Thursday, 12th December 2024

ಕೇಂದ್ರ ಬಜೆಟ್ ನಿರೀಕ್ಷೆಗಳು ಮತ್ತು ಸಾಧ್ಯತೆಗಳು

ಪ್ರಸ್ತುತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಹಣದುಬ್ಬರದ ಅಬ್ಬರ ಸದ್ಯಕ್ಕೆ ತಣ್ಣಗಾಗಿದ್ದರೂ ಮುಂದೆ ಅದು ಹೇಗೆ ಹೆಡೆ ಎತ್ತುತ್ತದೆ ಎಂದು ಹೇಳಲಾಗದು. ಆರ್‌ಬಿಐ ವರ್ಷದ ಉಳಿದ ಅವಧಿಯ
ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಸರಕಾರದ ಮತ್ತು ಸಾಲ ಪಡೆಯುವ ಕಾರ್ಯಕ್ರಮವನ್ನು ನಿಭಾಯಿಸುವುದನ್ನು ವೀಕ್ಷಿಸಬೇಕಾಗಿದೆ.

೨೦೨೩ – ೨೪ನೇ ಸಾಲಿನ ಕೇಂದ್ರ ಸರಕಾರದ ಮುಂಗಡ ಪತ್ರ ಫೆ.೧ರಂದು ಮಂಡನೆಯಾಗಲಿದೆ. ಈ ಬಾರಿಯ ಬಜೆಟ್ ಹಿಂದಿನಂತಲ್ಲ. ವಿಶ್ವ ಆರ್ಥಿಕ ಹಿಂಜರಿತದ ಚಕ್ರವ್ಯೂಹವನ್ನು ಭೇದಿಸುವ ಕಠಿಣ ಸವಾಲು ಕೇಂದ್ರ ಹಣಕಾಸು ಸಚಿವರ ಮುಂದಿದೆ. ದೇಶದ ಸ್ಥೂಲ ಆರ್ಥಿಕತೆಯ ಕ್ಷಮತೆಯ ಬಗ್ಗೆ ಭಾರತೀಯರು ಧನಾತ್ಮಕರಾಗಿದ್ದಾರೆ. ಅನುಗುಣವಾಗಿ ಈ ಬಾರಿ ಆರ್ಥಿಕ ಚಟುವಟಿಕೆ ಚುರುಕಾ ಗಿರುವ ಸಂತಸವಿದೆ.

ಇನ್ನೊಂದೆಡೆ ಆರ್ಥಿಕ ಚಿತ್ರಣವನ್ನೇ ಕೆಡಿಸಬಹುದಾದ ಜಾಗತಿಕ ಆರ್ಥಿಕ ಹಿಂಜರಿತಗಳ ದ್ವಂದ್ವ ಗಳನ್ನು ಬಜೆಟ್ ಮುಖೇನ ನಿಭಾಯಿಸಬೇಕಾಗಿದೆ. ಅದಲ್ಲದೆ ಎರಡಂಕಿ ಆರ್ಥಿಕ ಬೆಳವಣಿಗೆ ದರ ಸಾಕಾರಗೊಳಿಸುವ ನಿಟ್ಟಿನಲ್ಲಿ ವ್ಯೂಹ ರಚನೆಯ ಕಸರತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಅಗ್ನಿ ಪರೀಕ್ಷೆಯೇ. ಸದ್ಯಕ್ಕೆ ದೇಶ ಕೋವಿಡ್ ಕಪಿಮುಷ್ಟಿಯಿಂದ ಪಾರಾಗಿ ಆರ್ಥಿಕ ಚಟುವಟಿಕೆ ಗಳು ಚುರುಕಾಗಿದ್ದರೂ ಅರ್ಥ ವ್ಯವಸ್ಥೆಯ ಕೆಲವು ವಲಯಗಳ ಪ್ರಗತಿ ಇನ್ನೂ ಮಂದಗತಿಯಲ್ಲಿದೆ.

ವಿಶ್ವ ಆರ್ಥಿಕ ಹಿಂಜರಿತದ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ವರ್ಷದ ರಫ್ತು ವಹಿವಾಟು ಕೂಡ ತೀವ್ರ ಇಳಿಮುಖವಾಗಿದೆ. ಜತೆಗೆ ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ. ಈ ಎಲ್ಲ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಸಮಗ್ರ ಆರ್ಥಿಕ ಪ್ರಗತಿಗೆ ದೇಶವನ್ನು ಅಣಿಗೊಳಿಸಬೇಕಾಗಿದೆ. ಮುಂದಿನದ್ದು ಲೋಕಸಭಾ ಚುನಾವಣಾ ವರ್ಷ ಹಾಗೂ ಈ ಬಾರಿ ೯ ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ನಡೆಯಲಿವೆ. ಅದಲ್ಲದೆ ಜನಪ್ರಿಯತೆಯ ಜಾಡನ್ನು ಕಾಪಿಟ್ಟುಕೊಂಡು ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯವಿದೆ.

ಬಳಕೆದಾರರು ಆದಾಯ ತೆರಿಗೆಗೆ ಸಂಬಂಽಸಿದಂತೆ ನೀತಿ ಬದಲಾವಣೆಗಳನ್ನು ನಿರೀಕ್ಷಿಸಿದ್ದಾರೆ. ಈ ವಿಚಾರ ಪ್ರತಿ ಬಜೆಟ್ ಸಂದರ್ಭದಲ್ಲೂ ಮೊಳಗುತ್ತಲೇ ಇದೆ. ಪ್ರಾಥಮಿಕ ಆದಾಯ ತೆರಿಗೆಮಿತಿಯನ್ನು ಈಗಿನ ರು.೨.೫ ಲಕ್ಷದಿಂದ ೪ ರಿಂದ ೫ ಲಕ್ಷಕ್ಕೆ, ಅಲ್ಲದೇ ಶೇ.೩೦ ತೆರಿಗೆಯ ಗರಿಷ್ಠ
ಮಿತಿಯನ್ನು ಈಗಿನ ರು.೧೦ ಲಕ್ಷಗಳಿಂದ ಹೆಚ್ಚಿನ ಮಟ್ಟಕ್ಕೆ ಏರಿಸಬೇಕು ಎಂಬುದು ಸಾಮಾನ್ಯ ನಿರೀಕ್ಷೆ. ಸದ್ಯಕ್ಕೆ ರು.೨.೫ ಲಕ್ಷ ಮೇಲ್ಪಟ್ಟು ೫ ಲಕ್ಷ ಆದಾಯಕ್ಕೆ ತೆರಿಗೆ ಸ್ಲ್ಯಾಬ್ ಕಡಿಮೆಯಿದೆ. ಸ್ಟಾಡಂರ್ಡ್ ಡಿಡಕ್ಷನ್ ಈಗಿರುವ ರು. ೫೦,೦೦೦ ದಿಂದ (೨೦೧೯ರ ಮದ್ಯಂತರ ಬಜೆಟ್‌ನಲ್ಲಿ
ಘೋಷಿಸಲಾಗಿದೆ) ಒಂದು ಲಕ್ಷದ ಪ್ರಸ್ತಾವನೆಯನ್ನು ಪರಿಗಣಿಸಬೇಕಾಗಿದೆ.

ಆದಾಯ ತೆರಿಗೆ ಕಾಯ್ದೆಯ ಕಲಂ ೮೦ಅಅ ಅಡಿ ಹೂಡಿಕೆಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿಯನ್ನು ಬಯಸುತ್ತಿದ್ದಾರೆ. ಆರೋಗ್ಯ ವಿಮೆ ಮತ್ತು
ವೈದ್ಯಕೀಯ ವೆಚ್ಚಗಳಿಗೆ ಸಂಬಂಧಿಸಿದ ಸೆಕ್ಷನ್ ೮೦ಆ ಸೆಕ್ಷನ್ ೮೦ಅಅ ಅಡಿಯಲ್ಲಿ ಸಂಬಳ ಪಡೆಯುವ ವರ್ಗಕ್ಕೆ ಪ್ರಮುಖ ಪರಿಹಾರವನ್ನು ಊಹಿಸಬಹುದು. ಈಗ ಒಂದು ದಶಕದಿಂದ ಯಾವುದೇ ಬದಲಾವಣೆಯಾಗಿಲ್ಲ. ಬಡ್ಡಿ ದರಗಳು ಗಣನೀಯವಾಗಿ ಹೆಚ್ಚಿರುವುದನ್ನು ಪರಿಗಣಿಸಿ ಗೃಹ ಸಾಲಗಳ ಮೇಲಿನ ಹೊಂದಾಣಿಕೆಯ ಕಡಿತದ ಮಿತಿಯನ್ನು ಪ್ರತಿವರ್ಷ ೨ ಲಕ್ಷದಿಂದ ೩ ಲಕ್ಷಕ್ಕೆ ಹೆಚ್ಚಿಸಲೇ ಬೇಕೆಂಬುದು ಆಶಯ.

ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮತ್ತು ವಿಮಾ ಕಂತುಗಳ ಪ್ರಸ್ತುತ ರು. ೧.೫ ಲಕ್ಷದಿಂದ ರೂ. ೨.೫ ಲಕ್ಷಕ್ಕೆ ಏರಿಸಬಹುದು. ಆಸ್ಪತ್ರೆ ವೆಚ್ಚದ ಮೇಲಿನ ಕಡಿತ ಮಕ್ಕಳ ಶಿಕ್ಷಣ ಭತ್ಯೆಗಳು, ಕಾಲೇಜು ಬೋಧನಾ ಶುಲ್ಕ ಮಿತಿ ಸುಮಾರು ಎರಡು ದಶಕಗಳಿಂದ ಬದಲಾಗದೇ ಉಳಿದಿದೆ. ಆದರೆ ಸಂಬಳ ಪಡೆಯುವ ವರ್ಗಕ್ಕೆ ಗಮನಾರ್ಹ ತೆರಿಗೆವಿನಾಯಿತಿ ಒದಗಿಸಲು ಕಡಿಮೆ ಅವಕಾಶವಿದೆ. ಜಾಗತಿಕ ಅನಿಶ್ಚತತೆಯ ಕಾರಣದಿಂದ ಬಜೆಟ್ ಹೂಡಿಕೆದಾರರು ಮತ್ತು ತೆರಿಗೆ ಪಾವತಿದಾರರಿಗೆ ಮುಂಬರುವ ವರ್ಷಗಳ ಯೋಜನೆಗೆ ಪ್ರಮುಖ ಘಟನೆಯಾಗಿದೆ.

ಕೃಷಿ ವಿಚಾರದಲ್ಲಿ ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಆಹಾರ ಧಾನ್ಯಗಳ ಮತ್ತು ವಾಣಿಜ್ಯ ಬೆಳೆಗಳು ಕೆಲವು ವರ್ಷಗಳಿಂದ ಹಾನಿಗೀಡಾಗಿದೆ. ಬೆಳೆ ವಿಮೆಯನ್ನು ಸಮರ್ಪಕಗೊಳಿಸಬೇಕು. ಮನ್‌ರೇಗಾ ಉದ್ಯೋಗದ ಜೀವಾಳ, ಫಸಲ್ ಭೀಮಾ, ಪಿಎಂ ಕಿಸಾನ್ ಸಮ್ಮಾನ್, ಮೊದಲಾದ ಕೃಷಿ ಪರ ಯೋಜನೆಗಳ ಅನುದಾನ ಹೆಚ್ಚಿಸಬೇಕು. ರಸಗೊಬ್ಬರ ಮತ್ತು ಕೃಷಿ ಉಪಕರಣಗಳ ಸಬ್ಸಿಡಿ ಹೆಚ್ಚಿಸಬೇಕು. ಕೃಷಿ ಸಂಶೋಧನೆ, ತಂತ್ರಜ್ಞಾನ ಬಳಕೆ ಹೆಚ್ಚಿಸಲು ಪ್ರೋತ್ಸಾಹಿಸಬೇಕು.

ಇನ್ನು ಎಂಎಸ್‌ಎಂಇ ಗೆ ಸಂಬಂಧಿಸಿದಂತೆ ದೇಶದ ೬೪ ಮಿಲಿಯನ್ ಯುನಿಟ್‌ಗಳೂ, ೧೧ ಕೋಟಿ ಉದ್ಯೋಗಿಗಳು, ದೇಶದ ಜಿಡಿಪಿಗೆ ಶೇ.೩೦ರಷ್ಟು ಕೊಡುಗೆ ನೀಡುತ್ತಿರುವ ಈ ಕ್ಷೇತ್ರದ ಪರಿಪೂರ್ಣ ಕಾಯಕಲ್ಪವಾಗಬೇಕಾಗಿದೆ. ಹಣದುಬ್ಬರದ ಅಬ್ಬರ ಸದ್ಯಕ್ಕೆ ತಣ್ಣಗಾಗಿದ್ದರೂ ಮುಂದೆ
ಅದು ಹೇಗೆ ಹೆಡೆ ಎತ್ತುತ್ತದೆ ಎಂದು ಹೇಳಲಾಗದು. ಆರ್ ಬಿಐ ವರ್ಷದ ಉಳಿದ ಅವಽಯ ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಸರಕಾರದ ಮತ್ತು ಸಾಲ ಪಡೆಯುವ ಕಾರ್ಯಕ್ರಮವನ್ನು ನಿಭಾಯಿಸುವುದನ್ನು ವೀಕ್ಷಿಸಬೇಕಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ. ೪.೯೫ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಬಡ್ಡಿದರ ಏರಿಕೆಯನ್ನು ಸದ್ಯಕ್ಕೆ ನಿಲುಗಡೆ ಮಾಡಲು ರಿಸರ್ವ್ ಬ್ಯಾಂಕಿಗೆ ಸದವಕಾಶವಿದೆ. ಹೀಗಾದರೆ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಅನುಕೂಲವಾಗಲಿದೆ.

ಬಜೆಟ್‌ನ ಪ್ರಮುಖ ಅವಳಿ ಗುರಿಗಳು ಹೈಯರ್ ಕೇಪೆಕ್ಸ್ (ಸರಕಾರದ ಬಂಡವಾಳ ವೆಚ್ಚ) ಮತ್ತು ಕಡಿಮೆ ವಿತ್ತೀಯ ಕೊರತೆ. ೨೦೨೨-೨೩ ರಲ್ಲಿ ರು. ೭.೫ ಲಕ್ಷ ಕೋಟಿ ಇದ್ದು ರು. ೯ ಲಕ್ಷ ಕೋಟಿಗೆ ಹೆಚ್ಚುವ ಸಾಧ್ಯತೆ ಇದೆ. ಪ್ರಮುಖ ಮೂಲ ಸೌಕರ್ಯಗಳಾದ ರಸ್ತೆ, ರೈಲು, ವಿದ್ಯುತ್, ಗತಿ ಶಕ್ತಿ ಮಿಷನ್ ಅಡಿಯಲ್ಲಿ ಹಣಕಾಸು ನೆರವು, ಮತ್ತು ನಗರ ಮೂಲ ಸೌಕರ್ಯಗಳ ಯೋಜನೆಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ಸಂಭವವಿದೆ. ಮತ್ತು ದೀರ್ಘಾವಧಿಯ ದೃಷ್ಟಿಯನ್ನು ವ್ಯಕ್ತಪಡಿಸುವ ಸಾಧ್ಯತೆಯಿದೆ.

ವಿತ್ತೀಯ ಕೊರತೆ ೨೦೨೨-೨೩ನೇ ಸಾಲಿನಲ್ಲಿ ರು.೧೭.೫ ಲಕ್ಷ ಕೋಟಿ, ೨೦೨-೨೪ ರಲ್ಲಿ ರು. ೧೭.೩ ಲಕ್ಷ ಕೋಟಿಗೆ ಇಳಿಕೆಯಾಗುವುದೆಂದು ಹೇಳಲಾಗಿದೆ. ದೇಶದ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯ ಉಲ್ಬಣಕ್ಕೆ ಜಾಗತಿಕ ಬಿಕ್ಕಟ್ಟು ಕಾರಣವಾಗಿದೆ. ವಿದೇಶೀ ವಿನಿಮಯ ಮಾರುಕಟ್ಟೆ, ಬಂಡವಾಳ ಹೂಡಿಕೆಯ ಮಾರುಕಟ್ಟೆ, ಜಾಗತಿಕವಾಗಿ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲದ ಕೊರತೆ, ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ಬಾಟಲ್ ನೆಕ್‌ಗಳು ಹಣದುಬ್ಬರದ ಅಪಾಯ, ಅಭಿವೃದ್ಧಿಶೀಲ ಆರ್ಥಿಕತೆಗಳು ಹಾಗೂ ಜಗತ್ತಿನಾದ್ಯಂತ ದುರ್ಬಲವಾಗಿರುವ ಉದ್ದಿಮೆ, ವ್ಯವಹಾರ ಮತ್ತು ಸೇವಾ ಚಟುವಟಿಕೆಗಳಿಂದ ನಿರುದ್ಯೋಗ ಸಮಸ್ಯೆಯ ವಿಶ್ವವ್ಯಾಪಿಯಾಗಿದೆ.

ಹೈಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಇದು ನಮ್ಮ ದೇಶದ ಮೇಲೂ ಗಂಭೀರ ಪರಿಣಾಮವನ್ನು ಬೀರಿದೆ. ಸಾಂಕ್ರಾಮಿಕ ಸಮಯದಲ್ಲಿ ದೇಶವು ಬಡವರಿಗೆ ಆಹಾರ ಒದಗಿಸಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಬೇಕಾಗಿತ್ತು. ಸಣ್ಣ ವ್ಯಾಪಾರ, ಎಂಎಸ್‌ಎಂಇ ಗಳಿಗೆ ಅಗ್ಗದ ಸಾಲಗಳು, ಉಚಿತ ಲಸಿಕೆಗಳು ೨೦೨೦-೨೧ರಲ್ಲಿ ಒಟ್ಟು ದೇಶೀ ಉತ್ಪನ್ನದ (ಜಿಡಿಪಿ) ದಾಖಲೆಯ ಶೇ.೯.೩ಕ್ಕೆ ಇಳಿದಿತ್ತು. ೨೦೨೨-೨೩ ರಲ್ಲಿ ಶೇ.೬.೪ ರಿಂದ ೨೦೨೩ರಲ್ಲಿ ಜಿಡಿಪಿಯ ಶೇ. ೫.೮ ಮತ್ತು ಶೇ. ೫.೯ ರ ನಡುವೆ ವಿತ್ತೀಯ ಕೊರತೆಯನ್ನು ಕಡಿತಗೊಳಿಸುವ ಸಾಧ್ಯತೆಯಿದೆ.

ಕಳೆದ ಹತ್ತು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹ ಸತತ ರು.೧.೪ ಲಕ್ಷ ಕೋಟಿಗಿಂತ ಹೆಚ್ಚಾಗಿರುವುದು ಭಾರತದ ಬೆಳವಣಿಗೆಯ ದರಕ್ಕೆ ಪೂರಕ ಮತ್ತು ಇದೇ ಯಶಸ್ಸು ಮುಂದುವರಿಯಬೇಕು. ಜಿಎಸ್‌ಟಿಗೆ ಸಂಬಂಽಸಿದ ಲೋಪ ದೋಷಗಳನ್ನು ನಿವಾರಿಸಿ ಆವಷ್ಯಕ ಉತ್ಪನ್ನಗಳ ಮೇಲಿನ
ಜಿಎಸ್‌ಟಿ ದರವನ್ನು ಗಣನೀಯವಾಗಿ ತಗ್ಗಿಸಬೇಕೆಂಬುದು ಆಶಯ. ಇಂದಿನ ಸಂದಿಗ್ಧ ಕಾಲಘಟ್ಟದಲ್ಲಿಯೂ ೨೦೨೩-೨೪ ನೇ ಸಾಲಿನಲ್ಲಿ ದೇಶವು ಎರಡಂಕಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಿದೆಯೆಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್ ಎಸ್‌ಒ) ವಿಶ್ವಾಸ ವ್ಯಕ್ತ ಪಡಿಸಿದೆ.

ಹಣದುಬ್ಬರ ಹಂತಕ್ಕೆ ನಿಂತರೆ, ತೆರಿಗೆ ಆದಾಯ ಮತ್ತು ಬಂಡವಾಳ ವಾಪಸಾತಿ ಪ್ರಕ್ರಿಯೆ ಮತು ಸಬ್ಸಿಡಿ ಕಡಿತಗಳನ್ನು ಕಡಿತಗೊಳಿಸಿ ಉತ್ಪಾದನಾ ಚಟುವಟಿಕೆಯ ಮೇಲೆ ಹೂಡಿಕೆ ಮಾಡಿದರೆ ಎರಡ೦ಕಿ ಸಾಧನೆ ಕಷ್ಟವಾಗಲಾರದು. ಮತ್ತು ಪ್ರಗತಿಯ ಕನಸು ನನಸಾಗಲು ಭದ್ರ ಬುನಾದಿಯಾಗ ಲಿದೆ.

Read E-Paper click here