ಗಾಂಧಿ ಜಯಂತಿ -ವಿಶೇಷ ವರದಿ: ರಂಗನಾಥ ಕೆ.ಮರಡಿ
ಜಿಲ್ಲೆಗೆ 4 ಬಾರಿ ಆಗಮನ
ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ
ತುಮಕೂರು: ಅಸ್ಪೃಶ್ಯತಾ ನಿವಾರಣಾ ಚಳವಳಿಯ ಸಂರ್ಭದಲ್ಲಿ ತುಮಕೂರಿಗೆ ಆಗಮಿಸಿದ್ದ ಗಾಂಧೀಜಿಯವರು ನಗರದ ಹಿಪ್ಪೆತೋಪು(ಕೋತಿತೋಪು)ನಲ್ಲಿ ಜನರು ಬಳಸುತ್ತಿದ್ದ ಬಯಲು ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು.
ಸ್ವಚ್ಛತಾ ಕರ್ಯ ಪರ್ಣಗೊಂಡ ನಂತರ ಜನರು ಭಾರತ್ ಮಾತಾ ಕಿ ಜೈ ಎಂದಾಗ ಎಲ್ಲರೂ ಜೈಕಾರ ಹಾಕಿ ದರು. ಅದೇ ರೀತಿ ಗಾಂಧೀಜಿ ಕೀ ಜೈ ಎಂಬ ಘೋಷಣೆ ಕೂಗುತ್ತಾ ಜನರ ನಡುವಿನಿಂದ ಕೈ ಮುಗಿಯುತ್ತಾ ಹೊರಬಂದರು. ಹೊರ ಬಂದರು. ಗಾಂಧೀಜಿ ಸ್ವಚ್ಛತಾ ಕರ್ಯದಲ್ಲಿ ತೊಡಗಿದ್ದಾರೆ ಎಂಬುದು ಜನರಿಗೆ ಗೊತ್ತಿರಲಿಲ್ಲ. ಆಗ ಈ ಕರ್ಯದಲ್ಲಿ ಗಾಂಧೀಜಿ ಭಾಗವಹಿಸಿದ್ದಾರೆ ಎಂದು ಜನರಿಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. ಗಾಂಧೀಜಿಯನ್ನು ನೋಡಲು ಜಿಲ್ಲೆಯ ವಿವಿಧ ಭಾಗದಿಂದ ಸಾಕಷ್ಟು ಜನ ಸೇರಿದ್ದರು.
ಜಿಲ್ಲೆಗೆ 4 ಬಾರಿ ಆಗಮನ
ತುಮಕೂರು ಜಿಲ್ಲೆಗೆ ನಾಲ್ಕು ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಯ ಚಳವಳಿ ಸಂರ್ಭದಲ್ಲಿ ಭೇಟಿ ನೀಡಿದ್ದರು. ಗಾಂಧೀಜಿ ಓಡಾಡಿದ ಮತ್ತು ತಂಗಿದ್ದ ಸ್ಥಳ ಇಂದಿಗೂ ಸ್ಮರಣೀಯವಾಗಿದೆ. ಈ ವೇಳೆ ಬ್ರಿಟೀಷರ ಆಡಳಿತದ ವಿರುದ್ಧ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಿ ಹೋಗಿದ್ದರು.
ಗಾಂಧೀಜಿಯವರ ಪ್ರವಾಸದ ಹೊಣೆಯನ್ನು ಮೈಸೂರು ಸಂಸ್ಥಾನದ ಕರ್ಯರ್ಶಿ ಲಕ್ಷ್ಮಿನರಸು ಹೊತ್ತಿದ್ದರು. ತುಮಕೂರಿಗೆ ೧೯೨೭ರ ಜುಲೈ ೧೪ರಂದು ಗಾಂಧೀಜಿಯವರು, ಕಸ್ತೂರಬಾ ಗಾಂಧಿ, ಗಂಗಾಧರ ರಾಯ್, ಗಾಂಧೀಜಿ ಆಪ್ತ ಕರ್ಯರ್ಶಿ ಮಹದೇವ್ ದೇಸಾಯಿ, ಮಣಿ ಬೆಹನ್ ಪಟೇಲ್, ದೇವದಾಸ್, ಮೃದುಲಸಾರ ಬಾಯಿ ಸೇರಿದಂತೆ 16 ಜನ ತಂಡದೊಂದಿಗೆ ಭೇಟಿ ನೀಡಿದ್ದರು. ತುಮಕೂರಿ ನಲ್ಲಿ ಸ್ಥಳೀಯ ಸ್ವಾಗತ ಸಮಿತಿಯ ಮುಖಂಡ ಕೆ.ಆರ್.ಅಯ್ಯಂಗಾರ್, ಜಿಲ್ಲಾಧಿ ಕಾರಿಗಳು ಊರ ಹೊರಗೆ ಗಾಂಧೀಜಿಯವರನ್ನು ಸ್ವಾಗತಿಸಿದರು.
ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ
ಹರಿಜನ ಉದ್ಧಾರಕ್ಕಾಗಿ ಮತ್ತು ಅಸ್ಪೃಶ್ಯತಾ ನಿವಾರಣಾ ಚಳವಳಿಯಲ್ಲಿ ಭಾಗವಹಿಸಲು 1934ರ ಜನವರಿ 4ರಂದು ಗಾಂಧೀಜಿ ನಗರಕ್ಕೆ ಆಗಮಿಸಿ, ಸರಕಾರಿ ಹೈಸ್ಕೂಲ್ ಮೈದಾನದಲ್ಲಿರುವ ಚಿಕ್ಕ ಕೊಠಡಿ ಯಲ್ಲಿ ತಂಗಿದ್ದರು. ಗಾಂಧೀಜಿಯವರು ತುಮಕೂರಿಗೆ ಭೇಟಿ ನೀಡಿದ್ದನ್ನು ಅವರ ಆಪ್ತರ್ಯರ್ಶಿ ಮಹದೇವ್ ದೇಸಾಯಿ ಅವರು ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳಲ್ಲಿ ದಾಖಲಿಸಿದ್ದಾರೆ. ಇದೇ ವೇಳೆ ಮಧುಗಿರಿ ಹಾಗೂ ಕೊರಟ ಗೆರೆಗೂ ಭೇಟಿ ನೀಡಿದ್ದರು.
ಈ ಕಟ್ಟಡವನ್ನು ಮಹಾತ್ಮ ಗಾಂಧಿ ಸ್ಮಾರಕ ಭವನವನ್ನಾಗಿ ಅಭಿವೃದ್ಧಿಪಡಿಸ ಲಾಗಿದೆ. ಈ ಭವನದಲ್ಲಿ ಗಾಂಧೀಜಿಗೆ ಸಂಬಂಧಿಸಿದ ಭಾವಚಿತ್ರಗಳನ್ನು ಸಂರಕ್ಷಿಸಿಡಲಾಗಿದೆ. ಗಾಂಧಿ ಪ್ರತಿಮೆಯೊಂದನ್ನು ಪ್ರತಿಷ್ಟಾಪನೆ ಮಾಡಲಾ ಗಿದೆ. ಸ್ಮರ್ಟ್ ಸಿಟಿ ಯೋಜನೆಯಡಿ ಈ ಭವನವನ್ನು ಗಾಂಧೀ ಸ್ಮಾರಕ ಭವನ ಮತ್ತು ಪುಸ್ತಕ ಭಂಡಾರಕ್ಕೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಹಳೇ ವಿದ್ಯಾಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಸರಕಾರಿ ಪದವಿ ಪರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಈ ಭವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಗೋ ಸಂರಕ್ಷಣೆಗೆ ನಿಧಿ ಸಂಗ್ರಹ
ಗಾಂಧೀಜಿ ಬೆಂಗಳೂರಿನಿಂದ ತುಮಕೂರಿಗೆ ಬರುವ ಮರ್ಗ ಮಧ್ಯ ದಾರಿಯುದ್ದಕ್ಕೂ ಸಾವಿರಾರು ಜನ ಹಾರ, ತುರಾಯಿಗಳೊಂದಿಗೆ ಸ್ವಾಗತಿಸಿದ್ದರು. ನಗರದಲ್ಲಿ ಮೂರು ಸಭೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಪುರಸಭೆ ಪ್ರತಿನಿಧಿಗಳು ಊರಿನ ಮಕ್ಕಳಿಗೆ ಶುದ್ಧ ನೀರು, ಅಗ್ಗದ ಬೆಲೆಯಲ್ಲಿ ಹಾಲನ್ನು ಸರಬರಾಜು ಮಾಡುವಂತೆ ಭರವಸೆ ಕೊಡಲು ಗಾಂಧೀಜಿ ಹೇಳಿದ್ದರು. ತುಮಕೂರಿನ ನಾಗರಿಕರು 2250 ರು, ವಿದ್ಯರ್ಥಿಗಳು ಮತ್ತು ಉಪಾಧ್ಯಾಯರು 250 ರೂ.ಗಳನ್ನು ಗೋ ಸಂರಕ್ಷಣೆಗಾಗಿ, 200 ರು .ಗಳ ನಿಧಿಯನ್ನು ಗಾಂಧೀಜಿಗೆ ನೀಡಿದ್ದರು. ನಗರದ ಔದ್ಯೋಗಿಕ ವಸತಿ ಶಿಕ್ಷಣ ಶಾಲೆಗೆ ಭೇಟಿ ನೀಡಿದ್ದ ಗಾಂಧೀಜಿ, ಅಲ್ಲಿನ ಸ್ವಚ್ಛತೆ ಬಗ್ಗೆ ಕೊಂಡಾಡಿದ್ದರು. ಅಲ್ಲಿ ವಿದ್ಯರ್ಥಿಗಳಿಗೆ ಮಾಡಿದ್ದ ರಾಗಿ ರೊಟ್ಟಿ ಸೇವಿಸಿದ್ದರು.
ಗಾಂಧೀಜಿ ಸಂದೇಶ ಸಾರುತ್ತಿರುವ ಬಾಪೂಜಿ ವಿದ್ಯಾಸಂಸ್ಥೆ
ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆ ಹಲವು ರ್ಷಗಳಿಂದ ಗಾಂಧೀಜಿಯವರ ಆರ್ಶಗಳನ್ನು ವಿದ್ಯರ್ಥಿಗಳಗೆ ತಿಳಿಸಿಕೊಡುವ ಮೂಲಕ ಉತ್ತಮ ಸಮಾಜ ನರ್ಮಾಣ ಮಾಡಲು ಪಣತೊಟ್ಟಿದೆ. ಬಾಪೂಜಿ ಚಿತ್ರಕಲಾ ಕಾಲೇಜು ಪ್ರವೇಶಿಸುತ್ತಿದ್ದಂತೆ ಗಾಂಧೀಜಿ ಜೀವನ ಸಾಧನೆಗೆ ಸಂಬಂಧಿಸಿದ ೧೮೦ಕ್ಕೂ ಹೆಚ್ಚು ಭಾವಚಿತ್ರಗಳು ಗಾಂಧೀಜಿಯವರ ಹೋರಾಟ, ಜೀವನ ಚರಿತ್ರೆಯನ್ನು ತಿಳಿಸಿಕೊಡುತ್ತವೆ. ಅಲ್ಲದೆ ಗಾಂಧೀಜಿಯವರ ಸಂದೇಶಗಳನ್ನು ಇಲ್ಲಿ ಪಸರಿಸಲಾಗುತ್ತದೆ. ಇದೊಂದು ಗಾಂಧಿ ಮ್ಯೂಸಿಯಂ ರೀತಿ ಪರಿರ್ತನೆಯಾಗಿದೆ. ಗಾಂಧಿ ಪ್ರತಿಮೆಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿದೆ.