Monday, 16th September 2024

ಸೈದ್ಧಾಂತಿಕವಾದಿಗಳಾಗದ ಟಿಪ್ಪು ಶಿಷ್ಯರು !

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಇವರಿಗೆ ೫೦೦ ವರ್ಷಗಳ ಹಳೆಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿರಬೇಕೆಂಬ ಹಂಬಲ. ತಮ್ಮವರನ್ನು ಮುಖ್ಯವಾಹಿನಿಗೆ ತರದೇ ನಾಲ್ಕು ಗೋಡೆಯ ಮದ್ಯದಲ್ಲಿ ಸಿಲುಕಿಸಿ ತಮ್ಮ ಪುರಾತನ ಸಂಪ್ರದಾಯಗಳನ್ನು ಹೇರಬೇಕೆಂಬ ಜಿಹಾದಿ ಆಶಯ ಇವರಲ್ಲಿ ಎದ್ದು ಕಾಣುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳನ್ನು ನೀಡಿರುತ್ತದೆ. ತನ್ನ ಹಕ್ಕುಗಳಿಗೆ ಚ್ಯುತಿ ಬಂದಿದೆಯೆಂಬ ಅನುಮಾನ ಬಂದಾಕ್ಷಣ ಸೈದ್ಧಾಂತಿಕ ವಾದಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಿರುವುದು ಪ್ರಜಾಪ್ರಭುತ್ವದ
ಮೂಲ ಆಶಯ. ಧರ್ಮಗಳನ್ನು ಮೀರಿದ ನಿಯಮಾವಳಿ ಸಂವಿದಾನದಲ್ಲಿರುವುದರಿಂದ, ಧರ್ಮವನ್ನು ಮೀರಿ ಸಂವಿಧಾನಕ್ಕೆ ತಲೆ ಬಾಗಬೇಕು.

ಹಿಂದೂಗಳು ತಮ್ಮ ಸೈದ್ಧಾಂತಿಕ ಹೋರಾಟದಲ್ಲಿ ಸಂವಿಧಾನಕ್ಕೆ ಬಹಳಷ್ಟು ಮಹತ್ವ ಕೊಡುತ್ತಾರೆ. ಹಿಂದೂಗಳಿಗೆ ಸಂವಿಧಾನವೇ ಅಂತಿಮ. ನಂತರದ ಸ್ಥಾನ ಭಗವದ್ಗೀತೆ, ಮಹಾಭಾರತ, ವೇದಗಳು ಹಾಗೂ ರಾಮಾಯಣ ಗ್ರಂಥಗಳಿಗೆ ನೀಡಲಾಗಿದೆ. ನ್ಯಾಯಾಲಯದಲ್ಲಿ ವಾದಿಸುವಾಗ ‘ಭಗವದ್ಗೀತೆ’ಯ ಮೇಲೆ ಪ್ರಮಾಣ ಮಾಡಿದರೂ ಸಹ, ಸಂವಿಧಾನದ ಪರಿಕರಗಳನ್ನೇ ಪಾಲಿಸಿ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತೇವೆ. ಹಿಂದೂ ಧರ್ಮಗ್ರಂಥಗಳಲ್ಲಿನ ಉಲ್ಲೇ ಹಾಗೂ ಸಂವಿಧಾನದ ನಡುವೆ ಸಂಘರ್ಷ ಕಂಡುಬಂದರೆ ಸಂವಿಧಾನವನ್ನೇ ಪಾಲಿಸುತ್ತೇವೆ ಹೊರತು ಧರ್ಮಗ್ರಂಥಗಳಲ್ಲಿನ ಉಲ್ಲೇವನ್ನಲ್ಲ.

ಮುಸಲ್ಮಾನರಿಗೆ ಸಂವಿಧಾನಕ್ಕಿಂತಲೂ ತಮ್ಮ ಧರ್ಮವೇ ಮುಖ್ಯ. ಸಂವಿಧಾನದ ಆಶಯಗಳ ವಿರುದ್ಧವಾಗಿ ನಿಂತು ನ್ಯಾಯಾಲಯ ಗಳಲ್ಲೂ ಸಹ ತಮ್ಮ ಧರ್ಮಗ್ರಂಥ ಗಳಲ್ಲಿನ ಉಲ್ಲೇ ಮಾಡಿ ಸಂವಿಧಾನಕ್ಕಿಂತಲೂ ತಮ್ಮ ಧರ್ಮವೇ ಮುಖ್ಯವೆಂಬು ದನ್ನು ಪ್ರತಿಪಾದಿಸುತ್ತಿ ರುತ್ತಾರೆ. ತಮ್ಮ ಧರ್ಮದ ವಿರುದ್ಧ ಮಾತನಾಡುವವರ ವಿರುದ್ಧ ‘ಸೈದ್ಧಾಂತಿಕವಾಗಿ’ ಹೋರಾಟ ಮಾಡಲಾಗದೇ ಜಗಳ ಹಾಗೂ ಕೊಲೆ ಮಾಡುವ ಚಿಂತನೆಯಲ್ಲಿಯೇ ತೊಡಗಿರುತ್ತಾರೆ. ಮೊಹಮ್ಮದ್ ಘಜನಿ ಭಾರತದ ಮೇಲೆ ಆಕ್ರಮಣ ಮಾಡಿದ ಕಾಲದಿಂದಲೂ ’ಸೈದ್ಧಾಂತಿಕ ವಾದ’ ಹೋರಾಟ ಇವರಿಗೆ ಸಾಧ್ಯವಾಗುತ್ತಿಲ್ಲ. ಆಕ್ರಮಣಕಾರಿ ಮನಃಸ್ಥಿತಿಯಿಂದ ತಮ್ಮ ಧರ್ಮವೇ ಜಗತ್ತಿನ ಶ್ರೇಷ್ಠ ಧರ್ಮವೆಂದು ತಿಳಿದು, ಅದರ ವಿರುದ್ಧ ಮಾತನಾಡಿದವರನ್ನು ಧಮನ ಮಾಡಲಾಗುತ್ತಿದೆ.

ಮತಾಂಧ ಟಿಪ್ಪು ಸುಲ್ತಾನ್ ಇಸ್ಲಾಂ ಧರ್ಮವನ್ನು ಪ್ರಶ್ನಿಸಿದ್ದವರನ್ನು ಕಗ್ಗೊಲೆ ಮಾಡಿಸಿದ್ದ. ಇಸ್ಲಾಂ ಧರ್ಮವನ್ನು ಪ್ರಸರಿಸಲು ಸಿಕ್ಕ ಸಿಕ್ಕವರನ್ನು ಮತಾಂತರ ಮಾಡಿದ್ದ, ಈತನಿಗೂ ಸೈದ್ಧಾಂತಿಕವಾಗಿ ಹೋರಾಟ ಮಾಡುವ ಶಕ್ತಿ ಇರಲಿಲ್ಲ. ಆತನ ತಂದೆ ಹೈದರ್ ಅಲಿ ಯುದ್ಧ ಮಾಡಲು ಹೆದರಿ ಅಡಗಿ ಕುಳಿತ್ತಿದ್ದಂತಹ ಟಿಪ್ಪುವಿಗೆ ಛಡಿ ಏಟು ನೀಡಿದ್ದ. ಕೊಲೆ ಗಡುಕರಿಗೆ ಸೈದ್ಧಾಂತಿಕ ಹೋರಾಟ ಅರ್ಥ ವಾಗುವುದಿಲ್ಲ. ಅವರದ್ದೇನಿದ್ದರೂ ಕೊಚ್ಚುವುದು,ಕೊಲ್ಲುವುದು, ಜನರಿಗೆ ಚಾಕು ತೋರಿಸಿ ಹೆದರಿಸುವುದು. ಟಿಪ್ಪು ಸುಲ್ತಾನನಿಗೂ
ಕೊಲೆಗಡುಕನಿಗೂ ಯಾವುದೇ ವ್ಯತ್ಯಾಸವಿಲ್ಲ. ಇಂತಹ ಟಿಪ್ಪುವನ್ನು ‘ಮೈಸೂರು ಹುಲಿ’ ಎಂಬಂತೆ ಬಿಂಬಿಸಿದ್ದು ಕಮ್ಯುನಿಸ್ಟರ ಟೊಳ್ಳು ಇತಿಹಾಸ.

ಟಿಪ್ಪುವಿನ ಮರಣಾ ನಂತರ, ಆತನ ಅನುಯಾಯಿಗಳು ಪ್ರಸ್ತುತ ಸಮಾಜದಲ್ಲಿ ಸೈದ್ಧಾಂತಿಕವಾಗಿ ಹೋರಾಟ ಮಾಡಲಾಗದೆ ಆತನ ದಾರಿಯಲ್ಲಿಯೇ ಸಾಗುತ್ತಿzರೆ. ಇಸ್ಲಾಮಿನ ಕೆಲವೊಂದು ಆಚರಣೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗ ಉತ್ತರಿಸಲಾಗದೆ, ಪ್ರಶ್ನೆ ಮಾಡಿದ
ವರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ’SDPI’ ಹಾಗು ’’PFI’ ಸಂಘಟನೆಗಳು ಟಿಪ್ಪು ಸುಲ್ತಾನನ ರೂಪಾಂತರಿ ಸಂತತಿಗಳು. ಆತನ ರೀತಿಯಲ್ಲಿಯೇ ತಮ್ಮ ಧರ್ಮ ರಕ್ಷಣೆಯ ಹೆಸರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.

’ಪೌರತ್ವ ತಿದ್ದುಪಡಿ ಕಾಯಿದೆ’ಯ ವಿಚಾರದಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ಹಬ್ಬಿಸಿ ಗಲಭೆ ಸೃಷ್ಟಿಸಿದ್ದ ಈ ಸಂಘಟನೆಯ ಬಳಿ, ತಿದ್ದುಪಡಿ ಯಿಂದ ಮುಸಲ್ಮಾನರಿಗೆ ಯಾವ ರೀತಿ ತೊಂದರೆಯಾಗುತ್ತದೆಯೆಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ಅವರಿಗೆ ಪದೇ ಪದೇ ಮತ್ತದೇ ಪ್ರಶ್ನೆಗಳನ್ನು ನೂರು ಬಾರಿ ಕೇಳಿದರೂ ಸರಿಯಾಗಿ ಉತ್ತರಿಸುವ ಜ್ಞಾನವಿರುವುದಿಲ್ಲ. ತಮ್ಮ ಧರ್ಮಕ್ಕೆ ಈ ತಿದ್ದುಪಡಿಯಿಂದ ಏನಾಗುತ್ತ ದೆಂಬ ಪ್ರಶ್ನೆಯನ್ನು ಕೇಳಿದರೆ ’ಸೈದ್ಧಾಂತಿಕ’ವಾಗಿ ವಾದ ಮಂಡಿಸಲು ಅವರಿಗೆ ಧೈರ್ಯವಿಲ್ಲ. ಹಿಂದೂ ಧರ್ಮದಲ್ಲಿನ
ಆಚರಣೆಗಳ ಪ್ರಶ್ನೆ ಎzಗ ಸ್ವತಃ ಹಿಂದುಗಳೇ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ.

ಹಿಂದೂ ಧರ್ಮಗಳಲ್ಲಿನ ದೇವರುಗಳನ್ನೂ ಪ್ರಶ್ನಿಸಿ ‘ಸೈದ್ಧಾಂತಿಕ’ವಾಗಿ ಉತ್ತರ ಸಿಕ್ಕ ಮೇಲೆಯೇ ಒಪ್ಪಿಕೊಂಡಿದ್ದೇವೆ. ರಾಮನನ್ನು ಪ್ರಶ್ನಿಸಿದ್ದೇವೆ, ಶ್ರೀ ಕೃಷ್ಣನನ್ನು ಪ್ರಶ್ನಿಸಿದ್ದೇವೆ, ಯತಿಗಳನ್ನು ಪ್ರಶ್ನಿಸಿದ್ದೇವೆ. ಆದರೆ ಎಂದೂ ಸಹ ಧರ್ಮಕ್ಕೆ ವಿರುದ್ಧ ನಿಂತವರನ್ನು ‘ಸೈದ್ಧಾಂತಿಕ’ ವಾಗಿ ಚರ್ಚಿಸದೆ ಕೊಲೆ ಮಾಡುವ ಆಲೋಚನೆಯನ್ನು ಮಾಡುವುದಿಲ್ಲ. ‘ಪೌರತ್ವ ತಿದ್ದುಪಡಿ ಕಾಯಿದೆ’ಯ ವಿಚಾರ
ದಲ್ಲಿ ಮಂಗಳೂರಿನಲ್ಲಿ ಸಹ ಗಲಭೆಗಳನ್ನು ನಡೆಸಿದ್ದು ’SDPI’ ಹಾಗೂ ’PFI’ ಸಂಘಟನೆಗಳು, ಸೈದ್ಧಾಂತಿಕವಾಗಿ ಚರ್ಚಿಸುವ ಜ್ಞಾನವಿಲ್ಲದೆ ತಮ್ಮ ಸಮುದಾಯದ ಯುವಕರನ್ನು ದಾರಿ ತಪ್ಪಿಸಿ ಗಲಭೆಗಳನ್ನು ಮಾಡಿಸುತ್ತಾರೆ.

ಇಂದಿಗೂ ಅವರ ಬಳಿ ತಿದ್ದುಪಡಿಯಿಂದ ಮುಸಲ್ಮಾನರಿಗೆ ಆಗುವ ಅನನುಕೂಲಗಳ ಬಗ್ಗೆ ಚರ್ಚಿಸಿದರೆ ಉತ್ತರ ಸಿಗುವುದಿಲ್ಲ. ಮತ್ತದೇ ಧರ್ಮದ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆ ಮಾಡಿಸುತ್ತಾರೆ. ಇಸ್ಲಾಂ ದೇವರಿಗೆ ಅಪಚಾರವೆಸಗಿದನೆಂಬ ನೆಪವನ್ನಿಟ್ಟು ಕೊಂಡು ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆ ಮಾಡಿಸಿದ್ದರು. ದಲಿತ ಶಾಸಕ ನೊಬ್ಬನ ಮನೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚುತ್ತಾ
ರೆಂದರೆ ಇವರ ಟಿಪ್ಪು ಸುಲ್ತಾನಿ ಮನಃಸ್ಥಿತಿ ಯಾವ ಮಟ್ಟದ್ದಿರಬೇಕು? ಮುಸಲ್ಮಾನರ ರೀತಿಯಲ್ಲಿ ಹಿಂದೂಗಳು ಪ್ರತಿಯೊಂದು
ವಿಚಾರಕ್ಕೂ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದರೆ ನರಕ ದರ್ಶನವಾಗುತ್ತಿತ್ತು. ಹಿಂದೂ ಧರ್ಮದಲ್ಲಿ ಸರ್ವಾಧಿಕಾರವಿಲ್ಲ.

ಇಸ್ಲಾಮಿನಲ್ಲಿ ತನ್ನ ಧರ್ಮ ಹೇಳಿದ ಹಾಗೆ ಕೇಳದವನನ್ನು ಧರ್ಮದ್ರೋಹಿಯೆಂದು ನೇರವಾಗಿ ಹೇಳಲಾಗುತ್ತದೆ. ಧರ್ಮ ಹೇಳಿದ್ದನ್ನು ಪಾಲನೆ ಮಾಡಲೇಬೇಕೆಂದು ಹಿಂದೂ ಧರ್ಮದಲ್ಲಿ ಖಡಾಖಂಡಿತವಾಗಿ ಹೇಳಿಲ್ಲ. ಇಸ್ಲಾಮಿನಲ್ಲಿ ತನ್ನ ಧರ್ಮದಲ್ಲಿನ ಆಚರಣೆಗಳೇ ಅಂತಿಮ ಅದನ್ನು ಪಾಲಿಸದವರನ್ನು ಕೊಂದರೂ ತಪ್ಪಿಲ್ಲವೆಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿನ ಆಚರಣೆಗಳನ್ನು ಖಂಡಿಸುವ
ಸ್ವಾತಂತ್ರ್ಯವನ್ನು ಧರ್ಮಗ್ರಂಥಗಳೇ ನೀಡಿವೆ. ಇದನ್ನೇ ಬಂಡವಾಳ ಮಾಡಿಕೊಂಡಂತಹ ಕಮ್ಯುನಿಸ್ಟರು ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ.

ಇಂತಹ ಕಮ್ಯುನಿಸ್ಟರನ್ನು ಸಹಿಸಿಕೊಂಡಂತಹ ಸನಾತನ ಧರ್ಮ ನಮ್ಮದು. ಸೈದ್ಧಾಂತಿಕವಾಗಿ ಗಂಟೆಗಟ್ಟಲೆ ಹಲವು ಆಚರಣೆಗಳ ಬಗ್ಗೆ ಚರ್ಚೆಗಳು ಹಿಂದೂ ಕುಟಂಬದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ನೂರಾರು ವರ್ಷಗಳ ಹಳೆಯ ಅನಿಷ್ಟ ಪದ್ಧತಿಗಳ ಬಗ್ಗೆ ಚರ್ಚಿಸಿ,
ಖಂಡಿಸಿ ಹಿಂದೂ ಧರ್ಮವು ಆ ಪದ್ಧತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇಸ್ಲಾಂ ಧರ್ಮದಲ್ಲಿನ ‘ತ್ರಿವಳಿ ತಲಾಕ್’ ರದ್ದತಿಯ ವಿಚಾರ ದಲ್ಲಿ ಅಲ್ಲಿನ ಬುದ್ದಿ ಜೀವಿಗಳು ಸೈದ್ಧಾಂತಿಕವಾಗಿ ತಮ್ಮ ಕುಟುಂಬದಲ್ಲಿ ಬಿಡಿ, ಸಾರ್ವಜನಿಕವಾಗಿಯೂ ಚರ್ಚಿಸಿಲ್ಲ. ಮಹಿಳೆಯ ಘನತೆಗೆ ಚ್ಯುತಿ ತರುವ ಆಚರಣೆಗಳು ಸಂವಿಧಾನ ಬಾಹಿರವಾಗಿದ್ದರೂ ಸಹ ತಮ್ಮ ಧರ್ಮಕ್ಕೆ ಕಟ್ಟುಬಿದ್ದು ಅನಿಷ್ಟ ಪದ್ಧತಿಯನ್ನು ಬೆಂಬಲಿ ಸುತ್ತಾ ಬಂದಿದ್ದಾರೆ.

ಹಿಜಾಬ್, ಬುರ್ಖಾ ಮಹಿಳೆಯನ್ನು ಸಮಾಜದಿಂದ ದೂರಮಾಡುವ ಅನಿಷ್ಟ ಆಚರಣೆಗಳೆಂದು ತಿಳಿದ್ದಿದ್ದರೂ ಅದರ ವಿರುದ್ಧ ಮಾತ ನಾಡುವುದಿಲ್ಲ. ಒಂದೆಡೆ ಸಂವಿಧಾನದ ಹೆಸರು ಹೇಳುವುದು, ಮತ್ತೊಂದೆಡೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಅನುಕೊಲಕ್ಕೊಬ್ಬ ಗಂಡನೆಂಬಂತೆ ತಮಗೆ ಅನುಕೂಲವಾದಾಗ ಸಂವಿಧಾನ, ಇಲ್ಲವಾದರೆ ಇಸ್ಲಾಂ ಧರ್ಮಗ್ರಂಥ. ಸೈದ್ಧಾಂತಿಕವಾಗಿ ಹಿಜಾಬಿನ ವಿಷಯವಾಗಿ ಪ್ರಶ್ನೆಗಳನ್ನು ಕೇಳಿದರೆ ಅವರ ಬಳಿ ಉತ್ತರವಿರುವುದಿಲ್ಲ.

ಸರಕಾರ ರೂಪಿಸಿರುವ ಕಾನೂನಿನಲ್ಲಿ ಶಾಲೆಗಳಲ್ಲಿ ಹಿಜಾಬನ್ನು ನಿಷೇಧಿಸಿದ್ದರೂ ಯಾಕೆ ಧರಿಸಿಕೊಂಡು ಹೋಗಬೇಕೆಂಬ ಪ್ರಶ್ನೆಯನ್ನು ಕೇಳಿದರೆ ಸಂವಿಧಾನದ ಮೂಲಭೂತ ಹಕ್ಕುಗಳ ಬಳಿ ಎಗರುತ್ತಾರೆ. ಅತ್ತ ನ್ಯಾಯಾಲಯದ ಆದೇಶಕ್ಕೂ ತಲೆಬಾಗದೆ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅಯೋಧ್ಯೆ‘ರಾಮ ಮಂದಿರ’ ದ್ವಂಸ ಪ್ರಕರಣದಲ್ಲಿ ವೈಜ್ಞಾನಿಕ ಉತ್ಕನನದಲ್ಲಿ ಸಿಕ್ಕಂತಹ ದೇವಸ್ಥಾನದ ಅವಶೇಷ ಗಳಿಗೆ ಇವರು ಬೆಲೆ ನೀಡಲಿಲ್ಲ. ಕರೋನ ಸಂದರ್ಭದಲ್ಲಿ ದೇಶದಾದ್ಯಂತ ಲಾಕ್ ಡೌನ್ ಹೇರಿದ ನಂತರ, ಮೊದಲ ಬಾರಿ ದೇವಸ್ಥಾನ ಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾದಾಗ ತಮ್ಮ ಧರ್ಮಕಾರ್ಯಗಳನ್ನು ಮುಂದುವರಿಸಲು ಮಸೀದಿಗಳನ್ನು ಅಕ್ರಮವಾಗಿ ತೆರೆದು ನಮಾಜ್ ಮಾಡಿದವರಿವರು.

ಕೋವಿಡ್ ಲಸಿಕೆಯ ವಿಚಾರದಲ್ಲಿ ವಿಜ್ಞಾನವನ್ನು ನಂಬದೆ ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದವರಿವರು. ಸೈದ್ಧಾಂತಿಕವಾಗಿ ಲಸಿಕೆಯ ಮಹತ್ವದ ಬಗ್ಗೆ ತಿಳಿಸಲು ಮುಂದಾದರೆ ಅಲ್ಲಿಯೂ ಧರ್ಮವನ್ನು ಎಳೆತರುವ ಮನಃಸ್ಥಿತಿಯವರಿವರು. ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆಯ ಹಿಂದೆ ಕೇಳಿಬಂದಂತಹ ಹೆಸರು ಮತ್ತದೇ ’SDPI’ ಮತ್ತು ’PFI’, ಹರ್ಷನ ಅಂತಿಮ ಯಾತ್ರೆಯ ಸಂಧರ್ಭದಲ್ಲಿ ಉಂಟಾದಂತಹ ಗಲಭೆಯಲ್ಲಿ ಪೋಲೀಸರಿಗೆ ಮಚ್ಚು ತೋರಿಸುವ ಮೂಲಕ ಟಿಪ್ಪು ಸುಲ್ತಾನನ ವಿಕೃತಿ ಮೆರೆದಿದ್ದರು. ಇದಕ್ಕೆ ಧೈರ್ಯ ಬೇಕಿಲ್ಲ.

ಒಂದು ಚುಟ್ಟಾ ಗಾಂಜಾ ಸೇದಿದರೆ ಸಾಕು ಅಥವಾ ಶಾಹಿ ಅಳಿಸಲು ಬೇಕಿರುವ ರಾಸಾಯನಿಕದ ವಾಸನೆಯಿದ್ದರೆ ಸಾಕು. ಹರ್ಷ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಬಳಸುತ್ತಿದ್ದಂತಹ ಪದಗಳನ್ನು ಸಹಿಸದವರು ಸೈದ್ಧಾಂತಿಕವಾಗಿ ಆತನ ವಿರುದ್ಧ ಸೋತಿದ್ದರು. ಎದುರು ಬದುರು ಕುಳಿತು ವಿಷಯಗಳನ್ನು ಚರ್ಚೆ ಮಾಡಿ ಸೈದ್ಧಾಂತಿಕವಾಗಿ ಗೆಲ್ಲುವ ಧೈರ್ಯ ಇವರಿಗಿರಲಿಲ್ಲ. ಶಿಕ್ಷಣದಿಂದ ವಂಚಿತರಾಗಿ ಭೌದ್ಧಿಕ ದೀವಾಳಿಯಾಗಿರುವ ಟಿಪ್ಪುವಿನ ಅನುಯಾಯಿಗಳಿಗೆ ತಮ್ಮ ಧರ್ಮದ ಬಗ್ಗೆ ಮಾತನಾಡುವವರನ್ನು ಕೊಲ್ಲುವು ದೊಂದೇ ಪರಿಹಾರವೆಂದು ಭಾವಿಸಿದ್ದಾರೆ. ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ತಮ್ಮ ಬೌದ್ಧಿಕ ದೀವಾಳಿತನ ಪ್ರದರ್ಶಿಸುವ
ಮತಾಂಧರಿಗೆ ‘ಸಿದ್ಧಾಂತ’ಗಳ ಅರಿವಿಲ್ಲ. ಕಾಲಕ್ಕೆ ತಕ್ಕಂತೆ ತಾವೂ ಸಹ ಬದಲಾಗಬೇಕೆಂಬ ಕನಿಷ್ಠ ಜ್ಞಾನವಿಲ್ಲ.

ಇಡೀ ಜಗತ್ತು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದರೆ ಇವರಿಗೆ ಮಾತ್ರ 500 ವರ್ಷಗಳ ಹಳೆಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿರ ಬೇಕೆಂಬ ಹಂಬಲ. ತಮ್ಮವರನ್ನು ಮುಖ್ಯಹಿನಿಗೆ ತರದೇ ನಾಲ್ಕು ಗೋಡೆಯ ಮದ್ಯದಲ್ಲಿ ಸಿಲುಕಿಸಿ ತಮ್ಮ ಪುರಾತನ ಸಂಪ್ರದಾಯ ಗಳನ್ನು ಹೇರಿ, ಧರ್ಮರಕ್ಷಕರೆಂಬ ಪಟ್ಟವನ್ನು ಅಲಂಕರಿಸಬೇಕೆಂಬ ಜಿಹಾದಿ ಆಶಯ ಇವರಲ್ಲಿ ಎದ್ದು ಕಾಣುತ್ತದೆ. ಇಂತಹವರ ಮನಸ್ಥಿತಿ ಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂದೆ ನಿಸುತ್ತಿದೆ. ಬಹುಶಃ ಬಾಬಾ ಸಾಹೇಬರು ಇವರ ಮನಃಸ್ಥಿತಿಯನ್ನು ಅಂದೇ ಅರಿತು ಪಾಕಿಸ್ತಾನದ ಕಲ್ಪನೆಗೆ ಸಮ್ಮತಿ ಸೂಚಿಸಿದ್ದರು.

‘ಸೈದ್ಧಾಂತಿಕ’ವಾಗಿ ದೀವಾಳಿಯಾಗಿರುವ ’SDPI’ ಹಾಗು ’PFI’’ ಪುಂಡರು ತಾಲಿಬಾನಿ ಮನಸ್ಥಿತಿಯನ್ನು ಭಾರತದ ಮುಸಲ್ಮಾನ ರಲ್ಲಿ ಆಳವಾಗಿ ಪಸರಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಸಂಗತಿ.