Monday, 20th May 2024

ಪ್ರತಿ ದಿನ ಡೈರಿ ಬರೆಯುವುದು ಒಳ್ಳೆಯದೇ, ಆದರೆ…

ಇದೇ ಅಂತರಂಗ ಸುದ್ದಿ

vbhat@me.com

ಅಮೆರಿಕದ ಅಧ್ಯಕ್ಷರಾದವರ ಪರವಾಗಿ ಅವರ ಸೆಕ್ರೆಟರಿಗಳು ಬರೆದ ಡೈರಿಗಳು Presidential Daily Diary ಎಂದು ಪ್ರಕಟವಾಗಿವೆ. ಈ ಡೈರಿಗಳಲ್ಲಿ ಅವರ ಕಾರ್ಯಕ್ರಮ, ಮೀಟಿಂಗ್‌ಗಳ ಬಗ್ಗೆ ಪ್ರಸ್ತಾಪವಿದೆಯೇ ಹೊರತು ಖಾಸಗಿ ಸಂಗತಿಗಳ ವಿವರಗಳಿಲ್ಲದಿರುವುದರಿಂದ ನೀರಸ. ಜಾರ್ಜ್ ವಾಷಿಂಗ್ಟನ್ ಹಾಗೂ ಜಾನ್ ಆಡಮ್ಸ್ ಬರೆದ ಡೈರಿಗಳು ಮಾತ್ರ ಆಗಾಗ ಪ್ರಸ್ತಾಪವಾಗುತ್ತಿರುತ್ತವೆ.

‘ಎಲ್ಲರೂ ಓದುವ ಸಾಹಿತ್ಯವೆಂದರೆ ಪತ್ರ ಸಾಹಿತ್ಯ’ ಎಂದು ಪತ್ರಕರ್ತ ವೈಯೆನ್ಕೆ ಹೇಳು ತ್ತಿದ್ದರು.‘ಅತ್ಯಂತ ಜನ ಪ್ರಿಯ ಸಾಹಿತ್ಯ ಅಂದ್ರೆ ಪ್ರೇಮ ಪತ್ರ ಸಾಹಿತ್ಯ’ ಎಂಬುದೂ ಅವರ ಉಕ್ತಿಯೇ. ‘ಆಕೆ ನನಗೆ (ಪ್ರೇಮ) ಪತ್ರ ಬರೆದಿದ್ದಳು, ನನಗೆ ಓದಲು ಆಗಿಲ್ಲ. ಓದಲು ಪುರಸೊತ್ತು ಸಿಕ್ಕಿಲ್ಲ’ ಎಂದು ಯಾರೂ ಹೇಳಲಿಕ್ಕಿಲ್ಲ. ಪತ್ರವನ್ನು ಯಾರೇ ಬರೆಯಲಿ, ಅದನ್ನು ಎಲ್ಲರೂ ಓದಲು ತವಕಿಸುತ್ತಾರೆ.

ಬೇರೆಯವರ ಪತ್ರವನ್ನು ಓದುವುದು ಕೆಟ್ಟ ಅಭ್ಯಾಸ ಎಂಬುದು ಗೊತ್ತಿದ್ದರೂ, ಅವುಗಳನ್ನು ಓದದಿರಲು ಸಾಧ್ಯವೇ ಇಲ್ಲ. ಪತ್ರ ಬರೆದವರು ಯಾರೇ ಇರಲಿ, ಅದನ್ನು ಓದದಿದ್ದರೆ ಸಮಾ ಧಾನವಿಲ್ಲ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಖ್ಯಾತ ಸಾಹಿತಿಗಳು ಅಂದಿನ ತಮ್ಮ ಸಮಕಾಲೀನ ಮಿತ್ರರಿಗೆ, ಸಾಹಿತಿಗಳಿಗೆ ಬರೆದ ಪತ್ರಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿತ್ತು. ಆ ಎಲ್ಲ ಪತ್ರಗಳನ್ನು ಓದಿ ನಾನು Man of Letters ಎಂದು ಸಮಾಧಾನಪಟ್ಟುಕೊಂಡೆ. ಅನಂತಮೂರ್ತಿಯವರು ಕುರ್ತಕೋಟಿ ಅವರಿಗೆ ಬರೆದ ಪತ್ರದಲ್ಲಿ ‘ನೀವು ನನ್ನ ಮಾತಿಗೆ ಕೆಂಪು ಶಾಯಿಯಲ್ಲಿ ಷರಾ ಬರೆದಿದ್ದೀರಿ ಎಂದು ಭಾವಿಸಿದ್ದೆ.

ಆದರೆ ಕೊನೆಯಲ್ಲಿ ಅದು ಎಲೆ ಅಡಕೆ ಜಗಿಯುವಾಗ ಬಿದ್ದ ನಿಮ್ಮ ಉಗುಳು ಎಂಬುದು ತಿಳಿಯಿತು’ ಎಂದು ಬರೆದಿದ್ದರು. ಯಾರದೇ ಪತ್ರವಿರಬಹುದು ಅದು ನೀರಸ ಎಂಬುದಿಲ್ಲ. ಪ್ರತಿ ಪತ್ರಕ್ಕೂ ಕನಿಷ್ಠ ಒಬ್ಬ ಓದುಗ (ಯಾರಿಗೆ ಬರೆದಿದ್ದೋ ಅವರು) ನಾದರೂ ಇರುತ್ತಾನೆ, ಇರುತ್ತಾಳೆ, ಸಾಲಗಾರ ಬರೆದ ಪತ್ರಕ್ಕೂ. ಪತ್ರಸಾಹಿತ್ಯದ ಬಗ್ಗೆ ಮಹಾಪ್ರಬಂಧ ಬರೆದ ಪೊಲೀಸ್ ನಿವೃತ್ತ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ ಈ ವಿಷಯದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬಹುದು.

ಪತ್ರದಷ್ಟೇ ಕುತೂಹಲಕರ ಸಾಹಿತ್ಯ ಅಂದ್ರೆ ಡೈರಿ ಸಾಹಿತ್ಯ ಪತ್ರದಲ್ಲಿ ಕೃತ್ರಿಮವಿದ್ದೀತು. ಆದರೆ ಡೈರಿ ಮಾತ್ರ ಅಪ್ಪಟ ನಿಜ ನಾವು ಬೇರೆಯವರಿಗೆ ಬರೆದಿದ್ದು ಪತ್ರ. ನಮಗೆ ನಾವೇ ಬರೆದುಕೊಂಡಿದ್ದು ಡೈರಿ. ಹೀಗಾಗಿ ಪ್ರತಿ ಡೈರಿಯೂ ಸ್ಫೋಟಕ ಹೀಗಾಗಿ ಡೈರಿಯನ್ನು ಎಲ್ಲರೂ ಯಾರ ಕೈಗೂ ಸಿಗದಂತೆ ಅಡಗಿಸಿ ಇಡುತ್ತಾರೆ. ಇದು ಬೇರೆಯವರ ಕೈಗೆ ಸಿಕ್ಕರೆ ಫಜೀತಿ. ಈ ಕಾರಣಕ್ಕೆ ಬಹುತೇಕ ಮಂದಿ ಡೈರಿ ಬರೆಯುವುದೇ ಇಲ್ಲ. ಡೈರಿ ಬರೆಯುವುದು ಒಳ್ಳೆಯ ಅಭ್ಯಾಸ ಎಂದು ಗೊತ್ತಿದ್ದರೂ, ಈ ಅಭ್ಯಾಸವನ್ನು ಯಾರೂ ರೂಢಿಸಿಕೊಳ್ಳದಿರಲು ಇದೇ ಕಾರಣ.

ಡೈರಿ ಬೇರೆಯವರಿಗೆ ಸಿಕ್ಕರೆ, ಓದಿದರೆ ಫಜೀತಿಯೆಂಬ ಕಾರಣಕ್ಕಾಗಿ ಎಲ್ಲರೂ ಸಂಕೇತ, ಸಂಕೇತಾಕ್ಷರ, ಸಂಕ್ಷಿಪ್ತ ರೂಪಗಳಲ್ಲಿ ಬರೆಯುತ್ತಾರೆ. ಇದು ಮತ್ತಷ್ಟು ಕುತೂಹಲ, ಗೊಂದಲ, ಸಂದೇಹಗಳಿಗೆ ಎಡೆ ಮಾಡಿಕೊಡುವುದುಂಟು. The Alice In Wonderland ಎಂಬ ಮಹತ್ವದ ಕೃತಿ ಬರೆದ ಲೂಯಿಸ್ ಕೆರೊಲ್, 1855ರಿಂದ 1897ರವರೆಗೆ, ಬರೆದ ಡೈರಿಗಳನ್ನೆಲ್ಲ ಸೇರಿಸಿ, ಹದಿಮೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆನೆ ಫ್ರಾಂಕ್ ಬರೆದ ಡೈರಿಯನ್ನು ಓದದವರು ಇರಲಿಕ್ಕಿಲ್ಲ. ಅದು ಜಗತ್ತಿನ ೭೦ ಭಾಷೆಗಳಿಗೆ ಅನುವಾದಗೊಂಡಿದೆ.

ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಕೊನೆಯ ಗರ್ಲ್ ಫ್ರೆಂಡ್ ಜೊಹಾನ್ನಾ ಫಾಂಟೊವಾ ಬರೆದ 62 ಪುಟಗಳ ಮೂಲಡೈರಿ ಪ್ರತಿ ಹರಾಜಿನಲ್ಲೂ ಕೋಟ್ಯಂತರ ಡಾಲರ್‌ಗೆ ಬಿಕರಿಯಾಗುತ್ತಿದೆ. ಈ ಡೈರಿಯಲ್ಲಿ ಐನ್‌ಸ್ಟೈನ್ ಆಕೆಗೆ ಬರೆದ ಒಂದು ಕವನವೂ ಇದೆ. Einstein tried all day to
compose a radio message on behalf of Israel and did not succeed in finishing it. He claims he is totally stupid ಎಂದು ಆಕೆ ಬರೆಯುತ್ತಾಳೆ.

ನೆಹರು ಹೊರತಾಗಿ ಬೇರೆ ಯಾವ ರಾಜಕಾರಣಿಗಳಿಗೂ ಡೈರಿ ಬರೆಯುವ ಹವ್ಯಾಸವಿರಲಿಲ್ಲ. ಪ್ರಧಾನಿಯಾದ ನಂತರ ಅದನ್ನೂ ಅವರು ನಿಲ್ಲಿಸಿದರು. ರಾಮಮನೋಹರ ಲೋಹಿಯಾ ನಿರಂತರವಾಗಿ ಅಲ್ಲದಿದ್ದರೂ ಆಗಾಗ ಬರೆದಿದ್ದುಂಟು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಡೈರಿ ಅಭ್ಯಾಸ ಇಟ್ಟುಕೊಂಡಿದ್ದರು. ಅವರು ಡೈರಿಯಲ್ಲಿ ಪ್ರಸ್ತಾಪಿಸಿದ ಕೆಲವು ಪ್ರಸಂಗಗಳನ್ನು ತಮ್ಮ ಆತ್ಮಕಥೆಯಲ್ಲಿ ಮೆಲುಕು ಹಾಕಿದ್ದಾರೆ.

1912ರಲ್ಲಿ ಕಾಫ್ಕಾ ಡೈರಿಯಲ್ಲಿ ಬರೆದ ಸಾಲುಗಳು ಪ್ರಸಿದ್ಧ. ’Wrote Nothing’ಎಂದಷ್ಟೇ ಅವರು ಬರೆದಿದ್ದರು. ಡೈರಿ ಬರೆಯುವ ಅಪಾಯದ ಬಗ್ಗೆ ಅವರಿಗೆ ಗೊತ್ತಿದ್ದಿರಬಹುದು. ಅಮೆರಿಕದ ಅಧ್ಯಕ್ಷರಾದವರ ಪರವಾಗಿ ಅವರ ಸೆಕ್ರೆಟರಿಗಳು ಬರೆದ ಡೈರಿಗಳು Presidential Daily Diary ಎಂದು ಪ್ರಕಟವಾಗಿವೆ. ಈ ಡೈರಿಗಳಲ್ಲಿ ಅವರ ಕಾರ್ಯಕ್ರಮ, ಮೀಟಿಂಗ್‌ಗಳ ಬಗ್ಗೆ ಪ್ರಸ್ತಾಪವಿದೆಯೇ ಹೊರತು ಖಾಸಗಿ ಸಂಗತಿಗಳ ವಿವರಗಳಿಲ್ಲದಿ ರುವುದರಿಂದ ನೀರಸ. ಜಾರ್ಜ್ ವಾಷಿಂಗ್ಟನ್ ಹಾಗೂ ಜಾನ್ ಆಡಮ್ಸ್ ಬರೆದ ಡೈರಿಗಳು ಮಾತ್ರ ಆಗಾಗ ಪ್ರಸ್ತಾಪವಾಗುತ್ತಿರುತ್ತವೆ.

ಮೂರು ಮುದುಕರು 

ಓಶೋ ಹೇಳಿದ ಈ ಮೂವರು ವೃದ್ಧರ ಕತೆಯನ್ನು ಕೇಳಿ. ಒಬ್ಬರಿಗೆ ಎಪ್ಪತ್ತು ವರ್ಷ, ಮತ್ತೊಬ್ಬರಿಗೆ ಎಂಬತ್ತು, ಮೂರನೆ ಯವರಿಗೆ ತೊಂಬತ್ತು ವರ್ಷ. ಮೂರೂ ಜನ ಸ್ನೇಹಿತರು ನಿವೃತ್ತರಾಗಿ, ಪಾರ್ಕಿನಲ್ಲಿ ಸುತ್ತಾಡಿ ಕಲ್ಲುಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಅವರಲ್ಲೇ ಕಿರಿಯರಾದ ಎಪ್ಪತ್ತರ ವೃದ್ಧರು ತುಂಬಾ ಬೇಸರಗೊಂಡವರಂತೆ ಇದ್ದರು. ಎಂಬತ್ತರ ವೃದ್ಧರು ಅವರನ್ನು ಕುರಿತು, ‘ಏನು ವಿಷಯ ತುಂಬಾ ಬೇಸರದಲ್ಲಿರುವಂತಿದೆಯಲ್ಲ?’ ಎಂದರು.

ಆಗ ಆ ಎಪ್ಪತ್ತರ ವೃದ್ಧರು ಹೇಳಿದರು ‘ನನಗೆ ತುಂಬಾ ಅಪರಾಧಿ ಭಾವ ಕಾಡುತ್ತಿದೆ. ನಿಮ್ಮೊಡನೆ ಹಂಚಿಕೊಂಡರೆ ಸ್ವಲ್ಪ ಭಾರ ಕಡಿಮೆಯಾಗ ಬಹುದೇನೋ. ಒಂದು ಘಟನೆ ನಡೆಯಿತು. ಒಂದು ಸುಂದರವಾದ ಹೆಣ್ಣು ನಮ್ಮ ಮನೆಗೆ ಅತಿಥಿಯಾಗಿ ಬಂದಿದ್ದಳು. ಆಕೆ ಸ್ನಾನ ಮಾಡುತ್ತಿರುವಾಗ ಸ್ನಾನದ ಮನೆಯ ಕಿಂಡಿಯೊಂದರಿಂದ ನಾನು ನೋಡುತ್ತಾ ನಮ್ಮ ತಾಯಿಯ ಕೈಗೆ ಸಿಕ್ಕಿಬಿದ್ದೆ’ .

ಅವರ ಮಾತು ಕೇಳಿ ವಯಸ್ಸಾದ ಇನ್ನಿಬ್ಬರು ಮಿತ್ರರು ಬಾಯಿತುಂಬಾ ನಕ್ಕರು. ನಂತರ ‘ನೀನೊಬ್ಬ ಮೂರ್ಖ, ಎಲ್ಲರೂ ಚಿಕ್ಕಂದಿನಲ್ಲಿ ಹೀಗೆಯೇ ಮಾಡಿರುತ್ತಾರೆ’ ಎಂದರು. ಆಗ ಅವರು ‘ಇದು ಚಿಕ್ಕ ವಯಸ್ಸಿನಲ್ಲಿ ಆಗಿದ್ದಲ್ಲ. ಇಂದು ಬೆಳಗ್ಗೆ ನಡೆದ ಘಟನೆ’ ಎಂದರು. ಎರಡನೆಯವರು ಆಗ ‘ಹಾಗಿದ್ದರೆ ಅದು ಗಂಭೀರವಾದುದೇ ಹೀಗೆ ನನಗೂ ಕಳೆದ ಮೂರು ದಿನಗಳಿಂದ ಆಗುತ್ತಿರುವ ಅನುಭವ ಹೇಳುತ್ತೇನೆ ಕೇಳು. ಅದನ್ನು ನನ್ನ ಹೃದಯದಲ್ಲೇ ಭಾರವಾದ ಬಂಡೆಯಂತೆ ಇಟ್ಟುಕೊಂಡಿದ್ದೇನೆ. ಕಳೆದ ಮೂರು ದಿನಗಳಿಂದ ನನ್ನ ಪತ್ನಿ ಪ್ರಣಯದಾಟಕ್ಕೆ ನಿರಾಕರಿಸುತ್ತಲೇ ಇದ್ದಾಳೆ’ ಎಂದರು.

ಆಗ ಮೊದಲನೆಯವರು ‘ಇದು ನಿಜಕ್ಕೂ ಕೆಟ್ಟ ಸಂಗತಿಯೇ’ ಎಂದರು.

ಆಗ ತೊಂಬತ್ತರ ವೃದ್ಧರು ಜೋರಾಗಿ ನಗುತ್ತಾ ‘ಮೊದಲು ಅವನ ಪ್ರಣಯದಾಟ ಏನು ಎನ್ನುವುದನ್ನು ಕೇಳು’ ಎಂದರು. ಹಾಗೆ ಕೇಳಿದಾಗ ಎರಡನೆಯವರು, ಸವಿಸ್ತಾರವಾಗಿ ‘ನಾನು ಅವಳಿಂದ ಹೆಚ್ಚೇನೂ ಕೇಳುವುದಿಲ್ಲ. ನನ್ನನ್ನು ಹೆಚ್ಚು ಮುಜುಗರಕ್ಕೆ ಸಿಲುಕಿಸಬೇಡಿ. ಅದೊಂದು ಸರಳವಾದ ಕ್ರಿಯೆ ನನ್ನ ಹೆಂಡತಿಯ ಕೈ ಹಿಡಿದು, ಮೂರು ಬಾರಿ ಅಮುಕುತ್ತೇನೆ ನಂತರ ಅವಳೂ ನಿದ್ದೆ ಹೋಗುತ್ತಾಳೆ. ನಾನೂ ನಿದ್ದೆಗೆ ಜಾರಿಕೊಳ್ಳುತ್ತೇನೆ. ಆದರೆ ಕಳೆದ ಮೂರು ದಿನಗಳಿಂದ, ನಾನು ಕೈ ಹಿಡಿಯಲು ಹೋದಾಗೆಲ್ಲ, ಅವಳು ‘ಇವತ್ತು ಬೇಡ, ಇಂದು ಬೇಡ!

ನನಗೆ ನಾಚಿಕೆಯಾಗುತ್ತಿದೆ. ನಿಮಗೂ ವಯಸ್ಸಾಯಿತು, ಇಂದು ಬೇಡ’  ಎಂದು ಬಿಡುತ್ತಾಳೆ. ಹೀಗೆ ಕಳೆದ ಮೂರು ದಿನಗಳಿಂದ ಆಕೆಯೊಂದಿಗೆ ಪ್ರಣಯದಾಟದಲ್ಲಿ ತೊಡಗುವುದು ನನಗೆ ಸಾಧ್ಯವಾಗಿಲ್ಲ’ ಎಂದರು. ಆಗ ತೊಂಬತ್ತರ ವೃದ್ಧರು ಹೇಳಿದರು, ‘ಇದೆಲ್ಲಾ ಸಮಸ್ಯೆಯೇ ಅಲ್ಲ. ನನಗೆ ಆಗುತ್ತಿರುವುದನ್ನು ನಿಮ್ಮೆದುರು ನಾನು ಹೇಳಿಕೊಳ್ಳಲೇಬೇಕು. ನಿಮಗಿನ್ನೂ ಚಿಕ್ಕ ವಯಸ್ಸು. ಆದ್ದರಿಂದ ಈ ಅನುಭವ ನಿಮಗೆ ಖಂಡಿತಾ ಮುಂದೆ ಉಪಯೋಗವಾಗುತ್ತದೆ.

ಕಳೆದ ರಾತ್ರಿ, ಬಹುತೇಕ ರಾತ್ರಿ ಕಳೆದು ಬೆಳಗಾಗುವ ಸಮಯದಲ್ಲಿ ನಾನು ನನ್ನ ಪತ್ನಿಯೊಂದಿಗೆ ರತಿಕ್ರೀಡೆ ಆರಂಭಿಸಿದೆ. ಕೂಡಲೇ ಅವಳು, ‘ಅಯ್ಯೋ ಮೂರ್ಖ! ಇದೇನು ಮಾಡುತ್ತಿರುವೆ?’ ಎಂದು ರೇಗಿದಳು. ನಾನೂ ‘ನನಗೆ ಬೇಕೆನಿಸಿತು, ಆದ್ದರಿಂದ ನಿನ್ನೊಡನೆಯೇ ಪ್ರಣಯ ಚೇಷ್ಟೆ ಆರಂಭಿಸಿದೆ’ ಎಂದೆ. ಅವಳು ‘ಇದು ಈ ರಾತ್ರಿಯಲ್ಲಿ ಮೂರನೇ ಸಲ. ನೀನೂ ನಿದ್ದೆ ಮಾಡುವುದಿಲ್ಲ, ನನಗೂ ನಿದ್ರಿಸಲು ಬಿಡುವುದಿಲ್ಲ. ರಾತ್ರಿಯೆಲ್ಲಾ ಹೀಗೆ ರತಿಕ್ರೀಡೆಯಾಡುತ್ತಿದ್ದರೆ ಹೇಗೆ’ ಎಂದು ಕೂಗಾಡಿದಳು.

ಈಗ ನನಗನ್ನಿಸುತ್ತಿದೆ ‘ನನಗೆ ಅರಳು ಮರುಳು ಉಂಟಾಗಿರಬೇಕು. ನೆನಪಿನ ಶಕ್ತಿ ಕ್ಷೀಣಿಸುತ್ತಿದೆ. ನಿಮ್ಮ ಸಮಸ್ಯೆಗಳು ಇದರ ಮುಂದೆ ಏನೂ ಅಲ್ಲ. ನನ್ನ ನೆನಪಿನ ಶಕ್ತಿಯೇ ಹೊರಟು ಹೋಗುತ್ತಿದೆ’ ಎಂದರು.

ಬೇಕಾದಷ್ಟೇ ತಿನ್ನಿ

ಮನಸ್ಸಿನ ಅಂತರಾಳದಲ್ಲಿ, ಪ್ರೀತಿ ಮತ್ತು ಆಹಾರಗಳು ಒಂದಕ್ಕೊಂದು ಹೊಂದಿಕೊಂಡು ಬಿಟ್ಟಿವೆ. ಈ ಕಾರಣದಿಂದಲೇ ನೀವು ಪ್ರೀತಿಯಿಂದ ವಂಚಿತರಾದಾಗಲೆಲ್ಲ ಹೀಗೆ ತಿನ್ನುತ್ತಲೇ ಹೋಗುವಿರಿ, ಹೊಟ್ಟೆ ತುಂಬಿಸುತ್ತಲೇ ಹೋಗುವಿರಿ. ನಿಮಗೆ ಬೇಕಾದ ಪ್ರೀತಿ ದೊರೆತಾಗ, ಈ ರೀತಿ ತುಂಬಿಸುವುದು ತಾನೇ ತಾನಾಗಿ ನಿಂತು ಹೋಗುತ್ತದೆ. ಆಗ ಅದರ ಅವಶ್ಯಕತೆ ಇರುವುದಿಲ್ಲ. ಪ್ರೀತಿ ಎನ್ನುವುದು ಅಂಥ ಒಂದು ಪುಷ್ಟಿಕರವಾದ ಆಹಾರ. ತುಂಬಾ ಸೂಕ್ಷ್ಮ ಸ್ವರೂಪದ, ಕಣ್ಣಿಗೆ ಕಾಣದೇ ಪುಷ್ಟಿ ನೀಡುತ್ತಿರುವಾಗ ಯಾರು ತಾನೇ ಚ್ಯೂಯಿಂಗ್‌ಗಮ್ ಜಗಿಯುತ್ತಾರೆ.

ಮನುಷ್ಯರು ಹೀಗೆ ಚ್ಯೂಯಿಂಗ್‌ಗಮ್ ಜಗಿಯುವುದು ನಂಬಲಸಾಧ್ಯವಾದದ್ದು. ಇಡೀ ಪ್ರಪಂಚದಲ್ಲಿ ಈ ರೀತಿ ಅಗಿಯಲು ಎಲ್ಲರೂ ಹುಚ್ಚರಿರಬೇಕು. ಅದರಿಂದ ಯಾವುದೇ ಪೋಷಣೆ ಸಿಗುವುದಿಲ್ಲ. ಹಾಗಿದ್ದರೂ ಉಪಯೋಗಿಸುತ್ತಾರೆ ಎಂದ ಮೇಲೆ ಮಾನಸಿಕವಾಗಿ, ತಾಯಿಯ ಎದೆಹಾಲಿನಿಂದ ವಂಚಿತವಾದ ಸುಖವನ್ನು ಈ ರೀತಿ ಪಡೆದುಕೊಳ್ಳುತ್ತಿರಬೇಕು.

ಯಾವ ಪ್ರಾಣಿಯೂ ಮನುಷ್ಯನಂತೆ ತಿನ್ನುವುದಿಲ್ಲ. ಪ್ರತಿ ಪ್ರಾಣಿಗೂ ತನ್ನದೇ ಆದ ಆಹಾರವಿದೆ. ನೀವು ಎಮ್ಮೆಗಳನ್ನು ತಂದು ಹೂದೋಟದಲ್ಲಿ ಬಿಟ್ಟರೆ, ಅವು ಒಂದು ನಿರ್ದಿಷ್ಟ ಬಗೆಯ ಹುಲ್ಲನ್ನು ಮಾತ್ರವೇ ತಿನ್ನುತ್ತವೆ. ಸಿಕ್ಕಿದ್ದೆಲ್ಲ ತಿನ್ನುವುದಿಲ್ಲ. ಆಹಾರದ ಆಯ್ಕೆಯಲ್ಲಿ ತುಂಬಾ ಸೂಕ್ಷ್ಮವಾಗಿ ರುತ್ತವೆ. ಆಹಾರದೊಂದಿಗೆ ಅವು ಸಂವೇದಿಯಾಗಿರುತ್ತವೆ. ಮಾನವ ಮಾತ್ರವೇ ಈ ರೀತಿಯ ಸಂವೇದನೆಯನ್ನು ಪೂರ್ತಿಯಾಗಿ ಕಳೆದುಕೊಂಡಿ ದ್ದಾನೆ. ಮನುಷ್ಯನಿಂದ, ಎಲ್ಲಾದರೂ ಒಂದುಕಡೆ, ತಿನ್ನಲ್ಪಡದೆಯೇ ಇರುವ ವಸ್ತುಗಳನ್ನು ನೀವು ಕಾಣುವುದೇ ಇಲ್ಲ.

ಕೆಲವು ಕಡೆ ನಾಯಿಗಳನ್ನು ತಿನ್ನುತ್ತಾರೆ, ಕೆಲವೆಡೆ ಇರುವೆಗಳನ್ನು ತಿನ್ನುತ್ತಾರೆ, ಕೆಲವೆಡೆ ಹಾವುಗಳನ್ನು ತಿನ್ನುತ್ತಾರೆ. ಮನುಷ್ಯ ಎಲ್ಲವನ್ನು ತಿಂದಿದ್ದಾನೆ. ಮನುಷ್ಯ ಈ ವಿಷಯದಲ್ಲಿ ಹುಚ್ಚನಾಗಿ ಬಿಟ್ಟಿದ್ದಾನೆ. ತನ್ನ ದೇಹಕ್ಕೆ ಯಾವುದು ಹೊಂದಿಕೆಯಾಗುತ್ತದೆ, ಇಲ್ಲ ಎನ್ನುವ ಪರಿವೆಯೇ ಇಲ್ಲ. ಸಂಪೂರ್ಣವಾಗಿ ಗೊಂದಲಗೊಂಡಿದ್ದಾನೆ. ಹೀಗೆ ಹೇಳಿದವರು ಓಶೋ. ಈ ಎಲ್ಲ ಮಾತುಗಳು ಎಷ್ಟು ನಿಜ ಅಲ್ಲವಾ?

ಹಾಲಿವುಡ್ ಸಿನಿಮಾ ಹಾಗೂ ಮಾ

ಆಲಿಬಾಬಾ ಕಂಪನಿಯ ಮುಖ್ಯಸ್ಥ ಜಾಕ್ ಮಾ ಅವರನ್ನು ಪತ್ರಕರ್ತನೊಬ್ಬ ಕೇಳಿದನಂತೆ-‘ಇತ್ತೀಚಿನ ದಿನಗಳಲ್ಲಿ ನೀವು ಬರೀ ಹಾಲಿವುಡ್ ಸಿನಿಮಾವನ್ನು ಬಹಳ ನೋಡ್ತೀರಂತೆ, ನಿಜಾನಾ?’ ಅದಕ್ಕೆ ಜಾಕ್ ಮಾ ಹೇಳಿದರಂತೆ-‘ಹೌದು ನಿಜ.

ಹಾಲಿವುಡ್ ಸಿನಿಮಾಗಳಂತೆ ಚೀನಾದ ಸಿನಿಮಾಗಳಲ್ಲೂ ಹೀರೋ ಇದ್ದಾನೆ. ಆದರೆ ಚೀನಾದ ಸಿನಿಮಾಗಳಲ್ಲಿ ಹೀರೋ ಕೊನೆಯಲ್ಲಿ ಸಾಯುತ್ತಾನೆ. ಆದರೆ ಅಮೆರಿಕನ್ ಸಿನಿಮಾಗಳಲ್ಲಿ ಹೀರೋ ಸಾಯುವುದೇ ಇಲ್ಲ. ಎಲ್ಲ ಹೀರೋಗಳು ಸಾಯುವುದಾದರೆ, ಯಾರು ತಾನೆ ಹೀರೋಗಳಾಗಲು ಬಯಸುತ್ತಾರೆ. ಈ ಕಾರಣ ದಿಂದ ನನಗೆ ಹಾಲಿವುಡ್ ಸಿನಿಮಾಗಳು ಇಷ್ಟವಾಗುತ್ತವೆ’.

ಯಾವುದು ಅಪಾಯಕಾರಿ?

ಬಿಯರ್‌ಗಿಂತ ಟೀ ಹೆಚ್ಚು ಡೇಂಜರಸ್! ಹೇಗೆ ಗೊತ್ತಾ? ನಿನ್ನೆ ಮಧ್ಯರಾತ್ರಿ ಒಂದು ಗಂಟೆ ತನಕ ಪಬ್‌ನಲ್ಲಿ ಎಂಟು ಬಾಟಲಿ ಬಿಯರ್ ಕುಡಿದೆ. ನನ್ನ ಹೆಂಡತಿ ಮನೆಯಲ್ಲಿ ಟೀ ಕುಡಿಯುತ್ತಿದ್ದಳು. ನಾನು ಮನೆಗೆ ಹೋಗುತ್ತಿದ್ದಂತೆ ಆಕೆ ರೌದ್ರಾವತಾರ ತಾಳಿದಳು. ಬಾಯಿಗೆ ಬಂದಂತೆ ಬಯ್ಯಲಾ ರಂಭಿಸಿದಳು. ‘ಇಂದು ಯಾವುದಕ್ಕೂ ಒಂದು ತೀರ್ಮಾನ ಆಗಲೇಬೇಕು. ಒಂದೋ ನಾನಿರಬೇಕು, ಇಲ್ಲ ನೀವಿರಬೇಕು’ ಎಂದು ಕೂಗಲಾರಂಭಿಸಿದಳು. ನಾನು ಶಾಂತವಾಗಿದ್ದೆ. ಆಕೆಯ ಎಲ್ಲ ಬಯ್ಗುಳಗಳನ್ನೂ ಕೇಳಿಸಿಕೊಂಡೆ.

ಆದರೆ ಅವಳ ಕೂಗಾಟ, ಕಿರುಚಾಟ ನಿಂತಿರಲಿಲ್ಲ. ಕೇಳುವಷ್ಟು ಕೇಳಿ, ನಂತರ ಸುಮ್ಮನೆ ಬೆಡ್‌ರೂಮಿಗೆ ಹೋಗಿ ಮಲಗಿದೆ. ಆದರೆ ಆಕೆಯ ಬಯ್ಗುಳ ಮಾತ್ರ ನಿಂತಿರಲಿಲ್ಲ. ನಾನು ಹೇಳ್ತೀನಿ, ಟೀ ಬಹಳ ಅಪಾಯಕಾರಿ. (ಬೆಂಗಳೂರಿನ ಪಬ್ ಒಂದರಲ್ಲಿ ಕಾಣಿಸಿದ ಪೋಸ್ಟರ್ ಇದು. ಮಗುಂಡುಗಲಿ ಮಿತ್ರರೊಬ್ಬರು ಕಳಿಸಿದ್ದು)

ಹೆಸರೇನು? ಒಳ್ಳೆಯ ಹೆಸರೇನು?

ಈ ಪ್ರಯೋಗ ಚಾಲ್ತಿಯಲ್ಲಿರೋದು ಭಾರತೀಯರಲ್ಲಿ ಮಾತ್ರ. ಅಪರಿಚಿತರು ಭೇಟಿಯಾದಾಗ ಇಂಗ್ಲಿಷಿನಲ್ಲಿ ‘What’s your good name?’ ಎಂದು ಕೇಳುತ್ತಾರೆ. ಜಗತ್ತಿನ ಬೇರೆ ಯಾವ ದೇಶದಲ್ಲೂ ಇಂಗ್ಲಿಷಿನಲ್ಲಿ ಹೀಗೆ ಕೇಳುವುದಿಲ್ಲ.

ಕನ್ನಡದಲ್ಲೂ ‘ನಿಮ್ಮ ಹೆಸರೇನು?’ ಎಂದು ಕೇಳುತ್ತೇವೆ. ಅದೇ ಹಿಂದಿಯಲ್ಲಿ ‘ಆಪ್ ಕಾ ಶುಭ್ ನಾಮ್ ಕ್ಯಾ?’ ಎಂದು ಕೇಳುವುದು ಸಂಪ್ರದಾಯ. ಹಿಂದಿಯ ಶುಭನಾಮ್ ಇಂಗ್ಲಿಷಿನಲ್ಲಿ good name ಆಗಿರಲಿಕ್ಕೆ ಸಾಕು. ಎಲ್ಲ ತಂದೆ-ತಾಯಿಗಳೂ ತಮ್ಮ ಮಕ್ಕಳಿಗೆ ಒಳ್ಳೆಯ ಹೆಸರನ್ನೇ ಇಟ್ಟಿರುತ್ತಾರೆ. ಅಷ್ಟಕ್ಕೂ ಕೆಟ್ಟ ಹೆಸರು ಎಂಬುದು ಇಲ್ಲವೇ ಇಲ್ಲ. ಹೀಗಿರುವಾಗ ‘”What’s your good name?’ ಎಂದು ಕೇಳಬೇಕಿಲ್ಲ. “What’s your name?’ ಎಂದಷ್ಟೇ ಕೇಳಿ.

ಯಾರೂ ತಪ್ಪು ಭಾವಿಸುವುದಿಲ್ಲ. ಅದೇ ರೀತಿ ಭಾರತೀಯರು ಮತ್ತೊಂದು ವಿಚಿತ್ರ ಪ್ರಯೋಗ ಮಾಡುತ್ತಾರೆ. ಅದೇನೆಂದರೆ ಮದರ್ ಪ್ರಾಮಿಸ್. ಆಕ್ಸ್ಫರ್ಡ್ ಡಿಕ್ಷನರಿ ತೆಗೆದು ನೋಡಿ, ಮದರ್ ಪ್ರಾಮಿಸ್ ಎಂಬ ಪ್ರಯೋಗ ಕಾಣಿಸುವುದಿಲ್ಲ. ಈ ಬಳಕೆ ಹೇಗೆ ಬಂತೋ ಗೊತ್ತಿಲ್ಲ. ಆಣೆ

ಕಸಮ್’ ಇಂಗ್ಲಿಷಿನಲ್ಲಿ ಯಥಾವತ್ತಾಗಿ ‘ಮದರ್ ಪ್ರಾಮಿಸ್’ ಆಗಿರ ಬಹುದು. ಇಂಗ್ಲಿಷಿನಲ್ಲಿ ಆಣೆ ಹಾಕುವ ಪ್ರಸಂಗ ಬಂದರೆ ಪ್ರಾಮಿಸ್ ಎಂದಷ್ಟೇ ಹೇಳಿ. ಅಲ್ಲಿ ತಾಯಿಯನ್ನು ಎಳೆದು ತರಬೇಕಿಲ್ಲ.

error: Content is protected !!