Friday, 20th September 2024

ಜೀವನದ ಗೆಲುವಿಗೆ ನಾಲ್ಕು ದಿನ, ನಾಲ್ಕು ಸೂತ್ರ

ಪರಿಶ್ರಮ

ಪ್ರದೀಪ್ ಈಶ್ವರ‍್

parishramamd@gmail.com

ಜಾಸ್ತಿ ಚಿಂತಿಸಬೇಡಿ, ನಿಮ್ಮ ಯಶಸ್ಸನ್ನು ಸಹಿಸದೇ ನಿಮ್ಮ ಬೆಳವಣಿಗೆಯನ್ನು ನೋಡಲಾಗದೇ ಕೆಲವು ವಿಕೃತ ಮನಸ್ಸುಗಳು ನಿಮ್ಮ ವಿರುದ್ಧ ಒಳಸಂಚು ರೂಪಿಸಿರುತ್ತಾರೆ. ನಿನ್ನ ಹೃದಯಕ್ಕೆ ಸರಿ ಅಂತ ಅನಿಸಿದ್ದನ್ನ ಮಾಡು. ಬೊಗಳುವವರು ಬೊಗಳ್ತಾನೆ ಇರ್ತಾರೆ. ಸಕಾರಾತ್ಮಕ ವಿಮರ್ಶೆಗೆ ಒಳಪಟ್ಟಾಗ ಮಾತ್ರ ನಿನ್ನ ವ್ಯಕ್ತಿತ್ವಗಟ್ಟಿಯಾಗೋದು.

ಬೇಸರದ ನೆನಪುಗಳಿಗೆ ಗುಡ್ ಬೈ ಹೇಳಿ, ಭರವಸೆಯ ಕ್ಷಣಗಳಿಗೆ welcome ಕೊಡುವ ಹೊಸವರ್ಷದ ಹೊಸ್ತಿಲಲ್ಲಿ, ಈ ವರ್ಷ ಬದಲಾ ದರು ತೀರ್ಮಾನಗಳು ಬದಲಾಗದಿದ್ದರೇ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ, ನಾಲ್ಕು ದಿಕ್ಕುಗಳಿರುವ ಸೃಷ್ಟಿಯಲ್ಲಿ ಗೆಲಲ್ಲು ನಾಲ್ಕು ಸೂತ್ರಗಳು……..

೧. ಇದ್ದು ಇಲ್ಲದಂತಾಗಬಾರದು ಜೀವನ
೨. ಸೋತರು – ಆದರೂ ಗೆದ್ದವರು
೩. ಕಳೆದುಕೊಂಡಿದ್ದು ಕೆಲಸ, ಆತ್ಮ ವಿಶ್ವಾಸವಲ್ಲ.
೪. ಮನಸ್ಸಿದ್ದರೆ ಮಾರ್ಗ ಅದೇ ಸೃಷ್ಟಿಯಾಗುತ್ತದೆ

೧. ಇದ್ದು ಇಲ್ಲದಂತಾಗಬಾರದು ಜೀವನ: ಎಲ್ಲವೂ ಇದ್ದರೂ ಏನೂ ಇಲ್ಲದಂತೆ ವ್ಯಥೆ ಪಡುವ ತಲೆಮಾರಿನಲ್ಲಿ, ಬೇಕಾಗಿರುವಷ್ಟು ಇದ್ದರೂ ಸಾಕಷ್ಟು ತ್ಯಾಗ ಮಾಡಿದ ವರಂತೆ ಬಿಲ್ಡಪ್ ಕೊಡುವ ಜನರ ನಡುವೆ ಬದುಕಲು ತುಂಬಾ ಕಷ್ಟ.

ಕಲಿತ ಶಾಲೆಯ ಗುರುಗಳು ಇವತ್ತಿಗೂ ಇದ್ದಾರೆ, ಹೋಗಿ ಮಾತನಾಡಿ ಬರಲು ಪುರುಸೊತ್ತೇ ಇಲ್ಲ. ಅಂಗಡಿಯಲ್ಲಿ ಮಿಠಾಯಿಗಳು ಈಗಲೂ ಇವೇ, ಚಪ್ಪರಿಸಿ ತಿನ್ನಲು ಬಾಲ್ಯದ ಸ್ನೇಹಿತರಿಲ್ಲ. ಅಂಚೆ ಕಚೇರಿಗಳು ಇವತ್ತಿಗೂ ಇವೆ, ಕಾಗದ ಬರೆಯಲು ಮೊಬೈಲ್‌ಗಳು ಬಿಡುತ್ತಿಲ್ಲ. ಕಾದಂಬರಿ ಪುಸ್ತಕಗಳು ಕಪಾಟುಗಳಲ್ಲಿ ಇನ್ನೂ ಇವೆ, ತೆರೆದು ಓದುವಷ್ಟು ಸಮಯವನ್ನ ಟಿವಿ ಮಾಡಿಕೊಡುತ್ತಿಲ್ಲ.

ಹಕ್ಕಿಗಳು ಇಂದಿಗೂ ಹಾಡುತ್ತಿದೆ, ಕೂತು ಹಾಲಿಸುವ ವ್ಯವದಾನವೇ ಇಲ್ಲ. ಬಾನಲ್ಲಿ ನಕ್ಷತ್ರಗಳು ಇಂದಿಗೂ ಇವೆ, ಕುಳಿತು ಲೆಕ್ಕ ಹಾಕುವು ದಕ್ಕೆ ಸಮಯವೇ ಇಲ್ಲ. ಸಂಬಂಧ, ಭಾಂದವ್ಯಗಳು ಇವತ್ತಿಗೂ ಇವೆ, ನಿಭಾಯಿಸಲು ಅಹಂ ಬಿಡುತ್ತಿಲ್ಲ. ಬಾಲ್ಯದಲ್ಲಿದ್ದಂತೆ ಸಾಧಾರಣ ವಾಗಿ ಬದುಕಲು ಇವತ್ತಿಗೂ ಆಸೆ ಇದೆ, ಆದರೆ ಪರರ ಶ್ರೀಮಂತಿಕೆ ಹಾಗಿರಲು ಬಿಡುತ್ತಿಲ್ಲ.

ಬೆಳದಿಂಗಳ ರಾತ್ರಿ ಇಂದಿಗೂ ಇದೆ, ಕುಳಿತು ನೋಡುವ ಸಮಯವೇ ಇಲ್ಲ. ಅಮ್ಮನ ಕೈ ತುತ್ತು, ಅಪ್ಪನ ಗದರಿಕೆ, ಅಜ್ಜಿಯ ಪ್ರೀತಿ, ಅಜ್ಜನ ಕೆಮ್ಮು, ದೊಡ್ಡಪ್ಪನ ಠೀವಿ, ಚಿಕ್ಕಪ್ಪನ ಸ್ನೇಹಭಾವ, ಮಾವನ ಭಯ, ಅತ್ತೆಯ ಹಾರೈಕೆ, ಚಿಕ್ಕಮ್ಮನ ಮುದ್ದು, ಓರಗೆವರೊಂದಿಗಿನ
ಒಡನಾಟ ಎಲ್ಲವೂ ಇದೆ, ಆದರೆ ನಿಭಾಯಿಸುವುದಕ್ಕೆ ವ್ಯವದಾನವೇ ಇಲ್ಲ. ಕೋಟ್ಯಂತರ ರೂಪಾಯಿ ದುಡ್ಡು, ಹತ್ತಾರು ಕಾರುಗಳು, ಲೆಕ್ಕವಿಲ್ಲದಷ್ಟು ಬಂಗಲೆಗಳಿವೆ, ಆದರೆ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯ ಹೊರಗಿರುವವರು ಹೆಂಡತಿ, ಮಕ್ಕಳು, ಅಪ್ಪ, ಅಮ್ಮ ಮಾತ್ರ ಹಾಗಾಗಿ ಕುಟುಂಬಕ್ಕೂ ಒಂದಷ್ಟು ಸಮಯ ಕೊಡಿ.

೨. ಸೋತರು – ಆದರೂ ಗೆದ್ದವರು: ಬಹಳಷ್ಟು ಮಂದಿ ಸೋಲ್ತಾರೆ, ಸೋತ ನಂತರವು ಗೆಲುವಿನ ಕಡೆ ನಡೆಯುವ ಬಯಕೆ, ಅಸೆ ಎಲ್ಲರಿಗೂ ಇರುತ್ತೆ, ಕೆಲವೇ ಕೆಲವರು ಮಾತ್ರ ಸೋತ ನಂತರವೂ ಗೆಲ್ತಾರೆ. ಸಹಿಸಿಕೊಂಡರೆ ಗೆಲುವು ಸಾಧ್ಯವೆಂದು ಮಾತಾಡ್ತಾರೆ.
ಕಷ್ಟದಲ್ಲಿ ಬೆಳೆದು ಹುಡುಗಿಯ ನೋವು, ಯಾತನೆ, ಅನುಭವಿಸುವ ಕಷ್ಟ ಏನೆಂದು ಈಕೆಯ ಕಥೆ ಕೇಳಿದರೆ ಅರ್ಥವಾಗುತ್ತೆ.

ಅವಳ ಹೆಸರು ವಿನ್ – ಓಪ್ರ. ತನ್ನ 9 ನೇ ವಯಸ್ಸಿನ ಚಿಕ್ಕಪ್ಪರಿಂದ, ಸಹೋದರರಿಂದ, ಸ್ನೇಹಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾ ದವಳು, ಅವಳ 14ನೇ ವಯಸ್ಸಿಗೆ ಗರ್ಭವತಿಯಾದಳು, ಪರಿಣಾಮ ಗಂಡು ಮಗುವಿಗೆ ಜನ್ಮಕೊಟ್ಟಳು. ಹದಿಹರೆಯದ ವಯಸ್ಸಿನಲ್ಲಿ ಜನ್ಮಕೊಟ್ಟ ಕಾರಣ ಹುಟ್ಟಿದ ಮಗು ಸಾವನ್ನಪ್ಪಿತು.

14ನೇ ವಯಸ್ಸಿಗೆ ಪಡ ಬಾರದ ಕಷ್ಟಪಟ್ಟು ಬೆಳೆದ ಹುಡುಗಿ ನಂತರ ಅನ್ನಕ್ಕಾಗಿ ಊರೂರು ಅಲೆದಳು, ಬದುಕನ್ನ ಸಾಗಿಸಲು ಹರ ಸಾಹಸ ಪಟ್ಟಳು. ಸ್ಥಳೀಯ ಸುದ್ದಿವಾಹಿಯಲ್ಲಿ ಕಷ್ಟಪಟ್ಟ ಕೆಲಸ ಗಿಟ್ಟಿಸಿದಳು. ಅವಳಂದು ಕೊಂಡಂತೆ ಕೆಲಸವಿರಲಿಲ್ಲ ಸುದ್ದಿ ವಾಹಿನಿಯ ಮುಖ್ಯಸ್ಥರು ಒಮ್ಮೆ ಓಪ್ರಳನ್ನ ಕರೆದು, ನೀನು ಸುದ್ದಿವಾಹಿನಿಗೆ ಕೆಲಸಕ್ಕೆ ಬರಲ್ಲ You are unfit for television ಅಂತ ಬೈದು ಕೆಲಸ ದಿಂದ ತೆಗೆದು ಹಾಕಿದರು.

ಸಹಿಸಲಾಗದಷ್ಟು ಅವಮಾನವಾದರೂ ಛಲ ಬಿಡಲಿಲ್ಲ. ಚಿಕಾಗೋ ನಗರಕ್ಕೆ ಬಂದು ರೇಟಿಂಗ್ಸ್ ಇಲ್ಲದ Am chickago ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದಳು. ಕೆಲವೇ ಕೆಲವು ದಿನಗಳು ಅಮೆರಿಕದ ನಂಬರ್ ಒನ್ Show ಆಗಿ ಪ್ರಸಿದ್ಧಿಯಾಯಿತು. ನಂತರ ಶೋ ಗೆ The Oprah Winfrey Show ಎಂದು ಮರುನಾಮಕರಣ ಮಾಡಲಾಯಿತು. ಇವತ್ತು ಅಮೆರಿಕದಲ್ಲಿ ಮನೆ ಮಾತಾಗಿದ್ದಾಳೆ ಓಪ್ರಾ.

ಬಾಲ್ಯದಲ್ಲಿ ಅತ್ಯಾಚಾರಕ್ಕೊಳಗಾಗಿ, ಹದಿಹರೆಯದ ವಯಸ್ಸಿನ ಲೈಂಗಿಕ ದೌರ್ಜನ್ಯಕ್ಕೊಳಪಟ್ಟಳು, ಆದ ಕರಾಳ ಅನುಭವಗಳನ್ನ ನುಂಗಿಕೊಂಡು ಗೆಲುವಿನ ಕಡೆ ಏಕಾಗ್ರತೆ ಗಳಿಸಿದಳು. ಮಧ್ಯಮ ವರ್ಗದ ಹುಡುಗಿಯರು ಯಾರಿಗೇನು ಕಮ್ಮಿ ಇಲ್ಲ ಅಂತ ತೋರಿಸಿ ಕೊಟ್ಟವಳು, ಕಳೆದುಹೋದ ಕೆಟ್ಟದಿನಗಳಿಂದ ಮುಂದೆ ಬರುವ ಅದ್ಭುತ ಕ್ಷಣಗಳೇ ಮುಖ್ಯವೆಂದು ಬದುಕಿದ್ದ ವಿನ್ ಪ್ರೇ ನಿಜಕ್ಕೂ
ಛಲಗಾತಿ.

೩. ಕಳೆದುಕೊಂಡಿದ್ದು ಕೆಲಸ, ಆತ್ಮ ವಿಶ್ವಾಸವಲ್ಲ: ಅಭದ್ರತೆ ಭಾವ ಯುವಕರನ್ನು ಅನುಕ್ಷಣ ಕಾಡುತ್ತಿರುತ್ತದೆ. ಕೆಲಸ ಕಳೆದುಕೊಂಡರೆ ಸಾಕು ಬದುಕು ಸಾಗಿಸೋದೇ ಕಷ್ಟ, ಲೈಫ್ ಮುಗಿದೇ ಹೊಯ್ತು ಅಂತ ಬಾಯಿ ಬಾಯಿ ಬಡ್ಕೋತಾರೆ.

ಪ್ರೀತಿಯ ಯುವಕರೇ ನಿಮಗೊಂದು ಬಹಿರಂಗ ಪ್ರಶ್ನೆ. ನಿಮಗೆ ಜನ್ಮ ಕೊಡುವಾಗ ನಿಮ್ಮ ತಂದೆ ಅವನ್ಯಾರೋ ನಿನಗೆ ಕೆಲಸ ಕೊಡ್ತಾನೆ, ನೀನು ಉದ್ದಾರ ಆಗ್ತಿಯ ಅಂತ ಜನ್ಮ ಕೊಟ್ಟಿರಲ್ಲ. ನಿನ್ನ ಕಾಲ್ ಮೇಲೆ ನೀನ್ ನಿಂತ್ಕೊಂಡ್ ಬದುಕ್ತಿಯ ಅಂತ ನಿನ್ನ ಭೂಮಿಗೆ ತಂದಿ
ರ್ತಾರೆ. ಜಗತ್ತಲ್ಲಿ ಯಾವುದು ಶಾಶ್ವತವಲ್ಲ. ಬದಲಾವಣೆ ಅನಿವಾರ್ಯ. ಕಳೆದುಕೊಂಡ ಕೆಲಸದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಕೆಲಸ ಕೊಟ್ಟವರನ್ನ ನಿಂದಿಸಬೇಡಿ. ಅನ್ನ ಇಟ್ಟವರು, ಅಕ್ಷರ ಕಲಿಸಿದವರು, ಬದುಕಲು ಪ್ರೇರಣೆ ನೀಡಿದವರು ದೇವರಷ್ಟೇ ಶ್ರೇಷ್ಠರು.

ವಿಶ್ವಾಸದ ಕೊರತೆ ಯಿಂದಲೋ, ಮಧ್ಯವರ್ತಿಗಳ ಕುತಂತ್ರದಿಂದಲೋ ಕೆಲಸ ಹೋಗಿರುತ್ತೆ ಧೈರ್ಯವಾಗಿರಿ. ಜಾಸ್ತಿ ಚಿಂತಿಸಬೇಡಿ, ನಿಮ್ಮ ಯಶಸ್ಸನ್ನು ಸಹಿಸದೇ ನಿಮ್ಮ ಬೆಳವಣಿಗೆಯನ್ನು ನೋಡಲಾಗದೇ ಕೆಲವು ವಿಕೃತ ಮನಸ್ಸುಗಳು ನಿಮ್ಮ ವಿರುದ್ಧ ಒಳಸಂಚು ರೂಪಿಸಿರುತ್ತಾರೆ.

Don’t worry ಬಾಹುಬಲಿಯಾಗಲು ಹೊರಟ ಪ್ರತಿಯೊಬ್ಬನ ಜೀವನದಲ್ಲಿ ಬಳ ದೇವನಂಥ Villainಇದ್ದೇ ಇರ್ತಾರೆ. ವಿಮರ್ಶೆಗಳು ಗಟ್ಟಿಯಾಗಿ ಇದ್ದಾಗಲೇ ನಿನ್ನ ಯಶಸ್ಸು ಜಗತ್ತಿಗೆ ಕೇಳಿಸೋದು. ನಿನ್ನ ಹೃದಯಕ್ಕೆ ಸರಿ ಅಂತ ಅನಿಸಿದ್ದನ್ನ ಮಾಡು. ಬೊಗಳುವವರು ಬೊಗಳ್ತಾನೆ ಇರ್ತಾರೆ. ಸಕಾರಾತ್ಮಕ ವಿಮರ್ಶೆಗೆ ಒಳಪಟ್ಟಾಗ ಮಾತ್ರ ನಿನ್ನ ವ್ಯಕ್ತಿತ್ವಗಟ್ಟಿಯಾಗೋದು.

ಒಂದು ನೆನಪಿಡಿ ಚರಿತ್ರೆಯ ಪುಟಗಳನ್ನ ತೆರೆದು ನೋಡಿ, ಬೈದವನು ಅಡ್ರೆಸ್ ಗಿಲ್ಲದಂತೆ ಮರೆಯಾಗ್ತಾನೆ, ಬೈಸಿಕೊಂಡವನು ಚರಿತ್ರೆಯಲ್ಲಿ ಪಾಠವಾಗಿರ್ತಾನೆ. ವಿಮರ್ಶಕರನ್ನ ಗೌರವಿಸೋಣ, ವಿನಾಕಾರಣ ಟೀಕೆ ಮಾಡುವ ವಿಕೃತ ಮನಸ್ಸುಗಳಿಗೆ ಪಾಠ ಕಲಿಸೋಣ.

೪. ಮನಸ್ಸಿದ್ದರೆ ಮಾರ್ಗ ಅದೇ ಸೃಷ್ಟಿಯಾಗುತ್ತದೆ: ಜೀವನದಲ್ಲಿ ಏನೋ ಸಾಧಿಸಬೇಕು, ನಾಲ್ಕು ಜನ ಮೆಚ್ಚುವಂತೆ ಬದುಕಬೇಕು, ಸೋತ ಕಡೆಯೇ ಬದುಕಿ ತೋರಿಸಬೇಕು, ಒಂದಲ್ಲ ಒಂದು ದಿನ ಈ ಜಗತ್ತಿಗೆ ನಾನೇ ನೆಂದು ತೋರಿಸದೇ ಇರ್ತೇನಾ ಎನ್ನುವ ಪ್ರಶ್ನೆಗಳು ಪ್ರತಿ ಯುವಕ ಯುವತಿಯಾರನ್ನ ಬಿಡದಂತೆ ಕಾಡುತ್ತಿರುತ್ತದೆ.

ಚಿಕ್ಕ ಗೆಲುವು ದೊಡ್ಡ ಸೋಲಿನ ಕಳೆದು ಹೋದ ಹೈಸ್ಕೂಲ್ ದಿನಗಳು. ಅರ್ಥವಾಗುವ ಮುನ್ನವೇ ಮುಗಿದು ಹೋದ ಪಿಯುಸಿ ಕ್ಷಣಗಳು. ಇನ್ಮೇಲಾದ್ರೂ ನೆಟ್ಟಗೆ ಓದೋಣ ಅಂತ ಅಂದುಕೊಂಡರೆ, ಕೈ ಬೀಸಿ ಕರೆಯುವ ಡಿಗ್ರಿಯ ಮಧುರ ಯಾತನೆಗಳು. ಅರ್ಥ ವಾಗದ
ಪ್ರೀತಿಯ ಸೆಳೆತಳು, ಕಾಡುವ ಒಂಟಿತನದ ಕ್ಷಣಗಳು.

ಎಲ್ಲವೂ ಇದ್ದು ಏನೂ ಇಲ್ಲದಂತೆ ಪರಿತಪಿಸುವ ನಮ್ಮ ಮನ ಸ್ಥಿತಿಗಳು. ಚದುರದ ಏಕಾಗ್ರತೆ , ನಿಚ್ಚಳವಾದ ನಂಬಿಕೆ ಪಡೆಯಬೇಕೆಂದು ಎಷ್ಟು ಪ್ರಯತ್ನಪಟ್ಟರು ಬಹಳಷ್ಟು ಯುವಕ ಯುವತಿಯರ ಕೈಯಲ್ಲಿ ಆಗುತ್ತಿಲ್ಲ. ಸಹನೆಯಿಂದ ಕಂಡರೂ ಮನಸ್ಸಿನಲ್ಲಿ ನೂರು ಘರ್ಷ
ಣೆಗಳು. ಸಾವಿರ ಗೊಂದಲಗಳು ಹೇಳಿಕೊಳ್ಳಲಾಗದ ಚಡ ಪಡಿಕೆ. ಜಿಯೋ ಸಿಮ್‌ನಂತೆ ಸೆಳೆಯುವ ಸೆಳೆತಗಳು. ಬಿಗ್ ಬಾಸ್‌ನಂತೆ ಪ್ರತಿದಿನ ಬಿಡದೆ ಕಾಡುವ ರೋಮಾಂಚನವಾದ ನೆನಪುಗಳು.

ಜಗತ್ತು ಬದಲಾದರೂ ಮನಸ್ಥಿತಿಗಳು ಬದಲಾಗುತಿಲ್ಲ. ರೇಡಿಯೋ ಇಂದ ಎಫ್ಎಂಗೆ ಟ್ರೆಂಡ್ ಚೇಂಜ್ ಆದರೂ, ಪತ್ರದಿಂದ ಫೇಸ್ ಬುಕ್‌ಗೆ ಪಯಣ ಸಾಗಿದರು, ಸಂಜೆ ತಿನ್ನುವ ಚಾಟ್ಸ್‌ನಿಂದ ಚಾಟಿಂಗ್‌ವರೆಗೂ ಜಮಾನ ಬದಲಾಗಿದೆ. ಆಕರ್ಷಣೆ ವಿಕರ್ಷಣೆಯ ಮಧ್ಯೆ ನಮ್ಮ ಜನರೇಷನ್ ಎತ್ತ ಸಾಗುತ್ತಿದೆ ಎಂಬ ಗೊಂದಲದ ನಡುವೆಯೇ ನನ್ನ ಅಕ್ಷರ ಯಾತ್ರೆ ಯನ್ನ ಮುಂದುವರಿಸುತ್ತಿದ್ದೀನಿ.

ಹೈಸ್ಕೂಲಿನ ಕಾಲೇಜಿನ ಬಹಳಷ್ಟು ಜನ ಪ್ರೀತಿಗೆ ಫಿದಾ ಆಗಿರ್ತಾರೆ. ಕ್ಲಾರಿಟಿ ಇಲ್ಲದ ವಯಸ್ಸಿನ ಕನ್ಯೂಷನ್ ಜತೆ ಸ್ನೇಹ ಬೆಳೆಸಿರುತ್ತೀರ. ಹೆತ್ತವರ ಹೆಸರು ಉಳಿಸಬೇಕು, ಅಪ್ಪನನ್ನ Hurt ಮಾಡಬಾರದು, ಅಮ್ಮನ ಕಣ್ಣಲ್ಲಿ ಕಣ್ಣೀರು ನೋಡಬಾರದು ಎನ್ನುವ ದೃಢ ಸಂಕಲ್ಪ
ವಿದ್ದರೂ ಪ್ರೀತಿ ಎಂಬ ಅಂತ್ಯವಿಲ್ಲದ ಪಯಣಕ್ಕೆ ಟೇಪ್ ಕಟ್ ಮಾಡಿರ್ತಿರ. ಗೆಳತಿಯ ನಗುವನ್ನ ಮರೆಯಲಾಗದೆ, ಗೆಳೆಯನ ಸ್ಮೈಲ್ ಅನ್ನು ಮರೆಯಲಾಗದೆ  Dedication  ಕಲಿಯಬೇಕಾದ ಸಮಯದಲ್ಲಿ ಡಿಪ್ರೆಷನ್ ಗೆ ಇನ್ವಿಟೇಷನ್ ಕೊಟ್ಟಿರುತ್ತೀರಿ.

ಪ್ರತಿದಿನ ಬೇಸರ ಹತಾಶೆ ನಡುವೆ ಪ್ರೀತಿಯ ಸೆಳೆತವನ್ನ ಸೆಲ್ ಫೋನ್ ನಂತೆ Maintain ಮಾಡ್ತಿರ್ತಿರಾ. ಓದಲೇ ಬೇಕೆಂಬ ಬಯಕೆ ಪ್ರತಿದಿನ ಬಂದರೂ ಪರೀಕ್ಷೆಯ ಹಿಂದಿನ ದಿನವೇ ಓದುವ, ಒಂದು ದಿನ ಓದಿ ಯಶಸ್ಸು ಸಿಕ್ಕಿಬಿಡ ಲೆಂದು ಬಯಸುವ ನಮ್ಮ ತಲೆಮಾರಿನ ಹಣೆಬರಹವನ್ನ ಊಹಿಸಲೂ ಕಷ್ಟ. ಬರೆದ ಬ್ರಹ್ಮನಿಗೂ ಕನ್ಯೂಸ್ ಮಾಡುವ ಮಟ್ಟಕ್ಕೆ ನಾವು ಬೆಳೆದು ನಿಂತಿದ್ದೀವಿ. ಮತ್ತಷ್ಟು
ವಿಚಾರಗಳು ಆನ್ ಇಂಟ್ರಸ್ಟಿಂಗ್ .