್ನು ವಿಚ್ಛೇದನಕ್ಕೆ ನೀಡಬೇಕೆಂದು ಆಜ್ಞೆಮಾಡಿದ. ಸಾಂಗ್ ಷಿ ಎಂಬ ಚೀನಿ ವೈದ್ಯ, ನ್ಯಾಯಾಽಶ, ಕೀಟವಿಜ್ಞಾನಿಯು ‘ಜಗತ್ತಿನ ಪ್ರಪ್ರಥಮ ನ್ಯಾಯವೈದ್ಯಕೀಯ ಕೀಟವಿಜ್ಞಾನಿ’ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ‘ಕಲೆಕ್ಟಿವ್ ಕೇಸಸ್ ಆಫ್
ಇನ್‌ಜಸ್ಟೀಸ್ ರೆಕ್ಟಿ-ಡ್’ ಎಂಬ ಜಗತ್ತಿನ ಪ್ರಪ್ರಥಮ ನ್ಯಾಯವೈದ್ಯಕೀಯ ಗ್ರಂಥ ಮತ್ತು ‘ದಿ ವಾಷಿಂಗ್ ಅವೇ ಆಫ್ ರಾಂಗ್ಸ್’ ಎಂಬ ಗ್ರಂಥವನ್ನು ಈತ ರಚಿಸಿದ.

ನ್ಯಾಯ-ವೈದ್ಯಕೀಯ ಪ್ರಕರಣವನ್ನು ಪತ್ತೆಹಚ್ಚುವ ವಿಧಿವಿಧಾನ, ಶವದ ಅಧ್ಯಯನದ ಬಗೆಯ ಕ್ರಮಬದ್ಧ ವಿವರಣೆ, ಸಾವಿಗೆ ಕಾರಣ ಮತ್ತು ಅದು ಸಂಭವಿಸಿದ
ಸಮಯವನ್ನು ತಿಳಿಯುವ ಬಗೆ, ವಿಷಲಕ್ಷಣಗಳು, ಕೊಳೆತ ದೇಹದ ಲಕ್ಷಣಗಳು, ವಿವಿಧ ಆಯಾಮಗಳಿಂದ ಸಂಭವಿಸಿದ ಸಾವಿನ ಸ್ವರೂಪ, ಉಸಿರುಗಟ್ಟಿ ಸಂಭವಿಸಿದ ಸಾವಿನ ಪ್ರಕರಣ ಮತ್ತು ಹುಸಿಗಾಯದ ಲಕ್ಷಣಗಳನ್ನು ಇದು ವಿವರಿಸುತ್ತದೆ. ಸಾಂಗ್ ಷಿ ಬರೆದ ಗ್ರಂಥದಿಂದ ಪ್ರಭಾವಿತನಾಗಿದ್ದ ಇಟಲಿಯ ವೈದ್ಯ ಹಾಗೂ ನ್ಯಾಯವೈದ್ಯಕೀಯ ರೋಗ ವಿಜ್ಞಾನಿಯಾದ ಬಾರ್ಥಲೋಮಿಯೊ ದ ವೇರಿನ್ಯ, ಜಗತ್ತಿನ ಮೊದಲ ಕಾನೂನುಬದ್ಧ ಮರಣೋತ್ತರ ಪರೀಕ್ಷೆಯನ್ನು
೧೩೦೨ರಲ್ಲಿ ನಡೆಸಿದ.

ಇಟಲಿಯ ನ್ಯಾಯಾಧೀಶನೊಬ್ಬ ಒಂದು ಅಸಹಜ ಸಾವಿನ ಕಾರಣ ತಿಳಿಯುವಂತೆ ವೇರಿನ್ಯಗೆ ಕರೆ ಕಳುಹಿಸಿದ. ವೇರಿನ್ಯ ಮೃತದೇಹವನ್ನು ಕ್ರಮಬದ್ಧವಾಗಿ
ಅಧ್ಯಯನ ಮಾಡಿ ಸಾವಿಗೆ ಕಾರಣವನ್ನು ತಿಳಿಸಿದ್ದ. ಸೂಕ್ಷ್ಮದರ್ಶಕದ ಆವಿಷ್ಕಾರವಾಗುವವರೆಗೂ ಸಾಂಗ್ ಷಿ ಮತ್ತು ವೇರಿನ್ಯ ಮುಂತಾದವರು ಗಮನಿಸಿದ ಬರಿಗಣ್ಣಿನ ಅಧ್ಯಯನಗಳೇ ಪ್ರಮಾಣಕಗಳಾಗಿದ್ದವು. ಸೂಕ್ಷ್ಮದರ್ಶಕದ ಆವಿಷ್ಕಾರದ ನಂತರ ನ್ಯಾಯವೈದ್ಯಕೀಯ ವಿಜ್ಞಾನದ ಸ್ವರೂಪವೇ ಬದಲಾಯಿತು.