ಪ್ರಧಾನ ಕಾರ್ಯದರ್ಶಿ ಹುದ್ದೆ ರೇಸ್ನಲ್ಲಿ ಎಂ.ಬಿ.ಪಾಟೀಲ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಎಐಸಿಸಿ ಪುನಶ್ಚೇತನ ಕಸರತ್ತಿನಲ್ಲಿರುವ ಕಾಂಗ್ರೆಸ್ ವರಿಷ್ಠರು ರಾಜ್ಯದ ಲಿಂಗಾಯತ ನಾಯಕರೊಬ್ಬರಿಗೆ ಐಎಸಿಸಿ ಯಲ್ಲಿ ಪ್ರಾತಿನಿಧ್ಯ ನೀಡುವ ಚಿಂತನೆ ನಡೆಸಿದ್ದಾರೆ.
ಅದರಲ್ಲೂ ಮುಂದಿನ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಲಿಂಗಾಯತ ಸಮುದಾಯದ ಹಿರಿಯ ನಾಯಕರೊಬ್ಬ ರಿಗೆ ಐಎಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನೀಡಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆದಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ನಾಯಕ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಪರೋಕ್ಷವಾಗಿ ಸಾಕ್ಷಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರ ಹಠಾತ್ ಬುಲಾವ್ ಹಿನ್ನೆಲೆಯಲ್ಲಿ ದಿಢೀರ್ ದೆಹಲಿಗೆ ಭೇಟಿ ನೀಡಿದ್ದ ಸಿದ್ದರಾ ಮಯ್ಯ ಅವರ ಮೇಲೆ ರಾಷ್ಟ್ರ ರಾಜಕಾರಣದ ಒತ್ತಡ ಹೇರಲಾಗಿತ್ತು. ಇದನ್ನು ಸರಾಸಗಾಟವಾಗಿ ತಳ್ಳಿ ಹಾಕಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ತಮ್ಮ ಅಗತ್ಯತೆಯನ್ನು ಮನವರಿಕೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ನಿಲುವನ್ನು ಪಕ್ಷದ ವರಿಷ್ಠರು ಒಪ್ಪಿಕೊಂಡಿದ್ದು, ರಾಜ್ಯದ ಪ್ರಾತಿ ನಿಧ್ಯಕ್ಕೆ ಸಂಬಂಧಿಸಿದಂತೆ ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಗಬೇಕಿ ರುವ ಬದಲಾವಣೆ ಮತ್ತು ರಾಜ್ಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಗಳ ಬಗ್ಗೆ ಒತ್ತಿ ಹೇಳಿದ್ದಾರೆ. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಆ ಸಮುದಾಯದ ಒಬ್ಬರಿಗೆ ಎಐಸಿಸಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ವಿನಂತಿಸಿ ದ್ದಾರೆ ಎಂದು ದೆಹಲಿ ಕಾಂಗ್ರೆಸ್ ಮೂಲಗಳು ಹೇಳಿವೆ.
ರೇಸ್ನಲ್ಲಿರುವವರು
ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾಗಿರುವ ಕಾರಣ ಲಿಂಗಾಯತ ಸಮುದಾಯದ ನಾಯಕರಿಗೆ ಕಾಂಗ್ರೆಸ್ನಲ್ಲಿ
ಪ್ರಮುಖ ಹುದ್ದೆ ನೀಡಬೇಕು ಎಂಬ ಚಿಂತನೆ ಕಾಂಗ್ರೆಸ್ನಲ್ಲಿ ನಡೆದಿದೆ. ಹಾಗೆಂದು ಕೆಪಿಸಿಸಿ ಅಧ್ಯಕ್ಷಗಿರಿಯನ್ನು ಲಿಂಗಾಯತ
ಸಮುದಾಯದವರಿಗೆ ನೀಡುವುದು ಅಸಾಧ್ಯ. ಹೀಗಾಗಿ ಎಐಸಿಸಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಯಕ
ರೊಬ್ಬರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದರೆ ಆ ಸಮಾಜವನ್ನು ಸೆಳೆಯಲು ಸಾಧ್ಯ ಎಂದು ಕಾಂಗ್ರೆಸ್ ಚಿಂತಿಸಿದೆ.
ಹೀಗಾಗಿ ಎಐಸಿಸಿಯಲ್ಲಿ ಹುದ್ದೆ ಪಡೆಯಲು ವೀರಶೈವ ಲಿಂಗಾಯತ ಸಮಾಜದಿಂದ ಎಂ.ಬಿ.ಪಾಟೀಲ್, ಒಕ್ಕಲಿಗ ಸಮುದಾಯ ದಿಂದ ಕೃಷ್ಣಬೈರೇಗೌಡ ಹಾಗೂ ಹಿಂದಿನ ಅನುಭವದ ಆಧಾರದಲ್ಲಿ ದಿನೇಶ್ ಗುಂಡೂರಾವ್ ಕೂಡ ಪ್ರಯತ್ನ ಮಾಡುತ್ತಿದ್ದಾರೆ.
ಎಡಗೈ ಸಮಾಜಕ್ಕೆ ಕಾರ್ಯಾಧ್ಯಕ್ಷ?
ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೂ ರಾಜ್ಯದಲ್ಲಿ ಕಾರ್ಯಧ್ಯಕ್ಷ ಹುz ನೀಡಬೇಕೆನ್ನುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ಆಗಿದೆ. ಕಾಂಗ್ರೆಸ್ನಲ್ಲಿ ಎಡಗೈ ಸಮಾಜಕ್ಕೆ ಕಾರ್ಯಾಧ್ಯಕ್ಷ ಹುದ್ದೆ ನೀಡುವುದಾಗಿ ವರಿಷ್ಠರು ಈ ಹಿಂದೆ ಪರೋಕ್ಷ ಭರವಸೆ ನೀಡಿ ದ್ದರು.
ಆದರೆ ಅವರು ಭರವಸೆ ಈಡೇರಿಲ್ಲ ಎನ್ನುವುದು ಸಮಾಜದ ನಾಯಕರಲ್ಲಿ ಬೇಸರ ತಂದಿದೆ. ಎಡಗೈ ಸಮಾಜದ ಭಾಗಶಃ ಮತದಾರರು ಬಿಜೆಪಿ ಜತೆ ಹೋಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಧ್ಯಕ್ಷ ಹುದ್ದೆ ನೀಡದಿದ್ದರೆ ಮುಂದಿನ ಚುನಾವಣೆ ಯಲ್ಲಿ ಅವರನ್ನು ಎದುರಿಸುವುದು ಕಷ್ಟ ಎಂದು ಪಕ್ಷದಲ್ಲಿರುವ ಎಡಗೈ ಸಮಾಜದ ನಾಯಕರು ವಾದಿಸಿದ್ದಾರೆ. ಹೀಗಾಗಿ ರಾಜ್ಯಸಭಾ ಸದಸ್ಯ ಹನುಮಂತಯ್ಯ, ಮಾಜಿ ಸಚಿವ ಎಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪುರ ಹಾಗೂ ಧರ್ಮಸೇನಾ ಅವರು ಕಾರ್ಯಧ್ಯಕ್ಷ ಹುz ರೇಸ್ನಲ್ಲಿದ್ದಾರೆ.
ಪ್ರಾತಿನಿಧ್ಯ ಕೂಗು ಈಗೇಕೆ ಬಂತು?: ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮಗ್ರ ರೀತಿಯಲ್ಲಿ ಪುನಶ್ಚೇತನಗೊಳಿಸಲು ವರಿಷ್ಠರು ತೀರ್ಮಾನಿಸಿದ್ದು, ಎಐಸಿಸಿ ಅಧ್ಯಕ್ಷರೂ ಸೇರಿದಂತೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳ ಬದಲಾವಣೆಗೆ ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕಸರತ್ತು ಕೂಡ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಎಐಸಿಸಿಯಲ್ಲಿ ರಾಜ್ಯದ ಪ್ರಾತಿನಿಧ್ಯ ಗಮನಿಸುವುದಾದರೆ ಈ ಹಿಂದೆ ಎಐಸಿಸಿಯಲ್ಲಿ ರಾಜ್ಯಕ್ಕೆ ಸಾಕಷ್ಟು ಪ್ರಾತಿನಿಧ್ಯ ಲಭ್ಯವಾಗಿತ್ತು.
ಅಂದರೆ ಎಸ್.ಎಂ.ಕೃಷ್ಣ, ರೆಹಮಾನ್ ಖಾನ್, ಜಾಫರ್ ಶರೀಫ್, ಬಿ.ಕೆ.ಹರಿಪ್ರಸಾದ್, ವೀರಪ್ಪ ಮೋಯ್ಲಿ, ಮಾರ್ಗರೇಟ್ ಆಳ್ವಾ, ಆಸ್ಕರ್ ಫೆರ್ನಾಂಡೀಸ್, ಕೆ.ಎಚ್.ಮುನಿಯುಪ್ಪ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅನೇಕ ಮಂದಿ ರಾಜ್ಯದಿಂದ ಎಐಸಿಸಿ ಪ್ರತಿನಿಧಿಗಳಾಗಿದ್ದರು. ಆದರೆ ಈಗ ಅದು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ರಾಜ್ಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಅದರಲ್ಲೂ ಇಬ್ಬರಿಗಾದರೂ ಅವಕಾಶ ಕಲ್ಪಿಸಬೇಕೆಂದು ಸಿದ್ದರಾಮಯ್ಯ ಅವರು ವರಿಷ್ಠರನ್ನು
ಕೇಳಿಕೊಂಡಿzರೆ ಎಂದು ದೆಹಲಿ ಮೂಲಗಳು ತಿಳಿಸಿವೆ.
೦೦೦