Thursday, 12th December 2024

ಅಸಹ್ಯ, ಅಶ್ಲೀಲ ಮತ್ತು ಚೇಷ್ಟೆ

ತುಂಟರಗಾಳಿ

ಸಿನಿಗನ್ನಡ

ವಿಜಯ್ ಪ್ರಸಾದ್ ಅವರ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ ಅಂತ ಯಾರಾದ್ರೂ ಕೇಳಿದ್ರೆ, ಅದೇ ವಿಜಯ್ ಪ್ರಸಾದ್ ಸಿನಿಮಾ ಥರಾನೇ ಇದೆ ಅಂತ ಉತ್ತರ ಹೇಳಬಹುದು. ನಾಲ್ಕು ಜನ ಏನಂತಾರೆ ಅಂತನೂ
ಯೋಚನೆ ಮಾಡದೇ ಮಾತಾಡೋ ನಾಲ್ಕು ಜನ ಅನಾಥರು ಬಾಡಿಗೆ ಮನೆ ಹುಡುಕೋದು ಸಿನಿಮಾ ಕಥೆ.

ಆದರೆ, ಪ್ರೇಕ್ಷಕರಿಗೆ ಇದರಲ್ಲಿ ಸಿನಿಮಾ ಮಾಡುವಂಥ ಕಥೆ ಎಲ್ಲಿದೆ ಅಂತ ಹುಡುಕೋ ಕೆಲಸ. ಅದರ ಮಧ್ಯೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳಿಗೆ ಒಂದಷ್ಟು ಉಪದೇಶ. ಚಿತ್ರದುದ್ದಕ್ಕೂ ಅದೇ ಡಬಲ್ ಮೀನಿಂಗ್ ಡೈಲಾಗ್‌ಗಳ ಹಾವಳಿ ಇರುತ್ತೆ ಅನ್ನೋದು ಟ್ರೈಲರ್ ನೋಡಿದವರಿಗೆ ಗೊತ್ತಿತ್ತು. ಆದ್ರೆ ಅದನ್ನ ಅಸಹ್ಯ ಅನ್ನೋ ಮಟ್ಟಕ್ಕೆ ಸಿನಿಮಾದಲ್ಲಿ ತುಂಬಿದರೆ ಸಿನಿಮಾ ಕೂಡ ತುಂಬಿದ ಗೃಹಗಳಲ್ಲಿ ಪ್ರದರ್ಶನ ಆಗುತ್ತೆ ಅನ್ನೋದು ನಿರ್ದೇಶಕರ ನಂಬಿಕೆ.

ಹಾಗಾಗಿ ಅವರು ಮತ್ತೆ ಅದನ್ನೇ ಮಾಡಿದ್ದಾರೆ. ಆದ್ರೆ, ಅವರದ್ದೊಂದು ಟೆಕ್ನಿಕ್ ಇದೆ, ಈ ತಪ್ಪು ಮಾಡಿದೋರು ದೇವರಿಗೆ ಕಪ್ಪ ಕಾಣಿಕೆ ಹಾಕಿ, ಕೈಗಂಟಿದ ಪಾಪ ತೊಳ್ಕೊಳ್ಳೋ ಥರ, ಒಂದಷ್ಟು ಅಶ್ಲೀಲ, ಅಸಹ್ಯಗಳ ನಂತರ ಸಮಾಜಕ್ಕೆ ಸಂದೇಶ ಕೊಡುವ ದೊಡ್ಡ ಮಾತುಗಳನ್ನು ಆಡಿ, ಬಾಯಿ ತೊಳೆದುಕೊಳ್ಳುವ ಪ್ರಯತ್ನ ಇಲ್ಲೂ ಇದೆ. ಆದ್ರೆ, ಅಪ್ಪಿ ತಪ್ಪಿ ಯಾರೂ ಅವರ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇವೆ ಅಂತ ಆರೋಪ ಮಾಡಂಗಿಲ್ಲ.

ಯಾಕಂದ್ರೆ, ಹಾಗೆ ಹೇಳಿದ್ರೆ, ಸಿನಿಮಾದಲ್ಲಿನ ಪಾತ್ರವೊಂದು ಹೇಳುವಂತೆ, ಬೀದಿ ನಾಯಿಗಳು ಬೊಗಳ್ತಾವೆ ಬಿಡಿ’ ಅಂತೆಲ್ಲ ಬೊಗಳಿಸಿಕೊಳ್ಳಬೇಕಾಗುತ್ತದೆ. ಸಾರಿ, ಬೈಸಿಕೊಳ್ಳಬೇಕಾಗುತ್ತದೆ. ಅಲ್ಲದೆ, ಚೇಷ್ಟೆಗೂ ಅಸಹ್ಯ, ಅಶ್ಲೀಲತೆಗೂ ವ್ಯತ್ಯಾಸ ಇಲ್ಲ
ಅನ್ನೋರಿಗೆ ಏನು ತಾನೇ ಹೇಳೋಕಾಗುತ್ತೆ? ಅಂದಹಾಗೆ, ಸಿನಿಮಾ ನೋಡಿ ಹೊರಬಂದವರನ್ನು, ಹೆಂಗಿದೆ ಸಿನಿಮಾ? ಓಡುತ್ತಾ? ಅಂತ ಕೇಳಿದ್ರೆ ವಿಜಯ್ ಪ್ರಸಾದ್ ಅವರ ಮುಂದಿನ ಚಿತ್ರದ ತೋ‘ತಾ ಪು’ರಿಯ ಶಾರ್ಟ್ ಫಾರ್ಮ್ ಏನು ಅಂತ
ಕೇಳಿದ್ರಂತೆ?.

ಲೂಸ್ ಟಾಕ್
ವಿರಾಟ್ ಕೊಹ್ಲಿ (ಕಾಲ್ಪನಿಕ ಸಂದರ್ಶನ)
? ಏನ್ ಸಾರ್, ಸೆಂಚುರಿ ಹೊಡೆದು ಎಷ್ಟ್ ವರ್ಷ ಆಯ್ತು, ಇನ್ನೂ ಯಾವಾಗ್ ಹೊಡಿಬೇಕು ಅಂತಿದೀರಾ?
-ನೀವ್ ಹೇಳೋದ್ ನೋಡಿದ್ರೆ, ನಾನು ಬೋಲರ್ಸ್ ಹತ್ರ, ಭಿಕ್ಷುಕರ ಥರ, ಅಪ್ಪಾ, ತಂದೇ, ಸೆಂಚುರಿ ಹೊಡೆದು ೨ ವರ್ಷ ಆಯ್ತು, ಒಂದೆರಡ್ ಫುಲ್ ಟಾಸು, ಲೆಗ್ ಸೈಡ್ ಬಾಲ್ ಹಾಕ್ರಪ್ಪಾ ಅಂತ ಬೇಡ್ಕೊಬೇಕು ನಾನು ಅಲ್ವಾ?

? ಸದ್ಯಕ್ಕೆ ನೀವು ಅದಕ್ಕೂ ಔಟ್ ಆಗೋ ಥರನೇ ಇದ್ದೀರಾ ಬಿಡಿ. ಆದ್ರೆ, ಬ್ಯಾಟಿಂಗ್ ನಲ್ಲಿ ಫಾರ್ಮ್ ಕಳ್ಕೊಂಡ್ರೂ ಮಾತಾಡೋ ವಿಷ್ಯದಲ್ಲಿ ಮಾತ್ರ ಯಾವಾಗ್ಲೂ ಫುಲ್ ಫಾರ್ಮ್ ನಲ್ಲಿರ್ತೀರಾ ಅಲ್ವಾ.
-ಕೊಹ್ಲಿದು ಫಾರ್ಮು, ಚಾರ್ಮು ಯಾವಾಗ್ಲೂ ಹಂಗೇ ಇರುತ್ತೆ. ಇನ್ನೂ ಡೀಟೇಲ್ಸ್ ಬೇಕು ಅಂದ್ರೆ ನಮ್ ಫಾರ್ಮ್ ಹೌಸಿಗೆ ಬನ್ನಿ ಮಾತಾಡಣ.

? ಓಕೆ ಓಕೆ, ಸರಿ, ನಿಮ್ಮದು ಬಿಡಿ, ಚೇತೇಶ್ವರ ಪೂಜಾರ ಬಗ್ಗೆನೂ ಭಾರೀ ಟೀಕೆ ಬಂದಿತ್ತು.ಅವ್ರದ್ದು ಟೈಮ್ ಆಯ್ತು ಅನ್ಸುತ್ತೆ. ಈಗ ನಿಮ್ಮನ್ನೂ ಹಂಗೇ ಆಡ್ಕೊತಾ ಇದ್ದಾರೆ. ಇದಕ್ಕೇನ್ ಹೇಳ್ತೀರಾ?
-ಅಯ್ಯೋ, ಟೀಕೆ ಅನ್ನೋದು ಸಚಿನ್ ತೆಂಡೂಲ್ಕರ್ ಅವರನ್ನೇ ಬಿಟ್ಟಿಲ್ಲ. ದೇವರನ್ನೇ ಆಡಿಕೊಂಡವರು, ಪೂಜಾರ್ರ‍ನ್ನ ಬಿಡ್ತಾರಾ?

? ಪೂಜಾರ್ರು ಬಿಡಿ, ನಿಮ್ ಫೇವರೆಟ್ ಶಾಸ್ತ್ರಿಗಳು ಇವಾಗಿಲ್ಲ, ರಾಹುಲ್ ದ್ರಾವಿಡ್ ಅವರು ರಾಹುಕಾಲದಲ್ಲಿರೋ ನಿಮ್ಮ ಫಾರ್ಮ್ ಬಗ್ಗೆ ಏನಂತಾರೆ ?
-ಎಲ್ಲದಕ್ಕೂ ಒಂದ್ ಟೈಮು ಅಂತ ಇರುತ್ತೆ, ಈ ಆಷಾಢ ಕಳ್ದು, ಶ್ರಾವಣ ಬಂದ್ರೆ ನೀವು ಟಾಪಲ್ ಬರ್ತೀರಾ ಅಂತ ಹೇಳಿದ್ದಾರೆ.

? ಅಲ್ರೀ, ನೀವು ಮಿಡ್ಲ್ ಆರ್ಡರ್ ಬ್ಯಾಟ್ಸ ಮನ್, ಟಾಪ್ ಅಲ್ಲಿ ಹೆಂಗ್ರೀ ಬರ್ತೀರಾ? ಈಸಿಯಾಗಿ ಓಪನರ್ ಆಗಿಬಿಡೋಣ, ಪರ್ವ ಪ್ಲೇ ಸಿಗುತ್ತೆ ಅನ್ನೋ ಪ್ಲ್ಯಾನಾ ?

-ಹಲೋ, ಓಪನರ್ ಕೆಲ್ಸ ಅಂದ್ರೆ ಅಷ್ಟ್ ಈಸಿ ಅಂದ್ಕೊಂಡಿದ್ದೀರಾ.. ಆಡಬೇಕಾದ್ರೆ ಓಪನ್ ದ ಬ್ಯಾಟಲ್, ಮ್ಯಾಚ್ ಗೆದ್ ಮೇಲೆ ಓಪನ್ ದ ಬಾಟಲ, ಎರಡೂ ಅವರೇ ಮಾಡ್ಬೇಕು ಗೊತ್ತಾ?

ನೆಟ್ ಪಿಕ್ಸ್ 
ಖೇಮು ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಖೇಮುಶ್ರೀ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಖೇಮು ಕೇಳ್ತಾ ಇರಲಿಲ್ಲ. ಒಂದು ದಿನ ರೋಸಿ ಹೋದ ಖೇಮುಶ್ರೀ, 12 ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಷ್ಟ್ ಸಲ ಹೇಳಿ ದೀನಿ, ಇನ್ನೊಂದ್ಸಲ ಲೇಟಾಗಿ ಬಂದ್ರೆ ನಾನು ನಿಮಗೆ ಡಿವೋರ್ಸ್ ಕೊಟ್ಟು, ಗಂಡನ್ನ ಬದಲಾಯಿಸ್ತೀನಿ ಅಷ್ಟೇ ಅಂತ ಹೆದರಿಸಿದಳು.

ಅದಕ್ಕೆ ಖೇಮು ಇನ್ಮೇಲೆ ಕುಡಿಯೋದನ್ನ ಬೇಗ ಮುಗಿಸಿ ಕರೆಕ್ಟ್ ಟೈಮಿಗೆ ಮನೆಗೆ ಬರ್ಬೇಕು ಅಂತ ಅಂದುಕೊಂಡ. ಅವತ್ತು ಸ್ನೇಹಿತರು ಸಿಗ್ತೀವಿ ಅಂತ ಹೇಳಿದ್ರು. ಸರಿ ಪಾರ್ಟಿಗೆ ಹೋದ. ಮಾತಾಡ್ತಾ, ಮಾತಾಡ್ತಾ, ಟೈಮ್ ಹೋಗಿದ್ದೇ ಗೊತ್ತಾಗಲಿಲ್ಲ. ಎಲ್ಲ ಪಾರ್ಟಿ ಮುಗಿಸಿ ಮನೆಗೆ ಬಂದ. ಮನೆಗೆ ಬರೋವಷ್ಟರಲ್ಲಿ ಬೆಳಗಿನ ಜಾವ 3 ಗಂಟೆ ಆಗಿತ್ತು.

ಖೇಮುಶ್ರೀ ಮಲಗಿದ್ಳು. ನಿದ್ದೆಗಣ್ಣ, ಎಷ್ಟು ಗಂಟೆ ರೀ ಅಂತ ಕೇಳಿದ್ಳು. ಖೇಮು 12 ಗಂಟೆ ಕಣೇ ಅಂದ. ಅದೇ ಸಮಯಕ್ಕೆ ಸರಿಯಾಗಿ ಗಡಿಯಾರದ ಗಂಟೆ ಹೊಡಕೊಳ್ಳೋಕೆ ಶುರು ಆಯ್ತು. ಅದು ಹನ್ನೆರಡು ಸಲ ಹೊಡೆದುಕೊಂಡಿದ್ದನ್ನು ಕೇಳಿದ ಖೇಮುಶ್ರೀ ಹಾಗೇ ಮಲಗಿಕೊಂಡಳು.

ಬೆಳಗ್ಗೆ ಬೇಗ ಎದ್ದು ತಿಂಡಿ ಬಡಿಸುವಾಗ ಖೇಮುಶ್ರೀ ಕೇಳಿದ್ಳು, ನಿಜ ಹೇಳ್ರೀ ನೀವು ನಿನ್ನೆ ರಾತ್ರಿ ಬಂದಾಗ ಟೈಮ್ ಎಷ್ಟಾಗಿತ್ತು? ಅದಕ್ಕೆ ಖೇಮು ಹೇಳಿದ, ನೀನೇ ಕೇಳಿದ್ಯ, ಗಡಿಯಾರ ಹನ್ನೆರಡು ಸಲ ಹೊಡಕೊಂತು ಅಲ್ವಾ, ಗಂಡನ್ನ ಬದಲಾಯಿಸ್ತೀನಿ ಅಂತೆಲ್ಲ ಹೇಳಬೇಡ ಈಗ ಅಂದ. ಅದಕ್ಕೆ ಖೇಮುಶ್ರೀ ಹೇಳಿದ್ಳು,

ಇಲ್ಲ, ರೀ, ಗಂಡನ್ನ ಬದಲಾಯಿಸೋ ಅಗತ್ಯ ಇಲ್ಲ, ಆದ್ರೆ ನಮ್ಮನೆ ಗಡಿಯಾರನ ಬದಲಾಯಿಸ್ಬೇಕು ಅಂದ್ಳು. ಯಾಕೆ ಅಂತ ಖೇಮು ಕೇಳಿದ. ಅದಕ್ಕೆ ಖೇಮುಶ್ರೀ ಹೇಳಿದ್ಳು, ಪಾಪ ನಮ್ ಗಡಿಯಾರಕ್ಕೆ ವಯಸ್ಸಾಯ್ತು, ಹುಷಾರಿಲ್ಲ ಅನ್ಸುತ್ತೆ. ನಿನ್ನೆ ರಾತ್ರಿ ನೀವು ಬಂದಾಗ ನಮ್ಮ ಗಡಿಯಾರ ೩ ಸಲ ಬಡಕೊಂತು, ಆಮೇಲೆ ಓಹ್ ಶಿಟ್ ಅಂತು, ಮತ್ತೆ 7 ಸಲ ಬಡಕೊಂತು, ಮಧ್ಯೆ
ಒಂದ್ಸಲ ಕೆಮ್ಮಿತು, ಆಮೇಲೆ ಎರಡು ಸಲ ಸೀನಿತು, ಮತ್ತೆ ಗಂಟಲು ಸರಿ ಮಾಡ್ಕೊಂಡು 2 ಸಲ ಬಡಕೊಂಡು, ಹಾಲ್ ನ ಟೇಬಲ್ ಮೇಲಿದ್ದ -ರ್ವ ವಾಸ್ ಗೆ ಡಿಕ್ಕಿ ಹೊಡೆದು ಅದನ್ನ ಕೆಳಗೆ ಬೀಳಿಸಿ ಅ ಇದ್ದ ಬೆಡ್ ಮೇಲೆ ಬಿದ್ಕೊಂತು.

ಲೈನ್ ಮ್ಯಾನ್

? ಸರಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ತೆಗೆಯಂಗಿಲ್ಲ ಅನ್ನೋ ರೂಲ್ ತಂದು ವಾಪಸ್ ತಗೊಂಡ ಮೇಲೆ ಇನ್ಯಾವ ರೂಲ್ ಬರಬಹುದು?
-ಫೇಸ್ಬುಕ್‌ನಲ್ಲಿ ಸ್ಕ್ರೀನ್ ಶಾಟ್ ತೆಗೆಯಂಗಿಲ್ಲ.

? ಹಿಂದೂ ರುದ್ರಭೂಮಿಯಲ್ಲಿ ಬಿಬಿಎಂಪಿ ಕಚೇರಿ
-ಇವರು ಜನಗಳನ್ನಷ್ಟೇ ಅಲ್ಲ, ಹೆಣಗಳನ್ನೂ ಬದುಕೋಕೆ ಬಿಡಲ್ಲ

? ಐಪೋನ್ ಪ್ರಿಯರ ಪ್ರಕಾರ
-ಎ ಫಾರ್ ಆಪಲ್ ಅಲ್ಲ, ಐ ಫಾರ್ ಆಪಲ್

? ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ
-ಯಾಕಂದ್ರೆ ಜ್ಯೋತಿಷಿಗಳು ಕೈ ನೋಡಿ ಭವಿಷ್ಯ ಹೇಳ್ತಾರೆ

? ಗಾಂಧಿನಗರ ಠಿZho 
– ಸಾರ್, ಏನ್ ಕೆಲ್ಸ ಮಾಡ್ತಿದ್ದೀರಾ ನೀವು?’

?‘ನಾನೊಬ್ಬ ಡಿಟೆಕ್ಟಿವ್‘
ಮತ್ತೆ, ಗಾಂಧಿನಗರದಲ್ಲಿ ಏನ್ ಮಾಡ್ತಾ ಇದ್ದೀರಾ? ಸಿನಿಮಾ ಮಾಡೋಕೆ ಕಥೆ ಹುಡುಕ್ತಾ ಇದ್ದೀನಿ, ಅದಾದ್ಮೇಲೆ ಪ್ರೊಡ್ಯೂಸರ್ ಹುಡುಕ್ತೀನಿ

? ಕ್ರಿಕೆಟ್ ಟೀಮ್ ಸೆಲೆಕ್ಷನ್
‘ಅವ್ನ್ ಲಾಸ್ಟ್ ಮ್ಯಾಚ್ ಚೆನ್ನಾಗೇ ಆಡಿದ್ನಲ್ಲ, ಅವನನ್ನ ಯಾಕ್ ಬಿಟ್ರು?’

?‘ಅವ್ನಿಗೆ ಪೈಲ್ಸ್ ಆಗಿದೆಯಂತೆ, ಅದಕ್ಕೇ ಕೂಡ್ಸಿದಾರೆ’
‘ಪೈಲ್ಸ್ ಆದ್ರೆ ಕೂಡ್ಸಂಗಿಲ್ಲ, ಆಡಿಸ್ಬೇಕು ತಾನೇ?’

? ಜಾಸ್ತಿ ಹೈಟ್ ಇರೋ ಜಾಗದಲ್ಲಿ ನಿಂತಿದ್ದಾಗ ಆಗೋ ಭಯ, ಫೋಬಿಯಾ ಆಫ್ ಹೈಟ್ಸ್. ಆದ್ರೆ, ನೆಲದ ಮೇಲೆ ನಿಂತಾಗಲೂ ಭಯ ಆದ್ರೆ, ಅದು
-‘ಹೈಟ್ಸ್’ ಆಫ್ ಫೋಬಿಯಾ

? ಹೆಂಡತಿಗೆ ಪ್ರಾಮಿಸ್ ಮಾಡಿದ ಟೈಮಿಗೆ ಸರಿಯಾಗಿ ಉಂಗುರ ಕೊಡಿಸದೆ ಕಾಯಿಸಿದ್ರೆ, ಅದು
-ಬಫರಿಂಗ್

ತುಂಬಾ ಪ್ರಯಾಸದ ಪ್ರಯಾಣವನ್ನು ‘ಹಿಂಗ್ಲಿಷ್’ನಲ್ಲಿ ಏನಂತಾರೆ ?
-ಸಫರ್‌ಜಿ