ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಅಂತೂ ಇಂತೂ ಉಪೇಂದ್ರ ತಮ್ಮ ಪ್ರಜಾಕೀಯವನ್ನು ಸದ್ಯಕ್ಕೆ ಬದಿಗಿರಿಸಿ ತಮ್ಮ ನಿರ್ದೇಶನದ ಸಿನಿಮಾ ಅನೌ ಮಾಡಿದ್ದಾರೆ ಅನ್ನೋದು ಈಗ ಗಾಂಽನಗರದ
ದೊಡ್ಡ ಸುದ್ದಿ. ಒಂದಷ್ಟು ವರ್ಷ ಬರೀ ನಾಯಕನಾಗಿ ಕೆಲಸ ಮಾಡಿ ಯಾಕೋ ಮಾರ್ಕೆಟ್ ಕಮ್ಮಿ ಆಗ್ತಿದೆ ಅನ್ನಿಸಿದಾಗ ನಿರ್ದೇಶನ ಮಾಡೋದು ಉಪೇಂದ್ರ ಅವರು ಅನುಸರಿಸಿಕೊಂಡು ಬರ್ತಾ ಇರೋ ಟ್ರೆಂಡ್. ಈ ಟ್ರೆಂಡ್ ಪ್ರಕಾರ ಈಗ ಅವರು ನಿರ್ದೇಶಕರಾಗಿ ಹೊಸ ಸಿನಿಮಾ ಮಾಡುವ ಸುದ್ದಿ ಬಂದಿದೆ.
ಅದಕ್ಕೆ ಈಗಾಗಲೇ ಪ್ರೇಕ್ಷಕ ಪ್ರಭುಗಳಿಂದ ಭರ್ಜರಿ ರೆಸ್ಪಾ ಕೂಡ ಬರ್ತಾ ಇದೆ. ಉಪೇಂದ್ರ ಅವರ ಹೊಸ ಸಿನಿಮಾ ಶೀರ್ಷಿಕೆಯಲ್ಲಿ ಎಂದಿನಂತೆ ಈ ಬಾರಿಯೂ ಗಿಮಿಕ್ ಇದ್ದು, ಅದು, ಯು ಮತ್ತು ಐ ಇಂಗ್ಲಿಷ್ ಅಕ್ಷರಗಳ ಮಿಕ್ಸ್ಚರ್ ಆಗಿ ಮೂರುನಾಮದ ಸಂಕೇತದಂತೆ ತೋರುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ವಿವಿಧ ಅರ್ಥಗಳನ್ನು ಕಲ್ಪಿಸಿ ಮಾತನಾಡುತ್ತಿದ್ದಾರೆ. ಹಾಗಾಗಿ ಉಪೇಂದ್ರ ಮತ್ತೆ ಬಾ ಅಂತಿದ್ದ ಅಭಿಮಾನಿಗಳಿಗೆಲ್ಲ ಖುಷಿಯಾಗಿದೆ. ನಿಜ. ಆದರೆ ಎ, ಉಪೇಂದ್ರ ಚಿತ್ರಗಳ ನಂತರ ಉಪೇಂದ್ರ ಅವರು ನಿರ್ದೇಶನ ಮಾಡಿದ್ದು ಅಂದ್ರೆ ಸೂಪರ್ ಮತ್ತು ಉಪ್ಪಿ 2 ಚಿತ್ರಗಳು.
ಸೂಪರ್ ಚಿತ್ರವನ್ನು ಅಭಿಮಾನಿಗಳೆಲ್ಲ ಸೂಪರ್ ಅಂದ್ರು. ಹಾಡುಗಳು ಹಿಟ್ ಆದ್ವು. ಆದ್ರೆ, ಸಿನಿಮಾ ಅಷ್ಟರ ಇತ್ತು. ಅದರ ನಂತರ ಬಂದ ಉಪ್ಪಿ 2 ಅಂತೂ, ಇದು ಉಪೇಂದ್ರ ಸಿನಿಮಾನಾ ಅನ್ನಿಸುವಷ್ಟು ಪೇಲವವಾಗಿತ್ತು. ಈ ಚಿತ್ರದಲ್ಲಿ ಉಪೇಂದ್ರ ಅವರು ಎಲ್ರ ಕಾಲೆಳಿತದೆ ಕಾಲ ಎನ್ನುತ್ತಾ ಮತ್ತೆ ನಾನಾ ನೀನಾ ಅಂದಿದ್ದಷ್ಟೇ ಲಾಭ. ಹಾಗಾಗಿ ನಿಜವಾದ ಸಿನಿ ಪ್ರೇಮಿಗಳಿಗೆ ಉಪೇಂದ್ರ ಅವರ ಮೇಲೆ ಈಗ ಮೊದಲಿನಷ್ಟು ನಿರೀಕ್ಷೆ ಇಲ್ಲ. ಆದರೂ ಈಗಲಾದರೂ ಉಪೇಂದ್ರ ಮತ್ತೆ ಹೊಸರೀತಿಯ ಸಿನಿಮಾ ಕೊಡ್ತಾರೆ, ತಮ್ಮ ನಿರ್ದೇಶನದ ಚಿತ್ರಗಳ ಮೂಲಕ ಪರಭಾಷೆಯ ಚಿತ್ರರಂಗಗಳಿಗೆ ಪಂಗಾ ಕೊಡ್ತಾರೆ ಎಂದುಕೊಂಡವರಿಗೆ ಅದೇ ನೀನು, ನಾನು, ಯೂ, ಐ ಅನ್ನೋ ಪಂಗನಾಮ ಎದುರಾಗಿದೆ. ಖಿ ಮತ್ತು ಐ ಎನ್ನುವ ಅದೇ ಯೂಸರ್ ಇಂಟರ್ ಫೇಸ್ ಬದಲಾಗಲಿ. ಈ ಬಾರಿಯಾದರೂ ಪ್ರೇಕ್ಷಕರಿಗೆ ನಿರಾಸೆ ಆಗದಿರಲಿ.
ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಸಾರ್ ನಿಮ್ಮ ಹುಟ್ಟುಹಬ್ಬದ ದಿನ ನಿಮಗೆ ಮೂರು ಏ ಗಳ ಸೂತ್ರಗಳನ್ನು ಹೇಳಲಾ?
– ಹುಟ್ಟಿದ ಹಬ್ಬನೂ ಸುಳ್ ಹೇಳಿರಬಹುದು ಅಂತ ವಿರೋಧಿಗಳು ಆಡ್ಕೊತಾ ಇದ್ದಾರೆ. ಇದರ ಮಧ್ಯೆ ನಿಮ್ದು ಬೇರೆ, ಸರಿ, ಅದೇನ್ ಹೇಳಿ.
ಏನಿಲ್ಲ ಅದೇ, ಹ್ಯಾಪಿ ಹುಟ್ಟು ಹಬ್ಬ ಅಂತ. ಮೂರು ಏ ಬರುತ್ತಲ್ವಾ, ಅದಕ್ಕೇ ನಿಮ್ಮ ಸ್ಟೈಲಲ್ಲಿ ಹೇಳ್ದೆ.
– ಓಹ್.. ಅಂತೂ ನೀವೂ ನನ್ನ ಸೂತ್ರ ಪಾಲಿಸ್ತೀರಾ?. ಜನ ನನ್ನ ದೇಶದ ಸೂತ್ರಧಾರ ಅನ್ನೋದು ಇದಕ್ಕೇ ಅಂತ ಇವತ್ತು ಗೊತ್ತಾಯ್ತು.
ಸರಿ, ನಿಮ್ಮ ಹುಟ್ಟುಹಬ್ಬಕ್ಕೆ ಯೋಗಿ ಆದಿತ್ಯನಾಥ್ ಏನ್ ಗಿಫ್ಟ್ ಕೊಟ್ರು?
– ಅಯೋ,. ಸುಮ್ನಿರ್ರಿ, ಅವ್ರ್ ವಿಷ್ಯ ಬೇಡ. ಮೊನ್ನೆ ಯಾರೋ ಮಗು ನಾಮಕರಣ ಅಂತ ಕರೆದಿದ್ರೆ ಅಲ್ಲಿ ಹೋಗಿ ಮಗು ಹೆಸರು ಬದಲಾಯಿಸ್ತೀನಿ ಅಂತ ಕೂತಿದ್ರು. ಕೊನೆಗೆ ಯೋಗಿಗಳೇ ಬದಲಾಯಿಸೋಕೆ ಮಗುಗೆ ಇನ್ನೂ ಹೆಸರೇ ಇಟ್ಟಿಲ್ಲ ಸುಮ್ನಿರಿ ಅಂತ ಹೇಳಿ ಸಮಾಧಾನ ಮಾಡಿದೆ.
ಹೋಗ್ಲಿ, ಕೇಕ್ ಆದ್ರೂ ಕಟ್ ಮಾಡಿದ್ರಾ, ಇಲ್ವಾ ?
– ಇಲ್ಲ, ಗೊತ್ತಲ್ಲ, ನಾ ಖಾವೂಂಗಾ, ನಾ ಖಾನೇ ದೂಂಗಾ
ಕೇಕ್ಗೂ ಹಿಂಗಂತೀರಲ್ಲ ಸಾರ್, ಸರಿ, ಹುಟ್ಟಿದ ಹಬ್ಬಕ್ಕೆ ಪಾರ್ಟಿ ಇಲ್ವಾ?
– ಬನ್ನಿ ಟೀ ಕೊಡಿಸ್ತೀನಿ.
ನೆಟ್ ಪಿಕ್ಸ್
ಎಂಜಿನಿಯರಿಂಗ್ ಓದಿದ್ದ ಖೇಮು ಮತ್ತೆ ಸೋಮು ಒಂದ್ ಇಂಟರ್ವ್ಯೂಗೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ
ಖೇಮುಗಂತೂ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿಬಾರಿಯಂತೆ ಈ ಬಾರಿಯೂ ಯಾರು ಮೊದಲು ಒಳಗೆ ಹೋಗಿ ಬರ್ತಾರೋ ಅವರು, ಸಂದರ್ಶನ ಕೊಠಡಿಯಿಂದ ಹೊರಗೆ ಬಂದ ಮೇಲೆ ಅಲ್ಲಿ ಕೇಳಿದ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಹೇಳಬೇಕು ಅಂತ ಕರಾರು ಆಗಿತ್ತು. ಸರಿ ಇಬ್ಬರೂ ಹೋಗಿ ಇಂಟರ್ವ್ಯೂಗೆ ರೆಡಿ ಆಗಿ ಕೂತರು. ಈ ಬಾರಿ ಮೊದಲು ಸೋಮುವನ್ನು ಒಳಗೆ ಕರೆದರು. ಒಳಗೆ ಹೋಗಿ ಕೂತ ಸೋಮುವನ್ನು ಸಂದರ್ಶಕರು ಪ್ರಶ್ನೆ ಮಾಡಲು ಶುರು ಮಾಡಿದರು. ಎಲ್ಲಾ ವೈಯಕ್ತಿಕ ವಿವರಗಳನ್ನು ಕೇಳಿದ ಮೇಲೆ ನಾಲೆಜ್ಡ್ ಬೇಸ್ಡ್ ಪ್ರಶ್ನೆಗಳ ಸರದಿ ಆರಂಭವಾಯಿತು. ಸಂದರ್ಶಕರು ಶುರು ಮಾಡಿದರು.
ಲೈನ್ ಮ್ಯಾನ್
ಒರಿಸ್ಸಾದ ಸಮುದ್ರ ತೀರದಲ್ಲಿ ವಿಷ್ಣುವರ್ಧನ್ ಅವರ ಮರಳಿನ ಮೂರ್ತಿ ನಿರ್ಮಾಣ ಆಗಿದ್ದನ್ನು ನೋಡಿದ ಅಭಿಮಾನಿಗಳ ಮಾತು
-ಇವರು, ಕಡಲ ತೀರದ ಅಭಿನಯ ಭಾರ್ಗವ
ಮೂತ್ರಪಿಂಡದಲ್ಲಿರುವ ಕಲ್ಲು ತೆಗೆಯುವ ಆಪರೇಷನ್ ಮಾಡಿದ ಮೇಲೆ
ರೋಗಿಗೆ ಆಗುವ ಮೂತ್ರ ವಿಸರ್ಜನೆ
-ಸುಸೂತ್ರ
ಭಾರತ ಸರಕಾರ, ಆರ್ಮಿ, ರಾ ಏಜೆಂಟ, ಪಾಕಿಸ್ತಾನ, ಒಂದೆರಡು ವಿಮಾನಗಳು ಇವನ್ನೆ ಒಟ್ಟಾಗಿ ಏನಂತ ಕರೆಯಬಹುದು ?
-ಅಕ್ಷಯ್ ಕುಮಾರ್ ಸಿನಿಮಾ
ಚಿಕ್ಕವಯಸ್ಸಿನಲ್ಲಿ ಚಾಕ್ಲೆಟ್ ಆಸೆಗಾಗಿ ಬಾಲನಟ ಆದವನು ದೊಡ್ಡವನಾದ ಮೇಲೆ ಏನಾಗ್ತಾನೆ?
-ಚಾಕ್ಲೆಟ್ ಹೀರೋ
ಕಂಗನಾ ರಣಾವತ್ನ ತಲೈವಿ ಅವತಾರದಲ್ಲಿ ನೋಡಿ, ನಂಗೆ ಈ ಪಾತ್ರ ಸಿಗಲಿಲ್ಲವಲ್ಲ ಅಂತ ಜೊಲ್ಲು ಸುರಿಸೋ ಹೀರೋಯಿನ್
-ಸಲೈವಿ
ಕಂಗನಾ ರಣಾವತ್ ರ ತಲೈವಿ ಸಿನಿಮಾ ನೋಡಿ ತಮಿಳು ನಾಡಿನ ಜನ ಏನಂತಾರೆ?
-ಮಮ್ಮಿ ರಿಟ
ಕೊಹ್ಲಿ ಟಿ ೨೦ ನಾಯಕತ್ವದಿಂದ ಕೆಳಗಿಳಿದ ಮೇಲೆ, ಮುಂದೆ ಕ್ಯಾಪ್ಟನ್ ಆಗೋಕೆ ರೋಹಿತ್ ಶರ್ಮಾ, ರಾಹುಲ, ರಿಷಬ್ ಪಂತ್, ಯಾರು ಹಿತವರು ನಿಮಗೆ ಈ
ಮೂವರೊಳಗೆ ಅಂದ್ರೆ ಅದಕ್ಕೆ ಉತ್ತರ?
-ರೋಹಿತ ಶರ್ಮಾ
ಹೇಳಿದ್ದನ್ನೇ ಹೇಳಿ ಬೋರ್ ಹೊಡೆಸುವ ಸಿನಿಮಾ
-ಕೊರಿಯನ್ ಸಿನಿಮಾ
ಚಾನಲ್ಗಳಲ್ಲಿ ಹರಿಯುವ ನೀರಿಗೆ ಇರುವ ಗುಣ
-ಚನಲಶೀಲತೆ
ದುಬೈ ದೊರೆಗಳ ಹತ್ರ ಬಂಗಾರದ ಕಾರಿದೆಯಂತೆ
-ಉಜ್ಜಿಕೊಂಡು ಹೋದವನಿಗೂ ಲಾಭ
ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಟ್ರೈನ್ನ ಕಂಪಾರ್ಟ್ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ?
– ನಾನಿರುವ ಕಂಪಾರ್ಟ್ಮೆಂಟ್ನ ಕಿಟಕಿ ತೆಗೀತೀನಿ
ಸರಿ, ಈಗ ಕಿಟಕಿಯ ವಿಸ್ತೀರ್ಣ 1.5 ಸ್ಕಯರ್ ಮೀಟರ್ ಅಂದುಕೊಳ್ಳೋಣ. ಕಂಪಾರ್ಟ್ಮೆಂಟ್ನ ವಾಲ್ಯೂಮ್ 12 ಮೀಟರ್ ಕ್ಯೂಬ್ ಇದೆ, ಟ್ರೈನ್ ಗಂಟೆಗೆ 80
ಕಿಲೋಮೀಟರ್ ವೇಗದಲ್ಲಿ ಉತ್ತರಮುಖವಾಗಿ ಚಲಿಸುತ್ತಿದೆ. ಗಾಳಿ ದಕ್ಷಿಣದ ಕಡೆಯಿಂದ 5 ಕಿಮೀ ವೇಗದಲ್ಲಿ ಬೀಸುತ್ತಿದೆ. ಹಾಗಾದ್ರೆ, ನೀವು ಕಿಟಕಿ ತೆಗೆದ ಮೇಲೆ ಕಂಪಾರ್ಟ್ಮೆಂಟ್ ಕೂಲ್ ಆಗೋಕೆ ಎಷ್ಟು ಹೊತ್ತು ಬೇಕು?
-ಸೋಮುಗೆ ಪಿತ್ತ ನೆತ್ತಿಗೇರಿ, ಇದಕ್ಕಿಂತ ಕೆಲಸ ಕೊಡಲ್ಲ ಅಂತ ನೇರವಾಗಿ ಹೇಳಿ ಅಂತ ಬೈಯ್ದು ಎದ್ದು ಬಂದ. ಹೊರಗೆ ಬಂದ ಸೋಮು ಮುಖ ನೋಡಿದ ಖೇಮುಗೆ ಗಾಬರಿ ಆಯ್ತು. ಆದ್ರೂ ಏನ್ ಪ್ರಶ್ನೆ ಕೇಳಿದ್ರು ಅಂದಿದ್ದಕ್ಕೆ ಸೋಮು ಅವರು ಕೇಳಿದ ಪ್ರಶ್ನೆ ಹೇಳಿದ. ಖೇಮು ಅದಕ್ಕೆ ಉತ್ತರ ಏನು ಅಂತ ಹುಡುಕಿ ಕೊಳ್ಳುವಷ್ಟರಲ್ಲಿ ಒಳಗಿನಿಂದ ಅವನಿಗೆ ಕರೆ ಬಂತು. ಒಲ್ಲದ ಮನಸ್ಸಿನಿಂದಲೇ ಖೇಮು ಒಳಗೆ ಹೋದ. ಮಾಮೂಲಿ ಪ್ರಶ್ನೆಗಳ ಸರದಿ ಮುಗಿಯಿತು. ಆಕ್ಟುವಲ್ ಪ್ರಶ್ನೆಗಳು ಶುರುವಾದ್ವು.
ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಟ್ರೈನ್ನ ಕಂಪಾರ್ಟ್ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ?
ನಾನು, ನನ್ನ ಕೋಟ್ ಬಿಚ್ತೀನಿ
ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?
ನಾನು, ನನ್ನ ಶರ್ಟ್ ಬಿಚ್ತೀನಿ
ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?
ಪ್ಯಾಂಟ್ ಬಿಚ್ತೀನಿ
ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?
ಅವ್ನಜ್ಜಿ ಅದೇನಾರಾ ಆಗ್ಲಿ, ಬೇಕಿದ್ರೆ ಚಡ್ಡಿನೂ ಬಿಚ್ತೀನಿ. ಆದ್ರೆ ಆ ಕಿಟಕಿ ಮಾತ್ರ
ತೆಗೆಯಲ್ಲ