Sunday, 15th December 2024

ಅಭಿವೃದ್ದಿ ಪ್ರೇರಣೆಯಲ್ಲಿ ಯುವ ಶೃಂಗಸಭೆ ಯಶಸ್ವಿ

ಯುವಶಕ್ತಿ

ಡಾ.ಶಾಲಿನಿ ರಜನೀಶ್

ಕಿರು ವಯಸ್ಸು ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಇದು ಭವಿಷ್ಯದ ಮೇಲೆ ಪ್ರಮುಖ ಪರಿಣಾಮಬೀರುವ ಅವಽ. ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ, ಜೀವನದ ರಚನಾತ್ಮಕ ಹಂತದಲ್ಲಿರುವ ಯುವಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಎದುರಾಗುತ್ತಿರುವ ಸವಾಲು ದೊಡ್ಡದು. ಪ್ರಸ್ತುತ ದಿನಗಳಲ್ಲಿ, ಯುವಜನರು ದಿನದ ಗಣನೀಯ ಸಮಯವನ್ನು ಇಂಟರ್ನೆಟ್‌ಗಳಲ್ಲಿ ಕಳೆಯುತ್ತಿದ್ದಾರೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಸುಮಾರು ಶೇ.೨೭ ಜನಸಂಖ್ಯೆಯು ೧೫-೨೯ ವಯಸ್ಸಿನ ನಡುವೆ ಇದೆ. ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಜನಸಂಖ್ಯೆಯ ಶೇ.೬೬ ರಷ್ಟಿದ್ದಾರೆ. ಹೆಚ್ಚಿನ ಜನಸಂಖ್ಯೆ ಯುವಜನರೇ ಆಗಿದ್ದು ದೇಶದ ಸಾಮಾಜಿಕ ಬದಲಾವಣೆ, ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ಆವಿಷ್ಕಾರದ ವಿಚಾರ ದಲ್ಲಿ ಯುವಕರೇ ಪ್ರಮುಖ ಹರಿಕಾರರು.

ಯುವಶಕ್ತಿ ವಿಕಸಿತವಾದರೆ ದೇಶದ ವಿಕಾಸವಾಗುತ್ತದೆ ಎಂಬ ಉದ್ದೇಶಕ್ಕೇ ‘ವಿಕಸಿತ ಯುವ-ವಿಕಸಿತ ಭಾರತ’ ಎಂಬ ಧ್ಯೇಯ ವಾಕ್ಯದೊಂದಿಗೆ ಮೂರು ದಿನಗಳ ೨೬ ನೇ ರಾಷ್ಟ್ರೀಯ ಯುವ ಉತ್ಸವಕ್ಕೆ ಧಾರವಾಡದಲ್ಲಿ ತೆರೆಬಿದ್ದಿದೆ. ದೇಶಾ ದ್ಯಂತ ಸುಮಾರು ೭೫೦೦ ಯುವ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡರು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಉತ್ಸವದ ಅಂಗವಾಗಿ ನಡೆದ ಯುವ ಶೃಂಗಸಭೆಯಲ್ಲಿ ಕೈಗಾರಿಕೆ, ನಾವೀನ್ಯತೆ ಮತ್ತು ೨೧ ನೇ ಶತಮಾನದ ಕೌಶಲ, ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ, ಶಾಂತಿ ನಿರ್ಮಾಣ ಮತ್ತು ಸಮನ್ವಯ, ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವ ಪಾಲ್ಗೊಳ್ಳುವಿಕೆ ಸೇರಿದಂತೆ ಹಲವು ವಿಚಾರಗಳ ಮೇಲೆ ಅನುಭವಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ತಜ್ಞರೊಂದಿಗೆ ಸಂವಹನ ನಡೆಸಿದ್ದು ವಿಶೇಷ.

ಭಾರತದ ಕಾಮಿಕರ ಪೈಕಿ ಶೇ. ೪೧.೪ರಷ್ಟು ಮಂದಿ ೧೫-೨೯ ವಯಸ್ಸಿನವರು. ಕರ್ನಾಟಕದಲ್ಲೇ ಈ ಪ್ರಮಾಣ ಶೇ.೪೩.೧ರಷ್ಟಿದೆ. ೧೮-೨೩ ವಯಸ್ಸಿನ ಶೇ. ೨೭ಯುವಜನತೆ (ಕರ್ನಾಟಕ ೩೨%) ಉನ್ನತ ಶಿಕ್ಷಣದಲ್ಲಿ ತೊಡಗಿ
ದ್ದಾರೆ. ಭಾರತದ ನಿರುದ್ಯೋಗ ದರವು ಶೇ.೧೨.೯ರಷ್ಟಿದೆ.

ಕರ್ನಾಟಕದಲ್ಲಿ ಇದು ಶೇ.೮.೮ ಆಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಉದ್ಯಮ, ನಾವೀನ್ಯತೆ ಮತ್ತು ೨೧ ನೇ ಶತಮಾನದ ಕೌಶಲಗಳ ಅಗತ್ಯಗಳಲ್ಲಿ ಭವಿಷ್ಯದ ಅವಕಾಶಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಶೃಂಗಸಭೆಯ ಮೂಲಕ ಯುವಜ ತಜ್ಞರೊಂದಿಗೆ ಸಂವಹನ ನಡೆಸಿದ್ದು ಭವಿಷ್ಯದ ಅವಕಾಶಗಳ ದೃಷ್ಟಿಯಿಂದ ಮಹತ ಪಡೆದಿದೆ. ಇನ್ನು ಹವಾಮಾನ ಬದಲಾವಣೆಯು ಭವಿಷ್ಯದ ಬೃಹತ್ ಸವಾಲು ಮಾತ್ರವಲ್ಲ, ಪ್ರಸ್ತುತ ಸಮಸ್ಯೆಯೂ ಹೌದು. ಹವಾಮಾನ ಬದಲಾವಣೆಗೆ ಕಾರಣವಾಗುವ ಸಮುದಾಯ ಅತ್ಯಂತ ಕೆಟ್ಟ ಪರಿಣಾಮ ಎದುರಿಸುವುದರಲ್ಲಿ ಅನುಮಾನವಿಲ್ಲ.

ಹಾಗಾಗಿ ಹವಾಮಾನ ಬದಲಾವಣೆಯ ಸಮಸ್ಯೆಗಳು ಮತ್ತು ವಿಪತ್ತಿನ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜಿಸ ಬೇಕಿದೆ. ಈ ದಿಸೆಯಲ್ಲಿ ಭವಿಷ್ಯದ ಹರಿಕಾರರಾದ ಯುವಕರ ಪಾತ್ರವನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ವಾಗಿದೆ.
ಹಾಗಾಗಿ ಈ ಶೃಂಗಸಭೆಯಲ್ಲಿ ಹವಾಮಾನ ಬದಲಾಣೆಯ ಪರಿಣಾಮಗಳ ಬಗ್ಗೆ ಚರ್ಚಿಸುವುದು ಬಹಳ ಪ್ರಮುಖವಾಗಿತ್ತು. ಅಂತೆಯೇ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಶ ಭಟ್ ಯುವಜನರೊಂದಿಗೆ ಚರ್ಚಿಸಿದ್ದು ಅರ್ಥಪೂರ್ಣವಾಗಿತ್ತು.

ಆಧುನಿಕ ಸವಾಲುಗಳಲ್ಲಿ ಒಂದಾದ ಅಪರಾಧಿ ಚಟುವಟಿಕೆಗಳಲ್ಲಿ ಯುವಕರ ಪಾಲುದಾರಿಕೆ ಕಡಿತಗೊಳಿಸುವುದು ಅತ್ಯಂತ ಮುಖ್ಯ. ಹಿಂಸೆಯಲ್ಲಿ ಯುವಜರು ಪಾಲುದಾರರಾಗುತ್ತಿರುವುದು ಬಹುದೊಡ್ಡ ಸಾರ್ವಜನಿಕ ಸಾಂಕ್ರಾಮಿಕದ ಸಂಕೇತ. ಲೈಂಗಿಕ ಮತ್ತು ದೈಹಿಕ ಕಿರುಕುಳದಿಂದ ಹಿಡಿದು ನರಹತ್ಯೆಯಂಥ ಗಂಭೀರ ಅಪರಾಧಗಳಲ್ಲಿ ಯವುಕರ ಪಾತ್ರ ಕಾಣಿಸುತ್ತಿದೆ. ಈ ಹಿನ್ನಲೆಯಲ್ಲಿ ಅರಿವು ಮೂಡಿಸಿ, ಮನಃಪರಿವರ್ತನೆ, ಶಾಂತಿ ಸ್ಥಾಪನೆ ಮತ್ತು ಸಮನ್ವಯ ಆಧುನಿಕ ಕಾಲಘಟ್ಟದ
ಬಹುಮುಖ್ಯ ಅಗತ್ಯ. ೨೦೨೦ರ ಮಾಹಿತಿಯ ಪ್ರಕಾರ, ಭಾರತದಲ್ಲಿ ೨೯,೭೬೮ ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ೧೦,೮೪೦ ವ್ಯಕ್ತಿಗಳು (೧೮-೩೦ ವರ್ಷ ವಯಸ್ಸಿನವರು) ಕೊಲೆಗೀಡಾಗಿದ್ದಾರೆ. ಮತ್ತು ೮೮,೫೯೦ ವ್ಯಕ್ತಿಗಳು (೧೬-೩೦ ವರ್ಷ ವಯಸ್ಸಿನವರು)ಅಪಹರಣಕ್ಕೆ ಬಲಿಯಾಗಿದ್ದಾರೆ.

ಕರ್ನಾಟಕದ ವಿಷಯಕ್ಕೆ ಬಂದರೆ, ೪೩೮ ಬಾಲಾಪರಾಧಿಗಳನ್ನು ಬಂಧಿಸಲಾಗಿದೆ, ೪೦೮ ವ್ಯಕ್ತಿಗಳು (೧೮-೩೦ ವರ್ಷ ವಯಸ್ಸಿನವರು) ಕೊಲೆಯಾಗಿದ್ದಾರೆ. ೧೨೮೦ ವ್ಯಕ್ತಿಗಳು (೧೬-೩೦ ವರ್ಷ ವಯಸ್ಸಿನವರು) ಅಪಹರಣಕ್ಕೊಳಗಾಗಿದ್ದಾರೆ ಅಥವಾ ಅಪಹರಣದಲ್ಲಿ ಪಾಲ್ಗೊಂಡಿದ್ದಾರೆ. ೧೨-೩೦ ವರ್ಷ ದೊಳಗಿನ ೨೮,೦೦೦ ಕ್ಕೂ ಹೆಚ್ಚು ಮಹಿಳೆಯರು ಮತ್ತು
ಹುಡುಗಿಯರು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ.

ಯುವ ಹಿಂಸಾಚಾರವನ್ನು ತಡೆಗಟ್ಟಲು ಆದಾಯದ ಅಸಮಾನತೆ, ಕ್ಷಿಪ್ರ ಜನಸಂಖ್ಯಾ ಮತ್ತು ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ರಕ್ಷಣೆ ಕೊರತೆಯಂತಹ ಕಾರಣಗಳಿದ್ದರೂ ಹಿಂಸೆಯ ಸಾಮಾಜಿಕ ನಿರ್ಧಾರಕಗಳನ್ನು ತಿಳಿಸುವ ಸಮಗ್ರ ವಿಧಾನದ ಅಗತ್ಯವಿದೆ. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಯುವ ಪ್ಯಾರಾ-ಕಾನೂನು ತಜ್ಞರು ಯುವಜನರಿಗೆ ಕಾನೂನಿನ ವಿವಿಧ ಅಂಶಗಳನ್ನು ಪರಿಚಯಿಸಿದ್ದಾರೆ.

ಇನ್ನು ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಜನತೆ ಪಾತ್ರ ಅತ್ಯಂತ ಮುಖ್ಯ. ಇಂದಿನ ಯುವ ನಾಗರಿಕರು ನಾಳಿನ ನಾಯಕರು. ಅವರೇ ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವವರು. ನಾವೀನ್ಯದಿಂದ ಕೂಡಿದ ಕ್ರಿಯಾಶೀಲ ಚಿಂತನೆಯ ಯುವಜನರ ಕೊಡುಗೆ ಇಂದಿನ ಸಮಾಜಕ್ಕೆ ಬಹಳ ಅತ್ಯಗತ್ಯ. ಪ್ರಜಾಪ್ರಭುತ್ವದಲ್ಲಿ ಅವರ ಭಾಗವಹಿಸುವಿಕೆಯು ಸಕ್ರಿಯ ಪೌರತ್ವವನ್ನು ಉತ್ತೇಜಿಸುತ್ತದೆ. ಸಾಮಾಜಿಕ ಜವಾಬ್ದಾರಿಯನ್ನು ಬಲಪಡಿಸುತ್ತದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳನ್ನು ವರ್ಧಿಸುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ.

ನಾಗರಿಕ ಮತ್ತು ರಾಜಕೀಯ ಪಾಲ್ಗೊಳ್ಳುವಿಕೆಯಲ್ಲಿ ಯುವಜನರು ತಮ್ಮ ಪರಿಸ್ಥಿತಿಯನ್ನು ಹೇಗೆ ಗ್ರಹಿಸುತ್ತಾರೆ ಎಂಬುದು ಪ್ರಮುಖ ಅಂಶ. ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಯುವಜನರನ್ನು ಪ್ರಮುಖ ಪಾಲುದಾರರಾಗಿ ಗುರುತಿಸುವುದು ಈ ಹೊತ್ತಿನ ಅತ್ಯಗತ್ಯ. ಜಾಗತಿಕವಾಗಿ ಹೆಸರಾಂತ ವಾಣಿಜ್ಯೋದ್ಯಮಿ ಸುಹಾಸ್ ಗೋಪಿನಾಥ್ ಅಥವಾ ಅಜಯ್ ಕಬಾಡಿಯಂತಹ ಉದಯೋನ್ಮುಖ ಉದ್ಯಮಿಗಳಿಂದ ಸೂರ್ತಿ ಪಡೆದ ಮಾನ್ಯ ಸಂಸದರಾದ ತೇಜಸ್ವಿ ಸೂರ್ಯ ಅವರಂತಹ ಗಣ್ಯವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಈ ಶೃಂಗಸಭೆಯಲ್ಲಿ ಯುವಜನರಿಗೆ ಅವಕಾಶ ಸಿಕ್ಕಿದೆ.

ಕಿರು ವಯಸ್ಸು ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಇದು ಭವಿಷ್ಯದ ಮೇಲೆ ಪ್ರಮುಖ ಪರಿಣಾಮಬೀರುವ ಅವಧಿ. ವೇಗವಾಗಿ ಬದಲಾಗು ತ್ತಿರುವ ಪ್ರಪಂಚದಲ್ಲಿ, ಜೀವನದ ರಚನಾತ್ಮಕ ಹಂತದಲ್ಲಿರುವ ಯುವಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಎದುರಾಗುತ್ತಿರುವ ಸವಾಲು ದೊಡ್ಡದು. ಪ್ರಸ್ತುತ ದಿನಗಳಲ್ಲಿ, ಯುವಜನರು ದಿನದ ಗಣನೀಯ
ಸಮಯ ವನ್ನು ಇಂಟರ್ನೆಟ್‌ಗಳಲ್ಲಿ ಕಳೆಯುತ್ತಿದ್ದಾರೆ. ಸೈಬರ್ ಅಪರಾಧಗಳು, ಸೈಬರ್‌ಬುಲ್ಲಿಂಗ್ ಮತ್ತು ಹಿಂಸಾತ್ಮಕ ವಿಡಿಯೋ ಗೇಮ್‌ಗಳು ಸೇರಿದಂತೆ ಮಾಹಿತಿ ಸೋಟಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ.

ಅಂತರ್ಜಾಲವು ಸರಿ-ತಪ್ಪುಗಳ ಮಾಹಿತಿಯ ಮೂಲವಾಗಿದೆ. ಆದರೆ, ಅದರ ಮೂಲವನ್ನು ಪರಿಶೀಲಿಸಲಾಗುವುದಿಲ್ಲ
ವಾದುದರಿಂದ ಯುವ ಮನಸ್ಸಿಗೆ ಹಾನಿ ಮಾಡುವ ಸಾಧ್ಯತೆಗಳೇ ಹೆಚ್ಚು. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ತಜ್ಞರಾದ ಡಾ ಅನಂತಪ್ರಭು ಯುವಜನರನ್ನುದ್ದೇಶಿಸಿ ಸಂವಹನ ನಡೆಸಿದರು. ಭಾರತದಲ್ಲಿ ೧೫ ರಿಂದ ೨೪ ವರ್ಷ ವಯಸ್ಸಿನ ಜನರು ಅತಿ ಹೆಚ್ಚು ಆತ್ಮಹತ್ಯೆಗೆ ಪಕ್ಕಾಗುತ್ತಿದ್ದಾರೆ. ದಾಖಲಾದ ಶೇ.೩೫ ಆತ್ಮಹತ್ಯೆಗಳು ಈ ವಯಸ್ಸಿನ ಸಂಭವಿಸಿದ್ದು.

೨೦೨೦ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಯಿಂದ ೧,೫೩,೦೫೨ ಯುವಜನರು ಸಾವನ್ನಪ್ಪಿರುವುದು ಕಳವಳಕಾರಿ ಸಂಗತಿ. ಕರ್ನಾಟಕದಲ್ಲೂ ೩೯೮ ಯುವಜನರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಇದನ್ನು ಗಮನಿಸಿದಾಗ ಯುವಜನರ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಮತ್ತು ಈ ನಿಟ್ಟಿನಲ್ಲಿ ಅವರನ್ನು ಎಚ್ಚರಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಸೋಮವಾರ ಮುಕ್ತಾಯಗೊಂಡ ಶೃಂಗಸಭೆಯು ಯುವಜರನ್ನು ಮಾನಸಿಕ ಆರೋಗ್ಯದ ಕುರಿತು ದೃಷ್ಟಿಹಾಯಿಸುವತ್ತ ಕೇಂದ್ರೀಕರಿಸತ್ತು.

ನಿಮ್ಹಾನ್ಸ್‌ನ ತಜ್ಞರು ಮಾನಸಿಕ ಯೋಗಕ್ಷೇಮದ ಕುರಿತು ಸಲಹೆಗಳನ್ನು ಯುವಜನರಿಗೆ ನೀಡುವುದರ ಮೂಲಕ ಅವರಲ್ಲಿ ಅರಿವನ್ನು ಮೂಡಿಸಿದ್ದಾರೆ. ಈ ಶೃಂಗಸಭೆಯು ಹಲವು ಆರೋಗ್ಯದ ಅಂಕಿ-ಅಂಶಗಳತ್ತ ಬೆಳಕು ಚೆಲ್ಲಿದ್ದು ಸುಳ್ಳಲ್ಲ. ಎನ್‌ಎ-
ಎಚ್-೫ ವರದಿಯ ಪ್ರಕಾರ ಶೇ. ೪೯.೪ ಹದಿಹರೆಯದ ಹೆಣ್ಣುಮಕ್ಕಳು ಮತ್ತು ಶೇ.೨೬.೫ ಗಂಡು ಮಕ್ಕಳು ರಕ್ತಹೀನತೆ ಯಿಂದ ಬಳಲುತ್ತಿದ್ದಾರೆ.

ಇನ್ನೂ ಶೇ.೨೫ ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಅಭ್ಯಾಸಗಳಿಂದ ದೂರ ಇದ್ದಾರೆ. ೧೮-೨೯
ವಯಸ್ಸಿನ ಶೇ.೨೩.೧ ಹೆಣ್ಣು ಮಕ್ಕಳು ೧೮ ವಯಸ್ಸಿಗೆ ಮೊದಲೇ ಮದುವೆಯಾಗುತ್ತಿದ್ದು, ಅವರ ಆರೋಗ್ಯ ಮತ್ತು ಅವರಿಗೆ ಹುಟ್ಟುವ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಮೇಲೆಯೂ ಶೃಂಗಸಭೆಯು ಬೆಳಕು ಚೆಲ್ಲಲಾಯಿತು. ಹೀಗೆ ಹಲವು ಆಯಾಮಗಳ ಯುವಶೃಂಗ ಸಭೆ ಯುವಜನರನ್ನು ಪ್ರೇರೇಪಿಸಿರುವುದು ಮಾತ್ರವಲ್ಲ ಅವರನ್ನು ಸದೃಢ ಸಮಾಜದ ನಾಗರಿಕರಾಗಲು ಮತ್ತು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಹರಿಕಾರರಾಗಲು ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ.

(ಲೇಖಕರು ಐಎಎಸ್ ಅಧಿಕಾರಿ ಹಾಗೂ ರಾಜ್ಯದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು)