Sunday, 15th December 2024

ಜಾತಿಗಣತಿಗೆ ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸುವೆ : ಹೆಗ್ಡೆ

ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಾತಿಗಣತಿಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೇ ಒಬಿಸಿ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅವರು, ಗುರುವಾರ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ಒಬಿಸಿ ಆಯೋಗದ ಮುಂದಿನ ದಿನದ ಯೋಜನೆ ಗಳು, ಜಾತಿ ಗಣತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ನಿರ್ಣಯ, ಈ ಹಿಂದಿನ ಅಧ್ಯಕ್ಷರು ನೀಡಿರುವ ವರದಿಗಳನ್ನು ಅನು ಷ್ಠಾನಗೊಳಿಸುವ ನಿಟ್ಟಿನಲ್ಲಿ ಯಾವ ರೀತಿಯ ಯೋಜನೆ ರೂಪಿಸಿದ್ದಾರೆ ಎನ್ನುವ ಬಗ್ಗೆೆ ಮಾತನಾಡಿದರು.

ಸಂದರ್ಶನ ಪೂರ್ಣಪಾಠ ಇಲ್ಲಿದೆ.
ನಿಮ್ಮ ಮುಂದಿರುವ ಸವಾಲು ಏನು?
ನಾನು ಆಯೋಗದ ಅಧ್ಯಕ್ಷನಾಗಿ ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಆದ್ದರಿಂದ ಆಯೋಗದಲ್ಲಿ ಏನಾಗಿದೆ ಎನ್ನುವ ಬಗ್ಗೆ ಸುವಿಸ್ತರವಾಗಿ ನೋಡಬೇಕಿದೆ. ಇದರೊಂದಿಗೆ ಈ ಹಿಂದೆ ಅಧ್ಯಕ್ಷರಾದವರು ಯಾವ ಯಾವ ವರದಿಗಳನ್ನು ನೀಡಿದ್ದಾರೆ? ಅವು
ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಅಧ್ಯಯನ ಮಾಡಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಆಯೋಗದ ಅಧ್ಯಕ್ಷನಾಗಿ ನನ್ನ ಮುಂದಿರುವ ಸವಾಲುಗಳೇನು ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.

ಜಾತಿ ಗಣತಿಗೆ ತಾರ್ತಿಕ ಅಂತ್ಯ ಕಾಣಿಸುತ್ತಿಲ್ಲ ಎನ್ನುವ ಮಾತಿದೆಯಲ್ಲ?
ಜಾತಿ ಗಣತಿ ವರದಿಯ ಬಗ್ಗೆ ಅಧ್ಯಯನ ಮಾಡಿ ವರದಿಯ ತಾರ್ಕಿಕ ಅಂತ್ಯಕ್ಕೆ ಪ್ರಯತ್ನಿಸುತ್ತೇನೆ. ಜಾತಿ ಗಣತಿಯನ್ನು 160 ಕೋಟಿ ರು. ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಅಧ್ಯಯನ ಮಾಡಿ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.
ಜಾತಿ ಗಣತಿ ವರದಿಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ. ಈ ಎಲ್ಲದಕ್ಕೂ ಈ ಬಗ್ಗೆ ಅಧ್ಯಯನ ಮುಖ್ಯವಾಗುತ್ತದೆ. ಆದ್ದರಿಂದ ಹಿಂದಿನ ಅಧ್ಯಕ್ಷರು ನೀಡಿರುವ ವರದಿಯಲ್ಲಿ ಏನಿದೆ? ಈ ವರದಿಯಿಂದ ಆಗಬಹುದಾದ
ಸಾಧಕ-ಬಾಧಕದ ಬಗ್ಗೆೆ ಚರ್ಚಿಸಿ ಸಲ್ಲಿಸುವ ಬಗ್ಗೆೆ ತೀರ್ಮಾನಿಸಲಾಗುವುದು.

ಜಾತಿ ಗಣತಿ ವರದಿಯನ್ನು ಯಾವ ರೀತಿ ಮುಂದುವರೆಸುವಿರಿ?
ಹಿಂದುಳಿದ ಆಯೋಗದಿಂದ ಜಾತಿ ಗಣತಿ ಪೂರೈಸಲಾಗಿದೆ. ಪ್ರತಿಪಕ್ಷದ ನಾಯಕರು ಮಾತ್ರವಲ್ಲದೇ, ಬಿಜೆಪಿಯ ಕೆಲ ಸಚಿವರು ಈ ವರದಿ ಜಾರಿಯಾಗಬೇಕು ಎನ್ನುವ ಅಭಿಪ್ರಾಯವನ್ನು ಕೆಲ ದಿನಗಳ ಹಿಂದೆ ಹೊರಹಾಕಿದ್ದಾರೆ. ಆದ್ದರಿಂದ ಈ ವರದಿಯನ್ನು ಅವಲೋಕಿಸಿ, ಸರಕಾರಕ್ಕೆ ಜಾತಿ ಗಣತಿಯನ್ನು ಸ್ವೀಕರಿಸುವಂತೆ ಶಿಫಾರಸು ಮಾಡಲಾಗುವುದು. ವರದಿಯನ್ನು ಒಪ್ಪುವುದು ಅಥವಾ ಬಿಡುವುದು ಸರಕಾರದ ವಿವೇಚನೆಗೆ ಬಿಟ್ಟ ವಿಷಯ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ.

ಬಿಜೆಪಿಯಲ್ಲಿಯೇ ಈ ಬಗ್ಗೆ ಅಪಸ್ವರವಿದೆಯಲ್ಲ?
ಜಾತಿ ಗಣತಿಯನ್ನು ನಾನು ಆಯೋಗದ ಅಧ್ಯಕ್ಷನಾಗಿ ನೋಡಬಹುದು ಹೊರತು, ರಾಜಕೀಯವಾಗಿ ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ. ಆದರೆ ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು ಈ ವರದಿ ಮಂಡನೆಯಾಗಿ, ಅದರಲ್ಲಿರುವ ಅಂಶಗಳನ್ನು ಪರಿಗಣಿಸಬೇಕು ಎನ್ನುವ ಮಾತು ಗಳನ್ನು ಆಡಿದ್ದಾರೆ. ಆದ್ದರಿಂದ ಏನಾಗಲಿದೆ ಎನ್ನುವುದನ್ನು ಈಗಲೇ ನಿರ್ಧರಿಸುವ ಮೊದಲು, ವರದಿಯಲ್ಲಿ ಏನಿದೆ ಎನ್ನುವು ದನ್ನು ಅಧ್ಯಯನ ಮಾಡಿ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ.

ಯಾವ ಗುರಿಗಳನ್ನು ಹಾಕಿಕೊಂಡಿರುವಿರಿ?
ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆಂದು ಸ್ಥಾಪಿತಗೊಂಡಿರುವ ಈ ಆಯೋಗದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಕೆಲ ದಿನಗಳು ಕಳೆದಿವೆ. ಸ್ವಾಯತ್ತ ಸಂಸ್ಥೆಯಾಗಿರುವ ಈ ಆಯೋಗದಿಂದ ಒಬಿಪಿ ಸಮುದಾಯಕ್ಕೆ ಯಾವ ರೀತಿಯ ನೆರವು ನೀಡಲು
ಸಾಧ್ಯವೋ ಅದನ್ನು ಮಾಡಲಾಗುವುದು. ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಆದ್ಯತೆ ನೀಡಲಾಗುವುದು. ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಯಾವ ಕೆಲಸವನ್ನು ಆದ್ಯತೆಯಲ್ಲಿ ಮಾಡಬೇಕು ಎನ್ನುವ ಚಿತ್ರಣ ಸಿಗಲಿದೆ.

ಒಬಿಸಿಗೆ ಸೇರಲು ಹಲವು ಜಾತಿಗಳು ಸಜ್ಜಾಗಿವೆಯಲ್ಲ?
ವಿವಿಧ ಸಮುದಾಯಗಳು ಈಗಾಗಲೇ ಹಿಂದುಳಿದ ವರ್ಗಕ್ಕೆ ತಮ್ಮನ್ನು ಸೇರಿಸಬೇಕು ಎಂದು ಮನವಿ ಸಲ್ಲಿಸಿವೆ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅನೇಕರು ಅರ್ಜಿ ಸಲ್ಲಿಸಿದ್ದು, ನಾನು ಅಧಿಕಾರ ಸ್ವೀಕರಿಸಿದ ಬಳಿಕವೂ ಅನೇಕರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಾನೂನಾತ್ಮಕವಾಗಿ ಯಾರಿಗೆಲ್ಲ ಹಿಂದುಳಿದ ವರ್ಗಗಳ ಸ್ಥಾನಮಾನ ನೀಡಲು ಸಾಧ್ಯವೋ ಅವರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡು.