Saturday, 14th December 2024

ಏನಾದರೂ ಆಗಲಿ, ಭಯಪಡದೆ ಸಾಧಿಸಬೇಕು !

ಪರಿಶ್ರಮ

parishramamd@gmail.com

ಬದುಕಲ್ಲಿ ಅಂದುಕೊಂಡಿದ್ದು ಸಾಧಿಸಬೇಕು ಅಂತ ಎರು ತೀರ್ಮಾನಿಸಿರುತ್ತೀವಿ. ಆದರೆ, ಒಂದು ಅಸ್ಸಾಯಕತೆ ಇಂದ ಉಳಿದುಹೋಗಿ ಬಿಡುತ್ತೀವಿ. ಇಲ್ಲಿ ನಮ್ಮ ಎಲ್ಲರ ಪ್ರಾಬ್ಲಮ್ ಏನು ಅಂದ್ರೆ ಎಲ್ಲರ ಮಾತುಗಳಿಗೆ ಕಿವಿ ಕೊಡುತ್ತೀವಿ. ಜೀವನದ ಮಧ್ಯೆದಲ್ಲಿ ನಾಟಕ. ಈ ದೊಡ್ಡ ದೊಡ್ಡ ನಾಟಕ ಕಂಪನಿಗಳಲ್ಲಿ ದೊಡ್ಡ ದೊಡ್ಡ ನಟರಿರುತ್ತಾರೆ.

ಹುಟ್ಟಿದಾಗ ಜಾತಕ, ಮಧ್ಯದಲ್ಲಿ ನಾಟಕ, ಸತ್ತಾಗ ಸೂತಕ ನಾವೆಲ್ಲ ಒಂದು ದೊಡ್ಡ ಕನಸಿನೊಂದಿಗೆ ಬೈ ಬರ್ತ್ ಒಂದು ದೊಡ್ಡ ಫೈಟ್ ನಮ್ಮೆಲ್ಲರದ್ದು. ಈ ಪ್ರಪಂಚಕ್ಕೆ ಬರುವುದೇ ಒಂದು ದೊಡ್ಡ ಯುದ್ಧ. ಬಂದ ನಂತರ ಇನೊಸೆ ಇಂದ ಬೆಳಿತಾ ಇರುತ್ತೀವಿ. ನಂತರ ಜ್ಞಾನ ಬರುತ್ತೆ. ಬುದ್ಧಿ ಹೆಚ್ಚಾದಂತೆ ಭಯನೂ ಹೆಚ್ಚಾಗುತ್ತೆ. ಜ್ಞಾನ ಹೆಚ್ಚಾದಂತೆ ಗೊತ್ತಿಲ್ಲದಂತೆ ಅeನನೂ ಹೆಚ್ಚಾಗುತ್ತೆ. ತುಂಬ ಧೈರ್ಯ ವಾಗಿ ಬದುಕಬೇಕು ಅಂತ ಪ್ರಯತ್ನ ಪಟ್ಟು ತುಂಬ ಭಯ ಬಿದ್ದು ಬದುಕೋದು ಬಹಳಷ್ಟು ಜನ ರೂಡಿಸಿಕೊಂಡು ಬಿಡುತ್ತಾರೆ.

ಏನೋ ಸಾಧಿಸಬೇಕು ಅಂತ ಹೋಗುತ್ತಾರೆ. ಏನನ್ನು ಸಾಧಿಸಲಾಗದೆ ಉಳಿದು ಹೋಗುತ್ತಾರೆ. ಇನ್ನು ಮಧ್ಯದಲ್ಲಿ ಬಹಳಷ್ಟು ವರ್ಷಗಳ ಕಾಲ ಒಂದು ರೀತಿಯ ನಾಟಕ. ಅವರವ ಡ್ರಾಮಾ ಕಂಪನಿಗೆ ಅವರವರೇ ನಟರಾಗುತ್ತಾರೆ. ಒನ್ ಫನ್ ಡೇ ಬದುಕಿನ ಅಧ್ಯಾಯ ಮುಗಿದುಹೋಗುತ್ತೆ. ಸೂತಕದ ಛಾಯೆ ಮೂಡಿಬಿಡುತ್ತೆ. ಕೆಲವರು ಚಿಕ್ಕ ಸೋಲಿಗೆ ಹೆದರಿಬಿಡುತ್ತಾರೆ. ಸೋತು ಗೆದ್ದವರು ಪ್ರಪಂಚದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇಲೊನ್ ಮ ಒಂದು ಕಂಪನಿ ಇಂದ ಎತ್ತು ಆಚೆ ಹಾಕುತ್ತಾರೆ. ಆವತ್ತು ಆತ ಆ ಕೆಲಸ ಕಳೆದುಕೊಂಡಿರಲಿಲ್ಲ ಅಂದ್ರೆ ಇವತ್ತು ಸ್ಪೇಸ್‌ಎಕ್ಸ್, ಟೆಸ್ಲಾ ಅನ್ನುವ ಹಲವಾರು ದೊಡ್ಡದೊಡ್ಡ ಕಂಪನಿಗಳನ್ನು ಕಟ್ಟುತ್ತಿರಲಿಲ್ಲ.

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ. ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತಿದ್ದ ಒಬ್ಬ ಲೇಡಿ ಸಪೋಸ್ ಆವತ್ತು ಆ ಸ್ಟ್ರಗಲ್‌ ನಿಂದ ಕಲಿತುಕೊಂಡಂಥ ಪಾಠಗಳೇ ಇವತ್ತು ಆಕೆನ ಸೆಂಟ್ರಲ್ ಮಿನಿಸ್ಟರ್ ಆಗಿ ರೂಪುಕೊಳ್ಳಲು ಕಾರಣ ವಾಗುತ್ತೆ. ಮೊದಲ ಬಾರಿ ಇನ್ಫೋಸಿಸ್ ನಾರಾಯಣ ಮೂರ್ತಿ ಸಾಫ್ಟ್ರೆನಿಕ್ಸ್ ಅಂತ ಒಂದು ಕಂಪನಿಯನ್ನು ಕಟ್ಟುತ್ತಾರೆ. ಆ ಕಂಪನಿ ಫೇಲ್ ಆಗುತ್ತೆ.

ನಂತರ ಅವ್ರು ವಿಪ್ರೋಗೆ ಅಪ್ಲಿಕೇಶನ್ ಹಾಕುತ್ತಾರೆ. ವಿಪ್ರೋದಲ್ಲೂ ಕೆಲಸ ಸಿಗಲ್ಲ. ಸಪೋಸ್ ಅವರಿಗೆ ವಿಪ್ರೋದಲ್ಲಿ ಏನಾದರು ಕೆಲಸ ಸಿಕ್ಕಿದ್ದರೆ. ವಿಪ್ರೋದಲ್ಲಿ ಉಳಿದುಹೋಗಿಬಿಡುತ್ತಿದ್ರು ಆದ್ರೆ ವಿಪ್ರೋದಲ್ಲಿ ಕೆಲಸ ಸಿಗಲಿಲ್ಲ. ಅದರಿಂದ ಇನೋಸಿಸ್ ಅನ್ನು ಕಟ್ಟಿದ್ದರು. ಅದಕ್ಕೆ, ಯಾವುದೇ ಒಂದು ಸೋಲು ಸೋಲಲ್ಲ ಅದು ಇನ್ನು ಯಾವುದೊ ಅವತ್ತು ಕೆಂಟಗಿ ಚಿಕನ್‌ನ ಎಷ್ಟು ಕೆಲಸ ಹೋದ್ರು ಫೈರ್ ಮಾಡುತ್ತಾರೆ.
ಅದರಿಂದ ಬಂದು ಕೆ.ಎಫ್.ಸಿ ಚಿಕನ್ ಕಟ್ಟುತ್ತಾರೆ.

ಆವತ್ತು ಆ ಘಟನೆ ಆಗಿರಲಿಲ್ಲ ಅಂದ್ರೆ ಇವತ್ತು ಕೆ.ಎಫ್.ಸಿ ಇರುತ್ತಿರಲಿಲ್ಲ. ಸೊ ಯಾವುದೇ ಒಂದು ಸೋಲು ಪ್ರತಿಯೊಬ್ಬರಿಗೂ ಏನೋ ಒಂದು ಪಾಠ ಕಲಿಸಲು ಬಂದಿರುತ್ತೆ. ನೀವು ಅಂದುಕೊಂಡಿರುತ್ತೀರೋ ಅದರ ಮೇಲೆ ಭರವಸೆ ಇರಲಿ ಧೈರ್ಯ ಇರಲಿ. ಒಂದು ರಾಜ ಒಂದು ಮಂತ್ರಿ ಇರುತ್ತಾರೆ. ಮಂತ್ರಿ ರಾಜನ ಹತ್ತಿರ ಏನೇ ಆದರೂ ಒಳ್ಳೆದಾಯಿತು ರಾಜರೇ ಅಂತ ಹೇಳುತ್ತಾ ಇರುತ್ತಾನೆ. ರಾಜರು ತುಂಬ ಖುಷಿಯಾಗುತ್ತಾ ಇರುತ್ತಾರೆ. ಒಂದು ರಾಜನಿಗೆ ಬೆರಳು ಕಟ್ಟಾಗಿರುತ್ತೆ. ಒಳ್ಳೆದಾಯಿತು ರಾಜರೇ ಅಂತಾನೆ. ರಾಜನಿಗೆ ಕೋಪ ಬರುತ್ತೆ. ನನಗೆ ಬೆರಳು ಕಟ್ಟಾದರೆ ನಿನಗೆ ಒಳ್ಳೆದಾಯಿತು ಅಂತೀಯಾ? ಎಂದು ಆತನನ್ನ ಜೈಲಿಗೆ ಹಾಕಿಸುತ್ತಾರೆ.

ಯಾವಾಗಲು ಮಂತ್ರಿ ಜತೆ ರಾಜ ಬೇಟೆಗೆ ಹೋಗುತ್ತಾ ಇದ್ದರು. ಇವಾಗ ಮಂತ್ರಿ ಒಳಗೆ ಇದಾರಲ್ಲ, ರಾಜ ಒಬ್ಬರೇ ಕಾಡಿಗೆ ಹೋಗು ತ್ತಾರೆ. ಇದ್ದಕ್ಕಿಂದ್ದಂಗೆ ಆ ಕಾಡಲ್ಲಿ ಯಾವುದೊ ಒಂದು ಜನಾಂಗ ಆ ರಾಜನನ್ನ ಹಿಡಿದುಕೊಂಡು ಹೋಗುತ್ತಾರೆ. ಯಾವುದು ಹಬ್ಬ ಇದೆ. ದೇವರಿಗೆ ಬಲಿಕೊಡಬೇಕು ಅಂತ. ರಾಜ ಅಂತ ಗೊತ್ತಿಲ್ಲ ಅವರಿಗೆ ಮಲಗಿಸಿ ಇನ್ನೇನು ಬಲಿ ಕೊಡಬೇಕು ಅಂದ ತಕ್ಷಣ ಕೈ ಬೆರಳನ್ನು ನೋಡುತ್ತಾರೆ. ಕೈ ಬೆರಳು ಕಟ್ಟಾಗಿದೆ, ಅಂಗ ಭಗ್ನವಾಗಿದೆ ಇವರನ್ನ ಬಲಿ ಕೊಡಬಾರದು ಅಂತ ಹೇಳುತ್ತಾರೆ. ಅವಾಗ ಸಡೆನ್ ಆಗಿ ರಾಜನನ್ನ ಬಿಟ್ಟು ಬಿಡುತ್ತಾರೆ. ಬರುವಾಗ ಯೋಚಿಸುತ್ತಾನೆ. ಆವತ್ತು ಮಂತ್ರಿ ಹೇಳಿದ್ದು ಕರೆಕ್ಟ್.

ಆವತ್ತು ಕೈ ಬೆರಳು ಕಟ್ಟಾಗಿರಲಿಲ್ಲ ಅಂದ್ರೆ ಇವತ್ತು ಬಲಿಯನ್ನ ಕೊಡುತ್ತಿದ್ದರು. ಅಂತ ಅಂದುಕೊಂಡು ಮಂತ್ರಿ ಬಳಿ ಹೋಗಿ ಮಂತ್ರಿಗಳೇ ದಯವಿಟ್ಟು ಕ್ಷಮಿಸಿ ನಾನು ತಪ್ಪು ಮಾಡಿ ಬಿಟ್ಟೆ. ನಿಮ್ಮನ್ನ ಒಳಗಡೆ ಹಾಕಿ ಅಂತ ಹೇಳಿಬಿಟ್ಟೆ. ಆವಾಗ ಪುನಃ ಮಂತ್ರಿ ಒಳ್ಳೆದಾಯಿತು ರಾಜರೇ ಅಂತಾನೆ. ರಾಜನಿಗೆ ಮತ್ತೆ ಕೋಪ ಬರುತ್ತೆ. ನಿನ್ನನ್ನ ಜೈಲಿ ಹಾಕಿಸಿದೀನಿ ಮತ್ತೆ ಒಳ್ಳೆದಾಯಿತು ಅಂತ ಅನ್ನುತ್ತೀಯಾ? ಅಂತ ಕೇಳಿದಾಗ ಆಗ ಒಂದು ಮಾತು ಹೇಳುತ್ತಾರೆ ಮಂತ್ರಿಗಳು ರಾಜರೇ ಸಪೋಸ್ ನೀವು ನನ್ನ ಜೈಲಿಗೆ ಹಾಕಿರಲಿಲ್ಲ ಅಂದರೆ ಬೇಟೆಗೆ ಕಾಡಿಗೆ ನಿಮ್ಮ ಜತೆ ನಾನು ಬರುತ್ತಿದ್ದೆ.

ನಿಮ್ಮ ದೇಹ ಅಂಗ ಭಗ್ನವಾಗಿದೆ ಅಂತ ನನ್ನನ್ನ ಬಲಿಕೊಡುತ್ತಾ ಇದ್ದರು. ಆವಾಗ ರಾಜ ರಿಯಲೈಸ್ ಆಗುತ್ತಾರೆ. ಏನೇ ಆದರೂ ಲೈಫ್ನಲ್ಲಿ ಒಳ್ಳೇದಕ್ಕೆ ಆಗಿರುತ್ತೆ. ಇದನ್ನ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಏನೋ ಸೋತ ಎಂದ ತಕ್ಷಣ ಆಕಾಶ ತಲೆ ಮೇಲೆ ಬಿದ್ದ ಹಾಗೆ.
ಬದುಕೇ ಮುಗೆದೇ ಹೋಯಿತು ಅಂತ ಹಾಗೆ ಇನ್ನೇನು ಲೈಫ್ನಲ್ಲಿ ಅವಕಾಶ ಇಲ್ಲದ ಹಾಗೆ ಲೈಫಿಗೆ ಫುಲ್ ಸ್ಟಾಪ್ ಬಿದ್ದು ಹೋಯಿತು ಅನ್ನೋ ರೀತಿಯಲ್ಲಿ ಆಡಬಾರದು.

ಸಾಗರದಷ್ಟು ಸಮಸ್ಯೆಗಳಿರಲಿ, ಪರವಾಗಿಲ್ಲ ಆಕಾಶದಷ್ಟು ಅವಕಾಶಗಳು ಇದೆ ಅನ್ನೋದು ಮರೆಯಬಾರದು. ಉತ್ತರ ಪ್ರದೇಶದಲ್ಲಿ ಒಬ್ಬ ಮಿಡಲ್ ಕ್ಲಾಸ್ ಹುಡುಗ ಅವರ ತಂದೆ ತಾಯಿ ಇಬ್ಬರು ತರಕಾರಿಗಳನ್ನು ಮಾರುತ್ತಾ ಇರುತ್ತಾರೆ. ತುಂಬಾ ಕಷ್ಟ ವಾರದಲ್ಲಿ ನಾಲ್ಕು
ದಿನ ಫುಟ್ಪಾತ್ ಮೇಲೆ ತರಕಾರಿ ಮಾರಲು ಬಿಡುತ್ತಿರಲಿಲ್ಲ. ಸಮಸ್ಯೆ ಕೊಡುತ್ತಿದ್ದರು. ಟ್ರಾಫಿಕ್ ಸಮಸ್ಯೆ ಎಲ್ಲ ಆದಾಗ ತರಕಾರಿ ಮಾರಲು ಆಗುತ್ತಿರಲಿಲ್ಲ.

ಆ ಟೈಮ್‌ ನಲ್ಲಿ Income ಬಂದ್ರೆ ಬಂತು ಇಲ್ಲ ಅಂದ್ರೆ ಇಲ್ಲ. ಅಂತ ಟೈಮ್‌ಲ್ಲಿ ಒಂದು ಸಲ ಏನಾಗಿ ಬಿಡುತ್ತೆ ಅಂದರೆ. ಅವರ ತಂದೆ
ಇದ್ದಕ್ಕಿಂದಂತೆ ತೀರಿ ಹೋಗಿಬಿಡುತ್ತಾರೆ. ಆ ತಾಯಿ ಒಬ್ಬರೇ ಆ ಮಗುವನ್ನ ಸಾಕಿ ಬೆಳೆಸುತ್ತಾರೆ. ಅವನು ಹೇಗೋ ಕಷ್ಟ ಪಟ್ಟು ಐಐಟಿ ಎಂಟ್ರಗೆ ಪ್ರಿಪೇರ್ ಆಗುತ್ತಾನೆ. ಅವನು ಬಂದು ತರಕಾರಿ ಮಾರಲು ಕೂರುತ್ತಾನೆ. ಆತ ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗೋಕೆ ಆಗುತ್ತಿರಲಿಲ್ಲ. ಯಾವುದೇ ರೀತಿಯ ಕೋಚಿಂಗ್ ಇಲ್ಲ. ಅ ತರಕಾರಿ ಮಾರುತ್ತಾ, ಫುಟ್ಪಾತ್ ಮೇಲೆ ಓದುತ್ತಾ. ಐಐಟಿನಲ್ಲಿ ಆಲ್ ಇಂಡಿಯಾ 163 ರ‍್ಯಾಂಕ್ ಬಂದ. ಮುಂಬೈನಲ್ಲಿ ಸೀಟು ಕೂಡ ಆಗುತ್ತೆ. ಈಗ ಆತ ಮುಂಬೈಲಿ ಓದುತ್ತಿದ್ದಾನೆ.

ಯಾವುದೇ ಕೋಚಿಂಗ್ ಇಲ್ಲದೆ ಹೇಗೆ ಆತ ಆ ಎತ್ತರಕ್ಕೆ ಬೆಳೆದ. ಯಾಕೆ ಅಂದ್ರೆ ಏನಾದರು ಸಾಧಿಸಬೇಕು ಅಂದ್ರೆ ಒಂದು ಗುಂಡಿಗೆ ಮಾಡಲೇಬೇಕು ಅನ್ನೋ ಆತ್ಮವಿಶ್ವಾಸ ಇರಬೇಕು. ಬದುಕಲ್ಲಿ ಅಂದುಕೊಂಡಿದ್ದು ಸಾಧಿಸಬೇಕು ಅಂತ ಎರು ತೀರ್ಮಾನಿಸಿರುತ್ತೀವಿ.
ಆದರೆ, ಒಂದು ಅಸ್ಸಾಯಕತೆ ಇಂದ ಉಳಿದುಹೋಗಿಬಿಡುತ್ತೀವಿ. ಇಲ್ಲಿ ನಮ್ಮ ಎಲ್ಲರ ಪ್ರಾಬ್ಲಮ್ ಏನು ಅಂದ್ರೆ ಎಲ್ಲರ ಮಾತುಗಳಿಗೆ ಕಿವಿ
ಕೊಡುತ್ತೀವಿ. ಜೀವನದ ಮಧ್ಯೆದಲ್ಲಿ ನಾಟಕ. ಈ ದೊಡ್ಡ ದೊಡ್ಡ ನಾಟಕ ಕಂಪನಿಗಳಲ್ಲಿ ದೊಡ್ಡ ದೊಡ್ಡ ನಟರಿರುತ್ತಾರೆ. ಚಿಕ್ಕ ಚಿಕ್ಕ ಡ್ರಾಮಾ ಕಂಪನಿಗಳಲ್ಲಿ ಚಿಕ್ಕ ಚಿಕ್ಕ ನಟರು ಇರುತ್ತಾರೆ.

ಯಾಕೆ ಅಂದರೆ ಒಂದು 50, 60, 70 ವರ್ಷಗಳ ನಾಟಕ ಇದು. ಜೀವನಕ್ಕೊಂದು ಅರ್ಥ ಬರಬೇಕು ಅಂದ್ರೆ ಸಿಗಬೇಕು ಅಂದರೆ ಇಷ್ಟ ಬಂದಂತೆ ಬದುಕಬೇಕು. ಕಷ್ಟ ಬಂದರೆ ಎದುರಿಸಬೇಕು.