Thursday, 12th December 2024

ಬ್ರಾಹ್ಮಣರನ್ನೇ ಬಯ್ಯಬೇಕೆಂಬ ಈ ಬಾಯ್ತುರಿಕೆ ಏಕೆ ?

ಅಭಿವ್ಯಕ್ತಿ

ಡಾ.ಕೆ.ಪಿ.ಪುತ್ತೂರಾಯ

ಇಂಥ ಲೇಖನವನ್ನು ಬರೆಯಬೇಕಿದ್ದರೆ, ನಾನೊಬ್ಬ ಬ್ರಾಹ್ಮಣನೇ ಇರಬೇಕೆಂದು ನೀವು ಇಷ್ಟರಲ್ಲೇ ಅಂದುಕೊಂಡಿರಬಹುದು.
ಹೌದು, ನಾನೊಬ್ಬ ಬ್ರಾಹ್ಮಣ. ಬ್ರಾಹ್ಮಣನೆಂದು ಹೇಳಿಕೊಳ್ಳಲು ಕೆಲ ಬ್ರಾಹ್ಮಣರಿಗೆ ಇರುವಂತೆ ನನಗೆ ನನಗೆ ಯಾವ ಅಂಜಿಕೆ –
ನಾಚಿಕೆಯೂ ಇಲ್ಲ; ಭಯ – ಬೇಸರವೂ ಇಲ್ಲ.

ಒಂದು ವೇಳೆ ನಾನು ಜುಟ್ಟನ್ನು ಬಿಡದೇ, ಜನಿವಾರ ವನ್ನು ತೊಡದೇ, ಧರ್ಮಕರ್ಮವ ತೊರೆದು ಗುಟ್ಟುಗುಟ್ಟಾಗಿ ಬ್ರಾಹ್ಮಣೇತರ ನಂತೆ ಇದ್ದರೂ ಬಿಟ್ಟು ಬಿಡುವರೇ ಜನ ನನ್ನ ನೀ ಬ್ರಾಹ್ಮಣನಲ್ಲವೆಂದು? ಅಪ್ಪಿಕೊಂಬರೇ ಇವರು ಇವ ನಮ್ಮವನೆಂದು? ಇಲ್ಲವಲ್ಲ! ಮತ್ಯಾಕೆ ಈ ನಪುಂಸಕತ್ವ ಆತ್ಮ ವಂಚನೆ? ಏನೇ ಕಷ್ಟ – ನಷ್ಟಗಳಿರಲಿ, ನೋವು – ನಿಂದನೆ ಗಳಿರಲಿ, ಎಷ್ಟೇ ಆರೋಪ – ಆಪಾದನೆಗಳಿರಲಿ, ಆಕ್ರೋಶ – ಅವಹೇಳನಗಳಿರಲಿ, ಬ್ರಾಹ್ಮಣ ಜನ್ಮ ವೆಂದರೆ ಬರಿಯ ಜನ್ಮವಲ್ಲ; ಅದು ಪೂರ್ವಾರ್ಜಿತ
ಪುಣ್ಯವೆಂದು ತಿಳಿದುಕೊಂಡವನು ನಾನು!

ನನ್ನ ವಂಶದ ಬಗ್ಗೆ ಹೆಮ್ಮೆ, ಅಭಿಮಾನ ಇದೆ ಎಂದ ಮಾತ್ರಕ್ಕೆ, ಇತರ ಜಾತಿಯವರ ಬಗ್ಗೆ ಅಗೌರವ – ಅಸಹಿಷ್ಣುತೆ ಇದೆ ಎಂಬ ಅರ್ಥವಲ್ಲ. ತನ್ನ ತಾಯಿ ಯನ್ನುಪ್ರೀತಿಸದವ ಇನ್ನೊಬ್ಬರ ತಾಯಿಯನ್ನೂ ಪ್ರೀತಿಸಲಾರ. ನಮಗೆ ಎಲ್ಲರ ಬಗ್ಗೆ ಪ್ರೀತಿ ಇದೆ; ಕಳಕಳಿ ಇದೆ. ಇಲ್ಲವಾದರೆ ದಿನನಿತ್ಯದ ಪೂಜೆಯಲ್ಲಿ ‘ಸರ್ವೇ ಜನಾಃ ಸುಖಿನೋ ಭವಂತು‘ ಎಂದು ಪ್ರಾರ್ಥಿಸುವೆವೆ ನಾವು? ಈ
ದೇಶದ ಅಂದಾಜು ಹತ್ತು ಕೋಟಿ ನನ್ನ ಬ್ರಾಹ್ಮಣ ಬಂಧುಗಳ ಬಗ್ಗೆ ನನಗೆ ಸಂತೋಷವಿದೆ. ಸಂತೃಪ್ತಿ ಇದೆ. ಹೆಮ್ಮೆ ಇದೆ. ಇದಕ್ಕೆ ಕಾರಣಗಳು ಹಲವಾರು.

ನಮ್ಮದೊಂದು ರಾಷ್ಟ್ರೀಯ ಸಮಾಜ. ದೇಶದಲ್ಲಿ ಬ್ರಾಹ್ಮಣರಿಲ್ಲದ ರಾಜ್ಯಗಳೇ ಇಲ್ಲ; ಊರುಗಳೇ ಇಲ್ಲ. ದೇಶದ ಅಧ್ಯಾತ್ಮಿಕ ಸಂಪತ್ತುಗಳಾದ ವೇದ ಶಾಸ್ತ್ರ , ಪುರಾಣ-ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ರಕ್ಷಿಸಿ, ಉಳಿಸಿ ಬೆಳೆಸಿದವರಲ್ಲಿ ಹಾಗೂ ಸನಾತನ ಧರ್ಮ, ಭಾರತೀಯ ಸಂಸ್ಕೃತಿ – ಸಂಸ್ಕಾರಗಳನ್ನು ಆಚರಿಸಿ ಪ್ರಚಾರಗೊಳಿಸಿದವರಲ್ಲಿ ಬ್ರಾಹ್ಮಣರೇ ಅಗ್ರಗಣ್ಯರು.

ಬ್ರಾಹ್ಮಣರು ಎಂದೂ ರಾಜರುಗಳಾಗಿ ಮೆರೆದವರಲ್ಲ! ಆದರೆ ರಾಜರುಗಳನ್ನು ಮಾಡಿದವರು. (Brahmins were not the
kings, but hav been the king makers) ರಾಜ ಚಂದ್ರಗುಪ್ತಮೌರ್ಯನಿಗೆ ರಾಜನೀತಿಯನ್ನು ತಿಳಿಸಿ, ರಾಜ್ಯಭಾರ ನಡೆಸಲು ನೆರವಾದವರು ಬ್ರಾಹ್ಮಣರಾದ ಚಾಣಕ್ಯ. ಹಕ್ಕಬುಕ್ಕರಿಗೆ ಮಾರ್ಗದರ್ಶನ ಮಾಡಿ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣ ಕರ್ತ ರಾದವರು ಬ್ರಾಹ್ಮಣರಾದ ವಿದ್ಯಾರಣ್ಯರು. ಛತ್ರಪತಿ ಶಿವಾಜಿ ಮಹಾರಾಜನ ಬಲಗೈ ಭಂಟನಾಗಿದ್ದವನು ಬ್ರಾಹ್ಮಣನಾದ ಸಮರ್ಥ ರಾಮದಾಸ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ ಅಚ್ಚುಮೆಚ್ಚಿನ ಗುರುಗಳಾಗಿದ್ದವರು ಬ್ರಾಹ್ಮಣರು.

ಹೀಗೆ ಹೆಚ್ಚಿನ ಮಹಾನ್ ವ್ಯಕ್ತಿಗಳ ಜೀವನದಲ್ಲಿ ಬ್ರಾಹ್ಮಣರ ಪಾತ್ರ ಗಣನೀಯ ಹಾಗೂ ಗುಣನೀಯ ಎಂಬುದು ಸತ್ಯದ ಸಂಗತಿ.
ಮೇಲಾಗಿ, ದೇವರಾಣೆಗೂ ಇದು ಅಹಂಕಾರದ ಮಾತಲ್ಲ – ಅನುಭವದ ಮಾತು, ಸೊಕ್ಕಿನ ಮಾತಲ್ಲ – ಸಂತೋಷದ ಮಾತು, ಗತ್ತಿನ ಮಾತಲ್ಲ – ಗಮ್ಮತ್ತಿನ ಮಾತು – ಅದೇನೆಂದರೆ, ಪೌರೋಹಿತ್ಯದಿಂದ ಹಿಡಿದು ಪಾಕಶಾಸ್ತ್ರದವರೆಗೆ, ಕೃಷಿಯಿಂದ ಹಿಡಿದು – ಕೈಗಾರಿಕೆ, ಕ್ರೀಡೆಯವೆರೆಗೆ, ಸಾಹಿತ್ಯ- ಸಂಗೀತ ವಿರಲಿ, ಜ್ಞಾನ – ವಿಜ್ಞಾನವಿರಲಿ, ಏನೇ ಕಲಾ ಪ್ರಾಕಾರಗಳಿರಲಿ – ಯಾವ ಕ್ಷೇತ್ರದಲ್ಲಿ ನೋಡಿದರೂ ಹೆಸರು ಮಾಡಿದವರು ಬ್ರಾಹ್ಮಣರು.

ಖ್ಯಾತ ಖಗೋಳ ವಿಜ್ಞಾನಿ ಆರ್ಯಭಟ, ವರಾಹಮಿಹಿರ, ಅರ್ಥಶಾಸ್ತ್ರದ ಕೌಟಿಲ್ಯ, ರಾಜ ನೀತಿಜ್ಞ ಚಾಣಕ್ಯ, ಹಾಸ್ಯಪಟು ತೆನಾಲಿ ರಾಮಕೃಷ್ಣ, ಬೀರಬಲ್, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಬಾಲ ಗಂಗಾಧರನಾಥ ತಿಲಕ, ಗೋಪಾಲಕೃಷ್ಣ ಗೋಖಲೆ ಮುಂತಾದವರೆಲ್ಲರೂ ಬ್ರಾಹ್ಮಣರೇ ಆಗಿದ್ದರು. ಸಂಗೀತ ಸಾಮ್ರಾಜ್ಯದ ತ್ರಿಮೂರ್ತಿಗಳೆನಿಸಿರುವ
ತ್ಯಾಗರಾಜರು, ಮೈಸೂರು ವಾಸುದೇವಾಚಾರ್ಯ ಮತ್ತು ಸ್ವಾಮಿ ದೀಕ್ಷಿತರು ಎಲ್ಲರೂ ಬ್ರಾಹ್ಮಣರೇ.

ಕರ್ನಾಟಕಕ್ಕೆ ನಾಲ್ಕು ಭಾರತ ರತ್ನ ಪ್ರಶಸ್ತಿಗಳನ್ನು ತಂದುಕೊಟ್ಟ ಸಿ.ವಿ. ರಾಮನ್, ಸರ್. ಎಂ. ವಿಶ್ವೇಶ್ವರಯ್ಯ, ಪಂಡಿತ್ ಭೀಮಸೇನ ಜೋಶಿ, ಪ್ರೊ. ಸಿ.ಎನ್.ಆರ್. ರಾವ್ ಬ್ರಾಹ್ಮಣ ರಲ್ಲವೇ? ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಂದ 8 ಜ್ಞಾನಪೀಠ ಪ್ರಶಸ್ತಿಗಳ ಪೈಕಿ 6 ಪ್ರಶಸ್ತಿಗಳು ಬ್ರಾಹ್ಮಣರದ್ದೇ ಅಲ್ಲವೇ? ತಾತ್ಪರ್ಯ ಇಷ್ಟೇ; ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ, ಪ್ರತಿಭೆಯಲ್ಲಿ ಈ
ದೇಶದಲ್ಲಿ ಬ್ರಾಹ್ಮಣರೇ ಬಹುಸಂಖ್ಯಾತರು.

ಇನ್ನು ದೇಶದ ಅಪರಾಧಿಗಳ – ಅತ್ಯಾಚಾರಿಗಳ, ಭ್ರಷ್ಟ – ಭಯೋತ್ಪಾದಕರ ಪಟ್ಟಿಯಲ್ಲಿ ಬ್ರಾಹ್ಮಣರ ಹೆಸರು ತೀರಾ ಕಡಿಮೆ.
ಕಾರಣ, ಹೆಚ್ಚಿನ ಬ್ರಾಹ್ಮಣರು ತಲೆಗ್ಗಿಸುವ ದೇಶದ್ರೋಹಿ ಕೆಲಸ ಮಾಡಿಲ್ಲ. ಎಂದಿಗೂ ವಿನಾಕಾರಣ ಇತರ ಜಾತಿಯವರನ್ನು ದೂಷಿಸಿಲ್ಲ; ದ್ವೇಷಿಸಿಲ್ಲ. ಅವರ ಬಗ್ಗೆ ಕೀಳಾಗಿ, ಹಗುರವಾಗಿ ಮಾತನಾಡಿಲ್ಲ. ಇದು ಬ್ರಾಹ್ಮಣರ ಸಂಸ್ಕೃತಿಯೇ ಅಲ್ಲ. ಇಷ್ಟಿದ್ದರೂ, ಅದ್ಯಾಕೆ ಕೆಲವರಿಗೆ ಬ್ರಾಹ್ಮಣರನ್ನೇ ಬಯ್ಯಬೇಕೆಂಬ ಬಾಯ್ತುರಿಕೆ? ಇತ್ತೀಚಿಗೆ ಟ್ವೀಟ್ ಮಾಡಿದ ನಟ ಚೇತನ್ ಮಾತ್ರವಲ್ಲ; ಹಿಂದಿನಿಂದಲೂ ಕೆಲವು ವಿಚಾರವಾದಿ ಗಳೆನಿಸಿಕೊಂಡವರು (ವ್ಯಾಧಿಗಳು!) ಬ್ರಾಹ್ಮಣರ – ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಪುರೋಹಿತಶಾಹಿಯಬಗ್ಗೆಯೂ ಮಾತನಾಡಿದ್ದಾರೆ. ಬ್ರಾಹ್ಮಣರ ಭಾವನೆಗಳಿಗೆ ಬೆಂಕಿ ಹಚ್ಚಿದ್ದಾರೆ. ತನ್ಮೂಲಕ, ಜಾತೀಯತೆ ಯನ್ನು ಮರೆತು, ಸಾಮರಸ್ಯ – ಸೌಹಾರ್ದತೆಯಿಂದ ಬಾಳಬೇಕಾದ ಸಮಾಜದಲ್ಲಿ ವಿಷಬೀಜವನ್ನು ಬಿತ್ತಿದ್ದಾರೆ. ಪರಿಣಾಮವಾಗಿ, ಒಂದು ಕಾಲದಲ್ಲಿ ವಂದನೀಯರಾಗಿದ್ದ ಬ್ರಾಹ್ಮಣರು ಇಂದು ನಿಂದನೀಯರಾಗಿದ್ಧಾರೆ. ಪೂಜ್ಯರಾಗಿದ್ದವರು ತಾಜ್ಯವ್ಯಕ್ತಿ ಗಳಾಗಿದ್ದಾರೆ. ಸಮಾಜದ ಕಣ್ಣು ತೆರೆಸಿದವರು ಸಮಾಜದ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ.

ಎಲ್ಲೆಡೆಯೂ ಬ್ರಾಹ್ಮಣರ ಬಗ್ಗೆ ದೂಷಣೆ ಇದೆ, ಶೋಷಣೆ ಇದೆ, ಘೋಷಣೆ ಇದೆ. ಹಾಗಂತ ನಾನು ಬ್ರಾಹ್ಮಣರೆಲ್ಲರೂ ಒಳ್ಳೆಯ ವರು ಎಂದು ನಾನು ಹೇಳುತ್ತಿಲ್ಲ. ಆದರೆ, ಎಲ್ಲ ಬ್ರಾಹ್ಮಣರೂ ಕೆಟ್ಟವರಲ್ಲ. ತಪ್ಪು ಮಾಡಿದ ಬ್ರಾಹ್ಮಣನನ್ನು ಬಿಡಬೇಡಿ. ಅವಶ್ಯವಾಗಿ ಖಂಡಿಸಿ, ಶಿಕ್ಷಿಸಿ. ಆದರೆ, ಇಡೀ ಬ್ರಾಹ್ಮಣ ಸಮುದಾಯವನ್ನೇ ಏಕೆ ನಿಂದಿಸುವಿರಿ? ‘ಬ್ರಾಹ್ಮಣ ಅನ್ನೋದು ಅಧ್ಯಾತ್ಮಿಕ ಭಯೋತ್ಪಾದನೆ’ ಎಂದಿರಿ. ಇದು ಪವಿತ್ರವಾದ ಬ್ರಾಹ್ಮಣ್ಯಕ್ಕೆ ಮಾಡಿದ ಅಪಚಾರ. ಹೀಗೆ ಹೇಳಲು, ಅವರಿಗೆ
ಬ್ರಾಹ್ಮಣ್ಯದ ಬಗ್ಗೆ ಅವರಿಗಿರುವ ಅಜ್ಞಾನವೇ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ. ಬ್ರಾಹ್ಮಣ ಬೇರೆ; ಬ್ರಾಹ್ಮಣ್ಯ ಬೇರೆ. ಬ್ರಾಹ್ಮಣವೆಂದರೆ ಒಂದು ಜಾತಿ, ಬ್ರಾಹ್ಮಣ್ಯ ಇಲ್ಲವೇ ಬ್ರಾಹ್ಮಣಿಕೆ ಅನ್ನೋದು ಒಂದು ನೀತಿ.

ಉತ್ತಮರಾಗಿ ಬದುಕಿ ಬಾಳುವ ರೀತಿ, ಜೀವನ ಕ್ರಮ, ಜಾತಿ ಜನ್ಮದಿಂದ ಬರುತ್ತದೆ. ಬ್ರಾಹ್ಮಣ್ಯ ಕರ್ಮಾನುಷ್ಠಾನದಿಂದ ಬರುತ್ತದೆ. (ಜನನಾಂ ಜಾಯತೇ ಜಂತು, ಕರ್ಮಣಾಂ ಜಾಯತೇ ದ್ವಿಜಃ). ಯಾವ ಜಾತಿಯವರೂ ಬ್ರಾಹ್ಮಣ್ಯವನ್ನು ಪಡೆದುಕೊಳ್ಳಬಹುದು. ಬ್ರಾಹ್ಮಣರಿಗೆ ಜಾತಿ ಇದೆ. ಆದರೆ ಬ್ರಾಹ್ಮಣ್ಯಕ್ಕೆ ಜಾತಿ ಇಲ್ಲ. ಅದು ಜಾತ್ಯಾತೀತ! ಬ್ರಾಹ್ಮಣ್ಯ ಅನ್ನೋದು ಜಾತಿ ಸೂಚಕ ಅಲ್ಲ. ಅದು ಒಂದು ನೀತಿ ಸೂಚಕ, ಗುಣ ಸ್ವಭಾವದ ಸೂಚಕ ಪದ. ಮೇಲಾಧಾರಿತ ಸಂಸ್ಕೃತಿ – ಸಂಸ್ಕಾರಗಳ ಫಲಶೃತಿ. ಆದ್ದರಿಂದ ಕೇವಲ ಜಾತಿಯಲ್ಲಿ, ಜನಿವಾರದಲ್ಲಿ ಮಾತ್ರ ಬ್ರಾಹ್ಮಣ್ಯವಿಲ್ಲ. ಕರ್ಮಾನುಷ್ಠಾನದಲ್ಲಿ ಮಾತ್ರ ಇರೋದು.

ಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡ ಬ್ರಾಹ್ಮಣೇತರರೂ ಇದ್ದಾರೆ. ಮೇಲಾಗಿ ಅಧ್ಯಾತ್ಮದಲ್ಲಿ ಭಯೋತ್ಪಾದನೆ ಎಂಬುದಿಲ್ಲ. ಇದ್ದರೆ ಅದು ಅಧ್ಯಾತ್ಮಿಕ ಚಿಂತನೆಯೇ ಅಲ್ಲ. ಅಂದಮೇಲೆ ಬ್ರಾಹ್ಮಣ್ಯವು ಭಯೋತ್ಪಾದಕ ಮತ್ತು ಅದು ಸ್ವಾತಂತ್ರ್ಯ-ಸಮಾನತೆ ಯನ್ನು ನಿರಾಕರಿಸುತ್ತದೆ ಎನ್ನುವುದು ಅವಿವೇಕದ ಮಾತು.

‘ಬ್ರಾಹ್ಮಣರು ಮಾತ್ರ ಅತ್ಯುನ್ನತರು, ಉಳಿದವರೆಲ್ಲ ಕೆಳಹಂತದವರು, ಅಸ್ಪೃಶ್ಯರು ಎನ್ನೋದು ಅಸಂಬದ್ಧ‘ ಎಂಬ ಪೆರಿಯಾರ್ ಅವರ ಮಾತನ್ನು ಉಲ್ಲೇಖಿಸಲಾಯ್ತು. ಬ್ರಾಹ್ಮಣರೆಂದೂ ತಾವು ಅತ್ಯುನ್ನತರು, ಉಳಿದವರು ಕೀಳು ಜಾತಿ ಯವರು, ಅಸ್ಪೃಶ್ಯರು
ಎಂದು ಹೇಳಿಕೊಂಡೇ ಇಲ್ಲ! ಇಲ್ಲವಾದರೆ, ಓರ್ವ ಅಂಬಿಗನಾಗಿ ಜನಿಸಿದ ವೇದವ್ಯಾಸರನ್ನು ಮಹರ್ಷಿಯನ್ನಾಗಿ ಪರಿಗಣಿಸು ವರೇ? ವಾಲ್ಮೀಕಿಯು ರಚಿಸಿದ ರಾಮಾಯಣವನ್ನು ಪೂಜಿಸುವರೇ? ಜಾತಿಯಿಂದ ಕ್ಷತ್ರಿಯನಾದ ಶ್ರೀ ರಾಮಚಂದ್ರನನ್ನು, ಗೊಲ್ಲ ಶ್ರೀ ಕೃಷ್ಣನನ್ನು ನಿತ್ಯ ಆರಾಧ್ಯ ದೈವವಾಗಿ ಪೂಜಿಸುವರೇ? ಜಾತಿಯಿಂದ ಕುರುಬರಾದ ಕಾಳಿದಾಸ – ಕನಕದಾಸರನ್ನು ಗೌರವಿಸು ವರೇ? ಆಚಾರ್ಯ ಶಂಕರಾಚಾರ್ಯರು ಚಾಂಡಾಲನಿಂದಲೂ ಜ್ಞಾನ ಪಡೆದು ಅವನಿಗೆ ಶಿರ ಬಾಗಿ ನಮಸ್ಕರಿಸ ಲಿಲ್ಲವೇ? ದಿವಂಗತ ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗಿ ಅವರಿಂದ ಫಲ – ತಾಂಬೂಲ ಸ್ವೀಕರಿಸಲಿಲ್ಲವೇ?

‘ಅಸ್ಪೃಶ್ಯತೆಯನ್ನು ತಂದವರು ಬ್ರಾಹ್ಮಣರ’ ಎಂಬ ಆಪಾದನೆಯಿದೆ. ಇದು ಸತ್ಯಕ್ಕೆ ದೂರವಾದ ಮಾತು. ಬ್ರಾಹ್ಮಣರ ಜನನ ದಿಂದಲೂ ಅಸ್ಪೃಶ್ಯತೆ ಯೂ ಇತ್ತು. ಹೌದು, ಸಮಾಜದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರೂರಿದ್ದ ಕಾಲದಲ್ಲಿ ಬ್ರಾಹ್ಮಣರು ಅಸ್ಪೃಶ್ಯರನ್ನು ದೂರ ಇರಿಸಿದ್ದುಂಟು. ಆದರೆ ಈಗ ಮಾಡುತ್ತಿಲ್ಲವಲ್ಲ. ಮಾಡಿದವರು ಶಿಕ್ಷಾರ್ಹವೆಂದು ಬ್ರಾಹ್ಮಣರೇ ಹೇಳು ತ್ತಿದ್ದಾರಲ್ಲ! ಮುಂದೆ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರೂ ಬ್ರಾಹ್ಮಣರೇ ಎಂಬುದನ್ನು ಮರೆತಂತಿದೆ.

ಅಂತೆಯೇ ಇತರ ಮೇಲ್ಜಾತಿಯವರೂ ಅಸ್ಪೃಶ್ಯರನ್ನು ದೂರ ಇರಿಸಿರಲಿಲ್ಲವೇ? ಆಗ ಯಾಕೆ ಇತ್ತು ಮೌನ? ಬ್ರಾಹ್ಮಣರೇ ಈ ದೇಶದಲ್ಲಿ ಜಾತಿ ಪದ್ಧತಿಯನ್ನು (ವರ್ಗಾಶ್ರಮ) ತಂದವರು ಎಂಬ ಆಪಾದನೆಯೂ ಇದೆ. ಬ್ರಾಹ್ಮಣರು ವಿಭಾಗಶಃ ಎಂಬ
ಗೀತಾಚಾರ್ಯನ ನುಡಿಯಂತೆ ಸಮಾಜದಲ್ಲಿ ಅವರವರ ಆಸಕ್ತಿ, ಅಭಿರುಚಿ, ಗುಣಸ್ವಭಾವ ಮತ್ತು ಅಜ್ಞಾನದ ವಿರುದ್ಧ ಜ್ಞಾನ
ಹರಡುವವರನ್ನು ಮೈಂಡ್ ಪವರ್ ಬ್ರಾಹ್ಮಣರೆಂದು, ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುವವರನ್ನು ಕ್ಷತ್ರಿಯರೆಂದೂ (ಮಸಲ್ ಪವರ್) ಅಭಾವದ ವಿರುದ್ಧ ಕೃಷಿ, ಕೈಗಾರಿಕೆ, ವ್ಯವಹಾರ ವಹಿವಾಟುಗಳ ವಿರುದ್ಧ ಶ್ರಮಿಸಿ ಇತರ ವರ್ಗದವರಿಗೆ ನೆರವಾಗುವವರನ್ನು ಶೂದ್ರರೆಂದು (ಮ್ಯಾನ್ ಪವರ್) ವಿಂಗಡಿಸ ಲಾಯಿತು.

ಈ ಹಿನ್ನೆಲೆಯಲ್ಲಿ ಮೊದಲು ಬಂದಿದ್ದು ವರ್ಣ, ನಂತರ ಜಾತಿ, ‘ಚಾತುರ್ ಜಾತಿ ಮಾಯಾ ಸೃಷ್ಪಂ’ ಎಂದು ಕರೆಯಲ್ಲಟ್ಟವರೇ ಹೊರತು, ಇವರು ಬ್ರಾಹ್ಮಣರು ಆದುದರಿಂದ ಬುದ್ಧಿವಂತರು ಎಂದು ಎಲ್ಲೂ ಹೇಳಿಲ್ಲ. ಬ್ರಾಹ್ಮಣರಲ್ಲೂ ದಡ್ಡರೂ ಇದ್ದಾರೆ. ಮೇಲಾಗಿ ಯಾವ ವರ್ಗದವರೂ, ವರ್ಣದವ ರಾಗಲೂ ಅವಕಾಶವಿದೆ. ಒಂದು ರೀತಿಯಲ್ಲಿ ನೋಡಿದರೆ ಭಾರತದಲ್ಲಿ ಎರಡೇ ಜಾತಿಗಳು. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು. ಆದರೆ, ಬ್ರಾಹ್ಮಣರು ಜಾತಿವಾದಿಗಳಲ್ಲ. ಜಾತಿಯ ವ್ಯಾಮೋಹವಿಲ್ಲದ
ಏಕೈಕ ಜಾತಿ ಎಂದರೆ ಅದು ಬ್ರಾಹ್ಮಣ ಜಾತಿ. ರಾವಣ ಮಹಾ ಬ್ರಾಹ್ಮಣ ನಾಗಿದ್ದರೂ ಬ್ರಾಹ್ಮಣರು ಅವನನ್ನು ತೊರೆದು ಕ್ಷತ್ರಿಯ ಶ್ರೀರಾಮನನ್ನು ಪೂಜಿಸಲಿಲ್ಲವೆ? ಬ್ರಾಹ್ಮಣರನ್ನು ಬೇರುಸಹಿತ ಕಿತ್ತುಹಾಕಬೇಕು ಎಂಬುದಾಗಿ ಬಿ.ಆರ್.ಅಂಬೇಡ್ಕರ್ ಹೇಳಿದ್ದರು ಎನ್ನಲಾಯಿತು.

ಇದೇ ಅಂಬೇಡ್ಕರ್ ಅವರಿಗೆ ಬೀಮರಾವ್ ಸತ್ಪಾಲನೆಂಬ ಹೆಸರಿನ ಬದಲಾಗಿ ಪ್ರೀತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಪುನರ್ ನಾಮಕರಣ ಮಾಡಿದವರು ಅವರ ಅಚ್ಚುಮೆಚ್ಚಿನ ಗುರುಗಳಾದ ಬ್ರಾಹ್ಮಣರೇ ಅಲ್ಲವೇ? ಭಾರತದ ಸಂವಿಧಾನ ರಚಿಸುವಾಗ ಅಂಬೇಡ್ಕರ್ ಸಮಿತಿಯ ಸದಸ್ಯರುಗಳಾದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯರ್, ಟಿ.ಟಿ. ಕೃಷ್ಣಮಾಚಾರಿ, ಮತ್ತು ಎನ್. ಮಾದವರಾಯರ ಸಹಾಯ ಸಹಯೋಗವನ್ನು ಪಡೆಯಲಿಲ್ಲವೇ? ಬ್ರಾಹ್ಮಣರಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಕಾರಣ, ಬ್ರಾಹ್ಮಣರ ಕೊಡುಗೆ ಅಂತಹದು.

ಭಾರತ- ಬ್ರಾಹ್ಮಣರು ಎಂದರೆ ಹೂರಣವಿಲ್ಲದ ಹೋಳಿಗೆಯಂತೆ, ಪರಿಮಳವಿಲ್ಲದ ಹೂವಿನಂತೆ. ಅಂದಮೇಲೆ ಬ್ರಾಹ್ಮಣರನ್ನು ಕಿತ್ತುಹಾಕಲು ಸಾಧ್ಯವೂ ಆಗದು. ಅದು ದೇಶದ ಹಿತದೃಷ್ಟಿಯಿಂದ ಸಾಧುವೂ ಅಲ್ಲ. ‘”you can take my bread, nMt my brain’ ಎಂಬಂತೆ ಹೆಚ್ಚೆಂದರೆ ಬ್ರಾಹ್ಮಣರಿಗೆ ನೀಡಬೇಕಾದ ಸವಲತ್ತು – ಸೌಲಭ್ಯಗಳನ್ನು ಕಿತ್ತುಹಾಕಬಹುದು. ಆದರೆ ಅವರ ಸ್ವಂತಿಕೆ ಬುದ್ಧಿವಂತಿಕೆಯನ್ನಲ್ಲ. ಬ್ರಾಹ್ಮಣರನ್ನು ಕಿತ್ತುಹಾಕಿದರೆ ಭಾರತದ ಸಂಸ್ಕೃತಿ ಎಂಬ ವೃಕ್ಷದ ಬೇರುಗಳನ್ನು ಕಿತ್ತು ಹಾಕಿದಂತೆ; ಅಂಥ ಮರ ಬಹಳ ಕಾಲ ಉಳಿಯದು, ಬಾಳದು.

‘ಬ್ರಾಹ್ಮಣರು ಬುದ್ಧಿವಂತರು, ಜ್ಞಾನ ಬರೀ ಬ್ರಾಹ್ಮಣರ ಸೊತ್ತಲ್ಲವೆಂದಿರಿ ಸ್ವಾಮಿ, ಜ್ಞಾನವನ್ನು ಯಾರೂ ಬೀಗಹಾಕಿ ಪೆಟ್ಟಿಗೆ ಯೊಳಗೆ ಇಟ್ಟುಕೊಂಡಿಲ್ಲ. ಎಲ್ಲರಿಗೂ ಜ್ಞಾನವಂತರಾಗುವ ಮುಕ್ತ ಅವಕಾಶವಿದೆ. ಆದರೆ ಕಠಿಣ ಪರಿಶ್ರಮ, ಪ್ರಯತ್ನಗಳಿಂದ, ಬ್ರಾಹ್ಮಣರು ಬುದ್ಧಿವಂತರಾಗಿದ್ದರೆ ಅಸೂಯೆಪಟ್ಟುಕೊಳ್ಳಬಾರದು. ಅವರನ್ನು ದ್ವೇಷಿಸಬಾರದು.

ಬ್ರಾಹ್ಮಣರು, ಅಲ್ಪಸಂಖ್ಯಾತರು ದೇಶದ ಹಿತದೃಷ್ಟಿಯಿಂದ ಕುಟುಂಬ ಯೋಜನೆಯನ್ನು ಪ್ರಾಮಾಣಿಕವಾಗಿ ಆಚರಿಸಿದವರು.
ಆದರೆ, ಇತರ ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತು – ಸೌಲಭ್ಯ ಇವರಿಗೆ ಸಿಗುತ್ತಿಲ್ಲ. ವ್ಯಕ್ತಿಯ ಅರ್ಹತೆ – ಯೋಗ್ಯತೆ, ಪ್ರತಿಭೆ – ಪಾಂಡಿತ್ಯಕ್ಕೆ ಅನುಸಾರವಾಗಿ ಸಿಗಬೇಕಾದ ಪ್ರವೇಶ -ಪದೋನ್ನತಿ, ಪ್ರಶಸ್ತಿ- ಪುರಸ್ಕಾರಗಳು, ನೇಮಕಾತಿಗಳು, ಸಿಗದಂತಾಗಲು ಬ್ರಾಹ್ಮಣರು ಮೌನವಾಗಿರುತ್ತಾರೆ. ಕಾರಣ ಅವರುಗಳು ನಂಬಿದ್ದು ಜಾತ್ಯಾಧಾರಿತ ವ್ಯವಸ್ಥೆಯನ್ನಲ್ಲ. ಯಾವ ಕ್ಷಣದಲ್ಲಾದರೂ ಹಾರಿಹೋಗಲು ಸಿದ್ಧವಾಗಿರುವ ತಮ್ಮ ಬಲಿಷ್ಠ ರೆಕ್ಕೆಗಳನ್ನು ಆದುದರಿಂದಲೇ ನಡೆಯುತ್ತಿರುವುದು  brain drain ಅಲ್ಲ; brahmin drain ! ಈ ಲಾಭವನ್ನು ಅರಿತ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದರು.

‘”ono the deserved be im usa ’ ಈಗಾದರೆ ಆಗುವ ನಷ್ಟ ಯಾರಿಗೆ? ದೇಶಕ್ಕಲ್ಲವೇ! ಜಾತ್ಯಾಧಾರಿತವಾಗಿ ಅಲ್ಲ, ವ್ಯಕ್ತಿಯ ಆರ್ಥಿಕ ಸ್ಥಿತಿಗನುಸಾರವಾಗಿ ( ಕಾರಣ ಬಡತನಕ್ಕೆ ಜಾತಿಯಿಲ್ಲ!) ಸಿಗಬೇಕಾದ ಮೀಸಲಾತಿಯು ಸಿಗದದಾಗ ಬ್ರಾಹ್ಮಣರು ಮೀಸಲಾತಿಗಾಗಿ ಹೊಡೆದಾಡಿದವರಲ್ಲ. ಮೀಸೆ ಇದ್ದವನಿಗೆ ಮೀಸಲಾತಿಯು ಬೇಕೆ? ( ಇಲ್ಲಿ ಮೀಸೆ ಎಂದರೆ ಪ್ರತಿಭೆ-ಪಾಂಡಿತ್ಯ ಎಂಬ ಅರ್ಥ) ಎಂಬ ದೋರಣೆಯಡಿ ತಮ್ಮ ಪರಿಶ್ರಮಗಳನ್ನು ಮುಂದುವರಿಸಿ ಬದುಕಿ ಬಾಳುತ್ತಿರುವವರು ಬ್ರಾಹ್ಮಣರು. ಮೀಸಲಾತಿ ಬಿಕ್ಷೆಯಲ್ಲ ಶೋಷಿತರ ಹಕ್ಕು ಎನ್ನುವವರಿಗೆ ಹಾಗಾದರೆ ಪ್ರತಿಭೆಗೆ ಯಾವ ರಕ್ಷೆ? ಪ್ರತಿಭೆಯ ಕೊಲೆಯಾದರೆ ದೇಶದ ಪ್ರಗತಿಯ ಕೊಲೆಯಾದಂತಲ್ಲವೇ ಎಂಬುದು ಮರು ಪ್ರಶ್ನೆ.

ಜಾತಿ-ಮತ-ಕುಲ-ಧರ್ಮ ಶಿಫಾರಸ್ಸುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಮೆರಿಟ್‌ಗೆ ಅನುಸಾರವಾಗಿ if you put the right person for the right job, success and progress in ensured  ಎಂಬುದು ಮಕ್ಕಳಿಗೂ ಗೊತ್ತಿರುವ ವಿಷಯ. ಮತ್ಯಾಕೆ ಬೇಕು ಈ ಜಾತಿ ಲೆಕ್ಕಾಚಾರ? ಜಾತಿನಿಂಧನೆಗಳು? ಎಲ್ಲರ ಹಾಗೆ ಬ್ರಾಹ್ಮಣರಿಗೂ ಅವರ ಜಾತಿ ಅವರ ಆಯ್ಕೆ ಅಲ್ಲವೇ? ಅವರ ಅಧೀನ ದಲ್ಲಿಲ್ಲದ ವಿಷಯವಲ್ಲವೇ? ಅಂದಮೇಲೆ ವ್ಯಕ್ತಿಯ ಪಾತ್ರವೇ ಇಲ್ಲದ ಈ ಜಾತಿ ಸಮಾಚಾರ, ಅಪಪ್ರಚಾರ ಒಂದು ಅಪಸ್ವರ, ಅಸಮಂಜಸ, ಅವೈಜ್ಞಾನಿಕವಲ್ಲವೇ? ರಾಜಕೀಯವಾಗಿ ಬ್ರಾಹ್ಮಣರು ಮತ ಬ್ಯಾಂಕ್‌ ಗಳಲ್ಲಿ ಇಲ್ಲದಿರಬಹುದು. ಆದರೆ ಸಂಖ್ಯೆ ಮುಖ್ಯವಲ್ಲ, ಸತ್ವ ಮುಖ್ಯವಲ್ಲವೇ? ಇಷ್ಟಾದರೂ ಎಲ್ಲರಿಗೂ ಬ್ರಾಹ್ಮಣರು ಬೇಕು – ಕರಿಬೇವಿನ ಸೊಪ್ಪಿನ ತರ.

people like succes but not a succesfull man ಎಂಬುದು ನಮಗೆ ಈಗ ಮನವರಿಕೆಯಾಗಿದೆ. ನಮಗೆ ಅರ್ಹತೆ ಇದ್ದರೂ ಅವಕಾಶವಿಲ್ಲ. ಪ್ರತಿಭೆ ಇದ್ದರೂ ಪ್ರೋತ್ಸಾಹವಿಲ್ಲ. ಪರಿಶ್ರಮಪಟ್ಟರೂ ಪ್ರತಿಫಲವಿಲ್ಲ. ಯೋಗ್ಯತೆ ಇದ್ದರೂ ಯೋಗ ಇಲ್ಲ. ಜಾತಿ ಬಲ, ಜನ ಬಲ, ಧನ ಬಲ, ಸಂಖ್ಯಾ ಬಲ, ಅಧಿಕಾರ ಬಲ ನಮ್ಮದಲ್ಲ! ಆದರೆ ಯಾರೂ ಕಸಿದುಕೊಳ್ಳಲಾಗದ, ಕಿತ್ತುಕೊಳ್ಳಲಾಗದ ಬುದ್ಧಿಬಲವಿದೆ. ಸಾಕುಬಿಡಿ ಬದುಕಿಕೊಂಡೆವು.

ಬ್ರಾಹ್ಮಣರೆಂದರೆ ಹೂವಿನೊಳಗಿನ ಮಕರಂದವಿದ್ದಂತೆ. ಮಕರಂದವನ್ನು ಹುಡುಕಿಕೊಂಡು ದುಂಬಿಗಳು ಬರಬೇಕೆ ಹೊರತು, ದುಂಬಿಗಳನ್ನು  ಹುಡುಕಿಕೊಂಡು ಹೂವುಗಳು ಹೋಗವು. ಸೂಕ್ತ ಸಮಯ ಬಂದಾಗಲೆಲ್ಲ ನಮ್ಮ ಪ್ರತಿಭೆ ಅನಾವರಣ ಗೊಳ್ಳುತ್ತದೆ ಎಂಬ ಭರವಸೆ ನಮಗಿದೆ.