Monday, 16th September 2024

ಅಭಿವೃದ್ದಿಯ ಪಾಠ ಕಲಿಸಿದ ಯೋಗಿ

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbn@gmail.com

ಮುಸಲ್ಮಾನರನ್ನು ಓಲೈಸಲು ನಡೆದ ಪ್ರಯತ್ನಗಳು ವಿಫಲವಾಗಿ, ಮತದಾರರು ಯೋಗಿಯವರಿಗೆ ಮತ ಹಾಕಿದ್ದಾರೆ. ಜಾತಿಯ ಹೆಸರಿನಲ್ಲಿ ನಡೆದುಕೊಂಡು ಬಂದ ಸುದೀರ್ಘ ಕಾಲದ ರಾಜಕೀಯಕ್ಕೆ ಈ ಚುನಾವಣೆಯಲ್ಲಿ ತಿಲಾಂಜಲಿ ಇಡಲಾಗಿದೆ.

ಭಾರತ ಕಂಡ ಶ್ರೇಷ್ಠ ಸನ್ಯಾಸಿಗಳಲ್ಲಿ ಸ್ವಾಮಿ ವಿವೇಕಾನಂದರು ಭವ್ಯ ಭಾರತದ ವಿಶ್ವ ಗುರು ಕನಸನ್ನು ನೂರು ವರ್ಷಗಳ
ಹಿಂದೆಯೇ ಕಂಡಿದ್ದರು, ಅಂದು ಕಂಡ ಕನಸನ್ನು ಸ್ವತಂತ್ರ್ಯಾ ನಂತರ ಅಧಿಕಾರ ವಹಿಸಿಕೊಂಡು ಅತಿ ಹೆಚ್ಚು ಅಧಿಕಾರ  ಅನುಭವಿಸಿದ ರಾಜಕೀಯ ಪಕ್ಷ ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರೆ ಭಾರತವು ಎಂದೋ ಅಭಿವೃದ್ಧಿ ಹೊಂದಿದ
ರಾಷ್ಟ್ರಗಳ ಪಟ್ಟಿಯಲ್ಲಿರುತ್ತಿತ್ತು.

ತನ್ನ 28ನೇ ವಯಸ್ಸಿನಲ್ಲಿಯೇ ಸಂಸಾರದ ಜಂಜಾಟವನ್ನು ಪಕ್ಕಕ್ಕೆ ಸರಿಸಿ ಜನಸೇವೆ ಮಾಡಲು ರಾಜಕೀಯ ಪ್ರವೇಶ ಮಾಡಿದ ಸಂತ ಯೋಗಿ ಆದಿತ್ಯನಾಥ್, ಚಿಕ್ಕ ವಯಸ್ಸಿ ನಲ್ಲಿಯೇ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದ ಯೋಗಿಯ ಮೇಲೆ ಕೋಮುವಾದದ ಆರೋಪಗಳನ್ನು ಉತ್ತರ ಪ್ರದೇಶದ ವಿರೋಧ ಪಕ್ಷಗಳು ಮಾಡುತ್ತಾ ಬಂದಿದ್ದವು. ದೇಶದ್ಲಲಿಯೇ ಅತಿ ಹೆಚ್ಚು ಮುಸಲ್ಮಾನರಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರನ್ನು ಓಲೈಸಲು ವಿರೋಧಿ ಗಳು ಇಲ್ಲಸಲ್ಲದ ಆರೋಪಗಳನ್ನು ಯೋಗಿಯವರ ಮೇಲೆ ಆಗಾಗ ಮಾಡುತ್ತಲೇ ಬಂದಿದ್ದರು.

ಕೇಸರಿ ಬಣ್ಣವನ್ನು ಕಂಡರೆ ಉರಿದು ಬೀಳುವ ಕಾಂಗ್ರೆಸಿಗರಿಗೆ ಹಸಿರು ಬಣ್ಣ ಕಂಡರೆ ಮಾತ್ರ ಎಲ್ಲಿಲ್ಲದ ಪ್ರೀತಿ. ಮುಸಲ್ಮಾರ ಓಲೈಕೆ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದ ಯೋಗಿಯವರ ವಿರುದ್ಧ ಆರೋಪ ಮಾಡಿಕೊಂಡು ಬಂದಿತ್ತು ಕಾಂಗ್ರೆಸ್, ಇನ್ನು ಪರಿ ವಾರವಾದಿ ರಾಜಕಾರಣ ಮಾಡಿಕೊಂಡು ಬಂದಂತಹ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವೂ ಸಹ ಮುಸಲ್ಮಾ ನರ ಓಲೈಕೆಯ ಫಲವಾಗಿ ಅಧಿಕಾರ ಅನುಭವಿಸಿತ್ತು ,ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದ ತುಂಬೆ ಆನೆಗಳ ಕಲಾಕೃತಿ ಗಳನ್ನು ಕೆತ್ತಿಸಿರುವ ಮಾಯಾವತಿ ಕೂಡ ತನ್ನ ಅಽಕಾರಾವಽಯಲ್ಲಿ ದಲಿತ ಹಾಗು ಮುಸಲ್ಮಾನರ ಓಲೈಕೆಯ ತೊಡಗಿದ್ದರು.

2007ರಲ್ಲಿ ಬ್ರಾಹ್ಮಣರು ಸಂಪೂರ್ಣವಾಗಿ ಆಕೆಯ ಪರ ನಿಂತ ಕಾರಣ ಮುಖ್ಯಮಂತ್ರಿಯಾದರು. 2014ರ ವರೆಗೂ ಉತ್ತರ  ಪ್ರದೇಶದ ರಾಜಕೀಯವೆಂದರೆ ಮುಸಲ್ಮಾನರ ಓಲೈಕೆ, ಹಿಂದುಳಿದ ವರ್ಗಗಳ ಓಲೈಕೆ, ದಲಿತರ ಓಲೈಕೆ ಮಾತ್ರವಾಗಿತ್ತು. 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಉತ್ತರ ಪ್ರದೇಶದಕ್ಕೆ ಕೊಡುಗೆ ಬಹಳ ನೀಡಲಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಚುನಾವಣೆಗೆ ಹೊರಟ
ಬಿಜೆಪಿ ಹಿಂದೆಂದೂ ಕಂಡರಿಯದ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂತು, ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್‌ರನ್ನು ಒಬ್ಬ ವಿವಾದಿತ ನಾಯಕನೆಂದು ಹಲವರು ಭಾವಿಸಿದ್ದರು.

ನಿಧಾನವಾಗಿ ಯೋಗಿಯವರ ಮೇಲಿನ ಅನಿಸಿಕೆ ಬದಲಾಯಿತು, ಉತ್ತರ ಪ್ರದೇಶದಲ್ಲಿನ ಗೂಂಡಾಗಳನ್ನು ಮಟ್ಟ ಹಾಕುವಲ್ಲಿ ಯೋಗಿ ಯಶಸ್ವಿಯಾಗಿದ್ದರು. ಅಖಿಲೇಶ್ ಯಾದವರ ಅವಧಿಯಲ್ಲಿ ಗೂಂಡಾ ರಾಜ್ಯವೆಂದು ಕುಖ್ಯಾತಿ ಪಡೆದಿದ್ದ ಉತ್ತರ ಪ್ರದೇಶ ನೋಡನೋಡುತ್ತಿದ್ದಂತೆ ಗೂಂಡಾಗಳ ಪಾಲಿಗೆ ನರಕವಾಯಿತು. ಉಸಿರುಗಟ್ಟಿಸುವ ವಾತಾವರಣ ವಿದ ಉತ್ತರಪ್ರದೇಶದಲ್ಲಿನ ಜನರಿಗೆ ನೆಮ್ಮದಿಯ ಜೀವನ ನೀಡಿದ ಖ್ಯಾತಿ ಯೋಗಿಯವರಿಗೆ ಸಲ್ಲಬೇಕು.

ಗೂಂಡಾಗಳ ಮೇಲೆ ಪೊಲೀಸರಿಂದ ಎನ್‌ಕೌಂಟರ್ ನಡೆದಾಗ ಧರ್ಮದ ಬಣ್ಣ ಹಚ್ಚಿ ಯೋಗಿಯವರ ಹೆಸರಿಗೆ ಮಸಿ ಬಳೆಯುವ
ಪ್ರಯತ್ನಗಳು ನಡೆದರೂ ಸಹ ಅಲ್ಲಿನ ಮತದಾರ ತಲೆ ಕೆಡಿಸಿಕೊಳ್ಳಲಿಲ್ಲ. ಉತ್ತರ ಪ್ರದೇಶದಲ್ಲಿ ಸರಕಾರದ ಯೋಜನೆಗಳು ಕೇವಲ ಘೋಷಣೆಗಳಿಗೆ ಸೀಮಿತವಾಗಿರಿಸದೆ ಜನರಿಗೆ ತಲುಪಿಸಬೇಕೆಂಬ ದೃಢ ಉ ದ್ದೇಶದಿಂದ ಅಧಿಕಾರ ನಡೆಸಿದ ಯೋಗಿ ಆದಿತ್ಯ ನಾಥರು 2022 ರ ಚುನಾವಣೆಯನ್ನು ಅಭಿವೃದ್ಧಿಯ ರಾಜಕಾರಣದ ನೆಲೆಯಲ್ಲಿಯೇ ನಡೆಸಿದರು.

ಚುನಾವಣಾ ಪ್ರಚಾರ ಸಭೆಗಳಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ತಲುಪಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಚರ್ಚೆ
ಯಾಗುತ್ತಿತ್ತು. 341 ಕಿ.ಮೀ ಉದ್ದದ ಪೂರ್ವಾಂಚಲ್ ಹೆದ್ದಾರಿಯನ್ನು ಕೇವಲ 40 ತಿಂಗಳುಗಳಲ್ಲಿ ಸಂಪೂರ್ಣಗೊಳಿಸಿ, ರಸ್ತೆಯ ಗುಣಮಟ್ಟದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಿಲಿಟರಿ ವಿಮಾನವನ್ನು ರಸ್ತೆಯ ಮೇಲೆ ಇಳಿಸಿ, ಕಾನ್ಪುರದ ಮೆಟ್ರೋ ಕಾಮಗಾರಿಯನ್ನು ಮೂರು ವರ್ಷದಲ್ಲಿ ಸಂಪೂರ್ಣಗೊಳಿಸಿ, ಸ್ವಚ್ಛ ಭಾರತ್ ಅಭಿಯಾನ ದಡಿಯಲ್ಲಿ ಲಕ್ಷಾಂತರ ಶೌಚಾಲಯ ಗಳನ್ನು ರಾಜ್ಯಾದ್ಯಂತ ಕಟ್ಟಿಸಿ ಹೆಣ್ಣು ಮಕ್ಕಳನ್ನು ಬಯಲು ಶೌಚದಿಂದ ಮುಕ್ತಗೊಳಿಸಿ, ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ಹೆಣ್ಣು ಮಕ್ಕಳ ಸಹಾಯಕ್ಕೆ ನಿಂತು ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ನೀಡುವ ಮೂಲಕ ಹೆಣ್ಣು ಮಕ್ಕಳ ಮನ ಗೆದ್ದು, ರಾಜ್ಯದ ಲಕ್ಷಾಂತರ ಮನೆಗಳಿಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ಉತ್ತಮ ಕುಡಿಯುವ ನೀರಿನ ಪೂರೈಕೆ ಮಾಡುವ ಮೂಲಕ ಮತ ಕೇಳಿದ್ದರು.

ಉತ್ತರ ಪ್ರದೇಶದ ಜನರ ಅಭಿವೃದ್ಧಿಯ ಜೊತೆಯಲ್ಲಿ ಹಿಂದೂಗಳ ಭಾವನೆಗಳಿಗೆ ಹತ್ತಿರವಾಗುವ ನೂರಾರು ಕೆಲಸಗಳನ್ನು ಯೋಗಿ ಮಾಡಿದ್ದಾರೆ. ಮೊಗಲರ ಆಳ್ವಿಕೆಯಲ್ಲಿ ಹಲವು ನಗರಗಳ ಹಿಂದೂ ಹೆಸರುಗಳನ್ನು ಬದಲಾವಣೆ ಮಾಡಲಾಗಿತ್ತು, ನೂರಾರು ವರ್ಷಗಳಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದಿತ್ತು. ಅಲಹಾಬಾದ್ ನಗರವನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡುವ ಮೂಲಕ ಕಳೆದು ಹೋಗಿದ್ದ ಹಿಂದೂಗಳ ಗುರುತನ್ನು ಮರುಸ್ಥಾಪನೆ ಮಾಡಿದ್ದು ಆದಿತ್ಯನಾಥ್. ಆದರೆ, ಈ ನಡೆಯನ್ನು ವಿರೋಧಿಗಳು ಯೋಗಿ ಕೇವಲ ಹೆಸರನ್ನು ಬದಲಾವಣೆ ಮಾಡುವ ಮುಖ್ಯಮಂತ್ರಿಯೆಂದು ಠೀಕಿಸಿ
ದ್ದರು, ಆದರೂ ಯೋಗಿ ತಮ್ಮ ಛಲವನ್ನು ಬಿಡಲಿಲ್ಲ.

ಸಾವಿರಾರು ವರ್ಷಗಳಿಂದ ಸಣ್ಣ ಪ್ರದೇಶದಲ್ಲಿದ್ದ ಕಾಶಿ ವಿಶ್ವನಾಥನ ಸನ್ನಿಧಾನವನ್ನು ಪ್ರಧಾನಮಂತ್ರಿಗಳ ಜೊತೆಗೂಡಿ ಬೃಹತ್
ಮಟ್ಟದಲ್ಲಿ ಅಭಿ ವೃದ್ಧಿಗೊಳಿಸಿದ ಯೋಗಿ ಕೇವಲ ಉತ್ತರ ಪ್ರದೇಶವಲ್ಲ ಇಡೀ ದೇಶದ ಹಿಂದೂಗಳ ಮನಸ್ಸನ್ನು ಗೆದ್ದರು. ಬೃಹತ್ ಮಟ್ಟದಲ್ಲಿ ಗಂಗೆಯ ತಟದಲ್ಲಿ ಗಂಗಾರತಿ ಮಾಡುವ ಮೂಲಕ ಪವಿತ್ರ ಗಂಗೆಯ ಒಡಲಿನ ಭಕ್ತಗಣಗಳ ಮನಗೆಲ್ಲುವಲ್ಲಿ ಯೋಗಿ ಯಶಸ್ವಿಯಾಗಿದ್ದರು ದೇಶದಲ್ಲಿ ಅತಿ ಹೆಚ್ಚು ವಲಸೆ ಕಾರ್ಮಿಕರಿರುವುದು ಉತ್ತರ ಪ್ರದೇಶದಲ್ಲಿ, ಅಲ್ಲಿನ ವಲಸೆ ಕಾರ್ಮಿಕರು ದೇಶ ದಾದ್ಯಂತ ಒಂದಿಂ ದು ಕೆಲಸದಲ್ಲಿ ತೊಡಗಿರುತ್ತಾರೆ.

ಕರೋನ ಸಂದರ್ಭದಲ್ಲಿ ಇಡೀ ದೇಶವೇ ಸ್ತಬ್ಧವಾದಾಗ ಲಕ್ಷಾಂತರ ಜನರು ಉತ್ತರ ಪ್ರದೇಶದ ತಮ್ಮ ಹಳ್ಳಿಗಳತ್ತ ವಾಪಾಸ್ ಆಗಿದ್ದರು, ಇವರೆಲ್ಲರಿಗೂ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡು ಸ್ಥಿತಿ ನಿರ್ಮಾಣವಾಗಿತ್ತು. ಆಗ ಆದಿತ್ಯನಾಥ್ ವಲಸೆ ಕಾರ್ಮಿಕರ ಕುಟುಂಬದ ಪರವಾಗಿ ನಿಂತು ಉಚಿತವಾಗಿ ಪಡಿತರ ನೀಡುವ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದರು. ಇತರ ರಾಜ್ಯಗಳಲ್ಲಿ ಕರೋನ ತಾರಕಕ್ಕೇರಿದ್ದರೂ ಸಹ ಉತ್ತರ ಪ್ರದೇಶದಲ್ಲಿ ಕಠಿಣ ನಿಯಮಗಳ ಮೂಲಕ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗದಂತೆ ಕರೋನ ನಿಯಂತ್ರಿಸಲಾಗಿತ್ತು.

ಕರೋನ ಲಸಿಕೆಯ ವಿಷಯದಲ್ಲಿ ಭಾರತದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಸಂಪೂರ್ಣವಾಗಿ ಲಸಿಕೆ ಹಾಕಿಸುವುದು ಸುಲಭದ ಕೆಲಸವಾಗಿರಲಿಲ್ಲ, 24 ಕೋಟಿ ಜನಸಂಖ್ಯೆಯ ರಾಜ್ಯವನ್ನು ಸಂಪೂರ್ಣವಾಗಿ ಲಸಿಕೆಗೊಳಿಸಬೇಕಾಗಿರುವ ತಯಾರಿ
ಯನ್ನು ಯೋಗಿ ಸರಕಾರ ಮಾಡಿಕೊಂಡಿತ್ತು. ಅಖಿಲೇಶ್ ಯಾದವ್ ಬಹಿರಂಗವಾಗಿ ಲಸಿಕೆಯನ್ನು ಬಿ.ಜೆ.ಪಿ ಲಸಿಕೆಯೆಂದು ಹೇಳುವ ಮೂಲಕ ಜನರ ತಲೆಯನ್ನು ಹಾಳುಮಾಡುವ ಕೆಲಸ ಮಾಡಿದ್ದರು, ಆದರೂ ಯೋಗಿ ಅವರ ಮಾತಿಗೆ ಸೊಪ್ಪು ಹಾಕ ಲಿಲ್ಲ.

ಅಸಾವುದ್ದೀನ್ ಓವೈಸಿಯನ್ನು ಬಳಸಿಕೊಂಡು ಮುಸಲ್ಮಾನರ ಮತಬ್ಯಾಂಕನ್ನು ಒಡೆದು ಬಿ.ಜೆ.ಪಿ ಗೆಲ್ಲುತ್ತಿದೆಯೆಂಬ ಆರೋಪ ವನ್ನು ವಿರೋಧಿಗಳು ಮಾಡಿದ್ದರು, ಆದರೆ 2022ರ ಚುನಾವಣೆಯಲ್ಲಿ ಈತನ ಪಕ್ಷವು ಸ್ಪರ್ಧಿಸಿದ್ದ ಸುಮಾರು 92 ಕ್ಷೇತ್ರಗಳಲ್ಲಿ ಒಂದರಲ್ಲಿಯೂ ಗೆಲುವನ್ನು ಕಂಡಿಲ್ಲ, ಈತನ ಪಕ್ಷದ ಒಟ್ಟಾರೆ ಮತ ಪ್ರಮಾಣವೇ ಶೇ. 0.46% ರಷ್ಟಿದೆ. ಇಷ್ಟೊಂದು ಕಡಿಮೆ ಮತ ಪಡೆದಿರುವ ಅಸಾವುದ್ದೀನ್ ಓವೈಸಿಯಿಂದ ಯಾವ ಸಹಾಯವೂ ಆಗಿಲ್ಲವೆಂಬುದು ಸಾಬೀತಾಗಿದೆ. ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ದಲಿತ ಬಣ್ಣ ಕಟ್ಟಿ ದೇಶದಾದ್ಯಂತ ಯೋಗಿಯವರ ಹೆಸರಿಗೆ ಮಸಿ ಬಳೆಯುವ ಹುನ್ನಾರವನ್ನು ವಿರೋಽಗಳು ಮಾಡಿದ್ದರು, ಆ ಪ್ರಕರಣದ ಸತ್ಯಾ ಸತ್ಯ ತೆಯನ್ನು ಅರಿತ ಉತ್ತರ ಪ್ರದೇಶದ ಜನತೆ ಮತ್ತೊಮ್ಮೆ ಯೋಗಿಯವರ ಪರವಾಗಿ ನಿಂತರು.

ಯೋಗಿಯವರ ವಿರೋಧಿಗಳು ಎಷ್ಟೇ ಅಪ ಪ್ರಚಾರ ಮಾಡಿದರೂ ಸಹ ಉತ್ತರ ಪ್ರದೇಶದ ಜನ ಅವರ ಅಭಿವೃದ್ದಿಯನ್ನು ಕಂಡು ಮತ ಚಲಾಯಿಸಿದ್ದಾರೆ. ರೈತ ಪ್ರತಿಭಟನೆಯ ಸಂದರ್ಭದಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಸಾವಿನ ವಿಷಯವ ನ್ನು ರೈತ ನಾಯಕ ರಾಕೇಶ್ ಠಿಕಾಯತ್ ಈ ಘಟನೆಯನ್ನು  ರಾಜಕೀಯ ವಾಗಿ ಬಳಸಿಕೊಂಡು ಯೋಗಿ ಆದಿತ್ಯನಾಥ್ ಅವರನ್ನು ಸೋಲಿಸ ಬೇಕೆಂದು ಬಹಿರಂಗವಾಗಿ ಕರೆ ನೀಡಿದ್ದ. ಅಲ್ಲಿನ ಜನರಿಗೆ ಈತನ ಸ್ವಾರ್ಥ ರಾಜಕಾರಣದ ಅರಿವಾಗಿತ್ತು. ಹೀಗಾಗಿ ರೈತರು ಬಿಜೆಪಿಯನ್ನು ಚುನಾವಣೆಯಲ್ಲಿ ಕೈ ಬೀಡಲಿಲ್ಲ. ಲಖೀಂಪುರ ಖೇರಿ ಭಾಗದ ಎಂಟಕ್ಕೆ ಎಂಟು ಕ್ಷೇತ್ರಗಳು ಯೋಗಿಯವರ ಪಾಲಾಗಿವೆ.

ಹಸಿರು ಬಣ್ಣವನ್ನು ಕಂಡರೆ ಜಾತ್ಯತೀತತೆ, ಕೇಸರಿಯನ್ನು ಕಂಡರೆ ಕೋಮುವಾದವೆಂದು ಹೇಳಿದವರಿಗೆ ಉತ್ತರ ಪ್ರದೇಶದ ಮತದಾರ ಸರಿಯಾದ ಉತ್ತರ ನೀಡಿದ್ದಾನೆ. ಅಲ್ಪ ಸಂಖ್ಯಾತರೆಂಬ ರಕ್ಷಾ ಕವಚದಡಿಯಲ್ಲಿ ಮುಸಲ್ಮಾನರನ್ನು ಓಲೈಸಲು ನಡೆಸಿದ ಪ್ರಯತ್ನಗಳೆಲ್ಲವೂ ವಿಓಲವಾಗಿ, ಉತ್ತರ ಪ್ರದೇಶದ ಮುಸಲ್ಮಾನರು ಯೋಗಿಯವರಿಗೆ ಮತ ನೀಡಿದ್ದಾರೆ. ಜಾತಿಯ ಹೆಸರಿನಲ್ಲಿ ನಡೆದುಕೊಂಡು ಬಂದ ಸುದೀರ್ಘ ಕಾಲದ ರಾಜಕೀಯಕ್ಕೆ ಉತ್ತರ ಪ್ರದೇಶದ ಜನ ತಿಲಾಂಜಲಿ ಇಡುವ ಮೂಲಕ ಅಪ್ಪ ಮಕ್ಕಳಾದ ಮುಲಾಯಂ ಸಿಂಗ್ ಯಾ ದವ್ ಹಾಗು ಅಖಿಲೇಶ್ ಯಾದವ್‌ರನ್ನು ಮನೆಗೆ ಕಳುಹಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಹಿಂದುತ್ವನ್ನು ನೆನಪಿಸಿಕೊಳ್ಳುವ ಇಂದಿರೆಯ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿಯ ನಾಟಕಕ್ಕೆ ಉತ್ತರ ಪ್ರದೇಶದ ಜನ ಮಣೆ ಹಾಕಲಿಲ್ಲ, ಕಾಂಗ್ರೆಸ್ ಪಕ್ಷದ ಶವಯಾತ್ರೆಗೆ ನಾಲ್ಕು ಶಾಸಕರು ಸಿಗದ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿ
ಎದುರಾ ಗಿದೆ.

ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲಿ ಯೋಗಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ವಿಜಯ ದುಂದುಭಿ ಬಾರಿಸಿದೆ. ಪ್ರತಿನಿತ್ಯದ ಟೀಕೆ, ಟಿಪ್ಪಣಿಗಳ ನಡುವೆ ತನ್ನ ಕಾರ್ಯವನ್ನು ಪರಿಪೂರ್ಣವಾಗಿ ನಿರ್ವಹಿಸಿರುವ ಯೋಗಿ ಆದಿತ್ಯನಾಥರಿಗೆ ಉತ್ತರ ಪ್ರದೇಶದ ಜನ ಅಭಿವೃದ್ಧಿಯ ನೆನಪಿನಲ್ಲಿ ಮಗದೊಮ್ಮೆ ಅಧಿಕಾರ ನೀಡಿದ್ದಾರೆ.