Saturday, 5th October 2024

ಅದೇ ದಾರಿ; ಅದೇ ತಿರುವು; ಈ ಪಯಣ ನೂತನ !

ಯಶೋ ಬೆಳಗು

yashomathy@gmail.com

ಹೊಸತೆಂಬುದು ಸದಾ ಸಂತೋಷದ ಹುಮ್ಮಸ್ಸನ್ನು ನೂರ್ಮಡಿಯಾಗಿಸುತ್ತದೆ. ಆದರೆ ಅದನ್ನು ಅನುಭವಿಸುವ ಮನಸ್ಥಿತಿ ಯನ್ನು ರೂಢಿಸಿಕೊಳ್ಳಬೇಕಷ್ಟೆ. ಶೆರ್ಲಿ ಮೇಡಮ್‌ಗಾಗಿ ಬೆಟ್ಟದ ಹೂವನ್ನು ತರುವ ಕನಸಿನ ನಡುವೆ ಬಿಸಿಲೇ ಬರಲಿ ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ… ಎಂದು ಹಾಡುವ ಪುಟ್ಟ ಪೋರನ (ಪುನೀತನ) ಸಂತೋಷವನ್ನು ಲೆಕ್ಕ ಮಾಡಿ ಅಳೆಯಲಿಕ್ಕಾಗುತ್ತದಾ?

ಸಂತೋಷವೆಂಬುದು ನಮ್ಮ ಮನಸಿನ ಒಂದು ಸ್ಥಿತಿ. ಅದು ಕೆಡದಂತೆ ಜೋಪಾನ ಮಾಡಿ ಕೊಳ್ಳಲು ಅದಕ್ಕೆ ಪೂರಕವಾದ ವಿಷಯಗಳನ್ನು ಸದಾ ತುಂಬಿಸುತ್ತಿರಬೇಕು. ನಗು ವೆಂಬುದು ಕೇವಲ ಅದರ ಪ್ರತಿಫಲನವಷ್ಟೆ. ಸಂತೋಷವೆಂಬುದು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ. ಅದು ಕಣ್ಣಿಗೆ ಕಾಣುವಂಥದ್ದಲ್ಲ. ಅದಕ್ಕೆ ನಿರ್ದಿಷ್ಟ ರೂಪ, ಬಣ್ಣ, ರುಚಿ, ಶಕ್ತಿ ಯಾವುದೂ ಇರುವುದಿಲ್ಲ. ತುಂಬ ಸಲ ನಮ್ಮ ಸಂತೋಷ ಮತ್ತೊಬ್ಬ ರಲ್ಲಿ ಅಸೂಯೆಯನ್ನು ಹುಟ್ಟು ಹಾಕುತ್ತದೆ.

ಹೀಗಾಗಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಹುಳುಕು ಹುಡುಕುತ್ತಾ ಅದರ ತಮ್ಮ ಸಂತೋಷವನ್ನು ಕಾಣುತ್ತಾರೆ. ಇನ್ನು ಕೆಲವರು ನಾವು ಪಡುತ್ತಿರುವ ಕಷ್ಟವನ್ನು ನೋಡುವುದರಲ್ಲಿಯೇ ಸಂತೋಷವನ್ನು ಕಾಣುತ್ತಾರೆ. ಗೆದ್ದಾಗ ಮೆಚ್ಚುಗೆ ಸೂಚಿಸದಿದ್ದರೂ ಬಿzಗ ಆಡಿಕೊಂಡು ನಗುವುದರ ಸಂತೋಷವನ್ನು ಅನುಭವಿಸುವವರೂ ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ.

ನಮ್ಮ ಏಳಿಗೆಗೆ ತಾವು ತೃಣ ಮಾತ್ರದ ಸಹಾಯ ಮಾಡದೇ ನಮ್ಮ ಚಟುವಟಿಕೆಗಳನ್ನೆಲ್ಲ ಮರೆಯ ಗಮನಿಸುತ್ತಾ, ನಮಗೆ ಸಹಾಯ ಮಾಡಲು ಬಂದವರನ್ನೂ ತಡೆಯುತ್ತ ಘನ ಸಾಧನೆ ಮಾಡಿದವರಂತೆ ಅದರ ಸಂತೋಷ ಕಾಣುವವರೂ ದಂಡಿಯಾಗೇ ಇದ್ದಾರೆ. ಗಂಡ-ಹೆಂಡತಿಯ ನಡುವೆ ತಂದಿಟ್ಟು ತಮಾಷೆ ನೋಡುತ್ತಾ ಸಂತೋಷ ಪಡುವವರು, ಮಕ್ಕಳ ಬಗ್ಗೆ ಚಾಡಿ ಹೇಳಿ ಬಯ್ಯಿಸುತ್ತಾ ಸಂತೋಷ ಪಡುವವರು, ಮತ್ತೊಬ್ಬರನ್ನು ಹೀಯಾಳಿಸುತ್ತಾ, ದಂಡಿಸುತ್ತಾ, ದರ್ಪ ತೋರಿಸುತ್ತಾ ಮೆರೆಯುವುದರ ಕೆಲವರಿಗೆ ಹೆಚ್ಚು ಸಂತೋಷ.

ಆದರೆ ಇದೆಲ್ಲಕ್ಕಿಂತಲೂ ಭಿನ್ನವಾಗಿ ನಮಗೆ ಸಂತೋಷ ಕೊಡುವ ಸಾವಿರಾರು ಸಂಗತಿಗಳಿವೆ ಈ ಜಗತ್ತಿನಲ್ಲಿ. ಹೊಸತೆಂಬುದು ಸದಾ ಸಂತೋಷದ ಹುಮ್ಮಸ್ಸನ್ನು ನೂರ್ಮಡಿಯಾಗಿಸುತ್ತದೆ. ಆದರೆ ಅದನ್ನು ಅನುಭವಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳ ಬೇಕಷ್ಟೆ. ಶೆರ್ಲಿ ಮೇಡಮ್‌ಗಾಗಿ ಬೆಟ್ಟದ ಹೂವನ್ನು ತರುವ ಕನಸಿನ ನಡುವೆ ಬಿಸಿಲೇ ಬರಲಿ ಮಳೆಯೇ ಬರಲಿ ಕಾಡಲ್ಲಿ
ಮೇಡಲ್ಲಿ ಅಲೆವೆ… ಎಂದು ಹಾಡುವ ಪುಟ್ಟ ಪೋರನ (ಪುನೀತನ) ಸಂತೋಷವನ್ನು ಲೆಕ್ಕ ಮಾಡಿ ಅಳೆಯಲಿಕ್ಕಾಗುತ್ತದಾ? ಸಂತೋಷ ಅನ್ನುವುದು ಕೇವಲ ಬಂಗಾರಗಳಲ್ಲಿ, ವೈಭೋಗಗಳಲ್ಲಿ ಮಾತ್ರ ಅಡಗಿಕೊಂಡಿರುವುದಿಲ್ಲ ಅನ್ನುವ ಸತ್ಯವನ್ನು ಅರಿತಾಗ ಆಗುವ ಸಂತೋಷಕ್ಕೆ ಸಮನಾವುದು? ಇಂಥಾ ಸಂತೋಷವನ್ನು ಹಾಳುಗೆಡವಲು ನಮಗೆ ದೊಡ್ಡ ಶತ್ರುಗಳು ಬೇಕಿಲ್ಲ.

ಅತೃಪ್ತಿ ಅನ್ನುವ ಒಂದು ಅಂಶಕ್ಕೆ ನಮ್ಮೆಲ್ಲ ಸಂತೋಷಗಳನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡಿ ಹಾಕುವ ತಾಕತ್ತಿರುತ್ತದೆ. ನಮ್ಮಲ್ಲಿರುವ ನೂರಾರು ಸಂತೋಷಗಳನ್ನು ಅನುಭವಿಸದೇ ಸದಾ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ನರಳುವು ದರ ಜೀವನ ಕಳೆದುಬಿಡುತ್ತಾರೆ ಕೆಲವರು. ನಮ್ಮ ಮಕ್ಕಳು ಎಷ್ಟೇ ಅಂಕ ಗಳಿಸಿದರೂ ಅವರ ಸಹಪಾಠಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾ ಸದಾ ಅತೃಪ್ತಿಯ ಬೇಗೆಯಲ್ಲಿ ಬೆಂದು ಹೋಗುವ ಪೋಷಕರು, ನಮ್ಮ ಬಳಿ ಎಂಥ ಚೆಂದದ ಸೀರೆಯಿದ್ದರೂ ಮತ್ತೊಬ್ಬರ ಬಳಿಯಿರುವ ಸೀರೆಯನ್ನು ಕಂಡಾಗ ಆಗುವ ಅತೃಪ್ತಿ, ಇನ್ನೊಂಚೂರು ಬೆಳ್ಳಗಿರಬೇಕಿತ್ತು. ಇನ್ನೊಂಚೂರು ಎತ್ತರವಿರಬೇಕಿತ್ತು.

ಇನ್ನೊಂಚೂರು ಸಣ್ಣವಿರಬೇಕೆಂದು ನಿರಂತರ ಕಾಡುವ ಅತೃಪ್ತಿಯಿಂದ ನಮ್ಮನ್ನು ಆ ಸಾಕ್ಷಾತ್ ಭಗವಂತನೂ ಕಾಪಾಡಲಾರ. ಇನ್ನು ವಾದ-ವಿವಾದಗಳು. ನಾನು ಹೇಳಿದ್ದೇ ಸರಿ. ನಾನು ಮಾಡಿದ್ದೇ ಸರಿ. ನನ್ನ ನಿಲುವೇ ಸರಿ. ನಾನು ತಿಳಿದಿದ್ದೇ ಸರಿ ಎನ್ನುವ ಅಮಲು ತಲೆಗೇರಿಸಿಕೊಂಡವರ ಎದಿರು ಏನು ಮಾಡಿದರೂ, ಏನು ಮಾತಾಡಿದರೂ ನಮ್ಮನ್ನು ಆಕ್ಷೇಪಿಸುತ್ತ, ನಮ್ಮ ಮೇಲೆಯೇ ತಪ್ಪನ್ನು ಹೊರಿಸಿ, ನಮ್ಮ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲ ಊರತುಂಬ ಹೇಳಿಕೊಂಡು ತಿರುಗುತ್ತಾರೆ. ಅಂಥವರೊಂದಿಗೆ ವಾದಕ್ಕೆ
ನಿಲ್ಲುತ್ತಾ ನಮ್ಮ ಅಮೂಲ್ಯ ಸಮಯವನ್ನು ಹಾಳುಗೆಡವಿಕೊಳ್ಳುವದರ ಬದಲಿಗೆ ಅದು ಅವರ ಕರ್ಮ ಅಂದುಕೊಂಡು ಅವರಿಂದ ದೂರಸರಿದುಬಿಡುವುದೇ ಉತ್ತಮ.

ಇಲ್ಲದಿದ್ದರೆ ಇರುವ ನೆಮ್ಮದಿ ಕಳೆದುಕೊಂಡು ಮನಸ್ಸು ಪ್ರಕ್ಷುಬ್ಧಗೊಂಡುಬಿಡುತ್ತದೆ. ಪ್ರತೀಕಾರಕ್ಕಾಗಿ  ಹಪಹಪಿಸುವಂತಾಗಿ ಬಿಡುತ್ತದೆ. ಅದರೆಡೆಗೇ ಹೆಚ್ಚು ಗಮನ ಕೊಡುವಂತಾಗಿ ನಮ್ಮ ಇತರ ಕೆಲಸಗಳನ್ನೂ ಹಾಳುಗೆಡವಿಕೊಳ್ಳುತ್ತೇವೆ. ಅನೇಕ ಸಲ ಯಾಂತ್ರಿಕವಾದ ಏಕತಾನತೆಯಿಂದ ಬೋರೆದ್ದು ಹೋಗಿ ಉಸವೇ ಇರದೆ ಮನಸ್ಸು ಕುಬ್ಜಗೊಂಡುಬಿಡುತ್ತದೆ. ಅಂತಹ ಏಕ ತಾನತೆಗೆ ಒಂದು ಪುಟ್ಟ ವಿರಾಮ ನೀಡಿ ಬದಲಾವಣೆಯ ಹೊಸತನದಲ್ಲಿ ಮಿಂದು ಬಂದರೆ ಮತ್ತದೇ ಕೆಲಸವಾದರೂ
ನೀರಸವೆನಿಸುವುದಿಲ್ಲ. ರವಿ ಕೆಲವೊಮ್ಮೆ ಅವರ ಕಚೇರಿಯ ಕೆಲಸಗಳನ್ನೆಲ್ಲ ಮುಗಿಸಿ ಬರುವ ಹಾದಿಯಲ್ಲಿ ಪೋನು ಮಾಡಿ ಮನೆಗೆ ಬರುತ್ತಿದ್ದೇನೆ. ಏನಾದರೂ ತರಬೇಕಾ ಮನೆಗೆ? ಎಂದು ಕೇಳುತ್ತಿದ್ದರು.

ನಾನು ತಮಾಷೆಗೆ ಹಾಗಾದರೆ ನಾಳೆ ಅಡುಗೆಗೆ ಒಂದಷ್ಟು ತರಕಾರಿ ತೆಗೆದುಕೊಂಡು ಬನ್ನಿ ಅಂದರೆ, ನಿಜಕ್ಕೂ ಹಾದಿಯ
ನಡುವೆ ಕಾರು ನಿಲ್ಲಿಸಿ ತಾವೇ ತರಕಾರಿ ಅಂಗಡಿಯೊಳಗೆ ಡೆದು, ತರಕಾರಿಗಳನ್ನು ಆರಿಸಿ ತಂದು ಅದರಲ್ಲಿ ಯಾವ ಅಡುಗೆಗಳು ಮಾಡಿದರೆ ಹೆಚ್ಚು ರುಚಿಯಾಗಿರುತ್ತದೆ ಅನ್ನುವುದನ್ನು ವಿವರಿಸುವಾಗ ನನ್ನ ಮನದಲ್ಲಿ ವಿವರಿಸಲಾಗದ ಸಂತೋಷ. ನಾನು ತಮಾಷೆಗೆ ಹಾಗಂದೆ, ನೀವು ನಿಜಕ್ಕೂ ತರ್ತೀರ ಅನ್ನುವ ಕಲ್ಪನೆಯೇ ಇರಲಿಲ್ಲ ಅಂದಾಗ, ನನಗಾಗಿ ನಿತ್ಯ ಅಡುಗೆ ಮಾಡಿ ಬಡಿಸುವ ನಿನ್ನ ಸಂತೋಷಕ್ಕಾಗಿ ಇಷ್ಟು ಸಣ್ಣ ಕೆಲಸವನ್ನೂ ಮಾಡಲಿಕ್ಕಾಗುವುದಿಲ್ಲವಾ ನನಗೆ? ಎಂದು ಮಾತು
ಮರೆಸುತ್ತಿದ್ದರು.

ಹೀಗಾಗಿ ನನ್ನ ಮಗನಿಗೂ ಸಣ್ಣ ಸಣ್ಣ ವಿಷಯಗಳಲ್ಲಿ ಅಡಗಿರುವ ಅದ್ಭುತ ಸಂತೋಷವನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸುವ ಪ್ರಯತ್ನ ನಿರಂತರ ಜಾರಿಯಲ್ಲಿಟ್ಟಿದ್ದೇನೆ. ಯಾರೇನೇ ಅಂದುಕೊಳ್ಳಲಿ ಇನ್ನೊಬ್ಬರನ್ನು ನೋಯಿಸದಂತೆ ನಮ್ಮ ಸಂತೋಷವನ್ನು ಕಂಡುಕೊಳ್ಳುವುದು ಉತ್ತಮವೆಂದು ಅನ್ನಿಸಿ, ಇದ್ದ ಕೆಲಸಗಳನ್ನೆಲ್ಲ ಅಲ್ಲ ಬಿಟ್ಟು ಮಗನನ್ನು ಕರೆದುಕೊಂಡು
ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಯ ಸುತ್ತಲಿನ ಪರಿಸರದ ನಡುವೆ ಎರಡು ದಿನ ನೆಮ್ಮದಿಯಾಗಿ ಕಳೆದು ಬರಲು ನಿರ್ಧರಿಸಿದೆ.

ಜಾವಕ್ಕೇ ಎದ್ದು ಅವನ ಓರಗೆಯ  ಪುಟ್ಟ ಮಕ್ಕಳ ಗುಂಪಿನೊಂದಿಗೆ ಸನಿಹದ ಇದ್ದ mಟಜ್ಞಿಠಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೊರಟೆವು. ಹೊರಡುವ ಮೊದಲು ಅಮ್ಮಾ, ಮೊನ್ನೆ ಬಿದ್ದು ಆದ ಗಾಯದಿಂದಾಗಿ ಕಾಲು ನೋಯುತ್ತಿದೆ, ಮತ್ತೊಮ್ಮೆ ಬಂದಾಗ ಹೋಗೋಣ ಎಂದು ನೆಪ ಹೇಳುತ್ತಿದ್ದವನನ್ನು ಅಷ್ಟೇನೂ ದೂರವಿಲ್ಲ. ಕಷ್ಟ ಅನಿಸಿದರೆ ವಾಪಸ್ಸು ಬಂದುಬಿಡೋಣ’ ಎಂದು
ಅವನ ಮನವೊಲಿಸಿ ಕರೆದುಕೊಂಡು ಹೊರಟೆ. ಮುಖ ಬಾಡಿಸಿಕೊಂಡೇ ಹೊರಟವನು ನಡೆಯುತ್ತಾ ನಡೆಯುತ್ತಾ ಸುತ್ತಲಿನ ಎತ್ತೆತ್ತರದ ಹಸಿರು ಬೆಟ್ಟಗಳ ನಡುವೆ ಧುಮುಕುವ ಜಲಧಾರೆಯನ್ನು ಕಂಡು ಕಣ್ಣರಳಿಸುತ್ತಾ ಎಲ್ಲರಿಗಿಂತ ಮುಂದೆ ಹೆಜ್ಜೆ
ಹಾಕತೊಡಗಿದ.

ಕೊರಕಲುಗಳು, ಇಳಿಜಾರುಗಳ ದುರ್ಗಮ ಹಾದಿಯ ನಡುವೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಉರುಳಿ ಹೋಗುವ ಅಪಾಯದ ನಡುವೆ ನಾವು ತಲುಪಬೇಕಾದ ಗಮ್ಯ ಇನ್ನೂ ಮೈಲುದೂರ ಇರುವುದು ಕಂಡು ಇಷ್ಟೇ ಸಾಕು. ವಾಪಸ್ಸು
ಹೋಗಿಬಿಡೋಣ್ವಾ? ನನ್ನಿಂದ ನಡೆಯಲಾಗುತ್ತಿಲ್ಲ’ ಎಂದೆ. ಅಮ್ಮಾ ಇಷ್ಟು ದೂರವೇ ಬಂದಿದ್ದೇವೆ. ಅರ್ಧ ದಾರಿಯ ಹಿಂತಿರುಗಿ ಹೋದರೆ ಅನಿದೆ ಅನ್ನುವ ಕುತೂಹಲ ನಿರಂತರ ಕಾಡುತ್ತಲೇ ಇರುತ್ತದೆ. ಒಂದರೆ ಘಳಿಗೆ ಇಲ್ಲೇ ಕುಳಿತು ದಣಿವಾರಿಸಿಕೊಂಡು ನಿಧಾನಕ್ಕೆ ಬಾ. ಆಗಲಿಲ್ಲವೆಂದರೆ ಇ ಆರಾಮಾಗಿ ಕುಳಿತಿರು. ನಾನು ಹೋಗಿ ಬಂದುಬಿಡುತ್ತೇನೆ ಅಂದ. ಅವನ ಉತ್ಸಾಹ ಕಂಡು ನಾನು ನಿಧಾನಕ್ಕೆ ಹೆಜ್ಜೆ ಎತ್ತಿಡುತ್ತಾ ನಡೆಯಲಾರಂಭಿಸಿದೆ.

ನಡೆಯುತ್ತಾ ನಡೆಯುತ್ತಾ ’ಅಮ್ಮಾ ಈ ಕಾಲುದಾರಿಯಲ್ಲಿ ಬೇಡ. ಅಲ್ಲಿ ನಿನಗೆ ಬರುವುದು ಕಷ್ಟವಾಗುತ್ತದೆ. ಈ ದಾರಿಯಲ್ಲಿ ಬಾ”
ಎಂದು ಜ್ಠಜಿbಛಿ ಮಾಡುತ್ತಾ ಏರಲಾಗದೆ ಆಯಾಸದಿಂದ ನಿಂತಾಗ ಆಸರೆಗೆ ಕೈಚಾಚಿ ಮೇಲೇರುವಂತೆ ಮಾಡುತ್ತಾ ಕೊನೆಗೂ ಬೆಟ್ಟದ ತುದಿ ತಲುಪಿದಾಗ ತೀಡಿದ ತಂಗಾಳಿಯ ನಡುವೆ ವನಸಿರಿಯ ಬುಡದಲ್ಲಿ ನಮ್ಮ ಊರು, ಮನೆ, ಬೀದಿಗಳನ್ನು ಹುಡುಕುತ್ತಾ, ಇಲ್ಲಿಂದ ಒಂದು ಏಣಿ ಹಾಕಿದರೆ ನೇರ ಆಕಾಶಕ್ಕೂ ನಡೆದುಹೋಗಿ ಬಿಡಬಹುದು ಎಂದು ಹರ್ಷೋದ್ಘಾರ ಮಾಡುವಾಗ ನಡೆದು ಬಂದ ಆಯಾಸವೆಲ್ಲ ಮರೆತೇ ಹೋಗಿತ್ತು.

ನೋಡು ಪುಟ್ಟಾ, ಜೀವನವೆಂದರೂ ಇಷ್ಟೇ. ಎಲ್ಲೂ ನಿಲ್ಲದಂತೆ, ಬೀಳದಂತೆ, ಎಡವದಂತೆ, ನನ್ನಿಂದಾಗದು ಅನಿಸುವಾಗ ಆಸರೆಯನ್ನು ಪಡೆದುಕೊಳ್ಳುತ್ತಾ ಮೇಲೇರುತ್ತಾ ಹೋದರೆ ಇಂಥಾ ಅದ್ಭುತ ಘಳಿಗೆಗಳು ನಮ್ಮದಾಗುತ್ತವೆ. ಚೂರು ಎಚ್ಚರ ತಪ್ಪಿದರೂ ಪ್ರಪಾತದಲ್ಲಿ ಬಿದ್ದು ಜೀವನವೇ ಅಂತ್ಯಗೊಳ್ಳುತ್ತದೆ. ಈ ಬೆಟ್ಟ, ಈ ಹಾದಿ, ಈ ತಿರುವುಗಳ ನಡುವೆ ಸಹಸ್ರಾರು ಯಾತ್ರಿಕರು ನಿತ್ಯ ನಡೆಯುತ್ತಲೇ ಇದ್ದಾರೆ. ಆದರೆ ಪ್ರತಿ ನಡಿಗೆಯೂ ವಿನೂತನ ಅನುಭವವನ್ನು ನೀಡುತ್ತದೆ…. ಎಂದಾಗ.

ಹೌದಮ್ಮಾ, ನೀನು ಹೇಳಿದ್ದು ಸರಿ. ನನ್ನ ಕುಂಟು ನೆಪದಿಂದ ಇಲ್ಲಿಗೆ ಬರದೇ ಹೋಗಿದ್ದಿದ್ದರೆ ನಾನೆಂಥಾ ಅದ್ಭುತ ಕ್ಷಣಗಳಿಂದ ವಂಚಿತನಾಗುತ್ತಿz ಎಂದು ತನ್ನದೇ ಶೈಲಿಯಲ್ಲಿ ಹೇಳಿದ. ಬರಲಿರುವ ಹೊಸ ವರುಷ ನಿನ್ನಲ್ಲಿ ಎಲ್ಲ ರೀತಿಯ ಹರುಷವನ್ನು ಹೊತ್ತು ತರಲಿ ಎಂದು ಹಾರೈಸುತ್ತಾ ಉಸದಿಂದ ಮನೆಗೆ ಮರಳಿದೆವು.

Read E-Paper click here