Thursday, 12th December 2024

ಆತ್ಮಾವಲೋಕನದಿಂದ ಮತದಾನ ಮಾಡಬೇಕು

ಅಭಿಪ್ರಾಯ

ಶಿವನಗೌಡ ಪೊಲೀಸ್ ಪಾಟೀಲ್

ವೈಯಕ್ತಿಕ ಹಿನ್ನೆಲೆ, ಅವನ ಜ್ಞಾನ, ಅಭಿವೃದ್ಧಿಯ ಆಲೋಚನೆಗಳು, ಮಾತ್ರ ಜನರಿಗೆ ಮಾನದಂಡವಾಗುತ್ತಿದ್ದವು. ಜನರನ್ನ ಆಕರ್ಷಿಸಬಹುದಾದ ತಂತ್ರ ಕುತಂತ್ರಗಳನ್ನ ಎಲ್ಲಾ ರಾಜಕೀಯ ಪಕ್ಷಗಳು ಅಳವಡಿಸಿಕೊಂಡಿರುವುದರಿಂದ ಮತದಾರರಿಗೆ ಮತದಾನದ ಹಕ್ಕು ಬಿಟ್ಟು ಬೇರೆ ಯಾವ ಅಽಕಾರವಿಲ್ಲದೆ ಹಾಗೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಮಹಾಚುನಾವಣೆ ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ತಂತ್ರ ಮಂತ್ರಗಳನ್ನು ಸಿದ್ಧ ಮಾಡಿಕೊಂಡು ಕುಂತಿವೆ. ಪ್ರತಿಯೊಂದು ರಾಜಕೀಯ ಪಕ್ಷದ ಉದ್ದೇಶ ಅಧಿಕಾರವನ್ನು ಪಡೆಯುವುದು, ಆ ಮೂಲಕ ಅಧಿಕಾರದಲ್ಲಿರುವುದು ಆಗಿರುತ್ತದೆ. ಆದ್ದರಿಂದ ಗೆಲ್ಲುವುದೊಂದೇ ಮಾನದಂಡವಾಗಿರುವುದರಿಂದ ಗೆಲ್ಲಲಿಕ್ಕೆ ಬೇಕಾಗಿರುವ ಮಾನ ದಂಡಗಳನ್ನು ಹುಡುಕುತ್ತಾರೆ.

ಅದರಲ್ಲಿ ಜಾತಿ, ಧರ್ಮ, ಹಣ ಇವುಗಳೇ ಹೆಚ್ಚು ವೈಭವೀಕರಿಸುತ್ತವೆ. ಪ್ರಪಂಚದ ಯಾವ ದೇಶದಲ್ಲಿಯೂ ಕೂಡ ಇರದೇ ಇರುವಂತಹ ರಾಜಕೀಯ ದೃವೀಕರಣಗಳು ಚುನಾವಣೆ ಹತ್ತಿರ ಬಂದಾಗ ನಡೆಯುತ್ತವೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರವಾಗುವುದು. ಜಾತಿಯ ಬಲದಿಂದ, ಹಣದ ಬಲದಿಂದ, ವೈಯಕ್ತಿಕ ವರ್ಚಸ್ಸಿನಿಂದ, ಕೆಲವು ಪ್ರಭಾವಗಳಿಂದ ಪ್ರಜಾಪ್ರತಿನಿಽ ಆಗುವ ವ್ಯಕ್ತಿಗಳನ್ನ ಆಯ್ಕೆ ಮಾಡುವುದು ಎಲ್ಲಾ ಪಕ್ಷಗಳ ಸಹಜ ಪ್ರಕ್ರಿಯೆ ಆಗಿರುತ್ತದೆ. ಕೆಲವು ಕೆಲವು ಪಕ್ಷಗಳು ಮಾತ್ರ ಪಕ್ಷದ ಸಿದ್ಧಾಂತ, ವ್ಯಕ್ತಿಯ ವರ್ಚಸ್ಸು, ಅಭಿವೃದ್ಧಿಯ ಚಿಂತನೆಗಳು, ಆಡಳಿತದ ಕಾರ್ಯಶೈಲಿ, ದೂರದೃಷ್ಟಿಯ ಯೋಜನೆಗಳು ಮಾತ್ರ ಮಾನದಂಡವಾಗುತ್ತದೆ.

ಇವುಗಳಲ್ಲದೆ ಉಚಿತ, ಖಚಿತ, ಸುರಕ್ಷಿತ ಯೋಜನೆಗಳನ್ನ ಆಶ್ವಾಸನೆ ಕೊಡುವುದರ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನವನ್ನು ಮಾಡುತ್ತವೆ. ೨೨೪ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಂದು ಸಮೀಕ್ಷೆ ಪ್ರಕಾರ ಕೇವಲ ೧೫% ಜನ ಪ್ರತಿನಿಧಿಗಳು ಮಾತ್ರ ತಮ್ಮ ವೈಯಕ್ತಿಕ ಕಳೆದ ವರ್ಷ ಮಾಡಿದ ಅಭಿವೃದ್ಧಿ ಕಾರ್ಯದಿಂದ ಗೆಲ್ಲುತ್ತಾರೆ. ಶೇಕಡ ೨೦ ರಷ್ಟು ಜನ ಪ್ರತಿನಿಧಿಗಳು ತಮ್ಮ ವೈಯಕ್ತಿಕ ವರ್ಚಸ್ಸಿನ ಜೊತೆಗೆ ಪಕ್ಷದ ನಿಷ್ಠಾವಂತ ಮತದಾರರಿಂದ ಗೆಲ್ಲುತ್ತಾರೆ. ಆದರೆ ಶೇಕಡಾ ೪೫ ರಿಂದ ೬೦ ರವರೆಗೆ ಜನಪ್ರತಿನಿಽಗಳು ಜಾತಿ ಧರ್ಮ ಹಣ ಮತ್ತು ಹಲವಾರು ಪ್ರಭಾವಗಳಿಂದ ಜನಪ್ರತಿನಿಽಗಳಾಗಿ ಆಯ್ಕೆಯಾಗುತ್ತಾರೆ.

ಕೇವಲ ಅಭಿವೃದ್ಧಿ, ದೂರದೃಷ್ಟಿ, ಯಾವುದೇ ಜಾತಿ ಧರ್ಮ ಸಿದ್ಧಾಂತಗಳಿಗೆ ಒಗ್ಗಿಕೊಳ್ಳದೆ, ತಮ್ಮ ಅಭಿವೃದ್ಧಿ ಕಾರ್ಯಗಳೆಲ್ಲ ಗೆಲ್ಲುವವರ ಸಂಖ್ಯೆ ಕೇವಲ ೫% ರಿಂದ ೧೦% ಜನಪ್ರತಿನಿಧಿಗಳು ಆಯ್ಕೆ ಆಗುತ್ತಾರೆ. ಆದ್ದರಿಂದ ಮತದಾರರಾದ ನಾವು ಆಡಳಿತ ನಡೆಸುವಂತಹ ಸುಭದ್ರ ಸರ್ಕಾರ ವನ್ನು ರಚನೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಾದರೆ, ಯಾವುದೇ ಉಚಿತ ಖಚಿತ ಸುರಕ್ಷಿತ ಯೋಜನೆಗಳಿಗೆ ಮಾತಿಗೆ ಮಹತ್ವ ಕೊಡದೆ ತಮ್ಮ ಕ್ಷೇತ್ರವನ್ನು ಕ್ಷೇತ್ರದ ಜನರನ್ನ, ದೇಶದ ಭದ್ರತೆಯನ್ನು, ರಾಜ್ಯದ ಸುರಕ್ಷತೆಯನ್ನ, ಸರ್ವರ ಹಿತಾಸಕ್ತಿಯನ್ನು ಯಾರು ಕಾಪಾಡುತ್ತಾರೋ ಯಾರು ಆ ದೃಷ್ಟಿಕೋನದಲ್ಲಿ ಆಲೋಚನೆಯಲ್ಲಿದ್ದಾರೋ ಅಂಥವರನ್ನು ಆಯ್ಕೆ ಮಾಡಿ ಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ರಾಜಕೀಯ ವ್ಯವಸ್ಥೆ ಸಂಪೂರ್ಣ ಅಲ್ಲೋಲಕಲ್ಲೋಲವಾಗಿರುವುದರಿಂದ ಜನರ ಆಶೋತ್ತರಗಳನ್ನ ಈಡೇರಿಸಬೇಕಾದ ಜನಪ್ರತಿನಿಧಿಗಳು ಆಮಿಷ, ಭ್ರಷ್ಟಾಚಾರ, ನಿರ್ಲಕ್ಷ, ಪಕ್ಷಾಂತರ, ಸ್ವಜನ ಪಕ್ಷಪಾತ, ದ್ವೇಷದ ರಾಜಕಾರಣ ಸಂಪೂರ್ಣ ಇದರ ಮೇಲೆ ನಿರ್ವಹಿಸುತ್ತಿರುವುದರಿಂದ ಇಂದಿನ ರಾಜಕೀಯ ವ್ಯವಸ್ಥೆಯನ್ನ ನೋಡುವವರ ಮನಸ್ಥಿತಿಯೂ ಕೂಡ ರಾಜಕೀಯ ಎಂದರೆ ಇದೇ ವ್ಯವಸ್ಥೆ ಎನ್ನುವ ಮನಸ್ಥಿತಿಗೆ ಬರುವಂತೆ ಮಾಡಿದೆ. ಆದ್ದರಿಂದ ಇಂಥ ಜನಪ್ರತಿನಿಧಿಗಳು ಆಯ್ಕೆಯಾಗಿ ರಾಜಕಾರಣವನ್ನೇ ತಮ್ಮ ಸ್ಥಿತಿಗೆ ಅನುಸಾರವಾಗಿ ಬದಲಾವಣೆ ಮಾಡಿರುವುದರಿಂದ ಅವರನ್ನು ಆಯ್ಕೆ ಮಾಡುವ ಪ್ರಜೆಗಳಾದ ಪ್ರಭುಗಳಾದ ನಾವು ಒಂದು ಸಿದ್ಧಾಂತ, ನೀತಿ ನಿಯಮ, ದೂರದೃಷ್ಟಿಯುಳ್ಳ, ಕ್ಷೇತ್ರದ ಅಭಿವೃದ್ಧಿಗಾಗಿ ಆಲೋಚನೆ ಮಾಡಬಲ್ಲ, ಜಾತಿ ರಹಿತವಾಗಿ ಅಭಿವೃದ್ಧಿ ಮಾಡಬಲ್ಲ, ಧರ್ಮ ನಿರಪೇಕ್ಷಿತವಾಗಿ ಕಾರ್ಯ ಮಾಡಬಲ್ಲ, ಕ್ಷೇತ್ರದ ಜನರ ಆಶೋತ್ತರಗಳನ್ನು ಆಲಿಸಬಲ್ಲ ಪಾಲಿಸಬಲ್ಲ ಜನಪ್ರತಿನಿಧಿಗಳ ಆಯ್ಕೆ ಮಾಡುವ ಮನಸ್ಥಿತಿಯನ್ನು ನಾ ವು ಬದಲಾಯಿಸಿಕೊಂಡರೆ, ಮುಂದೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಕೂಡ ನಮ್ಮ ಮನಸ್ಥಿತಿಯಂತೆ ಅವರ ಮನಸ್ಥಿತಿಯನ್ನು ಬದಲಾಯಿಸಿಕೊಂಡು ರಾಜಕೀಯ ವ್ಯವಸ್ಥೆಯನ್ನು ಸುಧಾರಣೆ ಮಾಡಬಹುದು.

ಒಂದು ಕೈಯಿಂದ ಮಾತ್ರ ಚಪ್ಪಾಳೆ ಹೇಗೆ ಸಾಧ್ಯವಿಲ್ಲವೋ ಹಾಗೆ ಹೀಗಿರುವ ರಾಜಕೀಯ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಬರೀ ರಾಜಕೀಯ ನಾಯಕರಿಂದ ಮಾತ್ರ ಸಾಧ್ಯವಿಲ್ಲ. ಜನಪ್ರತಿನಿಽಗಳ ಆಯ್ಕೆ ಮಾಡುವ ಪ್ರಭುಗಳಾದ ನಾವು ಕೂಡ ಒಂದು ಗಟ್ಟಿ ನಿರ್ಧಾರಕ್ಕೆ ಬಂದು ಆ ನಿರ್ಧಾರ ವನ್ನ ಮತದಾನದ ಮೂಲಕ ಅವರ ಮೇಲೆ ಒತ್ತಡದ ರೀತಿಯಲ್ಲಿ ನಾವು ಹಾಕಿದಾಗ ಅವರೇ ಮತದಾರರ ಮನಸ್ಥಿತಿಯ ಹಾಗೆ ಬದಲಾಗುತ್ತಾರೆ. ಉದಾಹರಣೆ ಮೊದಲೆಲ್ಲ ಚುನಾವಣೆಗಳು ವ್ಯಕ್ತಿಯ ವೈಯಕ್ತಿಕ ವರ್ಚಸ್ಸೋ, ವೈಯಕ್ತಿಕ ಹಿನ್ನೆಲೆ, ಅವನ ಜ್ಞಾನ, ಅಭಿವೃದ್ಧಿಯ ಆಲೋಚನೆಗಳು, ಮಾತ್ರ ಜನರಿಗೆ ಮಾನದಂಡವಾಗುತ್ತಿದ್ದವು.

ಇಂದು ಜನರನ್ನ ಮರಳು ಮಾಡಬಹುದಾದ, ಆಕರ್ಷಿಸಬಹುದಾದ ಹಲವಾರು ಆಮಿಷಗಳನ್ನು ತೋರಿಸಿ ಜನರನ್ನು ತಮ್ಮ ಕಡೆ ವಾಲಿಸಿಕೊಳ್ಳುವ ತಂತ್ರ ಕುತಂತ್ರಗಳನ್ನ ಎಲ್ಲಾ ರಾಜಕೀಯ ಪಕ್ಷಗಳು ಅಳವಡಿಸಿಕೊಂಡಿರುವುದರಿಂದ ಮತದಾರರಿಗೆ ಮತದಾನದ ಹಕ್ಕು ಬಿಟ್ಟು ಬೇರೆ ಯಾವ ಅಧಿಕಾರವಿಲ್ಲದೆ ಹಾಗೆ ಮಾಡಿದ್ದಾರೆ. ಮೊದಲು ನಾವು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದರೆ, ಯಾವುದೇ ಹಣವನ್ನು ಸ್ವೀಕರಿಸದೆ ಯಾವುದೇ ಜಾತಿಯನ್ನ ನೋಡದೆ, ಯಾವುದೇ ಒಂದು ಧರ್ಮದ ಪರವಾಗಿ ಕೆಲಸ ಮಾಡದೆ, ಅಭಿವೃದ್ಧಿ ಒಂದೇ ಮಾನದಂಡದ ಆಧಾರದ ಮೇಲೆ ವ್ಯಕ್ತಿಯನ್ನು
ಆಯ್ಕೆ ಮಾಡಿದಾಗ ಸಹಜವಾಗಿ ಅವರೂ ಕೂಡ ಬದಲಾಗುತ್ತಾರೆ.

ರಾಜಕೀಯ ವ್ಯವಸ್ಥೆಯೂ ಕೂಡ ಬದಲಾಗುತ್ತದೆ. ಅದು ನಮ್ಮಿಂದ ಮಾತ್ರ ಸಾಧ್ಯ. ಮತದಾರರಿಗೆ ಚುನಾವಣೆಗಳು ಒಂದು ಸುವರ್ಣ ಅವಕಾಶ ಗಳಿದ್ದಂತೆ. ಈ ಅವಕಾಶವನ್ನು ನಾವು ಸರಿಯಾಗಿ ಬಳಕೆ ಮಾಡಿಕೊಂಡು ನಮ್ಮನ್ನಾಳ್ವಿಕೆ ಮಾಡುವ ಸರ್ಕಾರವನ್ನ ವ್ಯಕ್ತಿಯನ್ನ ಆಯ್ಕೆ ಮಾಡಿ ಕೊಳ್ಳುವ. ಸಂಪೂರ್ಣ ಜವಾಬ್ದಾರಿಯನ್ನ ಆತ್ಮಾವಲೋಕನವನ್ನು ಮಾಡಿಕೊಂಡು ಮತದಾನ ಮಾಡಬೇಕಾಗಿದೆ. ಚುನಾವಣೆಗೆ ಮುಂಚೆ ಜನರ ಬವಣೆ ನೀಗಿಸುವ ನೆಪದಲ್ಲಿ ಮಾಡುವರು ಹೋರಾಟ ಚುನಾವಣೆ ನಂತರ ಜನರ ಭವಣೆ ಮರೆತು ಮಾಡುವರು ವಿಮಾನದಲ್ಲಿ ಹಾರಾಟ…

ಈ ಮೇಲಿನ ಸಾಲುಗಳಂತೆ ಚುನಾವಣೆಯ ಮುಂಚೆ, ನಂತರ ಅವರ ಮನಸ್ಥಿತಿ ಒಂದೇ ಆಗಿರಬೇಕೆಂದರೆ, ನಾವು ಯಾವುದೇ ಆಮಿಷಗಳಿಗೆ ಒಳಗಾಗದಂತೆ ನಿರ್ಭಯದಿಂದ ನಿರ್ಭೀತಿಯಿಂದ ಕಡ್ಡಾಯ ಮತದಾನದಲ್ಲಿ ನಾವೆಲ್ಲ ಪಾಲ್ಗೊಂಡು ಜನಪ್ರತಿನಿಧಿಗಳ ಆಯ್ಕೆ ಮಾಡಬೇಕಾಗಿದೆ.
ಆದ್ದರಿಂದ ಇದು ಮತದಾರರು ಆತ್ಮಾವಲೋಕನ ಮಾಡಿಕೊಳ್ಳುವ ಸೂ ಸಮಯವಾಗಿz