Friday, 13th December 2024

ಈಶ್ವರಪ್ಪ ಅಲ್ಲಾ ಮೇರೆ ನಾಮ್

ತುಂಟರಗಾಳಿ

ಸಿನಿಗನ್ನಡ

ಕರೋನಾ ಲಾಕ್‌ಡೌನ್ ಸಮಯದಲ್ಲಿ ತಾವು ಕೆಲಸ ಮಾಡ್ತಾ ಇರೋ ಊರಿಂದ ತಮ್ಮ ಸ್ವಂತ ಊರುಗಳನ್ನು ತಲುಪೋ ಪ್ರಯತ್ನದಲ್ಲಿ ಅನೇಕ
ಸಾಮಾನ್ಯರ ಜೀವನ ಬ್ರೇಕ್ ಡೌನ್ ಆಗಿತ್ತು. ಆ ಕಥೆ ಇಟ್ಕೊಂಡು ಸಿನಿಮಾ ಮಾಡಿ ತಮ್ಮ ಗುರಿಯನ್ನಂತೂ ತಲುಪಿದ್ದಾರೆ ಉತ್ಸವ್. ಹಾಗೆ ನೋಡಿದರೆ
ಇದು ಕಥೆ ಅಲ್ಲ. ವಾಸ್ತವ. ಕರೋನ ಎಂಬ ಶಾಪದ ಜೊತೆ ಸರಕಾರ ಕೂಡಾ ಲಾಕ್ ಡೌನ್ ಅನ್ನೋ ಶಾಕ್ ಕೊಟ್ಟ ನೈಜ ಕಥೆಯನ್ನು ಅಷ್ಟೇ ನೈಜವಾಗಿ
ಫೋಟೋಶಾಪ್ ಮಾಡದೇ ಜನರ ಮುಂದಿಟ್ಟಿದ್ದಾರೆ ನಿರ್ದೇಶಕ ಉತ್ಸವ್.

ಫೋಟೋ ಚಿತ್ರದಲ್ಲಿ ಜೀವನದ ನೈಜ ಚಿತ್ರಣ ಇರೋದ್ರಿಂದ ಇದನ್ನ ಲೈಫ್ ಸೈಜ್ ಫೋಟೋ ಅಂತನೂ ಹೇಳಬಹುದು. ಗೋಡೆಯ ಮೇಲೆ ನೇತು ಹಾಕುವ ಫೋಟೋನ ಕಥೆ ಹೇಳೋಕೆ ಬಳಸಿಕೊಂಡಿದ್ದರೂ ಉತ್ಸವ್ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಿರೂಪಣೆ ಮಾಡದೆ ತಮಗೆ ಹೇಳಬೇಕಾಗಿದ್ದುದನ್ನು ನೇರವಾಗಿಯೇ ಹೇಳಿದ್ದಾರೆ. ಸದ್ಯಕ್ಕೆ ಇದು ಚಿಕ್ಕ ಪಾಸ್ ಪೋರ್ಟ್ ಸೈಜ್ ಫೋಟೋ. ಆದಷ್ಟು ಬೇಗ ಪಾಸ್ ಪೋರ್ಟ್ ತಗೊಂಡು ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಕಟ್‌ಔಟ್ ಸೈಜ್‌ಗೆ ಬೆಳೆಯುವ ತಾಕತ್ತಿರೋ ಫೋಟೋ ಇದು.

ಈ ಸಿನಿಮಾದ ಸಿನಿಮಾದ ಹೆಸರು ಫೋಟೋ ಆದ್ರೂ ಇದರಲ್ಲಿ ನೆಗೆಟಿವ್ ಅಂಶಗಳು ಇಲ್ಲ. ತಮ್ಮ ಕ್ಯಾಮೆರಾದಲ್ಲಿ ಒಳ್ಳೆ ಐಎಸ್‌ಒ ಸೆಟ್ಟಿಂಗ್ ಮಾಡ್ಕೊಂಡು ನಮ್ಮ ನಡುವೆ ನಡೆದ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದಾರೆ ಉತ್ಸವ್. ಒಟ್ಟಾರೆ ಹೇಳೋದಾದ್ರೆ, ನಿಮ್ಮ ಬಳಿ ಜಗತ್ತಿನ ಅತ್ಯುತ್ತಮ ಸಿನಿಮಾಗಳ ಕಲೆಕ್ಷನ್ ಇದ್ರೆ, ಅದರಲ್ಲಿ ಫೋಟೋ ಫ್ರೇಮ್ ಹಾಕಿಸಿ ಇಟ್ಟುಕೊಳ್ಳಬೇಕಾದಂಥ ಚಿತ್ರ ಫೋಟೋ. ಜೊತೆಗೆ ನಮ್ಮಲ್ಲಿ ಮಾನವೀಯತೆ ಇನ್ನೂ ಬದುಕಿದೆಯಾ ಅಂತ ಟೆ ಮಾಡಿಕೊಳ್ಳಬೇಕು ಅಂದ್ರೆ ಈ ಸಿನಿಮಾವನ್ನ ಒಮ್ಮೆ ನೋಡಿದ್ರೆ ಸಾಕು. ಸಾಯೋದ್ರೊಳಗೆ ಓದಲೇಬೇಕಾದ ಪುಸ್ತಕ, ನೋಡಲೇಬೇಕಾದ ಸಿನಿಮಾಗಲು ಅಂತ ಹೇಳೋದನ್ನ ನೀವು ಕೇಳಿರ್ತೀರಿ. ಅದೇ ಭಾಷೆಯಲ್ಲಿ ಹೇಳೋದಾದ್ರೆ, ಗೋಡೆ ಮೇಲಿನ ಫೋಟೋ ಆಗೋದ್ರೊಳಗೆ ನೋಡಲೇಬೇಕಾದ ಸಿನಿಮಾಗಳ ಪೈಕಿ ಪೋಟೋ ಕೂಡಾ ಒಂದು.

ಈಶ್ವರಪ್ಪ

ಏನ್ ಸಾರ್, ಅಂತೂ ಇಂತೂ ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿ ಆಗ್ತಾ ಇದ್ದೀರಲ್ಲ?
-ಹೌದ್ರೀ ಮೋದಿ ಶೈಲಿಯ ಹೇಳೋದಾದ್ರೆ, ಇಂಡಿಪೆಂಡೆಂಟ್ ನೇಷನ್, ಇಂಡಿಪೆಂಡೆಂಟ್ ಕ್ಯಾಂಡಿಡೇಟ್

ಆದ್ರೂ ಬಿಜೆಪಿಯರು ನಿಮ್ಮಂಥ ಹಿಂದೂ ಹುಲಿಗೇ ಟಿಕೆಟ್ ಕೊಡ್ಲಿಲ್ಲವಲ್ಲ?
– ಸಲ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿ ಮಾಡದೇ ಇದ್ರೆ. ಈಶ್ವರಪ್ಪ ‘ಅಲ್ಲಾ’ ಮೇರೆ ನಾಮ್ ಅಂತ ಹೇಳಿದ್ದೆ. ಅದನ್ನ ಹೈಕಮಾಂಡ್‌ನವರು ಆ ಅ ಅಂತ ತಪ್ಪು ತಿಳ್ಕೊಂಡಿದ್ದಾರೆ ಅನ್ಸುತ್ತೆ.

ಯಾ ಅಲ್ಲಾ, ಕರಿಮಣಿ ಮಾಲಿಕ ನೀನಲ್ಲ ಥರ. ಸರಿ, ಒಟ್ಟಿಗೆ ಬಿಜೆಪಿ ಟಿಕೆಟ್ ಮಾಲೀಕ ನೀವಲ್ಲ ಅಂತ ಅಂದ್ರೂ ನರೇಂದ್ರ ಮೋದಿನ
ಎದುರು ಹಾಕ್ಕೊಳ್ಳೋಕೆ ರೆಡಿ ಇಲ್ವಲ್ಲ ನೀವು. ಇನ್ನೂ ಅವರ ಬಗ್ಗೆ ಸಾ- ಆಗೇ ಮಾತಾಡ್ತೀರ?
-ಮತ್ತಿನ್ನೇನ್ರಿ, ಮೋದಿನ ಎದುರು ಹಾಕ್ಕೊಬೇಕು ಅಂತ ಹೋಗಿ ಮೋದಿ ಎದುರು ಎಲೆಕ್ಷನ್ನಿಗೆ ನಿಂತ್ಕೊಬೇಕಾಗಿತ್ತಾ?

ಅದೂ ಸರಿನೇ ಬಿಡಿ, ನಿಮಗೇನೋ ಒಂದ್ ವ್ಯವಸ್ಥೆ ಆಯ್ತು, ನಿಮ್ಮ ಮಗನ ಕಥೆ ಏನು?
-ನಂಗೂ ಅದೇ ಚಿಂತೆ. ಕಾಂತೇಶನ ಭವಿಷ್ಯ, ಸದ್ಯಕ್ಕೆ ಕಾಣ್‌ತೈತೆ, ಆದ್ರೆ ಕಾಣಕಿಲ್ಲ ಅನ್ನೋ ಥರ ಆಗಿದೆ.

ಆದ್ರೆ, ನೀವು ಮತ್ತು ಬಿಜೆಪಿ ಕ್ಯಾಂಡಿಡೇಟ್ ಮಧ್ಯೆ ಓಟ್ ಶೇರ್ ಆದ್ರೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಹೆಲ್ಪ್ ಆಗಲ್ವೇ?
-ಏನ್ ಮಾಡೋದು, ಬಿಜೆಪಿಯ ಭಗವದ್ಗೀತಾ ಗೆಲ್ಲಬೇಕು ಅಂದ್ಕೊಂಡಿದ್ದೆ. ಆದ್ರೆ, ನಮ್ಮ ಜಗಳದಿಂದ ಗೀತಾ ಗೆದ್ರೆ ನಾನೇನ್ ಮಾಡ್ಲಿ?
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ರಾಮು, ಸೋಮು, ಖೇಮು ಸಿಬಿಐ ಇಂಟವ್ಯೂಗೆ ಹೋಗಿದ್ದರು. ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲದ ಮೂವರೂ ಹೊರಗೆ ಕೂತಿದ್ದರು. ಸ್ವಲ್ಪ ಹೊತ್ತಿನ ರಾಮು ಸರದಿ ಬಂತು. ಒಳಗೆ ಹೋದ ರಾಮುಗೆ ಕಂಪ್ಯೂಟರ್‌ನಲ್ಲಿ ಒಬ್ಬ ಶಂಕಿತ ಉಗ್ರಗಾಮಿಯ ಫೋಟೋ ತೋರಿಸಿದ ಸಂದರ್ಶಕರು ಈ ಫೋಟೋದಿಂದ ನಿಮಗೆ ಏನಾದರೂ ಕ್ಲ್ಯೂ ಸಿಗುತ್ತಾ? ಅಂತ ಕೇಳಿದ್ರು. ರಾಮು ಒಂದರೆಕ್ಷಣ ಯೋಚಿಸಿ, ಇವನಿಗೆ ಬಲಗಾಲೇ ಇಲ್ಲ ಅಂದ, ಸಂದರ್ಶಕರು ಯಾಕೆ? ಅಂತ ಕೇಳಿದಾಗ ರಾಮು ಹೇಳಿದ, ನೋಡಿ ಫೋಟೋದಲ್ಲಿ ಅವನ ಎಡಗಾಲು ಮಾತ್ರ ಕಾಣುತ್ತಿದೆ.

ಬಲಗಾಲು ಕಾಣುತ್ತಿಲ್ಲ ಅಂದ. ಸಿಟ್ಟಿಗೆದ್ದ ಸಂದರ್ಶಕರು, ಅಯ್ಯೋ ನಿನ್ನ, ಅವನು ಎಡಕ್ಕೆ ತಿರುಗಿ ನಿಂತಿದಾನೆ ಅದಕ್ಕೆ ಬಲಗಾಲು ಕಾಣ್ತಾ ಇಲ್ಲ ಅಷ್ಟೆ, ನಡಿ ಮನೆಗೆ ಅಂತ ಕಳಿಸಿದರು. ನಂತರ ಸೋಮು ಸರದಿ ಬಂತು. ಅವನಿಗೂ ಅದೇ ಫೋಟೋ ಅದೇ ಪ್ರಶ್ನೆ. ಎಷ್ಟೇ ಆದರೂ ಸ್ನೇಹಿತರಲ್ಲವೇ. ಹಾಗಾಗಿ
ಸೋಮು ಉತ್ತರ ಕೂಡ ಅದೇಆಗಿತ್ತು.ಮತ್ತು ಸಂದರ್ಶಕರಿಂದ ಅದೇ ಬೈಗುಳ ಸಿಕ್ಕಿತು. ಕೊನೆಯದಾಗಿ ಖೇಮುವನ್ನು ಕರೆಸಿದರು. ಅವನಿಗೂ ಅದೇ ಫೋಟೋ, ಅದೇ ಪ್ರಶ್ನೆ. ಖೇಮು ಒಂದರೆಕ್ಷಣ ಯೋಚಿಸಿ ಈತ ಮರದ ಕಾಲು ಹಾಕ್ಕೊತಾನೆ ಅಂದ. ಸಂದರ್ಶಕರಿಗೆ ಅಚ್ಚರಿ, ಇದು ಒಂದ್ ನಿಮಿಷ ಅಂತ ಆ ಉಗ್ರಗಾಮಿಯ ಪ್ರೊಫೈಲ್ ಚೆಕ್ ಮಾಡಿ ನೋಡಿದರು. ಖೇಮು ಹೇಳಿದ್ದು ಸರಿ ಇತ್ತು. ಸಂದರ್ಶಕರು ಫುಲ್ ಇಂಪ್ರೆಸ್ ಆಗಿ, ಅದು ಹೇಗೆ ನಿಮಗೆ ಅವನು ಮರದ ಕಾಲು ಹಾಕ್ಕೊತಾನೆ ಅಂತ ಗೊತ್ತಾಯ್ತು? ಅಂತ ಕೇಳಿದ್ರು. ಅದಕ್ಕೆ ಖೇಮು ತಣ್ಣಗೆ ಹೇಳಿದೆ, ಆ ಫೋಟೋ ನೋಡಿ, ಅವನಿಗೆ ಬಲಗಾಲೇ ಇಲ್ಲ, ಆದ್ರೂ ಅವನು ಎಲ್ಲಾ ಕಡೆ ಓಡಾಡಿಕೊಂಡು ಉಗ್ರಗಾಮಿ ಕೆಲಸ ಮಾಡ್ತಾನೆ ಅಂದ್ರೆ ಅವನು ಮರದ ಕಾಲು ಹಾಕ್ಕೋತಿರ್ಬೇಕು ಅಂತಗೆಸ್ ಮಾಡಿದ್ದೆ.

ಲೈನ್ ಮ್ಯಾನ್
ಪುನೀತ್ ರಾಜ್ ಕುಮಾರ್ ಅವರ ಜಾಕಿ ಚಿತ್ರ ಮರುಬಿಡುಗಡೆಯ ದಿನ ಅವರ ಅಭಿಮಾನಿಗಳು ಏನಂತ ಕೂಗಿದ್ರು?
-‘ಜಾಕಿ’ಸ್ತಾನ್ ಜಿಂದಾಬಾದ್

ಶಿವಣ್ಣ ತಮ್ಮ ಸ್ವಂತ ಬ್ಯಾನರ್‌ನಲ್ಲಿ ಮಾಡೋ ಸಿನಿಮಾನ ಏನಂತಾರೆ?
-‘ಓಂ’ ಪ್ರೊಡಕ್ಷನ್

ಸೋಲೋ ಪಂದ್ಯ ಗೆದ್ದ ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯೂಪಿಎಲ್ ಫೈನಲ್‌ಗೆ
-Rcb ಗೆ ಯಾವಾಗ್ಲೂ ಕೈಯಿಗ್ ಬಂದಿದ್ದು ಬಾಯಿಗೆ ಬರ್ತಾ ಇರ್ಲಿಲ್ಲ. ಬರೀ ‘ಬಾಯಿಗೆ ಬರ್ತಾ ಇತ್ತು’. ಮೊನ್ನೆ ಕೈ ಜಾರಿದ ಲಡ್ಡು ತಾನೇ ಬಂದು ಬಾಯಿಗೆ ಬಿತ್ತು.

ಎಂಪಿ ಟಿಕೆಟ್ ಸಿಗದ ಸಿಟ್ಟಿನಲ್ಲಿ ಮಾತಾಡುತ್ತಿರುವ ಪ್ರತಾಪ್ ಸಿಂಹ ಈಗ
-ಉಗ್ರ ಪ್ರತಾಪ

ಕರ್ನಾಟಕದ ಪೊಲಿಟಿಕ್ಸ್‌ನಲ್ಲಿ ಸುದ್ದಿಯಲ್ಲಿರುವ ಸಾಹಿತ್ಯ ಪ್ರಕಾರಗಳು
-ಸಿದ್ದರಾಮಯ್ಯನ ‘ವಚ’ನ, ಕುಮಾರಸ್ವಾಮಿ ರಗಳೆ

ಕಡಿಮೆ ಕೂದಲು ಇರುವವರನ್ನು ಏನೆನ್ನಬಹುದು?
-‘ಲೋ’ಕೇಶ

ತಿನ್ನುವ ವಸ್ತುಗಳನ್ನು ಬಳಸಿ ದೇವರಿಗೆ ಹಾಕುವ ನಿಂಬೆಹಣ್ಣಿನ ಹಾರ, ಏಲಕ್ಕಿ ಹಾರಗಳನ್ನು ಏನಂತಾರೆ?
-ಆಹಾರ

ಕನ್ನಯ್ಯನನ್ನು ಮಟ್ಟ ಹಾಕಲು ಮಾಡುವ ಹೋರಾಟ
-‘ಮಿಷನ್’ ಕನ್ನಯ್ಯ

ಬ್ಯಾಂಕುಗಳ ಸಾಲ ತೀರಿಸಲುಸಾಧ್ಯವಾಗದೆ ತಪ್ಪಿಸಿಕೊಂಡು ಓಡಾಡುತ್ತಿರುವ ಮಲ್ಯ ಕಿಂಗ್ ಫಿಶರ್‌ಗೆ ಹೊಸ ಹೆಸರು ಇಟ್ರೆ, ಹೆಸರುಗಳು ಹೇಗಿರುತ್ವೆ?
-ಜಾನಿ ‘ಫೈಯರ್’
-ಓಲ್ಡ್ ‘ಬ್ಯಾಂಕ್’
-‘ಲೆಂಡರ್ಸ್’ ಪ್ರೈಡ್ -‘ಆಂಟಿ’ ಕ್ಯೂಟಿ (ಸದ್ಯಕ್ಕೆ ಹುಡುಗಿಯರನ್ನ ಅಫೊರ್ಡ್ ಮಾಡೋಕಾಗಲ್ಲ ಅದಕ್ಕೆ)