ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENGW vs INDW 1st T20I: ನಿಧಾನಗತಿಯ ಓವರ್‌-ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡದ ಬಿಸಿ

ಪಂದ್ಯದಲ್ಲಿ ಭಾರತ 97 ರನ್‌ಗಳ ಅಂತರದ ಗೆಲುವು ದಾಖಲಿಸಿತು. ಇದು ಟಿ20ಯಲ್ಲಿ ಇಂಗ್ಲೆಂಡ್‌ಗೆ ಏದುರಾದ ಅತಿ ದೊಡ್ಡ ಸೋಲಾಗಿದೆ. ಸ್ಮೃತಿ ಮಂಧಾನ ಅವರ ಚೊಚ್ಚಲ T20I ಶತಕ ಮತ್ತು ಚೊಚ್ಚಲ ಆಟಗಾರ್ತಿ ಎನ್. ಶ್ರೀ ಚರಣಿ ಅವರ ನಾಲ್ಕು ವಿಕೆಟ್‌ ಸಾಧನೆ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿತು.

ನಿಧಾನಗತಿಯ ಓವರ್‌-ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡದ ಬಿಸಿ

Profile Abhilash BC Jun 29, 2025 7:12 PM

ನಾಟಿಂಗ್ಹ್ಯಾಮ್: ಪ್ರವಾಸಿ ಭಾರತ ಮಹಿಳೆಯರ(ENGW vs INDW 1st T20I) ವಿರುದ್ಧದ ಮೊದಲ ಟಿ20 ಪಂದ್ಯ ಸೋತಿರುವ ಆಘಾತದ ಮಧ್ಯೆ ಇಂಗ್ಲೆಂಡ್‌ ಮಹಿಳಾ ತಂಡಕ್ಕೆ(England Women's Team)( ದಂಡದ ಬಿಸಿ ಕೂಡ ಮುಟ್ಟಿದೆ. ಪಂದ್ಯದಲ್ಲಿ ನಿಧಾನಗತಿಯ ಓವರ್‌(slow over rate) ಕಾಯ್ದುಕೊಂಡ ಕಾರಣ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗಿದೆ.

"ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ನಿಗದಿತ ಸಮಯದಲ್ಲಿ ಬೌಲ್ ಮಾಡದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಅಂಪೈರ್‌ಗಳಾದ ಜಾಕ್ವೆಲಿನ್ ವಿಲಿಯಮ್ಸ್, ಜೇಮ್ಸ್ ಮಿಡಲ್‌ಬ್ರೂಕ್, ಸ್ಯೂ ರೆಡ್‌ಫರ್ನ್ ಮತ್ತು ಅನ್ನಾ ಹ್ಯಾರಿಸ್ ಅವರು ಆರೋಪ ಹೊರಿಸಿದ ನಂತರ, ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್-ಬ್ರಂಟ್ ತಪ್ಪು ಒಪ್ಪಿಕೊಂಡರು. ಎಮಿರೇಟ್ಸ್ ಐಸಿಸಿ ಅಂತಾರಾಷ್ಟ್ರೀಯ ಪಂದ್ಯ ರೆಫ್ರಿಗಳ ಸಮಿತಿಯ ಹೆಲೆನ್ ಪ್ಯಾಕ್ ಈ ನಿರ್ಬಂಧವನ್ನು ವಿಧಿಸಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಪಂದ್ಯದಲ್ಲಿ ಭಾರತ 97 ರನ್‌ಗಳ ಅಂತರದ ಗೆಲುವು ದಾಖಲಿಸಿತು. ಇದು ಟಿ20ಯಲ್ಲಿ ಇಂಗ್ಲೆಂಡ್‌ಗೆ ಏದುರಾದ ಅತಿ ದೊಡ್ಡ ಸೋಲಾಗಿದೆ. ಸ್ಮೃತಿ ಮಂಧಾನ ಅವರ ಚೊಚ್ಚಲ T20I ಶತಕ ಮತ್ತು ಚೊಚ್ಚಲ ಆಟಗಾರ್ತಿ ಎನ್. ಶ್ರೀ ಚರಣಿ ಅವರ ನಾಲ್ಕು ವಿಕೆಟ್‌ ಸಾಧನೆ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿತು.

ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ 112 ರನ್ ಗಳಿಸಿ ಹರ್ಲೀನ್ ಡಿಯೋಲ್ 43 ಕೊಡುಗೆ ನೀಡಿದರು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟ್‌ಗೆ 210 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 113 ರನ್‌ಗೆ ಸರ್ವಪತನ ಕಂಡಿತು.