ಅಭಿಪ್ರಾಯ
ಗಣೇಶ್ ಭಟ್, ವಾರಣಾಸಿ
ಭಾರತದ ಆರ್ಥಿಕ, ಕೈಗಾರಿಕಾ ಪ್ರಗತಿ ತಡೆಯಲು ಮತ್ತು ಇಲ್ಲಿ ರಾಜಕೀಯ ಅಸ್ಥಿರತೆ ಉಂಟುಮಾಡಲು ಫೋರ್ಡ್ ಫೌಂಡೇಶನ್ ಧನ ಸಹಾಯ ನೀಡುತ್ತಿದೆ.
ಬೇರೆ ದೇಶಗಳಲ್ಲೂ ಅಮೆರಿಕದ ಹಿತಾಸಕ್ತಿಗೆ ವಿರುದ್ಧದ ಶಕ್ತಿಗಳನ್ನು ಅಡಗಿಸಲು ಸಿಐಎಯು ಫೋರ್ಡ್ ಫೌಂಡೇಶನ್ ಜತೆಗೂಡಿ ಕೆಲಸ ಮಾಡುತ್ತಿದೆ.
ಇತ್ತೀಚೆಗೆ ಕೇಂದ್ರ ಸರಕಾರವು ಮಿಷನರೀಸ್ ಆಫ್ ಚ್ಯಾರಿಟಿ, ಆಕ್ಸ್ ಫಾಂ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ (ಐಎಂಎ) ಮೊದಲಾದ ಸುಮಾರು 6000 ಸರಕಾರೇತರ ಸಂಸ್ಥೆಗಳ ವಿದೇಶೀ ದೇಣಿಗೆ ಪಡೆಯುವ ಸಂಸ್ಥೆಗಳ ಪರವಾನಗಿ ನವೀಕರಿಸಿಲ್ಲ. ಈ ಮೊದಲೂ ಸುಮಾರು ಇಂಥ 20
ಸಾವಿರಕ್ಕಿಂತಲೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗಿತ್ತು.
ಈ ಎನ್‌ಜಿಒಗಳು ತಾವು ಪಡೆದ ವಿದೇಶೀ ದೇಣಿಗೆ ವಿನಿಯೋಗ ಸಂದರ್ಭದಲ್ಲಿ ವಿದೇಶೀ ದೇಣಿಗೆ ನಿಯಂತ್ರಣ ಕಾನೂನನ್ನು (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಷನ್ ಆಕ್ಟ್/ ಎಫ್ಸಿಆರ್‌ಎ) ಉಲ್ಲಂಸಿದ್ದವು ಎಂದು ಕೇಂದ್ರ ಸರಕಾರ ಹೇಳಿದೆ. ಯಾವುದೇ ಸರಕಾರೇತರ ಸಂಸ್ಥೆ, ವಿದೇಶೀ ದೇಣಿಗೆ ಪಡೆಯಲು ಎಫ್ಸಿಆರ್‌ಎ ಕಾಯಿದೆ ಯಡಿ ನೋಂದಾಯಿಸಿಕೊಳ್ಳಬೇಕು. ಕಾಲಕಾಲಕ್ಕೆ ಪಡೆದ ದೇಣಿಗೆ ಹಾಗೂ ಖರ್ಚಿನ ಮಾಹಿತಿಯನ್ನು ಎಫ್ಸಿಆರ್‌ಎ ವೆಬ್‌ಸೈಟಿನ ಎಫ್ಸಿ 6 ಅನ್ನುವ ನಮೂನೆ ಮೂಲಕ ಸರಕಾರಕ್ಕೆ ಸಲ್ಲಿಸಬೇಕು. ಇದು ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣ ಹಾಗೂ ಕಣ್ಗಾವಲಲ್ಲಿರುತ್ತದೆ.
ವಿದೇಶೀ ದೇಣಿಗೆ ಪರವಾನಗಿ ಕಳೆದುಕೊಂಡ ಬಹುತೇಕ ಎನ್‌ಜಿಒಗಳು ಎಫ್ಸಿ 6 ನಮೂನೆ ಸಲ್ಲಿಸಲು ವಿಫಲವಾಗಿವೆ. ಕೆಲ ಸಂಸ್ಥೆಗಳು ವಿದೇಶೀ ದೇಣಿಗೆ ಕಾಯಿದೆ ಉಲ್ಲಂಘಿಸಿವೆ. ಬಹಳಷ್ಟು ಬಾರಿ ಭಾರತೀಯ ಎನ್‌ಜಿಒರಗಳಿಂದ ವಿದೇಶೀ ದೇಣಿಗೆ ದುರ್ಬಳಕೆಯಾಗುತ್ತಿದ್ದವು. ಎಫ್ಸಿಆರ್‌ಎ 2010ರ ಅನುಸಾರ ದೇಣಿಗೆಯ ಶೇ.೫೦ಹಣವನ್ನು ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಬಹುದಿತ್ತು. ಉಳಿದ ಮೊತ್ತ ಮಾತ್ರ ಯೋಜನೆ ಅನುಷ್ಠಾನಕ್ಕೆ ಬಳಕೆಯಾಗುತ್ತಿತ್ತು. 2020ರಲ್ಲಿ ಕೇಂದ್ರ ಸರಕಾರ ಕಾಯಿದೆಗೆ ತಿದ್ದುಪಡಿ ತಂದು ಸಂಸ್ಥೆಗಳು, ದೇಣಿಗೆ ಶೇ.20ರಷ್ಟನ್ನು ಮಾತ್ರ ಆಡಳಿತ ಉದ್ದೇಶಗಳಿಗೆ ಬಳಸಬೇಕೆಂದು ಸೂಚಿಸಿ, ಉಳಿದ ಶೇ.80 ಮೊತ್ತ ಯೊಜನೆ ಅನುಷ್ಠಾನಕ್ಕೆ ಬಳಸುವುದನ್ನು ಕಡ್ಡಾಯಗೊಳಿಸಿದೆ.
ಸಂಸ್ಥೆಯ ಪದಾಧಿಕಾರಿಗಳ ಗೌರವ ಧನ, ಸಿಬ್ಬಂದಿ ವೇತನ, ವಾಹನದ ಖರ್ಚು, ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ, ಫೋನ್ ಬಿಲ್, ಸ್ಟೇಶನರಿ ಇತ್ಯಾದಿ ಆಡಳಿತಾ ತ್ಮಕ ಖರ್ಚಿನಡಿ ಬರುತ್ತದೆ. ಇದುವರೆಗೆ ಆಡಳಿತಾತ್ಮಕ ವೆಚ್ಚದ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಸಂಸ್ಥೆಗಳಿಗೆ ತಿದ್ದುಪಡಿ ತಲೆ ನೋವಾಗಿದೆ. ಪದಾಧಿಕಾರಿಗಳು ಹಾಗೂ ಉದ್ಯೋಗಿಗಳಿಗೆ ವೇತನ ಹಾಗೂ ಗೌರವಧನ ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದ್ದವು. ಹೀಗೆ ಸಮಾಜ ಸೇವೆಯ ಹೆಸರಿನಲ್ಲಿ ಬಹಳಷ್ಟು ಜನ ವಿಲಾಸೀ ಜೀವನ ನಡೆಸುತ್ತಿದ್ದ ಉದಾಹರಣೆಗಳಿವೆ.
ಬೆಂಗಳೂರಿನಿಂದ ಕೇವಲ ನೂರು ಕಿ.ಮೀ.ದೂರದ ಬರಪೀಡಿತ ಜಿಯ ಸರಕಾರೇತರ ಸಂಸ್ಥೆಯೊಂದು ಸುಮಾರು 40-45 ವರ್ಷಗಳಿಂದ ಅಲ್ಲಿನ ನಾಲ್ಕೈದು
ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿದೆ.ಸಂಸ್ಥೆಯ ಮುಖ್ಯಸ್ಥರಿಗೆ ಬಹಳಷ್ಟು ವಿದೇಶೀ ಫಂಡಿಂಗ್ ಏಜೆನ್ಸಿಗಳ ಸಂಪರ್ಕವಿದೆ. ಸಂಸ್ಥೆ ತನ್ನ ವೆಬ್‌ಸೈಟಿನಲ್ಲಿ ಘೋಷಿಸಿ ಕೊಂಡಂತೆ 90ರ ದಶಕದ ನಂತರ 110 ಕೋಟಿಗಿಂತಲೂ ಹೆಚ್ಚು ವಿದೇಶೀ ದೇಣಿಗೆ ಸ್ವೀಕರಿಸಿದೆ. ಸಂಸ್ಥೆಗೆ ಸಾಕಷ್ಟು ಸ್ಥಿರಾಸ್ಥಿ ಇದ್ದು ನಿರ್ದೇಶಕರು ಹಾಗೂ ಪದಾಧಿಕಾರಿಗಳು ಐಶಾರಾಮೀ ಜೀವನ ನಡೆಸುತ್ತಿzರೆ. ದೇಶದ ಇಂಥ ಸಾವಿರಾರು ಎನ್‌ಜಿಒಗಳು ಬಡವರ ಹೆಸರಿನಲ್ಲಿ ವಿದೇಶಗಳಿಂದ ಪಡೆದ ಸಾವಿರಾರು ಕೋಟಿ ರು.ಗಳನ್ನು ದುರು ಪಯೋಗಪಡಿಸಿಕೊಳ್ಳುತ್ತಿವೆ. ಕೇಂದ್ರ ಸರಕಾರ, ತಿಳಿಸಿರುವಂತೆ 4 ವರ್ಷಗಳಲ್ಲಿ ಭಾರತದ 18೮ ಸಾವಿರ ಸರಕಾ ರೇತರ
ಸಂಘಟನೆಗಳು 50975 ಕೋಟಿ ರು.ಗಳಷ್ಟು ವಿದೇಶೀ ದೇಣಿಗೆ ಪಡೆದಿವೆ. ಇದರಲ್ಲಿ 19941 ಕೋಟಿ ರು. ಅಮೆರಿಕವೊಂದರಿಂದಲೇ ಬಂದಿದೆ!
ದೇಣಿಗೆ ಕೊಡುವ ಸಂಸ್ಥೆಗಳಿಗೆ ಯಾವುದೋ ಹಿತಾಸಕ್ತಿ ಯಿರುತ್ತದೆ. ಅಮೆರಿಕದ ಫೋರ್ಡ್ ಫೌಂಡೇಶನ್ ಮತ್ತು ಅಮೆರಿಕದ ಬೇಹುಗಾರಿಕಾ ಸಂಸ್ಥೆ , ಸೆಂಟ್ರಲ್ ಇಂಟೆಲಿ ಜೆನ್ಸ್ ಏಜನ್ಸಿ (ಐಎಎ) ನಡುವೆ ಸಂಬಂಧ ಇದೆ ಎನ್ನಲಾಗುತ್ತಿದೆ. ಫೋರ್ಡ್, ನಾನಾ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಸರಕಾರೇತರ ಸಂಸ್ಥೆಗಳಿಗೆ ದೇಣಿಗೆ ನೀಡುತ್ತದೆ. ದೇಣಿಗೆ ಪಡೆಯುವ ಸಂಸ್ಥೆಗಳು ಫೋರ್ಡ್ ನಿಬಂಧನೆಗಳಿಗೆ ಹಾಗೂ ನಿಯಮಗಳಿಗೆ ಅನುಗುಣವಾಗಿ ಹಣ ವಿನಿಯೋಗಿಸಬೇಕು.
ಭಾರತದಂತಹ ದೇಶದ ಆರ್ಥಿಕ ಹಾಗೂ ಕೈಗಾರಿಕಾ ಪ್ರಗತಿ ತಡೆಯಲು ಮತ್ತು ಇಲ್ಲಿ ರಾಜಕೀಯ ಅಸ್ಥಿರತೆ ಉಂಟುಮಾಡಲು ಫೋರ್ಡ್ ಫೌಂಡೇಶನ್ ಧನ ಸಹಾಯ ನೀಡುತ್ತಿದೆ. ಬೇರೆ ದೇಶಗಳಲ್ಲೂ ಅಮೆರಿಕದ ರಾಜಕೀಯ ಹಿತಾಸಕ್ತಿಗೆ ವಿರುದ್ಧದ ಶಕ್ತಿಗಳನ್ನು ಅಡಗಿಸಲು ಸಿಐಎಯು ಫೋರ್ಡ್ ಫೌಂಡೇಶನ್ ಜತೆ
ಗೂಡಿ ಕೆಲಸ ಮಾಡುತ್ತಿದೆ. ಇದನ್ನು ಮನಗಂಡ ಕೇಂದ್ರ, ಇತ್ತೀಚೆಗೆ ೩೦೦ ಕೋಟಿ ರು.ಗಳಷ್ಟು ಮೊತ್ತದ ಫೋರ್ಡ್ ಫೌಂಡೇಶನ್ನಿನ ದೇಣಿಗೆ ತಡೆಹಿಡಿದಿದೆ. ಗುಜರಾತ್‌ನಲ್ಲಿ ಗೋಧ್ರೋತ್ತರ ಹಿಂಸಾಚಾರ, ದೊಂಬಿ ವಿಚಾರವಾಗಿ ಅಂದಿನ ಮುಖ್ಯಮಂತ್ರಿ ಮೋದಿ ವಿರುದ್ಧದ ಕಾನೂನು ಹೋರಾಟಕ್ಕೆ ಫೋರ್ಡ್ ಫೌಂಡೇಶನ್ ತೀಸ್ತಾ ಸೆತಲ್ವಾಡ್‌ಗೆ 1.75 ಕೋಟಿ ರು.ಗಳ ದೇಣಿಗೆ ನೀಡಿತ್ತು. ಇತರ ದೇಶಗಳ ರಾಜಕೀಯ ಹಾಗೂ ಕಾನೂನು ವ್ಯವಸ್ಥೆಗಳಲ್ಲಿ ವಿದೇಶೀ
ಫಂಡಿಂಗ್ ಏಜನ್ಸಿಗಳು ಹೇಗೆ ಕೈಯಾಡಿಸುತ್ತವೆ ಎನ್ನುವುದಕ್ಕೆ ಇದು ಉದಾಹರಣೆ.
ಧಾಪಾಟ್ಕರ್ ನೇತೃತ್ವದ ಪರಿಸರವಾದಿಗಳು, ನರ್ಮದಾ ಯೋಜನೆ ವಿರುದ್ಧ ಭಾರೀ ಜನಾಂದೋಲನ ಹಾಗೂ ಕಾನೂನು ಹೋರಾಟ ಮಾಡಿದ್ದರು. ಸರ್ದಾರ್
ಸರೋವರ ಅಣೆಕಟ್ಟು ಇಂದು ಗುಜರಾತಿನ 18.45 ಲಕ್ಷ ಹೆಕ್ಟೇರ್ ಹಾಗೂ ರಾಜಸ್ತಾನದ 2.46 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಗುಜರಾತ್‌ನ ಸುಮಾರು 9500 ಹಳ್ಳಿಗಳಿಗೆ ಹಾಗೂ 173 ಪಟ್ಟಣಗಳ ಜನರಿಗೆ ಕುಡಿಯುವ ನೀರನ್ನೂ ಒದಗಿಸುತ್ತಿದೆ. 1.45 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕೂಡ ಆಗುತ್ತಿದೆ. ಪಾಟ್ಕರ್ ಬಳಗಕ್ಕೆ ಇಂಥ ಜನಾಂದೋಲನಕ ಹಾಗೂ ಕೋರ್ಟ್ ಖರ್ಚು ಭರಿಸಲು ಬಳಗಕ್ಕೆ ಸಂಪನ್ಮೂಲ ಒದಗಿಸಿದವರು ಯಾರು? ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ, ತಮಿಳು ನಾಡಿನ ಕೂಡಂಕುಳಂನಲ್ಲಿ ಅಣು ಸ್ಥಾವರ ಸ್ಥಾಪಿಸಲು ಹೊರಟಾಗ ಭಾರೀ ವಿರೋಧ ಹಾಗೂ
ಕಾನೂನು ಸಮರ ಆರಂಭವಾಗಿತ್ತು.
ಯೋಜನೆ ವಿರುದ್ಧ ಆ ಭಾಗದ ಮೀನುಗಾರರನ್ನು ಎತ್ತಿಕಟ್ಟುವ ಕೆಲಸವನ್ನು ಎನ್‌ಜಿಒಗಳು ಹಾಗೂ ಚರ್ಚುಗಳು ಮಾಡಿದವು. ಚರ್ಚ್ ಆಫ್ ಸೌತ್ ಇಂಡಿಯಾ ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಪರಿ ಣಾಮ ಯೋಜನೆಯ ವೇಗ ಕುಂದಿತು. ಕೂಡಂಕುಲಂ ಹೋರಾಟದಲ್ಲಿ ಅಂತಾರಾಷ್ಟ್ರೀಯ ಫಂಡಿಂಗ್ ಏಜೆನ್ಸಿ ಗ್ರೀನ್ ಪೀಸ್ ಫೌಂಡೇಶನ್‌ನ ಕೈವಾಡವಿದೆ ಎಂದು ಅಂದಿನ ಮನಮೋಹನ್ ಸಿಂಗ್ ಸರಕಾರ ಆಪಾದನೆ ಮಾಡಿತ್ತು. ಇತ್ತೀಚೆಗೆ ಗ್ರೀನ್ ಪೀಸ್ ಫೌಂಡೇಶನ್ ನ ದೇಣಿಗೆಯನ್ನು ಕೂಡ ಭಾರತ ಸರಕಾರ ನಿಷೇಧಿಸಿದೆ.
ಇದೆ ರೀತಿ ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪನಿಯ ಸ್ಟೆರಲೈಟ್ ಹೆಸರಿನ ತಾಮ್ರದ ಅದಿರು ಸಂಸ್ಕರಣೆ ಫ್ಯಾಕ್ಟರಿ ಮುಚ್ಚಲು ಒತ್ತಾಯಿಸಿ
ಸ್ಥಳೀಯ ಎನ್‌ಜಿಒಗಳು ಹಾಗೂ ಚರ್ಚ್‌ಗಳು ಜನಾಂದೋಲನ(?)ನಡೆಸುತ್ತಿದ್ದವು. ಅದಿರು ಸಂಸ್ಕರಣೆಯಿಂದ ಪರಿಸರ ಕಲುಷಿತವಾಗುತ್ತಿದೆ ಎನ್ನುವುದು ಇವರ ವಾದ. 2018ರ ಮೇ 22ರಂದು 20 ಸಾವಿರ ಜನರನ್ನು ಬೀದಿಗಿಳಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಇದನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಲಾಠಿ ಪ್ರಹಾರ ಹಾಗೂ ಗೋಲೀಬಾರ್‌ನಲ್ಲಿ 14 ಮಂದಿ ಮೃತಪಟ್ಟರು. ಕೊನೆಗೂ ತಮಿಳುನಾಡು ಸರಕಾರ ಆ ಘಟಕ ಮುಚ್ಚಲು ಆದೇಶ ನೀಡಿತು. ಈ ಸಂಬಂಧ ಇನ್ನೂ ಕಾನೂನು ಹೋರಾಟ ನಡೆಯುತ್ತಿದೆ.
ಸ್ಟೆರಲೈಟ್ ಅದಿರು ಸಂಸ್ಕರಣಾ ಘಟಕ ಮುಚ್ಚಿದ್ದರಿಂದ ೨೦ ಸಾವಿರ ಮಂದಿ ನೇರ ಹಾಗೂ ಪರೋಕ್ಷ ಉದ್ಯೋಗ ಕಳೆದುಕೊಂಡರು. ಎಲ್ಲಕ್ಕಿಂತ ಮಿಗಿಲಾಗಿ ಇದರಿಂದಾಗಿ ಈಗ ಭಾರತ ತಾಮ್ರ ವನ್ನು ಆಮದುಮಾಡಿಕೊಳ್ಳಬೇಕಾದ ದುಸ್ಥಿತಿ ಬಂದಿದೆ. ವಾರ್ಷಿಕ ೧೦ ಲಕ್ಷ ಟನ್ ತಾಮ್ರ ಉತ್ಪಾದಿಸುತ್ತಿದ್ದ ಸಂಸ್ಥೆ ದೇಶದ ಅಗತ್ಯದ ಶೇ. ೪೦ ತಾಮ್ರವನ್ನು ಪೂರೈಸುತ್ತಿತ್ತು. ಮಾತ್ರವಲ್ಲ ೧.೬ ಲಕ್ಷ ಟನ್ ತಾಮ್ರವನ್ನು ರಫ್ತು ಮಾಡುತ್ತಿತ್ತು. ವಾರ್ಷಿಕ ೨೫೦೦ ಕೋಟಿ ರು.ಗಳಷ್ಟು ತೆರಿಗೆ
ರೂಪದಲ್ಲಿ ಸರಕಾರಕ್ಕೆ ವರಮಾನ ಕೊಡುತ್ತಿತ್ತು. ಸ್ಟೆರಲೈಟ್ ಸಂಸ್ಥೆಯ ಮುಚ್ಚುಗಡೆಯ ಸಂಪೂರ್ಣ ಲಾಭ ಶತ್ರು ದೇಶವಾದ ಪಾಕಿಸ್ತಾನಕ್ಕೆ ಲಭಿಸಿದೆ. ಆ ನಂತರ ಪಾಕಿಸ್ತಾನದ ತಾಮ್ರದ ನಿರ್ಯಾತವು ಶೇ.೪೦೦ ಹೆಚ್ಚಿದೆ. ಆ ದೇಶಕ್ಕೆ ವಾರ್ಷಿಕ ಸುಮಾರು ೩೫೦೦ ಕೋಟಿ ರು. ಹೆಚ್ಚುವರಿ ವರಮಾನ ದೊರೆಯುತ್ತಿದೆ.
ವೇದಾಂತ ಕಂಪನಿ ವಿರುದ್ಧ ಜಾಗತಿಕವಾಗಿ ಕೆಲಸ ಮಾಡುತ್ತಿರುವ ‘ಫಾಯಿಲ್ ವೇದಾಂತ’ ಹೆಸರಿನ ವಿದೇಶಿ ಎನ್‌ಜಿಒ ತೂತುಕುಡಿ ಹೋರಾಟಕ್ಕೆ ಧನಸಹಾಯ ಮಾಡುತ್ತಿದೆ. ಭಾರತ ಸರಕಾರ, ಚೀನಾ ಗಡಿಗಳಲ್ಲಿ ಭಾರತೀಯ ಸೈನಿಕರ ವಾಹನ ಚಲನೆಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡುತ್ತಿದೆ. ಚಾರ ಧಾಮ್ ರಸ್ತೆ ನಿರ್ಮಾಣ ಕೆಲಸವೂ ಇದಕ್ಕೆ ಪೂರಕ. ಆದರೆ ಇತ್ತೀಚೆಗೆ ‘ಸಿಟಿಜನ್ ಫಾರ್ ಗ್ರೀನ್ ಡೂನ್’ ಹೆಸರಿನ ಸರಕಾರೇತರ ಸಂಸ್ಥೆಯ ಕೋಲಿನ್ ಗೊನ್ಸಾಲ್ಸ ಹಾಗೂ ಮೊಹಮ್ಮದ್ ಅಫ್ತಾಬ್ ಎನ್ನುವ ಇಬ್ಬರು ವ್ಯಕ್ತಿಗಳು ಹಿಮಾಲಯದಲ್ಲಿ ರಸ್ತೆವಿಸ್ತರ ಣೆಯಿಂದ ಪರಿಸರದ ಸಮತೋಲನ ತಪ್ಪುತ್ತದೆ ಹಾಗೂ
ಹಸಿರು ನಾಶವಾಗುತ್ತದೆ ಎಂದು ಆರೋಪಿಸಿ ಯೋಜನೆ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಸೊಪ್ಪುಹಾಕ ಲಿಲ್ಲ ಎನ್ನುವುದು ಬೇರೆ ಮಾತು.
ಆದರೆ ಈ ಮಟ್ಟಿಗೆ ಸಂಸ್ಥೆಗೆ ಆರ್ಥಿಕ ಸಂಪನ್ಮೂಲ ಒದಗಿಸಿದವರು ಯಾರು? ಆಪಲ್ ಐಫೋನ್ ತಯಾರಿಕೆ ಸಂಸ್ಥೆ ಫಾಕ್ಸ್ ಕಾನ್ ಕಂಪನಿ, ಚೀನಾದಿಂದ ಕಾಲ್ತೆಗೆದು ಭಾರತಕ್ಕೆ ಬರುತ್ತಿದೆ. ಫಾಕ್ಸ್ ಕಾನ್‌ನ ಈ ನಡೆ ಚೀನಾದ ಕೆಂಗಣ್ಣಿಗೆ ಕಾರಣ ವಾಗಿದೆ. ಕಳೆದ ವರ್ಷ ಕೋಲಾರದಲ್ಲಿರುವ ಫಾಕ್ಸ್‌ಕಾನ್‌ನ ನೌಕರ ಸಂಸ್ಥೆಗಳು ಪ್ರತಿಭಟನೆ ಹೆಸರಿನಲ್ಲಿ ಲೂಟಿ ಮಾಡಿ, ಬೆಂಕಿಹಚ್ಚಿ, ಪೀಠೋಪಕರಣ ನಾಶಮಾಡಿ ನಡೆಸಿದ ಭಾರೀ ದಾಂಧಲೆ ನಡೆಸಿದ್ದವು. ಇದರಿಂದ ಸಂಸ್ಥೆಗೆ ಸುಮಾರು ೪೦೦ ಕೋಟಿ ರು. ನಷ್ಟವಾಗಿತ್ತು. ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬದೂರಿನ ಫಾಕ್ಸ್ ಕಾನ್ ನೌಕರರು ಸಹ ಕ್ಷುಲ್ಲಕ ಕಾರಣಕ್ಕಾಗಿ ಒಂದು ವಾರ ಮುಷ್ಕರ ಹೂಡಿದ್ದರು.
ಈ ಎರಡೂ ಕಾರ್ಮಿಕ ಮುಷ್ಕರಗಳ ಹಿಂದೆ ಚೀನಾ ಕೈವಾಡ ಅಂದಾಜಿಸಲಾಗಿದೆ. ಇತ್ತೀಚೆಗಿನ ರೈತರ ಹೋರಾ ಟದಲ್ಲೂ ವಿದೇಶೀ ಸಿಖ್ ಉಗ್ರಗಾಮಿ ಸಂಸ್ಥೆಗಳ ಹಣ ಕಾಸಿನ ಸಹಕಾರ ಇದ್ದುದು ಬಯಲಾಗಿದೆ. ಅಮೆರಿಕದ ಜಾರ್ಜ್ ಸೋರೋಸ್‌ನ ಓಪನ್ ಸೊಸೈಟಿಯು ಭಾರತ ವಿರೋಧಿ ಚಟುವಟಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು ಯಾವತ್ತೂ ತುದಿಗಾಲಲ್ಲಿ ನಿಂತಿರುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ವಿದೇಶೀ ದೇಣಿಗೆಯ ಮೇಲೆ ನಿಯಂತ್ರಣ ಅನಿವಾರ್ಯವೆನಿಸಿದೆ.