Sunday, 15th December 2024

ಧರ್ಮ ಪ್ರಚಾರಕರ ನೆರವಿನ ಮೂಲ USAID

ವೀಕೆಂಡ್ ವಿತ್ ಮೋಹನ್

camohanbn@gmail.com

೨೦೦೯ರಲ್ಲಿ ಅಖಿಲ ಭಾರತೀಯ ಕ್ರಿಶ್ಚಿಯನ್ ಪರಿಷತ್ತಿನ ಅಧ್ಯಕ್ಷನಾಗಿದ್ದ ಜೋಸೆಫ್ ಡಿ’ಸೋಜ, ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವನ್ನು ವಾಷಿಂಗ್ಟನ್ ನಗರದಲ್ಲಿ ಭೇಟಿ ಮಾಡಿ, ‘ಭಾರತದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಆಯೋಗವು ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಬೇಕು’ ಎಂದು ಹೇಳಿದ್ದ.

ಆದರೆ ನೂತನ ಸರಕಾರವು, ತರಾತುರಿಯಲ್ಲಿ ಆಯೋಗವು ಭಾರತಕ್ಕೆ ಭೇಟಿ ನೀಡುವುದು ಬೇಡವೆಂದು ಹೇಳಿ ಸುಮ್ಮನೆ ಕುಳಿತಿತ್ತು. ಭಾರತದೊಳಗಿದ್ದಂಥ ಆಯೋಗದ ಕ್ರಿಶ್ಚಿಯನ್ ಬೆಂಬಲಿಗರು ತಮ್ಮ ನಿತ್ಯದ ಚಾಳಿಯಂತೆ ಅಮೆರಿಕದ ಮೇಲೆ ಒತ್ತಡ ಹೇರಲು ಶುರು ಮಾಡಿದರು.

‘ಕ್ಯಾಥೊಲಿಕ್ ಸೆಕ್ಯುಲರ್ ಫಾರಮ್’ ಎನ್ನುವ ಕ್ರಿಶ್ಚಿಯನ್ ಧರ್ಮಪ್ರಚಾರ ಸಂಘಟನೆಯು ಭಾರತ ಸರಕಾರವನ್ನು ಪ್ರಶ್ನೆ ಮಾಡು ವಂತೆ ತನ್ನ ಸದಸ್ಯರಿಗೆ ಹೇಳಿತ್ತು. ಭಾರತದಲ್ಲಿ ರುವ ಅಲ್ಪಸಂಖ್ಯಾತರನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕಾರಣಕ್ಕಾಗಿ ಬಳಸಿ ಕೊಂಡು ಅನ್ಯಾಯ ಮಾಡುತ್ತಿವೆ. ಹಾಗಾಗಿ ಅಮೆರಿಕದ ಆಯೋಗವು ಅತಿಶೀಘ್ರದಲ್ಲಿ ಭಾರತಕ್ಕೆ ಭೇಟಿ ನೀಡಬೇಕಿದೆ ಎಂದು ಹೇಳಿತ್ತು. ಚೀನಾ, ಮ್ಯಾನ್ಮಾರ್, ಸೌದಿ ಅರೇಬಿಯಾ ಮತ್ತು ಇಸ್ರೇಲ್ ದೇಶಗಳು ಆಯೋಗದ ಭೇಟಿಗೆ ಅವಕಾಶ ನೀಡಿದ ಮೇಲೆ ಭಾರತಕ್ಕೂ ಭೇಟಿನೀಡ ಬೇಕೆಂದು ಹೇಳಿತ್ತು. ಈ ಸಂಘಟನೆಗಳು ತಮ್ಮ ಉದ್ದೇಶವನ್ನು ಈಡೇರಿಸುವ ಸಲುವಾಗಿ ದಿನದ ೨೪ ಗಂಟೆ ಮತ್ತು ವರ್ಷದ ೩೬೫ ದಿವಸ ರಾಜಕಾರಣಿಗಳನ್ನು ಮೀರಿ ಸುವ ಕೆಲಸ ಮಾಡುತ್ತವೆ.

ತಮ್ಮ ದಾರಿಗೆ ಅಡ್ಡ ಬರುವ ವಿಚಾರಗಳ ಬಗ್ಗೆ ಯಾವ ಸಮಯದದರೂ ಧ್ವನಿ ಎತ್ತುವಂಥ ಕೆಲಸ ಮಾಡುತ್ತವೆ. ೨೦೦೯ರಲ್ಲಿ ಅಮೆರಿಕದ ಆಯೋಗದ ಭೇಟಿಗೆ ಅವಕಾಶ ಸಿಗದಿದ್ದಾಗ, ತನ್ನ ಸಂಘಟನೆಯ ಮೂಲಕ ನೇರವಾಗಿ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗಕ್ಕೆ ಇಂಟರ್ನೆಟ್ ಮೂಲಕ ಪತ್ರಗಳನ್ನು ಅದು ಬರೆಸಿತ್ತು. ಕರ್ನಾ ಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ಶುರುವಾದ ತಕ್ಷಣ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವರಿಂದ ಲಾಬಿ ಶುರು ಮಾಡಿಸಿತ್ತು.

ಕ್ರಿಶ್ಚಿಯನ್ ಸಂಘಟನೆಗಳ ಒತ್ತಡಕ್ಕೆ ಮಣಿದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಭಾರತವನ್ನು ಅಫ್ಘಾನಿ ಸ್ತಾನದ ಜತೆಗೆ ಸೇರಿಸಿ, ಅಲ್ಪಸಂಖ್ಯಾತರ ದೌರ್ಜನ್ಯಗಳ ಪಟ್ಟಿಯಲ್ಲಿ ಪ್ರಪಂಚದ ವೀಕ್ಷಣಾ ಪಟ್ಟಿಗೆ ಸೇರಿಸಿತು. ಒಡಿಶಾ ಮುಖ್ಯ ಮಂತ್ರಿಯಾಗಿದ್ದಂಥ ನವೀನ್ ಪಟ್ನಾಯಕ್ ರಿಗೆ ಆಯೋಗವು ಅವರ ರಾಜ್ಯದಲ್ಲಿನ ಅಲ್ಪಸಂಖ್ಯಾತರ ಮೇಲಿನ ಕಾಳಜಿಯ ಕುರಿತು ಪತ್ರ ಬರೆದು, ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿಯ ಮೂಲಕ ತಲುಪಿಸಿತ್ತು. ಆಯೋಗದ ಪತ್ರ ತಲುಪುವ ವೇಳೆಗೆ ಒಡಿಶಾದ ‘ಕಂದ ಮಾಲ್’ ಹಿಂಸಾಚಾರ ತಣ್ಣಗಾಗಿ ಸುಮಾರು ತಿಂಗಳುಗಳೇ ಕಳೆದಿತ್ತು.

Read E-Paper click here

ಪ್ರಪಂಚದಾದ್ಯಂತ ದೊಡ್ಡದೊಂದು ಜಾಲವನ್ನು ಹೊಂದಿರುವ ಈ ಸಂಘಟನೆಗಳು ಪ್ರತಿಯೊಂದು ದೇಶದಲ್ಲೂ ತಮ್ಮನ್ನು ಬೆಂಬಲಿಸುವಂಥ ಅನೇಕ ಸಂಘಟನೆಗಳನ್ನು ಕಟ್ಟಿ ಕೊಂಡಿರುತ್ತವೆ. ಅಲ್ಲಿನ ಕೆಲ ರಾಜಕೀಯ ಪಕ್ಷಗಳು ಮತ ಬ್ಯಾಂಕಿಗಾಗಿ ಇಂಥ ಸಂಘಟನೆಗಳ ಪರವಾಗಿ ನಿಲ್ಲುತ್ತವೆ. ತಮ್ಮ ವಿರುದ್ಧ ನಿಲ್ಲುವ ಸರಕಾರದ ವಿರುದ್ಧ ತಮ್ಮ ಬೃಹತ್ ಜಾಲದಲ್ಲಿರುವವರನ್ನು ಬಳಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ, ಅಂತಾ ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗಕ್ಕೆ ವರದಿ ಸಲ್ಲಿಸುತ್ತವೆ. ಆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೊಡ್ಡ ಮಟ್ಟದಲ್ಲಿ ದೌಜನ್ಯವಾಗುತ್ತಿದೆಯೆಂದು ವಿಶ್ವಮಟ್ಟದಲ್ಲಿ ಸುಳ್ಳು ಗಳನ್ನು ತೇಲಿಬಿಡಲಾಗುತ್ತದೆ.

ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (USAID), ಅಲ್ಲಿನ ಮತ್ತೊಂದು ಧನಸಹಾಯ ಮಾಡುವ ಅಂತಾರಾ ಷ್ಟ್ರೀಯ ಸಂಸ್ಥೆ. ಅಮೆರಿಕ ದೇಶವು ಜಗತ್ತಿನ ಇತರ ದೇಶ ಗಳಲ್ಲಿ ಶಾಂತಿ ಸ್ಥಾಪಿಸುವ ಹೆಸರಿನಲ್ಲಿ ನೀಡುವ ಧನ ಸಹಾಯವನ್ನು ಸಾಮಾನ್ಯ ವಾಗಿ ಆಯಾ ದೇಶದ ಸ್ಥಳೀಯ ಕ್ರಿಶ್ಚಿಯನ್ ಧರ್ಮಪ್ರಚಾರಕ ಸಂಸ್ಥೆಗಳ ಮೂಲಕ ನಿರ್ವಹಿಸುತ್ತದೆ. ಈ ಸಂಸ್ಥೆಗಳಿಂದ ವರದಿ ಗಳನ್ನು ಪಡೆದ ನಂತರ ಧನಸಹಾಯ ಮಾಡುತ್ತದೆ. ಧರ್ಮ ಪ್ರಚಾರಕ ಸಂಸ್ಥೆಯಾದರೆ ಕೇವಲ ಒಂದು ಧರ್ಮಕ್ಕಷ್ಟೇ ಸೀಮಿತ ವಾಗಬಾರದು, ತಮ್ಮ ಸಂಸ್ಥೆಯಲ್ಲಿ ಸ್ಥಳೀಯ ಧರ್ಮಗಳೆಲ್ಲವನ್ನೂ ತೊಡಗಿಸಿಕೊಳ್ಳಬೇಕು. ಆದರೆ ಕ್ರಿಶ್ಚಿಯನ್ ಧರ್ಮ ಪ್ರಚಾರ ವನ್ನೇ ಗುರಿಯಾಗಿಸಿಕೊಂಡಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಕೇವಲ ಒಂದೇ ಧರ್ಮಕ್ಕೆ ಸೀಮಿತ ವಾಗಿದೆ.

ಎರಡನೇ ಮಹಾಯುದ್ಧದ ನಂತರ ೧೯೬೧ರಲ್ಲಿ ಅಮೆರಿಕ ಸ್ಥಾಪಿಸಿದ USAID ಅಲ್ಲಿನ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿ ಹೋಗಿದೆ. ಮುಂದುವರಿಯುತ್ತಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಮಾಡಬೇಕೆಂದಾಗ USAID ಬಳಸಿ ಕೊಳ್ಳುವುದು, ಒಸಾಮಾ ಬಿನ್ ಲಾಡೆನ್‌ನನ್ನು ಹಿಡಿಯುವ ಸಂದರ್ಭದಲ್ಲಿ ಪಾಕಿಸ್ತಾನದ ಬೆಂಬಲ ಕೇಳಿದ ಸಮಯದಲ್ಲಿ USAID ಬಳಕೆಯಾಗು ವುದು ನಡೆದಿತ್ತು.

ಇರಾಕ್, ಸಿರಿಯಾ ದೇಶಗಳಲ್ಲಿ ಶಾಂತಿ ಸ್ಥಾಪನೆ ಮಾಡುತ್ತೇವೆಂದು ಹೇಳಿ USAID ಬಳಸಿಕೊಂಡರು. ಪ್ರಪಂಚದ ಬಹುತೇಕ ದೇಶಗಳಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕರ ಮೂಲಕವೇ ಖಿಖಅಐಈ ಹಂಚಿಕೆಯಾಗುತ್ತಿದೆ. ರಷ್ಯಾದ ಜತೆಗಿನ ಶೀತಲ ಸಮರದ ಸಮಯದಲ್ಲಿ ಅಮೆರಿಕದ USAID ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು. ಆಗ ಅಮೆರಿಕದ ಸಹಾಯಕ್ಕೆ ನಿಂತಿದ್ದು ಕ್ರಿಶ್ಚಿಯನ್ ಧರ್ಮ ಪ್ರಚಾರಕರು. ಇವರನ್ನು ಬಳಸಿಕೊಂಡು ಖಿಖಅಐಈ ಮೂಲಕ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಮ್ಯುನಿಸ್ಟರ ಸಿದ್ಧಾಂತಗಳನ್ನು ಶಮನಗೊಳಿಸುವ ಕೆಲಸವಾಗಿತ್ತು.

ಧರ್ಮ ಪ್ರಚಾರಕರ ಮೂಲಕ ಆಗ್ನೇಯ ಏಷ್ಯಾದ ದೇಶಗಳಲ್ಲಿ ಬಹಳಷ್ಟು ಕೆಲಸ ಮಾಡಲಾಗಿತ್ತು. ಖ್ಯಾತ ಪತ್ರಿಕೆ ‘ತೆಹಲ್ಕಾ’
ನಡೆಸಿದ್ದ ತನಿಖೆಯ ವರದಿಯ ಪ್ರಕಾರ, ಅಮೆರಿಕ ಅಧ್ಯಕ್ಷ ಬುಷ್ ಅವಧಿಯಲ್ಲಿ ಅಮೆರಿಕ ಬೇಹುಗಾರಿಕಾ ಸಂಸ್ಥೆ ‘ಸಿಐಎ’- USAID ಧರ್ಮಪ್ರಚಾರಕ ಸಂಸ್ಥೆಗಳ ಸಂಯೋಜಿತ ಪ್ರಯತ್ನ ದೊಡ್ಡ ಮಟ್ಟದಲ್ಲಿ ಭಾರತದೊಳಗೆ ಕೆಲಸ ಮಾಡಿತ್ತು. ಆದರೆ ಬುಷ್ ಅಮೆರಿಕ ಅಧ್ಯಕ್ಷರಾಗುವ ಮುಂಚಿನಿಂದಲೂ USAID ಅಮೆರಿಕದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿತ್ತು. ೧೯೯೯ ರಲ್ಲಿ ಬಿಲ್ ಕ್ಲಿಂಟನ್ ಅವರು ‘ಬ್ರಾಡಿ ಆಂಡರ್ಸನ್’ ಎಂಬಾತನನ್ನು USAID ನ ಅಧ್ಯಕ್ಷನನ್ನಾಗಿಸಿದ್ದರು.

ಈತನೇ ಹೇಳುವ ಹಾಗೆ, ಅಮೆರಿಕದ ವಿದೇಶಿ ನೆರವಿನ (USAID) ವಿಚಾರದಲ್ಲಿ ಅಮೆರಿಕದ ಸರಕಾರಗಳು ಕ್ರಿಶ್ಚಿಯನ್ ಸಂಸ್ಥೆ ಗಳನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಂಡಿದ್ದವು. ಭಾರತದಲ್ಲಿನ ಕೆಲವು ಜಾತ್ಯತೀತ ಸಂಸ್ಥೆಗಳನ್ನು ಹೊರತುಪಡಿಸಿ, USAID ಹೆಚ್ಚಾಗಿ ಕ್ರಿಶ್ಚಿಯನ್ ನಂಬಿಕೆಯ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಗಳಿಗೆ ಹೆಚ್ಚಿನ ನೆರವನ್ನು ನೀಡಿತ್ತು. ಭಾರತದಲ್ಲಿರುವ ಕ್ರಿಶ್ಚಿಯನ್ ಧರ್ಮ ಪ್ರಚಾರಕ ಸಂಸ್ಥೆಗಳು ಖಿಖಅಐಈನ ಪ್ರೀತಿಪಾತ್ರ ಸಂಸ್ಥೆಗಳೆಂದು ಅಮೆರಿಕದ ಹಲವು ಪ್ರಮುಖ ನಾಯಕರು ಅನೇಕ ಸಲ ಹೇಳಿದ್ದಾರೆ. ಖಿಖಅಐಈನ ಬೆಂಬಲ ಪಡೆಯುತ್ತಿರುವ ಭಾರತದ ಕೆಲವು ಪ್ರಮುಖ ಸಂಸ್ಥೆಗಳೆಂದರೆ, ಕ್ಯಾಥೊಲಿಕ್ ರಿಲೀಫ್ ಸರ್ವೀಸಸ್, SHARAN, YWCA, ವರ್ಲ್ಡ್ ವಿಷನ್, ಸಾಲ್ವೇಷನ್ ಆರ್ಮಿ, ಸಂತ ಮೇರಿ ಆಸ್ಪತ್ರೆ. ಸುನಾಮಿಯ ಸಂದರ್ಭ ದಲ್ಲಿ USAID ಈ ಭಾರತದಲ್ಲಿ ವರ್ಲ್ಡ್ ವಿಷನ್ ಸಂಸ್ಥೆಯ ಜತೆ ಕೈಜೋಡಿಸಿತ್ತು. ಈ ಸಂಸ್ಥೆಗಳು ಅಸಹಾಯಕತೆಯನ್ನು ಬಳಸಿ ಕೊಂಡು ಸೇವೆಯ ಹೆಸರಿನಲ್ಲಿ ಮತಪ್ರಚಾರಕ್ಕೆ ವ್ಯಯ ಮಾಡುತ್ತಿದ್ದ ಹಣವು ಖಿಖಅಐಈ ಮೂಲಕ ಬರುತ್ತಿತ್ತೆಂದರೆ ತಪ್ಪಾಗ ಲಾರದು.

ಅಮೆರಿಕ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರೆ ದೇಶಗಳಿಗೆ ಸಹಾಯ ಮಾಡುವ ಮನಸ್ಸಿದ್ದರೆ USAID ನ ಮೂಲಕ ತೊಡಗಲು ಬಹಳಷ್ಟು ದಾರಿಗಳಿವೆ. ಆ ದೇಶಗಳ ಸರಕಾರದ ಜತೆ ನೇರವಾಗಿ ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಸರ್ವ ಧರ್ಮಗಳ ಒಳಿತಿಗಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಜತೆ ಕೈಜೋಡಿಸಬಹುದು ಅಥವಾ ಧರ್ಮವನ್ನೂ ಮೀರಿ ನೆರವಾಗುವ ಸಾಮಾಜಿಕ ಸಂಸ್ಥೆಗಳ ಜತೆ ಕೈಜೋಡಿಸಬಹುದು. ಆದರೆ, ಅಮೆರಿಕದಲ್ಲಿರುವ ಕ್ರಿಶ್ಚಿಯನ್ ಧರ್ಮಪ್ರಚಾರಕ ಸಂಸ್ಥೆ ಗಳು ಇದಕ್ಕೆ ಬಿಡುವುದಿಲ್ಲ; ಅವುಗಳ ಉದ್ದೇಶ ಸ್ಪಷ್ಟ, ಅದೆಂದರೆ ನೆರವಿನ ನೆಪದಲ್ಲಿ ಮತಾಂತರ ಮಾಡುವುದು.

ಅಮೆರಿಕದ ಸಂಸತ್ತಿಗೆ ಆಯ್ಕೆಯಾದ ತಮ್ಮವರ ಮೂಲಕ ಹೆಚ್ಚಿನ ಒತ್ತಡ ಹೇರಿ, ತಮ್ಮ ಅಂತಾರಾಷ್ಟ್ರೀಯ ಜಾಲಗಳ ಮೂಲಕವೇ ನೆರವು ನೀಡುವಂತೆ ಇವು ನೋಡಿಕೊಳ್ಳುತ್ತವೆ. ಭಾರತದ ಸಂವಿಧಾನದ ಮೂಲಭೂತ ಹಕ್ಕಿನಲ್ಲಿ, ನಮಗಿಷ್ಟ ಬಂದಂಥ ಧರ್ಮವನ್ನು ಪ್ರಚಾರ ಮಾಡಲು ಅವಕಾಶ ಕಲ್ಪಿಸಿರ ಬಹುದು. ಆದರೆ ಧರ್ಮಪ್ರಚಾರದ ಹೆಸರಿನಲ್ಲಿ ಇತರ ಧರ್ಮಕ್ಕೆ ಧಕ್ಕೆ ತರುವಂಥ ಕೆಲಸವನ್ನು ಮಾಡಬಾರದೆಂದು ಸಂವಿಧಾನ ಹೇಳುತ್ತದೆ. ಆಫ್ರಿಕಾ ಖಂಡದ ಬಹುತೇಕ ಬಡದೇಶಗಳು ಇಂದು ಕ್ರಿಶ್ಚಿಯನ್ ಧರ್ಮಮಯವಾಗಿ ಹೋಗಿವೆ. ಬಡತನ ಮತ್ತು ಸಮಾಜದಲ್ಲಿನ ಜಾತಿ ಆಧರಿತ ಭೇದಭಾವವನ್ನೇ ನೆಪವಾಗಿಸಿಕೊಂಡ ಮಿಷನರಿಗಳು ನೆರವಿನ ಹೆಸರಿನಲ್ಲಿ ಮತಾಂತರ ಮಾಡುತ್ತಾ ಬಂದಿವೆ.

ಇವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ವ್ಯವಸ್ಥಿತ ಜಾಲವನ್ನು ನಿರ್ಮಾಣ ಮಾಡಿಕೊಂಡು, ಪಾಶ್ಚಿಮಾತ್ಯ ದೇಶಗಳ ಮೂಲಕ ಹಣದ ನೆರವನ್ನು ಪಡೆಯುತ್ತವೆ. ಅಮೆರಿಕದ ಖಿಖಅಐಈನ ಬಹುಪಾಲು ನೆರವು ಕ್ರಿಶ್ಚಿಯನ್ ಮತಪ್ರಚಾರದ ಸಂಸ್ಥೆ ಗಳಿಗೆ ಮೀಸಲು. ೨೦೦೬ರ ‘ಕ್ಯಾಥೊಲಿಕ್ ರಿಲೀಫ್ ಸರ್ವೀಸಸ್’ನ ಕಾರ್ಯಕ್ರಮವೊಂದರಲ್ಲಿ USAID ನಿಂದ ಬಂದಂಥ ನೆರವು, ಭಾರತದ ಸುಮಾರು ೧೦ ಲಕ್ಷ ಅತ್ಯಂತ ಹಿಂದುಳಿದ ವರ್ಗದ ದಲಿತರಿಗೆ ವಿವಿಧ ಕಾರ್ಯಕ್ರಮದ ರೂಪದಲ್ಲಿ ಸಿಕ್ಕಿದೆಯೆಂದು ಹೇಳಲಾಗಿತ್ತು.

ಹಣದ ನೆರವಿನ ಮೂಲಕ ಅದೆಷ್ಟು ಬಡ, ಅಮಾಯಕ ದಲಿತರ ಮತಾಂತರವಾಗಿತ್ತೆಂಬ ವಿಷಯ ಮಾತ್ರ ಹೊರಬರಲೇ ಇಲ್ಲ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಪ್ರಮುಖ ಅಂಗಸಂಸ್ಥೆಯಾದ USAID ಈ ನೆರವಿನ ನೆಪದಲ್ಲಿ ಕೇವಲ ಕ್ರಿಶ್ಚಿಯನ್ ಧರ್ಮಪ್ರಚಾರಕ್ಕೆ ಹೆಚ್ಚಿನ ನೆರವು ನೀಡಿದ್ದು ಈ ಸಂಸ್ಥೆಯ ಕಾರ್ಯಕ್ರಮದಿಂದ ಬಹಿರಂಗವಾಗಿತ್ತು. ಪರಿಶಿಷ್ಟ ಪಂಗಡದವರೇ ಹೆಚ್ಚಿರುವ ಜಾರ್ಖಂಡ್ ರಾಜ್ಯದಲ್ಲಿ, EFICOR ಮತ್ತು CRWRC (ಕ್ರಿಶ್ಚಿಯನ್ನರ ಚರ್ಚುಗಳ ಅಭಿವೃದ್ಧಿಗಾಗಿ ಇರುವ ಸಂಸ್ಥೆ) ಸಂಸ್ಥೆಯ ಸಹಯೋಗದಲ್ಲಿ ೨೦೦೮ರಲ್ಲಿ ಪ್ರಾರಂಭವಾದಂಥ ನೂತನ ಯೋಜನೆಯೊಂದಕ್ಕೆ, CRWRC ನೇರ ವಾಗಿ ನೆರವು ನೀಡಿತ್ತು.

CRWRC ಸಂಸ್ಥೆಯು ತಾನು ಚರ್ಚುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಕೆಲಸ ಮಾಡುವ ಸಂಸ್ಥೆಯೆಂದು ಹೇಳಿಕೊಂಡಿದೆ. ಚರ್ಚುಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಸ್ಥೆಗೆ ಪರಿಶಿಷ್ಟ ಪಂಗಡದವರೇ ಹೆಚ್ಚಿರುವ ಜಾರ್ಖಂಡ್ ರಾಜ್ಯದಲ್ಲೇ ಯಾಕೆ ಕೆಲಸ? ಭಾರತದ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಸಂಸ್ಕೃತಿಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸೆಯುವ ಕೆಲಸ ಮಾಡುತ್ತೇವೆಂದು ಹೇಳುವ ಹಲವು ಸಂಸ್ಥೆಗಳಿಗೆ USAID ನ ನೆರವು ದೊರಕಿದೆ. ಅಮೆರಿಕ ದೇಶವು ಭಾರತಕ್ಕೆ ನೇರವಾಗಿ ನೀಡು ತ್ತಿದ್ದಂಥ USAID ನೆರವನ್ನು ೨೦೦೭ರಲ್ಲಿ ಶೇ.೩೫ರಷ್ಟು ಕಡಿತಗೊಳಿಸಿತು.

ಕಾರಣ, ಅಲ್ಲಿ ಕಡಿತಗೊಂಡ ನೆರವುಗಳನ್ನು ಕ್ರಿಶ್ಚಿಯನ್ ಧರ್ಮಪ್ರಚಾರಕ ಸಂಸ್ಥೆಗಳಿಗೆ ನೀಡುವ ಉದ್ದೇಶ. ಬರಾಕ್ ಒಬಾಮ ಅಧಿಕಾರಕ್ಕೆ ಬಂದ ನಂತರ, ಭಾರತೀಯ ಮೂಲದ ರಾಜೀವ್ ಶಾ ಎಂಬ ವ್ಯಕ್ತಿಯನ್ನು USAID ನ ಮುಖ್ಯಸ್ಥನನ್ನಾಗಿ ಮಾಡಿ ದ್ದರು. ಒಬಾಮ ಅದಿಕಾರಕ್ಕೆ ಬಂದ ನಂತರ, ಅಮೆರಿಕ ಪ್ರಾಯೋಜಕತ್ವದ ಧರ್ಮಪ್ರಚಾರದ ನೆರವುಗಳು ಕಡಿಮೆ ಯಾಗುತ್ತ ವೆಂದು ಅನೇಕ ಭಾರತೀಯರು ತಿಳಿದಿದ್ದರು. ಆದರೆ ಒಬಾಮ ಅಧಿಕಾರಕ್ಕೆ ಬಂದ ನಂತರ ಏನಾಯಿತು ಎಂಬುದನ್ನು ಮುಂದಿನ ವಾರದ ಅಂಕಣದಲ್ಲಿ ನಿರೀಕ್ಷಿಸಿ.