Thursday, 12th December 2024

ದಿಢೀರ್‌ ಅವತರಿಸಿದ ಮಾರ್ಬರ್ಗ್‌ ವೈರಸ್‌

ವೈದ್ಯ ವೈವಿಧ್ಯ

drhsmohan@gmail.com

ಈಗಿನ ಆಧುನಿಕ ಜಗತ್ತು ರೂಪುಗೊಳ್ಳುವ ಎಷ್ಟೋ ಮೊದಲಿನ ದಿನಗಳಿಂದಲೂ ಮಾನವ ವೈರಸ್ ಕಾಯಿಲೆಗಳ ವಿರುದ್ಧ ಸೆಣಸುತ್ತಿದ್ದಾನೆ. ಕೆಲವು ವೈರಸ್ ಕಾಯಿಲೆಗಳಿಗೆ ಸೂಕ್ತ ಔಷಧಗಳು ಮತ್ತು ಕೆಲವಕ್ಕೆ ನಿರ್ದಿಷ್ಟ ವ್ಯಾಕ್ಸಿನ್ ಅಥವಾ ಲಸಿಕೆಗಳು ಲಭ್ಯವಿವೆ. ಇವುಗಳಿಂದ ಅಂತಹ ವೈರಸ್ ಕಾಯಿಲೆಗಳ ರೋಗಿಗಳು ರೋಗ ಮುಕ್ತವಾಗಲು ಸಾಧ್ಯವಾಗಿದೆ.

ನಾವು ಕರೋನ, ಮಂಕಿಪಾಕ್ಸ್ ವೈರಸ್ ಗಳ ಹಾವಳಿಯನ್ನು ಈ ದಿನಗಳಲ್ಲಿಯೇ ಮತ್ತೊಂದು ಮಾರಕ ವೈರಸ್ ದಾಳಿಯ ಆಘಾತಕಾರಿ ಸುದ್ದಿ ಬಂದಿದೆ. ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ಮಾರ್ಬರ್ಗ್ ವೈರಸ್ ಸೋಂಕಿನಿಂದ ಎರಡು ಜನರು ಮೃತಪಟ್ಟಿರುವುದು ಇತ್ತೀಚಿಗೆ ವರದಿಯಾಗಿದೆ. ಘಾನಾದ ದಕ್ಷಿಣ ಭಾಗದಲ್ಲಿ ಎರಡೂ ಜನರು ಆಸ್ಪತ್ರೆ ಯಲ್ಲಿಯೇ ಮೃತಪಟ್ಟರು ಎಂದು ಹೇಳಲಾಗಿದೆ.

ಅವರ ರಕ್ತದಲ್ಲಿ ಮಾರ್ಬರ್ಗ್ ವೈರಸ್ ಇರುವುದು ಇತ್ತೀಚೆಗೆ ದೃಢ ಪಟ್ಟ ನಂತರ ಸೆನೆಗಲ್‌ನ ಮತ್ತೊಂದು ಲ್ಯಾಬೊರೇಟರಿ ಯಲ್ಲಿ ಅದನ್ನು ದೃಢೀಕರಿಸ ಲಾಗಿದೆ. ಈ ಸಂಬಂಧದಲ್ಲಿ 98 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ರೋಗಿಗಳ ಸಂಪರ್ಕಕ್ಕೆ ಬಂದ ಸಂಬಂಧಿಕರು, ವೈದ್ಯರು ಮತ್ತು ವೈದ್ಯ ಕೀಯ ಸಿಬ್ಬಂದಿ ಹಾಗೆಯೇ ಶವಾಗಾರದ ಕೆಲಸಗಾರರು – ಇವರೆ ಕ್ವಾರಂಟೈನ್ ಹೊಂದಿದವ ರಲ್ಲಿ ಸೇರಿದವರು. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಆಫ್ರಿಕಾ ದಿಂದ ಮಾರ್ಬರ್ಗ್ ವೈರಸ್‌ನ ಸೋಂಕು ವರದಿ ಯಾಗುತ್ತಿರುವುದು ಇದು ಎರಡನೇ ಬಾರಿ.

ಕಳೆದ ವರ್ಷ 2021ರಲ್ಲಿ ಗಿನಿ ದೇಶದಲ್ಲಿ ಒಬ್ಬ ರೋಗಿ ಯಲ್ಲಿ ಕಾಣಿಸಿಕೊಂಡದ್ದು ಮತ್ತೆ ಹೆಚ್ಚಿನವರಿಗೆ ಹರಡದೆ ಐದು ವಾರ ಗಳಲ್ಲಿ ಕಾಯಿಲೆ ಕಣ್ಮರೆಯಾಗಿದೆ ಎಂದು ಘೋಷಿಸಲಾಗಿತ್ತು.

ಮಾರ್ಬರ್ಗ್ ವೈರಸ್:
ಇದು ಮರಣಾಂತಿಕ ವೈರಸ್ ಎಬೋಲಾದ ತೀರಾ ಹತ್ತಿರದ ಸಂಬಂಧ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಜರ್ಮನಿಯ ಮಾರ್ಬರ್ಗ್, ಫ್ರಾಂಕ್ ಫರ್ಟ್ ಮತ್ತು ಸರ್ಬಿಯಾದ ಬೆಲ್ ಗ್ರೇಡ್‌ಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡಿತ್ತು.
(ಹಾಗಾಗಿಯೇ ಈ ವೈರಸ್‌ಗೆ ಮಾರ್ಬರ್ಗ್ ವೈರಸ್ ಎಂಬ ಹೆಸರು ಬಂದಿತು). ಆಗ 31 ಜನರಲ್ಲಿ ವೈರಸ್ ಸೋಂಕು ಕಾಣಿಸಿಕೊಂಡದ್ದು 7 ಜನರ ಮರಣಕ್ಕೆ ಕಾರಣವಾಗಿತ್ತು.

ಕಾಯಿಲೆಯ ಲಕ್ಷಣಗಳು: 
ವೈರಸ್ ಕಾಯಿಲೆಗಳಂತೆ ಇದೂ ಕೂಡ ಒಮ್ಮೆಲೆ ವಿಪರೀತ ಜ್ವರ, ತಡೆಯಲಾಗದ ತಲೆ ನೋವು ಹಾಗೂ ದೇಹದ ವಿವಿಧ ಮಾಂಸಖಂಡಗಳಲ್ಲಿ ನೋವು ಎಂಬ ಲಕ್ಷಣಗಳಿಂದ ಆರಂಭವಾಗುತ್ತದೆ. ಮೂರು ದಿನಗಳ ನಂತರ ನೀರು ನೀರಾದ ಬೇಧಿ, ಹೊಟ್ಟೆನೋವು, ಉಬ್ಬಳಿಕೆ ಹಾಗೂ ವಾಂತಿ ಈ ಲಕ್ಷಣಗಳಿಂದ ಮುಂದುವರಿಯುತ್ತದೆ. ಈ ಹಂತದಲ್ಲಿ ರೋಗಿಯ ಮುಖ ವಿಲಕ್ಷಣ ರೀತಿಯಲ್ಲಿ ಕಾಣಿಸಿಕೊಂಡು ಮುಖದಲ್ಲಿ ಯಾವ ರೀತಿಯ ಭಾವನೆಯೂ ಇಲ್ಲದ ತರಹ ತೋರುತ್ತದೆ. ಹಾಗೆಯೇ ಕಣ್ಣು ತುಂಬಾ ಆಳದಲ್ಲಿ ಹುದುಗಿವೆಯೇನೋ ಎಂದು ಕಂಡುಬರುತ್ತದೆ. ಜತೆಯಲ್ಲಿ ರೋಗಿಯ ದೇಹದಲ್ಲಿ ವಿಪರೀತ ಆಲಸ್ಯದ ರೀತಿಯ ಲಕ್ಷಣ ಕಂಡುಬರುತ್ತದೆ. ನಂತರದ ಹಂತದಲ್ಲಿ ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವ ಆರಂಭವಾಗಿ ಅತೀವವಾದ ರಕ್ತ ನಷ್ಟವಾಗಿ ರೋಗಿ ತೀವ್ರವಾದ ಶಾಕ್ ಹಂತ ತಲುಪುತ್ತಾನೆ.

ಕಾಯಿಲೆಯ ಲಕ್ಷಣ ಆರಂಭವಾದ 8 ಅಥವಾ 9 ನೇ ದಿನ ರೋಗಿ ಮರಣವನ್ನಪ್ಪುತ್ತಾನೆ. ಈ ವೈರಸ್ ಸೋಂಕಿಗೆ ಒಳಗಾದ ಶೇಕಡಾ 70- 88 ರೋಗಿಗಳು ಸಾವನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಮತ. ಆರಂಭದಲ್ಲಿ ಆಫ್ರಿಕಾದ ಹಸಿರು ಜಾತಿಯ ಕೋತಿಗಳಲ್ಲಿ ಈ ವೈರಸ್ ಕಂಡುಬಂದಿದ್ದವು.

ಅದಕ್ಕೂ ಮೊದಲು ಉಗಾಂಡ ದೇಶದಿಂದ ಆಮದಾದ ಕೋತಿಗಳಲ್ಲಿ ಈ ವೈರಸ್‌ಗಳು ಕಾಣಿಸಿದ್ದವು. ಆದರೆ ನಂತರದ ದಿನಗಳಲ್ಲಿ ಹಂದಿ ಮತ್ತಿತರ ಪ್ರಾಣಿಗಳಲ್ಲಿ ಸಹಿತ ವೈರಸ್‌ಗಳು ಕಂಡುಬಂದವು. ಬಾವಲಿಗಳ ಸಂಖ್ಯೆ ಜಾಸ್ತಿ ಇರುವ ಗವಿ ಮತ್ತು ಗಣಿ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವ ವ್ಯಕ್ತಿಗಳಲ್ಲಿ ಜಾಸ್ತಿಯಾಗಿ ಕಂಡುಬಂದು ಅವರಿಂದ ಇತರರಿಗೆ ಹರಡುತ್ತದೆ. ಆಫ್ರಿಕಾದ ಘಾನಾ ದೇಶದಲ್ಲಿ ಈ ಬಾರಿ ಮೊಟ್ಟಮೊದಲು ಕಂಡುಬಂದಿದ್ದರೂ ಹಲವು ಆಫ್ರಿಕಾದ ದೇಶಗಳಲ್ಲಿ ಉದಾ: ಕಾಂಗೋದ ಡೆಮೋಕ್ರಾಟಿಕ್ ರಿಪಬ್ಲಿಕ್, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಜಿಂಬಾಬ್ವೆ – ಇವುಗಳಲ್ಲಿ ಈ ಮೊದಲೇ ಕಂಡುಬಂದಿದ್ದವು. ಅಂಗೋಲ ದೇಶದಲ್ಲಿ 2005 ರಲ್ಲಿ ಕಂಡುಬಂದ ಈ ಕಾಯಿಲೆ 300 ಕ್ಕೂ ಹೆಚ್ಚು ಜನರ ಮರಣಕ್ಕೆ ಕಾರಣವಾಗಿತ್ತು.

ಮಾರ್ಬರ್ಗ್ ವೈರಸ್ ಕಾಯಿಲೆ ಹಿಂದೆ ಕಂಡುಬಂದ ಮುಖ್ಯ ಉದಾಹರಣೆಗಳು : 2017 – ಉಗಾಂಡಾದಲ್ಲಿ ಮೂರು ಜನರಲ್ಲಿ ಕಾಣಿಸಿಕೊಂಡು ಮೂರೂ ಜನರು ಮರಣ ಹೊಂದಿದ್ದರು. 2012 ರಲ್ಲಿ ಉಗಾಂಡಾದಲ್ಲಿ 15 ಜನರಲ್ಲಿ ಕಾಣಿಸಿಕೊಂಡು 4 ಜನರು ಮರಣ ಹೊಂದಿದ್ದರು. 2005 ರಲ್ಲಿ ಅಂಗೋಲಾದಲ್ಲಿ 374 ಜನರಲ್ಲಿ ಕಂಡು ಬಂದಿದ್ದು, 329 ಜನರು ಅಸು ನೀಗಿದ್ದರು.

1998 -2000 ದಲ್ಲಿ ಕಾಂಗೋದ ರಿಪಬ್ಲಿಕ್‌ನಲ್ಲಿ 154 ಜನರಲ್ಲಿ ಕಂಡುಬಂದು ಅವರಲ್ಲಿ 128 ಜನರು ಮಡಿದಿದ್ದರು. ಮೊಟ್ಟಮೊದಲು 1967 ರಲ್ಲಿ ಜರ್ಮನಿಯಲ್ಲಿ ಕಂಡುಬಂದಾಗ 31 ಜನರಲ್ಲಿ ಕಾಯಿಲೆ ಕಂಡುಬಂದಿದ್ದು 7 ಜನರು ಮರಣ
ಹೊಂದಿದ್ದರು. ಮನುಷ್ಯರಲ್ಲಿ ಇದು ಮುಖ್ಯವಾಗಿ ದೇಹದ ದ್ರವಗಳಿಂದ ಮತ್ತು ಕಲುಷಿತವಾದ ಹಾಸಿಗೆ, ವಸ್ತ್ರಗಳಿಂದ ಹರಡುತ್ತದೆ ಎನ್ನಲಾಗಿದೆ. ಈ ವೈರಸ್ ಕಾಯಿಲೆಯಿಂದ ಒಬ್ಬ ವ್ಯಕ್ತಿ ಗುಣವಾದರೆ ಸಹಿತ ಆತನ ರಕ್ತ ಮತ್ತು ವೀರ್ಯದಲ್ಲಿ ಬಹಳಷ್ಟು ತಿಂಗಳುಗಳ ಕಾಲ ವೈರಸ್ ಇರುತ್ತದೆ.

ಚಿಕಿತ್ಸೆ ಹೇಗೆ ?
ಈ ವೈರಸ್‌ಗೆ ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ ಹಾಗೂ ವ್ಯಾಕ್ಸಿನ್ ಕೂಡ ಲಭ್ಯವಿಲ್ಲ. ರಕ್ತದ ಕೆಲವು ಘಟಕಗಳು, ಔಷಧ ಮತ್ತು ಪ್ರತಿರೋಧ ಚಿಕಿತ್ಸೆ ಬೆಳವಣಿಗೆ ಮಾಡಲು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಕಾಯಿಲೆಯ ಲಕ್ಷಣ ನಿವಾರಿಸಲು ರೋಗಿ ಯನ್ನು ಆಸ್ಪತ್ರೆಗೆ ಸೇರಿಸಿ ಬಹಳ ಅಧಿಕ ಪ್ರಮಾಣದ ದ್ರವಗಳನ್ನು ಡ್ರಿಪ್ ಮೂಲಕ ಕೊಡುವುದಲ್ಲದೆ ರಕ್ತವನ್ನು ಸಹ ಡ್ರಿಪ್ ಮೂಲಕ ಕೊಟ್ಟು ರಕ್ತಸ್ರಾವದ ನಷ್ಟವನ್ನು ತುಂಬಲು ಪ್ರಯತ್ನಿಸಲಾಗುತ್ತದೆ.

ಕಾಯಿಲೆ ಬರುವುದನ್ನು ತಡೆಗಟ್ಟುವುದು ಹೇಗೆ?
ಆಫ್ರಿಕಾದಲ್ಲಿನ ಕಾಡು ಪ್ರಾಣಿಗಳ ಮಾಂಸ ತಿನ್ನುವುದನ್ನು, ಅದನ್ನು ಪರಿಷ್ಕರಿಸುವುದನ್ನು ನಿಲ್ಲಿಸ ಬೇಕು. ಕಾಯಿಲೆ ಕಾಣಿಸಿ ಕೊಂಡ ಪ್ರದೇಶಗಳಲ್ಲಿ ಹಂದಿಗಳ ಸಂಪರ್ಕ ಸಂಪೂರ್ಣ ತಪ್ಪಿಸಬೇಕು. ಕಾಯಿಲೆ ಬಂದು ಗುಣವಾದ ವ್ಯಕ್ತಿಗಳು ಸಹಿತ
ನಂತರ ಒಂದು ವರ್ಷದವರೆಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕಾಂಡಮ್ ಧರಿಸಬೇಕು. ಆನಂತರ ವೈರಸ್‌ಗೆ ಎರಡು ಬಾರಿ ಅವರ ವೀರ್ಯ ಪರೀಕ್ಷೆ ನೆಡಸಿದ ನಂತರವೇ ಕಾಂಡಮ್ ಧರಿಸುವುದನ್ನು ನಿಲ್ಲಿಸಬೇಕು. ಕಾಯಿಲೆಯಿಂದ ಮಡಿದವರ ಶವಸಂಸ್ಕಾರ ಮಾಡುವವರು ಕಳೇಬರವನ್ನು ಬರೀ ಕೈಯಲ್ಲಿ ಮುಟ್ಟಲೇಬಾರದು.

ವೈರಸ್ ಕಾಯಿಲೆಗಳ ಬಗ್ಗೆ ಒಂದು ನೋಟ
ಕರೋನಾ, ಮಂಕಿಪಾಕ್ಸ್ ಹಿನ್ನೆಲೆಯಲ್ಲಿ ಇತ್ತೀಚಿನವರೆಗೂ ಗಮನಿಸಿದರೆ ವೈರಸ್ ಕಾಯಿಲೆಗಳ ವಿರುದ್ಧ ಮಾನವ ತೀರಾ ಅಸಹಾಯಕ ಎಂದು ಹೇಳಬಹುದು. ಈಗಿನ ಆಧುನಿಕ ಜಗತ್ತು ರೂಪುಗೊಳ್ಳುವ ಎಷ್ಟೋ ಮೊದಲಿನ ದಿನಗಳಿಂದಲೂ
ಮಾನವ ವೈರಸ್ ಕಾಯಿಲೆಗಳ ವಿರುದ್ಧ ಸೆಣಸುತ್ತಿದ್ದಾನೆ. ಕೆಲವು ವೈರಸ್ ಕಾಯಿಲೆಗಳಿಗೆ ಸೂಕ್ತ ಔಷಧಗಳು ಮತ್ತು ಕೆಲವಕ್ಕೆ ನಿರ್ದಿಷ್ಟ ವ್ಯಾಕ್ಸಿನ್ ಅಥವಾ ಲಸಿಕೆಗಳು ಲಭ್ಯವಿವೆ.

ಇವುಗಳ ದೆಸೆಯಿಂದ ಅಂತಹ ವೈರಸ್ ಕಾಯಿಲೆಗಳ ರೋಗಿಗಳು ರೋಗ ಮುಕ್ತವಾಗಲು ಸಾಧ್ಯವಾಗಿದೆ. ಸಿಡುಬಿನಂತಹ
ಒಂದು ಅತೀ ಮುಖ್ಯ ವೈರಸ್ ಕಾಯಿಲೆಯನ್ನು ಜಗತ್ತಿನಿಂದ ಉಚ್ಛಾಟಿಸಲು ನಮಗೆ ಸಾಧ್ಯವಾಗಿದೆ. ಆದರೆ ಉಳಿದ ಎಷ್ಟೋ ಅಪಾಯಕಾರಿ ವೈರಸ್‌ಗಳ ವಿರುದ್ಧ ತೀರಾ ಅಸಹಾಯಕರಾಗಿದ್ದೇವೆ. ಆತರಹದ ಅಪಾಯಕಾರಿ ವೈರಸ್‌ಗಳನ್ನು ಸ್ವಲ್ಪ
ಅವಲೋಕಿಸೋಣ.

1. ಎಬೋಲಾ ವೈರಸ್: ಆಫ್ರಿಕಾದ ಸೂಡಾನ್ ರಿಪಬ್ಲಿಕ್ ಮತ್ತು ಕಾಂಗೋದ ಡೆಮೊಕ್ರಟಿಕ್ ರಿಪಬ್ಲಿಕ್ ದೇಶಗಳಲ್ಲಿ ಮೊಟ್ಟ ಮೊದಲ ಬಾರಿಗೆ 1976 ರಲ್ಲಿ ಕಂಡುಬಂದಿತು. ವ್ಯಕ್ತಿಯ ರಕ್ತ ಅಥವಾ ದೇಹದ ಯಾವುದೇ ದ್ರವಗಳ ಸಂಪರ್ಕದಿಂದ
ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಹಾಗೆಯೇ ಪ್ರಾಣಿಗಳ ಸಂಪರ್ಕದಿಂದಲೂ ಮಾನವನಿಗೆ ಇದೇ ರೀತಿ ಹರಡುತ್ತದೆ. ಈ ಎಬೋಲಾ ವೈರಸ್‌ಗಳಲ್ಲಿ ಹಲವು ರೀತಿಯ ಪ್ರಭೇದಗಳಿವೆ.

ಎಬೋಲಾ ರೆಸ್ಪಾನ್ ಎಂಬ ಪ್ರಭೇದ ಮನುಷ್ಯನಲ್ಲಿ ಯಾವ ರೀತಿಯ ಲಕ್ಷಣವನ್ನೇ ತೋರಿಸುವುದಿಲ್ಲ. ಬುಂಡಿಬುಗ್ಯೋ ಎಂಬ ಪ್ರಭೇದ ಶೇಕಡಾ 50 ಜನರ ಮರಣಕ್ಕೆ ಕಾರಣವಾದರೆ, ಸೂಡಾನ್ ಪ್ರಭೇದ ಶೇಕಡಾ 71-72 ಜನರ ಮರಣಕ್ಕೆ
ಕಾರಣವಾಗುತ್ತದೆ. 2014 ರ ಆದಿಭಾಗದಲ್ಲಿ ಆರಂಭವಾದ ವೈರಸ್ ಹಾವಳಿ ಬಹಳ ದೊಡ್ಡದಾಗಿ ಹೊಮ್ಮಿದ ವೈರಸ್ ಹಾವಳಿ ಎಂದು ಗಣಿಸಲಾಗಿದೆ. ಆಗ 21 ತಿಂಗಳುಗಳ ಕಾಲ ಕಾಡಿಸಿದ ಎಬೋಲಾ 28,637 ಜನರಲ್ಲಿ ಕಂಡುಬಂದು 11,315 ಜನರು ಮರಣ ಹೊಂದಿದರು.

೨. ರೇಬಿಸ್ ವೈರಸ್: 1920 ರಿಂದ ಬಳಕೆ ಬಂದಿರುವ ಲಸಿಕೆಗಳ ದೆಸೆಯಿಂದ ಈ ವೈರಸ್ ಹಾವಳಿ ಬಹಳಷ್ಟು ಕಡಿಮೆಯಾಗಿದೆ. ಆದರೂ ಭಾರತ ಮತ್ತು ಆಫ್ರಿಕಾದ ಹಲವಾರು ದೇಶಗಳಲ್ಲಿ ಈ ಕಾಯಿಲೆ ಇನ್ನೂ ಹಲವರನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ದುರದೃಷ್ಟಕರ. ಇದು ಮಿದುಳಿಗೆ ತೊಂದರೆ ಉಂಟುಮಾಡುವ ಕಾಯಿಲೆ. ಒಂದು ವೇಳೆ ಸೂಕ್ತ ಲಸಿಕೆಯಿಂದ ಚಿಕಿತ್ಸೆ ಮಾಡದಿದ್ದರೆ ನೂರಕ್ಕೆ ನೂರರಷ್ಟು ಅಂತಹ ವ್ಯಕ್ತಿಯ ಮರಣ ಖಚಿತ.

೩. ಸಿಡುಬು (small pox): 1980 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಿಡುಬು ಕಾಯಿಲೆ ಜಗತ್ತಿನಿಂದ ನಿರ್ಮೂಲನವಾಗಿದೆ ಎಂದು ಘೋಷಿಸಿತು. ಅದಕ್ಕೆ ಮೊದಲು ಮಾನವ ಸಾವಿರಾರು ವರ್ಷಗಳ ಕಾಲ ಈ ಸಿಡುಬು ಕಾಯಿಲೆಯಿಂದ ವಿಪರೀತ ತೊಂದರೆ ಅನುಭವಿಸಿದ್ದಾನೆ. ಈ ಕಾಯಿಲೆ ತಗುಲಿದ ಮೂವರಲ್ಲಿ ಒಬ್ಬರನ್ನು ಬಲಿತೆಗೆದುಕೊಂಡಿದೆ. ಹಾಗೆಯೇ ಬದುಕುಳಿದ ವರಲ್ಲಿ ದೊಡ್ಡ ದೊಡ್ಡ ಗಾಯ, ಗುರುತು, ಕಲೆಗಳನ್ನು (ಅದರಲ್ಲಿಯೂ ಹೆಚ್ಚಿನ ಸಂದರ್ಭ ಮುಖದ ಮೇಲೆ) ಉಳಿಸಿದೆ. ಕೆಲವರಲ್ಲಿ ಕಣ್ಣಿಗೂ ಹಬ್ಬಿ ಅಂಧತ್ವವನ್ನು ತಂದಿದೆ.

ಆರಂಭದಲ್ಲಿ ಯುರೋಪಿನ ಹೊರಗೆ ಈ ಕಾಯಿಲೆ ಪರಿಚಿತವಲ್ಲದ್ದರಿಂದ ವಲಸಿಗರು ಬಂದು ಕಾಯಿಲೆ ಹಬ್ಬಿಸಿದಾಗ ಸ್ಥಳೀಯ ಜನರ ಮರಣದ ಸಂಖ್ಯೆ ತುಂಬಾ ಜಾಸ್ತಿಯಾಗಿತ್ತು. ಯುರೋಪಿನಿಂದ ಅಮೆರಿಕಕ್ಕೆ ಈ ಕಾಯಿಲೆ ಕಾಲಿಟ್ಟಾಗ ಅಲ್ಲಿ
ಕಾಯಿಲೆಗೆ ಒಳಗಾದವರಲ್ಲಿ ಶೇಕಡಾ 90 ಜನರು ಮರಣ ಹೊಂದಿದರು. 20 ನೇ ಶತಮಾನದಲ್ಲಿಯೇ ಸುಮಾರು
30 ಕೋಟಿ ಜನರ ಮರಣಕ್ಕೆ ಕಾರಣವಾಗಿದೆ.

4. ಇನ್-ಯೆಂಜಾ ಅಥವಾ – ಜ್ವರ: ಜಗತ್ತಿನಲ್ಲಿ – ಸಾಂಕ್ರಾಮಿಕ ಜಾಸ್ತಿ ಪ್ರಮಾಣದಲ್ಲಿ ಬಂದರೆ ಸುಮಾರು 5 ಲಕ್ಷ ಜನರು ಈ
ಕಾಯಿಲೆಯಿಂದ ಮರಣ ಹೊಂದುತ್ತಾರೆ. ಅಲ್ಲದೆ ಕೆಲವೊಮ್ಮೆ ಹೊಸ – ವೈರಸ್ ಸಾಂಕ್ರಾಮಿಕ ರೀತಿ ಕಾಣಿಸಿಕೊಂಡರೆ ಇನ್ನೂ ಹೆಚ್ಚಿನ ಜನರು ಈ ಕಾಯಿಲೆಯಿಂದ ಅಸು ನೀಗುತ್ತಾರೆ. ಅತಿ ದೊಡ್ಡ ಸಾಂಕ್ರಾಮಿಕ ಸ್ಪಾನಿಷ್ – ಸಾಂಕ್ರಾಮಿಕ 1918
ರಲ್ಲಿ ಕಾಣಿಸಿಕೊಂಡು ಜಗತ್ತಿನ ಶೇಕಡಾ 40 ರಷ್ಟು ಜನರಿಗೆ ಕಾಯಿಲೆ ಬಂದಿತ್ತು. ಹಾಗೂ ಸುಮಾರು 5 ಕೋಟಿ ಜನರು ಮರಣ ಹೊಂದಿದ್ದರು.

5. ಮೆರ್ಸ್: ಮಿಡ್ಲ್ ಈ ರೆಸ್ಪಿರೇಟರಿ ಸಿಂಡ್ರೋಮ್ ಎಂಬ ಈ ಕಾಯಿಲೆ ಸೌದಿ ಅರೇಬಿಯಾದಲ್ಲಿ 2012 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಹಾಗೂ 2015 ರಲ್ಲಿ ದಕ್ಷಿಣ ಕೊರಿಯಾದಲ್ಲಿ ಕಂಡು ಬಂದಿತು. ಸಾರ್ಸ್ ವೈರಸ್ ಗುಂಪಿಗೇ ಸೇರಿದ ಈ ಮೆರ್ಸ್ ವೈರಸ್ ಬಾವಲಿಯ ಮೂಲದಿಂದ ಬಂದಿದೆ. ಮನುಷ್ಯನಿಗೆ ಕಾಯಿಲೆ ಬರುವ ಮೊದಲು ಒಂಟೆಗಳಲ್ಲಿ ಬಂದು ನಂತರ ಮನುಷ್ಯರಲ್ಲಿ ಕಾಣಿಸಿಕೊಂಡಿತು.

ಜ್ವರ, ಕೆಮ್ಮು, ದಮ್ಮಿನ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ತೀರ್ವ ರೀತಿಯ ನ್ಯುಮೋನಿಯಾಕ್ಕೆ ತಿರುಗಿ
ಶೇಕಡಾ 30 ರಿಂದ 50 ಜನರು ಮರಣ ಹೊಂದುತ್ತಾರೆ. ಇದಕ್ಕೆ ಚಿಕಿತ್ಸೆ ಹಾಗೂ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲ.