Sunday, 24th November 2024

ಆವನು ಶಾಲೆಗೆ ಹೋಗದೇ ಇರಲು ಎರಡು ಕಾರಣಗಳು

ನಮ್ಮ ಸುತ್ತಲಿನ ಜನರು ಮತ್ತು ಮನೆಯವರು ಏನು ಹೇಳುತ್ತಾಾರೋ ಅದು ನಿಮ್ಮ ಜೀವನದ ಮೇಲೆ ಮಹತ್ತು ಎನಿಸುವ ಪರಿಣಾಮ ಬೀರಬಹುದು. ಆದ್ದರಿಂದ ಇತರರು ನೀಡಿದ ಸಲಹೆಗಳನ್ನು ನಾಲ್ಕಾಾರು ಬಾರಿ ಯೋಚಿಸಿ ಸ್ವೀಕರಿಸಬೇಕು.

ಕಪ್ಪೆೆಗಳ ಒಂದು ಗುಂಪು ಕಾಡಿನಲ್ಲಿ ಹೋಗುತ್ತಾಾ ಇತ್ತು. ಆಕಸ್ಮಿಿಕವಾಗಿ ಎರಡು ಕಪ್ಪೆೆಗಳು ಆ ಕಾಡಿನಲ್ಲಿದ್ದ ಬಾವಿಯೊಳಗೆ ಬಿದ್ದವು. ಗುಂಪಿನ ಇತರ ಕಪ್ಪೆೆಗಳು ಬಾವಿಯ ಸುತ್ತಲೂ ಕಿಕ್ಕಿಿರಿದು ನೆರೆದು, ಆ ಬಾವಿಯ ಆಳವನ್ನು ಕಂಡು ಹೆದರಿದವು. ಬಾವಿಗೆ ಬಿದ್ದ ತಮ್ಮ ಎರಡು ಗೆಳೆಯರ ಕಥೆ ಮುಗಿಯಿತು, ಅವರಿಬ್ಬರಿಗೂ ಹೊರಬರಲು ಆಗುವುದಿಲ್ಲ ಎಂದು ಮಾತಾಡಿಕೊಂಡವು. ಆದರೆ ಬಾವಿಯೊಳಗೆ ಬಿದ್ದಿದ್ದ ಆ ಎರಡೂ ಕಪ್ಪೆೆಗಳು ಧೃತಿಗೆಡಲಿಲ್ಲ. ಬಾವಿಯ ಮೇಲಿದ್ದ ತಮ್ಮ ಗೆಳೆಯರು ನಿರಾಶರಾಗಿದ್ದರೂ, ಅದಕ್ಕೆೆ ಕಿವಿಗೊಡದೇ, ಬಾವಿಯಿಂದ ನೆಗೆದು ಮೇಲೆ ಬರಲು ಪ್ರಯತ್ನಿಿಸಿದವು. ಒಂದೇ ಸಮನೆ ನೆಗೆಯುತ್ತಿಿದ್ದರೂ, ಎತ್ತರ ಇದ್ದುದರಿಂದಾಗಿ, ಹೊರಬರಲು ಕಷ್ಟ ಎನಿಸುತ್ತಿಿತ್ತು. ನೆಗೆದು ನೆಗೆದು ಸುಸ್ತಾಾದವು.

ಇವರ ವಿಫಲ ಪ್ರಯತ್ನವನ್ನು ಮೇಲೆ ನಿಂತು ನೋಡುತ್ತಿಿದ್ದ ಇತರ ಕಪ್ಪೆೆಗಳು ತೀರಾ ನಿರಾಶರಾದವು. ಪ್ರಯತ್ನ ಮಾಡುವುದರಲ್ಲಿ ಏನು ಪ್ರಯೋಜನವಿಲ್ಲ, ಕೈ ಚೆಲ್ಲುವುದೇ ಒಳ್ಳೆೆಯದು, ನೋವು ತಿನ್ನುವುದಾದರೂ ತಪ್ಪುುತ್ತದೆ ಎಂದು ಕೂಗಿ ಹೇಳತೊಡಗಿದವು. ತಮ್ಮ ಆ ಇಬ್ಬರು ಗೆಳೆಯರು ಎಷ್ಟು ನೆಗೆದರೂ ಹೊರಬರುವುದು ಕಷ್ಟ ಎಂದೇ ಎಲ್ಲ ಕಪ್ಪೆೆಗಳ ಒಕ್ಕೊೊರಲಿನ ಅಭಿಪ್ರಾಾಯ ವಾಗಿತ್ತು.

ಕೊನೆಗೆ ಒಂದು ಕಪ್ಪೆೆಯು ತನ್ನ ಗೆಳೆಯರು ಕೇಳಿ ತನ್ನ ಪ್ರಯತ್ನವನ್ನು ನಿಲ್ಲಿಸಿತು. ಎಂತಿದ್ದರೂ ಸಾಯುವುದು, ಆದ್ದರಿಂದ ಕಡಿಮೆ ನೋವಿನಿಂದ ಸಾಯೋಣ ಎಂದು ಸುಮ್ಮನಾಯಿತು. ಆ ಕ್ಷಣದಲ್ಲಿ ಇನ್ನಷ್ಟು ಕೆಳಗೆ ಬಿದ್ದು ಸತ್ತೇ ಹೋಯಿತು.

ಆದರೆ ಇನ್ನೊೊಂದು ಕಪ್ಪೆೆ ಸುಮ್ಮನಾಗಲಿಲ್ಲ. ಇನ್ನಷ್ಟು ಉತ್ಸಾಾಹದಿಂದ ಅಳಿದುಳಿದ ಶಕ್ತಿಿಯನ್ನು ಕುದುರಿಸಿಕೊಂಡು, ಮತ್ತೆೆ ಮತ್ತೆೆ ಮೇಲೆ ನೆಗೆಯತೊಡಗಿತು. ಮೇಲಿದ್ದ ಕಪ್ಪೆೆಗಳು ಎಷ್ಟೇ ಕೂಗಿದರೂ, ಇನ್ನು ಪ್ರಯತ್ನ ಮಾಡುವುದರಿಂದ ಪ್ರಯೋಜನ ಇಲ್ಲ ಎಂದರೂ, ಆ ಕಪ್ಪೆೆ ಶಕ್ತಿಿಮೀರಿ ನೆಗೆದು, ನೆಗೆದು ಕೊನೆಗೂ ಹೊರಬಂದಿತು.
ಗೆಳೆಯರಿಗೆಲ್ಲ ಬಹಳ ಖುಷಿಯಾಯಿತು. ಬಾವಿಯಲ್ಲಿ ಸಿಕ್ಕಿಿಬಿದ್ದರೂ, ಸ್ವಪ್ರಯತ್ನದಿಂದ ನೆಗೆದು ಹೊರಬಂದ ತಮ್ಮ ಸ್ನೇಹಿತನನ್ನು ಅಭಿನಂದಿಸಿದವು.

ಕೊನೆಗೆ ಒಂದು ಕಪ್ಪೆೆ ಕೇಳಿತು ‘ನೆಗೆದು ಹೊರಬರುವುದು ಕಷ್ಟ ಎಂದು ನಾವು ಹೇಳಿದ್ದು ನಿನಗೆ ಕೇಳಿಸಲಿಲ್ಲವೇ?’
ಬಾವಿಯಿಂದ ನೆಗೆದು ಹೊರಬಂದಿದ್ದ ಕಪ್ಪೆೆಗೆ, ಸಂತೋಷದಲ್ಲಿ ಆ ಪ್ರಶ್ನೆೆ ಕೇಳಿಸಲಿಲ್ಲ. ಇತರ ಕಪ್ಪೆೆಗಳು ಪುನಃ ಮತ್ತೊೊಮ್ಮೆೆ ಕೇಳಿದವು ‘ನಿನ್ನ ಪ್ರಯತ್ನ ವಿಫಲವಾಗುತ್ತದೆ ಮತ್ತು ಸುಮ್ಮನಾದರೆ ಒಳ್ಳೆೆಯದು, ನೋವು ತಿನ್ನುವುದಾದರೂ ಕಡಿಮೆ ಆಗುತ್ತದೆ ಎಂದು ನಾವು ಹೇಳಿದ್ದೆವಲ್ಲಾ? ನೀನ್ಯಾಾಕೆ ಶಕ್ತಿಿ ಮೀರಿ ನೆಗೆದೆ?’
ಆಗ ಬದುಕಿ ಬಂದ ಕಪ್ಪೆೆ, ‘ನನಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ನೀವು ಎಲ್ಲರೂ ಒಕ್ಕೊೊರಲಿನಿಂದ ಕೂಗುವುದನ್ನು ನೋಡಿ ನನಗೆ ಪ್ರೋೋತ್ಸಾಾಹ ನೀಡುತ್ತಿಿದ್ದೀರಿ ಎಂದುಕೊಂಡು ಇದ್ದಬದ್ದ ಶಕ್ತಿಿಯನ್ನೆೆಲ್ಲಾ ಹಾಕಿ ಮೇಲೆ ನೆಗೆದು ಹೊರಬಂದೆ!!’ ಎಂದು ಹೇಳಿ ನಕ್ಕಿಿತು.

ನೀತಿ: ನಮ್ಮ ಸುತ್ತಲಿನ ಜನರು ಮತ್ತು ಮನೆಯವರು ಏನು ಹೇಳುತ್ತಾಾರೋ ಅದು ನಿಮ್ಮ ಜೀವನದ ಮೇಲೆ ಮಹತ್ತು ಎನಿಸುವ ಪರಿಣಾಮ ಬೀರಬಹುದು. ಆದ್ದರಿಂದ ಇತರರು ನೀಡಿದ ನಾಲ್ಕಾಾರು ಬಾರಿ ಯೋಚಿಸಿ ಸ್ವೀಕರಿಸಬೇಕು.
***
ಒಂದೂರಿನಲ್ಲಿ ಒಬ್ಬ ಸೋಮಾರಿಯಿದ್ದ. ಇತರರಿಗೆ ಸಹಾಯ ಮಾಡುವುದು ದೂರದ ಮಾತು, ತನ್ನ ಕೆಲಸಗಳನ್ನೇ ಮಾಡಿಕೊಳ್ಳುವುದು ಅವನಿಗೆ ಕಷ್ಟವಾಗಿತ್ತು. ಸುಲಭವಾಗಿ ಎಲ್ಲಿ ಏನು ತಿನ್ನಲು ಸಿಗುವುದೋ ಅಲ್ಲಿ ಈತ ತಪ್ಪದೇ ಹಾಜರಾಗುತ್ತಿಿದ್ದ. ಆ ದಿನ ಅವನಿಗೆ ಜೋರು ಹಸಿವು. ತಿನ್ನಲು ಏನೂ ಇಲ್ಲ. ಆಹಾರ ಹುಡುಕಾಡುತ್ತಾಾ, ನಾನಾ ಹಣ್ಣುಗಳಿಂದ ಸಮೃದ್ಧಿಿಯಾಗಿದ್ದ ತೋಟವೊಂದನ್ನು ನೋಡಿದ. ಯಾರಿಗೂ ಕಾಣದಂತೆ ತೋಟಕ್ಕೆೆ ನುಗ್ಗಿಿ ಸಿಕ್ಕ ಹಣ್ಣುಗಳನ್ನೆೆಲ್ಲಾಾ ತಿನ್ನುತ್ತಿಿದ್ದ. ‘ಯಾವನೋ ಅವ್ನು ತೋಟಕ್ಕೆೆ ನುಗ್ಗಿಿರೋನು’ ಎಂಬ ಧ್ವನಿ ಕೇಳಿತು. ನಾಲ್ಕು ಹಣ್ಣಿಿಗಾಗಿ ಅವನಿಂದ ಒದೆ ತಿನ್ನಬೇಕಾದೀತು ಎಂದು ಯೋಚಿಸಿ, ಹಿಂದೆ ಮುಂದೆ ನೋಡದೇ ಸುಮ್ಮನೆ ಓಡಿದ. ಓಡುತ್ತಾಾ ಓಡುತ್ತಾಾ ಅವನು ಕಾಡಿನೊಳಗೆ ಬಂದ ಎಂಬುದು ಅವನಿಗೆ ಗೊತ್ತೇ ಆಗಲಿಲ್ಲ. ಕಾಡಿನಲ್ಲಿ ನಡೆಯುತ್ತಾಾ ನರಿಯೊಂದು ಕಣ್ಣಿಿಗೆ ಬಿತ್ತು. ನರಿಗೆ ಎರಡೇ ಕಾಲಿತ್ತು. ಅದನ್ನು ನೋಡುತ್ತಾಾ ‘ಇಂಥ ಸ್ಥಿಿತಿಯಲ್ಲಿರುವವರು ಬದುಕಿರಲೇಬಾರದು, ಆಹಾರಕ್ಕಾಾಗಿ, ತನ್ನ ರಕ್ಷಣೆಗಾಗಿ ಈ ನರಿ ಏನು ಮಾಡಿಕೊಳ್ಳುತ್ತದೆ’ ಎಂದು ಅಷ್ಟರಲ್ಲೇ ಸಿಂಹ ಗರ್ಜನೆ ಕೇಳಿತು. ವೇಗವಾಗಿ ಮರ ಏರಿ ಕುಳಿತ. ಸಿಂಹದ ಬಾಯಲ್ಲಿ ಮಾಂಸದ ತುಂಡೊಂದಿತ್ತು. ‘ಸಿಂಹ ಈಗಿನ್ನೂ ಭರ್ಜರಿ ಬೇಟೆಯಾಡಿದೆ’ ಎಂದುಕೊಂಡ. ಬದಿಯಲ್ಲಿದ್ದ ಎಲ್ಲ ಪ್ರಾಾಣಿಗಳೂ ಭಯದಿಂದ ಓಡಿ ಹೋದವು. ಆದರೆ ಈ ನರಿ ಮಾತ್ರ ಕೂತಲ್ಲೇ ಕೂತಿತ್ತು.

ನರಿ ಸ್ಥಿಿತಿ ನೆನೆದು ಇವನಿಗೆ ಪಾಪ ಎನಿಸಿತು. ಆದರೆ ಅಲ್ಲಿ ಆಗಿದ್ದೇ ಬೇರೆ. ಸಿಂಹ ನರಿಯ ಹತ್ತಿಿರ ಬಂದು ತನ್ನ ಬಾಯಲ್ಲಿದ್ದ ಮಾಂಸದ ತುಂಡನ್ನು ನರಿಯ ಮುಂದೆ ಹೊರಟು ಹೋಯಿತು. ಇದರಿಂದ ಆತ ಒಂದು ಪಾಠ ಕಲಿತ. ದೇವರು ಭೂಮಿ ಮೇಲಿರುವ ಪ್ರತಿಯೊಬ್ಬರ ಜೀವನಕ್ಕೂ ಏನಾದರೂ ಒಂದು ಯೋಜನೆ ಹಾಕಿಯೇ ಇರುತ್ತಾಾನೆ. ನನ್ನ ವಿಷಯದಲ್ಲೂ ಹೀಗೆ ಆಗಲಿದೆ. ನಾನು ಆಹಾರಕ್ಕಾಾಗಿ ಕಾದರೆ ಸಾಕು. ಆಹಾರವೇ ನನ್ನನ್ನು ಹುಡುಕಿಕೊಂಡು ಬರಲಿದೆ ಎಂಬ ನಿರ್ಧಾರಕ್ಕೆೆ ಬಂದ.

ಅಂತೆಯೇ ಊಟಕ್ಕಾಾಗಿ ಊರ ಅರಳಿಕಟ್ಟೆೆಯ ಮುಂದೆ ಕಾಯುತ್ತಾಾ ಕೂತ. ಎರಡು ದಿನಗಳಾದರೂ ಯಾರೂ ಅವನನ್ನು ‘ಯಾಕಿಲ್ಲಿ ಕುಳಿತಿದ್ದೀಯ’ ಎಂದೂ ಕೇಳಲಿಲ್ಲ. ಹಸಿವು ತಡೆಯಲಾರದೇ ಹೊರಟ. ಮಧ್ಯದಲ್ಲಿ ಸನ್ಯಾಾಸಿಯೊಬ್ಬರು ಸಿಕ್ಕರು. ಅವರಲ್ಲಿ ‘ದೇವರು ತನಗೆ ಮೋಸ ಮಾಡಿದ್ದಾಾನೆ. ಸುಮ್ಮನೆ ಕೂತರೂ ಊಟ ಸಿಗುತ್ತದೆ ಎನ್ನುವಂತೆ ನರಿಯ ಮೂಲಕ ನನಗೆ ಉತ್ತರಿಸಿ ಈಗ ಹೀಗೆ ಮಾಡುತ್ತಿಿದ್ದಾಾನೆ’ ಎಂದು ಬೇಸರಿಸಿಕೊಂಡ. ಆಗ ಸ್ವಾಾಮೀಜಿ ಹೇಳಿದ, ‘ದೇವರು ಯಾರಿಗೂ ಮೋಸ ಮಾಡಿಲ್ಲ. ನೀನು ಕಲಿಯಬೇಕಾಗಿದ್ದು ನರಿಯನ್ನು ನೋಡಿ ಅಲ್ಲ, ಸಿಂಹವನ್ನು ನೋಡಿ’ ಎಂದರು. ಅಂಗವಿಕಲನಾಗಿ ಅಶಕ್ತನಾದ ನರಿಗೆ ಸಿಂಹ ಸಹಾಯ ಮಾಡಿತು. ಆದರೆ ನಿನಗೇನಾಗಿದೆ. ದುಡಿದು ತಿಂದು, ಇನ್ನೊೊಬ್ಬರಿಗೂ ನೀಡುವ ಸಾಮರ್ಥ್ಯ ನಿನ್ನಲ್ಲಿದೆ ಎಂದರು.

ಅಸಲಿಗೆ ದೇವರು ಹೀಗೆ ನಮಗೆ ಯಾವ್ಯಾಾವುದೋ ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಾಾನೆ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳುವವರು ನಾವೇ. ಎಲ್ಲರೂ ಅವರವರ ಸ್ಥಾಾನದಲ್ಲಿ ನಿಂತು ತಮ್ಮ ಕೈಲಾದ್ದನ್ನು ಮಾಡಲೇಬೇಕು. ದೇವರು ಎಲ್ಲರಿಗೂ ಒಂದೇ ಸಾಮರ್ಥ್ಯ ನೀಡಿರುವುದಿಲ್ಲ. ಆದರೆ ಒಬ್ಬರ ಸಾಮರ್ಥ್ಯವನ್ನು ಒಬ್ಬರು ಅರಿತು ಸಹಕಾರದಿಂದ ಬಾಳಬೇಕು ಎಂಬುದು ಅವನ ಆಶಯವಾಗಿರಬಹುದಲ್ಲವೇ?
***
ಒಬ್ಬ ಮನುಷ್ಯ ನದಿಯೊಂದನ್ನು ದಾಟಲಾಗದೆ ದಡದಲ್ಲೇ ನಿಂತಿದ್ದ. ಆಗ ಆತನಿಗೆ ವಿಭೀಷಣ ಆ ಮನುಷ್ಯ ವಿಭೀಷಣನಿಗೆ ನದಿ ದಾಟಲು ಉಪಾಯ ಹೇಳಲು ಕೇಳಿಕೊಳ್ಳುತ್ತಾಾನೆ. ವಿಭೀಷಣನು ಒಂದು ಎಲೆಯ ಮೇಲೆ ಏನನ್ನೋೋ ಬರೆದು ಆ ಮನುಷ್ಯನ ಬೆನ್ನಿಿಗೆ ಅಂಟಿಸಿ, ‘ನೋಡು, ನೀನು ಯಾವುದೇ ಕಾರಣಕ್ಕೂ ದೇವರನ್ನು ಸಂಶಯಿಸದೆ ನೀರ ಮೇಲೆ ನಡೆಯುತ್ತ ಹೋಗು. ಯಾವುದೇ ತೊಂದರೆಯಾಗದೆ ದಡ ತಲುಪುತ್ತಿಿ. ಆದರೆ ನೀನು ದೇವರನ್ನು ಸಂಶಯಿಸಿದ ಮರುಕ್ಷಣವೇ ಮುಳುಗುತ್ತಿಿ’ ಎಂದು ಎಚ್ಚರಿಸಿ ಬೀಳ್ಕೊೊಟ್ಟ. ವಿಭೀಷಣನ ಮಾತಿನಂತೆ ಆ ಮನುಷ್ಯ ನಡೆಯತೊಡಗಿದ. ನೀರಮೇಲೆ ನಡೆಯುತ್ತಿಿದ್ದರೂ ಮುಳುಗದೆ ನಡುವೆ ಅವನಿಗೆ ಬೆನ್ನಿಿಗೆ ಅಂಟಿಸಿರುವ ಹಾಳೆಯಲ್ಲಿ ಏನನ್ನು ಬರೆಯಲಾಗಿದೆ ಎಂಬುದನ್ನು ಓದಬೇಕೆಂಬ ಚಪಲವಾಯಿತು. ಎಷ್ಟೇ ತಡೆದುಕೊಂಡರೂ ಸುಮ್ಮನಿರಲು ಆಗಲಿಲ್ಲ. ಕಡೆಗೆ ಅದನ್ನು ಕಿತ್ತುಕೊಂಡು ಓದತೊಡಗಿದ. ‘ಹೇ ರಾಮ್.. ಈ ಮನುಷ್ಯನ ನೀನೇ ರಕ್ಷಿಿಸು’ ಎಂದು ಬರೆಯಲಾಗಿತ್ತು ಅಲ್ಲಿ. ಈ ರಾಮ್ ಯಾರು ಎಂದು ಅವನು ಪ್ರಶ್ನೆೆ ಹಾಕಿಕೊಂಡ. ಮರುಕ್ಷಣ ಅವನು ಮುಳುಗಿಬಿಟ್ಟ.
***
ಒಂದು ದಿನ ತಾಯಿ ತನ್ನ ಮಗನನ್ನು ಶಾಲೆಗೆ ಹೋಗಲು ಎಬ್ಬಿಿಸುತ್ತಿಿದ್ದಳು. ಅದರೆ ಮಗ ಮಾತ್ರ ಹೋಗಲು ನಿರಾಕರಿಸಿದ. ನಿಮಗೆ ಗೊತ್ತೇ ಇದೆ, ನಮ್ಮ ಅಪ್ಪ-ಅಮ್ಮ ನಮಗೆ ಶಾಲೆಗೆ ಹೋಗುವಂತೆ ಒತ್ತಾಾಯಿಸಿದಾಗ ನಾವೂ ಕೂಡಾ, ಹೊಟ್ಟೆೆ ನೋವು, ತಲೆ ನೋವು, ಬೆನ್ನು ನೋವು, ಜ್ವರ ಇತ್ಯಾಾದಿ ಕಾರಣಗಳನ್ನು ಹೇಳಿ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿಿದ್ದೆೆವು. ಇಲ್ಲಿಯೂ ಹಾಗೆ, ಅವನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಾಗ, ನೀನು ಶಾಲೆಗೆ ಹೋಗದೇ ಇರಲು ಎರಡು ಕಾರಣಗಳನ್ನು ಹೇಳು ಎನ್ನುತ್ತಾಾಳೆ. ಆಗ ಮಗ ಹೇಳುತ್ತಾಾನೆ, ‘ಮೊದಲನೇ ಕಾರಣವೇನೆಂದರೆ, ಎಲ್ಲಾಾ ಶಿಕ್ಷಕರೂ ನನ್ನನ್ನು ದ್ವೇಷಿಸುತ್ತಾಾರೆ. ಇನ್ನೊೊಂದು ಕಾರಣವೇನೆಂದರೆ, ಎಲ್ಲಾಾ ವಿದ್ಯಾಾರ್ಥಿಗಳೂ ನನ್ನನ್ನು ದ್ವೇಷಿಸುತ್ತಾಾರೆ. ಈ ಎರಡು ಕಾರಣ ಕೇಳಿದ ಮೇಲೆ ತಾಯಿ, ನೀನು ಶಾಲೆಗೆ ಹೋಗಲೇಬೇಕು ಎನ್ನುತ್ತಾಾಳೆ. ಆಗ ಮಗ, ‘ಅಮ್ಮಾಾ, ನೀನು ನನಗೆ ಶಾಲೆಗೆ ಯಾಕೆ ಹೋಗಬೇಕು ಎನ್ನುವುದಕ್ಕೆೆ ಎರಡು ಕಾರಣ ಕೊಡು’ ಎಂದು ಕೇಳುತ್ತಾಾನೆ. ಅದಕ್ಕೆೆ ಅಮ್ಮ ಹೇಳುತ್ತಾಾಳೆ, ಯಾಕೆ ಅಂದರೆ, ನಿನಗೆ 52 ವರ್ಷ ವಯಸ್ಸು. ಎರಡನೇ ಕಾರಣವೇನೆಂದರೆ, ನೀನು ಶಾಲೆಯ ಮುಖ್ಯೋೋಪಾಧ್ಯಾಾಯ ಎಂದು.

ಈಗ ಶಾಲೆಗೆ ಹೋಗಲು ಇಷ್ಟವಿಲ್ಲದೇ ಇದ್ದರೂ, ಶಾಲೆಯ ಮೊದಲನೆಯ ದಿನ ತುಂಬು ಉತ್ಸಾಾಹದಿಂದ ಹೋಗುತ್ತಿಿದ್ದೆೆವು. ಹೊಸ ಚಪ್ಪಲಿಗಳು, ಹೊಸ ಚೀಲ, ಹೊಸ ಸಮವಸ್ತ್ರ, ಹೊಸ ಪಠ್ಯಪುಸ್ತಕ, ಹೊಸ ನೋಟ್ ಪುಸ್ತಕಗಳೂ ನಮಗೆ ದೊರೆಯುತ್ತಿಿದ್ದವು. ಜೀವನದಲ್ಲಿ ಕೂಡಾ ಪ್ರತಿ ವರ್ಷ ನಮಗೆ ಹೊಸ ನೋಟ್‌ಪುಸ್ತಕ ದೊರೆಯುತ್ತದೆ. 365 ಪುಟಗಳ ನೋಟ್ ಪುಸ್ತಕ! ನೀವು ಈ ಪುಸ್ತಕದ ಪುಟಗಳಲ್ಲಿ ಏನು ಬರೆದಿದ್ದೀರೆಂದು ನೀವೇ ನೆನಪು ಮಾಡಿಕೊಳ್ಳಿಿ. ಇದರಲ್ಲಿ ಎಷ್ಟೋೋ ಅಧ್ಯಾಾಯಗಳು ಇವೆ. ನಿಮ್ಮ ಸಂಬಂಧಗಳಿಗೆ ಸಂಬಂಧಿಸಿದ್ದು ಇದ್ದರೆ, ಮತ್ತೂ ಕೆಲವು ನಿಮ್ಮ ಉದ್ಯೋೋಗಕ್ಕೆೆ ಸಂಬಂಧಿಸಿದ್ದು ಇರುತ್ತವೆ. ಅಷ್ಟೇ ಅಲ್ಲದೇ, ನಿಮ್ಮ ವೈಯಕ್ತಿಿಕ ಬದುಕು, ಅಧ್ಯಾಾತ್ಮಿಿಕ ಜೀವನ, ಆರೋಗ್ಯಕ್ಕೆೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಈ 365 ಪುಟಗಳ ಪುಸ್ತಕದಲ್ಲಿ ಬರೆದಿದ್ದೇವೆ.

ಕೆಲವು ಅಧ್ಯಾಾಯ ತುಂಬಾ ಸುಂದರವಾಗಿ ಬರೆದಿದ್ದರೆ, ಇನ್ನೂ ಕೆಲವನ್ನು ಅತೀ ಕೆಟ್ಟದಾಗಿ ಬಿಂಬಿಸಿದ್ದೇವೆ. ನಮ್ಮ ವೈಯಕ್ತಿಿಕ ಹಾಗೂ ಔದ್ಯೋೋಗಿಕ ಜೀವನದಲ್ಲಿ ಕೆಲವೊಂದು ಅವಾಂತರಗಳನ್ನು ಸೃಷ್ಟಿಿಸುವ ಮೂಲಕ ಅತೀ ಕೆಟ್ಟದಾಗಿ ದಾಖಲಿಸಿದ್ದೇವೆ. ನಮ್ಮ ಆರೋಗ್ಯಕ್ಕೆೆ ಸಂಬಂಧಪಟ್ಟ, ವೈಯಕ್ತಿಿಕ ವಿಚಾರಗಳ, ಆಧ್ಯಾಾತ್ಮಿಿಕ ಜೀವನದ ಅಧ್ಯಾಾಯಗಳನ್ನು ಹೇಗೆ ಬರೆಯಲಿಚ್ಛಿಿಸುತ್ತೇವೆ ಎಂಬ ಆಯ್ಕೆೆ ನಮ್ಮ ಕೈಯಲ್ಲಿರುತ್ತದೆ. ನಾವು ಹೇಗೆ ಬಯಸುತ್ತೇವೋ, ಹಾಗೆಯೇ ನಮ್ಮ ಜೀವನದ ಅನುಭವಗಳಿರುತ್ತವೆ. ಹೀಗಾಗಿ ನಾವು ಪ್ರತಿ ಪುಟದಲ್ಲೂ ಒಳ್ಳೆೆಯ ವಿಚಾರಗಳನ್ನೇ ದಾಖಲಿಸಬೇಕು.
.