Saturday, 14th December 2024

ಮುಸಲ್ಮಾನರಿಗೆ ಇನ್ನೂ ಎಷ್ಟು ದಿವಸ ಅಲ್ಪಸಂಖ್ಯಾತರೆಂಬ ರಕ್ಷಾ ಕವಚ ?

ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ

ಹಲವು ಜನರಿಗೆ ಅಲ್ಪಸಂಖ್ಯಾತರೆಂದರೆ ಯಾರು? ಆ ಪದದ ಅರ್ಥವೇನೆಂಬುದೇ ತಿಳಿದಿಲ್ಲ, ಅದರಲ್ಲೂ ಹಲವು ಮತದಾರ ರಿಗಂತೂ ಇದರ ಬಗ್ಗೆ ಕೊಂಚ ಜ್ಞಾನವೂ ಇಲ್ಲ, ಮಾಧ್ಯಮಗಳಲ್ಲಿ ಅಲ್ಪಸಂಖ್ಯಾತರೆಂಬ ಪದ ಬಳಕೆಯಾದರೆ ಸಾಕು ಸ್ವತಃ ನನ್ನ ಮನೆಯವರೇ ನನ್ನನ್ನು ಅಲ್ಪಸಂಖ್ಯಾತರೆಂದರೆ ಯಾರೆಂದು ಕೇಳಿದ ಹಲವು ಉದಾಹರಣೆಗಳಿವೆ.

ರಾಜಕೀಯವಾಗಿ ಹಲವು ಬಾರಿ ಈ ಪದ ಬಳಕೆಯಾಗುತ್ತಿರುತ್ತದೆ, ಮೂಲತಃ ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ಭಾರತದಲ್ಲಿ ಅಲ್ಪಸಂಖ್ಯಾತರೆಂದರೆ ರಾಜಕಾರಣಿಗಳಿಗೆ ಮೊದಲು ನೆನಪಾಗುವುದೇ ಮುಸಲ್ಮಾನರು. ಮುಸಲ್ಮಾನರನ್ನು ಬಿಟ್ಟು ಹಲವಾರು ಅಲ್ಪಸಂಖ್ಯಾತರಿದ್ದಾರೆ, ಆದರೆ ಅವರ್ಯಾರೂ ಸಹ ಇವರಿಗೆ ಹೆಚ್ಚಾಗಿ ನೆನಪಿಗೆ ಬರುವುದಿಲ್ಲ. ಪಾರ್ಸಿಗಳ ಬಗ್ಗೆ ರಾಜಕಾರಣಿಗಳು ಎಂದೂ ಮಾತನಾಡುವುದಿಲ್ಲ, ಜೈನರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಇವರ್ಯಾರದ್ದೂ ಹೆಚ್ಚಿನ ವೋಟ್ ಬ್ಯಾಾಂಕ್ ಇಲ್ಲ. ಮುಸಲ್ಮಾನರು ಅಲ್ಪಸಂಖ್ಯಾತರೆಂದು ಕರೆಸಿಕೊಂಡರೂ ಸಹ ಅವರ ಜನಸಂಖ್ಯೆ ಇವರೆಲ್ಲರಿಗಿಂತಲೂ ಹೆಚ್ಚಿದೆ, ಆದರೂ ಅವರನ್ನು ಮಾತ್ರ ಅಲ್ಪಸಂಖ್ಯಾತರೆಂದು ಕರೆಯುತ್ತಾರೆ.

ಬಾಲಿವುಡ್‌ನ ಮೂರು ಖಾನ್‌ಗಳು ಮುಸಲ್ಮಾನರೇ, ಅಲ್ಪಸಂಖ್ಯಾತ ಧರ್ಮವನ್ನು ಪ್ರತಿನಿಧಿಸುವ ಇವರು ವರ್ಷಕ್ಕೆ ಸಾವಿರಾರು ಕೋಟಿಯ ವ್ಯವಹಾರವನ್ನು ಮಾಡುತ್ತಿದ್ದಾರೆ, ಇಷ್ಟೊಂದು ವ್ಯವಹಾರ ಮಾಡಿದರೂ ಸಹ ಇವರನ್ನು ಅಲ್ಪಸಂಖ್ಯಾತರೆಂದು ಕರೆಯಲಾಗುತ್ತಿದೆ. ಅಲ್ಪಸಂಖ್ಯಾತರೆಂಬ ರಕ್ಷಾ ಕವಚವನ್ನು ಮುಂದಿಟ್ಟುಕೊಂಡು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಸರಕಾರಗಳು ಕೋಟ್ಯಂತರ ರುಪಾಯಿಯ ಹಣವನ್ನು ಖರ್ಚು ಮಾಡುತ್ತಿವೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮದರಸಗಳ ಅಭಿವೃದ್ಧಿಗೆ ವ್ಯಯಿಸುತ್ತಿರುವ ಹಣದ ಬಗ್ಗೆ ಯಾರೂ ಚಕಾರ ವೆತ್ತುವುದಿಲ್ಲ.

ಬಹುಸಂಖ್ಯಾತ ಹಿಂದೂ ದೇವಸ್ಥಾನಗಳಿಗೆ ಸರಕಾರಗಳು ವ್ಯಯಿಸುವ ಹಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಹಲವು ದಶಕಗಳಿಂದ ಕಷ್ಟಪಟ್ಟು ಕಟ್ಟಿ, ಬೆಳೆಸಿದ ಹಿಂದೂ ದೇವಸ್ಥಾನಗಳನ್ನು ಸರಕಾರವು ಮುಜರಾಯಿ ಇಲಾಖೆಯಡಿಯಲ್ಲಿ ವಶಪಡಿಸಿಕೊಳ್ಳುತ್ತದೆ, ಆದರೆ ಎಷ್ಟು ಮಸೀದಿಗಳನ್ನು ವಶಪಡಿಸಿಕೊಂಡು ತನ್ನ ತೆಕ್ಕೆ ಯಲ್ಲಿಟ್ಟುಕೊಂಡಿದೆ ಹೇಳಿ ನೋಡೋಣ? ಕೇವಲ ಮುಸಲ್ಮಾನರಿಗೆ ಮಾತ್ರವಲ್ಲ, ಅವರ ದೇವರಿಗೂ ಸಹ ಅಲ್ಪಸಂಖ್ಯಾತ ಪಟ್ಟವೇ? ಹಿಂದೂ ದೇವಸ್ಥಾನಗಳು ಕೇವಲ ಆದಾಯದ ಮೂಲವಾಗಿ ಸರಕಾರಗಳಿಗೆ ಕಾಣಿಸುತ್ತಿವೆ, ಮುಜರಾಯಿ ಇಲಾಖೆಯಡಿಯಲ್ಲಿನ ಹುಂಡಿಯ ಹಣವು ನೇರವಾಗಿ ಸರಕಾರದ ಬೊಕ್ಕಸ ಸೇರುತ್ತಿದೆ, ಆದರೆ ಈ ಹಣವು ಅಲ್ಪಸಂಖ್ಯಾತರ ಅಭಿವೃದ್ಧಿಗೆಂದು ಬಳಕೆ ಯಾಗುತ್ತಿದೆ.

ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಬೇಕಿರುವುದು ಎಲ್ಲ ದೇಶದ ಕರ್ತವ್ಯ, ಆದರೆ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವಂತೆ ಅಲ್ಪಸಂಖ್ಯಾತರ ರಕ್ಷಣೆ ಮಾಡುವುದೆಷ್ಟು ಸರಿ? ಅಲ್ಪಸಂಖ್ಯಾತರು ತಮ್ಮ ಪವಿತ್ರ ಯಾತ್ರೆಯಾದ ಹಜ್‌ಗೆ ತೆರಳಲು ಪ್ರತ್ಯೇಕ ಯೋಜನೆಯ ವ್ಯವಸ್ಥೆ ಮಾಡಲಾಗುತ್ತದೆ, ಪ್ರತ್ಯೇಕ ಹಜ್ ಭವನ ನಿರ್ಮಾಣವಾಗುತ್ತದೆ, ಆದರೆ ಬಹುಸಂಖ್ಯಾತ ಹಿಂದೂಗಳು ಕಾಶಿ, ಮಥುರಾ, ವೈಷ್ಣೋದೇವಿಯಂಥ ಪವಿತ್ರ ಸ್ಥಳಗಳಿಗೆ ತೆರಳಲು ಯಾವ ಯೋಜನೆಯ ವ್ಯವಸ್ಥೆಯನ್ನೂ ಮಾಡುವುದಿಲ್ಲವೇಕೆ? ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿನ ನಾಯಕರುಗಳು ವೋಟಿನ ಆಸೆಗಾಗಿ, ಮುಸಲ್ಮಾನರಿಗೆ ಅಲ್ಪಸಂಖ್ಯಾತ ರೆಂಬ ಹಣೆಪಟ್ಟಿಯನ್ನು ಕಟ್ಟಿ ಅವರಿಗೆ ಬೇಕಿರುವ ಎಲ್ಲಾ ಯೋಜನೆಗಳನ್ನು ಕೊಡಲು ಶುರು ಮಾಡಿದರು.

ವಿಪರ್ಯಾಸವೆಂದರೆ 1947 ರಲ್ಲಿ ಅಖಂಡ ಭಾರತವು ವಿಭಜನೆಯಾದಾಗ, ಪಾಕಿಸ್ತಾನಕ್ಕೆ ಹೋದ ಹಿಂದೂಗಳು ಇಂದಿಗೂ ಅಲ್ಲಿ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದು ಗಳಿಗೆ, ಅಲ್ಲಿನ ಸರಕಾರ ಯಾವ ಸವಲತ್ತುಗಳನ್ನೂ ನೀಡುತ್ತಿಲ್ಲ. ಅವರನ್ನು ಎಷ್ಟು ಕೆಟ್ಟದಾಗಿ ನೋಡಿಕೊಳ್ಳುತ್ತಿದೆಯೆಂದರೆ ಪಾಕಿಸ್ತಾನದಲ್ಲಿ ನಮ್ಮ ಹಿಂದೂಗಳಿಗೆ ಸರಿಯಾದ ನೆಲೆಯೂ ಇಲ್ಲ, ಬಾಯಿಬಿಟ್ಟು ಸರಕಾರದ ವಿರುದ್ಧ ಒಂದು ಮಾತನ್ನೂ ಆಡುವಂತಿಲ್ಲ, ತಮ್ಮ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಬಹಿರಂಗವಾಗಿ ಹೇಳಿಕೆಯನ್ನು ಕೊಡುವಂತಿಲ್ಲ, ಇಲ್ಲಿಯ ರೀತಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತರನ್ನು ಹಿಂದೂ ದೇವಸ್ಥಾನಗಳಿಗೆ ಕಳುಹಿಸುವ ಯಾವ ವ್ಯವಸ್ಥೆಯನ್ನು ಮಾಡಿಲ್ಲ, ವ್ಯವಸ್ಥೆ ಬಿಡಿ ಪಾಕಿಸ್ತಾನದಲ್ಲಿನ ಸಾವಿರಾರು ದೇವಸ್ಥಾನಗಳನ್ನು ಅಲ್ಲಿನ ಸರಕಾರಿ ಪ್ರಾಯೋಜಿತರೇ ನಾಶ ಮಾಡಿದ್ದಾರೆ.

ಆದರೆ ಭಾರತದಲ್ಲಿ ಅಲ್ಪಸಂಖ್ಯಾತರೆಂಬ ರಕ್ಷಾ ಕವಚ ಹೊಂದಿರುವ ಮುಸಲ್ಮಾನರು ಮಾತ್ರ ಸರಕಾರಗಳು ಎಷ್ಟೇ ಯೋಜನೆಗಳನ್ನು ನೀಡಿದರೂ ಸಹ, ಬಂಗಾಳದಲ್ಲಿ ರೈಲಿಗೆ ಬೆಂಕಿಯಿಡುತ್ತಾರೆ, ದೆಹಲಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರುತ್ತಾರೆ, ಬಸ್ಸಿಗೆ ಬೆಂಕಿಯಿಡುತ್ತಾರೆ, ಬೆಂಗಳೂರಿನಲ್ಲಿ ಪೊಲೀಸ್ ಸ್ಟೇಷನ್‌ಗೆ ನುಗ್ಗಿ ದ್ವಂಸ ಮಾಡುತ್ತಾರೆ, ಶಾಸಕನ ಮನೆಗೆ ಬೆಂಕಿಯಿಡುತ್ತಾರೆ. ಬಹುಸಂಖ್ಯಾತ ರಾಷ್ಟ್ರ ಭಾರತದ ಹೊರಗಡೆ ಅಲ್ಪಸಂಖ್ಯಾತರಾಗಿ ಹಿಂಸೆ ಅನುಭವಿಸುತ್ತಿರುವ ಹಿಂದು ಗಳನ್ನು ನಾವು ಕರೆಸಿಕೊಂಡರೆ, ಅಲ್ಪಸಂಖ್ಯಾತ ಮುಸಲ್ಮಾನರು ಇಲ್ಲಿನ ಸರಕಾರದ ವಿರುದ್ಧ ತಿರುಗಿ ಬೀಳುತ್ತಾರೆ.

ಹಾಗಾದರೆ ಇವರನ್ನು ಹೇಗೆ ತಾನೇ ಅಲ್ಪಸಂಖ್ಯಾತರೆಂದು ಕರೆಯಲು ಸಾಧ್ಯ? ಭಾರತ ದೇಶವು ಇಷ್ಟು ವರ್ಷಗಳ ಕಾಲ ಇವರಿಗೆ ಇಷ್ಟೊಂದು ಸೌಲಭ್ಯಗಳನ್ನು ನೀಡಿದ ಮೇಲೂ, ಇವರು ಈ ಮಟ್ಟಿನ ಕೃತ್ಯಗಳನ್ನು ಮಾಡುತ್ತಾರೆಂದರೆ ಇವರು ನಿಜವಾಗಿಯೂ ಅಲ್ಪಸಂಖ್ಯಾತ ರೇ? ಚೀನಾ ದೇಶದಲ್ಲಿನ ಅಲ್ಪಸಂಖ್ಯಾತ ಮುಸಲ್ಮಾನರನ್ನು ಎಷ್ಟು ಹೀನಾಯವಾಗಿ ನೋಡಿಕೊಳ್ಳುತ್ತಾರೆ ಗೊತ್ತೇ? ಮಸೀದಿಯೊಂದನ್ನು ನಾಶ ಮಾಡಿ ಅದರ ಮೇಲೆ ಸಿನಿಮಾ ಥಿಯೇಟರ್ ಕಟ್ಟಿದ್ದಾರೆ. ಸರಕಾರದ ವಿರುದ್ಧ ತಿರುಗಿ ಬಿದ್ದ ಅಲ್ಪಸಂಖ್ಯಾತನನ್ನು ಮುಲಾಜಿಲ್ಲದೆ ನೇಣಿಗೆ ಹಾಕಲಾಗುತ್ತದೆ, ಇಷ್ಟೆಲ್ಲಾ ಹೀನಾಯವಾಗಿ ನೋಡಿಕೊಳ್ಳುವ ಚೀನಾ ದೇಶದ ಪರವಾಗಿ ಹಲವು ಮುಸಲ್ಮಾನ್ ನಾಯಕರು ಮಾತನಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ದೇಶದ ಯಹೂದಿಗಳ ಸುತ್ತಲೂ ಮುಸ್ಲಿಂ ದೇಶಗಳಿವೆ. ಇಡೀ ಪ್ರಾಾಂತ್ಯದಲ್ಲೇ ಅತ್ಯಲ್ಪಸಂಖ್ಯಾತರು ಯಹೂದಿಗಳು, ಇಂತಹ ಯಹೂದಿಗಳ ವಿರುದ್ಧ ಸುತ್ತಲೂ ಇರುವ ಮುಸ್ಲಿಂ ದೇಶಗಳು ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿರುತ್ತವೆ. ಭಾರತದಲ್ಲಿ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಮುಸಲ್ಮಾನರಿಗೆ ಇಸ್ರೇಲಿನ ಯಹೂದಿಗಳ ಮೇಲೆ ಯಾಕೆ ಕರುಣೆಯಿಲ್ಲ? ಭಾರತದ ಎಷ್ಟು ಮುಸಲ್ಮಾನ್ ನಾಯಕರು, ಮುಲ್ಲಾಗಳು ಯಹೂದಿಗಳ ಪರವಾಗಿ ಮಾತನಾಡಿದ್ದಾರೆ? ಅವರಿಗಿಂತಲೂ ಹೆಚ್ಚಿನ ಶೋಷಣೆಗೊಳಗಾದವರೇ ಭಾರತದ ಅಲ್ಪಸಂಖ್ಯಾತ ಮುಸಲ್ಮಾನರು? ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತರನ್ನು ಹೀನಾಯವಾಗಿ ನೋಡಿಕೊಳ್ಳುತ್ತಿದ್ದರೂ ಇವರಿಗೆ ನೋವಿರುವುದಿಲ್ಲ, ಅತ್ಯಲ್ಪಸಂಖ್ಯಾತರಾದ ಯಹೂದಿಗಳ ಮೇಲೆ ಇವರದ್ದೇ ಮುಸ್ಲಿಂ ದೇಶಗಳು ಯುದ್ಧ ಮಾಡಹೊರಟರೂ ಇವರಿಗೆ ನೋವಿರುವುದಿಲ್ಲ, ಭಾರತದಂತಹ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕ ಯೋಜನೆಗಳನ್ನು ನೀಡಿ ಚೆನ್ನಾಗಿ ನೋಡಿಕೊಂಡರೂ ಸಹ ಇವರಿಗೆ ಭಾರತದ ಮೇಲೆ ತಾತ್ಸಾರ.

ಸರಕಾರಗಳು ನೀಡುವ ಬಡವರ ಪರ ಯೋಜನೆಗಳಲ್ಲಿ ಅತೀ ಹೆಚ್ಚಿನ ಫಲಾನುಭವಿಗಳು ಅಲ್ಪಸಂಖ್ಯಾತ ಮುಸಲ್ಮಾನರು, ಅವರಿಗೆ ಯಾವ ಸರಕಾರವು ತಮಗೆ ಯೋಜನೆಗಳನ್ನು ನೀಡುತ್ತಿದೆಯೆಂಬ ತಿಳಿವಳಿಕೆಯು ಇರುವುದಿಲ್ಲ. ಆದರೆ ಸರಕಾರದ ಎಲ್ಲ ಯೋಜನೆಗಳೂ ಬೇಕೇ ಬೇಕು, ಆಮೇಲೆ ಮತ್ತದೇ ಸರಕಾರದ ವಿರುದ್ಧ ತಿರುಗಿ ಬಿದ್ದು ರೈಲುಗಳುಗೆ, ಬಸ್ಸುಗಳಿಗೆ ಬೆಂಕಿ ಹಚ್ಚು ವುದು.

ಭಾರತದಲ್ಲಿ ಅಂದಾಜು ಸುಮಾರು ಇಪ್ಪತ್ತು ಕೋಟಿಯಷ್ಟು ಜನ ಮುಸಲ್ಮಾನರಿದ್ದಾರೆ, ಭಾರತದ ಒಟ್ಟಾರೆ ಜನಸಂಖ್ಯೆಯು ಅಂದಾಜು 137 ಕೋಟಿಯನ್ನು ತಲುಪಿದೆ, ಹೀಗಿರುವಾಗ ಹೇಗೆ ತಾನೇ ಇವರನ್ನು ಅಲ್ಪಸಂಖ್ಯಾತರೆಂದು ಕರೆಯುತ್ತಾರೋ ನಾನರಿಯೆ. ಯಾವುದೊ ಹಳೆಯ ಕಾನೂನಿನನ್ವಯ ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಯಾವುದೋ ಕಾಲ
ದಲ್ಲಿ ಕರೆದಿದ್ದನ್ನೇ ಈಗಲೂ ಬಳಸುವುದು ಸೂಕ್ತವಲ್ಲ.

ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಾಗುವುದೇ ಇವರ ಗುರಿಯಾಗಿರುವಾಗ, ಹೇಗೆ ತಾನೆ ಇವರನ್ನು ಅಪಾಯ
ದಂಚಿನಲ್ಲಿರುವ ಧರ್ಮವೆಂದು ಕರೆಯಲಾಗುತ್ತಿದೆ? ಯೂರೋಪಿನಲ್ಲಿ ನಡೆಯುತ್ತಿರುವ ದಂಗೆಗಳನ್ನೊಮ್ಮ ನೋಡಿದರೆ ಸಾಕು ಇವರ ಅಲ್ಪಸಂಖ್ಯಾತ ರಕ್ಷಾ ಕವಚದ ಅನಾವರಣವಾಗುತ್ತದೆ. ಸ್ಪೇನ್ ರಾಷ್ಟ್ರದಲ್ಲಿ ನಿರಾಶ್ರಿತರಂತೆ
ಮೊದಲು ಬಂದಂಥ ಅಲ್ಪಸಂಖ್ಯಾತ ಮುಸಲ್ಮಾನರು ನಂತರದ ದಿನಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿದರು,
ಸಾವಿರಾರು ಜನರಿದ್ದ ಒಂದು ರಸ್ತೆೆಯ ಮೇಲೆ ಅಲ್ಪಸಂಖ್ಯಾತ ನೊಬ್ಬ ಟ್ರಕ್ ಹರಿಸಿದ್ದನ್ನು ಇಡೀ ಜಗತ್ತೇ ನೋಡಲಿಲ್ಲವೇ?
ಪ್ಯಾರಿಸ್‌ನ ಬೀದಿಗಳಲ್ಲಿ ಗುಂಡಿನ ಮಳೆಗರೆದವನ್ಯಾರು? ಲಂಡನ್‌ನ ಬಸ್ಸಿನಲ್ಲಿ ಬಾಂಬ್ ಇಟ್ಟವರ್ಯಾಾರು? ಇವರೆಲ್ಲರೂ
ನಿರಾಶ್ರಿತರಾಗಿ ಬಂದು ಅಲ್ಪಸಂಖ್ಯಾತರಂತೆ ಗುರುತಿಸಿಕೊಂಡವರು. ಇತ್ತೀಚಿಗೆ ಸ್ವೀಡೆನ್ ದೇಶದಲ್ಲಿ ನಡೆದ ಘಟನೆ
ಕಾಶ್ಮೀರದಲ್ಲಿ ನಡೆಯು ತ್ತದ್ದಂಥ ಘಟನೆಗಳನ್ನು ನೆನಪಿಸಿತು.

ಬೀದಿ ಬೀದಿಗಳಲ್ಲಿ ಸರಕಾರಿ ಆಸ್ತಿಿಗಳಿಗೆ ಬೆಂಕಿಯಿಟ್ಟು ಪ್ರತಿಭಟನೆ ಮಾಡಿದ್ದು ಯಾರು? ಪೊಲೀಸರ ವಾಹನಗಳ
ಮೇಲೆ ಕಲ್ಲು ತೂರಿದವರ್ಯಾರು? ಮತ್ತದೇ ನಿರಾಶ್ರಿತ ಅಲ್ಪಸಂಖ್ಯಾತರಲ್ಲವೇ? ಯೂರೋಪಿನ ಬಹುಪಾಲು ರಾಷ್ಟ್ರಗಳು ಪಾಕಿಸ್ತಾನ, ಅಫಘಾನಿಸ್ತಾನ, ಇರಾನ್, ಇರಾಕ್, ಆಫ್ರಿಕಾದ ರಾಷ್ಟ್ರ ಗಳಿಂದ ಬಂದಂಥ ಹಲವಾರು ನಿರಾಶ್ರಿತರನ್ನು ತಮ್ಮೊಳಗೆ ಬಿಟ್ಟುಕೊಂಡರು, ಅವರೆಲ್ಲರೂ ಸಹ ತಾವು ಬಹುಸಂಖ್ಯಾತ ರಾಗಬೇಕೆಂಬ ಉದ್ದೇಶದಿಂದಲೇ ಬಂದವರು. ಒಳಗೆ ಬಂದ
ನಂತರ ತಮ್ಮ ಬಾಲ ಬಿಚ್ಚಲು ಶುರು ಮಾಡಿದರು, ಈಗ ಇಡೀ ಯೂರೋಪನ್ನೆೆ ಅಲ್ಪಸಂಖ್ಯಾತರು ಆವರಿಸಿಕೊಂಡಿದ್ದಾರೆ.
ಹೆಸರಿಗೆ ಮಾತ್ರ ನಿರಾಶ್ರಿತರು ಹಾಗೂ ಅಲ್ಪಸಂಖ್ಯಾತ ರೆಂಬ ಹಣೆಪಟ್ಟಿ ಆದರೆ ತಮಗೆ ಆಶ್ರಯ ನೀಡುವ ಯಾವೊಂದು
ದೇಶಕ್ಕೂ ಬಹುಪಾಲು ಅಲ್ಪಸಂಖ್ಯಾತರು ಬದ್ಧರಾಗಿರುವುದಿಲ್ಲ. ನೂರರಲ್ಲಿ ಹತ್ತು ಜನರು ಮಾತ್ರ ಬದ್ಧರಾಗಿರಬಹುದಷ್ಟೆೆ, ಬಹುಪಾಲು ಅಲ್ಪಸಂಖ್ಯಾಾತರು ತಮಗೆ ಅನ್ನ ನೀಡುತ್ತಿರುವ ದೇಶದ ಒಳಿತಿನ ಬಗ್ಗೆೆ ಯೋಚಿಸುವುದೇ ಇಲ್ಲ,
ಹೀಗಿರುವಾಗ ಯಾಕಿವರಿಗೆ ಅಲ್ಪಸಂಖ್ಯಾಾತರೆಂಬ ಪಟ್ಟ? ಇದೇ ಪಟ್ಟವಿಟ್ಟುಕೊಂಡು ತಾನೆ ಇವರು ಸರಕಾರ ಹಾಗೂ ದೇಶದ
ಬಗ್ಗೆೆ ಬಾಯಿಗೆ ಬಂದಂತೆ ಮಾತನಾಡುವುದು.

ದೇಶದಲ್ಲಿರುವ ಇಪ್ಪತ್ತು ಕೋಟಿ ಮುಸಲ್ಮಾನ್ ಅಲ್ಪಸಂಖ್ಯಾತರ ಮತಬ್ಯಾಾಂಕಿಗಾಗಿ ದೊಡ್ಡ ದೊಡ್ಡ ರಾಜಕಾರಣಿಗಳು ಅದ್ಯಾವ ರೀತಿಯ ನಾಟಕ ವಾಡುತ್ತಾರೆಂದರೆ, ಅವರು ಮಾಡುವ ತಪ್ಪುಗಳನ್ನು ಒಪ್ಪಲು ತಯಾರಿರುವುದಿಲ್ಲ ಅಲ್ಪಸಂಖ್ಯಾತರು ಮಾಡಿದ್ದೆ ಸರಿಯೆಂಬಂತೆ ಅವರ ಪರವಾಗಿ ನಿಲ್ಲುತ್ತಾರೆ. ಕಮ್ಯುನಿಸ್ಟ ರಂತೂ ಅಲ್ಪಸಂಖ್ಯಾತರನ್ನು ಉದ್ಧಾರ ಮಾಡಲು ಬಂದಿರುವ ರೀತಿಯಲ್ಲಿಯೇ ಬೀಗುತ್ತಿರುತ್ತಾರೆ. ಓಲೈಕೆಯ ರಾಜಕಾರಣವು ಶುರುವಾದದ್ದೇ ಅಲ್ಪಸಂಖ್ಯಾತರಿಂದ, ಅವರಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಕಾಂಗ್ರೆೆಸ್ ಸರಕಾರವಂತೂ ತುದಿಗಾಲಿನಲ್ಲಿ ನಿಂತಿರುತ್ತದೆ. ಸ್ವಾಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಸಹ ಅಲ್ಪಸಂಖ್ಯಾತರಿಗೆ ಬೇಕಿರುವ ಶಿಕ್ಷಣ ನೀಡುವಲ್ಲಿ ಕಾಂಗ್ರೆೆಸ್ ಸರಕಾರವು ವಿಫಲವಾಗಿದೆ. ಇವರಿಗೆ ಸರಿಯಾದ ಶಿಕ್ಷಣ ನೀಡಿದರೆ ತಮ್ಮ ಮಾತು ಕೇಳುವುದಿಲ್ಲವೆಂದು ಕಾಂಗ್ರೆೆಸ್ಸಿಗೆ ಚೆನ್ನಾಗಿ ಗೊತ್ತು, ಹಾಗಾಗಿ ಇವರಿಗೆ ಸರಿಯಾದ
ಶಿಕ್ಷಣ ನೀಡಲಿಲ್ಲ. ಅಬ್ದುಲ್ ಕಲಾಂರಂಥ ಮಹಾನ್ ನಾಯಕರು ಅಲ್ಪಸಂಖ್ಯಾತರಾಗಿ ಭಾರತದ ದೊಡ್ಡ ವಿಜ್ಞಾನಿಯಾದರು, ಇಂತಹ ಮಹಾನ್ ನಾಯಕನನ್ನು ಆದರ್ಶ ವ್ಯಕ್ತಿಯಾಗಿ ಸ್ವೀಕರಿಸುವ ಅಲ್ಪಸಂಖ್ಯಾತ ಮುಸಲ್ಮಾನರು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಅಬ್ದುಲ್ ಕಲಾಂ ಎಂದೂ ಸಹ ಅಲ್ಪಸಂಖ್ಯಾತ ಕೋಟದಡಿಯಲ್ಲಿ ವಿಜ್ಞಾನಿಯಾಗಲಿಲ್ಲ, ಮನೆ ಮನೆಗೆ ಪೇಪರ್ ಹಾಕಿ ಕಷ್ಟ ಪಟ್ಟು ಓದಿ ಇಸ್ರೋ ಸಂಸ್ಥೆೆಯನ್ನು ಸೇರಿ ಇಡೀ ದೇಶವೇ ಮೆಚ್ಚಿದಂತಹ ವಿಜ್ಞಾನಿಯಾದರು. ಇಂತಹ ಮಹಾನ್ ನಾಯಕನನ್ದಾದರೂ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ನಾಯಕರು ಮುಸ್ಲಿ ಯುವಕರಿಗೆ ಆದರ್ಶವಾಗಿ ಸ್ವೀಕರಿಸಿಯೆಂದು ಹೇಳಿದ್ದಾರೆ ಯೇ? ಟಿಪ್ಪು ಸುಲ್ತಾನ್ ಜಯಂತಿಯನ್ನು ಅದ್ದೂರಿಯಾಗಿ ಮಾಡಬಯಸುವ ಜಮೀರ್ ಅಹ್ಮದ್ ಖಾನ್, ಅಬ್ದುಲ್
ಕಲಾಂರ ಜಯಂತಿಯನ್ನು ಎಷ್ಟು ಅದ್ದೂರಿಯಾಗಿ ಮಾಡುತ್ತಾರೆ ಹೇಳಿ? ಟಿಪ್ಪುವಿನ ಫ್ಲೆೆಕ್‌ಸ್‌‌ಗಳ ಜಾಗದಲ್ಲಿ ಕಲಾಂರವರ ಫ್ಲೆೆಕ್‌ಸ್‌‌ಗಳನ್ನು ಎಂದಾದರು ಹಾಕಿದ್ದಾರೆಯೇ? ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುವುದೇ ಇಲ್ಲ, ಅವರನ್ನು ಮತ್ತದೇ ಹಳೆಯ ಕಟ್ಟುಪಾಡುಗಳಲ್ಲಿಯೇ ಬೆಳೆಸಬೇಕೆಂಬ ಉದ್ದೇಶ.

ಮುಸಲ್ಮಾನರು ಅಲ್ಪಸಂಖ್ಯಾತರು ಅವರಿಗೆ ಸಹಾಯ ಮಾಡಬೇಕು, ಅವರಿಗೆ ವಿಶೇಷ ಸವಲತ್ತುಗಳನ್ನು ಕೊಡಬೇಕು,
ಅವರ ಆಚರಣೆಗಳನ್ನು ಗೌರವಿಸಬೇಕು, ಅವರು ಮಾಡಿದ ತಪ್ಪುುಗಳನ್ನು ಬಹುಸಂಖ್ಯಾತರು ಖಂಡಿಸ ಬಾರದು ಇನ್ನೂ
ಎಷ್ಟು ದಿವಸ ಇದೇ ರೀತಿಯ ರಾಜಕೀಯ ಮಾಡಬೇಕು? ಅವರನ್ನು ಅಲ್ಪಸಂಖ್ಯಾತರೆಂದು ಕರೆದಾಕ್ಷಣ ಅವರೇನು
ಸ್ವರ್ಗ ದಿಂದ ಇಳಿದು ಬಂದವರೇ? ಅಲ್ಪಸಂಖ್ಯಾತರು ದೇವರ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆೆ ಬೆಂಬಲ, ಅಲ್ಪಸಂಖ್ಯಾತರು ಧರ್ಮದ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆೆ ಬೆಂಬಲ, ಅಲ್ಪಸಂಖ್ಯಾತರು ಹಬ್ಬಗಳ ಆಚರಣೆ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆೆ ಬೆಂಬಲ, ಒಟ್ಟಿನಲ್ಲಿ ಅವರು ಏನು ಮಾಡಿದರೂ ಸರಿಯೆಂಬ ಸಂದೇಶ ನೀಡುವ ಮೂಲಕ ಬಹುಸಂಖ್ಯಾತರಿಗೆ ಭಯ ಹುಟ್ಟಿಸಲಾಗುತ್ತಿದೆ. ಕೆ.ಜಿ.ಹಳ್ಳಿ ಯಲ್ಲಿ ನಡೆದ ಘಟನೆಯಿಂದ ಭಯಬಿದ್ದವರು ಬಹು ಸಂಖ್ಯಾತರು, ದೆಹಲಿಯ ಘಟನೆ ಯಿಂದ ಭಯಬಿದ್ದವರು ಬಹುಸಂಖ್ಯಾತರು, ಸುಖಾಸುಮ್ಮನೆ ಯಾರೋ ಮಾಡಿದ ಪ್ರಚೋದನೆಯಿಂದ
ಸಾರ್ವಜನಿಕ ಅಸ್ತಿಿ ಪಾಸ್ತಿಿಯನ್ನು ನಾಶ ಮಾಡುವ ಮಟ್ಟಕೆ ಬೀದಿಗಿಳಿಯುತ್ತಾಾರೆಂದರೆ ಇವರನ್ನು ಇನ್ನೂ ಯಾಕೆ
ಅಲ್ಪಸಂಖ್ಯಾಾತರೆಂದು ಒಪ್ಪಿಿಕೊಳ್ಳಬೇಕು? ಮುಲಾಜಿಲ್ಲದೆ ಅಲ್ಪಸಂಖ್ಯಾಾತರೆಂಬ ಹಣೆಪಟ್ಟಿಿಯನ್ನು ತೆಗೆದು ಇತರರ
ಸಮಾನವಾಗಿ ನೋಡಬೇಕು.

ದೇಶದ ಪ್ರಗತಿಯಲ್ಲಿ ಅಲ್ಪಸಂಖ್ಯಾಾತರು ಕಟ್ಟುವ ತೆರಿಗೆಯ ಪ್ರಮಾಣವನ್ನು ಲೆಕ್ಕ ಹಾಕಬೇಕು, ಅವರಿಗೆ ಸಿಗುತ್ತಿಿರುವ ವಿಶೇಷ ಸವಲತ್ತುಗಳ ಲೆಕ್ಕ ಸರಿಯಾಗಿ ಹಾಕಬೇಕು, ಬಹುಸಂಖ್ಯಾಾತರನ್ನು ನೋಡುವ ರೀತಿಯಲ್ಲಿಯೇ ಇವರನ್ನೂ ಸಹ ನೋಡಬೇಕು. ಇವರ ಆಟಾಟೋಪಗಳನ್ನು ನೋಡಿದರೆ ಯೂರೋಪಿನಲ್ಲಿ ನಡೆಯುತ್ತಿಿರುವ ಘಟನೆಗಳು ಮುಂದೊಂದು ದಿನ ಭಾರತದಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಷ್ಟೇ ಬಹುಸಂಖ್ಯಾಾತ ಹಿಂದೂ ದೇವರುಗಳ ಬಗ್ಗೆೆ ಇವರು ಬರೆಯುವ ಅಶ್ಲೀಲ ಪದಗಳನ್ನು ನೋಡಿ ಬಹುಸಂಖ್ಯಾಾತ ಹಿಂದೂಗಳು ಸುಮ್ಮನಿರುತ್ತಾಾರೆ, ಆದರೆ ಅಲ್ಪಸಂಖ್ಯಾಾತ ಮುಸಲ್ಮಾಾನ್ ದೇವರುಗಳ ಬಗ್ಗೆೆ ಯಾರಾದರೂ ಏನಾದರೂ ಬರೆದರೆ ಇಡೀ ರಸ್ತೆೆಗಳೇ ಹೊತ್ತಿ ಉರಿಯುತ್ತಿಿರುತ್ತದೆ. ದೆಹಲಿಯಲ್ಲಿ ನಡೆದಂಥ ಪೌರತ್ವ ತಿದ್ದುಪಡಿ ಕಾಯ್ದೆೆಯ ವಿರುದ್ಧದ ಪ್ರತಿಭಟನೆಗೆ ಕಾರಣವೇ ಇರಲಿಲ್ಲ, ತಿದ್ದುಪಡಿ ಯಾಗಿ ಹತ್ತು ತಿಂಗಳಾಯಿತು ಯಾರಾದರೂ ಒಬ್ಬ ಮುಸಲ್ಮಾಾನನ ಪೌರತ್ವ ರದ್ದಾಗಿದೆಯೇ ಇವರು ತೂರಿದ ಕಲ್ಲಿನಲ್ಲಿ ಸತ್ತವರೆಷ್ಟೋ ಜನ, ಸುಟ್ಟಿಿದ್ದು ನೂರಾರು ವಾಹನಗಳು, ಸುಟ್ಟಿಿದ್ದು ರೈಲುಗಳು, ಇವೆಲ್ಲದಕ್ಕೂ ರಾಜಕೀಯ ರಕ್ಷಾಕವಚ ನೀಡಿದ್ದು ಮಾತ್ರ ಮತ್ತದೇ
ಅಲ್ಪಸಂಖ್ಯಾಾತರ ಹೋರಾಟವೆಂಬ ಪದ.

ಮತಬ್ಯಾಾಂಕ್‌ನಿಂದ ಶುರುವಾದ ಅಲ್ಪಸಂಖ್ಯಾತ ಮುಸಲ್ಮಾನರ ರಾಜಕೀಯ ದಿನಕಳೆದಂತೆ ಬೇರೆಯದ್ದೇ ರೂಪ
ಪಡೆದುಕೊಳ್ಳುತ್ತಿದೆ. ಮೊದ ಮೊದಲು ಸರಕಾರದ ವಿವಿಧ ಯೋಜನೆಗಳ ಮೂಲಕ ಅಲ್ಪಸಂಖ್ಯಾತರ ಓಲೈಕೆಯಲ್ಲಿ
ತೊಡಗಿದ್ದ ಕಾಂಗ್ರೆಸ್‌ನಂಥ ರಾಜಕೀಯ ಪಕ್ಷಗಳು, ಈಗ ಯಾವ ಮಟ್ಟಕ್ಕಿಳಿದಿವೆಯೆಂದರೆ ಅಲ್ಪಸಂಖ್ಯಾತರು ಮಾಡಿದೆಲ್ಲ
ವನ್ನೂ ಸರಿಯೆಂದು ರಾಜಾರೋಷವಾಗಿ ಹೇಳಲು ಶುರು ಮಾಡಿದೆ. ಅವರು ಪೊಲೀಸ್ ಸ್ಟೇಷನ್ ಸುಟ್ಟರೆ ಅದಕ್ಕೊೊಂದು
ಕೋಮು ಗಲಭೆಯ ಬಣ್ಣವನ್ನು ಕಟ್ಟುತ್ತಾರೆ, ಅವರ ಮೇಲೆ ಕಂಪ್ಲೇಂಟ್ ಕೊಡಲು ಮುಂದೆ ಬರುವುದಿಲ್ಲ. ಪೌರತ್ವ
ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ದೇಶದಾದ್ಯಂತ ಸುಳ್ಳು ಸುದ್ದಿ ಹಬ್ಬಿಸುತ್ತಾರೆ, ಈ ಸುದ್ದಿಗಳನ್ನು ನಂಬಿಕೊಂಡು
ಅಲ್ಪಸಂಖ್ಯಾತರು ಬೀದಿಗಿಳಿದು ಸರಕಾರದ ವಿರುದ್ಧ ಹೋರಾಡುತ್ತಾರೆ, ಕೊನೆಯಲ್ಲಿ ಅವರನ್ನು ಅನಕ್ಷರಸ್ಥರೆಂದು
ಹೇಳಿ ಅವರ ಪರವಾಗಿ ನಿಲ್ಲುತ್ತಾರೆ. ಮಿತಿಮೀರಿದ ರಾಜಕೀಯ ದುರುದ್ದೇಶಗಳಿಗೆ ಇವರ ಹೆಸರನ್ನು ಬಳಸಿಕೊಂಡು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿ ರಕ್ಷಿಸಲಾಗುತ್ತಿದೆ. ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ನಿಜವಾಗಿಯೂ ತೊಂದರೆಗೊಳಗಾಗುತ್ತಿರುವವನು ಹಿಂದೂ ಧರ್ಮದವನೇ ಹೊರತು ಮುಸಲ್ಮಾನನಲ್ಲ.