ಅಭಿವ್ಯಕ್ತಿ
ಪರಿಣಿತಾ ರವಿ, ಕೊಚ್ಚಿ
ಬದುಕೆಂಬುದು ನಿಂತ ನೀರಲ್ಲ. ನಿರಂತರ ಚಲನಶೀಲವಾದ ಪ್ರವಾಹ. ಈ ಜೀವನಪ್ರವಾಹದಲ್ಲಿ ತಂಗಾಳಿಯೋ, ಬಿರುಗಾಳಿ ಯೋ, ಚಂಡಮಾರುತವೋ ಏನೇ ಎದುರಾದರೂ ನಮ್ಮೊಳಗಿನ ಜೀವನೋತ್ಸಾಹದ ಒರತೆ ಬತ್ತದಂತೆ ಕಾಪಾಡಬೇಕು.
ನಮ್ಮೊಳಗಿನ ಅಂತಃಶಕ್ತಿಯನ್ನು ಜೀವಂತವಿರಿಸ ಬೇಕಾದವರು ನಾವೇ ಹೊರತು ಬೇರಾರೂ ಅಲ್ಲ. ಸುತ್ತಲೂ ಕಾಲೆಳೆಯುವ ಜನರಿರುವಾಗ, ಚುಚ್ಚುಮಾತುಗಳಿಂದ ಹೃದಯವನ್ನು ತಿವಿಯುವಾಗ, ಬೆನ್ನಹಿಂದೆ ಕುಹಕವಾಡುವ ಮಂದಿಯ ಮಧ್ಯೆ ಸದಾ ಧನಾತ್ಮಕವಾಗಿ ಚಿಂತಿಸುತ್ತಾ ಕ್ರಿಯಾಶೀಲರಾಗಿರುವುದು ದೊಡ್ಡ ಸವಾಲೇ ಸರಿ. ಹಾಗಾದರೆ ಟೀಕೆಗಳನ್ನು, ನಿಂದನೆಗಳನ್ನು ಮೀರಿ ನಿಂತು ಮನಸನ್ನು ಸದಾ ಧನಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕನ್ನು ಹೇಗೆ ನಮ್ಮದಾಗಿಸಿ ಕೊಳ್ಳುವುದು? ಜೀವನದ ಎ ವಿಜಯಗಳಿಗೂ, ಪರಾಜಯಗಳಿಗೂ ಮೂಲ ಕಾರಣ ಮನಸ್ಸು. ಈ ಮನಸನ್ನು ಸದಾ ಆರೋಗ್ಯ ವಾಗಿಟ್ಟುಕೊಳ್ಳುವುದೇ ಎ ಸಮಸ್ಯೆಗಳಿಗೆ ಪರಿಹಾರ.
ಭಾವನೆಗಳು ನಮ್ಮ ನಿಯಂತ್ರಣದಲ್ಲಿದ್ದರೆ ಎಲ್ಲವೂ ಶುಭಕರ. ಬದಲಿಗೆ ಭಾವನೆಗಳೇನಾದರೂ ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ, ಆಳಲು ಆರಂಭಿಸಿದರೆ ಎಲ್ಲವೂ ಅಶುಭವಾಗಿ ಬಿಡುತ್ತದೆ. ಈ ಇಮೋಷನ್ಸ್ ನಮ್ಮನ್ನಾಳದಂತೆ, ಯಾವಾಗಲೂ ಧನಾತ್ಮಕ ಚಿಂತನೆಗಳಿಂದ ತುಂಬಿರಬೇಕಾದರೆ ಋಣಾತ್ಮಕ ಚಿಂತನೆಯ ಜನರಿಂದ ದೂರವಿರಬೇಕು. ಏಕೆಂದರೆ ತಮ್ಮ ಸುತ್ತ ಮುತ್ತಲಿನ ಜನರ ಬಗ್ಗೆ ತಪ್ಪನ್ನೇ ಕಂಡು ಹಿಡಿಯುವ, ಸದಾ ದೂಷಿಸುತ್ತಲೇ ಇರುವ ಇಂಥವರು ಬಹಳ ಅಪಾಯಕಾರಿ. ಇವರು
ಎ ಕಡೆ ಇರುತ್ತಾರೆ. ‘ಋಣಾತ್ಮಕ ಜನರು ಸ್ವರ್ಗದಲ್ಲೂ ಕೊರತೆಯನ್ನು ಕಂಡು ಹಿಡಿಯುತ್ತಾರೆ’ ಎಂದು ಶಿವ್ ಖೇರ್ ತಮ್ಮ
You Can Win ಪುಸ್ತಕದಲ್ಲಿ ಹೇಳುತ್ತಾರೆ. ಋಣಾತ್ಮಕ ಜನರಿಗೆ ಅದೊಂದು ಚಟ.
ಅವರೊಂದಿಗಿನ ಸ್ನೇಹ ನಮ್ಮನ್ನೂ ಹಾಗೆಯೇ ಮಾಡಿಬಿಡಬಹುದು. ಅದಕ್ಕಾಗಿ ಅಂಥ ಜನರಿಂದ ಸದಾ ದೂರವಿರುವುದೇ ಒಳಿತು ಎಂದು ಹೇಳುತ್ತಾರೆ ಅವರು. ‘ಅವರಿಗೆ ಬೇಕಾಗಿ ನಾನು ಏನೆ ಮಾಡಿದೆ, ಎಷ್ಟೆ ತ್ಯಾಗ ಮಾಡಿದೆ, ಅಷ್ಟೊಂದು ಉಪಕಾರ ಮಾಡಿದೆ. ಆದರೆ ಅವರಿಗೆ ಅದರ ನೆನಪೇ ಇಲ್ಲ, ಒಂದು ಕೃತಜ್ಞತಾಭಾವ ಇಲ್ಲ. ಅವರು ಬಹಳ ಕೃತಜ್ಞರು’ ಎಂದು ಕೆಲವರು ಹೇಳುವುದನ್ನು ನಾವು ಕೇಳಿರುತ್ತೇವೆ. ಇಲ್ಲಿ ಗಮನಿಸಬೇಕಾದ ಒಂದು ವಿಚಾರವಿದೆ. ಹೀಗೆ ಹೇಳುವವರಿಗೆ ಅವರು ಮಾಡಿದ ತ್ಯಾಗವನ್ನು, ಉಪಕಾರವನ್ನು ಎತ್ತಾಡಬೇಕು, ಕೊಂಡಾಡಬೇಕು ಅವರನ್ನು ಪರಿಗಣಿಸಬೇಕು ಅನ್ನುವ ಹಂಬಲವಿದೆ.
ಇದನ್ನು “Craving for Acknowledgement’ ಎಂದು ಕರೆಯುತ್ತಾರೆ. ವ್ಯಕ್ತಿತ್ವ ವಿಕಸನ ತರಬೇತುದಾರ ಮಹತ್ರಿಯ ರಾ ಅವರು. ಯಾವಾಗ ನಮ್ಮಲ್ಲಿ ನಮಗೆ ಪ್ರೀತಿ ಇಲ್ಲವೋ, ನಂಬಿಕೆ ಇಲ್ಲವೋ ಆಗ ಈ ಹಂಬಲ ಎದ್ದು ಕಾಣುತ್ತದೆ. ಯಾವಾಗ ನಮ್ಮ ಮೇಲೆ ನಂಬಿಕೆ ಪ್ರೀತಿ ಇಲ್ಲವೋ ಆಗ ನಿರಾಶೆ, ಹತಾಶೆ, ವೈರಾಗ್ಯ, ಜಿಗುಪ್ಸೆ ಮೂಡುತ್ತದೆ. ಒಬ್ಬರು ಮಾಡಿದ ತ್ಯಾಗವನ್ನು ಉಪಕಾರವನ್ನು
ಜಗತ್ತು ಹೇಳಬೇಕೇ ಹೊರತು ಸ್ವಯಂ ಅವರೇ ಅಲ್ಲ. ಉದಾಹರಣೆಗೆ, ಮಹಾತ್ಮಗಾಂಧಿ ಎಂತಹ ತ್ಯಾಗಮಯಿ ಎಂದು ಜಗತ್ತು
ಕೊಂಡಾಡಬೇಕು. ತಾಯಿ ಮಕ್ಕಳಿಗಾಗಿ ಮಾಡಿದ ತ್ಯಾಗವನ್ನು ಮಕ್ಕಳು ಸ್ಮರಿಸಬೇಕೇ ಹೊರತು ಸ್ವತಃ ತಾಯಿಯಲ್ಲ. ಈ ರೀತಿ ನನ್ನ ತ್ಯಾಗವನ್ನು ಪರರು ಗುರುತಿಸಬೇಕು ಎಂದು ಹಾತೊರೆಯುವವರು ಖಂಡಿತ ಧನಾತ್ಮಕ ಚಿಂತನೆಗಳಿಂದ ಕೂಡಿರಲು ಸಾಧ್ಯವಿಲ್ಲ ಅನ್ನುತ್ತಾರೆ ಮಹತ್ರಿಯ. ಅಂಥವರಿಗೆ ತಮ್ಮ ಸುತ್ತಮುತ್ತ ಎಲ್ಲವೂ ತಪ್ಪಾಗೇ ಕಾಣುತ್ತದೆಯಂತೆ.
ಇದಕ್ಕೆ ಇರುವ ಒಂದೇ ಪರಿಹಾರ “just love yourself’. ಹಾಗೆಯೇ ಬೇರೆಯವರು ಹೊಗಳಲಿ ಬಿಡಲಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪರರಿಗೆ ಉಪಕಾರ ಮಾಡುವುದು ಜೀವನಪ್ರೀತಿಯಾಗಬೇಕು. ಯಾರಾದರೂ ನಮ್ಮ ಮನಸನ್ನು ನೋಯಿಸಿ ದರೆ ಅಥವಾ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಮಗೆ ಆಕಾಶವೇ ಕಳಚಿ ಬಿದ್ದಂತೆ ಹಾತಾಶೆಯಾಗುವುದು. ಕೆಲವೊಮ್ಮೆ ತುಂಬಾ ನಂಬಿದ್ದ ಸಂಬಂಧಗಳು, ಆತ್ಮೀಯ ಬಂಧಗಳು ನಮ್ಮ ನಂಬಿಕೆಯನ್ನೇ ಕೊಂದು ಬಿಡುತ್ತವೆ. ಹಿಂದೆ ಯಾವತ್ತೋ ಆತ್ಮೀಯರಿಂದಾದ ನಂಬಿಕೆ ದ್ರೋಹ ಅಥವಾ ಮೋಸ ಪದೇ ಪದೆ ಕಾಡುತ್ತಿರುತ್ತದೆ. ಆ ಆಘಾತದ, ಗಾಯದ ಗುರುತು ಹಸಿ ಯಾಗಿಯೇ ಉಳಿದು ಅದರ ನೆನಪು ನಿರಂತರ ನೋವು ಕೊಡುತ್ತದೆ. ಇಂತಹ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಅನುಭವವಾಗಿರುತ್ತದೆ. ಆದರೆ ಅದನ್ನೇ ಯೋಚನೆ ಮಾಡುತ್ತಾ ಕುಳಿತರೆ ನಮ್ಮ ಶಕ್ತಿ ಕುಂದಿ ಹೋಗುವುದು. ನಮ್ಮ ಸಮಾಧಾನ ನಾಶವಾಗಿ ನೆಮ್ಮದಿ ಇಲ್ಲದಂತಾಗುವುದು. ಮನಸಿಗಾದ ನೋವನ್ನು ಮರೆತು ಒಪ್ಪಿಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿದ್ದರೆ ಕ್ಷಮೆ
ಕೇಳಿ ಒಪ್ಪಿಕೊಳ್ಳುವುದು ಒಳ್ಳೆಯದು. ಆದರೆ ಯಾವುದೇ ಕಾರಣಕ್ಕೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ್ದಾದರೆ, ಎಷ್ಟು ಬಾರಿ ಹೇಳಿದರೂ ಕೇಳಿ ಅರ್ಥಮಾಡುವ ಸಹೃದಯತೆ ಇಲ್ಲದಿದ್ದರೆ, ನನ್ನ ಕುದುರೆಗೆ ಮೂರೇ ಕಾಲು ಎಂದು ವಾದಿಸುವವರಾಗಿದ್ದರೆ, ನನಗಿಂತ ಹೆಚ್ಚು ಯಾರಿಗೂ ತಿಳಿದಿಲ್ಲ ಅನ್ನುವ ಭಾವದವರಾಗಿದ್ದರೆ ಸಮಜಾಯಿಷಿ ಕೊಡಲು, ಅರ್ಥಮಾಡಿಸಲು ಹೋದರೆ ಯಾವುದೇ ಪ್ರಯೋಜನವಾಗದು.
ಆಗ ಏನು ಮಾಡಬೇಕೆಂದರೆ just ignore and go on. ಅಂತಹವರಿಂದ ಆದಷ್ಟು ದೂರವಿರುವುದೇ ಒಳಿತು. ಉದಾ: ಈಗ ಒಂದು ಖಾಲಿ ಡಬ್ಬ ಇದೆ ಎಂದಿಟ್ಟುಕೊಳ್ಳೋಣ. ಎಷ್ಟು ಹೊತ್ತು ಅದನ್ನು ಹಿಡಿದುಕೊಳ್ಳಬಹುದು. ಒಂದು ಗಂಟೆ? ಒಂದೈದು ಗಂಟೆ? ಒಂದು ದಿನ? ಹೆಚ್ಚು ಹೊತ್ತು ಹಿಡಿದುಕೊಂಡೇ ಇದ್ದರೆ ಕೈ ನೋಯಲು ಆರಂಭವಾಗುತ್ತದೆ.
ಎಷ್ಟು ಹೆಚ್ಚು ಹೊತ್ತು ಹೊತ್ತುಕೊಳ್ಳುತ್ತೇವೆಯೋ ಅಷ್ಟು ನೋವು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಅದನ್ನು ಎಸೆದುಬಿಟ್ಟರೆ ಕೈಗೂ ನೋವಿಲ್ಲ. ಮನಸೂ ನಿರಾಳ. ಹಾಗೆಯೇ ಕೆಲವು ಗೆಳೆತನ, ಬಂಧಗಳು ಕೂಡಾ. ಹೊತ್ತುಕೊಂಡಷ್ಟು, ಇಟ್ಟುಕೊಂಡಷ್ಟು ಮನಸಿಗೆ ನೋವು ಎಂದಾದರೆ ಅದನ್ನು ಬಿಟ್ಟುಬಿಡುತ್ತಾ ಮನಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದೇ ಲೇಸು. ಅದರಿಂದ ವಿನಾ ಕಾರಣ ಸಿಟ್ಟು, ಅಸೂಯೆ, ಅಸಹನೆ, ರೋಷ, ಪೈಪೋಟಿ, ಸ್ಪರ್ಧೆ ಮೊದಲಾದ ನೆಗೆಟಿವ್ ಚಿಂತೆಗಳು ನಮ್ಮನ್ನು ಬಾಧಿಸ ಲಾರವು. ಒಂದು ವೇಳೆ ಅಂತಹ ಮನಸಿನ ಸ್ವಾಸ್ಥ್ಯವನ್ನು ಕೆಡಿಸುವ ಗೆಳೆತನವನ್ನು, ಬಂಧಗಳನ್ನು ಬಲಾತ್ಕಾರವಾಗಿ ಉಳಿಸಿ ಕೊಳ್ಳುವ ಪ್ರಯತ್ನ ಮಾಡಿದರೆ ಇಂತಹ ಋಣಾತ್ಮಕ ಚಿಂತನೆಗಳು ದಾಳಿ ಮಾಡಿ ನಮ್ಮ ಮಾನಸಿಕ ನೆಮ್ಮದಿ ಹೊರಟು ಹೋಗು ತ್ತದೆ. ಈ ಬದುಕು ನಮ್ಮ ನಕಾರಾತ್ಮಕ ಭಾವನೆಗಳ ಹಂಗಿಗೆ ಒಳಗಾಗಿಲ್ಲ. ಅವುಗಳಿಂದ ಬದುಕಲ್ಲಿ ಯಾವುದೇ ಬದಲಾವಣೆ ಆಗಲಾರದು.
ಇನ್ನು ಎಲ್ಲರೂ ನಮ್ಮೊಂದಿಗೆ ಸಂತೋಷವಾಗಿರಬೇಕು, ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎಂದು ಬಯಸುವುದು ರ್ಖತನ
ಹಾಗೂ ಅದು ಅಸಾಧ್ಯ, ಅಪ್ರಾಯೋಗಿಕ ಕೂಡಾ. ಜನರು ಯಾವಾಗಲೂ ನಮ್ಮ ತಪ್ಪುಗಳ ಕಡೆಗೆ ಗಮನ ಕೊಡುತ್ತಾರೆ. ದೌರ್ಬಲ್ಯಗಳನ್ನೇ ಎತ್ತಿ ತೋರಿಸಿ ಆಡಿಕೊಳ್ಳುತ್ತಾರೆ. Don’t worry. ಜನರು ಇರೋದೇ ಹಾಗೆ. ಜನರು ಅವರಿಗೇನು ಗೊತ್ತು ಅದರ
ಆಧಾರದಲ್ಲಿ ನಮ್ಮನ್ನು ವಿಮರ್ಶಿಸುತ್ತಾರೆ. ಅವರ ಜ್ಞಾನದ ಆಧಾರದ ಮೇಲೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಈಗಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಂತೂ ಎಲ್ಲರೂ ಸ್ವಯಂ ಘೋಷಿತ ವಿದ್ವಾಂಸರೂ, ಪಂಡಿತರೂ ಆಗಿ ಬಿಟ್ಟಿದ್ದಾರೆ. ಜೀವನ ಅನ್ನುವುದು ಬರೀ ತೋರಿಕೆಗೆ ಪ್ರದರ್ಶನಕ್ಕೆ ಇಟ್ಟ ವಸ್ತುವಿನಂತಾಗಿದೆ. ಏನು ಅಡುಗೆ ಮಾಡಿದರೂ ಸ್ಟೇಟಸ್, ಇನ್ನೊಬ್ಬ ರಿಗೆ ಚುಚ್ಚಿ ಒಂದಷ್ಟು ಸ್ಟೇಟಸ್…ಹೀಗೆ ಈ ಸ್ಟೇಟಸ್ ಯುಗದಲ್ಲಿ ಬದುಕು ಎಷ್ಟೊಂದು ಕೃತಕ ಅನಿಸುತ್ತದೆ. ಹಾಗೆಯೇ ಏನು ಎತ್ತ ನೋಡದೆ, ಯೋಚನಾಶಕ್ತಿಯನ್ನು ಅಡವಿಟ್ಟವರಂತೆ ಬಂದ ಸಂದೇಶಗಳನ್ನು ಫಾರ್ವರ್ಡ್ ಮಾಡಿಬಿಡುವುದು. ಹಾಗೂ ಅದೆಲ್ಲವೂ ಸತ್ಯ ಅಂದುಕೊಂಡು ಗಾಸಿಪ್ ಮಾಡುವುದು ಸಾಮಾನ್ಯವಾಗಿದೆ. ಉದಾಹರಣೆಗೆ ದಿನಾ ಬೆಳಿಗ್ಗೆ ಎದ್ದ ಕೂಡಲೇ ೧೦ ನಿಮಿಷ ತಲೆಗೆ ಹೊಡ್ಕೊಂಡ್ರೆ ಚಿಂತೆಗಳೆ ಮಾಯವಾಗಿ ನೆಮ್ಮದಿ ಸಿಗುವುದು ಅಂತ ನಾಳೆ ಬೆಳಿಗ್ಗೆ ಒಂದು ವಾಟ್ಸಪ್‌ನಲ್ಲಿ ಮೆಸೇಜ್
ಬಂತು ಎಂದು ಇಟ್ಟುಕೊಳ್ಳೋಣ.
ಜೊತೆಗೆ ಒಂದಷ್ಟು ಸತ್ಯದ ತಲೆಗೆ ಹೊಡೆದಂತೆ ಅದನ್ನು ಪುಷ್ಟೀಕರಿಸುವ ವಿವರಣೆ ಬೇರೆ. ಸರಿ… ಹಿಂದೆಮುಂದೆ ನೋಡದೆ ಎಲ್ಲರಿಗೂ ಕಳಿಸುವುದೇ…ಅದರಲ್ಲಿ ಹೇಳಿದಂತೆ ಮಾಡುವುದೇ. ಆಯಿತು. ಒಂದು ವಾರ ಕಳೆದ ಬಳಿಕ… ಆಹಾ! ಎಷ್ಟು ಆರಾಮ ಈಗ. ಅದರಲ್ಲಿ ಹೇಳಿದ್ದು ಎಷ್ಟು ನಿಜ ಆಯ್ತು ನನಗೆ ಮೊದಲಿನ ಹಾಗೆ ತಲೆ ನೋವು ಬರ್ತಿಲ್ಲ. ಸಿಟ್ಟಂತೂ ಮಾಯವಾಗಿದೆ ಅನ್ನುವ ಸ್ವಯಂ ಸಮರ್ಥನೆ ಬೇರೆ. ಯಾರು ಏನು ಮಾಡುತ್ತಾರೋ ಮಾಡಲಿ, ಯಾರಿಗೆ ಯಾರು ಚುಚ್ಚಿ ಬರೀತಾರೋ ಬರೆಯಲಿ, ಯಾರ ಹೊಟ್ಟೆ ಉರಿಸಲು ಚಿತ್ರ ವಿಚಿತ್ರವಾದ ಫೋಟೋಗಳನ್ನು ಸ್ಟೇಟಸ್ ಹಾಕ್ತಾರೋ ಹಾಕಿಕೊಳ್ಳಲಿ. Don’t flow with the flow. ಎಲ್ಲರೂ ಮಾಡುತ್ತಾರೆ ಅಂತ ನಾವೂ ಮಾಡದೆ be unique and different.
ಪ್ರತಿದಿನ ಸಕಾರಾತ್ಮಕ ವಿಚಾರಗಳನ್ನು ಹೆಚ್ಚು ಮಾತನಾಡಿ, ನಕಾರಾತ್ಮಕ ವಿಚಾರಗಳ ಕುರಿತು ಕಡಿಮೆ ಮಾತನಾಡಿದರೆ ಖಂಡಿತ
ನಮ್ಮೊಳಗೆ ನಮಗರಿವಿಲ್ಲದಂತೆ ಧನಾತ್ಮಕ ಶಕ್ತಿ ಸಜೀವಗೊಳ್ಳುತ್ತದೆ. ಈಗ ಮನೆಯಲ್ಲಿ ಅಮ್ಮನೋ, ಪತ್ನಿಯೋ ಒಳ್ಳೆಯ ರುಚಿ ಯಾದ ಅಡುಗೆ ಮಾಡುತ್ತಾರೆ ಅಂತ ಇಟ್ಟುಕೊಳ್ಳೋಣ. ಓಹ್…ಅದೇನು ಮಹಾ.. ನಮ್ಮದೇ ಮನೆಯಲ್ಲಿ ನನ್ನ ಹೆಂಡತಿ, ನನ್ನ ಅಮ್ಮ ಮಾಡಿದ ಅಡುಗೆ ತಾನೇ? ಅವರಿರೋದೇ ಅಡುಗೆ ಮಾಡಲು ಮತ್ತು ಅದು ಅವರ ಕರ್ತವ್ಯ. ಅದನ್ನು ಹೊಗಳುವ ಅಗತ್ಯವೇನಿದೆ ಅನ್ನುವ ಅದೆಷ್ಟೋ ಗೆಳೆಯರಿದ್ದಾರೆ. ಹಾಗಾದರೆ ಪದಾರ್ಥಕ್ಕೆ ಉಪ್ಪು ಜಾಸ್ತಿ ಆದರೆ ನೀವು ಹೇಳುವುದಿಲ್ಲವೇ? ಅಯ್ಯೋ! ಅದು ಹೇಳದಿದ್ದರೆ ಹೇಗೆ? ಕಾಫಿಗೆ ಸಕ್ಕರೆ ಹಾಕದೇ ಇದ್ರೆ ಹೇಳುತ್ತೀರಾ ಇಲ್ವಾ? ಕೆಲಸದಲ್ಲಿ ಗಮನ ಇರಬೇಕು ತಾನೇ? ಹಾಗಾಗಿ ಹೇಳಲೇಬೇಕು.
ಚಟ್ನಿಗೆ ಖಾರ ಜಾಸ್ತಿ ಆದರೆ ಸುಮ್ಮನೆ ತಿಂತೀರಾ? ಖಾರದಿಂದ ಬಾಯಿಗೆ ಇಡಲೂ ಆಗುವುದಿಲ್ಲ. ಹೇಳದೆ ಹೇಗಿರುವುದು… ಅಲ್ವೇ? ಸರಿ ಹಾಗಾದರೆ…ತಪ್ಪಾಗುವಾಗ ಟೀಕಿಸುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುವುದಾದರೆ, ಸರಿಯಾದಾಗ ಪ್ರಶಂಸೆ ಮಾಡುವುದು ನಮ್ಮ ಹಕ್ಕಾಗಬೇಕಲ್ಲವೇ? ಪ್ರಯತ್ನ ಪಟ್ಟು ನೋಡೋಣ. ಬರೇ ಅಡುಗೆಯ ವಿಚಾರದಲ್ಲಿ ಮಾತ್ರವಲ್ಲ ಯಾವುದೇ ವಿಚಾರ ಆಗಿರಲಿ, ಸರಿಯಾದಾಗ, ಮೆಚ್ಚುಗೆ ಯಾದಾಗ ಅದನ್ನು ಪ್ರಶಂಸಿಸುವುದರಲ್ಲಿ ಯಾವ ಅವಮಾನವೂ ಇಲ್ಲ.
ಹಾಗೆಂದು ತಪ್ಪನ್ನು ಸರಿ ಎಂದೂ, ಕಳಪೆಯನ್ನು ಉನ್ನತ ಎಂದೂ ಸುಮ್ಮನೆ ಹೊಗಳಿದರೆ ಅಲ್ಲಿ ಸಾತ್ವಿಕ ಸಮಾಜದ ಗುಣಮಟ್ಟ ಕುಸಿಯುವ ಅಪಾಯವಿದೆ. ಎ ಸಮಯದಲ್ಲೂ, ಎಲ್ಲರನ್ನೂ ಮೆಚ್ಚಿಸಲು, ತೃಪ್ತಿ ಪಡಿಸಲು ಸಾಧ್ಯವಿಲ್ಲ. ಆದರೆ ಮೆಚ್ಚಿಕೊಳ್ಳು ವುದು ಅಧಿಕವಾಗಿ, ಟೀಕಿಸುವುದು ಕಡಿಮೆಯಾದಾಗ ತನ್ನಿಂತಾನೇ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ. ಇನ್ನು ಕೆಲವರನ್ನು ಕಂಡಿರುತ್ತೇವೆ… ಏನಾದರೂ ಸಾಧಿಸಬೇಕೆಂಬ ತುಡಿತ. ಆದರೆ ಏನ್ ಮಾಡೋದು…ವಯಸ್ಸಾಗೋಯ್ತು…ಅದು
ಹೇಗೆ ಜೀವನದ ಇಷ್ಟು ಸಮಯ ಕಳೆದು ಹೋಯ್ತೋ ಗೊತ್ತೇ ಆಗ್ಲಿಲ್ಲ.
ಏನೂ ಸಾಧನೆ ಮಾಡಲೇ ಇಲ್ಲ. ಇನ್ನೇನು ಮಾಡೋದು ಎ ಮುಗಿಯಿತು ಅನ್ನುವ ಹತಾಶ ಭಾವನೆ. ಇದು ಮಹಿಳೆಯರಲ್ಲಿ
ಹೆಚ್ಚಾಗಿರುತ್ತದೆ ಅಂದರೆ ತಪ್ಪಾಗದು. ಏಕೆಂದರೆ ಮದುವೆಯಾದರೆ ಮುಗಿಯಿತು, ಮಕ್ಕಳಾದ ಮೇಲಂತೂ ಮುಗಿದೇ ಹೋಯ್ತು
ಅನ್ನುವವರು ಬಹಳಷ್ಟು ಮಂದಿ ಇದ್ದಾರೆ. ಸಾಧನೆಗೂ ವಯಸ್ಸಿಗೂ ಬಂಧವೇ ಇಲ್ಲ ಅನ್ನುವ ಸವಿಸತ್ಯ ಇವರಿಗೆ ಗೊತ್ತೇ ಇಲ್ಲ. ಪ್ರತಿ ಹೆಜ್ಜೆಯಲ್ಲೂ ಸೋಲು, ಹತಾಶೆ, ನಿರಾಶೆ, ಸಮಸ್ಯೆ ಕಾಡಿರಬಹುದು. ಆದರೆ ಹೊಸತನ್ನು ಆರಂಭಿಸಲು ವಯಸ್ಸಿನ ಹಂಗಿಲ್ಲ. ಮನಸ್ಸು ದೃಢಸಂಕಲ್ಪ ಮಾಡಿದ್ದರೆ ಯಾವ ಸೋಲುಗಳೂ ನಮ್ಮನ್ನು ತಡೆಯಲಾರವು.
ಅರಿಯನ್ನಾ ಹಫಿಂಗ್ಟನ್ (Arianna Huffington) ತನ್ನ 51ನೆಯ ವಯಸ್ಸಿನಲ್ಲಿ ತನ್ನದೇ ವಾರ್ತಾ ಪ್ರಕಾಶನ ಆರಂಭಿಸಿ ಮನೆ
ಮಾತಾದರು. ಜೂಲಿಯಾ ಚೈಲ್ಡ(Julia Child) ತನ್ನ 50ನೆಯ ವಯಸಿನಲ್ಲಿ ತನ್ನದೇ ಆದ ಅಡುಗೆ ಚಾನಲ್ ಆರಂಭಿಸಿ ಜಗ ದ್ವಿಖ್ಯಾತಿಯಾದರು. ವೆರಾ ವ್ಯಾಂಗ್ (Vera Wang) ತನ್ನ 40ನೆಯ ವಯಸ್ಸಿನಲ್ಲಿ -ಶನ್ ಇಂಡಸ್ಟ್ರೀ ಆರಂಭಿಸಿ ಈಗ ಜಗತ್ತಿನ ಪ್ರಸಿದ್ದ ವಿಮೆನ್ ವೇರ್ ಡಿಸೈನರ್. ಕರ್ನಲ್ ಸಾಂಡರ್ಸ್ (Colonel Sanders) KFC ಆರಂಭಿಸಿದ್ದು ತನ್ನ 65ನೆಯ ವಯಸ್ಸಿನಲ್ಲಿ. ಜಾರ್ಜ್ ಬರ್ನಾರ್ಡ್ ಷಾ ತನ್ನ 90ನೆಯ ವಯಸ್ಸಿನಲ್ಲಿ ಮರ ಹತ್ತಿ ಕೈ ಮುರಿದುಕೊಂಡರಂತೆ.
90ರಲ್ಲೂ ಅವರ ಜೀವನೋತ್ಸಾಹ ಹಾಗೂ ಹೊಸತನ್ನು ಹುಡುಕುವ ಯತ್ನ ನಿಂತಿರಲಿಲ್ಲ. ಇಂತಹ ಅದೆಷ್ಟೋ ಸಾಧಕರ ನಿದರ್ಶನಗಳು ನಮ್ಮ ಮುಂದಿವೆ. ಸ್ಪ್ರಿಂಗ್‌ಅನ್ನು ಎಷ್ಟು ಗಟ್ಟಿಯಾಗಿ ಅದುಮಿ ಹಿಡಿಯುತ್ತೇವೆಯೋ ಅಷ್ಟು ವೇಗವಾಗಿ ಅದು ಪುಟಿದೇಳುತ್ತದೆ. ಹಾಗೆಯೇ ಜೀವನವೆಂಬ ಸ್ಪ್ರಿಂಗ್ ಕೂಡಾ. ಸೋಲು, ವೈಫಲ್ಯ, ನೋವುಗಳಿಂದ ಕುಗ್ಗಿ ಹೋಗಿದ್ದರೆ ನೆನಪಿಟ್ಟು ಕೊಳ್ಳಿ ನೀವು ಮನಸು ಮಾಡಿದರೆ ಒಂದಲ್ಲ ಒಂದು ದಿನ ಅದು ಶಕ್ತಿಯುತವಾಗಿ ಬೌನ್ಸ್ ಬ್ಯಾಕ್ ಆಗಲೇಬೇಕು. ನಾಳೆಯ ಸೂರ್ಯೋದಯ ನನಗಾಗೇ ಕಾದಿದೆ ಎಂಬ ಆತ್ಮಸ್ಥೆ ರ್ಯ ಪವಾಡವನ್ನೇ ಸೃಷ್ಟಿಸಬಹುದು. ಎಲ್ಲರ ಬದುಕಲ್ಲೂ ಅಂತಹ ಪವಾಡ ನಡೆದು ಸಾಧನೆಯ ಹಾದಿಯಲ್ಲಿ ಸಾಧಕರಾಗಿ ನೆಮ್ಮದಿ ತುಂಬಿರಲಿ.