ಅಭಿಪ್ರಾಯ
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು.
2005ರಲ್ಲಿ ಅಮೆರಿಕ ಸರಕಾರ ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿತ್ತು. ಇದೀಗ ಎರಡನೆ ಭಾರಿ ಪ್ರಧಾನಿ ಹುದ್ದೆೆಗೇರಿದ ಮೋದಿಯವರಿಗೆ ಅಮೆರಿಕ ಸರಕಾರ ರೆಡ್ ಕಾರ್ಪೆಟ್ ಹರಡಿ ಸ್ವಾಾಗತಿಸಿರುವುದು, ಭಾರತದ ಹಿರಿಮೆ-ಗರಿಮೆಗಳು ಹೆಚ್ಚಾಾಗಿರುವುದರ ಸಂಕೇತವೇ ಸರಿ.
ಈ ಭಾವಪರವಶತೆಗೆ ಭಾಷೆಯ ಬಂಧನವಿರಲಿಲ್ಲ. ವಿವಾದಗಳ ಸುಳಿಗಳಿರಲಿಲ್ಲ. ವೈಯಕ್ತಿಿಕ ಕೆಲಸದ ಒತ್ತಡಗಳು ಹಾಗೂ ಸಮಸ್ಯೆೆಗಳನ್ನು ಬದಿಗೊತ್ತಿಿ ತಮ್ಮ ಪ್ರಿಿಯಬಂಧುವೊಬ್ಬರನ್ನು ನೋಡಲು, ಅವರ ಭಾಷಣವನ್ನು ಕೇಳಲು ದೂರದ ಊರು ಮಾತ್ರವಲ್ಲ, ದೂರದ ದೇಶಗಳಿಂದಲೂ ಧಾವಿಸಿ ಬಂದ ಜನಸಮೂಹ, ಅಮೆರಿಕದ ಪ್ರಜೆಗಳನ್ನೂ ಅಚ್ಚರಿಯ ಮಡುವಿನಲ್ಲಿ ನೂಕಿರಲು ಸಾಧ್ಯ. ಹೌದು, ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. ಮೋದಿಯವರ ಭಾಷಣದ ಮೋಡಿ ಮಾತ್ರವಲ್ಲ, ಅವರ ಅಸೀಮ ದೇಶಪ್ರೇಮ. ವಿನಮ್ರತೆ, ಹಿರಿಕಿರಿಯರೆಲ್ಲರನ್ನೂ ಗೌರವಿಸುವ ಗುಣ ಅವರನ್ನು ಪ್ರಸಿದ್ಧ ಪ್ರಧಾನಿ ಮಾತ್ರವಲ್ಲ, ಪ್ರಭಾವಿ ಪ್ರಧಾನಮಂತ್ರಿಿಗಳನ್ನಾಾಗಿಸಿದೆ. ತಮ್ಮ ಭಾಷಣಗಳಲ್ಲಿ 130 ಕೋಟಿ ಭಾರತೀಯರ ಜನಸೇವಕ ತಾನೆಂದು ವಿನಮ್ರತೆ ತೋರುವುದರಿಂದ, ದೇಶ-ವಿದೇಶಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆೆ ಹೆಚ್ಚುತ್ತಲೇ ಇದೆ. ಭಾರತೀಯರು ಎಂದಿಗೂ ಬಂದೂಕಿನ ಸದ್ದಿಗೆ ಇಲ್ಲವೇ ಬಾಂಬಿನ ಸ್ಫೋೋಟಕ್ಕೆೆ ಅಂಜುವವರಲ್ಲ. ಕಣ್ಣೀರಿಗೆ ಕರಗುತ್ತಾಾರೆಂಬ ಮಾತು ಶೇ.100ರಷ್ಟು ನಿಜ. ನಮ್ಮ ಕಂಬನಿ ಏನಿದ್ದರೂ ಭಾವ ಬಂಧನಕ್ಕೆೆ. ಅಂಥದೊಂದು ಸಂಭ್ರಮದ ಆನಂದಭಾಷ್ಪಗಳಿಗೆ ಕಳೆದ ಭಾನುವಾರ ಅಮೆರಿಕ ದೇಶದ ಹ್ಯೂಸ್ಟನ್ ಸಾಕ್ಷಿಯಾಯಿತು.
ಅಮೆರಿಕದ ಇಂಧನ ರಾಜಧಾನಿ ಎಂದೇ ಹೆಸರಾದ ಹ್ಯೂಸ್ಟನ್‌ನಲ್ಲಿ, ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ, ವಿಶ್ವದಾದ್ಯಂತ ಮೋದಿಯವರ ಜನಪ್ರಿಿಯತೆಯನ್ನು ಉತ್ತುಂಗಕ್ಕೇರಿಸಿದ್ದು ಮಾತ್ರವಲ್ಲ, ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಜತೆಗೆ ಅವರ ಸ್ನೇಹ ಹಾಗೂ ಹೊಸ ಕೆಮಿಸ್ಟ್ರಿಿಗೆ ಎಲ್ಲೆೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಲಿದೆ. ಹ್ಯೂಸ್ಟನ್‌ನ ಎನ್‌ಅರ್‌ಜಿ ಸ್ಟೇಡಿಯಂನಲ್ಲಿ, ಕಳೆದ ಭಾನುವಾರ ನಡೆದ ಅದ್ದೂರಿಯೆನಿಸಿದ ‘ಹೌಡಿ ಮೋದಿ’ ಕಾರ್ಯಕ್ರಮ, ಅಮೆರಿಕದಲ್ಲಿ ನೆಲೆಸಿದ ಭಾರತೀಯರ ಬುದ್ಧಿಿಮತ್ತೆೆಯೊಂದಿಗೆ ನಿರ್ವಹಣಾ ಸಾಮರ್ಥ್ಯಕ್ಕೆೆ ಕನ್ನಡಿ ಹಿಡಿದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿಿರುವ ಅಮೆರಿಕನ್ ಪ್ರಜೆಗಳ ಸಂಖ್ಯೆೆಯೂ ಕಡಿಮೆಯೇನಿಲ್ಲ. ಈ ಮಾತಿಗೆ ಪುಷ್ಟಿಿಕೊಡುವ ದಿಶೆಯಲ್ಲಿ, ಕಾರ್ಯಕ್ರಮದ ಯಶಸ್ಸು, ಟೆಕ್ಸಾಾಸ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸೇರುತ್ತದೆ, ಎಂದು ಸಂಸದ ಪೇಟ್ ಒಲ್ಸನ್ ಉದ್ಗರಿಸಿದ್ದಾಾರೆ.
ಪ್ರಧಾನಿ ಮೋದಿಯವರು ತಮ್ಮೊೊಡನೆ ಡೊನಾಲ್‌ಡ್ ಟ್ರಂಪ್ ಅವರನ್ನು ಕರೆತಂದಿದ್ದೂ ಸಹ ಐತಿಹಾಸಿಕ ಎಂದು ಟೆಕ್ಸಾಾಸ್ ಸೆನೆಟರ್ ಕಾರ್ನನ್ ಬಣ್ಣಿಿಸಿದ್ದಾಾರೆ. ಮೋದಿಯವರು ‘ಹೌಡಿ ಮೋದಿ’ಗೆ ಆಗಮಿಸುತ್ತಿಿದ್ದಂತೆಯೇ ಅಲ್ಲಿ ನರೆದ ಜನರ ಉತ್ಸಾಾಹ, ಹುರುಪು, ಹರ್ಷೋದ್ಗಾಾರಗಳನ್ನು ನೋಡಿದ ಅಮೆರಿಕದ ಅಧ್ಯಕ್ಷರ ಹೃದಯದ ಬಡಿತವೂ ತಪ್ಪಿಿರಲು ಸಾಕು. ಒಬ್ಬ ವಿದೇಶಿ ನಾಯಕನಿಗಾಗಿ ತಮ್ಮ ನೆಲದಲ್ಲಿ ಇಷ್ಟೊೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವೇ? ಒಬ್ಬ ರಾಕ್ ಸ್ಟಾಾರ್‌ನ ಕಾರ್ಯಕ್ರಮದಲ್ಲಿ ಮಾತ್ರ ಕೇಳಿ ಬರುತ್ತಿಿದ್ದ ಹರ್ಷೋದ್ಗಾಾರಗಳು ಮೋದಿಯವರ ಭಾಷಣದುದ್ದಕ್ಕೂ ಕೇಳಿ ಬಂದಿದ್ದೂ ಸಹ ಅಮೆರಿಕನ್ ಜನರಿಗೆ ಅಚ್ಚರಿಯ ವಿಷಯವೇ.
ಮೋದಿಯವರು ತಮ್ಮ ಭಾಷಣವನ್ನು ಆರಂಭಿಸಿ, ಹಲವು ಗಣ್ಯರು ಉಪಸ್ಥಿಿತರಿದ್ದ ಕಾರ್ಯಕ್ರಮದಲ್ಲಿ, ‘ಹೌಡಿ ಮೋದಿ’ಗೆ ಪ್ರತಿಯಾಗಿ ಕನ್ನಡ, ತೆಲುಗು, ಮಲಯಾಳಿ ಭಾಷೆ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅಲ್ಲಿ ನೆರೆದ ಜನರ ಕುಶಲೋಪರಿಯನ್ನು ವಿಚಾರಿಸಿ ಕಾರ್ಯಕ್ರಮಕ್ಕೆೆ ವಿಶೇಷ ಮೆರಗು ನೀಡಿದರು. ನಾನಾ ಭಾಷೆಗಳು, ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಿಿರುವ ಭಾರತೀಯರ ಮಧ್ಯೆೆ ಭಾರತದ ಏಕತೆಯನ್ನು ಪ್ರಚುರಪಡಿಸಿದ್ದೂ ಸಹ ವಿಶೇಷವೇ. ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ ಮುಂಚೆ ಭಾರತೀಯ ಪರಂಪರೆಯನ್ನು ಬಿಂಬಿಸುವ ನಿಟ್ಟಿಿನಲ್ಲಿ ನಡೆದ ಅನೇಕ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಸಹ ಸಮಾರಂಭದ ಮೆರುಗು ಹೆಚ್ಚಿಿಸಿದ್ದವು. ಭಾರತೀಯರ ಜತೆಜತೆಗೆ ಅಮೆರಿಕನ್ ಪ್ರಜೆಗಳೂ ಸೇರಿ ನಡೆಸಿ ಕೊಟ್ಟ ಭಾರತೀಯ ಸಾಂಸ್ಕೃತಿಕ ಪ್ರದರ್ಶನಗಳು ಭಾರತದಲ್ಲಿ ಮಾತ್ರವಲ್ಲ, ಜಗತ್ತಿಿನ ಮೂಲೆಮೂಲೆಗಳಲ್ಲಿ ನೇರ ಪ್ರಸಾರದ ಮೂಲಕ ಪ್ರಸಾರವಾಗಿ, ನಮ್ಮ ದೇಶದ ಕೀರ್ತಿಯನ್ನು ಎತ್ತರಕ್ಕೆೆ ಹೋಗುವುದಕ್ಕೆೆ ಸಹ ಸಂಭ್ರಮದ ವಿಷಯ. ಪ್ರಧಾನಿ ಮೋದಿಯವರಿಗಾಗಿ ಬಾಣಸಿಗರು ತಯಾರಿಸಿದ ಸ್ವಾಾದಿಷ್ಠ ‘ನಮೋ ಥಾಲಿ’ ಕೂಡಾ ವಿಶೇಷ ಮೆಚ್ಚುಗಯನ್ನು ಪಡೆಯಿತು.
ಭಾರತೀಯರ ಜೀವನ ಶೈಲಿ ಎಂದಿಗೂ ಕುಟುಂಬವನ್ನು ಆಧಾರಿತವೆಂಬ ಮಾತಿನಲ್ಲಿ ಸತ್ಯಾಾಂಶವಿಲ್ಲದಿಲ್ಲ. ಡೊನಾಲ್‌ಡ್ ಟ್ರಂಪ್ ಅವರು ತಮ್ಮ ಪರಿವಾರವನ್ನು ಪ್ರಧಾನಿ ಮೋದಿಯವರಿಗೆ ಪರಿಚಯಿಸಿದಾಗ, ಪ್ರತಿಯಾಗಿ ಮೋದಿಯವರು, ಅಲ್ಲಿ ನೆರೆದ 50,000 ಕ್ಕೂ ಮಿಕ್ಕು ಭಾರತೀಯರನ್ನು ತಮ್ಮ ಪರಿವಾರವೆಂದು ಟ್ರಂಪ್ ಅವರಿಗೆ ಪರಿಚಯಿಸಿದ್ದೂ ಸಹ ಉಲ್ಲೇಖನೀಯ. ಕಾರ್ಯಕ್ರಮದ ಆರಂಭದಲ್ಲಿ ವಿಶ್ವದ ದೊಡ್ಡಣ್ಣನೆಂದೇ ಬಿಂಬಿತವಾದ ಡೊನಾಲ್‌ಡ್ ಟ್ರಂಪ್ ಅವರು ಮೋದಿಯವರ ಜತೆಗೂಡಿ ವೇದಿಕೆ ಏರಿದಾಗ, ಅಲ್ಲಿ ನೆರದ ಭಾರತೀಯರು ಮಾತ್ರವಲ್ಲ, ವಿಶ್ವದೆಲ್ಲೆೆಡೆ ಸುದ್ದಿವಾಹಿನಿಗಳತ್ತ ಕಣ್ಣು ನೆಟ್ಟಿಿದ್ದ ಜನರಲ್ಲಿ ಮಿಂಚಿನ ಸಂಚಲನವಾಗಿದ್ದೂ ನಿಜ.
ಸುಮಾರು ಐದು ನಿಮಿಷಗಳವರೆಗೆ ಅಭಿಮಾನಿಗಳಿಂದ ಕರತಾಡನದ ಸುರಿಮಳೆಯೇ ಸುರಿಯಿತು. ಭಾರತದ ಜನತೆ ತಮ್ಮ ಜನ್ಮಭೂಮಿ ಭಾರತದ ಪ್ರಧಾನಿ ಹಾಗೂ ಕರ್ಮಭೂಮಿಯಾದ ಅಮೆರಿಕದ ಅಧ್ಯಕ್ಷರ ಇಬ್ಬರೂ ಒಂದೇ ವೇದಿಕೆಯಲ್ಲಿ ನಿಂತು ಜನತೆಯನ್ನು ಉದ್ದೇಶಿಸಿ ಮಾತನಾಡುವ ಅಪರೂಪದ ದೃಶ್ಯ ಕಂಡಾಗ ಅಭಿಮಾನಿಗಳು ಅವ್ಯಕ್ತ ಸಂತಸದಿಂದ ತಲೆದೂಗಿದ್ದೂ ಸಹ ಸಹಜವೇ. ಇಬ್ಬರೂ ನಾಯಕರು, ಪರಸ್ಪರ ಕೈಗಳನ್ನು ಬೆಸೆದುಕೊಂಡು, ಕ್ರೀಡಾಂಗಣದಲ್ಲಿ ಸುತ್ತು ಹಾಕಿರುವುದು ಸಹ ಅಭಿಮಾನಿಗಳ ಮನಸೊರೆಗೊಂಡಿದೆ.
ಭಾಷಣಧ ಮಧ್ಯೆೆ ಮೋದಿ-ಮೋದಿ ಎನ್ನುತ್ತ ಜಯಕಾರಗಳನ್ನು ಕೂಗುತ್ತಿಿದ್ದ ಭಾರತೀಯರನ್ನು ಕಂಡ ಟ್ರಂಪ್‌ನ ಮುಖದಲ್ಲಿ ಅಚ್ಚರಿಯ ಜತೆಗೆ ಗಾಬರಿಯ ಭಾವವೂ ಸಹ ಮೂಡಿದಂತಿತ್ತು. ಅಮೆರಿಕದ ಸೆನೆಟರ್ ಜಾನ್ ಕಾರ್ನನ್ ಅವರು ತಮ್ಮ ಪತ್ನಿಿಯ ಹುಟ್ಟುಹಬ್ಬದ ದಿನವಾಗಿದ್ದರೂ, ತಮ್ಮ ವೈಯಕ್ತಿಿಕ ಸಡಗರ-ಸಂಭ್ರಮಗಳನ್ನು ಬದಿಗೊತ್ತಿಿ, ‘ಹೌಡಿ ಮೋದಿ’ ಕಾರ್ಯಕ್ರಮದ ನಿರೂಪಕ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದು ವಿಶೇಷ. ಈ ವಿಷಯ ತಿಳಿದ ಮೋದಿಯವರು ನಮ್ಮ ಕಾರ್ಯಕ್ರಮದಿಂದ ನಿಮ್ಮ ಜನ್ಮದಿನದ ಸಂಭ್ರಮಕ್ಕೆೆ ಅಡ್ಡಿಿಯಾಗಿರುವುದಕ್ಕೆೆ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ ಪ್ರಧಾನಿಯವರ ವಿನಮ್ರತೆಗೆ ಅಮೆರಿಕನ್ನರೂ ಸಹ ತಲೆದೂಗಿದ್ದು ಪ್ರಶಂಸಾರ್ಹ.
ದೊಡ್ಡಣ್ಣನಂತೆ ವರ್ತಿಸುತ್ತಾಾ, ಅನ್ಯ ರಾಷ್ಟ್ರಗಳಿಗೆ ನಿರ್ದೇಶನಗಳನ್ನು ನೀಡುತ್ತಾಾ ಸಾಗಿಬಂದ ಅಮೆರಿಕದ ರಾಜಕಾರಣಿಗಳಿಗೆ, ಮೋದಿಯವರನ್ನು ಕುರಿತು ಭಾರತೀಯ ಸಮುದಾಯದಿಂದ ಈ ಪರಿಯ ಪ್ರೇಮಭಾವ ಊಹೆಗೂ ನಿಲುಕದ್ದು. ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಅವರ ಆಡಳಿತ ವೈಖರಿಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿಯವರು, ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ನೀಡಿದ ಘೋಷಣೆ ಸಭಿಕರಲ್ಲಿ ಸಂಚಲನವೊಂದು ಹುಟ್ಟುಹಾಕಿತು. ಕಳೆದ ಬಾರಿ ಭಾರತೀಯ ಸಂಜಾತರ ಮತ ಗಳಿಸುವಲ್ಲಿ ಟ್ರಂಪ್ ಅವರ ಪ್ರತಿಸ್ಪರ್ಧಿಯಾದ ಹಿಲರಿ ಕ್ಲಿಿಂಟನ್ ಸಫಲರಾಗಿದ್ದರು. ಮೋದಿಯವರ ಮೂಲಕ ಭಾರತೀಯರನ್ನು ಒಲಿಸಿಕೊಂಡು ಹೆಚ್ಚಿಿನ ಪ್ರಮಾಣದಲ್ಲಿ ಮತ ಗಳಿಸಬೇಕೆಂದು ಟ್ರಂಪ್ ಯೋಚಿಸುತ್ತಿಿದ್ದಾಾರೆನ್ನಲಾಗಿದೆ.
2005ರಲ್ಲಿ ಅಮೆರಿಕ ಸರಕಾರ ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿತ್ತು. ಇದೀಗ ಎರಡನೆ ಭಾರಿ ಪ್ರಧಾನಿ ಹುದ್ದೆೆಗೇರಿದ ಮೋದಿಯವರಿಗೆ ಅಮೆರಿಕ ಸರಕಾರ ರೆಡ್ ಕಾರ್ಪೆಟ್ ಹರಡಿ ಸ್ವಾಾಗತಿಸಿರುವುದು, ಭಾರತದ ಹಿರಿಮೆ-ಗರಿಮೆಗಳು ಹೆಚ್ಚಾಾಗಿರುವುದರ ಸಂಕೇತವೇ ಸರಿ. ಟ್ರಂಪ್ ಅವರು ಕೇವಲ ತಮಗೆ ಮಾತ್ರವಲ್ಲ, ಇಡೀ ಭಾರತಕ್ಕೆೆ ಸ್ನೇಹಿತನೆಂದು ವರ್ಣಿಸುತ್ತಾಾ, ಮೋದಿಯವರು ಸಭಿಕರೊಡನೆ ಅಮೆರಿಕದ ಅಧ್ಯಕ್ಷರಿಗಾಗಿ ‘ಸ್ಟ್ಯಾಾಂಡಿಂಗ್ ಓವೇಶನ್’ ಕೊಡುಗೆ ನೀಡಿದ್ದೂ ಸಹ ಅವಿಸ್ಮರಣೀಯ. ಮಾತೆತ್ತಿಿದರೆ, ಮೋದಿಯವರ ವಿದೇಶ ಯಾತ್ರೆೆಗಳ ಬಗ್ಗೆೆ ಅಬ್ಬರಿಸಿ ಬೊಬ್ಬಿಿರಿಯುವ ಮೋದಿ ವಿರೋಧಿಗಳು ಅಕ್ಷರಶಃ ಬೆಚ್ಚಿಿಬಿದ್ದಿದ್ದಾಾರೆ ಎನ್ನುವ ಮಾತಿದೆ.
ಹಿಂದಿನ ಸರಕಾರಗಳ ಪ್ರಧಾನಿಗಳ ವಿದೇಶ ಯಾತ್ರೆೆಗಳು ಜನಸಾಮಾನ್ಯರ ಗಮನ ಸೆಳೆಯುವುದರಲ್ಲಿ ವಿಫಲವಾಗಿದ್ದವು. ಇಂದಿನ ದಿನಗಳಲ್ಲಿ, ವಿದೇಶಗಳಲ್ಲಿ ವೈದ್ಯಕೀಯ, ಸಾಂಸ್ಕೃತಿಕ, ತಂತ್ರಜ್ಞಾಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಭಾರತೀಯರೂ ಸಹ ತಾಯ್ನಾಾಡಿನಲ್ಲಿ ನಡೆಯುತ್ತಿಿರುವ ವಿದ್ಯಮಾನಗಳನ್ನು ಆಸಕ್ತಿಿಯಿಂದ ಗಮನಿಸುತ್ತಿಿದ್ದಾಾರೆ. ಮೋದಿಯವರು ಸಹ ತಮ್ಮ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾರತದಲ್ಲಿ ನಡೆಯುತ್ತಿಿರುವ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆೆ ಬೆಳಕು ಚೆಲ್ಲಿದ್ದಾಾರೆ. ಭಾರತ-ಅಮೆರಿಕದ ಸೌಹಾರ್ದ ಸಂಬಂಧವನ್ನು ಗಟ್ಟಿಿಗೊಳಿಸುವ ನಿಟ್ಟಿಿನಲ್ಲಿ ಬಂಡವಾಳ ಹೂಡುವವರಿಗೆ ಭಾರತಕ್ಕೆೆ ಮುಕ್ತ ಸ್ವಾಾಗತ ನೀಡಿದ್ದಾಾರೆ. ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಿದ ತಮ್ಮ ಸರಕಾರದ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡ ಮೋದಿಯವರು ನಮ್ಮ ದೇಶದ ಸಂಸದರಿಗೆ ಧನ್ಯವಾದಗಳನ್ನು ಅರ್ಪಿಸುವುದರ ಜತೆಗೆ ಪಾಕಿಸ್ತಾಾನಕ್ಕೆೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾಾರೆ.
370ನೇ ವಿಧಿಯ ರದ್ದತಿಗೆ ಇಡೀ ದೇಶದ ಸಹಕಾರ-ಸಮ್ಮತಿಗಳಿವೆ ಎಂಬ ವಿಷಯವನ್ನೂ ಜಗತ್ತಿಿನಾದ್ಯಂತ ಪ್ರಚುರ ಪಡಿಸಿದ್ದಾಾರೆ. 370ನೇ ವಿಧಿಯ ರದ್ದತಿಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗಳಲ್ಲಿ ಅಭಿವೃದ್ಧಿಿ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಿರುವುದಾಗಿ ಭರವಸೆಯೊಂದನ್ನು ನೀಡಿದ್ದಾಾರೆ. ತಮ್ಮ ದೇಶವನ್ನೇ ಸರಿಯಾಗಿ ನಿಭಾಯಿಸಲಾಗದ ನೆರೆರಾಷ್ಟ್ರ ಭಯೋತ್ಪಾಾದನೆಗೆ ಕುಮ್ಮಕ್ಕು ಕೊಡುತ್ತಿಿರುವುದಾಗಿ ಹೆಸರಿಸದೇ ಪಾಕಿಸ್ತಾಾನದ ಮೇಲೆ ಪರೋಕ್ಷವಾಗಿ ದಾಳಿ ನಡೆಸಿದ್ದಾಾರೆ. ಮುಂಬೈ ಮತ್ತು ಅಮೆರಿಕ ಮೇಲಿನ ದಾಳಿಗೆ ಕೊಂಡಿಯೊಂದನ್ನು ಬೆಸೆಯುತ್ತಾಾ ಉಗ್ರವಾದದ ಜನ್ಮಸ್ಥಾಾನವಾದ ಪಾಕಿಸ್ತಾಾನಕ್ಕೆೆ ಭರ್ಜರಿ ಏಟು ನೀಡಿದ್ದಾಾರೆ. ವಿಶ್ವಸಂಸ್ಥೆೆಯ ಅಧಿವೇಶನದಲ್ಲಿ ಕಾಶ್ಮೀರದ ಸಮಸ್ಯೆೆ ತಲೆಯೆತ್ತಬಹುದಾದ ಸಂಭವವನ್ನು ಊಹಿಸಿರುವ ಮೋದಿಯವರು, ಪಾಕಿಸ್ತಾಾನದ ವಿರುದ್ಧ ವೇದಿಕೆಯೊಂದನ್ನು ಸೃಷ್ಟಿಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶವನ್ನು ಏಕಾಂಗಿಯಾಗಿಸುವತ್ತ ಹೆಜ್ಜೆೆ ಇರಿಸಿದ್ದಾಾರೆನ್ನಬಹುದು.
ಭ್ರಷ್ಟಾಾಚಾರ ನಿರ್ಮೂಲನೆಗೆ ಕಟಿಬದ್ಧರಾಗಿರುವದಾಗಿ ಪುನರುಚ್ಚರಿಸಿದ ಪ್ರಧಾನಿ ಮೋದಿಯವರು, ಸುಮಾರು 18ಲಕ್ಷಕ್ಕೂ ಮಿಕ್ಕು ಅಕ್ರಮ ವಲಸಿಗರಿಗೆ ವಿದಾಯ ಹೇಳಿರುವುದಾಗಿ ತಿಳಿಸಿದ್ದಾಾರೆ. ಅಮೆರಿಕದಲ್ಲಿರುವ ಭಾರತೀಯರು, ಪ್ರತಿವರ್ಷವೂ ಭಾರತೀಯರಲ್ಲದ ಐದು ಕುಟುಂಬಗಳನ್ನು ಪ್ರವಾಸಕ್ಕೆೆಂದು ಕಳಿಸಿಕೊಡಬೇಕೆಂದು ಭಾರತೀಯ ವಲಸಿಗರಲ್ಲಿ ವಿನಂತಿಸಿದ್ದಾಾರೆ. ಮೋದಿಯವರ ಕೋರಿಕೆಯಲ್ಲೂ ದೇಶಹಿತದ ಭಾವ ಅಡಗಿರುವ ವಿಷಯವೂ ಪ್ರಶಂಸಾರ್ಹವೇ. ಅಂತಾರಾಷ್ಟ್ರೀಯ ರಾಜಕಾರಣಕ್ಕೆೆ ಪೂರಕವೆನಿಸುವಂತೆ, ಮೋದಿಯವರು ತಮ್ಮ ಕಾರ್ಯಶೈಲಿಗಳಿಂದ ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಿಸಲಿದ್ದಾಾರೆಂಬ ಮಾತಿನಲ್ಲಿ ಅತಿಶಯೋಕ್ತಿಿಯೇನೂ ಇಲ್ಲ.
ಒಟ್ಟಾಾರೆ, ‘ಹೌಡಿ ಮೋದಿ’ ಕಾರ್ಯಕ್ರಮ, ವಿದೇಶೀ ನೆಲದಲ್ಲಿ ತಮ್ಮ ದೇಶದ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅತಿ ದೊಡ್ಡ ಸಭೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಇಡೀ ವಿಶ್ವವೇ ವೀಕ್ಷಿಸಿದೆ ಶಿರಸಿಯ ಸಾರ್ಥಕ ಹೆಗಡೆ, ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಅವರ ಜತೆ ಕ್ಲಿಿಕ್ಕಿಿಸಿದ ಸೇಲ್ಫಿಿ ಕೂಡಾ ಎಲ್ಲೆೆಡೆ ವೈರಲ್ ಆಗಿ ಸಾರ್ಥಕತೆಯೊಂದನ್ನು ಪಡೆದಿದೆ. ಭಾರತ ಹಾಗೂ ಅಮೆರಿಕಗಳ ಸ್ನೇಹ-ಸಂಬಂಧಗಳು ಬಲುದೂರ ಸಾಗುವಂಥದು ಎಂಬ ಮಾತನ್ನು ‘ಹೌಡಿ ಮೋದಿ’ ಕಾರ್ಯಕ್ರಮ ಇಡೀ ಜಗತ್ತಿಿನ ಮುಂದೆ ಪ್ರತಿಬಿಂಬಿಸಿತೆನ್ನುವುದು ಗಮನಾರ್ಹ. ವಿಶ್ವದೆಲ್ಲೆೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿಿರುವ ಪ್ರಧಾನಿ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಬಲು ಅಪರೂಪದ ಜೋಡಿ ಟೆಕ್ಸಾಾಸ್‌ನಲ್ಲಿ ಟ್ರಂಪ್ ಅವರಿಗೆ ಮತಗಳಿಕೆಯಲ್ಲಿ ಹೆಚ್ಚಳವನ್ನು ತಂದುಕೊಡಲು ಸಾಧ್ಯವೇ ಎಂಬುದು ಕುತೂಹಲಕಾರಿ.