ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಇದು ನಂಬಿಕೆಗೆ, ಆಚರಣೆಗೆ ಆದ ಘಾಸಿ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತ ವಾಗಿರುವುದರ ಜತೆಯಲ್ಲಿ, ರಾಜ್ಯದ ಹಲವೆಡೆ ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ ಮತ್ತು ರ‍್ಯಾಲಿಗಳೂ ನಡೆದಿವೆ. ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ಅಧಿಕಾರಿಗಳ ನಡೆಗೆ ಸಂಬಂಧಿಸಿ ವ್ಯಕ್ತವಾಗಿರುವ ಅಭಿಪ್ರಾಯಗಳ ಪೈಕಿ ಎರಡನ್ನು ಇಲ್ಲಿ ಸಾದರಪಡಿಸಲಾಗಿದೆ.

ಇದು ನಂಬಿಕೆಗೆ, ಆಚರಣೆಗೆ ಆದ ಘಾಸಿ

Profile Ashok Nayak Apr 22, 2025 3:24 PM

ರವೀ ಸಜಂಗದ್ದೆ

ಜೀವನವೇ ಒಂದು ಸುಂದರ ಮತ್ತು ಶ್ರೇಷ್ಠ ಆಚರಣೆ. ಬದುಕಿನ ಎಲ್ಲಾ ಉತ್ತಮಿಕೆಗಳ ಪ್ರಭಾವ ದಿಂದಾಗಿ ಜನರು ಉತ್ಸಾಹದಿಂದ ಒಗ್ಗೂಡುತ್ತಾರೆ. ಹೀಗಾದಾಗ ಸಮಾಜದಲ್ಲಿ ಸಂತೋಷ-ಸಾಮ ರಸ್ಯ ನಿರಂತರವಾಗಿರುತ್ತದೆ. ವ್ಯಕ್ತಿಯೊಬ್ಬನಿಗೆ ವಿವಿಧ ಕಾಲಘಟ್ಟಗಳಲ್ಲಿ ಒದಗುವ ಸಂಸ್ಕಾರಗಳು ಅವನ ಭಾವನೆಗಳನ್ನು ಬಲಪಡಿಸುತ್ತವೆ, ದೇಹವನ್ನು ರಕ್ಷಿಸುತ್ತವೆ, ಮನಸ್ಸಿನಲ್ಲಿ ಸಕಾರಾತ್ಮಕತೆ ಯನ್ನೂ ಬದುಕಿನಲ್ಲಿ ತೃಪ್ತಿ- ಯಶಸ್ಸನ್ನೂ ಉಂಟುಮಾಡುತ್ತವೆ. ಷೋಡಶ ಸಂಸ್ಕಾರಗಳಿಗೆ ಆಳವಾದ ಆಧ್ಯಾತ್ಮಿಕ ಮಹತ್ವವಿದ್ದು, ಇವು ವ್ಯಕ್ತಿಯ ಗರ್ಭದಿಂದ ಸಮಾಧಿ ಯವರೆಗಿನ ಶ್ರೇಷ್ಠ ಹೆಗ್ಗುರುತುಗಳಾಗಿವೆ. ಇವುಗಳ ಪೈಕಿ 11ನೆಯದು ಉಪನಯನ. ಇದರರ್ಥ- ಗುರು ಅಥವಾ ದೈವಿಕತೆಗೆ ಹತ್ತಿರವಾಗುವುದು. ಬ್ರಹ್ಮೋಪದೇಶ ಸಮಾರಂಭದಲ್ಲಿ ವಟುವಿಗೆ ಅತ್ಯಂತ ಪವಿತ್ರವಾದ ‘ಗಾಯತ್ರಿ ಮಂತ್ರ’ದ ದೀಕ್ಷೆ ನೀಡಿ ಜನಿವಾರ ಧಾರಣೆ ಮಾಡಿಸಲಾಗುತ್ತದೆ.

ಪ್ರಸ್ತುತ, ಒಂದಿಬ್ಬರು ಸಿಇಟಿ ಪರೀಕ್ಷಾರ್ಥಿಗಳು ಜನಿವಾರದೊಂದಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿ ಸಲು ನಿರಾಕರಣೆಗೆ ಒಳಗಾದ/ಅದನ್ನು ತೆಗೆದ ನಂತರವೇ ಕೊಠಡಿಗೆ ಪ್ರವೇಶ ಪಡೆದ ಪ್ರಕರಣ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದೆ, ಸರಕಾರದ ಅಂಗಳಕ್ಕೂ ಈ ವಿಷಯ ಪ್ರವೇಶಿಸಿದೆ. ನಮ್ಮ ವ್ಯವಸ್ಥೆಯಲ್ಲಿರುವ ಎಲ್ಲರೂ-ಎಲ್ಲವೂ ಸರಿಯಾಗಿದ್ದಿದ್ದರೆ, ಇಂಥದೊಂದು ಪ್ರಕರಣ ನಡೆಯುತ್ತಿರ ಲಿಲ್ಲ.

ಇದನ್ನೂ ಓದಿ: Ravi Sajangadde Column: ಕೃತಕ ಬುದ್ದಿಮತ್ತೆ ಹಾಗೂ ಜಾಗತಿಕ ಹಿಂಜರಿತದ ಸುತ್ತಮುತ್ತ

ಜನಿವಾರ ತೊಟ್ಟ ಬ್ರಾಹ್ಮಣನಿಗೆ ಅದೆಂದೂ ಭಾರವಾಗಿಲ್ಲ, ಅದು ಬಹಿರಂಗ ಪ್ರದರ್ಶನದ ವಸ್ತುವೂ ಅಲ್ಲ. ಉಸಿರಿನಷ್ಟೇ ಸಹಜವಾದುದು ಜನಿವಾರಧಾರಿಯ ಅಸ್ಮಿತೆ ಎಂದು ಒಬ್ಬ ಬ್ರಾಹ್ಮಣ ನಾಗಿ ಹೇಳಲು ಹೆಮ್ಮೆಯೆನಿಸುತ್ತದೆ. ಹೀಗಿರುವಾಗ, ಜನಿವಾರ ತೆಗೆಸುವುದು ನಮ್ಮ ಪ್ರಜಾಪ್ರಭುತ್ವ ದಲ್ಲಿ/ಸಾಮಾಜಿಕ ವ್ಯವಸ್ಥೆಯಲ್ಲಿ ಆಗಿರುವ ಅವಲಕ್ಷಣ. ಜಗತ್ತಿನ ಯಾವ ಮೂಲೆಯಲ್ಲೂ, ಎಂಥ ಭದ್ರತಾ ತಪಾಸಣೆಯ ಸಂದರ್ಭದಲ್ಲೂ ಜನಿವಾರವನ್ನು, ಅದನ್ನು ಧರಿಸಿದವರನ್ನು ಈವರೆಗೆ ಯಾರೂ ಪ್ರಶ್ನಿಸಿಲ್ಲ.

‘ಅದು ನೇಣು ಹಾಕಿಕೊಳ್ಳಲು ಬಳಸಬಹುದಾದ ಸಾಧನ’ ಎಂದು ಯಾರೂ ಷರಾ ಬರೆದಿಲ್ಲ. ಹೀಗಿರುವಾಗ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯವರಿಗೆ ಈ ಮೂರೆಳೆಯ ನೂಲು ಭಾರವೆನಿಸಿತು, ಅದನ್ನು ಬಲವಂತವಾಗಿ ತೆಗೆಸಲಾಯಿತು ಎಂದರೆ ನಮ್ಮ ಸದ್ಯದ ತಪಾಸಣೆ ವ್ಯವಸ್ಥೆಯಲ್ಲಿ ಲೋಪವಿದೆ ಎನ್ನಬೇಕಾಗುತ್ತದೆ. ಸಂಬಂಧಪಟ್ಟವರು ಈ ಲೋಪವನ್ನು ಸರಿಪಡಿಸಬೇಕಾದ ಹೊಣೆ ಹೊರಬೇಕಿದೆ.

ಬನಿಯನ್ನು ಕಳಚಿದಾಗ ಮಾತ್ರವೇ ಕಾಣುವಂಥದ್ದು ಜನಿವಾರ. ಸಮಾಜದ ಮಿಕ್ಕೆಲ್ಲರಿಗೂ ತಂತಮ್ಮ ಜಾತಿಯ ಬಗ್ಗೆ ಇರುವಂಥ ಹಿರಿಮೆ-ಗರಿಮೆ, ಹೆಮ್ಮೆ-ಖುಷಿ ಬ್ರಾಹ್ಮಣರಿಗೂ ಇದೆ, ಅದು ಬ್ರಾಹ್ಮಣರ ವೈಯಕ್ತಿಕ ವಿಚಾರ. ಅದರ ಒಂದು ಸಂಕೇತವಾದ ಜನಿವಾರವನ್ನು ಪ್ರಶ್ನಿಸುವ, ತೆಗೆಸುವ ಹಕ್ಕು ಯಾರಿಗೂ ಇಲ್ಲ. ಆದರೆ ಪರೀಕ್ಷಾ ಕೊಠಡಿಯ ಹೊರಗೆ ನಿಂತವರು ಪರೀಕ್ಷಾರ್ಥಿ ಯ ಅಂಗಿಯೊಳಗೆ ಏನಿದೆ? ಎಂದು ಪ್ರಶ್ನಿಸುವುದು, ಆ ಮಟ್ಟದ ತಪಾಸಣೆ ಮಾಡುವುದು ತರ ವಲ್ಲದ ಕೃತ್ಯ.

ವಿದ್ಯಾರ್ಥಿಯು ಕಾಪಿ ಹೊಡೆಯಲು ಚೀಟಿ ತಂದಿದ್ದರೆ ಅಥವಾ ಪರೀಕ್ಷಾ ಅಕ್ರಮಕ್ಕೆ ಇನ್ನೇ ನಾದರೂ ವ್ಯವಸ್ಥೆ ಮಾಡಿಕೊಂಡು ಬಂದಿದ್ದರೆ ಅದು ಬೇರೆ ಮಾತು. ಆದರೆ, ಬ್ರಾಹ್ಮಣರ ‘ಭಾವ ತಂತು’ವಾದ ಜನಿವಾರಕ್ಕೂ ಪರೀಕ್ಷೆಗೂ ಏನು ಸಂಬಂಧ? ಪರೀಕ್ಷಾ ಕೇಂದ್ರದ ಒಳಹೋಗುವಾಗ ಅದನ್ನೇಕೆ ಕಳಚಬೇಕು? ಹಾಗೆಂದು ನಿರ್ಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವವರಾರು? ಹೀಗೆ ಜನಿವಾರ ತೆಗೆಸುವುದಕ್ಕೆ ಮಾರ್ಗಸೂಚಿಯಲ್ಲಿ ಯಾವ ನಿಯಮವೂ ಇಲ್ಲ. ಯಾವುದೇ ಧರ್ಮಕ್ಕೂ ಅವಮಾನ ಮಾಡುವ ಉದ್ದೇಶವು ಮಾರ್ಗಸೂಚಿಗಳಿಗೆ ಇರುವುದಿಲ್ಲ ಎಂಬುದೂ ಸಂಬಂಧ ಪಟ್ಟವರಿಗೆ ಗೊತ್ತಿರಲಿ.

ಪರೀಕ್ಷೆಯು ನ್ಯಾಯಯುತವಾಗಿ, ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶ ಸರಿಯೇ. ಆದರೆ, ಇದರಾಚೆಗೆ ಯಾವುದಕ್ಕೆ ಗೋಪಾಲದಾಸ, ಸಿರಿವಾರ ಬ್ರಾ ಹ್ಮಣರಿಗೆ ಮತ್ತು ಬ್ರಾಹ್ಮಣ್ಯಕ್ಕೆ ಪೀಡೆ ಕೊಡುವುದು ಎಂದರೆ ನಮ್ಮ ವ್ಯವಸ್ಥೆಗಳಿಗೆ ತುಂಬ ಪ್ರೀತಿ. ಬ್ರಾಹ್ಮಣರನ್ನು ಉಳಿದು ಬೇರೆ ಯವರನ್ನು ಒಲಿಸಿಕೊಳ್ಳಲು ಕೆಲವರಿಗೆ ಎಷ್ಟು ಪ್ರೀತಿಯೋ ಅಭಿರುಚಿಯೋ, ಅಷ್ಟೇ ಪ್ರೀತಿ-ಭಿರುಚಿ ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣ್ಯವನ್ನು ಪೀಡಿಸುವುದರಲ್ಲಿ.

ಈ ಅವಸ್ಥೆ ಇಂದಿನದಲ್ಲ, ದ್ವಾಪರ ಯುಗದಿಂದಲೂ ಇದೆ. ಆದರೆ, ಮೊಘಲರಾಗಲಿ, ಬ್ರಿಟಿಷರಾಗಲಿ ಅಥವಾ ಇಂದಿನ ಕೆಲ ಆದರೆ ಎಂದೂ ಕುಗ್ಗದ ಆ ಬ್ರಾಹ್ಮಣ ವಿದ್ಯಾರ್ಥಿಯ ಉತ್ತರ ಸ್ಪಷ್ಟ ಮತ್ತು ಸರಳವಾಗಿತ್ತು- “ಪರೀಕ್ಷೆ ಬಿಟ್ಟರೆ ಬಿಟ್ಟೇನು... ಆದರೆ ಜನಿವಾರ ತೆಗೆಯುವುದಿಲ್ಲ". ಅದು ದೃಢವಾದ ದೀಕ್ಷೆಯ ನಿಲುವು ತಳೆದ ಉತ್ತರವಾಗಿತ್ತು.

“ಆ ಮೂರೆಳೆ ಜನಿವಾರಕ್ಕೋಸ್ಕರ ನಿನ್ನ ಭವಿಷ್ಯ ಹಾಳುಮಾಡಿಕೊಳ್ಳುವಿಯೇಕೆ?" ಎಂಬ ನಿರ್ಬಂಧ ಕರ ಪ್ರಶ್ನೆಗೆ, “ನನ್ನ ಭವಿಷ್ಯ ನಿಮ್ಮ ಪರೀಕ್ಷೆಯಲ್ಲಿ ಇಲ್ಲ; ನನ್ನ ಪ್ರಚಂಡ ಬುದ್ಧಿಶಕ್ತಿ ಮೊನ್ನಿನ ಪ್ರಕರಣದ ಹಿನ್ನೆಲೆಯಲ್ಲಿ, “ಅಲ್ಲಿ ಪರೀಕ್ಷೆ ಬರೆಯುವುದು ಮುಖ್ಯವಾಗಬೇಕಿತ್ತು, ನಾನಾಗಿದ್ದರೆ ಜನಿವಾರ ತೆಗೆಯುತ್ತಿದ್ದೆ, ಆ ಹುಡುಗ ಸುಮ್ಮನೆ ಒಂದು ವರ್ಷ ಹಾಳು ಮಾಡಿಕೊಂಡ" ಎಂದೆಲ್ಲಾ ಬುದ್ಧಿವಾದ ಹೇಳುವ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಸಾಕಷ್ಟಿದ್ದಾರೆ, ಇರಲಿ. ಹಿಜಾಬ್, ಬುರ್ಖಾದ ವಿಚಾರದಲ್ಲೂ ಇಂಥದ್ದೇ ಧೋರಣೆಯಿದ್ದಿದ್ದರೆ ಸಮಸ್ಯೆಯಿರಲಿಲ್ಲ. ಇದೆಲ್ಲ ಕೇವಲ ಒಂದು ವರ್ಗ, ಒಂದು ಪಂಗಡದ ಮೇಲೆ ಮಾತ್ರ ಏಕೆ? ನಾಳೆ ಸೊಂಟದ ಉಡುದಾರವನ್ನೂ ಕಳಚು ವಂತೆ ಕೇಳಲಾರರು ಎಂಬುದಕ್ಕೆ ಖಾತ್ರಿಯೇನು? ಬ್ರಾಹ್ಮಣರು ತಂತಮ್ಮ ಮನೆ, ನೆಂಟರ ಮನೆ, ಶ್ರದ್ಧಾಕೇಂದ್ರಗಳಲ್ಲಿ ಸಮಾರಂಭಗಳಲ್ಲಿ ಪಾಲ್ಗೊಂಡ ವೇಳೆ ಅಂಗಿ-ಅನುಮತಿಸಬೇಕು/ಅನುಮತಿಸ ಬಾರದು ಎಂಬುದು ಕೊಠಡಿಯ ಹೊರಗೆ ತಪಾಸಣೆಗೆ ನಿಯುಕ್ತಿಗೊಂಡ ವರ ವಿವೇಚ ನೆಗೆ ಬಿಟ್ಟ ವಿಷಯವಾಗಿರುತ್ತದೆ.

ಇಷ್ಟಾಗಿಯೂ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂದರೆ ಅದು ಖಂಡಿತವಾಗಿಯೂ ಪ್ರಶ್ನಾರ್ಹ. ಯಾರದ್ದೋ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿ ವಿಲಕ್ಷಣವಾಗಿ ಆನಂದಿಸುವ ಪರಿಯಿದು. ಒಂದು ಸ್ವಸ್ಥ ಸಮಾಜವಾಗಿ ನಾವೆತ್ತ ಸಾಗುತ್ತಿದ್ದೇವೆ? ಒಬ್ಬ ಸುಸಂಸ್ಕೃತ ಬ್ರಾಹ್ಮಣ ನಾಗಿ ನಾನು ಬಿಡುವ ಶಿಖೆ, ಧರಿಸುವ ಜನಿವಾರ, ಕುಂಕುಮ, ವಿಭೂತಿ ಎಲ್ಲವೂ ನನ್ನ ವೈಯಕ್ತಿಕ ವಿಚಾರಗಳು. ಇದು ಸಮಾಜದ ಸ್ವಾಸ್ಥ್ಯ ಕದಡದ ಎಲ್ಲ ಸಮುದಾಯಗಳ ಆಚಾರ-ವಿಚಾರಗಳಿಗೂ ಅನ್ವಯ. ಸಾರ್ವಜನಿಕ ಪ್ರದೇಶಗಳಲ್ಲಿ ಇತರ ಯಾರನ್ನೂ ಇವು ಹಾನಿಮಾಡಲಾರವು.

ಹಾಗಿರುವಾಗ ಅವನ್ನು ಪ್ರಶ್ನಿಸುವ/ತೆಗೆಸುವ ಹಕ್ಕನ್ನು ನಮ್ಮ ಸಂವಿಧಾನ ಯಾರಿಗೂ ಕೊಟ್ಟಿಲ್ಲ, ನೆನಪಿರಲಿ. ನಾವು ತಲೆ ಕೆಡಿಸಿಕೊಳ್ಳಬೇಕಾದ, ಗಮನಹರಿಸಬೇಕಾದ ವಿಚಾರಗಳು/ಸಮಸ್ಯೆಗಳು ನಮ್ಮ ದೇಶದಲ್ಲಿ ಗಂಭೀರ ಸಾಕಷ್ಟಿವೆ. ಅಂಥವುಗಳ ಕಡೆಗೆ ವ್ಯವಸ್ಥೆ ಗಮನ ಹರಿಸಿದರೆ ಒಳಿತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)