Thursday, 12th December 2024

ಬಿ ಗುಂಪಿನ ವಿಟಾಮಿನ್‌ಗಳ ಮೂಲ, ಅವಶ್ಯಕತೆಗಳು

ಸ್ವಾಸ್ಥ್ಯ ಸಂಪದ

Yoganna55@gmail.com

ದೇಹದಲ್ಲಿ ಜರುಗುವ ನಾನಾ ಚಯಾ ಪಚಯ ಕ್ರಿಯೆಗಳಿಗೆ ಅತ್ಯಂತ ಅಲ್ಪ ಪ್ರಮಾಣದಲ್ಲಿ ವಿಟಮಿನ್‌ಗಳು ಅತ್ಯವಶ್ಯಕವಾದುದರಿಂದ ಪ್ರತಿನಿತ್ಯ ಇವುಗಳನ್ನು ಸೇವಿಸಬೇಕು. ಸೇವಿಸುವ ಆಹಾರದಲ್ಲಿ ವಿಟಮಿನ್ ಗಳ ಕೊರತೆಯಾದಲ್ಲಿ ಕಾಯಿಲೆ ಉದ್ಭವಿಸುತ್ತವೆ.

ಕಾರ್ಬೋಹೈಡ್ರೇಟ್, ಜಿಡ್ಡು, ಪ್ರೋಟೀನ್ ಅಥವಾ ಲವಣವಲ್ಲದ ಅಲ್ಪ ಪ್ರಮಾಣದಲ್ಲಿ ನಿರ್ದಿಷ್ಟ ಚಯಾ ಪಚಯ ಕ್ರಿಯೆಗೆ ಅವಶ್ಯಕ, ದೇಹದೊಳಗೆ ತಯಾರಿಸಲಾಗದ ಆಹಾರದಿಂದಲೇ ಸರಬರಾಜು ಮಾಡಬೇಕಾದ ಪ್ರಮುಖ ಆರ್ಗ್ಯಾನಿಕ್ ಆಹಾರ ವಸ್ತುವಿದು. ಹಲವಾರು ಬಗೆಯ ವಿಟಮಿನ್ ಗಳಿದ್ದು, ಪ್ರತಿಯೊಂದು ವಿಟಮಿನ್ ಒಂದೊಂದು ನಿರ್ದಿಷ್ಟ ಕಾರ್ಯಗಳನ್ನು ಹೊಂದಿದ್ದು, ಒಂದು ಬಗೆಯ ವಿಟಮಿನ್ ಮತ್ತೊಂದರ ಕಾರ್ಯ ವನ್ನು ನಿರ್ವಹಿಸುವುದಿಲ್ಲವಾದುದರಿಂದ ಪ್ರತಿಯೊಂದು ವಿಟಮಿನ್‌ನನ್ನು ಆಹಾರದ ಮೂಲಕವೇ ಸೇವಿಸ ಬೇಕು.

ವಿಟಮಿನ್‌ಗಳು ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿಯೇ ಕ್ರಿಯಾತ್ಮಕ ರೂಪದಲ್ಲಿರುತ್ತವೆ. ಕೆಲವು ಮಾತ್ರ ಆಹಾರದಲ್ಲಿ ನಿಷ್ಕ್ರಿಯಕಾರಕ ರೂಪದಲ್ಲಿದ್ದು, ಸೇವಿಸಿದ ನಂತರ ದೇಹದಲ್ಲಿ ಕ್ರಿಯಾತ್ಮಕ ರೂಪವಾಗಿ ಪರಿವರ್ತನೆಯಾಗುತ್ತವೆ. ಉದಾ ವಿಟಮಿನ್ ಎ ಆಹಾರದಲ್ಲಿ ಕೆರೋಟಿನಾಯ್ಡ್ ರೂಪದಲ್ಲಿದ್ದು, ದೇಹದೊಳಗೆ ಅದು ಕ್ರಿಯಾತ್ಮಕ ರೂಪವಾದ ವಿಟಮಿನ್ ಎಲ್ಲಾ ಆಗಿ ಪರಿವರ್ತನೆಯಾಗುತ್ತದೆ. ನೀರಿನಲ್ಲಿ ಕರಗುವ ವಿಟಮಿನ್‌ ಗಳು ದೇಹದಲ್ಲಿ ಶೇಖರಣೆಯಾಗುವುದಿಲ್ಲವಾದುದರಿಂದ ಪ್ರತಿನಿತ್ಯ ಅವಶ್ಯಕ ಪ್ರಮಾಣವನ್ನು ಆಹಾರದಿಂದಲೇ ಅವುಗಳನ್ನು ಸೇವಿಸಬೇಕು.

ನೀರಿನಲ್ಲಿ ಕರಗುವ ವಿಟಮಿನ್‌ಗಳು ಸಸ್ಯಾಹಾರದಲ್ಲಿ ಮತ್ತು ಜಿಡ್ಡಿನಲ್ಲಿ ಕರಗುವ ವಿಟಮಿನ್‌ಗಳು ಪ್ರಾಣಿಜನ್ಯವಾಗಿದ್ದು, ಮಾಂಸಾಹಾರದಿಂದ ಅಧಿಕ ವಾಗಿ ಲಭಿಸುತ್ತವೆ. ವಿಟಮಿನ್‌ಗಳು ಕರಗುವ ಮಾಧ್ಯಮವನ್ನಾಧರಿಸಿ ಅವುಗಳನ್ನು ನೀರಿನಲ್ಲಿ ಕರಗುವ ವಿಟಮಿನ್‌ಗಳು ಮತ್ತು ಜಿಡ್ಡಿನಲ್ಲಿ ಕರಗುವ ವಿಟಮಿನ್‌ಗಳು ಎಂದು ೨ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಬಿ ಗುಂಪು ಮತ್ತು ಸಿ ಗುಂಪಿನ ವಿಟಮಿನ್‌ಗಳು ನೀರಿನಲ್ಲಿ ಕರಗುವ ವಿಟಮಿನ್‌ಗಳಾಗಿದ್ದು, ದೇಹದಲ್ಲಿ ಇವು ಬಹು ಬೇಗ ಹೀರಲ್ಪಡುತ್ತವೆ ಮತ್ತು ಅತಿಯಾದ ಹೆಚ್ಚಿನ ಪ್ರಮಾಣ ಮೂತ್ರದಲ್ಲಿ ವಿಸರ್ಜನೆಯಾಗುತ್ತವೆ.

ಈ ಗುಂಪಿನ ವಿಟಮಿನ್‌ಗಳ ಕೆಲವು ಪ್ರಮಾಣ ಅಡಿಗೆ ಪ್ರಕ್ರಿಯೆಯಲ್ಲಿ ನಾಶ ಹೊಂದುವುದರಿಂದ ಇವುಗಳನ್ನು ಅವಶ್ಯಕತೆಗಿಂತ ತುಸು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬಿ ಗುಂಪಿನ ವಿಟಮಿನ್‌ಗಳಲ್ಲಿ ಥಯಾ ಮಿನ್, ರೈಬೋ-ವಿನ್, ನಯಾಸಿನ್, ಪೈರಿಡಾ ಕ್ಸಿನ್, -ಲಿಕ್ ಆಮ್ಲಗಳಾಗಿವೆ ಎಂಬ ವಿಧಗಳಿವೆ.

ಜಿಡ್ಡಿನಲ್ಲಿ ಕರಗುವ ವಿಟಮಿನ್‌ಗಳು: ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕೆ ಇವು ಜಿಡ್ಡಿನಲ್ಲಿ ಕರಗುವ ವಿಟಮಿನ್‌ಗಳಾಗಿವೆ. ಇವು
ಜಿಡ್ಡಿನ ಸಮಕ್ಷಮದಲ್ಲಿ ಮಾತ್ರ ಜೀರ್ಣಾಂಗದಲ್ಲಿ ರಕ್ತಕ್ಕೆ ಹೀರಿಕೆಯಾಗುವುದರಿಂದ ಆಹಾರದಲ್ಲಿ ಜಿಡ್ಡಿನಾಂಶಗಳಿದ್ದರೆ ಮಾತ್ರ ಇವು ರಕ್ತಗತವಾಗುತ್ತವೆ. ಈಲಿಯಿಂದ ಸುರಿಕೆಯಾಗುವ ಬೈಲ್ ರಸ ಇವುಗಳ ರಕ್ತಗತವಾಗುವುದನ್ನು ಪ್ರೋತ್ಸಾಹಿಸುತ್ತದೆ. ಈಲಿರಸದ ಕೊರತೆ ಇರುವವರಲ್ಲಿ ಈ ವಿಟಮಿನ್‌ಗಳು
ಸೂಕ್ತ ಪ್ರಮಾಣದಲ್ಲಿ ರಕ್ತಗತವಾಗದೆ ಕೊರತೆ ಯುಂಟಾಗುತ್ತದೆ. ಈ ವಿಟಮಿನ್‌ಗಳು ದೇಹದಲ್ಲಿ ಶೇಖರಣೆಯಾಗುವುದರಿಂದ ಒಮ್ಮೆ ಹೆಚ್ಚಾಗಿ
ಸೇವಿಸಿದಲ್ಲಿ ಕೊರತೆಯಾದಾಗ ಶೇಖರಿಸಲ್ಪಟ್ಟ ಮಿಟಮಿನ್‌ಗಳು ಉಪಯೋಗಿಸಲ್ಪಡುತ್ತವೆ. ಸಹಜ ಅಡಿಗೆ ಪ್ರಕ್ರಿಯೆಯಲ್ಲಿ ಇವು ಹೆಚ್ಚು ಪ್ರಮಾಣದಲ್ಲಿ
ನಾಶವಾಗುವುದಿಲ್ಲ.

ಥಯಾಮಿನ್ (ಬಿ೧): ಬಿ ಗುಂಪಿನ ವಿಟಮಿನ್ ಆಗಿದ್ದು ಗ್ಲುಕೋಸ್‌ನಿಂದ ಶಕ್ತಿ ಬಿಡುಗಡೆಯಾಗಲು ಮತ್ತು ಗ್ಲುಕೋಸ್ ಜಿಡ್ಡಾಗಿ ಪರಿವರ್ತನೆ ಹೊಂದಲು
ಸಹಾಯಮಾಡಿ ಶಕ್ತಿ ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಜೀರ್ಣಾಂಗ, ನರ ಮತ್ತು ಹೃದಯ-ರಕ್ತನಾಳ ವ್ಯವಸ್ಥೆಗಳಲ್ಲಿ ಗ್ಲುಕೋಸ್‌ನಿಂದ ಶಕ್ತಿ ಉತ್ಪತ್ತಿಯಾಗಲು ಇದು ಅತ್ಯವಶ್ಯಕ. ಇದರ ಕೊರತೆಯಾದಲ್ಲಿ ಬೆರಿಬೆರಿ ಎಂಬ ಕಾಯಿಲೆ ಉಂಟಾಗುತ್ತದೆ. ಈ ಕಾಯಿಲೆಯಲ್ಲಿ ಜೀರ್ಣಾಂಗ, ನರಮಂಡಲ ಮತ್ತು ಹೃದಯ-ರಕ್ತನಾಳ ವ್ಯವಸ್ಥೆಗಳು ಕಾಯಿಲೆಗೀಡಾಗುತ್ತವೆ. ಜೀರ್ಣಾಂಗದ ತೊಂದರೆಗಳಾದ ಹಸಿವು ಕಡಿಮೆಯಾಗುವಿಕೆ, ಅಜೀರ್ಣ, ಮಲಬದ್ಧತೆ
ಮತ್ತಿತರ ಜೀರ್ಣಾಂಗ ಅವ್ಯವಸ್ಥೆಗಳು ಉಂಟಾಗುತ್ತವೆ. ನರ ಮಂಡಲದ ಶಕ್ತಿಗೆ ಗ್ಲುಕೋಸ್ ಅತ್ಯವಶ್ಯಕ.

ಈ ವಿಟಮಿನ್ ಕೊರತೆ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾನಸಿಕ ತಳಮಳ, ಸುಸ್ತು ಸಂಕಟ, ಕೈಕಾಲುಗಳ ಉರಿ, ಅಂತಿಮವಾಗಿ ಲಕ್ವ ಸಂಭವಿಸುತ್ತದೆ. ಇದರ ಕೊರತೆಯಿಂದ ಹೃದಯ ಮತ್ತು ರಕ್ತನಾಳಗಳಲ್ಲಿ ನಿಶ್ಯಕ್ತಿಗಳುಂಟಾಗಿ ಹೃದಯದ ವೈPಲ್ಯ ಮತ್ತು ರಕ್ತನಾಳಗಳು ಹಿಗ್ಗಿ
ಕಾಲುಗಳು ಊತಕ್ಕೀಡಾಗುತ್ತವೆ. ಸಕ್ಕರೆ, ಜಿಡ್ಡು ಮತ್ತು ಎಣ್ಣೆಗಳನ್ನು ಹೊರತುಪಡಿಸಿ ಇನ್ನೆಲ್ಲ ಆಹಾರ ಪದಾರ್ಥಗಳಲ್ಲೂ ಈ ವಿಟಮಿನ್ ಇರುತ್ತದೆ
ಯಾದರೂ ಪಾಲಿಷ್ ಮಾಡದ ಅಕ್ಕಿ, ಗೋಧಿ, ಬೇಳೆಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ತರಕಾರಿ, ಹಣ್ಣುಗಳು, ಹಾಲು, ಮೀನು, ಹಂದಿಮಾಂಸ ಗಳಲ್ಲೂ ಇರುತ್ತದೆ. ಪ್ರತಿನಿತ್ಯ ಅವಶ್ಯಕ ೧೦೦ ಕ್ಯಾಲೊರಿ ಶಕ್ತಿಗೆ ೦.೫ಮಿ.ಗ್ರಾಂ ಅಂದರೆ ಸಾಮಾನ್ಯ ಮನುಷ್ಯನಿಗೆ ೧ಮಿ.ಗ್ರಾಂ ಪ್ರತಿನಿತ್ಯ ಅವಶ್ಯಕ.

ಇವುಗಳನ್ನು ಬೇಯಿಸಿದ ನೀರನ್ನು ಉಪಯೋಗಿಸದೆ ಹೊರ ಚೆಲ್ಲುವುದರಿಂದ ಇದು ದೇಹಕ್ಕೆ ಲಭಿಸದಂತಾಗುತ್ತದೆ. ದೀರ್ಘಕಾಲ ಬೇಯಿಸುವುದರಿಂದ
ಇದು ನಷ್ಟವಾಗುತ್ತದೆ. ಅಡಿಗೆಗೆ ಸೋಡಾ ಉಪಯೋಗಿಸುವುದರಿಂದ ಮತ್ತು ದೀರ್ಘಕಾಲ ಆಹಾರ ಪದಾರ್ಥಗಳನ್ನು ಬೇಯಿಸುವುದರಿಂದ ಈ ವಿಟಮಿನ್ ನಷ್ಟವಾಗುವುದರಿಂದ ಹೀಗೆ ಮಾಡಬಾರದು. ದೀರ್ಘಕಾಲ ಧೂಮಪಾನ ಮಾಡುವವರಲ್ಲೂ ಕೂಡ ಇದರ ಕೊರತೆ ಉಂಟಾಗುತ್ತದೆ.

ರೈಬೋ-ವಿನ್: ದೇಹದಲ್ಲಿ ಶಕ್ತಿ ಉತ್ಪತ್ತಿ ಮತ್ತುಅಂಗಾಂಶಗಳ ರಚನೆಯಲ್ಲಿ ಈ ಪ್ರೋಟೀನ್ ಪ್ರಮುಖಪಾತ್ರ ವಹಿಸುತ್ತದೆ. ಮ್ಯೂಕಸ್ ಪದರದ
ರಚನೆ ಮತ್ತು ಕಾರ್ಯ ನಿರ್ವಹಣೆಗೆ ಅತ್ಯವಶ್ಯಕ. ಹಾಲು, ಮೊಸರು ಮತ್ತು ಮಜ್ಜಿಗೆಯಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ತುಪ್ಪ ಮತ್ತು
ಬೆಣ್ಣೆಯಲ್ಲಿ ಇದಿರುವುದಿಲ್ಲ. ಕಾಳುಗಳು, ಹಸಿರು ತರಕಾರಿಗಳು, ಮೊಟ್ಟೆ ಮತ್ತು ಮಾಂಸಗಳಲ್ಲೂ ಇದಿರುತ್ತದೆ. ಪ್ರತಿನಿತ್ಯ ೦.೭ಮಿ.ಗ್ರಾಂ-೧.೭ಮಿ.
ಗ್ರಾಂ. ಇದರ ಕೊರತೆಯಿಂದ ಕಣ್ಣುಗಳು, ಚರ್ಮ ಮತ್ತು ನರಗಳು ಬಹುಬೇಗ ಕಾಯಿಲೆಗೀಡಾಗುತ್ತವೆ.

ಕಣ್ಣಿನ ರೆಪ್ಪುಗಳು ಒರಟಾಗುವಿಕೆ, ಬಿಸಿಲಿಗೆ ಕಣ್ಣು ಬಿಡಲಾಗದಿರುವಿಕೆ, ಬಾಯಿ, ನಾಲಿಗೆ ಮತ್ತುತುಟಿಗಳ ಚರ್ಮಗಳ ಕೆಂಪಾಗಿ ಒಡೆಯುವಿಕೆ,
ವೃಷಣ ಚೀಲ ಚರ್ಮದ ಊತುರಿ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ವಿಟಮಿನ್ ಚೆನ್ನಾಗಿ ನೀಡುವುದರಿಂದ ಈ ಕೊರತೆಯನ್ನು
ಸರಿದೂಗಿಸಲಾಗುತ್ತದೆ.

ನಯಾಸಿನ್(ನಿಕೋಟಿನಿಕ್ ಆಸಿಡ್): ಇದರಲ್ಲಿ ನಿಕೋಟಿನಿಕ್ ಆಸಿಡ್ ಮತ್ತು ನಿಕೋಟಿನಮೈಡ್ ಎಂಬ ೨ ಅಂಶಗಳಿದ್ದು, ಇವು ರೈಬೋ-ವಿನ್ ಮತ್ತು
ಥೈಮಿನ್ ಜತೆಗೂಡಿ ಗ್ಲುಕೋಸ್‌ನಿಂದ ಶಕ್ತಿ ಉತ್ಪತ್ತಿಯಲ್ಲಿ ಸಹಕಾರಿಯಾಗುತ್ತದೆ. ಅಂಗಾಂಶಗಳ ಬೆಳವಣಿಗೆಗೂ ಇದು ಸಹಕಾರಿ. ಟ್ರಿಪ್ರೋ-ನ್
ಅಮೈನಾಮ್ಲದಿಂದ ದೇಹದಲ್ಲಿ ಇದು ತಯಾರಾಗುವುದರಿಂದ ಈ ಅಂಶಗಳನ್ನುಳ್ಳ ಆಹಾರ ಪದಾರ್ಥಗಳ ಸೇವನೆಯಿಂದಲೂ ಇದು ಲಭಿಸುತ್ತದೆ. ಕಡಲೆ ಕಾಯಿ ಬೀಜದಲ್ಲಿ ಇದು ಹೆಚ್ಚಿನ ಪ್ರಮಾಣ ದಲ್ಲಿರುತ್ತದೆ.

ಮಾಂಸಾಹಾರದಲ್ಲಿ ಈಲಿಯಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಪಾಲಿಷ್ ಮಾಡದ ಅಕ್ಕಿ ಮತ್ತು ಗೋಧಿಯಲ್ಲೂ ಸಹ ಇದಿದೆ. ಹಾಲು, ಮೊಟ್ಟೆ,
ತರಕಾರಿ ಮತ್ತು ಹಣ್ಣುಗಳಲ್ಲಿ ಅಲ್ಪಪ್ರಮಾಣದಲ್ಲಿದೆ. ಪ್ರತಿನಿತ್ಯ ೧೦೦೦ಕ್ಯಾಲೊರಿ ಶಕ್ತಿ ಉತ್ಪತ್ತಿಗೆ ೬.೬.ಮಿ. ಗ್ರಾಂ ಅತ್ಯವಶ್ಯಕವಾಗಿದ್ದು, ಪ್ರತಿನಿತ್ಯ ೮-೨೬ಮಿ. ಗ್ರಾಂ ವಯಸ್ಸು ಮತ್ತು ಕಾರ್ಯಚಟುವಟಿಕೆಗನುಗುಣವಾಗಿ ಅವಶ್ಯಕ. ಇದರ ಕೊರತೆಯಿಂದ ಪೆಲ್ಲಗ್ರಾ ಎಂಬ ಕಾಯಿಲೆ ಉಂಟಾಗುತ್ತದೆ.

ಚರ್ಮ, ಜೀರ್ಣಾಂಗ ಮತ್ತು ನರ ತೊಂದರೆಗಳುಂಟಾಗಿ, ಭೇದಿ, ಡಿಮೆನ್ಷಿಯಾ ಮತ್ತು ಚರ್ಮೋತುರಿ ಹಾಗೂ ಚರ್ಮ ಕಪ್ಪುಬಣ್ಣವಾಗುವಿಕೆ ತೊಂದರೆ ಗಳುಂಟಾಗುತ್ತವೆ. ನಿದ್ರಾಹೀನತೆ, ತಳಮಳ, ಭಯ, ಮನಕುಂದಿಕೆ, ಮರೆವು ಅಂತಿಮದಲ್ಲಿ ಡಿಮೆನ್ಷಿಯಾಗಳುಂಟಾಗುತ್ತವೆ. ಇದನ್ನು ಔಷಧ ರೂಪದಲ್ಲಿ ನೀಡುವುದರಿಂದ ತೊಂದರೆಗಳು ನಿವಾರಣೆಯಾಗುತ್ತವೆ.

ಪೈರಿಡಾಕ್ಸಿನ್(ಬಿ೬): ಅಮೈನಾಮ್ಲಗಳ ಚಯಾ ಪಚಯ ಕ್ರಿಯೆಗೆ ಅವಶ್ಯಕವಿರುವ ಹಲವಾರು ಕಿಣ್ವಗಳಿಗೆ ಇದು ಸಹಕಾರಿ ಅಂಶವಾಗಿ ಕಾರ್ಯ
ನಿರ್ವಹಿಸುತ್ತದೆ. ನಿರೋಧಕ ವಸ್ತುಗಳ ಉತ್ಪತ್ತಿಯಲ್ಲಿಯೂ ಇದು ಸಹಕಾರಿ. ದ್ವಿದಳ ಧಾನ್ಯಗಳು, ಗೋಧಿ ಮತ್ತು ಮಾಂಸಗಳಲ್ಲಿ ಇದು ಹೆಚ್ಚಿನ
ಪ್ರಮಾಣದಲ್ಲಿದ್ದು, ಇನ್ನಿತರ ಧಾನ್ಯಗಳಲ್ಲಿ ಇದು ಅಪರೂಪ. ಪ್ರತಿನಿತ್ಯ ೧.೫ ಮಿ.ಗ್ರಾಂ ಅವಶ್ಯಕ.

ಅಡಿಗೆಯಿಂದ ಇದು ನಷ್ಟವಾಗುವುದಿಲ್ಲ. ಇದರ ಕೊರತೆಯಿಂದ ಹೊರನರಗಳ ಊತುರಿಯುಂಟಾಗಿ ಕೈಕಾಲುಗಳ ಉರಿ, ರಕ್ತ ಕೊರತೆ, ನಾಲಿಗೆಯೂ ತುರಿ, ಬಾಯಿ ಊತುರಿ ಇತ್ಯಾದಿ ತೊಂದರೆUಳುಂಟಾಗುತ್ತವೆ. ಇದರ ಕೊರತೆ ಅಪರೂಪ.

-ಲಿಕ್‌ಆಮ್ಲ: ದೇಹದಲ್ಲಿ ಹಲವಾರು ಚಯಾಪಚಯ ಉತ್ಪನ್ನಗಳ ತಯಾರಿಕೆಗೆ ಮತ್ತು ವಿಟಮಿನ್ ಬಿ೧೨ ಜತೆಗೂಡಿ ನ್ಯೂಕ್ಲಿಕ್ ಆಮ್ಲಗಳ ತಯಾರಿಕೆಗೆ ಇದು ಅತ್ಯವಶ್ಯಕ. ಹಸಿರು ಸೊಪ್ಪು, ತರಕಾರಿಗಳು, ಈಲಿ, ಈಸ್ಟ್‌ಗಳಲ್ಲಿ ಅಧಿಕ ಪ್ರಮಾಣದಲ್ಲಿದೆ. ಈ ಆಹಾರ ಪದಾರ್ಥಗಳನ್ನು ಶೇಖರಿಸಿಡುವುದರಿಂದ ಹಾಗೂ ಅಡಿಗೆ ಪ್ರಕ್ರಿಯೆಯಿಂದ ಅದರಲ್ಲೂ ಬೇಯಿಸಿದ ನೀರನ್ನು ಹೊರಚೆಲ್ಲುವುದರಿಂದ ಇದು ದೇಹಕ್ಕೆ ಲಭಿಸದಂತಾಗುತ್ತದೆ.

ಪ್ರತಿನಿತ್ಯ ಸುಮಾರು ೧೦೦ ಮೈಕ್ರೋಗ್ರಾಂ ಅವಶ್ಯಕ. ಗರ್ಭಿಣಿಯರಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾಗುವುದರಿಂದ ಇದರ ಸೇವನೆ ಅತ್ಯವಶ್ಯಕ. ಇದರ ಕೊರತೆಯಿಂದ ಅಸಹಜ, ದಪ್ಪ ಕೆಂಪುರಕ್ತಕಣಗಳು ಉತ್ಪತ್ತಿಯಾಗಿ ರಕ್ತ ಕೊರತೆಯುಂಟಾಗುತ್ತದೆ. ಈ ವಿಟಮಿನ್‌ನನ್ನು ನೀಡುವುದರಿಂದ ಅಸಹಜತೆಗಳು ಸಹಜವಾಗುತ್ತದೆ.

ವಿಟಮಿನ್ ಬಿ೧೨(ಸೈನಾಕೊಬಾಲಮಿನ್):
ಇದರಲ್ಲಿ ಕೊಬಾಲ್ಟ್ ಮತ್ತು ರಂಜಕವಿದ್ದು, ಕೆಂಪುಬಣ್ಣವನ್ನು ಹೊಂದಿದೆ. ಇದು ಪ್ರಾಣಿಜನ್ಯ ಆಹಾರ ಪದಾರ್ಥಗಳಿಂದ ಮಾತ್ರ ಲಭಿಸುತ್ತದೆ. ಸಸ್ಯಜನ್ಯ ಆಹಾರ ಪದಾರ್ಥಗಳಿಂದ ಇದು ಲಭಿಸುವುದಿಲ್ಲ. ಈಲಿ, ಮಾಂಸ, ಹಾಲು, ಮೊಟ್ಟೆ, ಮೀನು ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿದೆ. ಸಂಸ್ಕರಿಸಿದ ಕೃತಕ ಆಹಾರ ಪದಾರ್ಥಗಳಲ್ಲಿ ಇದು ಲಭ್ಯವಿರುವುದಿಲ್ಲ. ಹಾಲನ್ನು ಪಾಶ್ಚೀಕರಣ ಮಾಡುವುದರಿಂದ ಶೇ ೧೦ರಷ್ಟು ಮತ್ತು ಹಾಲನ್ನು ಮುಚ್ಚದೆ ಗಾಳಿಗೆ
ಇಡುವುದರಿಂದ ಶೇ೪೦ರಿಂದ ಸ೯೦ರಷ್ಟು ಈ ವಿಟಮಿನ್ ನಷ್ಟವಾಗುತ್ತದೆ. ಇದರ ಕೊರತೆಯಿಂದ ಬಾಯಿ ಮತ್ತು ನಾಲಿಗೆಯಲ್ಲಿ ಹುಣ್ಣು, ಸುಸ್ತು,
ತೂಕನಷ್ಟ, ಕೈ ಕಾಲುಗಳು ನೋವು ಮತ್ತು ಉರಿ, ಮಾನಸಿಕ ಮತ್ತು ನರಮಂಡಲದ ಅವ್ಯವಸ್ಥೆಗಳು ಇತ್ಯಾದಿಗಳು ತೊಂದರೆಗಳುಂಟಾಗುತ್ತವೆ.

ಮೆದುಳು ಬಳ್ಳಿ ರಚನೆ ಅವನತಿಗೀಡಾಗಿ ಕೈಕಾಲುಗಳ ಲಕ್ವ ಸಂಭವಿಸಬಹುದು. ಕೆಂಪುರಕ್ತಕಣಗಳ ಉತ್ಪತ್ತಿಯ ತೊಂದರೆಗಳುಂಟಾಗುತ್ತವೆ. ಈ ವಿಟಮಿನ್ ಜೀರ್ಣಾಂಗದಲ್ಲಿ ರಕ್ತಗತವಾಗಲು ಜಠರರಸದ ಒಳಾಂಶ ಅವಶ್ಯಕವಿದ್ದು, ಇದರ ಕೊರತೆ ಇರುವವರಲ್ಲಿ ಈ ವಿಟಮಿನ್ ಆಹಾರದಲ್ಲಿದ್ದರೂ ರಕ್ತಕ್ಕೆ ಹೀರಲ್ಪಡದೆ ಕೊರತೆಯ ತೊಂದರೆಗಳುಂಟಾಗುತ್ತವೆ. ಅದರಲ್ಲೂ ದೊಡ್ಡ ಕೆಂಪುರಕ್ತಕಣಗಳನ್ನುಳ್ಳ ರಕ್ತಹೀನತೆ ಉಂಟಾಗುತ್ತದೆ. ಇದನ್ನು ಪರ್ನೀಷಿಯಸ್ ಅನಿಮಿಯಾ ಎನ್ನಲಾಗುತ್ತದೆ. ಈ ವಿಟಮಿನ್‌ನನ್ನು ಚುಚ್ಚುಮದ್ದಿನ ಮೂಲಕ ನೀಡಿ ಕೊರತೆಯನ್ನು ನೀಗಿಸಲಾಗುತ್ತದೆ.

ವಿಟಮಿನ್ ಸಿ(ಆಸ್ಕಾರ್ಬಿಕ್ ಆಸಿಡ್): ಇದು ಅಂಗಾಂಶಗಳನ್ನು ಪರಸ್ಪರ ಹಿಡಿದಿಡುವ ಬಂಧಕ ಅಂಗಾಂಶಗಳಾದ ಮೂಳೆ, ಕಾರ್ಟಿಲೇಜ್, ಡೆಂಟಿಲ್,
ಕೊಲ್ಯಾಜಿನ್‌ಗಳ ಉತ್ಪತ್ತಿಗೆ ಇದು ಅತ್ಯವಶ್ಯಕವಾಗಿದ್ದು, ಈ ಅಂಗಾಂಶಗಳು ದೇಹದ ಎಲ್ಲಾ ಭಾಗಗಳಲ್ಲೂ ಇರುವುದರಿಂದ ಅವ್ಯವಸ್ಥೆಗಳುಂಟಾಗುತ್ತವೆ. ರಕ್ತನಾಳಗಳ ಗೋಡೆಗಳ ರಚನೆಗೆ ಇದು ಅತ್ಯವಶ್ಯಕವಾಗಿದ್ದು, ಇದರ ಕೊರತೆಯಾದಲ್ಲಿ ರಕ್ತನಾಳಗಳು ಶಿಥಿಲವಾಗಿ ರಚಿತವಾಗಿ ಒಡೆದು ರಕ್ತಸ್ರಾವವುಂಟಾಗುತ್ತದೆ. ಅಂಗಾಂಶಗಳ ರಚನೆಗೆ ಅವಶ್ಯಕವಿರುವ ಪ್ರೋಟೀನ್‌ಗಳ ಉತ್ಪತ್ತಿಗೂ ಇದು ಅತ್ಯವಶ್ಯಕ.

ದೇಹದ ಅಂಗಾಂಗಗಳ ಬೆಳವಣಿಗೆಗೂ ಇದು ಸಹಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತ. ಕ್ಯಾಲ್ಷಿಯಂ, ಕಬ್ಬಿಣಗಳು ಜೀರ್ಣಾಂಗದಲ್ಲಿ ರಕ್ತಗತವಾಗಲು ಇದು ಅಗತ್ಯ. ಗಾಯಗಳು ಮಾಯಲು, ಸೋಂಕುಗಳು ನಿವಾರಣೆಯಾಗಲು ಮತ್ತು ಕಾಯಿಲೆಗಳಿಂದ ಗುಣಮುಖ ರಾಗಲು ಇದು ಸಹಕಾರಿಯಾಗುತ್ತದೆ. ಮುಕ್ರ ರ‍್ಯಾಡಿ ಕಲ್‌ಗಳನ್ನು ಬಂಧಿಸಿ ಅವುಗಳಿಂದುಂಟಾ ಗಬಹುದಾದ ದುಷ್ಪರಿಣಾಮಗಳಿಂದ ದೇಹವನ್ನು ರಕ್ಷಿಸುತ್ತದೆ.

ನೆಲ್ಲಿಕಾಯಿಯಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸೀಬೆ, ಕಿತ್ತಳೆ, ನಿಂಬೆ, ದ್ರಾಕ್ಷಿ, ದಾಳಿಂಬೆ, ನುಗ್ಗೆಕಾಯಿ, ಕೋಸು, ಮೊಳಕೆ ಕಟ್ಟಿದ
ಹೆಸರು ಕಾಳು, ಕಡ್ಲೆಕಾಳು ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ತಾಜಾ ಹಣ್ಣು ಮತ್ತು ತರಕಾರಿಗಳಲ್ಲಿ ಅತಿ ಹೆಚ್ಚು. ಬೇಯಿಸಿದ ನೀರನ್ನು ಬಿಸಾಡದೆ ಉಪಯೋಗಿಸುವುದರಿಂದ ಮತ್ತು ಆಹಾರಕ್ಕೆ ಸೋಡಾವನ್ನು ಹಾಕದೇ ಇರುವುದರಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಲಭಿಸುತ್ತದೆ. ಪ್ರತಿನಿತ್ಯ
೨೦-೪೦ಮಿ.ಗ್ರಾಂ ಅವಶ್ಯಕ. ಇದರ ಕೊರತೆಯಿಂದ ಸ್ಕವಿರ್ ಎಂಬ ಕಾಯಿಲೆ ಉಂಟಾಗುತ್ತದೆ.

ವಸಡುಗಳು ಊದಿಕೊಳ್ಳುವಿಕೆ ಮತ್ತು ರಕ್ತಸ್ರಾವ, ಕೀಲುಗಳ ಊತ, ನಿಶ್ಯಕ್ತಿ, ಹಸಿವು ಕಡಿಮೆಯಾಗುವಿಕೆ, ಚರ್ಮದ ಉರುಪಾಗುವಿಕೆ ಮತ್ತು ದಪ್ಪ ನಾಗುವಿಕೆ, ಮೂಗು ಮತ್ತಿತರ ಸ್ಥಳಗಳಲ್ಲಿ ರಕ್ತಸ್ರಾವ ಈ ಕಾಯಿಲೆಯ ರೋಗ ಲಕ್ಷಣಗಳು. ವಿಟಮಿನ್ ಸಿ ನೀಡುವುದರಿಂದ ಕೊರತೆಯನ್ನು ನೀಗಿಸ ಲಾಗುತ್ತದೆ. ಬಿ ಗುಂಪಿನ ವಿಟಮಿನ್‌ಗಳು ಮತ್ತು ಸಿ ವಿಟಮಿನ್ ಗಳು ದೇಹದಲ್ಲಿ ಉತ್ಪತ್ತಿಯಾಗದೆ ಇರುವುದರಿಂದಹಾಗೂ ಅವು ದೇಹದಲ್ಲಿ ಶೇಖರಣೆ ಯಾಗುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಇವುಗಳನ್ನು ಪ್ರತಿನಿತ್ಯ ಆಹಾರದಿಂದಲೇ ಪೂರೈಸಬೇಕು.

ಒಂದೊಂದು ಆಹಾರ ಪದಾರ್ಥದಲ್ಲಿ ಒಂದೊಂದು ವಿಟಮಿನ್ ಅಧಿಕ ಪ್ರಮಾಣದಲ್ಲಿರುವುದರಿಂದ ಹಣ್ಣು ಮತ್ತು ಹಸಿ ತರಕಾರಿಗಳನ್ನು ವಿಭಿನ್ನ ಆಹಾರ ಪದಾರ್ಥಗಳೊಡನೆ ಪ್ರತಿನಿತ್ಯ ಸೇವಿಸುವುದರಿಂದ ಇವುಗಳ ಕೊರತೆಯುಂಟಾಗದಂತೆ ಸರಿದೂಗಿಸಿಕೊಳ್ಳಬಹುದು. ಪ್ರತಿನಿತ್ಯ ವಿಟಮಿನ್‌ಗಳ ಪ್ರಮಾಣ ವಯಸ್ಸು, ದೈಹಿಕ ಚಟುವಟಿಕೆಗಳು, ಗರ್ಭಧಾರಣೆ ಇತ್ಯಾದಿಗಳನ್ನವಲಂಬಿಸಿರುತ್ತದೆ.

Read E-Paper click here