Friday, 22nd November 2024

ಕಣ್ಣು ಮುಚ್ಚುತ್ತಿರುವ ಕನ್ನಡಶಾಲೆ

ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ ಅಡಗುದಾಣವಾಗಿದ್ದ ಈ ಊರಿನಲ್ಲಿ ಪೊಲೀಸರ ಬೂಟುಗಾಲಿನ ಸದ್ದು, ಎನ್‌ಕೌಂಟರ್ ಗುಂಡಿನ ಮೊರೆತ ಆಗಾಗ ಕೇಳಿಬರುತ್ತಿದ್ದವು. ಕ್ರಮೇಣ ಅವು ಕ್ಷೀಣವಾಗಿ ಈಗ ಅಡಗಿಹೋಗಿವೆ. ಈ ಹಳ್ಳಿಯಲ್ಲಿ ಮನೆಗಳೆಂದರೆ ಗುಡಿಸಲುಗಳೇ. ಹೆಚ್ಚೆಂದರೆ ಹೆಂಚಿನ ಮನೆಗಳಿವೆ. ಹಚ್ಚ ಹಸಿರಿನ ಗದ್ದೆಗಳು, ಜುಳುಜುಳು ಹರಿಯುವ ಹೊಳೆ, ಹೊಳೆಯುವ ಬಂಡೆ, ಶಿಲೆಗಳು, ಹಸಿರು ಹೊದ್ದ ಬೆಟ್ಟಗಳು […]

ಮುಂದೆ ಓದಿ