ಅಭಿವ್ಯಕ್ತಿ
ಕೆ.ಪಿ.ಪುತ್ತೂರಾಯ
ಸಾಮಾನ್ಯವಾಗಿ ಐಶ್ವರ್ಯವೆಂದರೆ ಧನವೆಂಬ ಕಲ್ಪನೆ ಎಲ್ಲರದು. ಆದುದರಿಂದಲೇ ಹಣವೇ ಎಲ್ಲ; ಹಣಲ್ಲದೆ ಏನೂ ಇಲ್ಲ ಹಣವೆಂದರೆ ಹೆಣವೂ ಬಾಯಿ ಬಿಡುತ್ತೆ ದುಡ್ಡೇ ದೊಡ್ಡಪ್ಪ ಎಂಬೆಲ್ಲಾ ಹಣದ ಹಿರಿಮೆಯನ್ನು ಸಾರುವ ಹಲವಾರು ಉಕ್ತಿಗಳು
ಚಾಲ್ತಿಯಲ್ಲಿವೆ. ಈ ಕಾರಣದಿಂದಲೇ ಹಣದ ಹಿಂದೆ ಜನ ಓಡುತ್ತಿರುತ್ತಾರೆ; ಹಣಕ್ಕಾಗಿ ಏನನ್ನು ಮಾಡಲೂ ಸಿದ್ಧರಿರುತ್ತಾರೆ.
ಹಣದ ಎದುರು ಮೌಲ್ಯಗಳು, ನಂಬಿಕೆಗಳು, ಸಿದ್ಧಾಂತಗಳು, ಸಂಬಂಧಗಳು ಕಿತ್ತುಕೊಂಡು ಹೋಗುತ್ತವೆ. ಈ ಕುರುಡು ಕಾಂಚಾಣದ ಸುತ್ತ ಜಗತ್ತೇ ಕುಣಿಯುತ್ತದೆ; ಕಾಂಚಾಣ ಜನರನ್ನೂ ಕುಣಿಸುತ್ತದೆ. ಆದರೆ, ಹಣಕ್ಕೆ ತನ್ನದೇ ಆದ ಇತಿತಿಗಳಿವೆ. ಜೀವನದಲ್ಲಿ ಹಣಬೇಕು ನಿಜ; ಆದರೆ ಹಣವೇ ಸರ್ವಸ್ವ ಹಾಗೂ ಧನಬಲದಿಂದ ಎಲ್ಲವನ್ನೂ ಪಡೆಯಲು ಸಾಧ್ಯವೆಂಬ
ಕಲ್ಪನೆ ತಪ್ಪು ಗ್ರಕೆ. ಉದಾಹರಣೆಗೆ ಹಣಬಲದಿಂದ ಕೊಂಡುಕೊಳ್ಳಬಹುದು.
ಬೆಲೆ ಬಾಳುವ ಉಡುಪು ತೊಡುಪುಗಳನ್ನು; ಆದರೆ ನೈಜ ಸೌಂದರ್ಯವನ್ನಲ್ಲ; ಕಾರಣ ಅದು ದೈವದತ್ತವಾದುದು. ಅನೇಕ ಪುಸ್ತಕಗಳನ್ನು: ಆದರೆ ಜ್ಞಾನವನ್ನಲ್ಲ; ಜ್ಞಾನ ಸಂಪಾದನೆ ಸಾಧ್ಯ ಪುಸ್ತಕಗಳ ಅಧ್ಯಯನದಿಂದ ಮಾತ್ರ. ಸಾಕಷ್ಟು ಆಹಾರ ಪದಾರ್ಥಗಳನ್ನು; ಆದರೆ ಹಸಿವೆಯನ್ನಲ್ಲ; ಹಸಿವೆ, ಒಳ್ಳೆಯ ಆರೋಗ್ಯದಿಂದ ಮಾತ್ರ ಪ್ರಾಪ್ತವಾಗುತ್ತದೆ.
ದೊಡ್ಡ ಬಂಗಲೆಯನ್ನು: ಆದರೆ ಒಲನ ನಿವಾಸವನ್ನಲ್ಲ; ಎಂಬ ಮಾತಿನಿಂತೆ, ಒಲನ ಮನೆ, ಪ್ರೀತಿ ತುಂಬಿದ ಮನಗಳಿಂದ ಮಾತ್ರ
ನಿರ್ಮಾಣಗೊಳ್ಳುತ್ತದೆ. ಮೆತ್ತನೆಯ ಪಲ್ಲಂಗವನ್ನು; ಆದರೆ ಸವಿ ನಿದ್ದೆಯನ್ನಲ್ಲ; ಸವಿ ನಿದ್ದೆ ಬರಲು, ದೇಹ ದಣಿದಿರಬೇಕು; ಮನಸ್ಸು ಮಣಿದಿರಬೇಕು. ದೇವರ ದೊಡ್ಡ ಗ್ರಹವನ್ನು: ಆದರೆ ಅವನ ಅನುಗ್ರಹವನ್ನಲ್ಲ; ಅನುಗ್ರಹವಾಗಲು ಬೇಕು ಅನನ್ಯ ವಾದ ನಿಷ್ಕಾಮ ಭಕ್ತಿ !
ಹಣದಿಂದಾಗುವ ತೊಂದರೆಗಳೆಂದರೆ – ಎಷ್ಟೇ ಹಣದ್ದರೂ, ಮನುಷ್ಯನಿಗೆ ತೃಪ್ತಿ ಇಲ್ಲ; ಸಮಾಧಾನಲ್ಲ.; ಸಂತೋಷವೂ ಇಲ್ಲ. ಲಕ್ಷಾಧೀಶನಿಗೆ ಕೋಟ್ಯಾಧೀಶನಾಗುವ ಆಸೆ; ಕೋಟ್ಯಾಧೀಶನಿಗೆ ಇನ್ನಷ್ಟು ಕೋಟಿಗಳನ್ನು ಗಳಿಸುವ ಆಸೆ. ಈ ಆಸೆಗೆ ಇತಿಮಿತಿ ಗಳೇ ಇಲ್ಲ. ಉಪ್ಪು ನೀರು ಕುಡಿದಂತೆ ಹೆಚ್ಚಾಗುವ ದಾಹದಂತೆ! ಇದು ದುರಾಸೆ.
ಹಣದಿಂದಾಗಿ ಉದ್ಭವಿಸುವ ಇನ್ನೊಂದು ಸಮಸ್ಯೆ ಎಂದರೆ ಅದರ ರಕ್ಷಣೆಯ ಭಾರ. ಧನವಂತನಿಗೆ ಕಳ್ಳಕಾಕರ ಭಯ; ಆದಾಯ ತೆರಿಗೆ ಇಲಾಖಾ ಭಯ; ಕಾನೂನಿನ ಭಯ. ಒಟ್ಟಿನಲ್ಲಿ ಅವನಿಗೆ ನೆಮ್ಮದಿ ಇಲ್ಲ ; ಶಾಂತಿ ಇಲ್ಲ ! ಮಾತ್ರವೇ ಅಲ್ಲ ಹಣದ್ದಲ್ಲಿ ಕಲಹಗಳು, ಹಣದಿಂದಾಗಿ, ಹಣಕ್ಕೋಸ್ಕರ, ಸಂಬಂಧಗಳು ಕಡಿದು ಹೋಗುತ್ತವೆ; ಸ್ನೇತರು ದೂರವಾಗುತ್ತಾರೆ. ಅಂತೆಯೇ ಬರೀ ಹಣ ಬಲದಿಂದ, ಗುಣನಡತೆಗಳನ್ನು ಪಡೆಯಲಾಗದು; ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡಲಾಗದು.
ಸಿರಿತನ ಬದುಕನ್ನು ಬದಲಿಸುತ್ತದೆ; ಆದರೆ ಬಡತನ ಬದುಕೋದನ್ನು ಕಲಿಸುತ್ತದೆ. ಹಣವನ್ನು ನಾವು ನಿಯಂತ್ರಿಸಬೇಕೇ
ಹೊರತು, ಹಣ ನಮ್ಮನ್ನು ನಿಯಂತ್ರಿಸಬಾರದು. ಕಾರಣ, ಹಣವೆಂಬುದು ಒಳ್ಳೆಯ ಸೇವಕ; ಆದರೆ ಕೆಟ್ಟ ಯಜಮಾನ. ಹಣ ವೊಂದೇ ಇರುವವನಷ್ಟು ಬಡವ ಬೇರೊಬ್ಬನಿಲ್ಲ ಎನ್ನಲಾಗಿದೆ. ಇಷ್ಟಕ್ಕೂ ಹಣವೊಂದೇ ಐಶ್ವರ್ಯದ ಪ್ರತೀಕವಲ್ಲ. ಹಣವೇತರ
ಐಶ್ವರ್ಯಗಳೆಂದರೆ,ಆರೋಗ್ಯ ಭಾಗ್ಯ. ಸಕಲ ಸೌಭಾಗ್ಯಗಳಲ್ಲಿ ಸರ್ವಶ್ರೇಷ್ಠವಾದುದು ಆರೋಗ್ಯ ಭಾಗ್ಯ.
ಇತರ ಏನೇ ಭಾಗ್ಯಗಳಿದ್ದರೂ ಎಷ್ಟೇ ಸಂಪತ್ತು ಇದ್ದರೂ ಅವೆಲ್ಲವನ್ನೂ ಅನುಭಸಲು, ಆರೋಗ್ಯವೊಂದು ಇಲ್ಲದಿದ್ದರೆ, ಎಲ್ಲವೂ ವ್ಯರ್ಥ; ಅರ್ಥಹೀನ. ಮನೆಯೊಳಗೆ ಮೂಟೆ ಮೂಟೆ ಅಕ್ಕಿ ಬಿದ್ದಿದೆ; ಆದರೆ ಒಂದು ತುತ್ತು ಅನ್ನ ತಿನ್ನುವ ಹಾಗಿಲ್ಲ; ಮೂತ್ರ ಸಿ, ರಕ್ತ ಸಿ, ಆರೋಗ್ಯ ನ. ಜೀವನ ಕ, ಡಯಾಬಿಟೀಸ್ ಕಾಯಿಲೆ. ಏನು ಬಂತು? ಮನೆಯಲ್ಲಿ ಡಬ್ಬಿ ಡಬ್ಬಿ ತುಪ್ಪ ಇದೆ ; ಆದರೆ ಒಂದು ಚಮಚ ತುಪ್ಪ ತಿನ್ನುವ ಹಾಗಿಲ್ಲ ; ಕೊಲೆಸ್ಟ್ರಾಲ್ ಪ್ರಾಬ್ಲಮ್ ! ಏನು ಪ್ರಯೋಜನ? ಆದುದರಿಂದಲೇ ಹಿರಿಯರು ಮಾಡುವ ಮೊದಲ ಆಶೀರ್ವಾದವೆಂದರೆ ಆಯುರಾರೋಗ್ಯ ಪ್ರಾಪ್ತಿ ಮಸ್ತು! ಎಂಬುದಾಗಿ.
ಕಾರಣ, ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಮಮ್ ಮೂಲ ಮುತ್ತಮಮ್, ಅರ್ಥಾತ್ ಏನನ್ನೇ ಸಾಧಿಸಲು, ಹಣ ವನ್ನೂ ಸಂಪಾದಿಸಲು ಆರೋಗ್ಯವಂತರಾಗಿರಬೇಕಾದುದು ಅತ್ಯಾವಶ್ಯಕ. ಊಟದಲ್ಲಿ ಉಪ್ಪಿನ ಬೆಲೆ ಗೊತ್ತಾಗೋದು ಅದು
ಇಲ್ಲದಾಗ ಮಾತ್ರ. ಅಂತೆಯೇ ಆರೋಗ್ಯದ ಮಹತ್ವ ಗೊತ್ತಾಗೋದು ಅದು ಕೆಟ್ಟು ಹೋದಾಗ ಮಾತ್ರ! ಕಣ್ಣಿಗೆ ಕಾಣುವ ರೋಗ ರುಜಿನಗಳು ಇಲ್ಲವೆಂದ ಮಾತ್ರಕ್ಕೆ, ಒಬ್ಬ ವ್ಯಕ್ತಿ ಆರೋಗ್ಯವಂತನೆಂಬ ಅರ್ಥವಲ್ಲ! ವಯಸ್ಸಿಗನುಗುಣವಾದ ಶಾರೀರಿಕ,
ಮಾನಸಿಕ, ನೈತಿಕ, ಸಾಮಾಜಿಕ, ಅಧ್ಯಾತ್ಮಿಕ ಲವಲಕೆಯನ್ನು ಹೊಂದಿರೋದೇ ನಿಜವಾದ ಆರೋಗ್ಯ.
ರೋಗರಹಿತ ದೇಹ, ಚಿಂತೆರಹಿತ ಮನಸ್ಸು, ದುಃಖರಹಿತ ಆತ್ಮ – ಇದುವೇ ಆರೋಗ್ಯದ ವ್ಯಾಖ್ಯಾನ. ಸಂಪೂರ್ಣ ಆರೋಗ್ಯ ವೆಂದರೆ ಶಾರೀರಿಕ (ಭೌತಿಕ), ಮಾನಸಿಕ (ಭಾವನಾತ್ಮಕ) ಹಾಗೂ ಆತ್ಮದ (ಆಧ್ಯಾತ್ಮಿಕ) ಆರೋಗ್ಯ. ಇಂತಹ ಆರೋಗ್ಯ ಭಾಗ್ಯ ಕ್ಕಿಂತ ಮಿಗಿಲಾದ ಐಶ್ವರ್ಯ ಇನ್ಯಾವುದಿದೆ?
ವಿದ್ಯಾ ಸಂಪತ್ತು: ದುಡ್ಡೇ ದೊಡ್ಡಪ್ಪ ವೆಂದಾದರೆ, ವಿದ್ಯೆ ಅದರಪ್ಪ ಎನ್ನಲಾಗಿದೆ. ಕಾರಣ ಸ್ವದೇಶೇ ಪೂಜಿತೇ ರಾಜಾ, ದ್ವಾನ್ ಸರ್ವತ್ರ ಪೂಜಿತೇ ಎಂಬ ಮಾತಿನಂತೆ ವಿದ್ಯೆಗೆ ಎಲ್ಲೆಲ್ಲೂ ಸ್ಥಾನಮಾನಗಳಿವೆ. ಅಂತೆಯೇ ವಿದ್ಯಾರಾಜಸು ಪೂಜ್ಯತೇ ನ ಧನಂ;
ವಿದ್ಯಾ ಹೀನಃ ಪಶು ಸಮಾನಃ ವಿದ್ಯಾ ಧನಂ ಸರ್ವ ಧನ ಪ್ರಧಾನಂ ಎಂಬ ಉಕ್ತಿಗಳಂತೆ, ವಿದ್ಯಾವಂತನನ್ನು ರಾಜನೂ ಗೌರವಿಸುತ್ತಾನೆ, ಧನವಂತನನ್ನಲ್ಲ; ಹಾಗೂ ವಿದ್ಯೆ ಇಲ್ಲದವನು ಪಶುವಿಗೆ ಸಮಾನ ಎನ್ನಲಾಗಿದೆ. ಸಂಪತ್ತುಗಳ ಪೈಕಿ, ವಿದ್ಯಾ ಸಂಪತ್ತೇ ಅತಿ ಶ್ರೇಷ್ಠವಾದುದು.
ಜ್ಞಾನ ಸಂಪತ್ತು: ನ ಜ್ಞಾನೇನ ಸದೃಶಂ ಅರ್ಥಾತ್ ಜ್ಞಾನಕ್ಕೆ ಸಮಾನವಾದುದು ಇನ್ನೊಂದಿಲ್ಲ ಎನ್ನಲಾಗಿದೆ. ಕಾಲಿಗೊಂದು ಪಾದರಕ್ಷೆ ಇದ್ದರೆ, ಮುಳ್ಳಿನ ಮೇಲೂ ನಡೆಯಬಹುದು. ಅಂತೆಯೇ ಜ್ಞಾನದ ರಕ್ಷೆ ಇದ್ದರೆ, ಎಂಥ ಸಂಕಷ್ಟಗಳನ್ನೂ
ಎದುರಿಸಬಹುದು. ಧನವನ್ನು ನಾವೇ ರಕ್ಷಿಸಬೇಕಾಗುತ್ತದೆ; ಆದರೆ ಜ್ಞಾನವು ನಮ್ಮನ್ನು ರಕ್ಷಿಸುತ್ತದೆ. ದೀಪದ ಬೆಳಕು ಮನೆ ಯನ್ನು ಬೆಳಗಿಸುತ್ತದೆ; ಆದರೆ ಜ್ಞಾನದ ಬೆಳಕು ನಮ್ಮ ಮನಸ್ಸನ್ನು ಬೆಳಗಿಸುತ್ತದೆ.
ಜ್ಞಾನಾಗ್ನಿ ಅಜ್ಞಾನವನ್ನು ಸುಟ್ಟು ಹಾಕುತ್ತದೆ; ದ್ವೇಷಾಗ್ನಿ, ಮನಃ ಶಾಂತಿಯನ್ನು ಸುಟ್ಟು ಹಾಕುತ್ತದೆ. ಅಜ್ಞಾನಕ್ಕೆ ಆರಂಭವಿಲ್ಲ; ಆದರೆ ಕೊನೆ ಇದೆ. ಆದರೆ ಜ್ಞಾನಕ್ಕೆ ಆರಂಭವಿದೆ. ಕೊನೆಯೇ ಇಲ್ಲ ; ಜ್ಞಾನಗಳಲ್ಲಿ ತರತರದ ಜ್ಞಾನಗಳಿವೆ; ವಿಷಯ ಜ್ಞಾನ, ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನ, ಲೋಕ ಜ್ಞಾನ ಇತ್ಯಾದಿ. ಒಟ್ಟಿನಲ್ಲಿ, ಆದುದರಿಂದ ಕೊಚ್ಚಿಹೋಗಲೇ ಬೇಕು ಮೌಢ್ಯದಾ ಕೊಳೆ; ಜ್ಞಾನದಾ ಹೊಳೆಯಲ್ಲಿ; ಹಳತು ಹೋಗಿ ಹೊಸತು ಬರುವ ಈ ಅನುದಿನದ ಮಳೆಯಲ್ಲಿ!
ಗುಣಸಂಪತ್ತು: ಗುಣವಂತಿಕೆಯ ಎದುರು ಹಣವಂತಿಕೆ ಏನೂ ಅಲ್ಲ! ಹಣವಂತಿಕೆಯ ಜೊತೆ ಗುಣವಂತಿಕೆಯೂ ಸೇರಿ ಕೊಂಡರೆ, ಆ ಶ್ರೀಮಂತಿಕೆ ಇಮ್ಮಡಿಯಾಗುತ್ತದೆ. ಹಣ ಜನರನ್ನು ದೂರ ಮಾಡುತ್ತದೆ; ಆದರೆ ಗುಣ ಜನರನ್ನು ಹತ್ತಿರ ತರುತ್ತದೆ. ನೀವು ಶ್ರೀಮಂತರಾದರೆ, ಜನ ನಿಮ್ಮನ್ನು ಗೌರಸುತ್ತಾರೆ; ನಿಮ್ಮನ್ನಲ್ಲ; ನಿಮ್ಮ ಶ್ರೀಮಂತಿಕೆಯನ್ನು!
ನೀವು ಅಧಿಕಾರದಲ್ಲಿರುವವರಾದರೆ, ಜನ ನಿಮಗೆ ಸಲಾಂ ಹೊಡೆಯುತ್ತಾರೆ; ನಿಮಗಲ್ಲ; ನಿಮ್ಮ ಕುರ್ಚಿಗೆ! ಬೆಲ್ಲ ಇದ್ದಲ್ಲಿ ಮಾತ್ರ ಇರುವೆಗಳು; ಬೆಲ್ಲ ಖಾಲಿಯಾದಾಗ ಇರುವೆಗಳೂ ತಮ್ಮ ಜಾಗವನ್ನು ಖಾಲಿ ಮಾಡುತ್ತವೆ. ಅಂತೆಯೇ ಅಧಿಕಾರ, ಐಶ್ವರ್ಯದ್ದಲ್ಲಿ, ಜನ ನಮ್ಮ ಸುತ್ತ ಮುತ್ತ; ಇವುಗಳು ಇಲ್ಲದಾಗ ಯಾರೂ ನೋಡೋದಿಲ್ಲ ನಮ್ಮತ್ತ.
ಆದರೆ ನಾವು ಓರ್ವ ಗುಣವಂತ, ಒಳ್ಳೆಯ ವ್ಯಕ್ತಿಯಾಗಿದ್ದಲ್ಲಿ, ನಮ್ಮಲ್ಲಿ ಏನೇ ಇರಲಿ, ಇರದಿರಲಿ, ಜನ ನಮ್ಮನ್ನು ಪ್ರೀತಿಸುತ್ತಾರೆ; ಗೌರವಿಸುತ್ತಾರೆ, ನಮ್ಮ ಸಾಂಗತ್ಯವನ್ನು ಬಯಸುತ್ತಾರೆ. ಮನೆಯೊಳಗೆ ಬಡತನವಿರಬಹುದು, ಆದರೆ ಮನದೊಳಗೆ ಬಡತನರ ಬೇಕೆಂದಿಲ್ಲವಲ್ಲ.
ಮಿತ್ರ ಸಂಪತ್ತು: ಜೀವನದಲ್ಲಿ ಮಿತ್ರರಿಲ್ಲದೆ ಬದುಕಲಾಗದು. ಎಲ್ಲರೂ ಕೈ ಬಿಟ್ಟಾಗ, ಕೈ ಕೊಟ್ಟಾಗ ನಮ್ಮ ಕೈ ಹಿಡಿಯಲು ಮುಂದಾಗುವವನ ಹೆಸರೇ ಗೆಳೆಯ. ಕೆಲವೊಮ್ಮೆ ಹತ್ತಿರದ ಸಂಬಂಧಿಕರೂ ದೂರದ ಸ್ನೇತರಿಗಿಂತ ದೂರವಾಗುತ್ತಾರೆ; ಹಾಗೂ
ದೂರದ ಸ್ನೆಹೀತರೂ ಹತ್ತಿರದ ಬಂಧುಗಳಿಗಿಂತ ಹತ್ತಿರವಾಗುತ್ತಾರೆ; ಕಾರಣ, ಸಂಬಂಧಗಳಿಗಿಂತಲೂ, ಅನುಬಂಧ, ಆತ್ಮೀಯತೆ ಮುಖ್ಯ. ಒಳ್ಳೆಯ ಸ್ನೇಹಿತರು ಬದುಕಿನ ದೊಡ್ಡ ಸಂಪತ್ತೇ ಸರಿ!
ಶಿಷ್ಯ ಸಂಪತ್ತು: ಮಠಾಧಿಪತಿಗಳಿಗೆ, ಪೀಠಾಧಿಪತಿಗಳಿಗೆ, ಸ್ವಾಮೀಜಿಗಳಿಗೆ, ಶಿಕ್ಷಕರಿಗೆ ಶಿಷ್ಯ ಕೋಟಿಯೇ ಅವರ ಜೀವನದ ದೊಡ್ಡ ಸಂಪತ್ತು. ಎಷ್ಟು ಜನ ಹಾಗೂ ಎಂತಹ ಜನ ಇವರ ಶಿಷ್ಯರಾಗಿದ್ದಾರೆ, ಅನ್ನೋದರಿಂದ ಇವರ ಶ್ರೇಷ್ಠತೆಯ, ಜೇಷ್ಠತೆಯ, ಜನಪ್ರಿಯತೆಯ ಪರಿಚಯವಾಗುತ್ತದೆ. ಶಿಷ್ಯರ ಬಳಗ, ಅಭಿಮಾನಿಗಳು ಹೆಚ್ಚಾದಂತೆ, ಇವರ ಜೀವನ ಸಾರ್ಥಕತೆಯನ್ನು ಪಡೆಯುತ್ತಿರುತ್ತದೆ.
ವಾಕ್ ಸಂಪತ್ತು: ಒಂದು ಒಳ್ಳೆಯ ಮಾತಿದೆ. ಆರೋಗ್ಯ ಸಂಪಾದನೆ ಸಾಧ್ಯ ಆಹಾರ ಬಲದಿಂದ; ಯಾವುದೇ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಸತತವಾದ ಅಭ್ಯಾಸ ಬಲದಿಂದ; ಜ್ಞಾನ ಸಂಪಾದನೆ ಸಾಧ್ಯ ವಿದ್ಯಾಬಲದಿಂದ; ಹಣ ಸಂಪಾದನೆ ಸಾಧ್ಯ ಶ್ರಮಬಲದಿಂದ; ಯಾವುದೇ ಕೆಲಸವನ್ನು ಮಾಡಲು ಸಾಧ್ಯ ಮನೋಬಲದಿಂದ; ಪ್ರೀತಿಯ ಬಲದಿಂದ; ಆದರೆ ಎಲ್ಲವೂ ಸಾಧ್ಯ
ಮಾತಿನ ಬಲದಿಂದ! ಈ ಸತ್ಯವನ್ನರಿತೇ ಮಾತು ಬಲ್ಲವನಿಗೆ ಜಗಳಲ್ಲ; ಊಟ ಬಲ್ಲವನಿಗೆ ರೋಗಲ್ಲವೆಂಬ ಸರ್ವಕಾಲಿಕವಾದ, ಸರ್ವಮಾನ್ನಿಕವಾದ ಗಾದೆ ಪ್ರಚಲಿತದಲ್ಲಿದೆ.
ಮಳೆ ನೀರಿನಿಂದ ಮಾತ್ರ ಗಿಡಮರಗಳು ಬೆಳೆಯಲು ಸಾಧ್ಯ; ಗುಡುಗು ಸಿಡಿಲುಗಳಿಂದಲ್ಲ! ಅಂತೆಯೇ ವಿನಯವಾದ ಮಾತು ಗಳಿಂದ ಮಾತ್ರ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಲು ಸಾಧ್ಯ!. ಅಬ್ಬರ ಆರ್ಭಟಗಳಿಂದಲ್ಲ! ಕಾಲು ಎಡವಿದರೆ ಆಗುವ ಅಪಾಯಕ್ಕಿಂತ, ನಾಲಿಗೆ ಎಡವಿದರೆ ಆಗುವ ಅಪಾಯ ದೊಡ್ಡದು. ವಾಕ್ ಚಾತುರ್ಯ, ಮನುಷ್ಯನ ಇನ್ನೊಂದು ದೊಡ್ಡ
ಸಂಪತ್ತು.
ಸಂತೃಪ್ತಿ ಭಾವ: ಕೆಲವರು ತಮ್ಮ ಬಳಿ ಏನೇ ಇದ್ದರೂ, ಎಷ್ಟೇ ಇದ್ದರೂ, ಸಂತೋಷ ವಾಗಿರೋದಿಲ್ಲ. ಆದರೆ, ಇನ್ನೂ ಕೆಲವರು
ಅಲ್ಪಸಂತೋಷಿಗಳು. ತಮ್ಮ ಬಳಿ ಹೆಚ್ಚೇನೂ ಇಲ್ಲದಿದ್ದರೂ, ಇದ್ದುದ್ದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುತ್ತಾರೆ. ಸಂತೃಪ್ತ ಮನಸ್ಸಿ ಗಿಂತ ದೊಡ್ಡ ಸಂಪತ್ತು ಜೀವನದಲ್ಲಿ ಇನ್ನೊಂದಿಲ್ಲ ಸಂತಾನಭಾಗ್ಯ: ಇದು ಇನ್ನೊಂದು ಸಂಪತ್ತು.; ಜನ ಮದುವೆಯಾಗೋದೇ ಸಂತೋಷಕ್ಕಾಗಿ ಮತ್ತು ಸಂತಾನೋತ್ಪತ್ತಿಗಾಗಿ.
ಸಂತಾನ ಪ್ರಾಪ್ತಿ ಒಂದು ದೊಡ್ಡ ಐಶ್ವರ್ಯವೇ ಸರಿ. ಅದರಲ್ಲು ನಮ್ಮ ಮಕ್ಕಳು ಆರೋಗ್ಯವಂತರಾಗಿ ಬೆಳೆದು, ಚೆನ್ನಾಗಿ ಕಲಿತು ಓರ್ವ ಸುಶಿಕ್ಷಿತ-ಸುಸಂಕೃತ, ಸಭ್ಯ ಸಂಭಾವಿತ ಗೌರವಾನ್ವಿತ ವ್ಯಕ್ತಿಯಾಗಿ ಹೊರಹೊಮ್ಮಿದರೆ, ಅದಕ್ಕಿಂತ ಮಿಗಿಲಾದ ಸಂತಸ, ಸಂಪತ್ತು ಬೇರೊಂದಿಲ್ಲ.
ಕೆಲವರು ಧನಬಲ, ಜಾತಿಬಲ, ಸಂಪರ್ಕಬಲ, ಬಾಹುಬಲ, ವಂಶಬಲದಿಂದ ನಾಯಕರುಗಳು ಆಗೋದು ಉಂಟು. ಆದರೆ ಇವೆಲ್ಲಾ ಶಾಶ್ವತವಲ್ಲ. ಜನಬಲವೇ ಜನನಾಯಕರಿಗೆ ದೊಡ್ಡ ಸಂಪತ್ತು. ಇದೇ ರೀತಿ ಕಲಾವಿದರುಗಳಿಗೆ ಕಲಾ ಪೋಷಕರು,
ಕಲಾರಾಧಕರು, ಕಲಾಭಿಮಾನಿಗಳೇ ಹಾಗೂ ಅವರು ಗಳಿಸಿಕೊಂಡ ಕೀರ್ತಿ ಮತ್ತು ಖ್ಯಾತಿಗಳೇ ಅತಿ ದೊಡ್ಡ ಸಂಪತ್ತುಗಳು. ಹೀಗೆ, ಹಣದ ಹೊರತಾಗಿ ನಾವು ಗಳಿಸಿಕೊಳ್ಳಬಲ್ಲ ತರತರದ ಐಶ್ವರ್ಯಗಳಿವೆ. ಇವುಗಳನ್ನು ಪಡೆಯುತ್ತಾ ಸಿರಿವಂತರಾಗೋಣ.