ಅಭಿಮತ
ಡಾ.ಎಚ್.ಎಸ್.ಮೋಹನ್
ಈಗ ಎಡೆ ಕೋವಿಡ್- 19 ವ್ಯಾಕ್ಸೀನ್ ನದ್ದೇ ಸುದ್ದಿ. ಇತ್ತೀಚೆಗೆ ಭಾರತವು 2 ಕೋವಿಡ್ ವ್ಯಾಕ್ಸೀನ್‌ಗಳಿಗೆ ಎಮರ್ಜೆನ್ಸಿ
ಉಪಯೋಗಕ್ಕೆಂದು ಪರವಾನಗಿ ಕೊಟ್ಟದ್ದು ಹೆಚ್ಚಿನ ಎಲ್ಲರಿಗೆ ಗೊತ್ತಿದೆ. ಅದರ ಬಗ್ಗೆ ನಮ್ಮ ರಾಜಕೀಯ ವ್ಯಕ್ತಿಗಳು ಪರ – ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ ಅದನ್ನು ಒಂದು ವಿವಾದ ವಾಗಿ ಪರಿವರ್ತಿಸಿರುವುದು ವಿಷಾದಕರ.
ವ್ಯಾಕ್ಸೀನ್ ಟ್ರಯಲ್‌ನಲ್ಲಿ ಭಾಗಿಯಾಗಿದ್ದ ಒಬ್ಬರು ತಮ್ಮ ಅನುಭವವನ್ನು ಇತ್ತೀಚೆಗೆ ವಿಜ್ಞಾನ ವರದಿಗಾರರೊಂದಿಗೆ ಹಂಚಿ ಕೊಂಡಿದ್ಧಾರೆ. ಅದರ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಈತ ನಥನ್ ರಿಚರ್ಡ್ ಸನ್. ಅಮೆರಿಕದ ಪ್ರೋರಿಡಾದಲ್ಲಿರುವ ಈತ ಫ್ರೆಜರ್ ಬಯೋನ್ ಟೆಕ್ ವ್ಯಾಕ್ಸೀನ್‌ನ 3ನೆಯ ಹಂತದ ಟ್ರಯಲ್‌ನಲ್ಲಿ ಭಾಗಿಯಾಗಿದ್ದ. ಈತ ರೆಡ್ ವೆಂಚರ್ಸ್ ಎಂಬ ಸಂಸ್ಥೆಯ ಸದಸ್ಯ. ಈತನಿಗೆ ಸಂದರ್ಶಕರು ಕೆಲವೊಂದು ಪ್ರೆಶ್ನೆಗಳನ್ನು ಕೇಳಿದರು. ಅದಕ್ಕೆ ಸೂಕ್ತ ಉತ್ತರ ಕೊಟ್ಟಿದ್ಧಾನೆ.
ಮೊದಲ ಪ್ರಶ್ನೆ ಏಕೆ ಆತ ಈ ಟ್ರಯಲ್‌ನಲ್ಲಿ ಭಾಗಿಯಾಗಿದ್ದ? ಉತ್ತರ: ಆತನು ತನ್ನ ಆರಂಭದ ದಿನಗಳಲ್ಲಿ ಶಾಂತಿ ಸೇನೆಯ ರೀತಿಯ ಸಂಸ್ಥೆಯ ಸದಸ್ಯ. ಈ ಮೊದಲು ಅವನು ಇದೇ ರೀತಿಯ ಹಲವು ಪ್ರಾಯೋಗಿಕ ಚಿಕಿತ್ಸೆಗಳ ಅಧ್ಯಯನಗಳಲ್ಲಿ ಭಾಗಿ ಯಾಗಿದ್ದ. ಹಾಗಾಗಿ ಫ್ರೆಜರ್‌ನವರು ತಮ್ಮ ಈ 3ನೆಯ ಟ್ರಯಲ್‌ಗೆ ಸ್ವಯಂ ಸೇವಕರ ಹುಡುಕಾಟದಲ್ಲಿ ತೊಡಗಿರುವ ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಓದಿ, ಅದಾಗಲೇ 15000 ಸ್ವಯಂ ಸೇವಕರನ್ನು ನೋಂದಾಯಿಸಿಕೊಂಡದ್ದು ಆತನ ಗಮನಕ್ಕೆ ಬಂದಿತು.
ಅಷ್ಟು ದೊಡ್ಡ ಕಂಪನಿಯವರು ಒಳ್ಳೆಯ ಒಂದು ಉದ್ದೇಶಕ್ಕೆ ಕೋಟ್ಯಂತರ ಡಾಲರ್ ವ್ಯಯ ಮಾಡುತ್ತಿರುವಾಗ ತನ್ನಂತಹ ವ್ಯಕ್ತಿಗೆ ಕಳೆದುಕೊಳ್ಳಲು ಏನೂ ಇರಲಿಕ್ಕಿಲ್ಲ. ವಿಜ್ಞಾನದ ಈ ಪ್ರಯೋಗದಿಂದ ಜನಾಂಗಕ್ಕೆ ಅನುಕೂಲವಾಗುವುದಾದರೆ ತಾನು ಭಾಗಿಯಾಗುವುದರಿಂದ ಏನು ತೊಂದರೆ? ಎಂಬ ಭಾವನೆಯಿಂದ ತಾನು ಮುಂದೆ ಬಂದೆ ಎಂದು ಅವರ ಅಭಿಪ್ರಾಯ.
ಫ್ರೆಜರ್ ಕಂಪನಿಯವರು ಕಳೆದ ಜುಲೈನಿಂದಲೇ ಈ 3ನೇ ಹಂತದ ಟ್ರಯಲ್‌ಗೆ ಸ್ವಯಂ ಸೇವಕರನ್ನು ನೋಂದಾಯಿಸಲು ಆರಂಭಿಸಿದರು. ನವೆಂಬರ್ ಹೊತ್ತಿಗೆ ಅದು 43000 ಸಂಖ್ಯೆಯನ್ನು ತಲುಪಿತು. ತನ್ನ ಅನುಭವವನ್ನು ನಥನ್ ಅವರು ವಿವರಿಸುತ್ತಾ ಹೋದರು. ಫ್ರೆಜರ್‌ನವರ ವೆಬ್ ಸೈಟ್‌ನಲ್ಲಿ ಇವರು ತಮ್ಮ ಹೆಸರನ್ನು ನೋಂದಾಯಿಸಿದರು. ಅಲ್ಲಿನ ಪ್ರತಿನಿಧಿ ಯೊಬ್ಬರು ಇವರಿಂದ ಅಗತ್ಯವಿರುವ ಮತ್ತಷ್ಟು ಮಾಹಿತಿಯನ್ನು ಪ್ರಿ ಸ್ಕ್ರೀನಿಂಗ್ ಹಂತದಲ್ಲಿ ದೊರಕಿಸಿಕೊಂಡರು.
ಕೆಲವು ವಾರಗಳ ನಂತರ ಅವರಿಗೆ ಟ್ರಯಲ್ ನಡೆಯುವ ಸ್ಥಳಕ್ಕೆ ಬರಲು ತಿಳಿಸಲಾಯಿತು. ಅವರ ಮನೆಯಿಂದ ಅದು ದೂರ ವೇನೂ ಇರಲಿಲ್ಲ. ಹಲವು ಫಾರಂಗಳಿಗೆ ಅವರ ಸಹಿ ತೆಗೆದುಕೊಳ್ಳಲಾಯಿತು. ಕೆಲವು ವಾರಗಳಲ್ಲಿ ಇವರ ಹಿಂದಿನ ಎಲ್ಲಾ ಆರೋಗ್ಯದ ದಾಖಲೆಗಳನ್ನು ದೊರಕಿಸಿಕೊಳ್ಳಲಾಯಿತು. ನಂತರ ವ್ಯಾಕ್ಸೀನ್‌ನ ಮೊದಲ ಡೋಸ್ ಕೊಡುವಾಗ ಹಲವು ರೀತಿಯ ರಕ್ತ ಪರೀಕ್ಷೆ ಮಾಡಿ, ಕೋವಿಡ್ 19 ಬಗ್ಗೆಯೂ ಪರೀಕ್ಷೆ ನಡೆಸಲಾಯಿತು.
ನಂತರ ತುಂಬಾ ಕಡಿಮೆ ತಾಪಮಾನದಲ್ಲಿದ್ದ ವ್ಯಾಕ್ಸೀನ್ ವಯಲ್‌ನ್ನು ಅರ್ಧ ಗಂಟೆ ಹೊರಗಿಟ್ಟು ಸ್ವಲ್ಪ ಮಟ್ಟಿಗೆ ಉಷ್ಣತೆ ಬರಿಸಲಾಯಿತು. ನಂತರ ವ್ಯಾಕ್ಸೀನ್ ಇಂಜೆಕ್ಷನ್ ಕೊಡ ಲಾಯಿತು. ವ್ಯಾಕ್ಸೀನ್‌ನ ಪ್ರತಿಕ್ರಿಯೆ ತಿಳಿಯಲು ಒಂದು ಗಂಟೆ ತನ್ನನ್ನು ಅ ಇರಿಸಿಕೊಂಡು ನಂತರ ಮನೆಗೆ ಕಳಿಸಲಾಯಿತು. ಈ ಎ ಪ್ರಕ್ರಿಯೆ ಪೂರ್ತಿಯಾಗಲು 7 ವಾರಗಳು ಹಿಡಿದವು. ಅಲ್ಲಿನ ಅಧಿಕಾರಿ ಗಳು ಅವರನ್ನು ಮನೆಗೆ ಕಳಿಸುವಾಗ ಮನೆಯ ಕೈಗೊಳ್ಳಬಹುದಾದ ಕೋವಿಡ್ 19 ಟೆಸ್ಟ್ ಕಿಟ್ ಕೊಟ್ಟು ಕಳಿಸಿದರು. ಹಾಗೆಯೇ ಅವರಿಗೆ ಟ್ರಯಲ್ ಮ್ಯಾಕ್ಸ್ ಆಪ್‌ನ್ನು ಫೋನ್‌ಗೆ ಡೌನ್ ಲೋಡ್ ಮಾಡಿಸಿದರು.
ಅದು ವ್ಯಾಕ್ಸೀನ್ ಟ್ರಯಲ ನ್ನು ಮಾನಿಟರಿಂಗ್ ಮಾಡುವ ವ್ಯವಸ್ಥೆ. ಪ್ರತಿವಾರ ಆ ವ್ಯಾಕ್ಸೀನ್‌ನಿಂದ ಏನಾದರೂ ಅಡ್ಡ ಪರಿಣಾಮ ಉಂಟಾಗುತ್ತದೆಯೇ ಎಂದು ಟ್ರಯಲ್ ನಡೆಸಿದ ಅಧಿಕಾರಿಗಳಿಗೆ ತಾವಿರುವ ಸ್ಥಳದಿಂದಲೇ ತಿಳಿದು ಕೊಳ್ಳುವ ಒಂದು ವ್ಯವಸ್ಥೆ.
ಎರಡನೇ ಡೋಸ್: 3 ವಾರದ ನಂತರ ನಥನ್ ರಿಚರ್ಡ್ ಸನ್‌ಗೆ ಪುನಃ ಎರಡನೇ ಡೋಸ್‌ಗಾಗಿ ಟ್ರಯಲ್ ನಡೆಯುವ ಸ್ಥಳಕ್ಕೆ ಬರಲು ತಿಳಿಸಲಾಯಿತು. ಮೊದಲ ಡೋಸ್ ಕೊಡುವಾಗ ಮಾಡಿದ ಹಾಗೇ ಹಲವು ರಕ್ತ ಪರೀಕ್ಷೆ ಮಾಡಿ, ಕೋವಿಡ್ 19 ಪರೀಕ್ಷೆ ಯನ್ನೂ ಮಾಡಲಾಯಿತು. ಅಲ್ಲಿ ಸ್ವಲ್ಪ ಜಾಸ್ತಿ ಸಮಯ ಕಳೆಯಬೇಕಾಗುತ್ತದೆಂದು ನಥನ್‌ರು ಓದಲು ಪುಸ್ತಕ ತೆಗೆದು ಕೊಂಡು ಹೋಗಿದ್ದರು. ಆ ನಂತರ ಹಲವಾರು ಬಾರಿ ಫೈಜರ್ ಸಂಸ್ಥೆಯವರು ಈ ಟ್ರಯಲ್ ಬಗ್ಗೆ ಆಗಾಗ ತಿಳಿಸುತ್ತಲೇ ಇದ್ದರು.
ನಥನ್‌ರಿಗೆ ಈ ಪ್ರಾಯೋಗಿಕವಾದ ವ್ಯಾಕ್ಸೀನ್ ತೆಗೆದುಕೊಳ್ಳುವಾಗ ಅಳುಕು ಉಂಟಾಯಿತೇ ಎಂದು ಪ್ರಶ್ನಿಸಲಾಯಿತು. ಅವರಿಗೆ ಅದಾಗಲೇ ಪ್ರಾಯೋಗಿಕ ಈ ರೀತಿಯ ಪರೀಕ್ಷೆಗಳಲ್ಲಿ ತೊಡಗಿಕೊಂಡದ್ದರಿಂದ ತಮಗೆ ಅಳುಕು, ಅಂಜಿಕೆ ಏನೂ ಆಗಲಿಲ್ಲ ಎಂದು
ನುಡಿದರು. ಅವರಿಗೆ ಫೈಜರ್ ಸಂಸ್ಥೆಯವರು ಕೈಗೊಂಡ ಆ ಟ್ರಯಲ್ ಮಾಡುವ ವೈಜ್ಞಾನಿಕ ರೀತಿ, ಅದಕ್ಕಾಗಿ ಅವರು ಕೈಗೊಂಡ ಕ್ರಮಗಳು ತುಂಬಾ ಸಂತೋಷ ಕೊಟ್ಟಿತು. ಅಲ್ಲದೆ ಫೈಜರ್ ಉಪಯೋಗಿಸುವ ತಾಂತ್ರಿಕತೆಯ ಬಗ್ಗೆಯೂ ಅವರಿಗೆ ಸೂಕ್ತವಾಗಿ ಮೊದಲೇ ತಿಳಿಸಲಾಗಿತ್ತು.
ಹೆಚ್ಚಿನ ವ್ಯಾಕ್ಸೀನ್‌ಗಳಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾದ ಸ್ವಲ್ಪ ಭಾಗವನ್ನು ಉಪಯೋಗಿಸಿ, ಭವಿಷ್ಯದಲ್ಲಿ ಸೋಂಕು ತಗುಲಿದರೆ ಹೇಗೆ? ಅದರಿಂದ ತಪ್ಪಿಸಿಕೊಳ್ಳಬೇಕೆಂದು ದೇಹದ ಪ್ರತಿರೋಧ ವ್ಯವಸ್ಥೆಗೆ ಕಲಿಸಲಾಗುತ್ತದೆ. ಮೆಸೆಂಜರ್ ಆರ್‌ಎನ್‌ಎ ವ್ಯಾಕ್ಸೀನ್ ನಲ್ಲಿ ಸಾರ್ಸ್ ಸಿಓ 2ರ ಸ್ಪೆ ಕ್ ಪ್ರೋಟೀನ್‌ನನ್ನು ಉತ್ಪಾದಿಸುವಂತೆ ಜೀವಕೋಶಕ್ಕೆ ಆದೇಶ ಕೊಡಲಾಗುತ್ತದೆ. ಈ ಮೆಸೆಂಜರ್ ಆರ್‌ಎನ್‌ಎ ಹೊಸ ತಾಂತ್ರಿಕತೆಯ ಮತ್ತು ಅದರ ಸುರಕ್ಷತೆಯ ಬಗ್ಗೆ ಹಲವರಿಗೆ ಹಲವು ರೀತಿಯ ಸಂದೇಹಗಳಿವೆ.
ಈ ಬಗೆಗೆ ಔಷಧ ಶಾಸದ ತಜ್ಞರೂ ಹಾಗೂ ಹೆಲ್ತ ಲೈನ್ ಮೀಡಿಯಾ ಕಂಪನಿಯ ಡ್ರಗ್ ಕಂಟ್ರೋಲ್ ಇಂಟೆಗ್ರಿಟಿ ಮ್ಯಾನೇಜರ್ ಆದ ಲಿಂಡ್ಸೆ ಸ್ಲೋವಿಸ್ಕ್ ತಮ್ಮ ಅಭಿಪ್ರಾಯ ಹೀಗೆ ವ್ಯಕ್ತಪಡಿಸುತ್ತಾರೆ. ಹೆಚ್ಚಿನ ಜನರು ಈಗ ಕೋವಿಡ್ ಸಾಂಕ್ರಾಮಿಕ ಹುಟ್ಟಿ ಕೊಂಡಾಗ ಈ ಎಂಆರ್‌ಎನ್‌ಎ ತಾಂತ್ರಿಕತೆ ಆರಂಭವಾಯಿತು ಎಂದು ಭಾವಿಸಿದ್ಧಾರೆ. ಅದು ಶುದ್ಧ ತಪ್ಪು. ಇದು ಭವಿಷ್ಯದಲ್ಲಿ
ವ್ಯಾಕ್ಸೀನ್ ಉತ್ಪಾದಿಸಲು ಒಂದು ಉತ್ತಮ ತಂತ್ರಜ್ಞಾನ ಎಂದು ಹಲವು ದಶಕಗಳಿಂದ ಅಧ್ಯಯನ ನಡೆಸಲಾಗಿತ್ತು.
ಇತ್ತೀಚಿನ ಇತಿಹಾಸ ಹೇಳುವುದಾದರೆ 2002ರ ಸಾರ್ಸ್ ಮತ್ತು 2012ರ ಮೆರ್ಸ್‌ಗಳ ಸಮಯದಲ್ಲಿ ಇವುಗಳ ಬಗ್ಗೆ ಸಂಶೋಧನೆ ನಡೆದಿದೆ. ಹಾಗಾಗಿ ಈ ತಾಂತ್ರಿಕತೆಯ ಬಗ್ಗೆ ಸಂದೇಹ ವ್ಯಕ್ತಪಡಿಸುವವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲವಷ್ಟೇ ಎಂದು ಅವರು ನುಡಿಯುತ್ತಾರೆ. ಈ ಬಗೆಗೆ ಸಮುದಾಯ ಆರೋಗ್ಯ ಸಂಸ್ಥೆಗಳು, ಸರಕಾರ, ಆರೋಗ್ಯ ಕಾರ್ಯಕರ್ತರು, ವೈದ್ಯರು – ಇದು
ಹೊಸ ತಾಂತ್ರಿಕತೆ ಏನಲ್ಲ. ಬಹಳ ಕಾಲದಿಂದಲೂ ಇದೆ. ಇತ್ತೀಚೆಗೆ ಅದನ್ನು ಬಳಸ ಲಾಗುತ್ತಿದೆ, ಹಾಗಾಗಿ ಹೆಚ್ಚು ಸುದ್ದಿಯಲ್ಲಿಲ್ಲ ಎಂದು ಜನಸಾಮಾನ್ಯರಿಗೆ ತಿಳಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಈ ತಂತ್ರಜ್ಞಾನ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಚಾರಗೊಂಡಿಲ್ಲ. ಅದು ಸಾರ್ಸ್ ಮತ್ತು ಮೆರ್ಸ್ಗಳ ಕಾಲದಲ್ಲಿ ಅಮೂಲಾಗ್ರ ವಾಗಿ ಸಂಶೋಧನೆಗೆ ಒಳಪಟ್ಟಿದ್ದರಿಂದ ಈಗ ವಿಜ್ಞಾನಿಗಳು ಬಹಳ ಬೇಗ ಅಧ್ಯಯನ ಮಾಡಿ ಕೋವಿಡ್ ವ್ಯಾಕ್ಸೀನ್‌ಗೆ ನಿರೀಕ್ಷೆ
ಗಿಂತ ಬೇಗ ಅನ್ವಯಿಸಿ ವ್ಯಾಕ್ಸೀನ್ ಹೊರಬರಲು ಸಾಧ್ಯವಾಯಿತು. ಲಿಂಡ್ಸೆ ಅವರ ಪ್ರಕಾರ ಹೊಸ ರೀತಿಯ ಈ ವ್ಯಾಕ್ಸೀನ್‌ನಿಂದ ಹಲವಾರು ಅಡ್ಡ ಪರಿಣಾಮಗಳು ಬರಬಹುದು ಎಂದು ಬಹಳಷ್ಟು ಜನರು ಹೆದರಿದ್ಧಾರೆ.
ಆ ರೀತಿಯ ಅಭಿಪ್ರಾಯವೇ ತಪ್ಪು. ಮುಖ್ಯವಾಗಿ ಅವರಿಗೆ ಸರಿಯಾದ ಮಾಹಿತಿ ದೊರಕಿಲ್ಲ. ಸರಿಯಾದ ಖಚಿತ ಮಾಹಿತಿಗಳನ್ನು ನಾವು ಒದಗಿಸಬೇಕು. ಮಾಡೆರ್ನಾ, ಫೈಜರ್ ಮತ್ತು ಆಕ್ಸರ್ಡ್ ಆಸ್ಟ್ರಾಜೆನೆಕಾ ವ್ಯಾಕ್ಸೀನ್‌ಗಳ ಸುರಕ್ಷತೆಯ ಬಗ್ಗೆ ಮನದಟ್ಟು ಮಾಡಬೇಕು. ನಿರ್ದಿಷ್ಟ ಅಡ್ಡ ಪರಿಣಾಮಗಳ ಬಗ್ಗೆ ಜನರು ಹೆದರುತ್ತಿಲ್ಲ. ಆದರೆ ಈ ಕೋವಿಡ್ ಸಾಂಕ್ರಾಮಿಕ ತಂದಿತ್ತ ಅನುಮಾನದ ಹುತ್ತಜನರ ಮನದಲ್ಲಿದೆ ಎಂದು ಅವರ ಅಭಿಮತ.
ಅಡ್ಡ ಪರಿಣಾಮಗಳು: ನಥನ್ ರಿಚರ್ಡ್ ಸನ್‌ರಿಗೆ ವ್ಯಾಕ್ಸೀನ್ ನಂತರ ಯಾವುದೇ ಕೆಟ್ಟ ಪರಿಣಾಮಗಳು ಆಗಿಲ್ಲ. ಸ್ವಲ್ಪ ಸಣ್ಣ ಪ್ರಮಾಣದ ತಲೆನೋವು ಮೊದಲ ಡೋಸ್ ನಂತರ ಅನುಭವಕ್ಕೆ ಬಂದಿತ್ತು. ಸ್ವಲ್ಪ ಸಮಯದ ನಂತರ ಕಡಿಮೆಯಾಯಿತು. ಮೊದಲ ಮತ್ತು ಎರಡನೇ ವ್ಯಾಕ್ಸೀನ್ ಡೋಸ್ ಗಳ ನಂತರ ಏನಾದರೂ ವ್ಯತ್ಯಾಸ ಗಮನಕ್ಕೆ ಬಂದಿತಾ ಎಂಬ ಪ್ರೆಶ್ನೆ ನಥನ್ ರಿಚರ್ಡ್ ಸನ್ ರಿಗೆ ಕೇಳಲಾಯಿತು.
ಅವರಿಗೆ ಎರಡು ಡೋಸ್‌ಗಳ ನಂತರ ಏನೂ ವ್ಯತ್ಯಾಸ ಗೊತ್ತಾಗಲಿಲ್ಲ. ಹಾಗೆಂದು ಈ ವ್ಯಾಕ್ಸೀನ್‌ಗಳ ಅಡ್ಡ ಪರಿಣಾಮ ಗಳು ಇಲ್ಲವೆಂದಲ್ಲ. ಸುಮಾರು ಶೇ.80 ಜನರಲ್ಲಿ ವ್ಯಾಕ್ಸೀನ್ ಚುಚ್ಚಿದ ಸ್ಥಳದಲ್ಲಿ ಸ್ವಲ್ಪ ಪ್ರಮಾಣದ ನೋವು ಇರುತ್ತದೆ. ಕೆಲವರಲ್ಲಿ ಸ್ವಲ್ಪ ತಲೆನೋವು ಬರಬಹುದು. ತುಂಬಾ ಅಪರೂಪವಾಗಿ ವಾಂತಿ ಬರುವಂತೆ ಬಾಯಿಯಲ್ಲಿ ಹುಳಿಯ ಅನುಭವ (Nausea ) , ಕೆಲವರಲ್ಲಿ ವಾಂತಿ ಆಗಬಹುದು.
2/3ರಷ್ಟು ಜನರಲ್ಲಿ ಸ್ವಲ್ಪ ಸುಸ್ತು, ವಿವಿಧ ಮಾಂಸಖಂಡಗಳ ನೋವು ಕಾಣಿಸಬಹುದು. ಅವು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ತನ್ನಿಂದ ತಾನೇ ಇಲ್ಲವಾಗುತ್ತವೆ. ಕೆಲವೊಮ್ಮೆ ಒಂದೆರಡು ನೋವು ನಿವಾರಕ ಮಾತ್ರೆಗಳನ್ನು ಕೊಡಬೇಕಾಗ ಬಹುದು. ಈ ವ್ಯಾಕ್ಸೀನ್‌ಗಳ ಸುರಕ್ಷತೆ ಮತ್ತು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬ ಹೆದರಿಕೆ – ಇವೆರಡು ವ್ಯಾಕ್ಸೀನ್‌ಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಿವೆ.
ಈ ತರಹ ವ್ಯಾಕ್ಸೀನ್‌ಗಳ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಹೊಸತೇನಲ್ಲ. ಅಲ್ಲದೇ ಈ ಕೋವಿಡ್ ಸಾಂಕ್ರಾಮಿಕ ಉಂಟುಮಾಡಿದ ಹೆದರಿಕೆಯೂ ಈ ಹೆದರಿಕೆಯ ಜತೆಗೆ ಸಮ್ಮಿಳಿತಗೊಂಡಿದೆ. ಪ್ರೊ. ಡೇನಿಯಲ್ ಫ್ರೀಮನ್‌ರು ಡಿಸೆಂಬರ್ 2020ರ ಸೈಕಲಾಜಿಕಲ್ ಮೆಡಿಸಿನ್ ಜರ್ನಲ್ ನಲ್ಲಿ ಈ ಬಗ್ಗೆ ಒಂದು ಲೇಖನ ಬರೆದಿದ್ದಾರೆ. ಅವರು ಯುನೈಟೆಡ್ ಕಿಂಗ್ಡಮ್‌ನಲ್ಲಿ 5114 ವಯಸ್ಕರಲ್ಲಿ ಸಮೀಕ್ಷೆ ನಡೆಸಿ ಈ ವ್ಯಾಕ್ಸೀನ್‌ಗಳ ಬಗ್ಗೆ ಜನರ ಅಭಿಪ್ರಾಯ ಪಡೆದಿದ್ದಾರೆ.
ಅದರಲ್ಲಿ ಶೇ.72 ಜನರು ವ್ಯಾಕ್ಸೀನ್ ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಶೇ.16 ಜನರು ವ್ಯಾಕ್ಸೀನ್ ತೆಗೆದುಕೊಳ್ಳುವುದಾ ಬಿಡುವುದಾ ಎಂಬ ಸಂದಿಗ್ಧದಲ್ಲಿದ್ದಾರೆ. ಶೇ.13 ಜನರು ತಾವು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿzರೆ.
ಹಾಗಾದರೆ 20ರಲ್ಲಿ ಒಬ್ಬರು ವ್ಯಾಕ್ಸೀನ್ ವಿರುದ್ಧದ ಗುಂಪಿಗೆ ಸೇರಿದವರಾಗಿದ್ದಾರೆ. ಅಮೆರಿಕದಲ್ಲಿ ಕ್ರೈಸರ್ ಕುಟುಂಬ ಪ್ರತಿಷ್ಠಾನ
ಸೆಪ್ಟೆಂಬರ್‌ನಲ್ಲಿ ನಡೆಸಿದ ಇದೇ ತರಹದ ಸಮೀಕ್ಷೆಯಲ್ಲಿ ಶೇ.೬೩ ಜನರು ವ್ಯಾಕ್ಸೀನ್ ತೆಗೆದುಕೊಳ್ಳಲು ಉತ್ಸುಕರಾಗಿದ್ದರೆ, ವಿಜ್ಞಾನಿಗಳು ಇದು ಸುರಕ್ಷಿತ ಎಂದು ಅಭಿಪ್ರಾಯಪಟ್ಟರೆ ತಾವು ತೆಗೆದುಕೊಳ್ಳುವುದಾಗಿ ಮತ್ತಷ್ಟು ಜನರು ಅಭಿಪ್ರಾಯ ಪಟ್ಟಿದ್ದರಿಂದ ಡಿಸೆಂಬರ್ ಹೊತ್ತಿಗೆ ಅದು ಶೇ.೭೧ರಷ್ಟು ಆಯಿತು.
ಭಾರತದಲ್ಲಿ ಅನಧಿಕೃತ ಅಂಕಿಅಂಶಗಳ ಪ್ರಕಾರ ತೆಗೆದುಕೊಳ್ಳುತ್ತೇವೆ ಎನ್ನುವವರ ಸಂಖ್ಯೆ ಸುಮಾರು ಶೇ.೫೫.೫೬ರಷ್ಟು
ಎಂದು ಅಂದಾಜು ಮಾಡಲಾಗಿದೆ. ನಥನ್ ರಿಚರ್ಡ್ ಸನ್‌ರಿಗೆ ವ್ಯಾಕ್ಸೀನ್ ಟ್ರಯಲ್‌ನಲ್ಲಿ ತಾವು ಪ್ಲಾಸಿಬೋ ಗುಂಪಿನಲ್ಲಿ ಇರುವುದಾಗಿ ಸಂದೇಹ ವಿದೆ. ಸಾಮಾನ್ಯವಾಗಿ ವ್ಯಾಕ್ಸೀನ್ ಟ್ರಯಲ್‌ನಲ್ಲಿ ನಿಜವಾದ ವ್ಯಾಕ್ಸೀನ್‌ನನ್ನು ಒಂದು ಗುಂಪಿನ ಜನರಿಗೂ
ಮತ್ತೊಂದು ಗುಂಪಿನ ಜನರಿಗೆ ಪ್ಲಾಸಿಬೋ ( ಔಷಧ ಇಲ್ಲದ ಇಂಜೆಕ್ಷನ್) ಕೊಡಲಾಗುತ್ತದೆ.
೬ ತಿಂಗಳ ನಂತರದ ಭೇಟಿಯಲ್ಲಿ ಫೈಜರ್‌ನವರು ಆ ಬಗ್ಗೆ ಸ್ಪಷ್ಟವಾಗಿ ತಿಳಿಸುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಪ್ಲಾಸಿಬೋ
ಗುಂಪಿನಲ್ಲಿರುವುದು ಆಗ ತಿಳಿದರೆ ಇವರಿಗೆ ವ್ಯಾಕ್ಸೀನ್ ಫೈಜರ್‌ನಿಂದ ಉಚಿತವಾಗಿ ಸಿಗಲಿದೆ. ಸಾಮಾನ್ಯವಾಗಿ ಈ ತರಹದ ಸಾಂಕ್ರಾಮಿಕದ ಸಂದರ್ಭದಲ್ಲಿ ವ್ಯಾಕ್ಸೀನ್ ಟ್ರಯಲ್ ನಡೆದಾಗ ಪ್ಲಾಸಿಬೋ ಗುಂಪು ಅಂತ ಪ್ರತ್ಯೇಕಿಸಿ ಅಮೆರಿಕದ ಎ-ಡಿಎ ನಿಯಮದ ಪ್ರಕಾರ ನಡೆದುಕೊಳ್ಳಬೇಕು. ಅದು ಈ ರೀತಿಯ ಪ್ರಯೋಗಾತ್ಮಕ ವ್ಯಾಕ್ಸೀನ್‌ಗಳನ್ನು ಕೊಡುವಾಗ ಇದೇ ನಿಯಮ ಗಳನ್ನು ಎಲ್ಲಾ ಕಡೆ ಪಾಲಿಸ ಲಾಗುತ್ತದೆ. ಈಗ ಎಲ್ಲಾ ಕಡೆ ಆದ್ಯತೆಯ ಪಟ್ಟಿಯನ್ನು (Priority list) ಎ ದೇಶದಲ್ಲಿ
ಪ್ರಕಟಿಸಿದ್ದರು.
ಅದರ ಪ್ರಕಾರ ಮೊದಲ ಆದ್ಯತಾ ವಲಯ ಎಂದರೆ ಆರೋಗ್ಯದ ಮುಂಚೂಣಿಯ ಕೆಲಸಗಾರರಿಗೆ ಮೊದಲು ಕೊಟ್ಟು ನಂತರ ಮೇಲಿನ ಸ್ವಯಂ ಸೇವಕ – ನಥನ್ ರಿಚರ್ಡ್ ಸನ್ ತರಹದವರಿಗೆ ಕೊಡಲಾಗುತ್ತದೆ.
ದೊಡ್ಡ ಸವಾಲು: ಮೊದಲು ತಿಳಿಸಿದ ಔಷಧ ಶಾಸ್ತ್ರಜ್ಞಲಿಂಡ್ಸೆ ಅವರ ಪ್ರಕಾರ ವ್ಯಾಕ್ಸೀನ್ ಬಗ್ಗೆ ತಪ್ಪು ಅಭಿಪ್ರಾಯ
ತಳೆದು, ತೆಗೆದುಕೊಳ್ಳುವುದಿಲ್ಲ ಎಂಬ ವ್ಯಕ್ತಿಗಳಿಗೆ ಇದರ ಉಪಯುಕ್ತತೆಯನ್ನು ಸೂಕ್ತ ಮಾಹಿತಿ ಯ ಮೂಲಕ ತಿಳಿಸಬೇಕು. ಹಾಗೆಯೇ ಮಕ್ಕಳು, ಗರ್ಭಿಣಿ ಮಹಿಳೆ ಯರು, ಚಿಕ್ಕ ಮಕ್ಕಳಿಗೆ ಹಾಲು ಕುಡಿಸುತ್ತಿರುವ ತಾಯಂದಿರು ಇವರುಗಳಿಗೆ ಈ ವ್ಯಾಕ್ಸೀನ್‌ನ ಸುರಕ್ಷತೆಯ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಬೇಕು.
ಇತ್ತೀಚೆಗೆ ಕಲೆ ಹಾಕಿದ ಅಂತಾರಾಷ್ಟ್ರೀಯ ಮಾಹಿತಿಯ ಪ್ರಕಾರ ೬೭ ಕಡಿಮೆ ಆದಾಯದ ದೇಶಗಳ ಶೇ.೧೦ರಷ್ಟು ಜನರಿಗೆ ಮಾತ್ರ ೨೦೨೧ರಲ್ಲಿ ವ್ಯಾಕ್ಸೀನ್ ಲಭ್ಯವಾಗಲಿದೆ. ಏಕೆಂದರೆ ಶ್ರೀಮಂತ ದೇಶಗಳೆ ಹೆಚ್ಚಿನ ವ್ಯಾಕ್ಸೀನ್‌ಗಳನ್ನು ಕೊಂಡು ಇಟ್ಟುಕೊಂಡಿವೆ. ಹಾಗಾಗಿ ಜಗತ್ತಿನಾದ್ಯಂತ ಎಲ್ಲರಿಗೂ ವ್ಯಾಕ್ಸೀನ್ ಲಭ್ಯವಾಗಲು ಬಹಳ ಸಮಯ ಹಿಡಿಯುತ್ತದೆ. ಅದಕ್ಕೇ ಪ್ರತ್ಯೇಕ ನೆಟ್ ವರ್ಕ್ ಮಾಡಬೇಕು ಎಂಬುದು ತಜ್ಞರ ಅಭಿಮತ.