Sunday, 15th December 2024

ಕಿಚನ್ ಕ್ಯಾಬಿನೆಟ್ಟಿನಲ್ಲಿ ಸೆಟ್ಲಾದರು ಯತೀಂದ್ರ

ಮೂರ್ತಿ ಪೂಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮುಸ್ಲಿಂ ಮುಖಂಡರ ಸಭೆ ಕರೆದಿದ್ದರು. ಶಾಸಕರಾದ ಜಮೀರ್ ಅಹ್ಮದ್ ಖಾನ್, ರಹೀಂಖಾನ್, ಹ್ಯಾರಿಸ್ ಸೇರಿದಂತೆ ಹಲವು ಶಾಸಕರು, ಉಲೇಮಾ ಮತ್ತು ಮೌಲಾನಾಗಳು ಈ ಸಭೆಯಲ್ಲಿ ಪಾಲ್ಗೊಂಡಿ ದ್ದರು. ಅಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಸಾಲಿಡ್ಡು ಬೆಂಬಲ ನೀಡಿದ್ದರಿಂದ ಈ ಬಾರಿ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದರು. ಸಿದ್ದರಾಮಯ್ಯ ಅವರ ಮಾತಿಗೆ ಹರ್ಷ ವ್ಯಕ್ತಪಡಿಸಿದ ಮುಸ್ಲಿಂ ಧರ್ಮಗುರುಗಳು, ‘ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ನಿರೀಕ್ಷೆಯೂ ಆಗಿತ್ತು. ಅದು ಸಾಧ್ಯವಾಗಿದ್ದ ರಿಂದ ನಮಗೆ ಸಂತಸವಾಗಿದೆ’ ಎಂದರಂತೆ. ಅವರು ಹಾಗೆಯೇ ಮಾತು ಮುಂದುವರಿಸಿ, ‘ಈ ಸಂದರ್ಭದಲ್ಲಿ ನಿಮ್ಮ ಸರಕಾರ, ನಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು’ ಎಂದಾಗ ಸಿದ್ದ ರಾಮಯ್ಯ ಅವರು ತಮ್ಮ ಆಪ್ತರನ್ನು ಕೂಗಿ, ‘ರೀ ರಾಮಯ್ಯ, ಇವರೆಲ್ಲ ಹೇಳಿದ್ದನ್ನು ನೋಟ್ ಮಾಡಿಕೊಳ್ರಿ’ ಎಂದಿದ್ದಾರೆ.

ಇದಾದ ನಂತರ ಪುನಃ ಮಾತನಾಡಿದ ಮುಸ್ಲಿಂ ಧರ್ಮಗುರುಗಳು, ‘ಹಿಂದಿದ್ದ ಬಿಜೆಪಿ ಸರಕಾರ ಮುಸ್ಲಿಮರಿಗಿದ್ದ ೪ ಪರ್ಸೆಂಟ್
ಮೀಸಲಾತಿಯನ್ನು ಕಿತ್ತುಕೊಳ್ಳಲು ನಿರ್ಧರಿಸಿತ್ತು. ಈಗ ಆ ನಿರ್ಧಾರದ ಕತೆ ಏನೇ ಆಗಿರಲಿ, ಆದರೆ ಹಿಂದಿದ್ದ ಪರಿಸ್ಥಿತಿ
ಮುಂದುವರಿಯುವಂತೆ ನೋಡಿಕೊಳ್ಳಿ’ ಅಂದಿದ್ದಾರೆ. ಇದಾದ ನಂತರ, ಕರ್ನಾಟಕದ ಮುಸ್ಲಿಮರಲ್ಲಿರುವ ಅಭದ್ರತೆಯ ಭಾವನೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಿ ಅಂತ ವಿವರಿಸಿದ್ದಾರೆ.

ನಂತರ ‘೧೯೮೦ರಲ್ಲಿ ನಮ್ಮ ಸಮುದಾಯದ ಎ.ಆರ್. ನಿಜಾಮುದ್ದೀನ್ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದರು. ಇದಾದ ನಂತರ ಮತ್ತೊಬ್ಬ ಮುಸ್ಲಿಂ ಅಧಿಕಾರಿ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿಲ್ಲ. ಈಗ ಮತ್ತೊಮ್ಮೆ ಅಂಥ ಅವಕಾಶ ಬಂದಿದೆ. ಟ್ರಾಫಿಕ್ ಎಡಿಜಿಪಿ ಆಗಿರುವ ಎಂ.ಎ. ಸಲೀಂ ಅವರೇ ಈ ಅಧಿಕಾರಿ. ಅವರನ್ನು ನೀವು ಬೆಂಗಳೂರಿನ ಪೊಲೀಸ್ ಕಮಿಷನರ್ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ’ ಅಂತ ಬೇಡಿಕೆ ಇಟ್ಟಿದ್ದಾರೆ.

ಈ ಬೇಡಿಕೆಗಳಿಗೆ ಅವತ್ತು ಸಿದ್ದರಾಮಯ್ಯ ‘ಯೆಸ್’ ಎಂದರಂತೆ. ಆದರೆ ಇದಾದ ಕೆಲ ದಿನಗಳ ನಂತರ, ಅಂದರೆ ಮೇ ೨೯ ರಂದು ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಅವರು ಸಿದ್ದರಾಮಯ್ಯ ಅವರಿಗೆ ಫೋನು ಮಾಡಿ, ‘ಸರ್, ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಸಲೀಂ ಅವರ ಹೆಸರನ್ನು ಸೂಚಿಸಿದ್ದಿರಿ. ಆದರೆ ಈಗ ಬೇರೆ ಯಾರದೋ
ಹೆಸರು ಕೇಳುತ್ತಿದೆ’ ಎಂದಿದ್ದಾರೆ. ಆಗೆಲ್ಲ ‘ಡೋಂಟ್ ವರಿ ಖಾದರ್, ನನಗೆ ನೆನಪಿದೆ’ ಅಂತ ಸಿದ್ದರಾಮಯ್ಯ ಹೇಳಿದರೂ, ಮೇ ೩೦ರ ಮಂಗಳವಾರ ಆದೇಶ ಹೊರಬಂದಾಗ ಸಲೀಂ ಅವರು ಸಿಐಡಿ ಡಿಐಜಿಯಾಗಿ ವರ್ಗಾವಣೆಯಾಗಿದ್ದರೆ, ಕಮಿಷನರ್ ಹುದ್ದೆಗೆ ಇಂಟಲಿಜೆನ್ಸ್ ಎಡಿಜಿಪಿ ಆಗಿದ್ದ ಆರ್. ದಯಾನಂದ್ ಬಂದು ಕುಳಿತಿದ್ದಾರೆ.

ನಾವೆಲ್ಲ ಇಷ್ಟು ಹೇಳಿದ ಮೇಲೂ ಸಿಎಂ ಯಾಕೆ ಉಲ್ಟಾ ಹೊಡೆದರು ಅಂತ ಮುಸ್ಲಿಂ ನಾಯಕರು ಪತ್ತೆಮಾಡಲು ಹೊರಟರೆ, ಅಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ಮುಖ ಕಾಣಿಸಿತಂತೆ. ಒಂದಷ್ಟು ಹೊತ್ತು ದಿಟ್ಟಿಸಿ ನೋಡಿದಾಗ ಅಲ್ಲಿ ಮತ್ತೊಬ್ಬರ ಮುಖ ಕಾಣಿಸಿದೆ. ಅವರ ಹೆಸರು- ಭೈರತಿ ಸುರೇಶ್. ಇವತ್ತು ನಗರಾಭಿವೃದ್ಧಿ ಸಚಿವರಾಗಿರುವ ಸುರೇಶ್ ಈಗ
ಸಿದ್ದರಾಮಯ್ಯ ಕಿಚನ್ ಕ್ಯಾಬಿನೆಟ್ಟಿನ ‘ನಂಬರ್ ಟೂ’ ಅಂತ ಮೆಸೇಜು ಸಿಕ್ಕಾಗ ಮುಸ್ಲಿಂ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ.

ಅಂದ ಹಾಗೆ, ಸಲೀಂ ಅವರು ಕಮಿಷನರ್ ಹುದ್ದೆಯ ರೇಸಿನಿಂದ ಹೀಗೆ ಹೊರಬೀಳುವುದಕ್ಕೂ, ಭೈರತಿ ಸುರೇಶ್ ಅವರಿಗೂ ಒಂದು ಸಂಬಂಧವಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಏರ್‌ಪೋರ್ಟ್ ರಸ್ತೆಯ ಸಂಚಾರ ದಟ್ಟಣೆಯನ್ನು ತಡೆಯಲು ಸಲೀಂ ಅವರಿಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ಅವರು ಸಂಜಯನಗರ ಮತ್ತು ಹೆಬ್ಬಾಳದಲ್ಲಿ ಬ್ಯಾರಿಕೇಡ್ ಹಾಕಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಈ ಸಂದರ್ಭದಲ್ಲಿ ಹೆಬ್ಬಾಳದ ಶಾಸಕರಾದ ಭೈರತಿ ಸುರೇಶ್ ಅವರು ಸಲೀಂ ಅವರಿಗೆ ಫೋನು ಮಾಡಿ, ‘ನೀವು ಹಾಕಿದ ಬ್ಯಾರಿಕೇಡ್‌ಗಳಿಂದ ಜನರಿಗೆ ತೊಂದರೆಯಾಗುತ್ತಿದೆ.

ಹೀಗಾಗಿ ಮೊದಲು ಅದನ್ನು ತೆಗೆಯಿರಿ’ ಎಂದಿದ್ದಾರೆ. ಆದರೆ ಏರ್‌ಪೋರ್ಟ್ ರಸ್ತೆಯ ಟ್ರಾಫಿಕ್ಕಿಗೆ ಏನು ಕಾರಣ ಅಂತ ಬಲ್ಲ
ಸಲೀಂ ಅವರು, ‘ಈ ವಿಷಯದಲ್ಲಿ ನಾನು ಹೆಲ್ಪಲೆಸ್ ಸರ್’ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಈ ಬೆಳವಣಿಗೆ ನಡೆದ ನಂತರ ಸುರೇಶ್ ಕ್ರುದ್ಧರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದ ನಂತರ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಮೇಲೆ ಪ್ರಭಾವ ಬೀರಿ ಸಲೀಂ ಎದುರಿಗಿದ್ದ ಅವಕಾಶ ತಪ್ಪಿಸಿದ್ದಾರೆ. ಇದೆಲ್ಲ ಆದ ನಂತರ ಮುಸ್ಲಿಂ ಪ್ರಮುಖರು, ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರಂತೆ.

ದೂರವಾಗುತ್ತಿದ್ದಾರೆ ರೇವಣ್ಣ, ಉಗ್ರಪ್ಪ ಅಂದ ಹಾಗೆ, ಈ ಸಲ ಸಿದ್ದರಾಮಯ್ಯ ಸಿಎಂ ಆಗುವುದು ನಿಶ್ಚಿತವಾಗುತ್ತಿದ್ದಂತೆಯೇ ಅವರ ಪುತ್ರ ಯತೀಂದ್ರ ಎಚ್ಚೆತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿಎಂ ನಿವಾಸ, ಗೃಹಕಚೇರಿ ಕೃಷ್ಣಾ ಮತ್ತು ವಿಧಾನಸೌಧದ ಚಟುವಟಿಕೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಮೇ ೩೦ರ ಮಂಗಳವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಮುಖ ಅಧಿಕಾರಿಗಳ ಸಭೆ ಕರೆದು, ‘ಸಿಎಂ ಆಫೀಸಿನಿಂದ, ಮನೆಯಿಂದ ಬೇಕಾಬಿಟ್ಟಿ ಲೆಟರ್ ಕೊಡುವ ಸಿಸ್ಟಮ್ಮು ನಿಲ್ಲಬೇಕು.

ಯಾರ ಪರವಾಗಿ ಯಾರು ಲೆಟರ್ ತೆಗೆದುಕೊಳ್ಳುತ್ತಾರೆ ಅಂತ ರಿಜಿಸ್ಟರ್ ಮೇಂಟೇನ್ ಮಾಡಬೇಕು. ಸಿಎಂ ಹಿಂದೆ ಓಡಾಡು
ವವರು ಕೆಎಐಡಿಬಿಯಿಂದ ಹಿಡಿದು ಎಲ್ಲಿ ಯಾವ ಅಧಿಕಾರಿಗಳನ್ನು ರಕ್ಷಿಸಿ ಏನೇನು ವ್ಯವಹಾರ ಮಾಡುತ್ತಿದ್ದಾರೆ? ಸಿಎಂ ಹೆಲ್ತ್ ಚೆಕ್‌ಅಪ್‌ಗೆ ಬರುವ ಡಾಕ್ಟರು ಯಾರ‍್ಯಾರಿಗೆ ಲೆಟರ್ ಕೊಡಿಸುತ್ತಿzರೆ ಎಂಬುದೆಲ್ಲ ನನಗೆ ಗೊತ್ತಿದೆ. ಇನ್ನು ಇಂಥ ದಂಧೆಗಳು ಬಂದ್ ಆಗಬೇಕು’ ಅಂತ ಕಟ್ಟಪ್ಪಣೆ ವಿಧಿಸಿದ್ದಾರೆ. ಹೀಗೆ ಸಿಎಂ ಎಸ್ಟಾಬ್ಲಿಷ್‌ಮೆಂಟನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಯತೀಂದ್ರ ಅವರಿಗೆ ನೆರವು ನೀಡಲು, ಈಗ ನಿವೃತ್ತ ಅಧಿಕಾರಿ ರಾಮಯ್ಯ ಅವರಲ್ಲದೆ ವೆಂಕಟೇಶಯ್ಯ, ಮಹಾದೇವ್, ಶಿವಸ್ವಾಮಿ ಸೆಟ್ಲಾಗಿದ್ದಾರಂತೆ.

ಈ ಮಧ್ಯೆ, ಸಿದ್ದರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿನಲ್ಲಿದ್ದ ಎಚ್.ಎಂ. ರೇವಣ್ಣ, ಉಗ್ರಪ್ಪ ಅವರಂಥವರನ್ನು ದೂರ ತಳ್ಳುವಲ್ಲಿ ಯತೀಂದ್ರ ಯಶಸ್ವಿಯಾಗಿದ್ದಾರಂತೆ. ಇದೇ ರೀತಿ, ಸಿಎಂ ಅದ ನಂತರ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ಹೊರಟರಲ್ಲ? ಅವತ್ತು ಮನೆಯಿಂದ ಏರ್‌ಪೋರ್ಟಿಗೆ ಹೊರಟಾಗ, ೪೦ ವರ್ಷಗಳಿಂದ ಅವರ ಜತೆಗಿರುವ ಉದ್ಯಮಿ ಯೊಬ್ಬರು ಅವರ ಕಾರು ಹತ್ತಿದ್ದಾರೆ. ಆದರೆ ಕಾರು ಹತ್ತಿದ ಅವರನ್ನು ಬಲವಂತವಾಗಿ ಕೆಳಗಿಳಿಸಲಾಗಿದೆ. ಅಷ್ಟೇ ಅಲ್ಲ, ಇವರ ಫ್ಯಾಮಿಲಿಯವರು ನೋಡಿದ್ರೆ ಬೊಮ್ಮಾಯಿ ಅವರನ್ನು ‘ಮಾಮಾ ಮಾಮಾ’ ಅಂತ ಕರೆಯುತ್ತಾ ಬಿಜೆಪಿ ಪರ ಪ್ರಚಾರ ಮಾಡಿದ್ರು. ಇವರು ನೋಡಿದ್ರೆ ಇಲ್ಲಿ ಸೆಟ್ಲಾಗಲು ಬಂದಿದ್ದಾರೆ ಎಂಬ ಮಾತು ಅನುರಣಿಸಿದೆ.

ಪರಿಸ್ಥಿತಿ ಈ ಲೆವೆಲ್ಲಿಗೆ ಬರಲು ಯತೀಂದ್ರ ಅವರ ಇನ್‌ಸ್ಟ್ರಕ್ಷನ್ನೇ ಕಾರಣ ಅಂತ ಆ ಉದ್ಯಮಿ ಈಗ ಗೊಣಗಾಡುತ್ತಿದ್ದಾರಂತೆ.
ಆಸ್ಥಾನದಲ್ಲಿ ಪಟ್ಟಣ್‌ಗೆ ಜಾಗವಿಲ್ಲ ಇನ್ನು, ಬಹಳ ಕಾಲದಿಂದಲೂ ಸಿದ್ದರಾಮಯ್ಯ ಆಸ್ಥಾನದಲ್ಲಿದ್ದವರನ್ನು ನಕ್ಕು ನಲಿಸುತ್ತಿದ್ದ ರಾಮದುರ್ಗದ ಶಾಸಕ ಅಶೋಕ್ ಪಟ್ಟಣ್ ಅವರಿಗೆ ಅಲ್ಲಿ ಕುರ್ಚಿ ಕೊಡುತ್ತಿಲ್ಲ. ಸಿಎಂ ಹುದ್ದೆಗೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಫೈಟು ನಡೆಯುತ್ತಿದ್ದಾಗ ಸಿದ್ದರಾಮಯ್ಯ ಅವರು ನಾಳೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂತ ಅಶೋಕ್ ಪಟ್ಟಣ್ ಅಡ್ವಾನ್ಸಾಗಿ ನ್ಯೂಸ್ ಲೀಕ್ ಮಾಡಿದರು ಎಂಬ ಆರೋಪ ಇದಕ್ಕೆ ಕಾರಣ.

ಅವತ್ತು ಈ ವಿಷಯ ಹಿಡಿದುಕೊಂಡು ಡಿಕೆಶಿ ರಂಪ ಮಾಡಿದರಲ್ಲ? ಇದಾದ ನಂತರ ಪಟ್ಟಣ್ ವಿರುದ್ದ ಕೂಗಾಡಿದ ಯತೀಂದ್ರ, ‘ನನ್ನ ತಂದೆಗೆ ನೀವೆಲ್ಲ ಟೆನ್ಷನ್ ಕೊಡ್ತಿದ್ದೀರಿ. ಯಾವಾಗ ನೋಡಿದ್ರೂ ಫೋನಲ್ಲಿ ಮಾತಾಡ್ತಾ ಏನ್ರೀ ನಿಮ್ದು?’ ಅಂತ ಯತೀಂದ್ರ ಅಬ್ಬರಿಸಿದ ನಂತರ ಪಟ್ಟಣ್ ಫುಲ್ಲು ಸೈಲೆಂಟ್ ಆಗಿದ್ದಾರೆ.

ಕೆಲವೇ ಕಾಲದ ಹಿಂದೆ, ‘ಸಿದ್ದರಾಮಯ್ಯ ಸಿಎಂ ಆದ್ರೆ ನಾನೇ ಲೋಕೋಪಯೋಗಿ ಮಂತ್ರಿ’ ಅಂತ ಅಶೋಕ್ ಪಟ್ಟಣ್ ಹೇಳಿಕೊಳ್ಳುತ್ತಿದ್ದರು. ಅದರೆ ಅವರ ಕನಸು ದಿಢೀರನೆ ಕಳಚಿಬಿದ್ದಿದೆ. ಪಾಪ, ಬೇಜಾರಾದ್ರಂತೆ ‘ದೇಪಾ’ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಂತ್ರಿಯಾಗುವ ಕನಸು ಕಾಣುತ್ತಿದ್ದ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಮೊನ್ನೆ ಜಾರ್ಜ್ ಅವರ ಬಳಿ ನೋವು ತೋಡಿಕೊಂಡರಂತೆ.

‘ಸಿದ್ದರಾಮಯ್ಯ ಅವರ ಪವರ್ ಹೆಚ್ಚಿಸಿದ ಸಿದ್ದರಾಮೋತ್ಸವದ ರೂವಾರಿಗಳು ನಾನು, ರಾಯರೆಡ್ಡಿ ಮತ್ತು ಎಚ್.ಸಿ.ಮಹದೇವಪ್ಪ. ಆದರೆ ಇವತ್ತು ರಾಹುಲ್ ಗಾಂಧಿ ಹೇಳಿದ್ದಾರೆ ಅಂತ ಬೋಸರಾಜು ಅವರನ್ನು ಕ್ಯಾಬಿನೆಟ್ಟಿಗೆ ತೆಗೆದುಕೊಂಡು ಆ ರಾಯರೆಡ್ಡಿ ಅವರನ್ನು ದೂರ ಇಡಲಾಗಿದೆ. ಮಂತ್ರಿಯಾಗಬೇಕು ಅಂತ ನಾನು ಸ್ಪೀಕರ್‌ಗಿರಿ ಬೇಡ ಅಂದೆ. ಆದರೆ ಬ್ರಾಹ್ಮಣರ ಕೋಟಾದ ವಿಷಯ ಬಂದಾಗ, ದಿನೇಶ್ ಗುಂಡೂರಾವ್ ಅವರೇ ಇರಲಿ ಅಂತ ಯತೀಂದ್ರ ತಂದೆಯ
ಬಳಿ ಪಟ್ಟುಹಿಡಿದ್ರಂತೆ. ಹೀಗಾಗಿ ಈ ಕಾಲದಲ್ಲಿ ನಾನು ನೋವು ಅನುಭವಿಸಬೇಕಾಯ್ತು’ ಅಂತ ದೇಶಪಾಂಡೆ ಹೇಳಿದಾಗ, ‘ಏನು ಮಾಡೋದು ಸರ್, ಎಲ್ಲ ಟೈಮು’ ಅಂತ ಜಾರ್ಜ್ ಬೇಸರ ಮಾಡಿಕೊಂಡರು.

ಓ, ಯೇನಣ್ಣಾ ನೀವಿಲ್ಲಿ? ಕಳೆದ ವಾರ ಸಿಎಂ ಗೃಹ ಕಚೇರಿ ಕೃಷ್ಣಾಗೆ ಹೋಗಿದ್ದ ಹಿರಿಯ ನಾಯಕ ಎಚ್. ವಿಶ್ವನಾಥ್ ತುಂಬ ಮುಜುಗರಕ್ಕೀಡಾಗಿದ್ದಾರೆ. ಹೀಗೆ ಅವರು ಹೋದಾಗ ಅ ಸಿಎಂ ಚೇಂಬರಿನ ಹೊರಭಾಗದ ಕೋಣೆಯಲ್ಲಿ ಅವರನ್ನು ಕೂರಿಸ
ಲಾಗಿದೆ. ನೋಡಿದರೆ ಅ ಕೃಷಿ ಸಚಿವ ಚಲುವರಾಯ ಸ್ವಾಮಿ ಇದ್ದರಂತೆ. ಇಬ್ಬರೂ ಅದು-ಇದು ಮಾತನಾಡುತ್ತಿರುವಾಗ ಸಿದ್ರಾಮಯ್ಯ ಕಿಚನ್ ಕ್ಯಾಬಿನೆಟ್ಟಿನ ‘ಡೆಪ್ಯೂಟಿ ಕಿಂಗ್’ ಭೈರತಿ ಸುರೇಶ್ ಅಲ್ಲಿಗೆ ಬಂದಿದ್ದಾರೆ.

ಬಂದವರು ಸುಮ್ಮ ನಿರದೆ ‘ಡಿಚ್ಕಿ ಡಿಗಾ ಸ್ಮೈಲು’ ಕೊಟ್ಟು, ‘ಓ, ಯೇನಣ್ಣಾ ನೀವಿಲ್ಲಿ?’ ಅಂತ ಕೇಳಿದ್ದಾರೆ. ಅವರ ಮಾತಿನಲ್ಲಿದ್ದ ವ್ಯಂಗ್ಯ ವನ್ನು ಗಮನಿಸಿ ವಿಶ್ವನಾಥ್ ಮುಖ ಸಣ್ಣಗೆ ಮಾಡಿಕೊಂಡಿದ್ದಾರೆ. ಆಗೆಲ್ಲ ಮಧ್ಯೆ ಪ್ರವೇಶಿಸಿದ ಸಚಿವ ಚಲುವರಾಯ
ಸ್ವಾಮಿ, ‘ನೋ ನೋ, ಹಾಗೆಲ್ಲ ಮಾತನಾಡಬಾರದು. ಅವರು ಹಿರಿಯ ನಾಯಕರು. ಏನೋ ಮಾತನಾಡಲು ಬಂದಿದ್ದಾರೆ. ಅದರನಿದೆ ತಪ್ಪು?’ ಎಂದಾಗ ಸುರೇಶ್ ಮತ್ತೆ ‘ಡಿಚ್ಕಿ ಡಿಗಾ ಸ್ಮೈಲು’ ಕೊಟ್ಟರಂತೆ!