ಪರಿಶ್ರಮ
ಪ್ರದೀಪ್ ಈಶ್ವರ್
parishramamd@gmail.com
ಮೊದಲ ದಿನ ಮುಗ್ಧರಂತೆ, ಅಮಾಯಕ ರಂತೆ, ವರ್ತಿಸುವ ಹುಡುಗರು, ಏನು ಗೊತ್ತೇ ಇಲ್ಲವೆಂಬಂತೆ ವರ್ತಿಸುವ ಹುಡುಗಿಯರು. ಫೇರ್ ಆಂಡ್ ಲವ್ಲಿಗೆ ಬ್ರಾಂಡ್ ಅಂಬಾಸಿಡರ್ ತರ, ಲ್ಯಾಕ್ ಮೀ, ಗಾರ್ನಿಯರ್‌ಗೆ ಕೇರ್ ಆಫ್ ಅಡ್ರಸ್ ತರ ಇಟ್ಟ ಆ ಚೆಲುವೆಯ ಸೌಂದರ್ಯಕ್ಕೆ ಮನಸೋಲದ ಜೀವಗಳೇ ಇರಲಿಲ್ಲ.
ಒಂಟಿತನದಲ್ಲಿ ನೀನು ಇದ್ದಾಗೆ, ಪ್ರತಿ ಕ್ಷಣದಲ್ಲೂ ಕಾಡುವ ನೆನಪಿನಂತೆ, ನಡೆದ ಹಿಂದಿನ ಘಟನೆಗಳು ಮರೆಯುವಂತೆ, ಹತಾಶೆಗೆ ಅಂತ್ಯ ವಾಡುವಂತೆ ನಿನ್ನ ಒಳ್ಳೆಯತನ ನನಗೆ ಇಷ್ಟ ಎಂಬಂತೆ ಪ್ರೀತಿಸಿದ ಹುಡುಗಿ ಪ್ರಶಂಸಿಸುವಂತೆ ಪ್ರೀತಿಸುವುದು ನಿಯತ್ತಿನ ಪ್ರೀತಿ ಯೆಂದರೇ.
ಮಳೆಯ ಹನಿ ದೇಹದ ಮೇಲೆ ಬಿದ್ದರೆ ತಣ್ಣನೆಯ ಭಾವವಾಗುತ್ತೆ, ಗಾಳಿಯ ತೀವ್ರತೆ ಹೆಚ್ಚಾದರೆ ಚಳಿಯ ತಾಕತ್ತು ಅರ್ಥವಾಗುತ್ತೆ .ಆದರೆ ಇಷ್ಟಪಟ್ಟವರು ದೂರವಾದಾಗ ನೋವಿನ ಇಂಟೆನ್ಸಿಟಿ ಗೊತ್ತಾಗುತ್ತದೆ. ಪ್ರಾಯದ, ವಯಸ್ಸು ಆಟವಾಡುವ ಟೀನೇಜಿನ, ಪ್ರೀತಿಗೆ ತುಂಬಾ ಜನ ಬೀಳ್ತಾರೆ. ಪ್ರೀತಿಯ ಏಣಿಯನ್ನ ಹತ್ತಿ ಪ್ರೇಮದ ನೈವೇದ್ಯ ಸಲ್ಲಿ ಸಲು ಸಿದ್ಧವಾಗ್ತಾರೆ. ಆದರೆ ದುರಂತವೆಂದರೆ ಪ್ರೀತಿಯ ಏಣಿ ಹತ್ತು ವುದು ಸುಲಭ, ಏಣಿಯ ತುದಿಯಲ್ಲಿ ನಿಂತು ಪ್ರೀತಿಸುವುದು ಸುಲಭ, ಏಣಿಯ ತುದಿಯಲ್ಲಿ ನಿಂತು ಪ್ರೀತಿ ಯನ್ನು ಕಾಪಾಡಿ ಕೊಳ್ಳುವುದೇ ತುಂಬಾ ಕಷ್ಟ.
ಏಕೆಂದರೆ ಲೋನ್‌ನಲ್ಲಿ ಸಾಲ ತೆಗೆದುಕೊಳ್ಳುವಾಗ ಕ್ರೇಜ್ ಇರುತ್ತೆ, ಪ್ರತಿ ತಿಂಗಳು ಇ.ಎಂ.ಐ ಕಟ್ಟುವಾಗ ಪ್ರಾಣ ಸಂಕಟವಿರುತ್ತೆ. ತಿಂಗಳಲ್ಲಿ ದುಡಿದ ಹಣ ಬ್ಯಾಂಕಿಗೆ ಡಿಪಾಸಿಟ್ ಆದರೆ ಸಂತೋಷವಿರುತ್ತೆ ಒಂದೇ ಭಾರಿ ಡ್ರಾ ಮಾಡಿ ಖರ್ಚು ಮಾಡಬೇಕಾ ದಾಗ ಬಾಡಿಹೋದ ಮುಖ ಕನ್ನಡಿಯಲ್ಲಿ ಕಾಣುತ್ತೆ. ಪ್ರೀತಿ ಏಣಿ ಹತ್ತುವಾಗ ಏಣಿಯಿಂದ ಬಿದ್ದಾಗ ಬಚಾವ್ ಆಗುವ ದಾರಿ ಗೊತ್ತಿರಬೇಕು. ಪ್ರೇಮದ ದೋಣಿಯಲ್ಲಿ ಸಾಗುವಾಗ ಮುಳುಗಿದಾಗ ಈಜಿ ಬರುವ ರಹಸ್ಯ ಗೊತ್ತಿರಬೇಕು.
ಸೆಳೆತಗಳಲ್ಲಿ ಮೈ ಮರೆತು, ಗೆಲುವಿನೊಂದಿಗೆ ಸಹವಾಸ ಮಾಡಲು ಶುರುವಾದಾಗ ಎಚ್ಚರಿಕೆ ಇಲ್ಲವೆಂದರೆ ಏಣಿಯು ಬೀಳುತ್ತದೆ. ದೋಣಿಯು ಮುಳುಗುತ್ತದೆ. ಗೆಲುವಿನ ಬೋಣಿಯಾಗದೆ ಬದುಕು ಹಾವು-ಏಣಿಯ ಆಟದಂತಾಗುತ್ತದೆ. ಪ್ರೀತಿಯ ವೈಫಲ್ಯದ ನೋವು ಒಮ್ಮೆ ಕಚ್ಚಿದರೆ ಪಾತಾಳಕ್ಕೆ ಬಿದ್ದುಬಿಡ್ತೀರ. ಏನಂತೀರಿ! ಆಗಿದ್ದು ಲವ್ ಲೈಟಾಗಿ, ಹಾಳಾಗಿದ್ದು ಲೈಫ್ ಬ್ರೈಟಾಗಿ ಪ್ರತೀ ಕ್ಷಣವೂ ಯುಗದಂತೆ, ಪ್ರತಿ ನಿಮಿಷವೂ ವರ್ಷದಂತೆ, ಏಕಾಂತವು ಶಾಪದಂತೆ, ಒಂಟಿತನವು ಮರುಭೂಮಿಯಂತೆ ಕಾಡುತ್ತೆ. ಯೋಚನೆಗಳು ಡಿಸ್ಕೊ ಡಾ ಹಾಡುತ್ತಾ, ಭಾವನೆಗಳು ಆಕ್ಸಿಡೆಂಟ್ ಜೋನ್‌ಗೆ ಸಮೀಪ ಹೋಗಿ, ಕ್ಲಾರಿಟೀಗಿಂತ ಕನ್ಯೂಷನ್ ಡಾಮಿನೇಟ್ ಮಾಡಿ,
ಸೊಮಾಲಿಯಾದ ಸಮುದ್ರ ಕಳ್ಳರಿಗಿಂತ ತೀವ್ರವಾಗಿ ಕಾಡುವ ನೆನಪುಗಳನ್ನ ಮೊದಲ ಪ್ರೀತಿಯ ಸೆಳೆತಗಳು ಎಂದು ಕರೆಯುತ್ತಾರೆ.
ಮೊದಲ ಪ್ರೀತಿಯ ತೀವ್ರತೆ ಸುನಾಮಿಗೆ ಸವಾಲಾಕಿದಂತೆ, ಮೌನಕ್ಕೆ ವಾರ್ನ್ ಮಾಡಿದಂತೆ. ಮೊದಲ ಪ್ರೀತಿ! ವಿವರಿಸಲಾಗದ ಸೆಳೆತ ಗಳು, ಅರ್ಥವಾಗದ ಆಕರ್ಷಣೆಗಳ ನಡುವೆ ಹುಟ್ಟುವ ಒಂದು ಅದ್ಭುತವಾದ ಸಂಗತಿ. ಮೊದಲ ಪ್ರೀತಿಯಲ್ಲಿ ಬಹಳಷ್ಟು ಮಂದಿಗೆ ಒಂದು ಸ್ಪಷ್ಟತೆಯಿರುತ್ತದೆ. ಕಾಡುವ ಒಂಟಿತನಕ್ಕೆ ಉತ್ತರವಿರುತ್ತೆ. ಅರ್ಥ ಮಾಡಿಕೊಳ್ಳದ ಸ್ನೇಹಿತರ ನಡುವೆ ಅರ್ಥೈಸಿಕೊಳ್ಳುವ ಜೀವದ ಜೊತೆ ಬಾಳನ್ನ ನಡೆಸಬೇಕೆಂಬ ಪ್ರಯತ್ನವಿರುತ್ತೆ.
ಮೊದಲ ಪ್ರೀತಿಯಲ್ಲಿ ಬಹಳಷ್ಟು ಜನ ನಂಬಿಕೆ ಇಟ್ಟಿರುತ್ತಾರೆ. ಕಾರಣ ಮೊದಲ ಪ್ರೀತಿ ಪರಿಶುದ್ಧವಾಗಿರುತ್ತದೆ. ಅಲ್ಲಿ ನಮ್ಮ ಬಯಕೆ ಗಳಿರುತ್ತೆ. ಆಸೆಗಳಿರುತ್ತೆ. ಆಕಾಂಕ್ಷೆಗಳಿರುತ್ತೆ. ನೂರು ವರ್ಷಗಳ ಬದುಕನ್ನ ಕಟ್ಟಿಕೊಳ್ಳಬೇಕೆಂಬ ಒಂದು ನೀರಿಕ್ಷೆ ಇರುತ್ತೆ. ಆದರೆ ದುರಂತ ನೋಡಿ ಬಹಳಷ್ಟು ಜನರ ಜೀವನದಲ್ಲಿ ಮೊದಲ ಪ್ರೀತಿ ಸೋತು ಬಿಡುತ್ತೆ. ಕಾರಣವಲ್ಲದ ಕಾರಣಕ್ಕೆ ದೂರವಾಗಿ ಬಿಡುತ್ತೆ. ಪ್ರಾಣಕ್ಕಿಂತ
ಹೆಚ್ಚಾಗಿ ಪ್ರೀತಿಸುವ ಎರಡು ಜೀವಗಳು ವಿನಾಕಾರಣ ದೂರವಾಗಿ ಬಿಟ್ಟಿರುತ್ತಾರೆ. ಮೊದಲು ಸ್ನೇಹಿತರಂತೆ ಪ್ರಾರಂಭವಾದ ಗೆಳೆತನ ನಂತರ ಪ್ರೀತಿಯಾಗಿ, ಪ್ರೇಮವಾಗಿ ಬದುಕನ್ನ ರೂಪಿಸಿಕೊಳ್ಳುವ ಮಟ್ಟಕ್ಕೆ ಮುಟ್ಟಿರುತ್ತೆ.
ಮೊದಲ ಪ್ರೀತಿಗೆ ಗೊತ್ತಿಲ್ಲದೆ Full stop ಬಿದ್ದುಹೋಗಿರುತ್ತೆ. ಮೊದಲ ಪ್ರೀತಿಯ ನೋವನ್ನ ಬಹಳಷ್ಟು ಜನ ಹುಡುಗ-ಹುಡಿಗಿಯರು ಸಹಿಸಿಕೊಳ್ಳುವುದು ಕಷ್ಟ. ಹುಡುಗಿ ಕಣ್ಣೀರು ಹಾಕ್ತಾಳೆ. ಒಂಟಿತನದಿಂದ ನರಳುತ್ತಾಳೆ, ಒಬ್ಬಳೇ ಮುಗ್ಧವಾಗಿ ಅಳುತ್ತಾಳೆ. ಮನೆಯ ಮೂಲೆಯಲ್ಲಿ ಕುಳಿತು ಗೊತ್ತಿಲ್ಲದಂತೆ Depressionಗೆ ಒಳಪಡುತ್ತಾಳೆ. ಇನ್ನು ಹುಡುಗರ ಕಥೆ ತುಂಬಾ diferent. ಅಳುತ್ತಾರೆ. ಒಂದು ಲಾಂಗ್ ಡ್ರೈವ್ ಹೋಗ್ತಾರೆ ಡಾಬಾ ಗೋ, ಕಾಂಡಿಮೆಂಟ್ಸ್ ಗೋ ಸೀಮಿತವಾಗಿಬಿಡುತ್ತಾರೆ. ಇವತ್ತಲ್ಲ ನಾಳೆ ಮತ್ತೆ ಅವಳು ಸಿಗದೆ ಇರ್ತಾಳ ಎಂಬ ನೀರಿಕ್ಷೆಯ ಇರ್ತಾರೆ.
ಆದರೂ ಬರ್ತಾ ಬರ್ತಾ ಬರ್ತಾ ಕಾಲ ಬದಲಾಗುತ್ತೆ. ಅವಳ ನೆನಪು ಮಾಸಿಹೋಗುತ್ತೆ. ಅವನ ನೆನಪು ಮರೆಯಾಗುತ್ತಾ ಬರುತ್ತೆ. ಆ ಮೊದಲ ಪ್ರೀತಿಯ ನೋವನ್ನ ಸಹಿಸಿಕೊಳ್ಳಲಾಗದೆ ಏನೋ ಮಾಡಬೇಕು ಜೀವನದಲ್ಲಿ ಅಂತ ಬಯಸುತ್ತಾರೆ. ಆದರೂ ಆ ನೋವನ್ನ
ಮರೆಯಲಾಗದೆ ಒಬ್ಬ ಹುಡುಗ ಎರಡನೆಯ ಪ್ರೀತಿಗೆ ಕೈ ಹಾಕುತ್ತಾನೆ. ಒಬ್ಬ ಹುಡುಗಿ ಎರಡನೇ ಪ್ರೀತಿಗೆ ಕೈ ಹಾಕುತ್ತಾಳೆ.
ಇಲ್ಲಿಂದ ಶುರುವಾಗುತ್ತೆ ನಿಜವಾದ ಸಮಸ್ಯೆ. ಬಹಳಷ್ಟು ಮಂದಿ ಮೊದಲ ಪ್ರೀತಿಯಲ್ಲಿ ಸೋತ ತಕ್ಷಣ ಎರಡನೇ ಪ್ರೀತಿಗೆ ಕೈ ಹಾಕುತ್ತಾರೆ. ಎರಡನೇ ಪ್ರೀತಿಯಲ್ಲಿ ಮೊದಲನೆಯ ಪ್ರೀತಿಯ ನೋವನ್ನ ಮರೆಯಬೇಕು ಆ ಕಣ್ಣೀರನ್ನ ದೂರಮಾಡಿಕೊಳ್ಳಬೇಕು ಎಂಬ ಪ್ರಯತ್ನ ವಿರುತ್ತೆ. ಆ ಕಾರಣಕ್ಕೆ ಎರಡನೇ ಪ್ರೀತಿಯಲ್ಲಿ ಕ್ಲಾರಿಟಿ ಯಿಲ್ಲದೆ ಕಮಿಟ್ ಆಗ್ಬಿಡುತ್ತಾರೆ. ಮೊದಲ ಪ್ರೀತಿಯ ದುಃಖವನ್ನ ಮರೆಯುವುದಕ್ಕೆ ನೋಡು ನಿನಗಿಂತ ಒಳ್ಳೆ ಹುಡುಗಿನ ಪ್ರೀತಿಸುತ್ತೀನಿ ಅಂತ ಮೊದಲ ಹುಡುಗಿಗೆ ತೋರಿಸಕ್ಕೆ ನಿನಗಿಂತ ಒಳ್ಳೆ ಹುಡುಗನನ್ನ ನಾನು ಪ್ರೀತಿಸುತ್ತೀನಿ ಅಂತ ಆ ಮೊದಲ ಹುಡುಗನಿಗೆ ತೋರಿಸಕ್ಕೆ ಎರಡನೇ ಪ್ರೀತಿಗಳು ಪ್ರಾರಂಭವಾಗುತ್ತದೆ.
ಆದರೆ ಎರಡನೇ ಪ್ರೀತಿಯಲ್ಲಿ ಬಿದ್ದಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಕಾರಣ ಅಲ್ಲಿ ನೀವಿರಲ್ಲ ಇಗೋ ಇರುತ್ತದೆ. ಅಲ್ಲಿ ನೀವಿರಲ್ಲ ನಿಮ್ಮ ಪ್ರತಿಷ್ಠೆ ಇರುತ್ತದೆ. ಅಲ್ಲಿ ನೀವಿರಲ್ಲ ಮೊದಲ ಪ್ರೀತಿಯ ನೋವಿರುತ್ತದೆ. ಅಲ್ಲಿ ನಿವೇನೆಂದು ಪ್ರೂವ್ ಮಾಡುವ ಒಂದು ಬಯಕೆ
ಇರುತ್ತದೆ. ಎರಡನೇ ಪ್ರೀತಿಗೆ ಕೈ ಹಾಕಿದ ತಕ್ಷಣ ತುಂಬಾ ಎಚ್ಚರಿಕೆಯಿಂದ ಇರಬೇಕು. ಅಪ್ಪಿ ತಪ್ಪಿ ಜೀವನದಲ್ಲಿ ಮತ್ತೆ ಎಡವಟ್ಟಾಗಿ ಎರಡನೇ ಪ್ರೀತಿ ಸೋತರೆ ಆ ನೋವಿನಿಂದ ಆಚೆ ಬರುವುದು ತುಂಬಾ ಕಷ್ಟ.
ಬಹಳಷ್ಟು ಮಂದಿಗೆ ಸಹಜವಾಗಿ ತುಂಬಾ ಬುದ್ಧಿ ಇರುವಂತಹ ಹುಡುಗರು, ಹುಡುಗಿಯರು ಈ ಪ್ರೀತಿಯಿಂದ ದೂರವಿರಲು, ಸಾಧ್ಯವಿಲ್ಲ, ಏಕೆಂದರೆ ಸಹಜವಾಗಿ ಇವತ್ತು ಸಾಚಾಗಳಂತೆ ಭಾಷಣ ಮಾಡಿದರೂ, ಪ್ರೀತಿ – ಪ್ರೇಮ ಅನ್ನುವುದರ ಬಗ್ಗೆ ಮಾತನಾಡಿದರು ಬಹಳಷ್ಟು ಜನ ಆ ಪ್ರೀತಿಯ ಸೆಳೆತಕ್ಕೆ ಒಳಪಟ್ಟಿರುತ್ತಾರೆ.
ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಮನೆಯ ಸಂಪ್ರದಾಯ ನಡುವೆಯೂ ಅವನ, ಅವಳ ಸೆಳೆತ ಕೈ ಬೀಸಿ ಕರೆಯುತ್ತಾ ಇರುತ್ತೆ. ಒಂದಷ್ಟು ವರ್ಷ ಗಳ ಕಾಲ ಜೀವನ ಹಾಗೆ ನಡೆಯುತ್ತೆ. ಒಂದೂ, ಎರಡೂ ಪ್ರೀತಿ ಸೋಲುತ್ತೆ ಕೊನೆಯದಾಗಿ ನಿಮ್ಮ ಫ್ಯಾಮಿಲಿಯ ದೊಡ್ಡವರ ತೀರ್ಮಾನ ಗೆಲ್ಲುತ್ತೆ. ತುಂಬಾ ಪ್ರೀತಿಗಳು ಸೋಲುತ್ತೆ. ಇದು ತುಂಬಾ ಜನರ ಲೈಫ್. ಇನ್ನು ಕೆಲವರ ಕಥೆಗೆ ಬರೋಣ. ಹುಡುಗಿ ಪ್ರೀತಿಯಲ್ಲಿ ಬಿದ್ದಾಗ, ಹುಡುಗನು ಪ್ರೀತಿಯಲ್ಲಿ ಬಿದ್ದಾಗ ಅವನು ನೂರು ವರ್ಷ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಕೈ ಬಿಡಲ್ಲ ಅವಳು ನನ್ನ ನೂರು ವರ್ಷ ಹ್ಯಾಪಿಯಾಗಿ ಇಡುತ್ತಾಳೆ.
ನನ್ನನ್ನ ದೂರ ಮಾಡಲ್ಲ. ಅನ್ನೋ ಒಂದು Solid ಆದ ತೀರ್ಮಾನಗಳು Rule ಮಾಡಿರುತ್ತದೆ. ಆದರೆ ಟ್ರಾಜಿಡಿ ಏನು ಅಂದರೆ ಬರ್ತಾ ಬರ್ತಾ ಹುಡುಗನಿಗೆ ಹುಡುಗಿ ಮೇಲೆ ಗೊತ್ತಿಲ್ಲದೆ ಆಸಕ್ತಿ ಕಡಿಮೆಯಾಗುತ್ತ ಬರುತ್ತೆ. ಹುಡುಗಿಗೂ ಹುಡುಗನ ಮೇಲೆ ಗೊತ್ತಿಲ್ಲದೆ ಆಸಕ್ತಿ ಕಡಿಮೆಯಾಗುತ್ತಾ ಬರುತ್ತೆ. ಯಾಕೆಂದರೆ ಪ್ರೀತಿಯಲ್ಲಿದ್ದಾಗ ಪ್ರತಿಯೊಬ್ಬ ಹುಡುಗನು ಹುಡುಗಿಗೆ ಆರ್ಟಿಫಿಶಿಯಲ್ ಜಗತ್ತು ತೋರಿಸು ತ್ತಾನೆ. ಇಲ್ಲದ ಕಲ್ಪನೆಗಳನ್ನ, ನನಸಾಗದ ಕನಸುಗಳ ಗೋಪುರವನ್ನ ಕಟ್ಟಿರುತ್ತಾನೆ.
ಹುಡುಗೀನು ಅಷ್ಟೇ, ಅತಿಯಾದ ಪ್ರೀತಿಯನ್ನು ಜಾಸ್ತಿ ಹಂಚಿಬಿಟ್ಟಿರುತ್ತಾಳೆ ಬರ್ತಾ ಬರ್ತಾ ಅವನ ನೈಜತೆ ಗೊತ್ತಾಗುತ್ತಾ ಬರುತ್ತೆ. ಅವಳಿಗೆ Reality ಅರ್ಥ ಆಗ್ತಾ ಬರುತ್ತೆ. ಆಚೆಯೂ ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಂಡರೆ ಅದನ್ನ ಯಶಸ್ವೀ ಜೀವನ ಅಂತೀವಿ. ಸುಖ ದಾಪಂತ್ಯ ಅಂತೀವಿ. ಇಲ್ಲ ಅಂದರೆ ಒಂದು ಅದ್ಭುತವಾದ ಯಶಸ್ಸಿನ ಕಡೆ ನಡೆಯಬೇಕಾಗಿರೋ ಬದುಕು ಒಂದು ಅ ನಿಂತು ಬಿಡುತ್ತದೆ. ಇಲ್ಲವೆಂದರೆ ನಿರಾಸೆಯೊಂದಿಗೆ ಬದುಕನ್ನ ಕಳೆಯಬೇಕಾಗುತ್ತದೆ.
ಅವಳದ್ದು ಪ್ರಾಯ, ತುಂಬಾ ಹೃದಯಗಳು ಗಾಯ ಅದು ಮಲೆನಾಡಿನ ಡಿಗ್ರಿ ಕಾಲೇಜು, ಕಾಲೇಜಿನ ಮೊದಲ ದಿನ, ಬದುಕಿನ ಬಗ್ಗೆ ಭರವಸೆಯೊಂದಿಗೆ ನೂರಾರು ಜೀವಗಳು ಕಾಲೇಜಿಗೆ ನಡೆದು ಬಂದವು. ಮೊದಲ ದಿನ ಮುಗ್ಧರಂತೆ, ಅಮಾಯಕ ರಂತೆ, ವರ್ತಿಸುವ ಹುಡುಗರು, ಏನು ಗೊತ್ತೇ ಇಲ್ಲವೆಂಬಂತೆ ವರ್ತಿಸುವ ಹುಡುಗಿಯರು. ಫೇರ್ ಆಂಡ್ ಲವ್ಲಿ ಗೆ ಬ್ರಾಂಡ್ ಅಂಬಾಸಿಡರ್ ತರ, ಲ್ಯಾಕ್ ಮೀ, ಗಾರ್ನಿಯರ್‌ಗೆ ಕೇರ್ ಆಫ್ ಅಡ್ರಸ್ ತರ ಇಟ್ಟ ಆ ಚೆಲುವೆಯ ಸೌಂದರ್ಯಕ್ಕೆ ಮನಸೋಲದ ಜೀವಗಳೇ ಇರಲಿಲ್ಲ.
ಅವಳ ಮುಗುಳ್ನಗೆಗೆ ಮನಸೋತ ಹೃದಯಗಳು ಸೋಲಿಗೂ ಸಹ ಅಷ್ಟೇ ಸನಿಹದಲ್ಲಿದ್ದವು, ಭವಿಷ್ಯದ ಬಗ್ಗೆ ಭರವಸೆ, ಹೇಳಲಾಗದ ಆಕಾಂಕ್ಷೆಗಳು, ಹೆತ್ತವರ ಆಸೆ, ನಂಬಿದವರ ವಿಶ್ವಾಸ, ಮನಸ್ಸಿನ ಘರ್ಷಣೆಗಳ ನಡುವೆ ನೂರಾರು ಜೀವಗಳು ತರಗತಿಯಲ್ಲಿ ಪಾಠ ಕೇಳಲು ಶುರುಮಾಡಿದವು. ಕಣ್ಣುಗಳಲ್ಲಿ ಅಮಾಯಕತೆಯನ್ನು ತುಂಬಿಕೊಂಡು ಶ್ರದ್ಧೆಯಿಂದ ಪಾಠ ಕೇಳುವ ಹುಡುಗಿಯರು, ಐನ್ ಸ್ಟೈನ್ ಸಂಬಂಽಕರಂತೆ ವರ್ತಿಸುತ್ತ ಹುಡುಗರು ಪಾಠ ಕೇಳಲು ಶುರು ಮಾಡಿದರು.
ಮೊದಲ ತರಗತಿ ಮುಗಿಸಿಕೊಂಡು ಉಪನ್ಯಾಸಕರು ಹೊರಹೋಗುತ್ತಿದ್ದಂತೆ, ಕ್ಲಾಸಿನವರ ಕಣ್ಣುಗಳೆಲ್ಲ ಆ ಚೆಲುವೆಯ ಮೇಲೆ ಬಿತ್ತು.
ಏನೇ ಅವರೆಲ್ಲ ನನ್ನೇ ನೋಡ್ತಿದಾರೆ ಅಂತ ಪಕ್ಕದಲ್ಲಿದ್ದ ಗೆಳತಿಗೆ ಹೇಳಿ, ಮನಸ್ಸಿನ ಸಂಭ್ರಮ ಆಚರಿಸಿಕೊಂಡ ಅವಳಿಗೆ ತನ್ನ ಚಂದ ತನದ ಬಗ್ಗೆ ಹೆಮ್ಮೆಯಾಯಿತು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಗೆಳೆಯ – ಗೆಳೆತಿಯರ ಪರಿಚಯ, ಮೊಬೈಲ್ ನಂಬರ್ ಎಕ್ಸ್ಚೇಂಜ್,
ವಾಟ್ಸ್‌ಆಪ್ ನಂಬರ್ ಇದೇನಾ? ಎಂದು ಅಮಾಯಕರಂತೆ ಕೇಳುವ ಹುಡುಗ, ನಾನು ಓದಬೇಕು ಜಾಸ್ತಿ ವಾಟ್ಸ್‌ಆಪ್‌ಗೆ ಬರಲ್ಲ. ಅಂತ ಸುಂದರವಾದ ಸುಳ್ಳು ಹೇಳುವ ಹುಡುಗಿ, ಸಂಜೆ ಮನೆಗೆ ಹೋಗ್ತಿದಂತೆ ಹಾಯ್! ಎಂದು ಮೆಸಜ್ ಇಟ್ಟು ಇನ್ನು ಸಿಲಬಸ್ ಆಗಿಲ್ಲ ಅಲ್ವ ಅದಕ್ಕೆ ಫ್ರೀ ಇದ್ದೇ, ಅದಕ್ಕೆ ಟೆಕ್ಟ್ಸ್ ಮಾಡಿದೆ ಅಂತ ಮತ್ತೊಂದು ಸುಳ್ಳನ್ನು ಅದ್ಭುತವಾಗಿ ಜೋಡಿಸುತ್ತಾಳೆ. ಮುಂದೇನಾಯಿತು ಆನ್ ಇಂಟ್ರಸ್ಟಿಂಗ್ ವೈಟ್. ಜಸ್ಟ್ ವೈಟ್!