Thursday, 12th December 2024

ವ್ಯಾಕ್ಸಿನೇಶನ್: ಭಾರತದಿಂದ ಕಲಿತ ಪಾಠಗಳು

Vaccination

ಜಾಗತಿಕ ಸಾಧನೆ

ತಾರಿಕ್ ಮನ್ಸೂರ‍್

vinaykhan078@gmail.com

ಭಾರತದಲ್ಲಿನ ವ್ಯಾಕ್ಸಿನೇಶನ್ ಪ್ರಮಾಣ ವಿಶ್ವದಲ್ಲೇ ಅತಿ ಹೆಚ್ಚು. ಕಡಿಮೆ ಸಮಯದಲ್ಲಿ ಗುರಿಮುಟ್ಟಿರುವುದು ಇನ್ನೊಂದು ವಿಶೇಷ. ಪೋಲಿಯೋ ಸೇರಿ ಅನೇಕ ಬಗೆಯ ಚುಚ್ಚುಮದ್ದುಗಳ ನೀಡಿಕೆಯಲ್ಲಿ 100 ಕೋಟಿಯ ಗುರಿಮುಟ್ಟುವುದಕ್ಕೆ 2 ದಶಕಗಳೇ ಬೇಕಾಗಿದ್ದವು.

ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕಿತರ ಅಂಕಿ-ಸಂಖ್ಯೆಗಳು ಇಳಿಮುಖವಾಗುತ್ತಿರು ವುದು ಕಂಡುಬಂದಿದೆ. ಈ ಕುರಿತಾಗಿ ಆಶಾ ಭಾವ ವನ್ನೋ ಆತ್ಮತೃಪ್ತಿಯನ್ನೋ ನಿರ್ಣಾಯಕವಾಗಿ ಹೊಂದ ಬೇಕಿಲ್ಲ. ಜಾಗತಿಕವಾಗಿ ರೋಗಲಕ್ಷಣಗಳು ಅಷ್ಟೊಂದು ವ್ಯಾಪಕವಾಗಿ ಇಲ್ಲದೇ ಇರುವುದು ಮಹತ್ವ ಪೂರ್ಣ ಬೆಳವಣಿಗೆ.

ಜಾಗತಿಕವಾಗಿ ಕಳೆದ ಎರಡು ತಿಂಗಳುಗಳಲ್ಲಿ ದಿನವಹಿ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಶೇ.30 ಇಳಿಕೆ ಕಂಡಿದೆ. ಪ್ರತಿತಿಂಗಳೂ 1.7 ಕೋಟಿ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು ವಾರಕ್ಕೆ ಐವತ್ತುಸಾವಿರದಷ್ಟು ಮಂದಿ ಸಾವಿಗೀಡಾಗಿದ್ದಾರೆ. ಇದು ಜಾಗತಿಕ ಲೆಕ್ಕಾಚಾರ. ಕರೋನಾ ಹಾವಳಿ ಶುರುವಾದಾಗಿನಿಂದ ಈವರೆಗೆ ೨೫ ಕೋಟಿಗೂ ಅಽಕ ಮಂದಿ ಬಾಽತರಾಗಿದ್ದಾರೆ. ಭಾರತದಲ್ಲಿ ಎರಡನೇ ಅಲೆ ಮತ್ತು ಈಗಿರುವ ಪರಿಸ್ಥಿತಿಯ ತುಲನೆ ಮಾಡಿದರೆ ಆಗಿರುವ ಬದಲಾವಣೆ ನಿಚ್ಚಳವಾಗಿದೆ. ವ್ಯಾಕ್ಸಿನೇಶನ್ ಪ್ರಕ್ರಿಯೆ ಚುರುಕಾಗಿರುವುದರಿಂದ ಬಾಧಿತರ ಸಂಖ್ಯೆ ಇಳಿಮುಖವಾಗಿದ್ದು, ಕೋವಿಡ್ ತಲೆ ಎತ್ತದಂತೆ ಮಾಡಲು ವ್ಯಾಕ್ಸಿನೇಶನ್ ಸೂಕ್ತ ಆಯ್ಕೆ ಎಂಬುದು ಸಾಬೀತಾಗಿದೆ.

ಭಾರತದಲ್ಲಿ ವ್ಯಾಕ್ಸಿನೇಶನ್ ಆಗಿರುವ ಜನರ ಲೆಕ್ಕಾಚಾರ ಪರಿಗಣಿಸಿದರೆ ಒಟ್ಟಾರೆಯಾಗಿ 1144632851 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇದು 2021ರ ನವೆಂಬರ್ 18ರ ತನಕದ ದತ್ತಾಂಶ. ವ್ಯಾಕ್ಸಿನೇಶನ್ ಕಾರ್ಯಕ್ರಮದ ಯಶಸ್ಸು ಗಮನಾರ್ಹವಾಗಿದ್ದು, ಎಲ್ಲ ಅರ್ಹ ನಾಗರಿಕರನ್ನು ವ್ಯಾಕ್ಸಿನೇಶನ್‌ಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ನಡೆದ ಅನ್ವೇಷಣೆ ಕೂಡ ಮಹತ್ವದ್ದಾಗಿದೆ. ಜನಾರೋಗ್ಯದ ದೃಷ್ಟಿಯನ್ನು ಗಮನ ದಲ್ಲಿಟ್ಟು ಹೇಳುವುದಾದರೆ, ಕೋವಿಡ್ ವಿರುದ್ಧ ಗೆಲುವು ಸಾಧಿಸುವಲ್ಲಿ ವ್ಯಾಕ್ಸಿನೇಶನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಸಾರ್ವತ್ರಿಕ ವ್ಯಾಕ್ಸಿನೇಶನ್ ಪ್ರಕ್ರಿಯೆ ಮುಂಬರುವ ದಿನಗಳಲ್ಲಿ ಬರಬಹುದಾದ ಕೋವಿಡ್ ವಿಪತ್ತನ್ನು ಎದುರಿಸುವಲ್ಲಿ ಸಫಲವಾಗುತ್ತದೆ. ಜತೆಗೆ ದೊಡ್ಡ ಪ್ರಮಾಣ ದಲ್ಲಿ ವೈದ್ಯಕಿಯ ಸಂಪನ್ಮೂಲವನ್ನು ಕೋವಿಡ್ ಹೊರತುಪಡಿಸಿದಂತೆ ಬೇರೆ ಶುಶ್ರೂಷೆಗಳು, ಚಿಕಿತ್ಸೆಗಳು, ಶಸಚಿಕಿತ್ಸೆ, ಮಕ್ಕಳ ಆರೋಗ್ಯ ರಕ್ಷಣೆ ಹೀಗೆ ಹಲವು ವಿಧದ ಸಮಸ್ಯೆಗಳಿಗೆ ಆದ್ಯತೆಯೇ ಇಲ್ಲದಂತಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೋವಿಡ್ ನಮ್ಮೆಲ್ಲರಿಗೂ ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದ್ದು, ಕಳೆದ 20 ತಿಂಗಳಿಂದ ನಿರಂತರ ಇದು ನಡೆದು ಬಂದಿದೆ. ಹೇಳಬೇಕೆಂದರೆ ಕೋವಿಡ್ ಹೊರತಾದ ಕಾಯಿಲೆಗಳ ಬಗ್ಗೆ ನಮ್ಮ ಆರೋಗ್ಯ ಕ್ಷೇತ್ರ ಈ 20 ತಿಂಗಳಲ್ಲಿ ಹೆಚ್ಚಿನ ಗಮನ ಹರಿಸದೇ ಇದ್ದದ್ದು ಜನಾರೋಗ್ಯದ ದೃಷ್ಟಿಯಲ್ಲಿ ದೊಡ್ಡ ಹಾನಿಕಾರಕ ಬೆಳವಣಿಗೆಯೂ ಹೌದು.

ಅದೇನೇ ಇರಲಿ ಭಾರತದಲ್ಲಿ ನೂರುಕೋಟಿ ವ್ಯಾಕ್ಸಿನೇಶನ್ ಗಡಿ ದಾಟಿರುವುದು ಶ್ಲಾಘನೀಯ ಕಾರ್ಯ. ಇದನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಈ ಸಾಂಕ್ರಾ ಮಿಕ ರೋಗದ ಹಿನ್ನೆಲೆಯಲ್ಲಿ ಜನಾರೋಗ್ಯದ ಸಮಸ್ಯೆಯನ್ನು ಹೊಸ ಸ್ವರೂಪದಲ್ಲಿ ಒಂದು ಪಾಠವಾಗಿ ಪರಿಗಣಿಸಬೇಕಿದೆ. ಅನಿರೀಕ್ಷಿತ ಸವಾಲುಗಳಿಗೆ ಬಹಳ ವೇಗವಾಗಿ ಪ್ರತಿಕ್ರಿಯಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಮಾನವ ಸಂಪನ್ಮೂಲ ನಿರ್ವಹಣೆಯೊಂದಿಗೆ ಹೊಸ ವಿಚಾರಗಳ ಗೆಲುವು ಅವಲಂಬಿತವಾಗಿರು ವುದು, ಕೃತಕ ಬುದ್ಧಿಮತ್ತೆಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬ ಅಂಶದ ಮೇಲೆ ನಿರ್ಭರವಾಗಿದೆ. ಈ ದಿಸೆಯಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಪ್ರಕ್ರಿಯೆ ಯಲ್ಲಿ ಜನಾರೋಗ್ಯದ ಹಿತದೃಷ್ಟಿಯಡಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆ ಬಹಳ ಪ್ರಮುಖವಾದದ್ದು.

ಕೋವಿನ್ ಆಪ್, ಆರೋಗ್ಯಸೇತು ಮತ್ತು ಯಂಗ್ ಇಂಡಿಯಾ ( ಸರಕಾರದ ಇ-ಗವರ್ನೆನ್ಸ್ ಪ್ಲಾಟಫಾರಂಗಳನ್ನು ತಲುಪಲು) ಇವುಗಳ ಸದ್ಬಳಕೆ ವ್ಯಾಕ್ಸೀನ್
ಪ್ರಕ್ರಿಯೆಯನ್ನು ಜಾಡು ಹಿಡಿಯಲು ಮತ್ತು ಸುಮುಖ ನಿರ್ವಹಣೆ ಮಾಡಲು ನೆರವಾಯಿತು. ಹಾಗಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಜನಾರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವೈದ್ಯಕೀಯ ಸವಲತ್ತುಗಳನ್ನು ಹೇಗೆ ಸುಲಭ ವಿಧಾನದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಸಾಕಾರಗೊಳಿಸಬಹುದು ಎಂಬುದು ಇದೀಗ ಸಾಬೀತಾಗಿದೆ.

ತಂತ್ರಜ್ಞಾನವನ್ನು ಮಾನವಶ್ರಮಕ್ಕೆ ಅನಿವಾರ್ಯ ಪರ‍್ಯಾಯವಾಗಿ ಬಳಸುವುದರ ಹೊರತಾಗಿ ಹೇಗೆ ಸದ್ವಿನಿಯೋಗ ಮಾಡಬಹುದು ಎಂಬುದನ್ನು ಕೂಡ ಇದು
ತೋರಿಸಿಕೊಟ್ಟಿದೆ. ಭಾರತದ ನಿರಂತರ ಚುಚ್ಚುಮದ್ದು ಕಾರ‍್ಯಕ್ರಮ ಕಳೆದ ಹಲವು ವರ್ಷಗಳಲ್ಲಿ ಐದು ವರ್ಷದೊಳಗಿನ 26 ಮಿಲಿಯನ್ ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದೆ. ಮತ್ತು 29 ಮಿಲಿಯನ್ ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲೂ ಅದು ಸಕ್ಷಮವಾಗಿ ಕೆಲಸ ಮಾಡಿದೆ. ಇವೆಲ್ಲದರ ನಡುವೆ ವಯಸ್ಕರಿಗೆ ಚುಚ್ಚುಮದ್ದನ್ನು ವ್ಯಾಪಕವಾಗಿ ದೊಡ್ಡ ಪ್ರಮಾಣದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಕೊಡುವ ಪ್ರಕ್ರಿಯೆ ಯಶಸ್ವಿಯಾಗಿದ್ದು
ಸವಾಲಿನ ಸಂಗತಿ.

ಉತ್ಪಾದನೆಯಿಂದ ಸಾಗಣೆಯ ತನಕ, ಜನರ ಹಿಂಜರಿಕೆಯನ್ನು ಹಿಮ್ಮೆಟ್ಟಿಸಿ ದೇಶದ ಉದ್ದಗಲಕ್ಕೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಾಡಲಾದ ಈ ಕಾರ‍್ಯ ಕ್ರಮ ಒಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಕಾರ‍್ಯದ ಅಗಾಧತೆ ಎಷ್ಟಿತ್ತೆಂದರೆ ಪ್ರತಿ ದಿನಕ್ಕೆ ಸರಾಸರಿ 3.4 ಮಿಲಿಯನ್ ಚುಚ್ಚುಮದ್ದುಗಳನ್ನು ನೀಡ ಲಾಗಿತ್ತು. ಈವರೆಗೆ ಒಟ್ಟಾರೆಯಾಗಿ ಲಸಿಕೆ ಪಡೆದವರಲ್ಲಿ 750 ಮಿಲಿಯ ಜನ ಎರಡು ಡೋಸ್ ಪಡೆದಿದ್ದರೆ, 360 ಮಿಲಿಯನ್ ಜನ ಮೊದಲ ಡೋಸ್ ಪೂರೈಸಿದ್ದಾರೆ. ಒಂದು ಅಂದಾಜಿನಲ್ಲಿ ವಯಸ್ಕ ಜನಸಂಖ್ಯೆಯ ಶೇ.80 ಒಂದು ಬಾರಿ ವ್ಯಾಕ್ಸಿನ್ ಪಡೆದಿದ್ದರೆ ಶೇ.೪೦ ಜನ ಎರಡೂ ವ್ಯಾಕ್ಸೀನ್ ಹಾಕಿಸಿ ಕೊಂಡಿದ್ದಾರೆ. ಈಗಿರುವ ವೇಗವನ್ನು ಗಮನಿಸಿದರೆ 2021ರ ಕೊನೆಯ ಒಳಗಾಗಿ ದೇಶದ ಶೇ.80 ಜನಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಚುಚ್ಚುಮದ್ದು ಪಡೆಯ ಲಿದೆ. ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ಡೆಲ್ಟಾ ರೂಪಾಂತರಿಯನ್ನು ಎದುರಿಸುವಲ್ಲಿ ಜನರಲ್ಲಿ ಸಾಕಷ್ಟು ನಿರೋಧಕ ಶಕ್ತಿ ಸೃಷ್ಟಿಯಾಗಿದೆ ಎಂಬುದು ಕೂಡ ಗಮನಿಸಬೇಕಾದ ಅಂಶ.

ಭಾರತದಲ್ಲಿನ ವ್ಯಾಕ್ಸಿನೇಶನ್ ಕುರಿತಾದ ಅಂಕಿಸಂಖ್ಯೆಗಳು ವಿಶ್ವದಲ್ಲೇ ಅತಿ ಹೆಚ್ಚು. ದೇಶ ಅತ್ಯಂತ ಕಡಿಮೆ ಸಮಯದಲ್ಲಿ ಈ ಸಾಧನೆ ಗುರಿಮುಟ್ಟಿರುವುದು ಇನ್ನೊಂದು ವಿಶೇಷ. ಪೋಲಿಯೋ ನಿರ್ಮೂಲನವೂ ಸೇರಿದಂತೆ ಅನೇಕ ಬಗೆಯ ಚುಚ್ಚುಮದ್ದುಗಳ ನೀಡಿಕೆಯಲ್ಲಿ 100 ಕೋಟಿಯ ಗುರಿಮುಟ್ಟುವುದಕ್ಕೆ ಎರಡು ದಶಕಗಳೇ ಬೇಕಾಗಿದ್ದವು. ಅಚ್ಚರಿ ಎಂಬಂತೆ ಭಾರತದ ಕೋವಿಡ್ ಚುಚ್ಚುಮದ್ದು ಪ್ರಕ್ರಿಯೆಗೆ ವಿಶ್ವಾದ್ಯಂತ ಮೆಚ್ಚುಗೆ ಸಿಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಭಾರತದ ಸಾಧನೆಯನ್ನು ಶ್ಲಾಘಿಸಿದ್ದು ಕೋವಾಕ್ಸ್ ಪೂರೈಕೆಯಲ್ಲಿ ಭಾರತದ ಸಹಕಾರವನ್ನು ಅದು ಕೋರಿದೆ.

ಸಮಾಜದ ಎಲ್ಲ ಸ್ತರದ ಜನರ ಸಹಭಾಗಿತ್ವದಿಂದ ಆಗಿರುವ ಭಗೀರಥ ಪ್ರಯತ್ನ ಇದಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹೇಳಿದ್ದಾರೆ.
ಮುಂದುವರಿದು, ಮಕ್ಕಳಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆಯ ಭಾಗವಾಗಿ ನಾಲ್ಕು ಬಗೆಯ ಚುಚ್ಚುಮದ್ದುಗಳು ಅಂದರೆ ಸೆರಮ್ ಸಂಸ್ಥೆಯ ಕೊವೊವಾಕ್ಸ್, ಬಯೋಲಾಜಿಕಲ್ ಸಂಸ್ಥೆಯ ಕೋಬರ್ ವ್ಯಾಕ್ಸ್, ಸೇರಿದಂತೆ ಭಾರತ್ ತಯೋಟೆಕ್ ಮತ್ತ೫ಉ ಜೈಡಸ್ ಕೆಡಿಲಾ ಸಂಸ್ಥೆಯ ಎರಡು ವ್ಯಾಕ್ಸೀನ್ ಗಳು ಮುಂಚೂಣಿಯಲ್ಲಿವೆ. ಮಕ್ಕಳ ವಿಚಾರಕ್ಕೆ ಬರುವುದಾದರೆ ಕೋವಿಡ್ ಸಂಬಂಽತ ಸಮಸ್ಯೆ ಮಕ್ಕಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಲಕ್ಷಣ
ರಹಿತ ಮತ್ತು ಸೌಮ್ಯ ಲಕ್ಷಣಗಳಿಂದ ಕೂಡಿದೆ. ಹಾಗಾಗಿ ಮಕ್ಕಳಲ್ಲಿ ರೋಗಲಕ್ಷಣದ ನಂತರದ ಸಮಸ್ಯೆಗಳೂ ಕೂಡ ಅಷ್ಟಾಗಿ ಇಲ್ಲ.

ವ್ಯಾಕ್ಸಿನೇಶನ್ ಕಾರ್ಯಕ್ರಮ ಶುರುವಾಗಿ ಭಾರತ ಒಂದು ವರುಷ ಪೂರೈಸುವ ಹಂತದಲ್ಲಿದ್ದು, ಪ್ರತಿಕಾಯಗಳ ಅನುವರ್ತನೆಗೆ ತಕ್ಕಂತೆ ಬೂಸ್ಟರ್ ಡೋಸ್ ಅಗತ್ಯವನ್ನು ನಿರ್ಧರಿಸಬೇಕಾಗಿದೆ. ವಯಸ್ಕರಿಗೆ ವ್ಯಾಕ್ಸಿನೇಶನ್ ಕೊಡುವ ವಿಚಾರದಲ್ಲಿ ನಾವು ತುದಿ ಮುಟ್ಟುವ ಹಂತದಲ್ಲಿದ್ದೇವೆ. ನಾವೆಲ್ಲರೂ ಸೂಕ್ತ ನಡವಳಿಕೆ ಮತ್ತು ನಿಯಮಪಾಲನೆಯ ಮೂಲಕ ವ್ಯಾಕ್ಸಿನೇಶನ್ ನ ಸಕಾರಾತ್ಮಕ ಪರಿಣಾಮಗಳನ್ನು ಬಲಪಡಿಸಬೇಕಿದೆ.