Sunday, 13th October 2024

ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಕನಸು !

ಯಶೋ ಬೆಳಗು

yashomathy@gmail.com

ನಿತ್ಯದ ಕೆಲಸಗಳೂ ಒಂಥರ ಸಮುದ್ರದಂತೆಯೇ. ಮಾಡಿದಷ್ಟೂ ಅಲೆಅಲೆಯಾಗಿ ಬರುತ್ತಲೇ ಇರುತ್ತವೆ. ಅ ನಿಂತರೆ ಅದರಾಚೆ ಗಿನ ತುದಿ ಕಾಣುವುದೇ ಇಲ್ಲ. ಅದರಾಚೆಗೆ ಏನಿದೆ ಅನ್ನುವ ಹುಡುಕಾಟದ ನಡುವೆ ಎದುರಾಗುವ ಸವಾಲು ಗಳನ್ನು ಸ್ವೀಕರಿಸಿ ನೀರಿಗಿಳಿದಾಗಲೇ ಸಮಸ್ಯೆಯ ಸ್ವರೂಪ ಗೊತ್ತಾಗೋದು.

‘ಅಮ್ಮಾ, ಯಾವ್ದಾದ್ರೂ ಬೀಚ್ ಹತ್ರ ಕರ್ಕೊಂಡು ಹೋಗು, 2 ವರ್ಷದ ಮೇಲಾಯ್ತು ನಾವು ಸಮುದ್ರದ ಅಲೆಗಳೊಂದಿಗೆ ಆಟವಾಡದೆ….’ ಎನ್ನುತ್ತ ಮಗ ದುಂಬಾಲು ಬಿದ್ದ. ಹೇಗಿದ್ದರೂ ದಾಂಡೇಲಿಯಲ್ಲಿ ನಮ್ಮದೇ ಒಂದು ಪುಟ್ಟ ತೋಟವಿದೆ. ಅಂದು ಪುಟ್ಟಮನೆ ಕಟ್ಟಿ ಬೇಸರವಾದಾಗಲೆಲ್ಲ 2 ದಿನ ಇದ್ದು ಬರುವಂತೆ ಜತೆಗೆ ದಟ್ಟ ಕಾನನದಲ್ಲಿ ಅಲೆ ದಾಡುತ್ತ ಪ್ರಕೃತಿಗೆ ಹತ್ತಿರ ವಾಗುವಂತೆ ಜೀವಿಸಬೇಕು.

ಅನುವು ಆಪತ್ತಿಗೆ ತಮ್ಮನಂತಿರುವ ನರಸಿಂಹ ಚಾಪಖಂಡ ಅ ಇದ್ದಾನೆ. ಹತ್ತಿರದ ಹಾಲಿನ ಜಲಧಾರೆಯಂತೆ ಧರೆಗಿಳಿವ ದೂಧ್‌ ಸಾಗರ್ ಜಲಪಾತವಿದೆ. ಅದರ ಮುಂದೆ ಮಂದಗತಿಯಲ್ಲಿ ಚಲಿಸುವ ರೈಲಿನಲ್ಲಿ ಒಮ್ಮೆ ಪಯಣಿಸಿ ಆನಂದಿಸಬೇಕೆಂಬ ಕನಸಿನ್ನೂ ಕೈಗೂಡಿಲ್ಲ. ಗಡಿ ದಾಟಿದರೆ ಸರೋವರಗಳ ನಾಡು ಗೋವಾ ಅನ್ನುವ ಮನಸಿನ ಮಾತು ಗಳಿಗೆ ಬ್ರೇಕು ಹಾಕಿದ್ದು ಗೆಳತಿಯ ಮಾತುಗಳು. ಇಲ್ಲಿಂದ 50 ಕಿ.ಮೀ. ದೂರದಲ್ಲಿರುವ ನಮ್ಮ ತೋಟಕ್ಕೆ ವಾರಕ್ಕೊಮ್ಮೆ ಹೋಗಿ ಬರುವಷ್ಟರ  ಸಾಕು ಬೇಕೆನ್ನಿಸುತ್ತದೆ.

ಇನ್ನು ಅದರ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ಕಾವಲಿಗಿಟ್ಟರೆ ಅವರೇ ದೊಡ್ಡ ಕಳ್ಳರಾಗಿರುತ್ತಾರೆ. ಅವರನ್ನು ಕಾಯು ವುದೇ ನಮ್ಮ ಕೆಲಸವಾಗಿಬಿಡುತ್ತದೆ. ನೀನಿನ್ನೂ ಕನಸು ಕಾಣುತ್ತಿದ್ದೀಯ ಅಷ್ಟೆ. ನಾನು ಆ ಕನಸಿನಲ್ಲಿರುವ ತೊಂದರೆಗಳನ್ನೆಲ್ಲ ನಿತ್ಯ ಅನುಭವಿಸುತ್ತಿದ್ದೇನೆ ಅನ್ನುವ ಗೆಳತಿಯ ಮಾತುಗಳು ವಾಸ್ತವಕ್ಕೆ ಹಿಡಿದ ಕನ್ನಡಿ ಯಂತಿತ್ತು. ಅವಳು ಹೇಳುವುದರಲ್ಲಿಯೂ ನಿಜವಿದೆ ಅನ್ನಿಸಿದರೂ ಕನಸೇ ಇರದ ಬದುಕು ಅದೆಷ್ಟು ಬೋರಿಂಗ್ ಅಲ್ವಾ? ದಿನಾ ಬೆಳಗೆದ್ದು ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಒರೆಸುವುದು, ದಿನಸಿ ತರುವುದು, ಗಂಡನ ಇಷ್ಟಾನಿಷ್ಟ ಗಳನ್ನು ನೋಡಿ ಕೊಳ್ಳುವುದು, ಹೆಚ್ಚಿನ ಮಾರ್ಕು ತೆಗೆಯುವಂತೆ ಮಕ್ಕಳನ್ನು ರೂಪಿಸುವುದು, ಅವರಿಗಾಗಿ ದಿನಾ ಬೆಳಗೆದ್ದು ಡಬ್ಬಿ ರೆಡಿ ಮಾಡಿಡುವುದು, ಅವರ ಮದುವೆ, ಮುಂದಿನ ಭವಿಷ್ಯಕ್ಕಾಗಿ ಹಣ ಕೂಡಿಡುವುದು…. ಇಷ್ಟೇ ಬದುಕಾಗಿಬಿಟ್ಟರೆ ಸಾಕಾ? ಅದರಾಚೆಗೆ ನಮ್ಮ ಕಲ್ಪನೆಗೆ ನಿಲುಕದ ಒಂದು ಸಂತೋಷವನ್ನು ನಮ್ಮ ದಾಗಿಸಿಕೊಳ್ಳುವ ಕನಸೇ ಹುಟ್ಟದಿದ್ದರೆ… ಅಂತೆಲ್ಲ ಅಂದುಕೊಳ್ಳುವಾಗ ಈ ನಿತ್ಯದ ಕೆಲಸಗಳೂ ಒಂದು ರೀತಿಯಲ್ಲಿ ಸಮುದ್ರದಂತೆಯೇ. ಮಾಡಿದಷ್ಟೂ ಅಲೆಅಲೆಯಾಗಿ ಎದ್ದು
ಬರುತ್ತಲೇ ಇರುತ್ತವೆ.

ಅ ನಿಂತರೆ ಅದರಾಚೆಗಿನ ತುದಿ ಕಾಣುವುದೇ ಇಲ್ಲ. ಅದರಾಚೆಗೆ ಏನಿದೆ ಅನ್ನುವ ಹುಡುಕಾಟದ ನಡುವೆ ಎದುರಾಗುವ  ವಾಲುಗಳನ್ನು ಸ್ವೀಕರಿಸಿ ನೀರಿಗಿಳಿದಾಗಲೇ ಸಮಸ್ಯೆಯ ಸ್ವರೂಪ ಅನುಭವಕ್ಕೆ ಬರುವುದು. ಅವನ್ನೆಲ್ಲ ಎದುರಿಸುತ್ತ ಮುಂದೆ ಸಾಗುವಾಗ ಉಂಟಾಗುವ ಹತಾಶೆಯ ಮರುಭೂಮಿಯ ನಡುವೆ ಕಂಡಂತೆ ಕಂಡು ಮಾಯವಾಗುವ ಮರೀಚಿಕೆಯಂಥ ದಿವ್ಯಾ ನಂದದ ಅನುಭೂತಿಯನ್ನು ಅನುಭವಿಸಿಯೇ ಅರಿಯಬೇಕು. ಆದರೆ ಅದನ್ನು ವಿವರಿಸಲು ಹೋದರೆ ವಾದ-ವಿವಾದಗಳ ನಡುವೆ ಮತ್ತದೇ ಮಾತುಗಳು ಪುನರಾವರ್ತನೆಯಾಗುತ್ತ ಸಮಯ ಹಾಳು ಅಂದುಕೊಳ್ಳುತ್ತ ಸುಮ್ಮನಾದೆ.

ಆ ವಿಷಯದಲ್ಲಿ ನನಗೆ ಅತ್ಯಂತ ಒಳ್ಳೆಯ ಕಂಪನಿ ಎಂದರೆ ನನ್ನ ಮಗ. ಕೆಲವೊಮ್ಮೆ ನಾನು ತೆಗೆದುಕೊಳ್ಳುವ ನಿರ್ಧಾರಗಳಿಂದ ಮುಂದೆ ಅವನ ಭವಿಷ್ಯಕ್ಕೆ ತೊಂದರೆಯಾಗ ಬಾರದು ಅನ್ನುವ ಮುಂದಾಲೋಚನೆಯಿಂದಾಗಿ ಮನೆಯ ಆಗುಹೋಗುಗಳ ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಅವನೊಂದಿಗೆ ಚರ್ಚಿಸುತ್ತಿರುತ್ತೇನೆ. ನನಗಿರುವ ಮಿತಿಗಳ ಬಗ್ಗೆ ತಿಳಿಸಿಕೊಡುತ್ತೇನೆ. ಅದಕ್ಕೆ ಅವನ ಅಭಿಪ್ರಾಯವೇನೆಂದು ಕೇಳಿ ತಿಳಿದುಕೊಳ್ಳುತ್ತೇನೆ. ಅವನಿಗಿರುವ ಪುಟ್ಟ ಪುಟ್ಟ ಆಸೆಗಳನ್ನು ಸಾಧ್ಯವಾದಷ್ಟೂ ನೆರವೇರಿಸುವ ಪ್ರಯತ್ನ ಮಾಡುತ್ತೇನೆ.

ಹೀಗಾಗಿ ಮೊನ್ನೆ ಅವನ ಪುಟ್ಟ ಆಸೆಯನ್ನು ನೆರವೇರಿಸುವ ಸಲುವಾಗಿ ಗೋವಾದ ಕಡಲ ಕಿನಾರೆಗೆ ಕರೆದುಕೊಂಡು ಹೋಗು ವುದು, ಹಾಗೆಯೇ ಬರುವ ಹಾದಿಯಲ್ಲಿ ನಮ್ಮ ತೋಟವನ್ನೊಮ್ಮೆ ನೋಡಿ ಬರುವುದು ಎಂದು ನಿರ್ಧರಿಸಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿ, ಹಾಗೆಯೇ ಅಲ್ಲಿಯ ಹವಾಮಾನ ಹೇಗಿದೆ ಎಂದು ತಿಳಿದುಕೊಳ್ಳಲು ಹೇಳಿದೆ. ಅದಕ್ಕೆ ಬೇಕಾಗುವ ಹಣವೆಷ್ಟು ಎಂದು ಲೆಕ್ಕ ಹಾಕಲು ತಿಳಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಜತೆಗೆ ಬರುವವರು ಯಾರೆಂಬುದನ್ನು ನಿರ್ಧರಿಸಲು ತಿಳಿಸಿದೆ. ಹೋಗುತ್ತಿರುವುದೇ ಎರಡು ದಿನ
ಖುಷಿ ಯಾಗಿದ್ದು ಬರಲೆಂದು, ಅದರ ನಡುವೆ ಮಾತು ಮಾತಿಗೂ ಮುನಿಸಿಕೊಳ್ಳುವಂಥವರು, ಅದ್ಯಾಕೆ? ಇದ್ಯಾಕೆ ಎನ್ನುತ್ತ ಅಡ್ಡಗಾಲು ಹಾಕುವವರು, ಟ್ರೆಂಡಿ ಹಾಡುಗಳನ್ನು ಇಷ್ಟಪಡದೆ ದಾರಿಯುದ್ದಕ್ಕೂ ಭಜನೆ ಕೇಳುವಂಥವರು, ೨ ದಿನಗಳಲ್ಲಿ 10 ಸ್ಥಳಗಳನ್ನು ಸುತ್ತಾಡಿ ಬರಬೇಕೆನ್ನುವವರು ಜತೆಯಾದರೆ ಪ್ರಯಾಣ ಉಸದಾಯಕವಾಗಿರದೆ ಉಬ್ಬೆಯೊಳಗೆ ಕೂಡಿಹಾಕಿ ದಂತಾಗುತ್ತದೆ.

ಆದ್ದರಿಂದ ನಿನ್ನ ವಯಸ್ಸಿಗೆ ತಕ್ಕವರು ಜತೆಗಿರಲಿ ಎಂದೆ. ಎಲ್ಲ ಹೊಂದಿಸಿಕೊಂಡು ಹೊರಡಬೇಕೆನ್ನುವಷ್ಟರಲ್ಲಿ ಮಳೆ ವಿಚಾರ
ಅಡ್ಡಬಂದು, ಮಳೆ ಹೀಗೇ ಸುರಿಯುತ್ತಿದ್ದರೆ ಸಮುದ್ರದಲ್ಲಿ ಆಡುವುದಿರಲಿ, ನೋಡುವುದೂ ದೂರದ ಮಾತು. ಜತೆಗೆ ಕಾರಿನಲ್ಲಿ ಅಷ್ಟು ದೂರದ ಪ್ರಯಾಣ ಸಿಕ್ಕಾಪಟ್ಟೆ ಆಯಾಸ ಉಂಟುಮಾಡುತ್ತದೆ. ನಾವಿಬ್ಬರೇ ಆದರೆ ವಿಮಾನದಲ್ಲಿ ಹೋಗಿ ಬಂದು ಬಿಡಬಹುದು. ಆದರೆ ಉಳಿದವರೂ ಅದಕ್ಕೆ ಸಿದ್ಧರಿರಬೇಕಲ್ಲ? ಎರಡು ವರ್ಷವೇ ಸುಮ್ಮನಿದ್ದೀಯಂತೆ.

ಇನ್ನೆರಡು ತಿಂಗಳು ಸುಮ್ಮನಿದ್ದುಬಿಡು. ಕ್ರಿಸ್‌ಮಸ್ ರಜೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಅಂದೆ. ಅಮ್ಮಾ, You know about ELON MUSK? He always loves the challenges. ಭೂಮಿಯ ವಿಷಯ ಬಿಡು. ಮಂಗಳ ಗ್ರಹಕ್ಕೆ ಕಡಿಮೆ ಖರ್ಚಿನಲ್ಲಿ ಪ್ರಯಾ ಣಿಸುವಂತೆ ಮಾಡಲು ತನ್ನ ಕೋಟ್ಯಂತರ ರುಪಾಯಿಯನ್ನು ಕಳೆದುಕೊಂಡ. ಆದರೆ ಅವನು ಯಾವತ್ತೂ ನಿರಾಶನಾಗಲಿಲ್ಲ.

He keeps on trying. One day definitely he will be a BIG SUCCESS. He has that much confidence while losing also. ಒಂದು ಸಣ್ಣ ಮಳೆಗೆ, ಕೆಟ್ಟುಹೋಗಿರುವ ದಾರಿಗೆ ನಾವು ಇಷ್ಟು ಹೆದರಿದರೆ ಹೇಗೆ? ಅಂದ ಅವನ instant ಮಾತಿಗೆ ಒಂದು ಕ್ಷಣ ಬೆರಗಾದೆ. ಆದರೂ ಎಷ್ಟೇ ಆಗಲಿ ಮಾತೃಸ್ಥಾನದಲ್ಲಿರುವವಳು, ಮಕ್ಕಳ ಸುರಕ್ಷತೆಯನ್ನು ಆಲೋಚಿಸುವುದು ನನ್ನ ಹೊಣೆ ಎಂದುಕೊಳ್ಳುತ್ತ ಅವನ ಮನಸು ಬದಲಾಯಿಸುವ ಎಲ್ಲ ಆಮಿಷಗಳನ್ನೂ ಒಡ್ಡಿದೆ. ಆದರೆ ಅವನು ಅಚಲನಾಗಿದ್ದ.

ಅವನ ನಿರ್ಧಾರದ ಮುಂದೆ ನಾನು ಮಣಿಯಲೇಬೇಕಾಯ್ತು. ಆದರೆ ಒಂದು ಪುಟ್ಟ ಬದಲಾವಣೆ. ನಿನಗೆ ನೋಡಬೇಕಿರುವುದು ಸಮುದ್ರ ತಾನೇ? ಗೋವಾ ಆದರೇನು? ಮಂಗಳೂರಾದರೇನು? ಕೇರಳವಾದರೇನು? ತಮಿಳುನಾಡಾದರೇನು? ಒಟ್ಟಿನಲ್ಲಿ ನಿನಗೆ ಸಮುದ್ರ ತೋರಿಸುವ ಜವಾಬ್ದಾರಿ ನನ್ನದು. ಪ್ರಾಮಿಸ್ ಅಂದಾಗ Yes ಎಂದು ಖುಷಿಯಿಂದ ನಗುತ್ತ ಎದ್ದುಹೋದ. ಪಾಂಡಿಚೆರಿ ಯಲ್ಲಿರುವ ಬಾಲ್ಯದ ಗೆಳತಿ ನೆನಪಾದಳು.

ಕೂಡಲೇ ಪೋನಾಯಿಸಿದೆ. ಫೋನು ತೆಗೆದುಕೊಂಡವಳಿಗೆ ವಿಷಯ ವಿವರಿಸಿದೆ. ಮನೆಯೆನ್ನುವುದು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ತನ್ನ ನೆಮ್ಮದಿಗಾಗಿ ನಿರ್ಮಿಸಿಕೊಳ್ಳುವಂಥ private place. ಅದು ಹೇಳದೆ ಕೇಳದೆ ನುಗ್ಗಿಬಿಡಬಹುದಾದ
ಸಾರ್ವಜನಿಕ ಸ್ಥಳವಲ್ಲ. ಹೀಗೇ ಈ ಕಡೆ ಬಂದಿದ್ದೆ, ನಿನ್ನನ್ನ ನೋಡಿಕೊಂಡು ಹೋಗೋಣಾಂತ ಬಂದೆ. ಈ ಸಲ ಹಬ್ಬಕ್ಕೆ
ಯಾವ ಕಲರ್ ಸೀರೆ ತಗೋತಿದ್ಯಾ ಅನ್ನುತ್ತ ಹರಟೆಗೆ ಕುಳಿತರೆ, ಅವರನ್ನು ಸಾಗಹಾಕುವಷ್ಟರಲ್ಲಿ ನಮ್ಮ ಬುದ್ಧಿಯೆಲ್ಲ ಖರ್ಚು
ಮಾಡುವಂತಾಗಿರುತ್ತದೆ. ಹೊರೆಯಾಗುವುದು ಎಂದರೆ ಕೇವಲ ಆರ್ಥಿಕವಾಗಿ ಹೊರೆಯಾಗುವುದು ಅಂತ ಅಲ್ಲ. ಒಲ್ಲದ ಗಳಿಗೆಯಲ್ಲಿ ಸುಮ್ಮನೆ ಹೋಗಿ ಎದುರಿಗೆ ಕುಳಿತರೂ ಹೊರೆಯೇ.

ಗಂಟೆಗಟ್ಟಲೆ ಫೋನಿನಲ್ಲಿ ಪ್ರಾಣ ತಿಂದರೂ ಹೊರೆಯೇ. ಒಲ್ಲದ ಪ್ರೇಮವನ್ನು ಬಿಟ್ಟೂಬಿಡದೆ ಪ್ರಪೋಸ್ ಮಾಡುತ್ತಿದ್ದರೂ ಹೊರೆಯೇ. ಎದುರಿಗೆ ಕೂಡಿಸಿಕೊಂಡು ಅನಗತ್ಯ ಬುದ್ದಿಮಾತು ಹೇಳುವುದೂ ಹೊರೆಯೇ. ಅವರು ನಿಮಗೆ ಎಷ್ಟೇ ಆತ್ಮೀಯ ರಾಗಿರಬಹುದು, ತೀರ ಹತ್ತಿರದವರೇ ಆಗಿರಬಹುದು, ಅವರಿಗೆ ಬೇಡವಾದುದನ್ನು ನೀವು ಮಾಡುತ್ತ ಕುಳಿತರೆ ತಕ್ಷಣ ಅದರಿಂದ ಕಳಚಿಕೊಳ್ಳುವ ದಾರಿ ಹುಡುಕತೊಡಗುತ್ತಾರೆ. ಹೆತ್ತ ಮಕ್ಕಳ ಕನಸು-ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ ಅವರಿಗೂ ಒಮ್ಮೊಮ್ಮೆ ನಾವು ಹೊರೆಯೆನಿಸಿಬಿಡುತ್ತೇವೆ.

ಅರಿಯುವ ಸೂಕ್ಷ್ಮತೆ ಮತ್ತು ಕೆಲವು ಮಿನಿಮಮ್ ಸಂಕೋಚಗಳಿರದೆ ಹೋದರೆ ಎಂಥ ಆತ್ಮೀಯರೂ ಒಮ್ಮೊಮ್ಮೆ ಪೀಡೆಗಳೆನಿಸಿ ಬಿಡುತ್ತಾರೆ. ಹೀಗಾಗಿ ನಾನು ಮನೆಗಳಿಗೆ ಭೇಟಿ ನೀಡುವುದು ಅಪರೂಪವೇ. ಮದುವೆ-ಮುಂಜಿ, ನಾಮಕರಣ, ಹಬ್ಬ-ಹರಿದಿನ ಗಳಲ್ಲಿ ಆಹ್ವಾನವಿತ್ತಾಗ ಮಾತ್ರ ಹೋಗುತ್ತೇನೆ. ಅದರಿಂದಾಗಿಯೇ ಗೆಳತಿಗೆ ಫೋನು ಮಾಡಿದಾಗ ಮನೆಗೆ ಬರುತ್ತೇನೆಂದು ಹೇಳದೆ
ಬೀಚಿಗೆ ಹತ್ತಿರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಬಗ್ಗೆ ವಿಚಾರಿಸಿದೆ.

ನನ್ನ ಮಗಳ ಗೆಳೆಯನದ್ದೇ ಹೋಮ್ ಸ್ಟೇ ಇದೆ, ಏನೂ ಚಿಂತೆ ಬೇಡ ಎಂದು ಹೇಳಿದಾಗ ಮನಸಿನ ಭಾರ ಇಳಿದಂತಾಗಿ ಮರುದಿನ ಸೂರ್ಯೋದಯವಾಗುವ ಮೊದಲೇ ಕಾರಿಗೆ ಪೆಟ್ರೋಲ್ ತುಂಬಿಸಿ ಪಾಂಡಿಚೆರಿಯೆಡೆಗೆ ಸವಾರಿ ಹೊರಟಿತು. ಏನಿಲ್ಲವೆಂದರೂ ಐದರಿಂದ ಆರು ತಾಸಾದರೂ ಬೇಕು ತಲುಪುವಷ್ಟರಲ್ಲಿ. ಈಗ ಹೊರಟಿದ್ದೇವೆ. Location share ಮಾಡು ಎನ್ನುವ ಮೆಸೇಜಿಗೆ ಎಷ್ಟು ಹೊತ್ತಾದರೂ reply ಬರದೇ ಹೋದಾಗ ಸ್ವಲ್ಪ ಗಾಬರಿಯಾಯ್ತು.

ಫೋನು ಮಾಡಿದರೆ ಫೋನೇ ತೆಗೆಯುತ್ತಿಲ್ಲ. ಹೊರಟು ಆಗಲೇ ಅರ್ಧ ದಾರಿಯಲ್ಲಿದ್ದೇವೆ. ಮಕ್ಕಳು ಅಂತ್ಯಾಕ್ಷರಿ ಹಾಡುತ್ತಾ
ಖುಷಿಯಲ್ಲಿ ಜೀಕುತ್ತಿದ್ದಾರೆ. ಅರೆ, ಎಂಥಾ ಕೆಲಸವಾಯ್ತು. Atleast ಫೋನು ಮಾಡಿದಾಗ ಅವಳ ಸಮಸ್ಯೆ ಏನಿತ್ತು ಅಂತಾ ದರೂ ಹೇಳಬಹುದಾಗಿತ್ತಲ್ಲ? ಇಲ್ಲ, ಮೆಸೇಜಿನದರೂ ಉತ್ತರಿಸಬಹುದಿತ್ತಲ್ಲ? ವಾಟ್ಸಾಪ್ ಸ್ಟೇಟಸ್ ನೋಡ್ತಿದ್ದಾಳೆ. ಆದರೆ ಫೋನು ತೆಗೆಯುತ್ತಿಲ್ಲ ಅಂದರೆ ಯಾವುದೋ ಬಲವಾದ ಒತ್ತಡವಿರಬಹುದು. ಇರಲಿ ಮತ್ತೆ ಫೋನು ಮಾಡಿ ತೊಂದರೆ ಮಾಡುವುದು ಬೇಡ ಎಂದುಕೊಳ್ಳುತ್ತ ಸಾಗರದಲ್ಲಿ ಸೂರ್ಯ ಲೀನವಾಗುವವರೆಗೂ ಪ್ಯಾರಡೈಸ್ ಬೀಚಿನಲ್ಲಿ ಅಲೆಗಳೊಂದಿಗೆ ಆಡಿ ನಲಿಯುತ್ತಿದ್ದ ಮಕ್ಕಳನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತ, ವಿಶಾಲವಾದ ಸಮುದ್ರದೆದುರು ಹರಡಿಕೊಂಡಿದ್ದ ಮರಳ ರಾಶಿಗೆ ಬೆನ್ನುಹಾಕಿ ನೀಲಾಕಾಶವನ್ನು ದಿಟ್ಟಿಸುತ್ತ ಭೋರ್ಗರೆತವನ್ನು ಆಲಿಸುತ್ತ ಸಮುದ್ರದ ಅಗಾಧತೆಯೊಂದಿಗೆ ಮೌನ
ಸಂಭಾಷಣೆಯಲ್ಲಿ ಮೈಮರೆತೆ.