ನಾಗರಾಜ ಭಟ್ ಬೆಂಗಳೂರು
ರಾಜ್ಯದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಿಂದಾಗಿ, ಒಮ್ಮೆಲೇ ಬಿಟ್ ಕಾಯಿನ್ ಎಂಬ ಈ ಒಂದು ಕರೆನ್ಸಿಯ ಹೆಸರು ಎಲ್ಲರಿಗೆ ಈಗ ಪರಿಚಿತಗೊಂಡಿದೆ. ಅಷ್ಟಕ್ಕೂ ಬಿಟ್ ಕಾಯಿನ್ ಎಂದರೇನು? ಅಂತರ್ಜಾಲದ ಮೂಲಕ ವ್ಯವಹಾರ ಮಾಡಲು ಸಾಧ್ಯವಾಗುವಂತಹ ಇದು ಮೊದಲು ಎಲ್ಲಿ ತಯಾರಾಯಿತು? ಅದರ ವ್ಯವಹಾರ ಈಗೇಕೆ ಒಮ್ಮೆಗೇ ವಿವಾದಕ್ಕೆ ಒಳಗಾಗಿದೆ? ಸಂಪೂರ್ಣ ವಿವರ ಇಲ್ಲಿದೆ.
ಕ್ರಿಪ್ಟೋ ಕರೆನ್ಸಿ ಎಂದರೇನು?
ಕ್ರಿಪ್ಟೋ ಕರೆನ್ಸಿ ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಹಣಕ್ಕಿಂತ ಹೆಚ್ಚು ಪಾರದರ್ಶಕವಾಗಿದ್ದು, ವಿಕೇಂದ್ರೀಕೃತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋಗ್ರಫಿ ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ. ಇದು ಡಿಜಿಟಲ್ ಕರೆನ್ಸಿ.
ಕ್ರಿಪ್ಟೋಗ್ರಫಿ ಎಂದರೇನು?
ಸಾಮಾನ್ಯವಾಗಿ ಹೇಳಬೇಕೆಂದರೆ ಇದು ರಹಸ್ಯ ಭಾಷೆಯನ್ನು ಹೋಲುತ್ತದೆ. ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯೊಡನೆ ಖಾಸಗಿಯಾಗಿ ಮಾತನಾಡಲು ಹಾಗೂ ಇತರರಿಗೆ ಈ ಮಾಹಿತಿ ತಿಳಿಯದಿರಲು ‘ಪ’ ಸೇರಿಸಿ ಮಾತನಾಡುವಂತೆ, ಕ್ರಿಪ್ಟೋಗ್ರಫಿಯನ್ನು ಮಾಹಿತಿ ಸುರಕ್ಷಿತವಾಗಿರಿಸಲು ಬಳಸಲಾಗುತ್ತದೆ.
ಬ್ಲಾಕ್ ಚೈನ್ ಎಂದರೇನು?
ಬ್ಲಾಕ್ ಚೈನ್ ಎಂದರೆ ಮಾಹಿತಿಗಳನ್ನು ಸುರಕ್ಷಿತವಾಗಿ ಇಡುವ ತಂತ್ರಜ್ಞಾನ. ಬ್ಲಾಕ್ ಚೈನ್ ಅನ್ನು ಸುಲಭವಾಗಿ ಬಾಕ್ಸ್ಗಳ
ನ್ನಾಗಿ ಕಲ್ಪಿಸಿಕೊಳ್ಳೋಣ. ಮೂರು ಬಾಕ್ಸ್ ನಮ್ಮ ಬಳಿ ಇದೆ ಎಂದು ಭಾವಿಸೋಣ. ಮೊದಲನೆ ಬಾಕ್ಸ್ನಲ್ಲಿ ಅಕ್ಕಿ, ಎರಡನೆ
ಯದರಲ್ಲಿ ಗೋಧಿ, ಮೂರನೆ ಬಾಕ್ಸ್ನಲ್ಲಿ ಜೋಳವಿದೆ ಅಂದುಕೊಳ್ಳೋಣ.
ಮೊದಲನೇ ಬಾಕ್ಸ್ ತೆರೆಯಲು ಕೊನೆಯ ಮತ್ತು ಎರಡನೇ ಬಾಕ್ಸ್ನ ಕೀ ಅತ್ಯಗತ್ಯ, ಹಾಗೂ ಎರಡನೇ ಬಾಕ್ಸ್ ತೆರೆಯಲು ಮೊದಲ ಹಾಗೂ ಕೊನೆಯ ಬಾಕ್ಸ್ ಅಗತ್ಯವಾಗಿ ಬೇಕು. ಮೂರನೇ ಬಾಕ್ಸ್ ತೆರೆಯಲು ಮೊದಲೆರಡು ಬಾಕ್ಸ್ಗಳ ಕೀಲಿ ಬೇಕೇ ಬೇಕು, ಹಾಗಾಗಿ ಬ್ಲಾಕ್ ಚೈನ್ ಮಾಹಿತಿಯನ್ನು ತಿರುಚಲು ಅಸಾಧ್ಯ, ಮತ್ತು ಹ್ಯಾಕ್ ಮಾಡಲು ಬಹಳ ಕಷ್ಟ.
ಯಾವೆಲ್ಲಾ ಕ್ರಿಪ್ಟೊ ಕರೆನ್ಸಿಗಳಿವೆ?
ಬಿಟ್ ಕಾಯಿನ್ ನಂತರದಲ್ಲಿ ಬಹಳಷ್ಟು ಕ್ರಿಪ್ಟೋ ಕರೆನ್ಸಿಗಳು ಬೇರೆ ಬೇರೆ ಉದ್ದೇಶದಿಂದ ಹುಟ್ಟಿಕೊಂಡವು. ಇಥೆರಿಯಂ, ರಿಪ್ಪಲ್, ಇತ್ಯಾದಿ ಕಾಯಿನ್ಗಳು ಹುಟ್ಟಿಕೊಂಡವು. ಅವುಗಳ ಮೇಲೆ ಟೋಕನ್ಗಳು ಹುಟ್ಟಿಕೊಂಡವು. ಇಂದು ಜಗತ್ತಿನಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಕ್ರಿಪ್ಟೋ ಕಾಯಿನ್ಗಳಿದ್ದು, ಲಕ್ಷಕ್ಕೂ ಹೆಚ್ಚು ಟೋಕನ್ಗಳಿವೆ. ಬಿಟ್ಕಾಯಿನ್ಗಳನ್ನು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ಮೈನಿಂಗ್ ಮಾಡಿ ತಯಾರಿಸ ಬಹುದಾದರೂ, ಅದಕ್ಕೆ ಲಕ್ಷಗಟ್ಟಲೇ ಮೊತ್ತದ ವಿದ್ಯುತ್ ವ್ಯಯವಾಗುತ್ತದೆ.
ಭಾರತದಲ್ಲಿ ಕ್ರಿಪ್ಟೋ
ಅಮೆರಿಕ, ಚೀನಾ ನಂತರ ಅತಿಹೆಚ್ಚು ಕ್ರಿಪ್ಟೋ ಅಳವಡಿಸಿ ಕೊಂಡಿರುವ ದೇಶ ನಮ್ಮದು. ನಮ್ಮಲ್ಲಿ ಹಲವು ಕ್ರಿಪ್ಟೋ ಎಕ್ಸ್ ಚೇಂಜ್ಗಳಿವೆ. ಅವುಗಳಲ್ಲಿ ಜೆಬ್ ಪೆ, ವಜಿರೇಕ್ಸ್, ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವಿಚ್, ಕುಬೇರ್ ಇತ್ಯಾದಿಗಳಿವೆ. ಇವುಗಳ ಮೂಲಕ ಮಿಲಿಯನ್ ಗಟ್ಟಲೇ ರುಪಾಯಿಗಳು ಪ್ರತಿದಿನ ಹೂಡಿಕೆಯಾಗುತ್ತದೆ. ಭಾರತದಲ್ಲಿ ಈ ಹಿಂದೆ ಕ್ರಿಪ್ಟೋ ಕರೆನ್ಸಿ ಹೂಡಿಕೆಯನ್ನು ನಿರ್ಬಂಧಿಸಲಾಗಿತ್ತಾದರೂ, ಮಾರ್ಚ್ ೨೦೨೦ರ ನಂತರ, ನ್ಯಾಯಾಲಯದ ತಡೆಯಾಜ್ಞೆಯ ಮೂಲಕ ಕ್ರಿಪ್ಟೋ
ಕರೆನ್ಸಿಯ ಮೇಲೆ ಸರಕಾರ ಹೇರಿದ್ದ ನಿಬಂಧ ತೆರೆವುಗೊಂಡಿದೆ.
ಇವತ್ತು ನಮ್ಮ ದೇಶದ ಮ್ಯಾಟಿಕ್ ನೆಟ್ವರ್ಕ್ ಜಗತ್ತಿನ ಅತಿದೊಡ್ಡ ಬ್ಲಾಕ್ಚೈನ್ ಟೆಕ್ನಾಲಜಿಯ ಕಂಪನಿಗಳ ಲ್ಲೊಂದು. ಆದರೆ ನಮ್ಮಲ್ಲಿ ಈಗಲೂ ಕ್ರಿಪ್ಟೋ ಕರೆನ್ಸಿಯ ಮೇಲೆ ಸರಿಯಾದ ಕಾನೂನು, ನಿಯಮವಿಲ್ಲದಿರುವುದು ಗೊಂದಲ ಹುಟ್ಟಿಸುವಂತಿದೆ. ಭಾರತೀಯ ಮೂಲದ ಎಕ್ಸ್ಚೇಂಜುಗಳು ಸಿಂಗಾಪುರದಲ್ಲಿ ಲೈಸನ್ಸ್ ಹೊಂದಿ ಕಾರ್ಯ ನಿರ್ವಹಣೆ ಮಾಡುತ್ತಿವೆ.
ಕ್ರಿಪ್ಟೋ ಕರೆನ್ಸಿ ನಿಬಂರ್ಧಿಸಲು ಸಾಧ್ಯವಾ?
ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಕ್ರಿಪ್ಟೋ ಕರೆನ್ಸಿಯ ಮೇಲೆ ಗೊಂದಲದ ನಿಲುವು ಹೊಂದಿವೆಯಾದರೂ ಇಂಟರ್ನೆಟ್ ಮೂಲಕ ವ್ಯವಹಾರ ನಡೆಯುವ ಕ್ರಿಪ್ಟೋ ಕರೆನ್ಸಿ ಯನ್ನು ನಿಷೇಧಿಸಲು ಅಸಾಧ್ಯ. ಕ್ರಿಪ್ಟೋ ಕರೇನ್ಸಿಗಳನ್ನು ಎಕ್ಸ್ ಚೇಂಜ್ಗಳ ಜತೆ, ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವ್ಯಾಲೆಟ್ ಗಳಲ್ಲಿಡಲು ಸಾಧ್ಯವಾದುದರಿಂದ ಕ್ರಿಪ್ಟೋ ನಿಬಂಧವಿರದ ದೇಶಕ್ಕೆ ತೆರಳಿ, ಹಣಕ್ಕೆ ಬದಲಾಯಿಸಲು ಸಾಧ್ಯ.
ಯಾವೆಲ್ಲ ದೇಶಗಳು ಕ್ರಿಪ್ಟೋ ಒಪ್ಪಿಕೊಂಡಿವೆ?
ಸಿಂಗಾಪುರ, ಮಾಲ್ಟಾ, ಎಲ್ಸಲ್ವಾಡಾರ್, ಉಕ್ರೇನ್, ಬ್ರೆಜಿಲ್ ಹಾಗೂ ಅಮೆರಿಕ ಮೊದಲಾದ ದೇಶಗಳು ಕ್ರಿಪ್ಟೊ ಕರೆನ್ಸಿಯನ್ನು
ಒಪ್ಪಿಕೊಂಡಿವೆ. ದಕ್ಷಿಣ ಆಫ್ರಿಕಾದ ಎಲ್ಸಲ್ವಾಡಾರ್ ದೇಶ ಬಿಟ್ ಕಾಯಿನ್ ಅನ್ನು ಕಾನೂನು ಬದ್ಧವಾಗಿ ಮಾಡಿದ್ದಲ್ಲದೆ, ಕ್ರಿಪ್ಟೋ ಕರೆನ್ಸಿಯನ್ನು ಅಧಿಕೃತ ಕರೆನ್ಸಿಯಾಗಿ ಜಾರಿಗೆ ತಂದ ಮೊದಲ ದೇಶವಾಗಿ ಗುರುತಿಸಿಕೊಂಡಿದೆ.
ಚೀನಾಗೆ ಲಾಭ
ಚೀನಾವೂ ಕ್ರಿಪ್ಟೊಕರೆನ್ಸಿಯ ವ್ಯವಹಾರವನ್ನು ತನ್ನ ದೇಶದಲ್ಲಿ ನಿಷೇಧಿಸಿದೆ. ಆದರೂ ಚೀನಾದಲ್ಲಿ ಕ್ರಿಪ್ಟೋ ಕರೆನ್ಸಿ ಮೈನಿಂಗ್
ನಡೆಯುತ್ತಿದೆ. ಅತಿ ಹೆಚ್ಚು ಮೈನಿಂಗ್ ಯುನಿಟ್ಗಳನ್ನು ಆ ದೇಶ ಹೊಂದಿದೆ ಮತ್ತು ನಿಷೇಽಸುವ ಹೇಳಿಕೆ ನೀಡಿ ಬಿಟ್ ಕಾಯಿನ್ ಬೆಲೆಯನ್ನು ಕುಸಿಯುವಂತೆ ಮಾಡುತ್ತದೆ. ಆಗ ಕಡಿಮೆ ಹಣಕ್ಕೆ ದೊರೆಯುವ ಬಿಟ್ ಕಾಯಿನ್ ಖರೀದಿಸಿ ಹೆಚ್ಚು ಹಣಕ್ಕೆ ಮಾರುವ ಮೂಲಕ ಲಾಭಗಳಿಸುತ್ತಲೇ ಇದೆ.
ಕ್ರಿಪ್ಟೋ ಕರೆನ್ಸಿ ಎಂದರೆ ಪಾರದರ್ಶಕತೆ ಕ್ರಿಪ್ಟೋ ಕರೇನ್ಸಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲೂಬಹುದು. ಪ್ರತಿ ಹೂಡಿಕೆದಾರನಿಗೂ ವಾಲೆಟ್ ಅಡ್ರೆಸ್ ಎಂಬ ಯುನಿಕ್ ಐಡಿ ಇದ್ದು, ಇವುಗಳನ್ನು ಟ್ರ್ಯಾಕ್ ಮಾಡಬಹುದು. ಯಾವ ಐಡಿಯಲ್ಲಿ ಎಷ್ಟು ಬಿಟ್ ಕಾಯಿನ್ ಇದೆ, ಯಾವ ಐಡಿಗೆ ಕಳುಹಿಸಿದ್ದಾರೆ ಎಂದು ತಿಳಿದರೂ, ಅದರ ಮಾಲೀಕರು ಯಾರೆಂದು ತಿಳಿಯುವುದು ಬಹುಮಟ್ಟಿಗೆ ಅಸಾಧ್ಯ. ಆದ್ದರಿಂದ ಅನಾಮಿಕರಾಗಿ ಹಣ ವರ್ಗಾವಣೆ ಮಾಡಬಹುದು ಮತ್ತು ಈ ವಿಧಾನದ ಮೂಲಕ ಭಯೋತ್ಪಾದನೆಯಂತಹ ಚಟುವಟಿಕೆಗಳಿಗೂ ಹಣ ಕಳುಹಿಸಲು ಸಾಧ್ಯ ಎನ್ನಲಾಗಿದೆ. ಜತೆಗೆ ಕ್ರಿಪ್ಟೋ ಕರೆನ್ಸಿ ಪಾರದರ್ಶಕವೂ ಹೌದು.
ಬಿಟ್ ಕಾಯಿನ್ಗಳನ್ನು ಹ್ಯಾಕ್ ಮಾಡಲು ಸಾಧ್ಯನಾ?
ಸಾಧ್ಯವಿದೆ. ಆದರೆ, ಹ್ಯಾಕ್ ಆದ ಸಮಯದಲ್ಲಿ ಹ್ಯಾಕರ್ನ ವ್ಯಾಲೆಟ್ಗೆ ಬಿಟ್ ಕಾಯಿನ್ ವಿನಿಮಯವಾಗುವುದರಿಂದ, ಹ್ಯಾಕ್ ಆದ ತಕ್ಷಣ ಕಾನೂನು ಪಾಲಕರು ಆ ವ್ಯಾಲೆಟ್ನ್ನು ನಿರ್ಬಂಧಿಸಲು ಸಾಧ್ಯವಿದೆ. ಒಂದೊಮ್ಮೆ ಆತ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಹ್ಯಾಕ್ ಮಾಡಿದ್ದಾದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಹ ಸಾಧ್ಯವಿದೆ. ಹಾರ್ಡ್ವೇರ್ ವ್ಯಾಲೆಟ್ಗಳು, ಸಾ-ವೇರ್ ವ್ಯಾಲೆಟ್ಗಳು
ತಕ್ಕಮಟ್ಟಿಗೆ ಸುರಕ್ಷಿತ. ಏಕೆಂದರೆ ಇವು ಹ್ಯಾಕರ್ಗಳಿಂದ ನಿಮ್ಮ ಕರೆನ್ಸಿಗಳನ್ನು ಭದ್ರವಾಗಿಡುತ್ತದೆ.
ಬಿಟ್ ಕಾಯಿನ್ ಅಪಾಯಗಳೇನು?
ಕ್ರಿಪ್ಟೋ ಕರೆನ್ಸಿ ಬ್ಲ್ಯಾಕ್ಚೈನ್ ವಿಧಾನವು ಅತ್ಯಂತ ಸುರಕ್ಷಿತ ಎಂದು ಹೇಳುತ್ತಾರೆ. ಆದರೆ ಜನಸಾಮಾನ್ಯರು ಬಿಟ್ ಕಾಯಿನ್ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ. ಒಮ್ಮೆ ಬಿಟ್ ಕಾಯಿನ್ ಸಂದಾಯವಾದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಅವು ಯಾವುದೇ ಕಾರಣಕ್ಕೂ ಹ್ಯಾಕ್ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಅಪರಾಧಿಗಳು ಆರ್ಥಿಕ ಅಪರಾಧ, ಮೋಸಗಳನ್ನು ಎಸಗಲು ಸಾಧ್ಯವಿದೆ. ಡ್ರಗ್ಸ್, ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಬಿಟ್ ಕಾಯಿನ್ ಬಳಕೆಯಾಗುತ್ತಿದೆ. ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ಮಾಡಿದ್ದಾರೆ ಎಂಬುದು ಗೊತ್ತೇ ಆಗುವುದಿಲ್ಲ.
ಕಳೆದ ೧೦ ವರ್ಷಗಳ ಇತಿಹಾಸದಲ್ಲಿ ಬಿಟ್ ಕಾಯಿನ್ ವಹಿವಾಟಿನ ವೇಳೆ ಹಲವಾರು ಹ್ಯಾಕ್ಗಳು, ಕಳ್ಳತನ ಪ್ರಕರಣಗಳು ವರದಿಯಾಗಿವೆ. ಕೋಟ್ಯಂತರ ರು. ಮೌಲ್ಯದ ಕಾಯಿನ್ಗಳ ಕಳ್ಳತನವಾದ ವರದಿಯೂ ಇವೆ.
ಬಿಟ್ ಕಾಯಿನ್ ಎಂದರೇನು?
ಬಿಟ್ ಕಾಯಿನ್ ಜಗತ್ತಿನ ಮೊದಲ ಕ್ರಿಪ್ಟೋ ಕರೆನ್ಸಿ. ಸತೋಶಿ ನಾಕಾಮೋಟೋ ಎಂಬ ಹೆಸರಿನ ವ್ಯಕ್ತಿ ಬಿಟ್ ಕಾಯಿನ್ ತಯಾ ರಿಸಿದನೆಂದು ಭಾವಿಸಲಾಗಿದೆ. ಆದರೆ ಆತನ ಗುರುತು ಪತ್ತೆಯಿಲ್ಲದ ರಹಸ್ಯ. ೨೦೦೯ರಲ್ಲಿ ಮೊದಲ ಬಿಟ್ಕಾಯಿನ್ ತಯಾರಾ ಯಿತು. (ಇದನ್ನು ಮೈನಿಂಗ್ ಎನ್ನುತ್ತಾರೆ). ನೋಡ ನೋಡುತ್ತಿದ್ದಂತೆ ಇಂಟರ್ನೆಲ್ ಲೋಕದಲ್ಲಿ ಹೊಸ ವ್ಯವಹಾರಿಕ ಕ್ರಾಂತಿಯನ್ನು ಹುಟ್ಟು ಹಾಕಿತು. ಇಂದು ಒಂದು ಬಿಟ್ಕಾಯಿನ್ ಬೆಲೆ ಸುಮಾರು ರು.೪೯,೬೬,೦೦೦
ಬಿಟ್ ಕಾಯಿನ್ಗಳನ್ನು ಹೇಗೆ ಖರೀದಿಸುವುದು?
ಬಿಟ್ ಕಾಯಿನ್ಗಳನ್ನು ಎಕ್ಸ್ಚೇಂಜ್ ಹಾಗೂ ವ್ಯಾಲೆಟ್ಗಳಲ್ಲಿ ಖರೀದಿ ಮಾಡಬಹುದು. ವ್ಯಾಲೆಟ್ಗಳು ವಿಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಇದರಲ್ಲಿ ಹಣ ವಿನಿಮಯ ನಡೆಯುವು ದಿಲ್ಲ. ಎಕ್ಸ್ಚೇಂಜ್ಗಳು ಕೇಂದ್ರಿಕೃತ ವ್ಯವಸ್ಥೆಯಾಗಿದ್ದು, ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತವೆ. ಬಿಟ್ ಕಾಯಿನ್ ಅಥವಾ ಯಾವುದೇ ಕ್ರಿಪ್ಟೋ ಕರೇನ್ಸಿಯನ್ನು ಎಕ್ಸ್ ಚೇಂಜ್ಗಳಲ್ಲಿ ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು, ಇತರ ಕರೆನ್ಸಿಗೆ ಪರಿವರ್ತಿಸಬಹುದು ಹಾಗೂ ಯಾವುದೇ ವಸ್ತುವನ್ನು ಖರೀದಿಸಬಹುದು. ಕ್ರಿಪ್ಟೋ ಮೂಲಕ ಅಮಜಾನ್ ಸೇರಿದಂತೆ ಅನೇಕ ಜಾಲತಾಣಗಳ ಕೂಪನ್ ಖರೀದಿಸಬಹುದು.
ಬಿಟ್ ಕಾಯಿನ್ ಹೂಡಿಕೆ ಲಾಭದಾಯಕವೇ ?
ಬಿಟ್ ಕಾಯಿನ್ನ ಬೆಲೆ ತೀವ್ರ ಏರಿಳಿತ ವನ್ನು ಕಾಣುತ್ತಲೇ ಇರುತ್ತದೆ. ಷೇರುಗಳ ರೀತಿಯೇ ಇವುಗಳನ್ನು ಖರೀದಿಸಿ, ಮಾರಾಟ
ಮಾಡುವ ಮೂಲಕ, ಬೆಲೆಯಲ್ಲಿನ ಏರಿಳಿತವನ್ನು ಗಮನಿಸಿ, ಲಾಭ ಮಾಡಿಕೊಳ್ಳುವ ಅವಕಾಶವಿದೆ. ಅಕಸ್ಮಾತ್ ದೀರ್ಘ ಕಾಲದ ತನಕ ಬಿಟ್ ಕಾಯಿನ್ನ ಬೆಲೆ ಕುಸಿತ ಗೊಂಡರೆ, (ಉದಾ: ಕೆಲವು ವದಂತಿಗಳ ಕಾರಣ, ಯುದ್ಧದ ಕಾರಣ ಇತ್ಯಾದಿ) ಅವುಗಳಲ್ಲಿ ಹೂಡಿಕೆ ಮಾಡಿದವರಿಗೆ ತೀವ್ರ ನಷ್ಟವಾಗುವ ಸಂಭವ ಇದ್ದೇ ಇದೆ. ಬೆಲೆ ಏರುತ್ತಾ ಹೋದರೆ, ಲಾಭದ ಸಾಧ್ಯತೆ ಇದೆ. ಆದ್ದರಿಂದ ಕ್ರಿಪ್ಟೋ ಕರೆನ್ಸಿಗಳಲ್ಲಿ ಹಣ ಹೂಡುವ ಮೊದಲು, ಅವುಗಳನ್ನು ಸಾಕಷ್ಟು ಅಧ್ಯಯನ ಮಾಡಿ, ಅದರ ವ್ಯವಹಾರದಲ್ಲಿರುವ ರಿಸ್ಕ್ಗಳನ್ನು ಅರಿತ ನಂತರವೇ ಹೂಡಿಕೆ ಮಾಡುವುದು ಕ್ಷೇಮ.