Saturday, 5th October 2024

ಸೋಲಿಗೂ ಮರ‍್ಯಾದೆಯಿದೆ, ಅದು ಗೊತ್ತಾಗುವುದು ಗೆದ್ದಾಗಲೇ ?

ಇದೇ ಅಂತರಂಗ ಸುದ್ದಿ

vbhat@me.com

ಎಲ್ಲರಿಗೂ ಯಶಸ್ಸು ಬೇಕು. ಯಾವುದೋ ಒಂದು ಉದ್ದಿಮೆ ಆರಂಭಿಸಬೇಕು, ಬಹುಬೇಗ ಲಾಭ ಮಾಡಬೇಕು, ಉದ್ದಿಮೆ ಯನ್ನು ವಿಸ್ತರಿಸಬೇಕು, ಹೆಚ್ಚು ಹಣ ಗಳಿಸಬೇಕು, ಆ ಮೂಲಕ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಬೇಕು, ಬಿಜಿನೆಸ್ ಸಾಮ್ರಾಜ್ಯವನ್ನೇ ಸ್ಥಾಪಿಸಬೇಕು, ಯಶಸ್ವಿ ವ್ಯಕ್ತಿಯೆನಿಸಿಕೊಳ್ಳಬೇಕು. ಇದು ಬಹುತೇಕ ಎಲ್ಲರ ಆಸೆ, ಯಾವುದೋ ಸಂಸ್ಥೆ ಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ತನ್ನ ಸಂಸ್ಥೆಯಲ್ಲಿ ಬೇಗ ಬೇಗ ಪ್ರಮೋಶನ್ ಪಡೆದು, ಒಳ್ಳೆಯ ಪದವಿ ಗಿಟ್ಟಿಸಿ ಹಣ ಗಳಿಸಿ ಯಶಸ್ವಿ ವ್ಯಕ್ತಿಯಾಗುವ ಹಂಬಲ. ಇವ್ಯಾವೂ ಇಲ್ಲದ ಕೃಷಿಕನಿಗೂ ತಾನು ಮಾಡುವ ವ್ಯವಸಾಯದಲ್ಲಿ ಯಶಸ್ವಿ ಯಾಗುವ ತರಾತುರಿ.

ಒಂದು ರೀತಿಯಲ್ಲಿ ಎಲ್ಲರೂ ಯಶಸ್ಸಿನ ಹಿಂದೆ ಬಿದ್ದವರೇ. ಆ ಕ್ಷೇತ್ರ, ಈ ರಂಗ ಅಂತಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಈ ಯಶಸ್ಸಿನ ಮಂತ್ರ ಜಪಿಸುವವರೇ ತುಂಬಿ ಹೋಗಿದ್ದಾರೆ. ಎಲ್ಲರಿಗೂ ಸಕ್ಸಸ್ ಬೇಕು. ಸಕ್ಸಸ್ ಇಲ್ಲದೇ ಬದುಕೇ ಇಲ್ಲ ಎಂಬ ಮನಸ್ಥಿತಿ ಎಲ್ಲರಲ್ಲೂ ಇದೆ. ಈ ಮನಸ್ಥಿತಿ ಹೊಂದಿದವರು ಸಕ್ಸಸ್ ಅಂದರೆ, ಒಳ್ಳೆಯ ಉದ್ಯೋಗ, ಪದವಿ, ಅಂತಸ್ತು, ಕಾರು, ಮನೆ, ಒಳ್ಳೆಯ ಕುಟುಂಬ, ವಿದೇಶ ಪ್ರವಾಸ, ಹೇರಳ ಹಣ ಎಂದೇ ಭಾವಿಸಿದ್ದಾರೆ.

ಯಶಸ್ಸಿನ ಮಾಪಕಗಳೂ ಇವೇ. ಇವು ಹೆಚ್ಚು ಹೆಚ್ಚು ಇದ್ದಷ್ಟೂ ಯಶಸ್ಸಿನ ಪ್ರಮಾಣ ಹೆಚ್ಚು. ಪ್ರತಿಯೊಬ್ಬರಿಗೂ ಸಕ್ಸಸ್ ಫುಲ್
ವ್ಯಕ್ತಿಯಾಗಬೇಕು ಎಂಬ ತರಾತುರಿ. ತಪ್ಪೇನಿಲ್ಲ, ಇದು ಮನುಷ್ಯನ ಸ್ವಭಾವ. ತಾವು ಮಾಡುವ ಕೆಲಸಗಳಲ್ಲಿ, ಸಾಧನೆಯ ಉತ್ತುಂಗಕ್ಕೇರಬೇಕೆಂದರೆ, ಪದವಿ, ಅಂತಸ್ತು, ಹಣವೇ ಮಾನದಂಡಗಳಾಗಿವೆ. ಇವೇ ಯಶಸ್ಸನ್ನು ನಿರ್ಧರಿಸುವ ಸಂಗತಿಗಳು.

ನಮ್ಮ ಮಕ್ಕಳ ವಯಸ್ಸಿನಲ್ಲೂ ಯಶಸ್ಸು ಅಂದರೆ ಇವೇ ಎಂದು ನಾವು ತುರುಕಿಬಿಟ್ಟಿದ್ದೇವೆ. ನಾವು ಯಶಸ್ಸಿಗೆ ಅವರನ್ನೂ ಅಣಿ
ಗೊಳಿಸುವ ಪರಿ ಈ ಸಂಗತಿಗಳನ್ನೇ ಆಧರಿಸಿರುತ್ತದೆ. ಎಲ್ಲರ ಯಶಸ್ಸು ಕೊನೆಗೆ ಹೋಗಿ ನಿಂತುಕೊಳ್ಳುವುದು ಪದವಿ, ಅಂತಸ್ತು, ಬಂಗಲೆ, ಕಾರು, ಬ್ಯಾಂಕ್ ಬ್ಯಾಲೆನ್ಸ್ ಮುಂದೆಯೇ. ಯಶಸ್ಸು ಗಳಿಸುವುದು ಹೇಗೆ ಎಂಬ ಬಗ್ಗೆ ಸಾವಿರಾರು ಪುಸ್ತಕಗಳು, ನೂರಾರು ಕೋರ್ಸ್‌ಗಳು. ಈಗ ಞಟಠಿಜಿqZಠಿಜಿಟ್ಞZ omಛಿZhಛ್ಟಿ, ವ್ಯಕ್ತಿತ್ವ ವಿಕಸನ ಗುರು ಎಂದು ಕರೆಯಿ ಸಿಕೊಳ್ಳುವುದು ಫ್ಯಾಶನ್.

ಯಶಸ್ಸು ಗಳಿಸುವುದು ಹೇಗೆ ಎಂದು ಭಾಷಣ ಮಾಡುವುದು ಸಹ ದೊಡ್ಡ ಬಿಜಿನೆಸ್. ಶಿವ ಖೇರಾ ಎಂಬ ಯಶಸ್ಸು ಬೋಧಕ
ಮೂರು-ನಾಲ್ಕು ದಿನಗಳ ಕಾರ್ಯಾಗಾರಕ್ಕೆ ಲಕ್ಷಾಂತರ ರುಪಾಯಿ ಕೀಳುತ್ತಾನೆ. ಚೆನ್ನಾಗಿ ಮಾತಾಡಿ ಯಶಸ್ಸು ಗಳಿಸುವುದು ಹೇಗೆ, ಯಶಸ್ಸಿಗೆ ಬೇಕಾದ ಅಂಗಸೌಷ್ಠವ ಹೊಂದುವುದು ಹೇಗೆ, ಬುದ್ಧಿಮತ್ತೆ ಗಳಿಸುವುದು ಹೇಗೆ,.. ಇಂಥದೇ ಹತ್ತಾರು ಕೋರ್ಸ್ ಗಳಿವೆ.

ಅಂದರೆ, ಯಶಸ್ಸು ಎನ್ನುವುದು ಕೂಡ ಒಂದು ಸರಕು ಅಥವಾ ಉದ್ಯಮವಾಗಿದೆ. ಇದೇ ರೀತಿ, ‘ಇಪ್ಪತ್ತು ವರ್ಷ ದಾಟುವ ಮುನ್ನ ಮೊದಲ ಕೋಟಿ ರುಪಾಯಿ ಗಳಿಸಿ ಯಶಸ್ವಿಯಾಗುವುದು ಹೇಗೆ?’ ಎಂಬ ಮಾದರಿಯ ಕೋರ್ಸ್‌ಗಳೂ ಈಗ ಜನಪ್ರಿಯ
ವಾಗುತ್ತಿವೆ. ಈ ಕೋರ್ಸ್‌ಗೆ ಸೇರಿದ ಹತ್ತಾರು ಮಂದಿ ಕೋಟಿ ಗಳಿಸಿ ಜನರ ತಲೆ ಕೆಡಿಸಿದ ನಂತರ, ಅದಕ್ಕೆ ಸೇರುವವರ
ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇಂದಿನ ಸಮಾಜವೂ ಯಶಸ್ಸನ್ನು ಪದವಿ, ಅಧಿಕಾರ, ಅಂತಸ್ತು ಹಾಗೂ ಹಣದಿಂದಲೇ ಅಳೆಯುತ್ತಿದೆ. ಗುಣ, ನಡೆವಳಿಕೆ, ಸ್ವಭಾವ, ವಿದ್ಯೆ, ವಿನಯ, ಸೌಜನ್ಯ, ಪ್ರಾಮಾಣಿಕತೆಗೆ ಆನಂತರದ ಸ್ಥಾನ.

ಹಣದ ಮುಂದೆ ಉಳಿದವು ಗೌಣ. ಮನೆಯಲ್ಲಾಗಲಿ, ಆಫೀಸಿನಲ್ಲಾಗಲಿ, ಸ್ನೇಹಿತರ ವರ್ತುಲದಲ್ಲಾಗಲಿ, ಕೋರ್ಸ್ ಗಳಲ್ಲಾಗಲಿ, ಹಣ, ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು, ಜೀವನದಲ್ಲಿ ವಿಪರೀತ ಹಾನಿ, ನಷ್ಟವಾದರೆ, ವ್ಯವಹಾರದಲ್ಲಿ ಸೋಲಾದರೆ ಏನು ಮಾಡಬೇಕು ಎಂಬುದನ್ನು ಹೇಳಿಕೊಡುವುದಿಲ್ಲ.

ಸೋಲು, ಹಿನ್ನಡೆ, ನಷ್ಟಗಳನ್ನು ನಿಭಾಯಿಸುವುದು ಹೇಗೆ, ಇವುಗಳನ್ನು ಅನುಭವಿಸಿಯೇ ಯಶಸ್ಸಿನತ್ತ ಮುಖ ಮಾಡುವುದು ಹೇಗೆ ಎಂಬುದನ್ನು ಯಾರೂ ಕಲಿಸುವುದಿಲ್ಲ. ಮನೆಯಲ್ಲಿ ತಂದೆ-ತಾಯಿಗಳೂ ಚಿಕ್ಕಂದಿನಿಂದಲೇ ಸಕ್ಸಸ್ ಮಂತ್ರವನ್ನೇ ಜಪಿಸುತ್ತಾ, ಮಕ್ಕಳನ್ನು ಬೆಳೆಸುತ್ತಾರೆ.

ಸೋಲು ಸಹ ಒಂದು ಜೀವನಾನುಭವ, ಸೋಲನ್ನು ಖುಷಿಯಿಂದ ಎದುರಿಸುವುದು ಹೇಗೆ, ಸೋಲಿನಾಚೆಗೂ ಒಂದು
ಬದುಕಿದೆ, ಸೋಲು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ಸೋಲು ಸಾವಿರ ಪಾಠಗಳನ್ನು ಕಲಿಸುತ್ತದೆ, ಸೋಲು-ಗೆಲುವು
ಎರಡೂ ಸಹಜ ಎಂದು ಯಾರೂ ಹೇಳಿಕೊಡುವುದಿಲ್ಲ. ವ್ಯವಹಾರದಲ್ಲಿ ಸೋತರೆ, ಜೀವನದಲ್ಲಿ ಸೋತಂತೆ ಎಂದು ಭಾವಿಸು
ತ್ತೇವೆ. ಒಂದು ಸೋಲು ಸೋಲಲ್ಲ ಎಂದು ಯಾರೂ ಸಂತೈಸುವುದಿಲ್ಲ. ಎರಡು ಸೋಲು ಉಂಡವನಿಗೆ ಅವನು ಮುಟ್ಟಿದ್ದೆಲ್ಲ
ಕೇಡು ಎಂದು ಛೇಡಿಸುತ್ತಾರೆ. ಸೋಲಿನಿಂದ ಆತ ಕಂಗೆಟ್ಟಿದ್ದಾ.ನೆಂದು ಭಾವಿಸುವಂತೆ, ಸೋಲಿನಿಂದ ಆತ ಮತ್ತಷ್ಟು ಗಟ್ಟಿಯಾಗಿರಬಹುದು, ಇನ್ನಷ್ಟು ಜೀವನಾನುಭವ ಗಳಿಸಿ ಪಕ್ವವಾಗಿರಬಹುದು ಎಂದು ಯೋಚಿಸುವುದೇ ಇಲ್ಲ.

ಕಾರಣ ನಮ್ಮ ಎಲ್ಲಾ ಸಾಧನೆಗಳಿಗೆ, ಕೆಲಸಗಳಿಗೆ ಯಶಸ್ಸೇ ಮಾನದಂಡ. ನಮ್ಮ ಪ್ರಯತ್ನಗಳೆಲ್ಲ ಯಶಸ್ಸಿನಲ್ಲಿಯೇ ಪರ‍್ಯವಸಾನವಾಗಬೇಕು ಎಂದು ನಾವು ಭಾವಿಸುತ್ತೇವೆ. ಯಶಸ್ಸು ಹೇಗೆ ಒಂದು ಅನುಭೂತಿಯೋ, ಸೋಲು ಸಹ ಒಂದು ಅನುಭೂತಿ ಎಂದು ತಿಳಿಯುವುದಿಲ್ಲ. ಸೋಲು ಅಂದರೆ ಅಂತ್ಯ ಎಂಬುದೇ ಹಲವರ ಕಲ್ಪನೆ. ಹೀಗಾಗಿ ಪರೀಕ್ಷೆಯಲ್ಲಿ ಫೇಲಾದಾಗ, ದಾಂಪತ್ಯದಲ್ಲಿ ಸೋತಾಗ, ವ್ಯವಹಾರದಲ್ಲಿ ನಷ್ಟವುಂಟಾದಾಗ, ಕೆಲವರು ಬದುಕನ್ನು ಅಂತ್ಯ ಗೊಳಿಸಿಕೊಳ್ಳು ತ್ತಾರೆ.

ಅವರಿಗೆ ಸೋಲನ್ನು ಸಹಿಸುವ, ಸಲಹುವ ಅಂತಃಶಕ್ತಿಯೇ ಇರುವುದಿಲ್ಲ. ಕಾರಣ ಅವರ ತಲೆತುಂಬಾ ಯಶಸ್ಸೇ ತುಂಬಿರು ತ್ತದೆ. ಯಶಸ್ಸು ಸಿಗುವುದಕ್ಕೆ ತಡವಾದರೂ ಅದು ಸೋಲಿನ ಪ್ರತೀಕ ಎಂದೇ ತಿಳಿದಿರುತ್ತಾರೆ. ಸೋಲನ್ನು ಕ್ರಮೇಣ ಯಶಸ್ಸಾಗಿ ಪರಿವರ್ತಿಸಿಕೊಳ್ಳಬಹುದು ಎಂದು ಚಿಂತಿಸುವುದೇ ಇಲ್ಲ. ಸೋಲು ಸಹ ಕ್ಷಣಿಕ, ಅದು ಒಂದು ಅನೂಹ್ಯಪಾಠ
ಕಲಿಸುವ ಅನುಭವದ ಹಂತ ಎಂಬ ದೃಷ್ಟಿಕೋನದಿಂದ ಸೋಲನ್ನು ನೋಡುವುದಿಲ್ಲ.

ಪರೀಕ್ಷೆಯಲ್ಲಿನ ಹಿನ್ನಡೆ, ಬಿಜಿನೆಸ್‌ನಲ್ಲಿನ ನಷ್ಟವನ್ನು ಬದುಕಿಗೆ ಬರೆದ ಸೋಲಿನ ಷರಾ ಎಂದು ಭಾವಿಸಿ, ಕೈಚೆಲ್ಲುತ್ತೇವೆ. ಇಲ್ಲವೇ ಗೋಣು ಚೆಲ್ಲುತ್ತೇವೆ. ಯಶಸ್ಸೇ ತಲೆ ತುಂಬಾ ತುಂಬಿಕೊಂಡು ಬೆಳೆದವರಿಗೆ, ಸೋಲನ್ನು ಎದುರಿಸುವ ಶಕ್ತಿ, ಸಹನೆ, ಮನೋಭಾವವೇ ಇರುವುದಿಲ್ಲ. ಅಂಬೆಗಾಲಿಡುತ್ತಾ, ಎಡವುತ್ತಾ, ಮುಗ್ಗರಿಸುತ್ತಾ, ಬೀಳುತ್ತಾ, ಜಾರುತ್ತಾ ನಡೆಯಲು ಕಲಿತಿದ್ದೇವೆಂಬ ಸಾಮಾನ್ಯ ಸಂಗತಿಯನ್ನೂ ಅರಿಯುವುದಿಲ್ಲ.

ಯಾವ ಮನೆಯಲ್ಲಿ ತಂದೆ-ತಾಯಿಗಳು ಪರೀಕ್ಷೆಯಲ್ಲಿ ಫೇಲಾಗಿ ಬಂದ ಮಗುವನ್ನು ಖುಷಿಯಿಂದ ತಬ್ಬಿಕೊಂಡು, ‘ಪರವಾಗಿಲ್ಲ ಬಿಡು, ಬಹಳ ಚಿಂತಿಸಬೇಡ, ಆಗಬಾರದ್ದೇನೂ ಆಗಿಲ್ಲ, ಮುಂದಿನ ಸಲ ಚೆನ್ನಾಗಿ ಓದುವಿಯಂತೆ. ನಿನಗೆ ಅರ್ಥವಾಗದ್ದು ಏನಿದೆ?’ ಎಂದು ಕೇಳಿದ ನಿದರ್ಶನಗಳಿವೆಯಾ? ಸಾಧ್ಯವೇ ಇಲ್ಲ. ಸೋತು ಬಂದ ಮಗನಿಗೆ ಸೋಲಿನ ಕಹಿಗಿಂತ, ತಂದೆ-ತಾಯಿಗಳ ಅಪಮಾನ ಮತ್ತಷ್ಟು ಕಹಿಯಾಗಿರುತ್ತದೆ. ಈ ಸಂಗತಿಯೇ ಮಕ್ಕಳನ್ನು ಬದುಕಿನ ಅಂತ್ಯಕ್ಕೆ ತಂದು ನಿಲ್ಲಿಸುತ್ತದೆ.

ಫೇಲಾದವರು ಆತ್ಮಹತ್ಯೆ ಮಾಡಿಕೊಂಡಂತೆ, ತೊಂಬತ್ತು -ತೊಂಬತ್ತೈದು ಅಂಕ ಗಳಿಸಿದವರೂ, ರ‍್ಯಾಂಕ್ ತಪ್ಪಿತಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಯಶಸ್ಸಿನ ಭ್ರಮಾಲೋಕದ ವೈಭವವನ್ನು ತಲೆಯಲ್ಲಿ ತುಂಬಿದ ಪರಿಣಾಮದಿಂದಲೇ.
‘ಸೋಲೋಣ ಬನ್ನಿ’ ಎಂದೂ ಯಾರೂ ಹೇಳುವುದಿಲ್ಲ. ಅಂಥ ಕೋರ್ಸ್ ಇಲ್ಲ. ಆದರೆ ‘ಗೆಲ್ಲುವುದು ಹೇಗೆ?’ ಎಂಬ ಪಾಠದಲ್ಲಿ,
ಸೋಲನ್ನು ಜಯಿಸುವುದು ಹೇಗೆ ಎಂಬ ಸೂಕ್ಷ್ಮವೂ ಅಡಗಿದೆ ಎಂಬುದನ್ನು ಹೇಳಿಕೊಡದಿದ್ದರೆ ಅಥವಾ ಆ ಸಂಗತಿಯನ್ನು
ಅರಿಯದಿದ್ದರೆ, ಸೋಲಿನ ಅನುಭವವೂ ಆಗುವುದಿಲ್ಲ, ಗೆಲುವಿನ ಮಹತ್ವವೂ ಗೊತ್ತಾಗುವುದಿಲ್ಲ.

ಹಾಗೆ ನೋಡಿದರೆ, ಎಲ್ಲ ಗೆಲುವುಗಳೂ, ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಂಡವುಗಳೇ. ಸೋಲಿನ ದವಡೆಗೆ ಹೋಗಿ ಜಯಿಸಿ ಬಂದವುಗಳೇ. ಸೋಲಿನ ಸಮಾಧಿಯ ಮೇಲೆಯೇ ಎಲ್ಲರೂ ಗೆಲುವಿನ ಬುನಾದಿ ಕಟ್ಟಿಕೊಂಡಿರುವುದು. ಒಲಿಂಪಿಕ್ಸ್‌ ನಲ್ಲಿ ಮೊದಲ ಸ್ಥಾನ ಗೆದ್ದವನ ಅಕ್ಕಪಕ್ಕದಲ್ಲಿ ಎರಡನೇ, ಮೂರನೇ ಸ್ಥಾನ ಪಡೆದವರು ನಿಂತಿರುತ್ತಾರೆ. ಎರಡು, ಮೂರು ಸ್ಥಾನ ಗಳಿಸಿದವರು ಮೊದಲನೆ ಯವರಿಗೆ ಸೋತಿರುತ್ತಾರೆ. ಆದರೆ ಅವರಿಗೂ ಗೆಲುವಿನ ಮೆಟ್ಟಿಲಲ್ಲಿ ಸ್ಥಾನವಿರುತ್ತದೆ. ಹೀಗಾಗಿ ಸೋಲು ಯಾವತ್ತೂ ನಿಕೃಷ್ಟವಲ್ಲ, ಇದೇ ಕ್ರೀಡಾಭಾವದಿಂದಲೇ ಸೋಲನ್ನು ನೋಡದಿದ್ದರೆ, ಅದೇ ನಮ್ಮನ್ನು ತಿಂದುಬಿಡುತ್ತದೆ. ಸೋಲಿಗೆ ತಕ್ಕ ಉತ್ತರ ಗೆಲುವೇ.

ಆದರೆ ಯಾವ ಸೋಲೂ ಅದಕ್ಕಿಂತ ದೊಡ್ಡ ಸೋಲಿನಲ್ಲಿ(ಆತ್ಮಹತ್ಯೆ) ಕೊನೆಗೊಳ್ಳಬಾರದು. ಕಾರಣ ಸೋಲಿಗೂ ಒಂದು ಮರ‍್ಯಾದೆ, ಸ್ಥಾನ ಇದೆ ಎಂಬುದು ಗೊತ್ತಾಗುವುದೇ ಯಶಸ್ವಿಯಾದಾಗ.

ಪಂಡಿತ ಶೀಲಭದ್ರ ಯಾಜೀ! 
ಈ ತಲೆಮಾರಿನ ಪತ್ರಕರ್ತರು ಇವರ ಹೆಸರನ್ನು ಕೇಳಿರುವ ಸಾಧ್ಯತೆ ತೀರ ಕಡಿಮೆ. ಎಪ್ಪತ್ತು ವರ್ಷದ ದಾಟಿದ ಪತ್ರಕರ್ತರು
ಇವರ ಹೆಸರನ್ನು ಕೇಳಿದರೆ, ತಮ್ಮ ನೆನಪುಗಳನ್ನು ಕೊಡವಿಕೊಂಡರೆ, ಇಂಥ ಒಬ್ಬ ವ್ಯಕ್ತಿಯಿದ್ದ ಎಂದು ತಮ್ಮ ಜ್ಞಾಪಕಶಕ್ತಿಗೆ ತುಸು ಕಾವು ಕೊಡಬಹುದು. ಖ್ಯಾತ ಪತ್ರಕರ್ತರಾದ ಎಂ.ವಿ.ಕಾಮತ ಅವರು ಬೆಂಗಳೂರಿನಲ್ಲಿ ಒಂದು ಗೆಸ್ಟ್‌ಹೌಸ್‌ನಲ್ಲಿ
ಉಳಿದುಕೊಂಡಾಗ, ನನ್ನನ್ನು ಪರಿಚಯಿಸಿದ್ದರು.

‘ಭಟ್ಟರೇ, ನೀವು ಯುವ ಪತ್ರಕರ್ತರು. ಇವರ ಹೆಸರನ್ನು ಕೇಳಿದ್ದೀರಾ?’ ಎಂದು ಪರಿಚಯಿಸಿದರು. ನಾನು ‘ಇಲ್ಲ, ಕೇಳಿಲ್ಲ.’ ಎಂದೆ. ‘ಒಂದು ವೇಳೆ ನೀವು ಹೌದು ಎಂದು ಹೇಳಿದ್ದರೆ, ನನಗೆ ಬಹಳ ಆಶ್ಚರ್ಯವಾಗುತ್ತಿತ್ತು’ ಎಂದರು ಕಾಮತ.ಆ ವೃದ್ಧ
ಜೀವಕ್ಕೆ ಸುಮಾರು ೮೬-೮೮ ವರ್ಷ ವಯಸ್ಸಾಗಿತ್ತು. ಕಾಮತರಿಗೆ ಅವರು ಬಹಳ ಕಾಲದ ಪರಿಚಿತರಂತೆ. ಮುಂಬಯಿ, ದಿಲ್ಲಿಯಲ್ಲಿ ಆಗಾಗ ಭೇಟಿ ಮಾಡುತ್ತಿದ್ದರಂತೆ. ಕಾಮತರು ಆ ವೃದ್ಧರನ್ನು ಪರಿಚಯಿಸಿದಾಗ ಇವರ ಹೆಸರನ್ನು ಕೇಳುತ್ತಿರುವುದೇ ಮೊದಲ ಬಾರಿಗೆ ಅನಿಸಿತು. ಅದಾದ ನಂತರವೂ ಆ ಹೆಸರನ್ನು ಕೇಳಿಲ್ಲ. ಅದು ಬಹಳ ಅಪರೂಪದ ಹೆಸರು.ಅಂದಹಾಗೆ ಅವರ ಹೆಸರು ಶೀಲಭದ್ರ ಯಾಜೀ!

ಹಿರಿಯ ಪತ್ರಕರ್ತರಾದ ಪಾಟೀಲ ಪುಟ್ಟಪ್ಪ, ಕೆ.ಸತ್ಯನಾರಾಯಣ, ಅರಕೆರೆ ಜಯರಾಮ, ದೇವೇಗೌಡರು, ಎಸ್ಸೆಂ ಕೃಷ್ಣ, ಮುಂತಾದವರು ಶೀಲಭದ್ರ ಯಾಜೀ ಹೆಸರನ್ನು ಕೇಳಿರಬಹುದು. ಮೂಲತಃ ಬಿಹಾರದವರಾದ ಯಾಜೀ, ಗಾಂಧೀಜಿ ಅವರ ಅನುಯಾಯಿಯಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು. ಅಲ್ಲಿಯವರೆಗೆ ಅಹಿಂಸಾ ಧರ್ಮದ ಪ್ರತಿಪಾದಕರಾಗಿದ್ದ ಅವರು, ಸುಭಾಶ ಚಂದ್ರ ಬೋಸ್ ಪ್ರಭಾವಕ್ಕೆ ಬಂದು, ಅಹಿಂಸೆಯಿಂದ ಏನೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರು.

ಬೋಸ್ ಅವರು ೧೯೩೯ರಲ್ಲಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದಾಗ ಯಾಜೀ ಕೂಡ ಇದ್ದರು. ಫಾರ್ವರ್ಡ್ ಬ್ಲಾಕ್‌ನ ಪ್ರಮುಖ ನಾಯಕರಾದ ದೇಬಬ್ರತ ಬಿಸ್ವಾಸ, ಶರತ್ ಚಂದ್ರ ಬೋಸ್, ಚಿತ್ತಬಸು ಮುಂತಾದವರ ಸಾಲಿಗೆ ಯಾಜೀ ಸಹ ನಿಲ್ಲುವ ನಾಯಕರು. ಫಾರ್ವರ್ಡ್ ಬ್ಲಾಕ್ ಪಕ್ಷದ ಸಿದ್ಧಾಂತ, ನೀತಿ, ಕಾರ್ಯಕ್ರಮ, ಚಿಂತನೆಗಳನ್ನು ಬರೆಯುವ ಕೆಲಸವನ್ನು ಬೋಸ್ ಅವರು ಯಾಜೀ ಅವರಿಗೆ ವಹಿಸಿದ್ದರು. ಸುಮಾರು ನಾನೂರು ಪುಟಗಳ ಪುಸ್ತಕವನ್ನೇ ಬರೆದು, ಸುಭಾಶ ಚಂದ್ರ ಬೋಸ್ ಮುಂದೆ ಇಟ್ಟಾಗ ಯಥಾವತ್ತು ಪ್ರಕಟಿಸುವಂತೆ ಸೂಚಿಸಿದರಂತೆ ಫಾರ್ವರ್ಡ್ ಬ್ಲಾಕ್‌ನ ದಿಗ್ಗಜರಾದ ಬಿಸ್ವಾಸ, ಚಿತ್ತಬಸು ಅವರು ಸಂಸತ್ತಿನಲ್ಲಿ ಮಾತಾಡುವ ಮುನ್ನ ಯಾಜೀ ಅವರನ್ನು ಸಂಪರ್ಕಿಸುತ್ತಿದ್ದರಂತೆ.

ಸಲಹೆ ಪಡೆಯುತ್ತಿದ್ದರಂತೆ. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ (ಹದಿಮೂರು ವರ್ಷ) ಯಾಜೀ ಅವರು ಮೇಲ್ಮನೆ ಯಲ್ಲಿ ಮಾತಿಗೆ ನಿಂತರೆ, ಅವರ ಮಾತಿಗೆ ಅಡ್ಡಿಪಡಿಸದೇ, ಗಮನವಿಟ್ಟು ಕೇಳುವಂತೆ ಸದಸ್ಯರಿಗೆ ಪ್ರಧಾನಿ ನೆಹರು ಹೇಳುತ್ತಿದ್ದರಂತೆ. ವಿದೇಶಾಂಗ ವ್ಯವಹಾರಗಳ ಬಗ್ಗೆ ಅವರಿಗೆ ವಿಶೇಷ ಆಸ್ಥೆಯಿತ್ತು. ಅವರು ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ಸುಭಾಶ ಚಂದ್ರ ಬೋಸ್ ಅವರು ಇವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರು. ಬೋಸ್ ಗೈರು ಹಾಜರಿಯಲ್ಲಿ
ಪಕ್ಷದ ಹಂಗಾಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪಾಟ್ನಾದ ಭಕ್ತಿಯಾರಪುರದ ಪಂಡಿತರ ಮನೆತನದಲ್ಲಿ ಜನಿಸಿದ ಯಾಜೀ ಅವರನ್ನು ಅವರ ಸಮಕಾಲೀನರು ಮರೆತಾಗ, ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸದನದಲ್ಲಿ ಅವರ ಬಗ್ಗೆ ಮೆಚ್ಚುಗೆಯಿಂದ ಮಾತಾಡಿದ್ದರು. ಆಗ ಅವರನ್ನು ‘ಯುಗದೃಷ್ಟ ಪಂಡಿತ ಶೀಲಭದ್ರ ಶಿವತಹಲ
ಯಾಜೀ’ ಎಂದು ಸಂಬೋಧಿಸಿದ್ದರು.

ಯಾಜೀ ಅವರು ನಿಧಾನರಾದ (೧೯೯೬)  ಞದು ವರ್ಷಗಳ ನಂತರ, ಪ್ರಧಾನಿ ವಾಜಪೇಯಿ ಅವರ ಆಸ್ಥೆಯಿಂದ ಭಾರತ
ಸರಕಾರ ಅವರ ಜ್ಞಾಪಕಾರ್ಥ ಅಂಚೆಚೀಟಿ ಹೊರತಂದಿತ್ತು. ಅದಾದ ನಂತರ ಆ ಪುಣ್ಯಾತ್ಮನನ್ನು ನೆನಪಿಸಿಕೊಂಡವರು ವಿರಳ. ವಿ.ಎಲ್. ಸುಂದರ ರಾವ್ ಎಂಬುವವರು ಬರೆದ ‘ಖeಛಿಛ್ಝಿZ ಆeZbZ Zಛಿಛಿ : ಅ ಜಿqಜ್ಞಿಜ ಛಿಜಛ್ಞಿb ಟ್ಛ ಛಿಛಿbಟಞ
ಖಠ್ಟ್ಠಿಜಜ್ಝಛಿ’ ಎಂಬ ಪುಸ್ತಕವನ್ನು ಓದುವಂತೆ, ತಮ್ಮ ಬಳಿಯಿದ್ದ ಏಕಮಾತ್ರ ಪ್ರತಿಯನ್ನು ಕಾಮತ ನನಗೆ ಕೊಟ್ಟಿದ್ದರು. ಇದು
ಸುಮಾರು ೨೪ ವರ್ಷಗಳ ಹಿಂದೆ. ಈ ಅವಧಿಯಲ್ಲಿ ನಾನು ಬೆಂಗಳೂರಿನಲ್ಲಿ ಐದು ಸಲ ಮನೆ ಬದಲಿಸಿದರೂ, ಈ ಪುಸ್ತಕ ನನ್ನ ಬಳಿ ‘ಭದ್ರ’ವಾಗಿಯೇ ಇದೆ.

ಆಗಾಗ ಹಳೆ ಪುಸ್ತಕಗಳ ಜತೆ ಮುಖಾಮುಖಿ ಆಗುವುದು ರೂಢಿ. ಮೊನ್ನೆ ಈ ಕೃತಿ ಸಿಕ್ಕಿತು. (೧೭೪ ಪುಟಗಳ ಈ ಕೃತಿಯನ್ನು
ಪ್ರಗತಿಶೀಲ ಜನ ಪ್ರಕಾಶನ ೧೯೯೦ರಲ್ಲಿ ಪ್ರಕಟಿಸಿದೆ.) ಇವೆಲ್ಲ ನೆನಪಾಯಿತು.

ಮೂರು ಪ್ರಸಂಗಗಳು
ಒಮ್ಮೆ ಅಮೆರಿಕದ ಪ್ರಸಿದ್ಧ ಕವಿ, ಸಾಹಿತಿ, ಪತ್ರಕರ್ತ ಕಾರ್ಲ್ ಸ್ಯಾಂಡ್ ಬರ್ಗ್ ಅವರನ್ನು ಭೇಟಿಯಾದ ಯುವ ನಾಟಕಕಾರ
ನೊಬ್ಬ ತಾನು ಬರೆದ ನಾಟಕವೊಂದರ ಪ್ರದರ್ಶನ ನೀಡುವುದಾಗಿಯೂ, ಅದನ್ನು ನೋಡಿ ತನ್ನ ಅಭಿಪ್ರಾಯ ತಿಳಿಸು ವಂತೆಯೂ ಕೇಳಿಕೊಂಡ. ಅದಕ್ಕೆ ಸ್ಯಾಂಡ್ ಬರ್ಗ್ ಸಮ್ಮತಿಸಿದ.

ಆ ಪ್ರಕಾರ, ಸ್ಯಾಂಗ್ ಬರ್ಗ್‌ನನ್ನು ನಾಟಕ ನೋಡಲು  ಆಹ್ವಾನಿಸಿದ. ಆದರೆ ನಾಟಕ ಆರಂಭವಾದ ಅರ್ಧ ಗಂಟೆಯೊಳಗೆ
ಸ್ಯಾಂಡ್ ಬರ್ಗ್ ನಿz ಹೋದ. ಇದರಿಂದ ಆ ಯುವ ನಾಟಕಕಾರನಿಗೆ ಅತೀವ ಬೇಸರವಾಯಿತು. ಆತ ತನ್ನ ಕೋಪವನ್ನು
ತೋರಿಸಿಕೊಳ್ಳದೇ ಸ್ಯಾಂಡ್ ಬರ್ಗ್ ನನ್ನು ಮೆಲ್ಲಗೆ ಎಬ್ಬಿಸುತ್ತ, ’ಸರ್, ನಾನು ನಿಮ್ಮನ್ನು ಆಹ್ವಾನಿಸಿರುವುದು ನಾಟಕ ನೋಡಿ
ಅಭಿಪ್ರಾಯ ತಿಳಿಸಿ ಎಂದು. ಆದರೆ ಇಲ್ಲಿ ಬಂದು ನಿದ್ದೆ ಮಾಡಿ ಎಂದಲ್ಲ’ ಎಂದು ಹೇಳಿದ.

ಆಗ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಸ್ಯಾಂಡ್ ಬರ್ಗ್ ಹೇಳಿದ – ’ತಪ್ಪು ಭಾವಿಸಬೇಡಿ, ನನ್ನ ನಿದ್ದೆಯೂ ಒಂದು ಅಭಿಪ್ರಾಯವೇ
ಎಂಬುದು ಗೊತ್ತಿರಲಿ.’ ಇನ್ನೊಂದು ಪ್ರಸಂಗ. ಒಮ್ಮೆ ಹಾಲಿವುಡ್ ನಟ ಎಡ್ವರ್ಡ್ ನೋರ್ಟನ್, ಲಾಸ್ ಏಂಜಲೀಸ್ ಕಂಟ್ರಿ ಕ್ಲಬ್ ಸದಸ್ಯನಾಗಬೇಕು ಎಂದು ಬಯಸಿ ಅರ್ಜಿ ಸಲ್ಲಿಸಿದ. ಆ ಅರ್ಜಿಯಲ್ಲಿ ಒಂದೆಡೆ, ‘ನಮ್ಮ ಕ್ಲಬ್ಬಿನ ಸದಸ್ಯರಾಗಬಯಸುವವರು ಯಹೂದಿ ಆಗಿರಕೂಡದು, ಕ್ಯಾಥೋಲಿಕ್ ಆಗಿರಕೂಡದು, ನಟ-ನಟಿಯಾಗಿರಬಾರದು’ ಎಂದು ಬರೆದಿತ್ತು.

ಇದನ್ನು ಓದಿದ ನೋರ್ಟನ್ ಬರೆದ – ‘ನಾನು ನಟಿಸಿದ ಸಿನಿಮಾಗಳನ್ನು ನೀವು ನೋಡಿದ್ದರೆ, ನಾನು ನಟ ಅಲ್ಲವೆಂಬುದನ್ನು
ನೀವೇ ಒಪ್ಪಿಕೊಳ್ಳುತ್ತೀರಿ.’  ಮತ್ತೊಂದು ಪ್ರಸಂಗ.
ಶೋಮ್ಯಾನ್ ಯುಬಿ ಬ್ಲೇಕ್ ನೂರು ವರ್ಷ ಪೂರೈಸಿದಾಗ, ಅವನ ಅಭಿಮಾನಿಗಳು ಒಂದು ಪಾರ್ಟಿಯನ್ನು ಏರ್ಪಡಿಸಿದ್ದರು.
ಆ ಸಂದರ್ಭದಲ್ಲಿ ಬ್ಲೇಕ್ ನನ್ನು ಕೇಳಿದರು – ‘ನೂರು ವರ್ಷ ತುಂಬಿಬಿಧ ಈ ಸಂದರ್ಭದಲ್ಲಿ ನಿಮಗೆ ಏನನಿಸುತ್ತದೆ?’ ಅದಕ್ಕೆ ಬ್ಲೇಕ್ ಹೇಳಿದ – ‘ನಾನು ನೂರು ವರ್ಷಗಳ ಕಾಲ ಬದುಕುತ್ತೇನೆ ಎಂಬುದು ಮೊದಲೇ ಗೊತ್ತಿದ್ದರೆ, ನಾನು ನನ್ನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ.’

ಹೆಣ್ಣು ಮತ್ತು ಗನ್ನು
ಗಂಡಸರು ಹೆಂಗಸರಿಗಿಂತ ಬಿಯರನ್ನು ಏಕೆ ಇಷ್ಟಪಡುತ್ತಾರೆ ಎಂಬ ಬಗ್ಗೆ ಹಲವಾರು ಕಾರಣಗಳ ದೊಡ್ಡ ಪಟ್ಟಿಯೇ ಇದೆ. ಅದು ಹಳೆಯದಾಯಿತು. ಅದೇ ರೀತಿ ಗಂಡಸರು ಹೆಂಗಸರ ಬದಲು ಗನ್‌ನ್ನು ಏಕೆ ಇಷ್ಟಪಡುತ್ತಾರೆ? ಕೆಲವು ಕಾರಣಗಳು.
? ನೀವು ಹಳೆಯ ೪೪ ಮಾಡೆಲ್‌ನ ಗನ್ ಕೊಟ್ಟು ಹೊಸ ೨೨ ಮಾಡೆಲ್ ಖರೀದಿಸಬಹುದು.
? ನೀವು ಒಂದು ಗನ್‌ನ್ನು ಮನೆಯಲ್ಲಿ ಇಟ್ಟು, ಮತ್ತೊಂದನ್ನು ಹೊರಗೆ ಹೋಗುವಾಗ ನಿಮ್ಮೊಂದಿಗೆ ತೆಗೆದುಕೊಂಡುಗಬಹುದು.
? ನಿಮಗೆ ನಿಮ್ಮ ಗೆಳೆಯನ ಗನ್ ಇಷ್ಟವಾದರೆ ನಾನು ಉಪಯೋಗಿಸುತ್ತೇನೆ ಎಂದು ಹೇಳಬಹುದು ಮತ್ತು ಉಪಯೋಗಿಸ ಬಹುದು.

? ಮನೆಯಲ್ಲಿರುವ ಗನ್‌ನ್ನು ಉಪಯೋಗಿಸಲೇಬೇಕು ಎಂದೇನಿಲ್ಲ. ಉಪಯೋಗಿಸದಿದ್ದರೆ ಅದು ಬೇಸರ ಮಾಡಿಕೊಳ್ಳುವುದಿಲ್ಲ.
? ಒಳಗೆ ಗುಂಡು ಖಾಲಿಯಾದರೂ ಗನ್ ಬೇಸರಿಸಿಕೊಳ್ಳುವುದಿಲ್ಲ.
? ಗನ್ ನಿಮ್ಮ ಅಲ್ಮೇರಾ ಅಥವಾ ವಾರ್ಡ್‌ರೋಬ್‌ನಲ್ಲಿ ಹೆಚ್ಚಿನ ಜಾಗ ಕಬಳಿಸುವುದಿಲ್ಲ. ಅದಕ್ಕೆ ಪ್ರತ್ಯೇಕ ಜಾಗ ಬೇಕಿಲ್ಲ.
? ತಿಂಗಳ ಎ ದಿನಗಳಲ್ಲೂ ಅದು ನಾರ್ಮಲ್ ಆಗಿ ಇರುತ್ತದೆ.
? ಹೊಸ ಫಿಂಗರ್ ಪ್ರಿಂಟ್ ಕಂಡರೆ, ಇದು ಯಾರ ಫಿಂಗರ್ ಎಂದು ಗನ್ ಕೇಳುವುದಿಲ್ಲ.
? ನೀವು ಅದನ್ನು ಬಳಸಿದ ನಂತರ ನಿz ಮಾಡಿದರೆ, ಯಾಕೆ ತಕ್ಷಣ ನಿದ್ದೆ ಮಾಡುತ್ತೀಯಾ ಎಂದು ಕೇಳಿ ಪೀಡಿಸುವುದಿಲ್ಲ.
? ನೀವು ಗನ್‌ಗೆ ಸೈಲೆನ್ಸರ್ ಅಳವಡಿಸಿಕೊಳ್ಳಬಹುದು.