ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@gmail.com
ಅದೊಂದು ಕಳ್ಳರ, ಪಾಪಿಗಳ ಸಾಮ್ರಾಜ್ಯ! ಅಲ್ಲಿ ಕದ್ದ ಡೇಟಾದಿಂದ ಹಿಡಿದು ಎಷ್ಟೋ ಜನರ ಮೆಸ್ಸೇಜ್‌ನವರೆಗೆ, ಕಿರಾಣಿ ಅಂಗಡಿಯಿಂದ ಹಿಡಿದು ಡ್ರಗ್ಸ್, ಗಾಂಜಾ ಸಪ್ಲೈಗಳವರೆಗೆ, ಹೆಣ್ಣುಮಕ್ಕಳ ಫೋಟೊಗಳಿಂದ ಹಿಡಿದು ಹೆಣ್ಣುಮಕ್ಕಳವರೆಗೆ, ಶಸ್ತ್ರಾಸ್ತ್ರಗಳಿಂದ ಹಿಡಿದು ಭಯೋತ್ಪಾದಕ, ಸುಪಾರಿ ಕಿಲ್ಲರ್‌ಗಳವರೆಗೆ ಬರೀ ಅವರೇ.
ನೀವು ‘ಗುಲ್ಟೂ’ ಸಿನಿಮಾ ನೋಡಿರಬಹುದು. ಇಡೀ ಚಿತ್ರ ಇರುವುದು ಇಂಟರ್‌ನೆಟ್‌ನ ಡಾರ್ಕ್ ಸೈಡ್‌ನ ಮೇಲೆಯೇ. ಕಂಪ್ಯೂಟರ್ ಡೇಟಾ ಕಳವು, ಸೈಟ್‌ಗಳ ಹ್ಯಾಕಿಂಗ್‌ನ ಸಾಧ್ಯತೆ ಅಪಾಯಗಳನ್ನು ತುಸು ಅತಿರಂಜನೀಯವಾಗಿ ಕಟ್ಟಿಕೊಟ್ಟಿ ದ್ದರೂ ತೀರಾ ಕಲ್ಪನೆಯೇನಲ್ಲ. ಕೆಲವು ಸೀನ್‌ಗಳಂತೂ ನಿಜ ಜೀವನದಲ್ಲೂ ಆಗುವ ಅನುಭವದಂತೆಯೇ ಇದೆ.
ನೀವು ಗಮನಿಸಿರಬಹುದು, ಗೂಗಲ್‌ನಲ್ಲಿ ಯಾವುದೋ ಊರಿಗೆ ಹೋಗಲು ಬಸ್‌ನದ್ದೋ, ಫ್ಲೈಟ್‌ನದ್ದೋ ಟೈಮಿಂಗ್ ಅಥವಾ ರೇಟ್ ಅನ್ನು ನೋಡಿದ ಮೇಲೆ, ನಮ್ಮ ಫೇಸ್‌ಬುಕ್ ನಲ್ಲಿ, ಇನ್ಸ್ಟಾಗ್ರಾಮ್‌ನಲ್ಲಿ ಬರೀ ಟ್ರಾವೆಲ್ ಏಜೆನ್ಸಿ, ಫ್ಲೈಟ್ ಅಥವಾ ಟ್ರಾನ್ಸ್‌ಪೋರ್ಟ್ ಕಂಪನಿಗಳ ಒಂದೇ ಸಮನೆ ಆಡ್‌ಗಳು ಬರುವುದಕ್ಕೆ ಶುರು ವಾಗುತ್ತೆ. ಇದೆಲ್ಲ ಗೂಗಲ್ ಅನಾಲಿಟಿಕ್ಸ್ ನಿಂದ ಸಾಧ್ಯ. ಮತ್ತೆ ಅದರಿಂದ ಹಾನಿಯೇನೂ ಇರಲ್ಲ.
ಆದರೆ….
ನಿಮ್ಮ ಅಕೌಂಟ್‌ನಲ್ಲಿ ಕಡಿಮೆ ಹಣ ಇದ್ದಾಗ ನಿಮಗೇ ಗೊತ್ತಿರದ ಅಥವಾ ನೀವು ನಂಬರ್, ಇಮೇಲ್ ಐಡಿ ಕೊಟ್ಟಿರದ ಹಣಕಾಸು ಕಂಪನಿ ಯಿಂದ ‘ಸಾಲದ ಆಫರ್‌ನ’ ಮೆಸ್ಸೇಜ್ ಮತ್ತು ಮೇಲ್ ಬರುವುದಕ್ಕೆ ಶುರು ಆಗಿದೆಯೆಂದರೆ, ಅಲ್ಲಿಗೆ ತಿಳಿಯಬೇಕು ನಿಮ್ಮ ಮೊಬೈಲ್ ನಂಬರ್, ಮೇಲ್ ಐಡಿ ಯಾವುದೋ ಕಂಪನಿಗೆ ಮಾರಾಟವಾಗಿದೆ!
ಇನ್ನು, ನಿಮಗೇ ಗೊತ್ತಿರದ ಹಾಗೆ ಅಥವಾ ಯಾವುದೋ ತಾತ್ಕಾಲಿಕ ಕಾರಣಕ್ಕೆ ಯಾವುದೋ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಬಿಟ್ಟಿರುತ್ತೀರಾ. ಸಹಜವಾಗಿ ನಿಮ್ಮ ಮೊಬೈಲ್ ಲಾಗಿನ್‌ಡೇಟಾದಲ್ಲಿನ ಮೊಬೈಲ್ ನಂಬರ್ರೋ, ಇಮೇಲ್ ಐಡಿಯೋ ಆ ಅಪ್ಲಿಕೇಷನ್‌ನ ಕಂಪನಿಗೆ ಸಿಗುತ್ತದೆ. ಅದೇ ಡೇಟಾವನ್ನು ಆ ಕಂಪನಿಯವರು ಬೇರೆ ಯಾವುದೋ ಕಂಪನಿಗೆ ಮಾರಿ, ಅದರಿಂದ ಅಲ್ಪ ಸ್ವಲ್ಪ ದುಡ್ಡನ್ನೂ ತೆಗೆದುಕೊಂಡಿರಬಹುದು. ನಿಮಗೆ ಹೀಗನಿಸುತ್ತಿರಬಹುದು-ಅಯ್ಯೋ, ಮೊಬೈಲ್ ನಂಬರ್ ತಾನೆ, ತಗೊಂಡ್ರೆ ತಗೊಳ್ಳಿ.
ಮೆಸ್ಸೇಜ್ ಕಳುಹಿಸಿದರೆ, ಅದಕ್ಕೆ ರಿಪ್ಲೈ ಮಾಡದಿದದ್ರಾಯಿತು. ಅದರಿಂದ ನನಗೇನು ನಷ್ಟ! ಇದು ಎಲ್ಲರಲ್ಲೂ ಬರುವ ಸಹಜ ಅನಿಸಿಕೆಯೇ. ಅಷ್ಟಕ್ಕೂ ಆಫ್ಟರಾಲ್ ಮೊಬೈಲ್ ನಂಬರ್ ಅಲ್ವಾ ಅಂತ. ಆದರೆ ಅದೇ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆಧಾರ್ ಪ್ಯಾನ್ ನಂಬರ್‌ಗಳು ಬೇರೆಯವರ ಕೈಗೆ ಸಿಕ್ಕರೆ? ಇತ್ತೀಚೆಗೆ ಬರುತ್ತಿರುವ ಸುದ್ದಿಗಳೆಲ್ಲ ಇಂಥವೇ, ಅಕೌಂಟ್‌ನಿಂದ ಇಷ್ಟು ಸಾವಿರ, ಅಷ್ಟು ಸಾವಿರ ಹಣವನ್ನು ದೇಪಿದ್ದಾರೆ. ಸಿನಿಮಾ ನಟ, ನಟಿಯರ ಸಾಮಾಜಿಕ ಜಾಲತಾಣದ
ಅಕೌಂಟ್‌ಗಳು ಹ್ಯಾಕ್ ಆಗಿವೆ. ವಾಟ್ಸ್‌ಆಪ್‌ನ ಮಾಹಿತಿ ಸೋರಿಕೆ ಆಗಿದೆ. ಸರಕಾರಿ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ದ್ದಾರೆ…
ಮೊನ್ನೆ ಮೊನ್ನೆ ತಾನೇ ತಮಿಳುನಾಡಿನ ಶ್ರೀ ಸರಣ್ ಮೆಡಿಕಲ್ ಸೆಂಟರಿನಿಂದ ೧.೫ ಲಕ್ಷ ಜನರ ದೇಟಾವನ್ನು ಹ್ಯಾಕ್ ಮಾಡಿ, ಡಾರ್ಕ್‌ವೆಬ್‌ನಲ್ಲಿ ಮಾರಾಟಮಾಡಿದ್ದಾರೆ. ಆ ಮಾಹಿತಿಯಲ್ಲಿ ರೋಗಿಯ ಹೆಸರಿನಿಂದ ಹಿಡಿದು ಅವರ ಮೊಬೈಲ್ ನಂಬರ್, ಮನೆ ಅಡ್ರೆಸ್, ಅವರ ರೋಗಗಳ ಮಾಹಿತಿ, ಮತ್ತೆ ಡಾಕ್ಟರ್‌ನ ಮಾಹಿತಿಯೂ ಸೇರಿತ್ತು. ಹಾಗೆ ಮಾರ್ಚ್ ೩೧, ೨೦೨೧ರ ಸಮಯದಲ್ಲಿ ಭಾರತದ ಅತೀದೊಡ್ಡ ಮಾಹಿತಿ ಸೋರಿಕೆಯಾಗಿತ್ತು.
ಹೆಚ್ಚೂ ಕಡಿಮೆ ೮.೨ ಟಿಬಿಯ ಮಾಹಿತಿ ಡಾರ್ಕ್‌ವೆಬ್‌ನಲ್ಲಿ ‘ಸೇಲ್’ಗೆ ಇತ್ತು. ಅದೂ ಕ್ರೆಡಿಟ್ ಕಾರ್ಡ್ ನಂಬರ್ ಮತ್ತು ಫೋಟೋ ಕೆವೈಸಿಯ ಮಹಿತಿ! ಅದಷ್ಟೇ ಅಲ್ಲ, ಏರ್ ಇಂಡಿಯಾದ ಪ್ರಯಾಣಿಕರ, ಕ್ಯಾಟ್ (cat) ಪರೀಕ್ಷಾರ್ಥಿಗಳ, ಡೋಮಿನೋಸ್ ಪಿಜ್ಜಾನದ್ದು, ಅಪ್‌ಸ್ಟೊಕ್ಸ್ ನ ಮಾಹಿತಿ, ಪೊಲೀಸ್ ಎಕ್ಸಾಂ ಬರೆದ ೫ ಲಕ್ಷ ಪರೀಕ್ಷಾರ್ಥಿಗಳ ಮಾಹಿತಿ, ಕೋವಿಡ್ -೧೯ ರ
ಟೆಸ್ಟ್ ರೆಸಲ್ಟ್, ಜಸ್ಟ್ ಪೇ ಯುಸರ್ ಡೇಟಾ, ಬಿಗ್ ಬಾಸ್ಕೆಟ್‌ನ ಗ್ರಾಹಕರ ಮಾಹಿತಿ, ಜಸ್ಟ್ ಡೈಲ್‌ನಿಂದ ಮಾಹಿತಿ, ಎಸ್‌ಬಿಐ ಡೇಟಾ ಇವರೆಲ್ಲರೂ ಹ್ಯಾಕರ‍್ಸ್‌ಗಳ ಕುರಿಗಳೇ!
ಇನ್ನೆಷ್ಟಿದ್ದಾವೋ. ಅದೇ ಮಾಹಿತಿಯನ್ನು ಹಿಡಿದುಕೊಂಡು ಹ್ಯಾಕರ್‌ಗಳು, ಡಾರ್ಕ್‌ವೆಬ್ ನಲ್ಲಿ ಮಾರಿ ಹಣ ಮಾರಿಕೊಂಡದ್ದು.
ಅಂದಹಾಗೆ, ಬರೀ ಮಾಹಿತಿ ಸೋರಿಕೆ ಆಗಿದ್ದೇ ಗೊತ್ತಾಗಿದೆ. ಆದರೆ, ಅದನ್ನು ಸೋರಿಕೆ ಮಾಡಿ ಮಾರಿದವನ ಬಗ್ಗೆ ಅಂಶವೇ ಇಲ್ಲ ಎಂದು ಅನಿಸಬಹುದು. ಇದಕ್ಕೆಲ್ಲ ಕಾರಣ ಡಾಕ್ ವೆಬ್!
ಇನ್ನು ಉಗ್ರರು ಸಿಕ್ಕಿದಾಗ, ಡ್ರಗ್ ಡೀಲರ್ ಗಳು ಸಿಕ್ಕಿದಾಗ ಇತ್ತೀಚಿನ ದಿನಗಳಲ್ಲಿ ಅವರಿಂದ ಬರುತ್ತಿರುವ ವಿಷಯ ಡಾರ್ಕ್ ವೆಬ್ ನಲ್ಲಿ ಡ್ರಗ್ಸ್ ಮಾರುತ್ತಿದ್ದ. ಉಗ್ರನಾಗಿದ್ದವನು ಡಾರ್ಕ್‌ವೆಬ್ ನಲ್ಲಿ ಬಾಂಬ್ ಮಾಡುವುದನ್ನು ಕಲೀತಿದ್ದ, ಅಲ್ಲಿಂದ ಶಸ್ತ್ರಾಸ್ತ್ರ ಗಳನ್ನು ಖರೀದಿಸುತ್ತಿದ್ದ ಅನ್ನುವಂತಹ ಸುದ್ದಿಯನ್ನು ಕೇಳಿಯೇ ಕೇಳಿರುತ್ತೀರಿ. ನಾವೆಲ್ಲ ಬಳಸುವ ಇಂಟರ್ನೆಟ್ ಬರೀ ಶೇ.೫ಅಷ್ಟೇ. ಅದರ ಮೇಲೆ ಬಳಕೆಯಾಗುವುದೇ ಡೀಪ್ ವೆಬ್ ಮತ್ತು ಡಾಕ್ ವೆಬ್, ಡೀಪ್‌ವೆಬ್‌ಗಳಲ್ಲಿ ನಾವು ಬಳಸುವ ಇ-ಮೈಲ್, ಮೆಸ್ಸೇಜ್ ಮತ್ತು ಚಾಟ್‌ಗಳು, ಸೋಷಿಯಲ್ ಮೀಡಿಯಾಗಳಲ್ಲಿ ಆರ್ಕೈವ್ ಮಾಡಿಕೊಂಡ ಕಂಟೆಂಟ್‌ಗಳು, ಬ್ಯಾಂಕ್ ಸ್ಟೇಟ್ಮ್ಂಟ್ ಮತ್ತು ಅದರ ವೆಬ್ ಪೇಜ್, ಹೆಲ್ತ್ ಇನ್ನೀತರ ವಿಷಯಗಳಿದ್ದಿವೆಯಾದರೂ ಅದರಿಂದ ಯಾವುದೇ ರೀತಿಯ ತಾಪತ್ರಯಗಳು ಹುಟ್ಟೋದಿಲ್ಲ ಮತ್ತು ಒಬ್ಬ ಕಾಮನ್ ಮ್ಯಾನ್‌ಗೆ ಅದರಲ್ಲಿ ಅದಕ್ಕಿಂತ ಜಾಸ್ತಿ ಏನನ್ನೂ ಮಾಡಲು ಬರಲ್ಲ. ಆದರೆ, ಆಟ ಇರುವುದೆಲ್ಲ ಡಾಕ್‌ವೆಬ್‌ನಲ್ಲಿಯೇ!
ಅದೊಂದು ಕಳ್ಳರ, ಪಾಪಿಗಳ ಸಾಮ್ರಾಜ್ಯ! ಅಲ್ಲಿ ಕದ್ದ ಡೇಟಾದಿಂದ ಹಿಡಿದು ಎಷ್ಟೋ ಜನರ ಮೆಸ್ಸೇಜ್‌ನವರೆಗೆ, ಕಿರಾಣಿ
ಅಂಗಡಿಯಿಂದ ಹಿಡಿದು ಡ್ರಗ್ಸ್, ಗಾಂಜಾ ಸಪ್ಲೈಗಳವರೆಗೆ, ಹೆಣ್ಣುಮಕ್ಕಳ ಫೋಟೊಗಳಿಂದ ಹಿಡಿದು ಹೆಣ್ಣುಮಕ್ಕಳವರೆಗೆ,
ಶಸ್ತ್ರಾಸ್ತ್ರಗಳಿಂದ ಹಿಡಿದು ಭಯೋತ್ಪಾದಕ, ಸುಪಾರಿ ಕಿಲ್ಲರ್‌ಗಳವರೆಗೆ ಬರೀ ಅವರೇ. ಬೆರಳ ತುದಿಯಲ್ಲೇ ಮನೆಗೆ ಡ್ರಗ್ಸ್ ತರಿಸಿ ನಶೆ ಏರಿಸಿದರಿದ್ದಾರೆ. ಯಾವುದೋ ದೇಶದ ಯಾವುದೋ ಮೂಲೆಯಲ್ಲಿ ಕೂತು ಕೊಲೆ ಮಾಡಿಸಿದ್ದವರಿದ್ದಾರೆ.
ಆ ಕೊಲೆಯಲ್ಲಿ ಕೊಲೆಮಾಡಿಸಿದವರು ಯಾರೆಂದು ಯಾರಿಗೂ ಗೊತ್ತಾಗಲ್ಲ, ಕೊಲೆ ಯಾಕೆ ಮಾಡುತ್ತಿವೆ ಎಂಬ ವಿಷಯ ಕೊಲೆಗಾರರನಿಗೂ ಗೊತ್ತಿರಲ್ಲ. ಇತ್ತೀಚಿನ ಸೈಬರ್ ಕ್ರೈಮ್‌ಗಳಾಗುತ್ತಿರುವುದೇ ಡಾರ್ಕ್‌ವೆಬ್‌ನಲ್ಲಿ, ೧೯೯೦ರಲ್ಲಿ ಅಮೆರಿಕದ ರಕ್ಷಣಾ ಕ್ಷೇತ್ರ ತನ್ನ ಡೇಟಾವನ್ನು, ಗೂಢಾಚಾರರ ಸೂಕ್ಷ್ಮ ಸಂವಹನದ ಮಾಹಿತಿಯನ್ನು ಯಾರಿಗೂ ಗೊತ್ತಾಗದಂತೆ ಸಂರಕ್ಷಿಸಲು, ಅದನ್ನು ಎನ್‌ಕ್ರಿಪ್ಟ್ (ಗೂಢಲಿಪಿಕರಣ) ಮಾಡಲು ಬೇಕಾದ, ಮತ್ತೆ ಯಾರಿಗೂ ಸಾಧಾರಣವಾಗಿ ಸಿಗಲಾರದಂತಹ ಒಂದು ವ್ಯವಸ್ಥೆಯನ್ನು ಸೃಷ್ಟಿ ಮಾಡುತ್ತಾರೆ.
ಅದರಿಂದಲೇ ಸೂರ್ತಿ ಪಡೆದ ಕೆಲವರು ಠಿಟ್ಟ ನೆಟ್‌ವರ್ಕ್ (ದ ಆನಿಯನ್ ರೂಟರ್) ಅನ್ನು ಸೃಷ್ಟಿ ಮಾಡಿ ಜನರ ಬಳಕೆಗೆ ಬಿಡುತ್ತಾರೆ. ‘ಆನಿಯನ್’ ಇದು ಹೆಸರಿಗೆ ತಕ್ಕನಾದ ಈರುಳ್ಳಿಯೇ, ಸಿಪ್ಪೆ ಸುಲಿದ ಹಾಗೆಲ್ಲ ಮತ್ತೊಂದು ಲೇಯರ್ ಬರೋ ಥರ, ಏಳು ಸಾವಿರ ಲೇಯರ್‌ನಲ್ಲಿ ಡೇಟಾ ಎನ್‌ಕ್ರಿಪ್ಟ್ ಮಾಡಿ ಇಟ್ಟುಕೊಂಡಿರುತ್ತಾರೆ. ಇನ್ನು ಅದನ್ನು ಬಳಸುವವರೂ ಅನಾಮಧೇಯರೇ! ಟಾರ್ ಬಳಸುವುದರಿಂದ ಲೊಕೇಷನ್ ಸಹ ಟ್ರೇಸ್ ಆಗುವುದಿಲ್ಲ, ಹೆಸರೂ. ಇದು ಒಂಥರಾ ಸಾಬ್ರ
ಹೆಂಗಸರಿಗಾಗಿಯೇ ‘ಖಾನ್ ಮಾರ್ಕೆಟ್’ ಇದ್ದಹಾಗೆ, ಎಲ್ಲರೂ ಮನುಷ್ಯರೇ, ಎಲ್ಲರೂ ಓಡಾಡಿಕೊಂಡೇ ಇರುತ್ತಾರೆ, ಆದರೆ ಅವರ ಮಾಹಿತಿಯ ಬಗ್ಗೆ ನಮಗೆ ಗೊತ್ತಾಗುವುದೇ ಇಲ್ಲ.
ಏಕೆಂದರೆ ಪೆಂಗ್ವಿನ್ ಥರ ತಮ್ಮನ್ನೇ ತಾವು ಬುರ್ಖಾದಿಂದ ಮುಚ್ಚಿಕೊಂಡಿರುತ್ತಾರೆ ನೋಡಿ. ಡಾರ್ಕ್ ವೆಬ್ ಬಳಕೆಯೂ ಹಾಗೆ.
ಬಳಸುವವನಿಗೆ ಬಿಟ್ಟರೆ ಅವನು ಯಾರು ಅಂತ ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದಲೇ ಅವರುಗಳು ಪೊಲೀಸರ ಅಥಿತಿ ಆಗುವುದು ತುಂಬಾ ಕಡಿಮೆಯೇ. ಆದರೂ ದು ಅವನ ಸಣ್ಣ ನೆಗ್ಲಿಜೆನ್ಸಿಯೇ. ಇಂಥವರನ್ನು ಹಿಡಿಯಲಿಕ್ಕೆ ಪೊಲೀಸರು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ತ್ರಾಸ್(?!) ಪಡುತ್ತಾರೆ. ಆದರೆ ಕಳ್ಳರು ಅವರಿಗಿಂತ ಯಾವಾಗಲೂ ಶಾಣ್ಯ
ಅಲ್ವೇನ್ರೀ!
ಈ ಸೈಬರ್ ಕ್ರೈಮ್‌ಗಳು, ಡೇಟಾ ಬ್ರೀಚ್ ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಯೇ ಕಾಣುತ್ತಿವೆ. ಎದುರುಗಡೆ ಇರುವ ಕಳ್ಳರನ್ನೇ ಹಿಡಿಯಕ್ಕಾಗದ ಪೊಲೀಸರು ಇಂಥಹ ಸ್ಥಿತಿಯ ಬಗ್ಗೆ ತುಂಬಾ ಕ್ರಮಗಳನ್ನೇನೋ ಕೈಗೊಳ್ಳುತ್ತಿದ್ದಾರೆ. ಇದರ ಬಗ್ಗೆಯೇ ಸಿಐಡಿಯ ಹಿರಿಯ ಅಧಿಕಾರಿ ‘ಪ್ರತಿಯೊಂದು ಲೇಯರ್ ನಲ್ಲಿ ಸಾವಿರಾರು ಮೆಸ್ಸೇಜ್‌ಗಳು ಅಡಗಿರುತ್ತಾವೆ. ಎನ್‌ಕ್ರಿಪ್ಷನ್‌ನಿಂದ ಬಳಕೆದಾರನ ಮಾಹಿತಿ ಸೇಫ್ ಆಗಿರುತ್ತದೆ.
ಮತ್ತೆ ಒಂದು ಅಥವಾ ಕೆಲವು ಲೇಯರ್ ಅನ್ನು ನೋಡಿ ಪೂರ್ತಿ ಮೆಸ್ಸೇಜ್ ಬಗ್ಗೆ ತಿಳಿದುಕೊಳ್ಳಲು ಆಗುವುದಿಲ್ಲ; ಮೆಸೇಜ್‌ಗಳು ಪ್ರತೀಯೊಂದು ಲೇಯರ್ ಗಳಲ್ಲೂ ಕೇರ್ ಫುಲ್ ಆಗಿಯೇ ಎನ್‌ಕ್ರಿಪ್ಟ್ ಮಾಡಿರುತ್ತಾರೆ. ನಿರ್ದಿಷ್ಟ ಸ್ಥಳ (bಛಿoಠಿಜ್ಞಿZಠಿಜಿಟ್ಞ)
ತಲಪುವವರೆಗೂ ತಿಳಿಯುವುದಿಲ್ಲ. ಮತ್ತೆ ಡಾಕ್ ವೆಬ್ ಮೆಸ್ಸೇಜ್‌ಗಳ ಸಂಚಾರ ಮಾಡಲು ಜಾಸ್ತಿ ಸಮಯವನ್ನೂ ತೆಗೆದುಕೊಳ್ಳುತ್ತದೆ. ಅದು ಲೇಯರ್ ಮತ್ತು ಎನ್ಕ್ರಿಪ್ಷನ್‌ನಿಂದ’ ಎಂದು ಹೇಳಿದ್ದಾರೆ.
ಟೆಕ್ನಾಲಾಜಿ ಮನುಷ್ಯನ ಎಲ್ಲದಕ್ಕೂ ಸಹಾಯ ಮಾಡುತ್ತಿದೆ. ಟೆಕ್ನಾಲಾಜಿಯನ್ನು ಮನುಷ್ಯನೇ ಕಂಡು ಹಿಡಿದಿರಬಹುದು ಆದರೆ, ಇಂದಿನ ಕಾಲದಲ್ಲಿ ಟೆಕ್ನಾಲಾಜಿ ಇಲ್ಲದೇ ಮನುಷ್ಯ ಇರಲಾರ ಎಂಬುದೂ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಆದರೆ, ಅದೇ ಟೆಕ್ನಾಲಾಜಿಯನ್ನು ಅದೇ ಮನುಷ್ಯ ಅವನ ದುರಾಚಾರಕ್ಕೆ, ಪಾಪದ ಕರ್ಮಗಳಿಗೆ, ತಾನು ಮಾಡಿದ ಅನ್ಯಾಯಗಳಿಗೆ, ದುಡ್ಡಿನ
ಆಸೆಗೆ, ಮತ್ತಿನ್ನೇನೋ ಚಪಲಗಳಿಗೆ ಬಳಸುವುದಕ್ಕೆ ಶುರುಮಾಡಿದಾಗಲೇ ಈ ಥರದ ಡಾರ್ಕ್‌ನೆಟ್‌ಗಳಂಥವು ಹುಟ್ಟಿ ಇನ್ನಷ್ಟು ಜನರ ಅನಾಚಾರಗಳಿಗೆ ಮಾಧ್ಯಮಗಳಾಗುತ್ತಿದ್ದಾವೆ.
ಹಾಗಂತ ಡಾರ್ಕ್‌ವೆಬ್‌ಗಳಲ್ಲಿ ಆಗುವುದೆಲ್ಲ ಬರೀ ಕೆಟ್ಟ ಕೆಲಸವೇನಲ್ಲ. ದೊಡ್ಡದೊಡ್ಡ ಭ್ರಷ್ಟಾಚಾರ, ಅನ್ಯಾಯದ ಮಾಹಿತಿ ಯನ್ನೂ ಡಾರ್ಕ್‌ವೆಬ್ ಬಳಸಿ ಇನ್ನೊಬ್ಬರಿಗೆ ಕಳುಹಿಸಬಹುದು. ಆದರೆ ಇಂದಿನ ದಿನಗಳಲ್ಲಿ ಡಾರ್ಕ್ ವೆಬ್ ಅನ್ನುವಂತಹ ಕತ್ತಲ ಪ್ರಪಂಚ, ಪಾಪಿಗಳ ಲೋಕ ಆಗಿಬಿಟ್ಟಿದೆ.