ವಿನಾಯಕರಾಮ್ ಕಲಗಾರು
ಊಟ ಮಾಡದೇ ಹೋದ್ರೆ ಅಮ್ಮಾ ಬೇಜಾರ್ ಮಾಡ್ಕೋತಾರೆಪ್ಪಾ… ಬನ್ನಿ!
ಸೋಲದೇವನಹಳ್ಳಿಯ ಅವರ ತೋಟದ ಮನೆಗೆ ಬಂದ ಪ್ರತಿಯೊಬ್ಬ ಪ್ರೀತಿ ಪಾತ್ರರಿಗೂ ವಿನೋದ್ ರಾಜ್ ಮಾಡುವ ಕಳಕಳಿಯ ಮನವಿ ಇದೊಂದೇ..!
ಹೌದು, ಎಲ್ಲಿ ಅನ್ನ ದಾಸೋಹ ಇರುತ್ತದೆಯೋ ಅಲ್ಲಿ ದೇವರು ನೆಲೆನಿಲ್ಲುತ್ತಾನೆ ಎನ್ನೋ ಮಾತಿಗೆ ಹೇಳಿ ಮಾಡಿಸಿದಂತಿದ್ದರು ಲೀಲಾವತಿ ಎನ್ನುವ ಬಣ್ಣದ ಲೋಕದ ಮುದ್ದು ದೇವತೆ, ನಿಜವಾದ ದಂತಕತೆ!
ಅವತ್ತು ಅವರ ಗಂಟಲ ಪಸೆ ಅಡಗಿಹೋಗಿತ್ತು. ಕಣ್ಣಲ್ಲಿ ವಿನೋದಾವಳಿಗೆ ಜಾಗ ಎಲ್ಲಿಂದ ಸಿಗಲು ಸಾಧ್ಯ? ಮಗನೆಂಬ ಜೀವದ ಜೀವ ಇನ್ನೇನು ಹೊರಟೇ ಹೋದ ಎನ್ನುವ ಸ್ಥಿತಿಯಲ್ಲಿ ಲೀಲಮ್ಮನ ತಾಯಿ ಹೃದಯದ ಕದ ತೆರೆದು ಕೊಂಡಿತ್ತು…!
ಪೂರ್ಣಪ್ರಮಾಣದ ಕೋವಿಡ್ ಟೈಮ್ ಅದು. ವಿನೋದ್ ಇದ್ದಕ್ಕಿದ್ದಂತೇ ಅದೊಂದು ಫೋನ್ ಮಾರ್ನಿಂಗ್ ತಮ್ಮ ಎದೆಯ ಎಡಭಾಗವನ್ನ ಹಿಡಿದು ಕುಳಿತ ಕುಳಿತು ಬಿಟ್ಟರು.
ಅಮ್ಮಾ…
ಕಂದಾ? ಏನಾಯ್ತೋ?
ಗೊತ್ತಿಲ್ಲಮ್ಮಾ…ಎದೆ ಯಾಕೋ ತುಂಬಾ ಭಾರ ಅನ್ನಸ್ತಾ ಇದೆ…!
ಭಗವಂತಾ…
ಏನಪ್ಪಾ ಈ ಅಗ್ನಿ ಪರೀಕ್ಷೇ…? ಈ ಕಂದಮ್ಮನಿಗೋಸ್ಕರನೇ ಅಲ್ವಾ ನಾನು ಉಸಿರು ಉಳಿಸ್ಕೊಂಡು ಇಷ್ಟು ದಿನ ಬದುಕ್ತಾ ಇರೋದು? ಕಂದಾ… ಏನೂ ಆಗ… ನಡೀ ಆಸ್ಪತ್ರೆಗ್ ಹೋಗೋಣಾ…!
-ಲೀಲಾವತಿ ಅಮ್ಮಾ ಅಷ್ಟಕ್ಕೇ ಸುಮ್ಮನಾದರೆ ಅವರು ಲೀಲಾವತಿ ಅಮ್ಮಾ ಆಗಲಿಕ್ಕೆ ಹೇಗೆ ಸಾಧ್ಯ? ಇಮ್ಮಿಡಿಯಟ್ ಮಗನನ್ನು ಎದ್ನೋ ಬಿದ್ನೋ ಎನ್ನುತ್ತ ದೂರದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಿಸಿಬಿಟ್ಟರು…
-ಆಸ್ಪತ್ರೆಯ ಬೆಡ್ ಮೇಲೆ ಮಗ ವಿನೋದ್ ರಾಜ. ಎದುರಿಗೆ ಅಮ್ಮನೆಂಬ ಗಟ್ಟಿಗಿತ್ತಿ…ಡಾಕ್ಟರ್ ಕೊಟ್ಟಿರುವ ಮಾಹಿತಿಯ ಪ್ರಕಾರ ವಿನೋದ್ ಹೃದಯ ಅದಾಗಲೇ ‘ಹಾರ್ಟ್‌ಅಟ್ಯಾಕ್’ ಎನ್ನೋ ಚಕ್ರವ್ಯೂಹದ ಒಳಗೆ ಸಿಲುಕಿ ಕೊಂಡು ಒದ್ದಾಡಲು ಶುರುಮಾಡಿಬಿಟ್ಟಿದೆ. ಮಗನನ್ನ ಉಳಿಸಿಕೊಳ್ತೀನಾ? ಅಥವಾ… ಊಹೂಂ…ಲೀಲಾವತಿ ಗುಂಡಿಗೆ ಅಷ್ಟು ಸುಲಭಕ್ಕೆ ಯಾವುದಕ್ಕೂ ಬಗ್ಗುವ, ಜಗ್ಗುವ, ತಗ್ಗುವ ಗುಂಡಿಗೆಯಲ್ಲ…ಅದು ಮುನ್ನುಗ್ಗುವ ಮಹಾ ಗುಂಡಿಗೆ…
ಅವತ್ತಿನ ರಾತ್ರಿ ಪೂರ್ತಿ ಲೀಲಾವತಿ ಅಮ್ಮಾ ನೆನೆಯದ ದೇವರುಗಳಿಲ್ಲ, ಮಾಡದೇ ಇರುವ ಪ್ರೇಯರ್ ಇಲ್ಲ… ಗುರು ಸಾರ್ವಭೌಮರನ್ನು ಸಹ ನೆನೆಯದೇ ಇರುತ್ತದೆಯೇ ಆ ಮಾತೃ ಮಡಿಲು?!
-ಮುಂದ?
ಕೊನೆಗೂ ಅವರೊಂದು ನಿರ್ಧಾರಕ್ಕೆ ನಿಂತುಬಿಡು ಮಾತುಗಳನ್ನಾಡಿದಾಗಲೇ… ಅಲ್ಲಿಯವರೆಗೆ ಲೀಲಮ್ಮನ ಎದೆ ಬಡಿತ ಜೋರಾಗಿಯೇ ಇತ್ತಾದರೂ ಒಳಗೊಳಗೇ ಆತಂಕ, ಭಯ, ದುಗುಡ, ಸಂಕಟ… ಬಟ್, ಮೇಲೊಬ್ಬ ಭಗವಂತ ಖಂಡಿತ ಇzನೆ ಎನ್ನುವ ಸತ್ಯ ಮತ್ತೊಮ್ಮೆ ಅವರಿಗೆ ಮನದಟ್ಟಾಗಿತ್ತು. ಆ ಮಟ್ಟದ ರಿಸ್ಕ್, ಆ ಮಟ್ಟದ ಎಮರ್ಜೆನ್ಸಿ, ಆ ಮಟ್ಟದ ತೀವ್ರ ಹೃದಯಾಘಾತ ವಿನೋದ್ ರಾಜ್ ಅವರನ್ನ ಅರಸಿ ಬಂದಿತ್ತು. ಅವರನ್ನು ಆವರಿಸಿಕೊಂಡಿತ್ತು…!
ತಾಯಿಯೊಬ್ಬಳು ತನ್ನ ಮಗನನ್ನ ಉಳಿಸಿಯೇ ತೀರು ತ್ತೇನೆ ಎಂದು ಹಠಕ್ಕೆ ಬಿದ್ದಾಗ, ಹಠಯೋಗ ಮಾದರಿಯಲ್ಲಿ ವಿಧಿಯಾಟದ ಅವತ್ತಿನ ರಾತ್ರಿ ಪೂರ್ತಿ ಲೀಲಾವತಿ ಅಮ್ಮಾ ನೆನೆಯದ ದೇವರುಗಳಿಲ್ಲ, ಮಾಡದೇ ಇರುವ ಪ್ರೇಯರ್ ಇಲ್ಲ… ಗುರು ಸಾರ್ವಭೌಮರನ್ನು ಸಹ ನೆನೆಯದೇ ಇರುತ್ತದೆಯೇ
ಆ ಮಾತೃ ಮಡಿಲು?!
ಮುಂಜಾನೆಯ ನಸುಕು ತನ್ನ ಡ್ಯೂಟಿ ಮುಗಿಸುವವರೆಗೂ ಆ ಹೆತ್ತ ಕರುಳಿನ ಉಸಿರು ಮಗ ವಿನೋದನ ಚೇತರಿಕೆಗೇ ಹಪಹಪಿಸುತ್ತಿತ್ತು… ಚಡಪಡಿಸು ತ್ತಿತ್ತು…
ವಿಲವಿಲನೆ ಎದುರು ತಿರುಗಿ ನಿಂತಾಗ ಮಾತ್ರ ಮಗನನ್ನು ಆ ಪರಿಸ್ಥಿತಿಯಿಂದ ಪಾರುಮಾಡಲು ಸಾಧ್ಯ ಎನ್ನುವುದು ಈ ಮೇಲಿನ ಘಟನಾವಳಿಯ ಒನ್ ಲೈನ್ ಸಾರಾಂಶ!
-ಇದು ಲೀಲಾವತಿ ಅವರಿಗೆ ಮಗನ ಮೇಲಿದ್ದ ಮೇರು ಪ್ರೀತಿಗೆ ಕೊಡಬಹುದಾದ ಸಣ್ಣ ಸ್ಯಾಂಪಲ್ ಅಷ್ಟೇ… ಲೀಲಾವತಿ ಅವರ ಸೆರಗಿನ ತುದಿ ಸಹ ವಿನೋದ್ ರಾಜ್ ನೆರಳನ್ನ ಕಾಯುತ್ತಿತ್ತು. ಮಗನಿ ಗಾಗಿ, ಮಗನಿಗೋಸ್ಕರ ಆ ಮುಗ್ದ ಜೀವ ಮಗದೊಂದು ಯೋಚನೆ ಸಹ ಮಾಡದೇ ಸರ್ವಸ್ವವನ್ನೂ ಧಾರೆಯೆರೆ ಯಲು ಮುಂದಾಗಿತ್ತು…!
ಒದ್ದಾಡುತ್ತಲಿತ್ತು…! ದೃಢ ಸಂಕಲ್ಪದ ಜತೆಗೆ ನಿಶ್ಕಲ್ಮಶ ಪ್ರಾರ್ಥನೆ ಸಲ್ಲಿಸಿದರೆ ಕೆಲವೊಮ್ಮೆ ಪವಾಡ ನಡೆದುಬಿಡುತ್ತದೆ ಎನ್ನುವ ಮಾತಿದೆ. ಆ ಮಾತು ಅಕ್ಷರಶಃ ನಿಜವಾಗಿದ್ದು ಮಾತ್ರ ಮರುದಿನ ಬೆಳಗ್ಗೆ ಡಾಕ್ಟರ್ ಬಂದು -ವಿನೋದ್ ಚೇತರಿಸಿಕೊಂಡಿದ್ದಾರೆ. ಹಂತ ಹಂತವಾಗಿ ರಿಕವರ್ ಆಗುತ್ತಿದ್ದಾರೆ ಎನ್ನೋ ಭರವಸೆಯ ಮಾತುಗಳನ್ನಾಡಿದಾಗಲೇ… ಅಲ್ಲಿಯವರೆಗೆ ಲೀಲಮ್ಮನ ಎದೆ ಬಡಿತ ಜೋರಾಗಿಯೇ ಇತ್ತಾದರೂ ಒಳಗೊಳಗೇ ಆತಂಕ, ಭಯ, ದುಗುಡ, ಸಂಕಟ… ಬಟ್, ಮೇಲೊಬ್ಬ ಭಗವಂತ ಖಂಡಿತ ಇದ್ದಾನೆ ಎನ್ನುವ ಸತ್ಯ ಮತ್ತೊಮ್ಮೆ ಅವರಿಗೆ ಮನದಟ್ಟಾಗಿತ್ತು. ಆ ಮಟ್ಟದ ರಿಸ್ಕ್, ಆ ಮಟ್ಟದ ಎಮರ್ಜೆನ್ಸಿ, ಆ ಮಟ್ಟದ ತೀವ್ರ ಹೃದಯಾಘಾತ ವಿನೋದ್ ರಾಜ್ ಅವರನ್ನ ಅರಸಿ ಬಂದಿತ್ತು. ಅವರನ್ನು ಆವರಿಸಿಕೊಂಡಿತ್ತು…!
ತಾಯಿಯೊಬ್ಬಳು ತನ್ನ ಮಗನನ್ನ ಉಳಿಸಿಯೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಾಗ, ಹಠಯೋಗ ಮಾದರಿಯಲ್ಲಿ ವಿಧಿಯಾಟದ ಎದುರು ತಿರುಗಿ ನಿಂತಾಗ ಮಾತ್ರ ಮಗ ನನ್ನು ಆ ಪರಿಸ್ಥಿತಿಯಿಂದ ಪಾರುಮಾಡಲು ಸಾಧ್ಯ ಎನ್ನುವುದು ಈ ಮೇಲಿನ ಘಟನಾವ ಳಿಯ ಒನ್ ಲೈನ್ ಸಾರಾಂಶ!
-ಇದು ಲೀಲಾವತಿ ಅವರಿಗೆ ಮಗನ ಮೇಲಿದ್ದ ಮೇರು ಪ್ರೀತಿಗೆ ಕೊಡಬಹುದಾದ ಸಣ್ಣ ಸ್ಯಾಂಪಲ್ ಅಷ್ಟೇ… ಲೀಲಾವತಿ ಅವರ ಸೆರಗಿನ ತುದಿ ಸಹ ವಿನೋದ್ ರಾಜ್ ನೆರಳನ್ನ ಕಾಯುತ್ತಿತ್ತು. ಮಗನಿ ಗಾಗಿ, ಮಗನಿಗೋಸ್ಕರ ಆ ಮುಗ್ದ ಜೀವ ಮಗದೊಂದು ಯೋಚನೆ ಸಹ ಮಾಡದೇ ಸರ್ವಸ್ವವನ್ನೂ ಧಾರೆಯೆರೆ ಯಲು ಮುಂದಾಗಿತ್ತು…!
ಕೋವಿಡ್‌ನಲ್ಲಿ ತಾಯಿ ಮಗನ ಜನಸೇವೆ!
ಸೋಲದೇವನಹಳ್ಳಿಯ ತಮ್ಮ ಲೀಲಾವತಿ ತೋಟದಿಂದ ತಾಯಿ ಮಗ ಇಬ್ಬರೂ ಬೆಳಗ್ಗೆ ಹೊರಟರೆ ಮುಗಿಯಿತು, ಸುಡು ಬಿಸಿಲಿನ ತಾಪಕ್ಕಾಗಲಿ, ಕೋವಿಡ್ ಮಹಾಮಾರಿ ಎನ್ನೋ ವಿಕೋಪಕ್ಕಾಗಲಿ ಹೆದರಿ ಕೂರುವ ಮಾತೇ ಇಲ್ಲ… ತ್ತಾರೆ… ಆ ಪ್ರಾಪರ್ಟಿಯ ಅರ್ಧ ಭಾಗವನ್ನು ಮಾರಿ ಬಿಡುವುದು. ಮಾರಾಟವಾದ ಆ ದುಡ್ಡಿನ ಒಂದಷ್ಟು ಭಾಗ ವನ್ನು ತನ್ನೂರಾದ ಸೋಲದೇವನಹಳ್ಳಿಯ ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿಡುವುದು…!
ನಿಮಗೆ ಅಚ್ಚರಿ ಆದರೂ ಇದೇ ನಿಜ, ರಜನಿಕಾಂತ್ ಮೊದಲಾದವರು ವಾಸವಾಗಿರೋ ಬೆಲೆಬಾಳುವ ಜಾಗದ ಆಜುಬಾಜಿನಲ್ಲಿರುವ ಆ ಚೆನ್ನೈನ ದೊಡ್ಡ ಪ್ರಾಪರ್ಟಿಯನ್ನು ಕೊನೆಗೆ ಲೀಲಾ ಮತ್ತು ವಿನೋದ್ ಅರ್ಧ ರೇಟಿಗೆ ಮಾರಿಬಿಡುತ್ತಾರೆ. ಅದರಲ್ಲಿ ಬಂದ ದುಡ್ಡಿನಲ್ಲಿ ಊರಿನ ವರ ಸೇವೆಗಾಗಿ, ಬಡ ಮಕ್ಕಳ ಕಲ್ಯಾಣಕ್ಕಾಗಿ ಹಾಸ್ಪಿಟಲ್ ಕಟ್ಟಲು ಮುಂದಾಗುತ್ತಾರೆ.
ಆ ಯೋಜನೆಯಲ್ಲಿ ಯಶಸ್ವಿಯೂ ಆಗುತ್ತಾರೆ. ಆ ಶಾಲೆಯ ಉದ್ಘಾಟನೆಯನ್ನು ಮ್ಮ ದುಡ್ಡಿನ ಮಾಡುತ್ತಾರೆ!
ದಟೀಸ್ ಕಾಲ್ಡ್ ಲೀಲಾವತಿಯವರ ಹಾಸ್ಪಿಟಾಲಿಟಿ…! ತಮ್ಮ ಕಾರಿನಲ್ಲಿ ಒಂದಷ್ಟು ಔಷಧ ಮಾತ್ರೆಗಳನ್ನು ತುಂಬಿ ಕೊಳ್ಳುವುದು, ನೆಲಮಂಗಲ ಸುತ್ತಮುತ್ತಲಿನ ಹಳ್ಳಿಗರನ್ನು ಸಂಪರ್ಕ ಮಾಡುವುದು. ಅವರೆಲ್ಲರಿಗೂ ಉಚಿತ ಟ್ಯಾಬ್ಲೆಟ್ಸ್ ಹಂಚುವುದು. ಕೆಲ ಕಡು ಬಡವರಿಗೆ ನೂರು ಇನ್ನೂರು ನೋಟುಗಳನ್ನು ಸೀಕ್ರೇಟ್ ಆಗಿ ಕೊಡುವುದು. ಇನ್ನು ಕೆಲವರಿಗೆ ರೇಷನ್ ಬ್ಯಾಗ್‌ಗಳನ್ನು ಹಂಚುವುದು, ಮತ್ತೆ ಕೆಲವರಿಗೆ ಬಟ್ಟೆ-ಬೇಸಿಕ್ ವಸ್ತುಗಳನ್ನು ಕೊಡಿಸುವುದು…
-ಈ ಕೆಲಸವನ್ನ ಅಮ್ಮ ಮಗ ಜಿದ್ದಿಗೆ ಬಿದ್ದವರಂತೇ ಸತತ ಕೋವಿಡ್ ಅವಧಿ ಮುಗಿಯುವ ತನಕ ಮಾಡುತ್ತಲೇ ಇದ್ದರು… ಮನೆ ಬಾಗಿಲಿಗೆ ಯಾರೇ ಬರಲಿ ಅವರ ಕಷ್ಟ ಆಲಿಸುವುದು, ಕೈಲಾದ ಸಹಾಯ ಮಾಡುವುದು, ಅದರಲ್ಲೂ ನಿಜವಾಗಿಯೂ ಕಷ್ಟ ಹೇಳಿಕೊಂಡು ಬಂದಿದ್ದಾರೆ ಎಂದು ಗೊತ್ತಾದರೆ ದೊಡ್ಡ ಮಟ್ಟದ ಸಹಾಯ ಮಾಡುವ ದೊಡ್ಡ ಮನಸು ಲೀಲಾವತಿ ಅಮ್ಮನದ್ದಾಗಿತ್ತು…!
ಇಂದ್ರಿಯಗಳು ಹೆವೀ ಸೂಕ್ಷ್ಮ!
ಲೀಲಾವತಿ ಅವರಿಗೆ ವಯೋಸಹಜ ಕೆಲ ನ್ಯೂನತೆಗಳನ್ನು ಹೊರತುಪಡಿಸಿ ಯಾವುದೇ ದೊಡ್ಡ ಖಾಯಿಲೆ ಅಂತ ಇರಲಿಲ್ಲ. ಅತೀ ಶಿಸ್ತಿನ ಜೀವನವೇ ಅವರ ಆ ಗಟ್ಟು ಮುಟ್ಟುತನಕ್ಕೆ, ಗಟ್ಟಿತನಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು… ಆಗಾಗ ಜಾಯಿಂಟ್ ಪೇನ್ ಇತ್ತು ಎನ್ನುವುದು ವಿನೋದ್ ಅವರಿಗೆ ಗೊತ್ತಿತ್ತಾದರೂ ಅವರು ವಿಶ್ರಮಿಸುವ ಸಮಯ ದಲ್ಲಿ ಆಯಿಲ್ ಮಸಾಜ್ ಮಾಡುತ್ತಿದ್ದರು ಮತ್ತು ಮಗನ ಆ ಸ್ಪರ್ಶವೇ ಲೀಲಮ್ಮನಿಗೆ ಕೂಡಲೇ ಉಪಶಮನ…
-ಅಂಥ ಬಹುಬಾಷಾ ತಾರೆ, ಒಂದಾನೊಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಸಂಭಾವಿತ ನಟಿ, ಆತ್ಮದಿಂದ ನಟಿಸುತ್ತಿದ್ದ ಆತ್ಮಾಭಿಮಾನದ ಪ್ರತೀಕದಂತಿದ್ದ ಅಪ್ರತಿಮ ಕಲಾವಿದೆ ಮಿಸ್ ಲೀಲಾವತಿ ಇಂದು ಪ್ರತ್ಯಕ್ಷವಾಗಿ ಈ ಜಗದ ಜೊತೆಗಿನ ಉಸಿರಿನ ನಂಟು ಕಳೆದುಕೊಂಡಿದ್ದಾರೆ. ಪರೋಕ್ಷವಾಗಿ ಕನ್ನಡಿಗರ ಉಸಿರಿನಲ್ಲಿ ಉಸಿರಾಗಿ ಬೆರೆತು ಹೋಗಿದ್ದಾರೆ! ಮಿಸ್ ಯೂ ಲೀಲಮ್ಮಾ…ಹೋಗಿ ಬಾರಮ್ಮಾ…!
ಅದೊಂದು ಚಂದವಳ್ಳಿಯ ತೋಟ!
ಲೀಲಾವತಿ ಸದಾ ಸುರನ್ನು ಹಚ್ಚಿಕೊಂಡಿದ್ದರು. ಗಿಡ ಮರಗಳ ಜತೆ ಮಾತನಾಡುತ್ತಿದ್ದರು. ಹೂ ಬಳ್ಳಿಗಳ ಜತೆ ಜೀವನ ಪ್ರೀತಿ ಹಂಚಿಕೊಳ್ಳುತ್ತಿದ್ದರು. ಸೋಲ
ದೇವನಹಳ್ಳಿಯ ಆ ಸುಂದರ ತೋಟವೇ ಅವರಿಗೆ ಸ್ವರ್ಗದ ಬಾಗಿಲಷ್ಟೇ ಅಲ್ಲ, ಸ್ವರ್ಗವೇ ಆಗಿಬಿಟ್ಟಿತ್ತು. ಆ ಕಾಲದಲ್ಲಿ ದುಡಿದ ದುಡ್ಡನ್ನೆಲ್ಲ ಕೂಡಿಟ್ಟು ಮಗನಿ
ಗೋಸ್ಕರ ಕಟ್ಟಿದ ಆ ಸುಂದರ ತೋಟ ಅವರ ಬದುಕಿನ ಭಾವ ಮತ್ತು ಭಾಗವೇ ಆಗಿಬಿಟ್ಟಿತ್ತು!
ತಲೆನೋವಾಗಿತ್ತು ಆ ಚೆನ್ನೈನ ಪ್ರಾಪರ್ಟಿ!
ಇರುವುದೊಬ್ಬ ಮಗ. ಮನೆ ಇದೆ. ಹಣಕ್ಕೇನು ಕೊರತೆ ಯಿದೆ? ಇನ್ನೊಂದು ಕಡೆ ನೆಲಮಂಗಲದ ನೆಲದ ಸೊಗಡು ಅವರಿಗೆ ಹಿಡಿಸಿಬಿಟ್ಟಿದೆ. ಆ ಊರ
ಸುತ್ತಮುತ್ತಲಿನ ಜನರ ಪ್ರೀತಿ ಅವರನ್ನು ಕಟ್ಟಿಹಾಕಿಬಿಟ್ಟಿದೆ. ಅಂಥದ್ದರಲ್ಲಿ ದೂರದ ಆ ಊರಿನ ಪ್ರಾಪರ್ಟಿಯನ್ನು ಇಟ್ಟುಕೊಂಡು ಏನು ಮಾಡುವುದು? ಮಾರಿಬಿಡೋಣ ಎಂದರೆ ಕಡಿಮೆ ರೇಟಿಗೆ ಕೇಳ್ತಾರೆ. ಅಲ್ಲಿಗೆ ಆಗಾಗ ಹೋಗುವುದು, ಬರುವುದು ಮಾಡೋಣ ಎಂದರೆ ವಯೋಸಹಜ ದೇಹಪ್ರಕೃತಿ ಸಪೋರ್ಟ್ ಮಾಡಬೇಕ? ಅದಾಗಲೇ ವಯಸ್ಸು ಎಂಬತ್ತರ ಗಡಿ ದಾಟಿದೆ. ಎಂಡ್ ಇಡೀ ಆ ಚೆನ್ನೈನ ಆಸ್ತಿ ಲೀಲಮ್ಮನ ಹೆಸರ ಇದೆ…!
-ಮುಂದ?
ಕೊನೆಗೂ ಅವರೊಂದು ನಿರ್ಧಾರಕ್ಕೆ ನಿಂತುಬಿಡುತ್ತಾರೆ… ಆ ಪ್ರಾಪರ್ಟಿಯ ಅರ್ಧ ಭಾಗವನ್ನು ಮಾರಿಬಿಡುವುದು. ಮಾರಾಟವಾದ ಆ ದುಡ್ಡಿನ ಒಂದಷ್ಟು
ಭಾಗ ವನ್ನು ತನ್ನೂರಾದ ಸೋಲದೇವನಹಳ್ಳಿಯ ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿಡುವುದು…! ನಿಮಗೆ ಅಚ್ಚರಿ ಆದರೂ ಇದೇ ನಿಜ, ರಜನಿಕಾಂತ್ ಮೊದಲಾ ದವರು ವಾಸವಾಗಿರೋ ಬೆಲೆಬಾಳುವ ಜಾಗದ ಆಜುಬಾಜಿನಲ್ಲಿರುವ ಆ ಚೆನ್ನೈನ ದೊಡ್ಡ ಪ್ರಾಪರ್ಟಿ ಯನ್ನು ಕೊನೆಗೆ ಲೀಲಾ ಮತ್ತು ವಿನೋದ್ ಅರ್ಧ ರೇಟಿಗೆ ಮಾರಿಬಿಡುತ್ತಾರೆ. ಅದರಲ್ಲಿ ಬಂದ ದುಡ್ಡಿನಲ್ಲಿ ಊರಿನ ವರ ಸೇವೆಗಾಗಿ, ಬಡ ಮಕ್ಕಳ ಕಲ್ಯಾಣಕ್ಕಾಗಿ ಹಾಸ್ಪಿಟಲ್ ಕಟ್ಟಲು ಮುಂದಾಗುತ್ತಾರೆ. ಆ ಯೋಜನೆಯಲ್ಲಿ ಯಶಸ್ವಿಯೂ ಆಗುತ್ತಾರೆ. ಆ ಶಾಲೆಯ ಉದ್ಘಾಟನೆಯನ್ನು ತಮ್ಮ ದುಡ್ಡಿನ ಮಾಡುತ್ತಾರೆ! ದಟೀಸ್ ಕಾಲ್ಡ್ ಲೀಲಾವತಿಯವರ ಹಾಸ್ಪಿಟಾಲಿಟಿ…!